Thursday | September 17, 2026 |

ರಾಜಧನ ವಸೂಲಾತಿಯಲ್ಲಿ ಹಿಂದೆ ಬಿದ್ದ ಗಣಿ ಇಲಾಖೆ; ವಸೂಲಾತಿಗೆ ಇನ್ನೂ 1,170.17 ಕೋಟಿ ರು ಬಾಕಿ, ನಿಗದಿತ ಗುರಿ ಮುಟ್ಟುವಲ್ಲಿ ವಿಫಲ?

ಬೆಂಗಳೂರು; ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು 2026-27ನೇ ಸಾಲಿನ ಅವಧಿಗೆ ಸಂಬಂಧಿಸಿದಂತೆ   ರಾಜಧನ ಸಂಗ್ರಹಿಸುವಲ್ಲಿ  ಏಪ್ರಿಲ್‌ನಿಂದ ಜುಲೈ 15ರವರೆಗಿನ ಪ್ರಗತಿಯು ಆಶಾದಾಯಕವಾಗಿಲ್ಲ. ರಾಜಧನ ಸಂಗ್ರಹಿಸುವಲ್ಲಿ ಇಲಾಖೆಯು ಹಿಂದೆ ಬಿದ್ದಿರುವುದು ಇದೀಗ ಬಹಿರಂಗವಾಗಿದೆ.

ಕರ್ನಾಟಕದಲ್ಲಿ  ಎ, ಬಿ ಮತ್ತು ಸಿ ವರ್ಗ ಸೇರಿದಂತೆ ವಿವಿಧ ವರ್ಗಗಳ ಗಣಿಗಾರಿಕೆ ಗುತ್ತಿಗೆಗಳನ್ನು ಹಾಗೂ ಇದುವರೆಗೂ ಗಣಿಗಾರಿಕೆ ನಡೆಯದ ನೈಸರ್ಗಿಕ ಅರಣ್ಯ ಭೂಮಿಯನ್ನು ಹರಾಜಿಗಾಗಿ ಒಂದೆ ಬ್ಲಾಕ್‌ ಅಥವಾ ಘಟಕವಾಗಿ ಒಗ್ಗೂಡಿಸಲು ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ. ಇದರ ಬೆನ್ನಲ್ಲೇ ರಾಜಧನ ಸಂಗ್ರಹಣೆಗೆ ಸಂಬಂಧಿಸಿದಂತೆ ಸಾಧಿಸಿರುವ ಹಿನ್ನಡೆಯು ಮುನ್ನೆಲೆಗೆ ಬಂದಿದೆ.

2026-27ನೇ ಸಾಲಿಗೆ ಒಟ್ಟಾರೆ 11,000 ಕೋಟಿ ರು ಗುರಿ ನಿಗದಿಪಡಿಸಿತ್ತು. ಈ ಪೈಕಿ 2026ರ ಏಪ್ರಿಲ್‌ನಿಂದ ಜುಲೈ 15ರವರೆಗೆ ಒಟ್ಟಾರೆ 2,273.83 ಕೋಟಿ ರು ಸಂಗ್ರಹಿಸಿದೆ. ಈ ನಾಲ್ಕು ತಿಂಗಳಲ್ಲಿ ಶೇ. 21ರಷ್ಟೇ ಪ್ರಗತಿ ಸಾಧಿಸಿದೆ. ಏಪ್ರಿಲ್‌ನಿಂದ ಜುಲೈವರೆಗೆ ಒಟ್ಟು ಗುರಿ 3,444.01 ಕೋಟಿಯಷ್ಟಿತ್ತು. ಈ ಪೈಕಿ 2,273.83 ಕೋಟಿ ರು ಮಾತ್ರ ಸಂಗ್ರಹಿಸಿದೆ. ಈ ಲೆಕ್ಕದ ಆಧಾರದ ಪ್ರಕಾರ ಏಪ್ರಿಲ್‌ನಿಂದ ಜುಲೈ ವರೆಗೆ ನೀಡಿದ್ದ ಗುರಿಯನ್ನು ಇಲಾಖೆಯು ಮುಟ್ಟಿಲ್ಲ. ವಸೂಲಾತಿಗೆ ಇನ್ನೂ 1,170.17 ಕೋಟಿ ರು ಬಾಕಿ ಉಳಿಸಿಕೊಂಡಿದೆ.

ಈ ಬಗಗೆ   ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

ಇದಕ್ಕೆ ಸಂಬಂಧಿಸಿದಂತೆ ದಿ ಫೈಲ್‌ ಗೆ ಅಂಕಿ ಅಂಶಗಳು ಲಭ್ಯವಾಗಿವೆ.

ವಿಶೇಷವೆಂದರೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ ಅವರ ತವರು ಜಿಲ್ಲೆ ದಾವಣಗೆರೆ ಜಿಲ್ಲೆಗೆ ಪ್ರಧಾನ ಖನಿಜಗಳ ವಲಯದಲ್ಲಿ  ರಾಜಧನ ಸಂಗ್ರಹಿಸಲು ಒಟ್ಟು ವಾ‍ರ್ಷಿಕ ಗುರಿ ಎಂದು 58.00 ಕೋಟಿ ರು ನಿಗದಿಪಡಿಸಿತ್ತು. ಈ ಪೈಕಿ ಏಪ್ರಿಲ್‌ನಿಂದ ಜುಲೈವರೆಗೆ   0.39 ಕೋಟಿಯಷ್ಟು ಗುರಿ ನಿಗದಿಯಾಗಿತ್ತು. ಈ ಪೈಕಿ 2026ರ ಜುಲೈ ಅಂತ್ಯಕ್ಕೆ  0.14 ಕೋಟಿ ಸಂಗ್ರಹಿಸಿದೆ. ಇದು ಶೇ. 0.01ರಷ್ಟಿದೆ. ಅಲ್ಲದೇ ವಾ‍ರ್ಷಿಕ  ಒಟ್ಟು ಗುರಿಗೆ ಶೇ. 4ರಷ್ಟಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಅದೇ ರೀತಿ ಉಪ ಖನಿಜಗಳಿಂದ ರಾಜಧನ ಸಂಗ್ರಹಿಸಲು ವಾರ್ಷಿಕವಾಗಿ 58.39 ಕೋಟಿ ರು ನಷ್ಟು ಗುರಿ ನಿಗದಿಪಡಿಸಿತ್ತು. ಈ ಪೈಕಿ ಏಪ್ರಿಲ್‌ನಿಂದ ಜುಲೈವರೆಗೆ 20.88 ಕೋಟಿ ರು ನಿಗದಿಯಾಗಿತ್ತು. ಈ ಅವಧಿಯಲ್ಲಿ ಇಲಾಖೆಯು ಸಂಗ್ರಹಿಸಿರುವುದು 4.62 ಕೋಟಿ ರು ಮಾತ್ರ ಸಂಗ್ರಹಿಸಿದೆ. ಪ್ರಧಾನ ಮತ್ತು ಉಪ ಖನಿಜಗಳಿಂದ ಈ ನಾಲ್ಕು ತಿಂಗಳಲ್ಲಿ  ಶೇ. 22ರಷ್ಟೇ ಪ್ರಗತಿ ಸಾಧಿಸಿರುವುದು ಅಂಕಿ ಅಂಶಗಳಿಂದ  ಗೊತ್ತಾಗಿದೆ.

ಏಪ್ರಿಲ್‌ನಲ್ಲಿ 662.00 ಕೋಟಿ ರು ವಸೂಲು ಮಾಡಬೇಕಿತ್ತು. ಈ ಪೈಕಿ 643.74 ಕೋಟಿ ರು ವಸೂಲು ಮಾಡಿದೆ. ಒಟ್ಟು ಗುರಿಯಲ್ಲಿ ಶೇ. 97ರಷ್ಟು ಪ್ರಗತಿ ಸಾಧಿಸಿದೆ. ಮೇ ತಿಂಗಳಲ್ಲಿ 637.00 ಕೋಟಿ ರು ಗುರಿ ಪ್ರಕಾರ 520.37 ಕೋಟಿ ರು ವಸೂಲು ಮಾಡಿದೆ. ಇದು ಶೇ. 82ರಷ್ಟಿದೆ. ಜೂನ್‌ ತಿಂಗಳಲ್ಲಿ ಗುರಿ ಪ್ರಕಾರ  1,052.00 ಕೋಟಿ ರು ವಸೂಲು ಮಾಡಬೇಕಿದ್ದ  ಇಲಾಖೆಯು 706.89 ಕೋಟಿ ರು ವಸೂಲು ಮಾಡಿದೆ. ಇದು ಶೇ. 67ರಷ್ಟಿದೆ. ಜುಲೈ ತಿಂಗಳಲ್ಲಿ 1,093.00 ಕೋಟಿ ರು ವಸೂಲು ಗುರಿ ನಿಗದಿಪಡಿಸಿತ್ತು. ಆದರೆ ಇಲಾಖೆಯು 402.83 ಕೋಟಿ ರು ವಸೂಲು ಮಾಡಿದೆ. ಇದು ಒಟ್ಟು ಸಂಗ್ರಹಕ್ಕೆ ಹೋಲಿಸಿದರೇ ಶೇ. 37ರಷ್ಟಿದೆ.

 

 

ಚಿತ್ರದುರ್ಗದಲ್ಲಿ ಪ್ರಧಾನ ಖನಿಜ ವಲಯದಲ್ಲಿ  ವಾರ್ಷಿಕವಾಗಿ 1,072.00 ಕೋಟಿಯಷ್ಟು ರಾಜಧನ ಸಂಗ್ರಹಿಸಲು ಗುರಿ ನಿಗದಿಪಡಿಸಿದೆ. ಏಪ್ರಿಲ್‌ನಿಂದ ಜುಲೈವರೆಗೆ 385.92 ಕೋಟಿ ರು ನಿಗದಿಯಾಗಿದೆ. ಈ ಪೈಕಿ ನಾಲ್ಕು ತಿಂಗಳಲ್ಲಿ 248.87 ಕೋಟಿ ವಸೂಲು ಮಾಡಿದೆ. ಇದು ಶೇ. 64ರಷ್ಟು ಪ್ರಗತಿ ಸಾಧಿಸಿದೆ. ಉಪ ಖನಿಜಗಳ ವಲಯದಲ್ಲಿ  ವಾರ್ಷಿಕ 69.00 ಕೋಟಿ ಗುರಿ ನಿಗದಿಪಡಿಸಿದೆ. ಏಪ್ರಿಲ್‌ನಿಂದ ಜುಲೈವರೆಗೆ 24.84 ಕೋಟಿ ರು ನಿಗದಿಯಾಗಿದೆ. ಈ ಪೈಕಿ ನಾಲ್ಕು ತಿಂಗಳಲ್ಲಿ 20.27 ಕೋಟಿಯಷ್ಟು ವಸೂಲು ಮಾಡಿದೆ. ಇದು ಶೇ. 82ರಷ್ಟಿರುವುದು ತಿಳಿದು ಬಂದಿದೆ.

ಬಳ್ಳಾರಿಯಲ್ಲಿ ಪ್ರಧಾನ ಖನಿಜ ವಲಯದಲ್ಲಿ ವಾರ್ಷಿಕವಾಗಿ 6,250.00 ಕೋಟಿ ರು ಸಂಗ್ರಹಿಸಲು ವಾರ್ಷಿಕವಾಗಿ ಗುರಿ ನಿಗದಿಪಡಿಸಿದೆ. ಈಪೈಕಿ ಏಪ್ರಿಲ್‌ನಿಂದ ಜುಲೈವರೆಗೆ 2,250 ಕೋಟಿ ರು ನಿಗದಿಯಾಗಿದೆ. 2026ರ ಜುಲೈ 16ರ ಅಂತ್ಯಕ್ಕೆ  1,149.37 ಕೋಟಿ ರು ವಸೂಲು ಮಾಡಿದೆ. ಈ ನಾಲ್ಕು ತಿಂಗಳಲ್ಲಿ ವಸೂಲಿಗೆ ಇನ್ನೂ 1,100.63 ಕೋಟಿ ರು ಬಾಕಿ ಇದೆ. ಇದು ಒಟ್ಟು ಶೇ. 51ರಷ್ಟು ಪ್ರಗತಿ ಸಾಧಿಸಿದೆ.

ಅದೇ ರೀತಿ ಉಪ ಖನಿಜಗಳ ವಲಯದಲ್ಲಿ ನಾಲ್ಕು ತಿಂಗಳಿಗೆ 20.16 ಕೋಟಿ ನಿಗದಿಪಡಿಸಿತ್ತು. ಈ ಪೈಕಿ 10.73 ಕೋಟಿಯಷ್ಟು ವಸೂಲು ಮಾಡಿದೆ. ಒಟ್ಟಾರೆ ವಾರ್ಷಿಕವಾಗಿ ನಿಗದಿಪಡಿಸಿದ್ದ   6,306.00 ಕೋಟಿ ರು ಗುರಿ ಪ್ರಕಾರ ನಾಲ್ಕು ತಿಂಗಳಲ್ಲಿ 2,270.16 ಕೋಟಿ ರು ವಸೂಲು ಮಾಡಿದೆ. ವಸೂಲಿಗೆ ಒಟ್ಟಾರೆ 4,035.84 ಕೋಟಿ ರು ಬಾಕಿ ಇರಿಸಿಕೊಂಡಿದೆ.

 

 

ತುಮಕೂರು ಜಿಲ್ಲೆಯಲ್ಲಿ ಪ್ರಧಾನ ಖನಿಜಗಳ ವಲಯದಲ್ಲಿ ವಾ‍ರ್ಷಿಕವಾಗಿ  ಕೇವಲ 5.00 ಕೋಟಿ ಮಾತ್ರ ಗುರಿ ನೀಡಿದೆ. ಈ ಪೈಕಿ ಏಪ್ರಿಲ್‌ನಿಂದ ಜುಲೈ ತಿಂಗಳಿಗೆ 1.80 ಕೋಟಿ ರು ಗುರಿ ನಿಗದಿಪಡಿಸಿದೆ. ಈ ನಾಲ್ಕು ತಿಂಗಳಲ್ಲಿ ಪ್ರಧಾನ ಖನಿಜ ವಲಯದಿಂದ ಕೇವಲ 0.66 ಕೋಟಿ ಮಾತ್ರ ವಸೂಲು ಮಾಡಿದೆ. ಉಪ ಖನಿಜಗಳ ವಲಯದಿಂದ ಈ ಜಿಲ್ಲೆಗೆ ವಾರ್ಷಿಕವಾಗಿ  176.00 ಕೋಟಿ ಗುರಿ ನಿಗದಿಪಡಿಸಿತ್ತು. ಏಪ್ರಿಲ್‌ನಿಂದ ಜುಲೈವರೆಗೆ 63.36 ಕೋಟಿ ರು ನಿಗದಿಯಾಗಿತ್ತು. ಇದರಲ್ಲಿ 23.48 ಕೋಟಿ ರು ಮಾತ್ರ ವಸೂಲು ಮಾಡಿದೆ. ಒಟ್ಟಾರೆ ಪ್ರಧಾನ ಮತ್ತು ಉಪ ಖನಿಜಗಳ ವಲಯದಿಂದ 181.00 ಕೋಟಿ ರು ನಿಗದಿಯಾಗಿತ್ತು. ಈ ಪೈಕಿ ನಾಲ್ಕು ತಿಂಗಳಲ್ಲಿ 65.16 ಕೋಟಿ ರು ವಸೂಲು ಮಾಡಬೇಕಿತ್ತು. ಆದರೆ 24.15 ಕೋಟಿ ರು ಮಾತ್ರ ವಸೂಲು ಮಾಡಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ವಿಜಯನಗರ ಜಿಲ್ಲೆಗೆ ಪ್ರಧಾನ ಖನಿಜಗಳ ವಲಯಕ್ಕೆ  90.00 ಕೋಟಿ ರು ವಾ‍ರ್ಷಿಕ ಗುರಿ ನಿಗದಿಪಡಿಸಿತ್ತು. ಏಪ್ರಿಲ್‌ನಿಂದ ಜುಲೈವರೆಗೆ 32.40 ಕೋಟಿ ರು ವಸೂಲು ಮಾಡಬೇಕಿತ್ತು. ಆದರೆ ಇಲಾಖೆಯು ಈ ನಾಲ್ಕು ತಿಂಗಳಲ್ಲಿ 14.61 ಕೋಟಿ ರು ಮಾತ್ರ ವಸೂಲು ಮಾಡಿದೆ. ಹಾಗೆಯೇ ಉಪ ಖನಿಜಗಳ ವಲಯದಲ್ಲಿ 85.00 ಕೋಟಿ ರು ವಾರ್ಷಿಕ ಗುರಿ ನಿಗದಿಪಡಿಸಿತ್ತು. ಏಪ್ರಿಲ್‌ನಿಂದ ಜುಲೈವರೆಗೆ 30.60 ಕೋಟಿ ರು ವಸೂಲು ಮಾಡಲು ಗುರಿ ನಿಗದಿಯಾಗಿತ್ತು. ಆದರೆ ಇಲಾಖೆಯು ಈ ಗುರಿ ಮುಟ್ಟಿಲ್ಲ, ಕೇವಲ 10.39 ಕೋಟಿ ರು ಮಾತ್ರ ವಸೂಲು ಮಾಡಿರುವುದು ಅಂಕಿ ಅಂಶಗಳಿಂದ ಗೊತ್ತಾಗಿದೆ.

ಕಲ್ಬುರ್ಗಿ ಜಿಲ್ಲೆಯಲ್ಲಿ ಪ್ರಧಾನ ಖನಿಜಗಳ ವಲಯದಿಂದ ವಾರ್ಷಿಕವಾಗಿ  400 ಕೋಟಿ ರು ರಾಜಧನ ಸಂಗ್ರಹಿಸಲು ಗುರಿ ನಿಗದಿಪಡಿಸಿತ್ತು. ಈ ಪೈಕಿ ಏಪ್ರಿಲ್‌ ನಿಂದ ಜುಲೈವರೆಗೆ 144.00 ಕೋಟಿ ರು ವಸೂಲು ಮಾಡಬೇಕಿತ್ತು. ಆದರೆ 93.97 ಕೋಟಿ ರು ಮಾತ್ರ ವಸೂಲು ಮಾಡಿದೆ. ಉಪ ಖನಿಜಗಳ ವಲಯದಿಂದ 82.00 ಕೋಟಿ ರು ವಸೂಲು ಮಾಡಲು ಗುರಿ ನಿಗದಿಪಡಿಸಿದೆ. ಇದರಲ್ಲಿ ನಾಲ್ಕು ತಿಂಗಳಲ್ಲಿ 29.52 ಕೋಟಿ ರು ವಸೂಲು ಮಾಡಬೇಕಿತ್ತು. ಆದರೆ 12.28 ಕೋಟಿ ರು ಮಾತ್ರ ವಸೂಲು ಮಾಡಿರುವುದು ತಿಳಿದು ಬಂದಿದೆ.

ರಾಯಚೂರು ಜಿಲ್ಲೆಗೆ ಪ್ರಧಾನ ಖನಿಜಗಳ ವಲಯದಿಂದ  ವಾರ್ಷಿಕವಾಗಿ 100 ಕೋಟಿ ರು ರಾಜಧನ ಸಂಗ್ರಹಿಸಲು ಗುರಿ ನಿಗದಿಪಡಿಸಿದೆ. ಈ ನಾಲ್ಕು ತಿಂಗಳಿಗೆ 36.00 ಕೋಟಿಯಷ್ಟು ಗುರಿ ನಿಗದಿಯಾಗಿತ್ತು. ಈ ಪೈಕಿ 33.10 ಕೋಟಿಯಷ್ಟು ವಸೂಲುಮಾಡಿದೆ. ಉಪ ಖನಿಜಗಳ ವಲಯದಿಂದ ವಾರ್ಷಿಕವಾಗಿ  66.00 ಕೋಟಿ ಪ್ರಕಾರ ನಾಲ್ಕು ತಿಂಗಳಲ್ಲಿ   23.76 ಕೋಟಿ ರು ವಸೂಲು ಮಾಡಬೇಕಿತ್ತು. 18.05 ಕೋಟಿ ರು ಮಾತ್ರ ವಸೂಲು ಮಾಡಿದೆ.

2023-24ನೇ ಸಾಲಿನಲ್ಲಿ ಮುಖ್ಯ ಖನಿಜಗಳಿಂದ 5,317.61 ಕೋಟಿ ರು, ಉಪ ಖನಿಜಗಳಿಂದ 2,003.98 ಕೋಟಿ ರು ಸೇರಿ ಒಟ್ಟಾರೆ 7,321.59 ಕೋಟಿ ರುಪಾಯಿ ಸಂಗ್ರಹಿಸಿತ್ತು. 2024-25ನೇ ಸಾಲಿನಲ್ಲಿ ಮುಖ್ಯ ಖನಿಜಗಳಿಂದ 5,852.37 ಕೋಟಿ ರು., ಉಪ ಖನಿಜಗಳಿಂದ 1,846.80 ಕೋಟಿ ರು ಸೇರಿ ಒಟ್ಟಾರೆ 7,698.97 ಕೋಟಿ ರು., 2025-26ನೇ ಸಾಲಿನಲ್ಲಿ ಮುಖ್ಯ ಖನಿಜಗಳಿಂದ 6,801.11 ಕೋಟಿ ರು ಸಂಗ್ರಹಿಸಿದ್ದರೇ ಉಪ ಖನಿಜಗಳಿಂದ 2,044.28 ಕೋಟಿ ರು ಸೇರಿ ಒಟ್ಟಾರೆ 8,845.39 ಕೋಟಿ ರು ಸಂಗ್ರಹಿಸಿತ್ತು. 2026-17ನೇ ಸಾಲಿನ ಜುಲೈವರೆಗೆ ಮುಖ್ಯ ಖನಿಜಗಳಿಂದ 2,087.25 ಕೋಟಿ ರು, ಉಪ ಖನಿಜಗಳಿಂದ 575.73 ಕೋಟಿ ರು ಸೇರಿ ಒಟ್ಟಾರೆ 2,662.98 ಕೋಟಿ ರು ಸಂಗ್ರಹಿಸಿದೆ.

 

 

 

ಹಾಗೆಯೇ 2024-25ನೇ ಸಾಲಿನಲ್ಲಿ 09  ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ಪತ್ತೆ ಹಚ್ಚಿತ್ತು. ಇದರಿಂದ 3.31 ಲಕ್ಷ ರು ದಂಡ ಸಂಗ್ರಹಿಸಿತ್ತು. ಒಟ್ಟು 8 ಮೊಕದ್ದಮೆಗಳನ್ನು ದಾಖಲಿಸಿತ್ತು. 2025-26ನೇ ಸಾಲಿನಲ್ಲಿ 03 ಪ್ರಕರಣಗಳನ್ನು ಪತ್ತೆ  ಹಚ್ಚಿದ್ದ ಇಲಾಖೆಯು 5.00 ಲಕ್ಷ ರು ದಂಡ ಸಂಗ್ರಹಿಸಿತ್ತು. 02 ಮೊಕದ್ದಮೆಗಳನ್ನು ದಾಖಲಿಸಿತ್ತು. 2026-27ನೇ ಸಾಲಿನ ಜುಲೈ  ವರೆಗೆ  ಒಂದೇ ಒಂದು ಪ್ರಕರಣವನ್ನು ಪತ್ತೆ ಹಚ್ಚಿಲ್ಲ.

ಅನಧಿಕೃತ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ 2024-25ನೇ ಸಾಲಿನಲ್ಲಿ ಒಟ್ಟು 657 ಪ್ರಕರಣಗಳನ್ನು ಪತ್ತೆ ಹಚ್ಚಿತ್ತು. 7.15 ಕೋಟಿ ರು ದಂಡ ಸಂಗ್ರಹಿಸಿತ್ತು. ಒಟ್ಟು 186 ಮೊಕದ್ದಮೆಗಳನ್ನು ದಾಖಲಿಸಿತ್ತು. 2025-26ನೇ ಸಾಲಿನಲ್ಲಿ 945 ಪ್ರಕರಣಗಳನ್ನು ಪತ್ತೆ ಹಚ್ಚಿದ್ದ ಇಲಾಖೆಯು 11.70 ಕೋಟಿ ರು ದಂಡ ಸಂಗ್ರಹಿಸಿತ್ತು. 231 ಮೊಕದ್ದಮೆಗಳನ್ನು ದಾಖಲಿಸಿತ್ತು. 2026-27ನೇ ಸಾಲಿನ ಜುಲೈ ಅಂತ್ಯಕ್ಕೆ  146 ಪ್ರಕರಣಗಳನ್ನು ಪತ್ತೆ ಹಚ್ಚಿರು ಇಲಾಖೆಯು 5.32 ಕೋಟಿ ದಂಡ ಸಂಗ್ರಹಿಸಿತ್ತು. 38 ಮೊಕದ್ದಮೆಗಳನ್ನು ದಾಖಲಿಸಿತ್ತು.

 

 

ಅನಧಿಕೃತ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ 2024-25ನೇ ಸಾಲಿನಲ್ಲಿ 219 ಪ್ರಕರಣಗಳನ್ನು ಪತ್ತೆ ಹಚ್ಚಿದೆ. ಒಟ್ಟು 75.98 ಲಕ್ಷ ರು ದಂಡ ಸಂಗ್ರಹಿಸಿದೆ. 126 ಮೊಕದ್ದಮೆಗಳನ್ನು ದಾಖಲಿಸಿತ್ತು. 2025-26ನೇ ಸಾಲಿನಲ್ಲಿ 229 ಪ್ರಕರಣಗಳನ್ನು ಪತ್ತೆ ಹಚ್ಚಿದ್ದರೇ ಈ ಪೈಕಿ 1.33 ಕೋಟಿ ರು ದಂಡ ಸಂಗ್ರಹಿಸಿದೆ. 127 ಮೊಕದ್ದಮೆಗಳನ್ನು ದಾಖಲಿಸಿದೆ. 2026-27ನೇ ಸಾಲಿನ ಜುಲೈವರೆಗೆ 103 ಪ್ರಕರಣಗಳನ್ನು ಪತ್ತೆ ಹಚ್ಚಿರುವ ಇಲಾಖೆಯು 38.99 ಲಕ್ಷ ರು ದಂಡ ಸಂಗ್ರಹಿಸಿದೆ. 63 ಮೊಕದ್ದಮೆಗಳನ್ನು ದಾಖಲಿಸಿದೆ.

 

 

ಒಟ್ಟಾರೆ ಕಳೆದ ಮೂರು ವರ್ಷಗಳಲ್ಲಿ ಮುಖ್ಯ ಖನಿಜಗಳಿಂದ 8.31 ಲಕ್ಷ ರು ದಂಡ ಸಂಗ್ರಹಿಸಿದ್ದರೇ ಉಪ ಖನಿಜಗಳಿಂದ 26.67 ಕೋಟಿ ರು ದಂಡ ಸಂಗ್ರಹಿಸಿದೆ  ಎಂದು ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ್ ಅವರು 2026ರ ಆಗಸ್ಟ್‌ 21ರಂದು ನಡೆದಿದ್ದ  ವಿಧಾನ ಪರಿಷತ್‌ ಅಧಿವೇಶನಕ್ಕೆ ಮಾಹಿತಿ ಒದಗಿಸಿದ್ದರು.

Hot this week

ಅನಂತ್‌ ನಾಗ್‌ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ; 8 ವರ್ಷದ ಹಿಂದಿನ ವಿಸ್ತೃತ ಸಂದರ್ಶನ

ಬೆಂಗಳೂರು;  ಕನ್ನಡ ಚಿತ್ರರಂಗದ  ಹಿರಿಯ ನಟ ಅನಂತ್ ನಾಗ್ ಅವರಿಗೆ 2024ರ...

ಭೂಗತ ಸುರಂಗ ಮಾರ್ಗ; ರಿಯಾಯಿತಿ ಅವಧಿಯಲ್ಲೇ ಗರಿಷ್ಠ ಟೋಲ್‌ ಸಂಗ್ರಹಣೆ, ದರ ಪರಿಷ್ಕರಣೆಯ ಹಿಂದಿನ ರಹಸ್ಯ ಬಯಲು

ಬೆಂಗಳೂರು; ಭೂಗತ ಸುರಂಗ ಮಾರ್ಗದಲ್ಲಿ ರಿಯಾಯಿತಿ ಅವಧಿಯಲ್ಲಿ ಗರಿಷ್ಠ ಟೋಲ್‌ ಸಂಗ್ರಹಣೆ...

ಕೋವಿಡ್ ವೆಚ್ಚದಲ್ಲಿ ಅಕ್ರಮ ಆರೋಪ; ಐಎಎಸ್‌ ಗೌರವ್ ಗುಪ್ತಾ, ರಾಜೇಂದ್ರ ಚೋಳನ್ ಆರೋಪ ಮುಕ್ತ, ಕುನ್ಹಾ ವರದಿಗಿಲ್ಲ ಕಿಮ್ಮತ್ತು

ಬೆಂಗಳೂರು;  ಕೋವಿಡ್‌ 19ರ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳಿಂದ ಅನುಮೋದನೆ ಇಲ್ಲದೆಯೇ,...

ಶಿವಮೊಗ್ಗ ಜಿಲ್ಲೆಯಿಂದ ಅತೀ ಹೆಚ್ಚು, ಕಲ್ಬುರ್ಗಿ ಜಿಲ್ಲೆಯಿಂದ ಅತೀ ಕಡಿಮೆ ಅನುದಾನಕ್ಕೆ ಬೇಡಿಕೆ; ಜಿಲ್ಲಾಡಳಿತ ನಿಷ್ಕ್ರೀಯವಾಯಿತೇ?

ಬೆಂಗಳೂರು;  ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿಯ ಅನುದಾನ ಬೇಡಿಕೆ ಮುಂದಿರಿಸಿರುವ ಇಲಾಖೆಗಳ ...
Please Scan to make Your Contribution

Topics

ಅನಂತ್‌ ನಾಗ್‌ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ; 8 ವರ್ಷದ ಹಿಂದಿನ ವಿಸ್ತೃತ ಸಂದರ್ಶನ

ಬೆಂಗಳೂರು;  ಕನ್ನಡ ಚಿತ್ರರಂಗದ  ಹಿರಿಯ ನಟ ಅನಂತ್ ನಾಗ್ ಅವರಿಗೆ 2024ರ...

ಭೂಗತ ಸುರಂಗ ಮಾರ್ಗ; ರಿಯಾಯಿತಿ ಅವಧಿಯಲ್ಲೇ ಗರಿಷ್ಠ ಟೋಲ್‌ ಸಂಗ್ರಹಣೆ, ದರ ಪರಿಷ್ಕರಣೆಯ ಹಿಂದಿನ ರಹಸ್ಯ ಬಯಲು

ಬೆಂಗಳೂರು; ಭೂಗತ ಸುರಂಗ ಮಾರ್ಗದಲ್ಲಿ ರಿಯಾಯಿತಿ ಅವಧಿಯಲ್ಲಿ ಗರಿಷ್ಠ ಟೋಲ್‌ ಸಂಗ್ರಹಣೆ...

ಕೋವಿಡ್ ವೆಚ್ಚದಲ್ಲಿ ಅಕ್ರಮ ಆರೋಪ; ಐಎಎಸ್‌ ಗೌರವ್ ಗುಪ್ತಾ, ರಾಜೇಂದ್ರ ಚೋಳನ್ ಆರೋಪ ಮುಕ್ತ, ಕುನ್ಹಾ ವರದಿಗಿಲ್ಲ ಕಿಮ್ಮತ್ತು

ಬೆಂಗಳೂರು;  ಕೋವಿಡ್‌ 19ರ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳಿಂದ ಅನುಮೋದನೆ ಇಲ್ಲದೆಯೇ,...

ಶಿವಮೊಗ್ಗ ಜಿಲ್ಲೆಯಿಂದ ಅತೀ ಹೆಚ್ಚು, ಕಲ್ಬುರ್ಗಿ ಜಿಲ್ಲೆಯಿಂದ ಅತೀ ಕಡಿಮೆ ಅನುದಾನಕ್ಕೆ ಬೇಡಿಕೆ; ಜಿಲ್ಲಾಡಳಿತ ನಿಷ್ಕ್ರೀಯವಾಯಿತೇ?

ಬೆಂಗಳೂರು;  ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿಯ ಅನುದಾನ ಬೇಡಿಕೆ ಮುಂದಿರಿಸಿರುವ ಇಲಾಖೆಗಳ ...

ಪೆರಿಫೆರಲ್ ರಿಂಗ್‌ ರೋಡ್‌- 2; 4,500 ಕೋಟಿ ಭೂ ಪರಿಹಾರ, 15,450 ಕೋಟಿ ಅಂದಾಜು ವೆಚ್ಚ, ಸರ್ಕಾರಕ್ಕೆ ಪರಿಷ್ಕೃತ ಯೋಜನೆ ಸಲ್ಲಿಕೆ

ಬೆಂಗಳೂರು; ರೈತರು ಮತ್ತು  ಸ್ಥಳೀಯರ ವಿರೋಧದ ನಡುವೆಯೂ ಫೆರಿಫೆರಲ್ ರಿಂಗ್‌ ರಸ್ತೆ (ಭಾಗ...

Related Articles

Popular Categories

error: Content is protected !!