Friday | June 12, 2026 |

ಆರ್ಥಿಕ ಬಿಕ್ಕಟ್ಟು; ಶಿಕ್ಷಕರ ನೇಮಕಾತಿ, ವೃತ್ತಿಪರತೆ ಅಭಿವೃದ್ಧಿ ವೆಚ್ಚಕ್ಕೆ ತಡೆಹಿಡಿದಿತ್ತೇ ಸರ್ಕಾರ?

ಬೆಂಗಳೂರು; ರಾಜ್ಯದ ಹೆಚ್ಚಿನ ಸರ್ಕಾರಿ ಶಾಲೆಗಳು ಆರ್‍‌ಟಿಇ ಕಾಯ್ದೆಯು ಭೌತಿಕ ಮೂಲಸೌಕರ್ಯಗಳು ಮತ್ತು ಶೈಕ್ಷಣಿಕ ಸಂಪನ್ಮೂಲಗಳಿಗಾಗಿ ನಿಗದಿಪಡಿಸಿದ ಮೂಲ ಮಾನದಂಡವನ್ನೇ ಪೂರೈಸುತ್ತಿಲ್ಲ ಎಂದು ರಾಜ್ಯ ಶಿಕ್ಷಣ ನೀತಿ ಆಯೋಗವು ಪತ್ತೆ ಹಚ್ಚಿದೆ.

ಅದೇ ರೀತಿ ಶಿಕ್ಷಣವು ಸಂವಿಧಾನದಿಂದ ಖಾತ್ರಿಗೊಳಿಸಲ್ಪಟ್ಟ ಮೂಲಭೂತ ಹಕ್ಕಾಗಿದೆ. ಹೀಗಾಗಿ ರಾಜ್ಯದ ಆರ್ಥಿಕ ಬಿಕ್ಕಟ್ಟಿನ ಕಾರಣವೊಡ್ಡಿ ಶಿಕ್ಷಕರ ನೇಮಕಾತಿ ಮತ್ತು ವೃತ್ತಿಪರತೆ ಅಭಿವೃದ್ಧಿಗೆ ತಗಲುವ ವೆಚ್ಚವನ್ನು ತಡೆಹಿಡಿಯಬಾರದು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಹಾಗೆಯೇ ಖಾಯಂ ಶಿಕ್ಷಕರ ಹುದ್ದೆಗಳ ಬದಲಿಗೆ ಅತಿಥಿ ಶಿಕ್ಷಕರನ್ನು ನೇಮಿಸುವ ಅಭ್ಯಾಸವನ್ನು ಸಂಪೂರ್ಣವಾಗಿ ಕೈಬಿಡಬೇಕು. ಪ್ರಾಥಮಿಕ ಹಂತದಲ್ಲಿ ಚಿಕ್ಕ ಮಕ್ಕಳನ್ನು ಪುನರಾವರ್ತಿತ ಬಾಹ್ಯ ಪರೀಕ್ಷೆ ಮತ್ತು ಪರೀಕ್ಷೆಗೆ ಒಳಪಡಿಸುವ ಅನಪೇಕ್ಷಿತ ಅಭ್ಯಾಸಕ್ಕೆ ಕಾರಣವಾಗಿದೆ. ಹೀಗಾಗಿ ಈ ಪದ್ದತಿಯನ್ನು ಕೈಬಿಡಬೇಕು ಎಂದು ಸಲಹೆ ನೀಡಿದೆ.

ವಿಸ್ತರಣೆ-ಸಮತೆ-ಗುಣಮಟ್ಟ-ಆಡಳಿತ-ಹಣಕಾಸು ಕುರಿತಾಗಿ ಶಿಕ್ಷಣ ನೀತಿ ಶಿಫಾರಸ್ಸುಗಳಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ವರದಿಯು ರಾಜ್ಯದ ಪ್ರಾಥಮಿಕ ಶಿಕ್ಷಣ ಸಾರ್ವತ್ರೀಕರಣದ ವಿವಿಧ ಆಯಾಮಗಳ ಕುರಿತು ಚರ್ಚಿಸಿದೆ.

ಸುಖದೇವ್ ಥೋರಟ್ ನೇತೃತ್ವದ ಆಯೋಗವು ಮೂರು ಸಂಪುಟಗಳಲ್ಲಿ ಸಲ್ಲಿಸಿರುವ ವರದಿಯನ್ನು ಚರ್ಚಿಸಿ ಶಿಫಾರಸ್ಸುಗಳನ್ನು ಮಾಡಬೇಕು ಎಂದು ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಸೂಚಿಸಲಾಗಿತ್ತು. ಆದರೆ ರಾಜಕೀಯ ಕಚ್ಚಾಟದ ನಡುವೆ ಆಯೋಗದ ಈ ವರದಿಯನ್ನು ಯಾವೊಬ್ಬ ಸಚಿವರೂ ಅಮೂಲಾಗ್ರವಾಗಿ ಚರ್ಚಿಸಿಲ್ಲ ಎಂದು ತಿಳಿದು ಬಂದಿದೆ.

ರಾಜ್ಯ ಶಿಕ್ಷಣ ನೀತಿ ಆಯೋಗವು ಸಲ್ಲಿಸಿರುವ ಮೂರು ಸಂಪುಟಗಳ ವರದಿಗಳ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

 

 

ಆರ್‍‌ಟಿಇ ಮಾನದಂಡ ಪೂರೈಸದ ಶಾಲೆಗಳು

ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮ (ಡಿಪಿಇಪಿ) ಮತ್ತು ಸರ್ವ ಶಿಕ್ಷಾ ಅಭಿಯಾನದ (ಎಸ್‌ಎಸ್‌ಎ) ಮೂಲಕ ಪ್ರಾಥಮಿಕ ಶಾಲೆಗಳಲ್ಲಿ ಕಟ್ಟಡ, ಶಿಕ್ಷಣ ಪರಿಕರಗಳೇ ಮೊದಲಾದ ಭೌತಿಕ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಗಣನೀಯ ಮೊತ್ತವನ್ನು ಹೂಡಿಕೆ ಮಾಡಿದೆ. ಆದರೂ ರಾಜ್ಯದ ಹೆಚ್ಚಿನ ಸರ್ಕಾರಿ ಶಾಲೆಗಳು ಆರ್‍‌ಟಿಇ ಕಾಯ್ದೆಯು ಭೌತಿಕ ಮೂಲಸೌಕರ್ಯಗಳು ಮತ್ತು ಶೈಕ್ಷಣಿಕ ಸಂಪನ್ಮೂಲಗಳಿಗಾಗಿ ನಿಗದಿಪಡಿಸಿದ ಮೂಲ ಮಾನದಂಡವನ್ನು ಪೂರೈಸುತ್ತಿಲ್ಲ ಎಂದು ಆಯೋಗವು ವರದಿಯಲ್ಲಿ ವಿವರಿಸಿದೆ.

ಶಾಲಾ ವ್ಯವಸ್ಥೆಯೊಳಗೆ ಅಸಮಾನತೆ

ರಾಜ್ಯ ಸರ್ಕಾರವು ನಡೆಸುವ ಪ್ರತಿಯೊಂದು ಶಾಲೆಯೂ ಆರ್‍‌ಟಿಇ ಕಾಯ್ದೆಯ ಶೆಡ್ಯೂಲಿನಲ್ಲಿ ನಿರ್ದಿಷ್ಟಪಡಿಸಲಾದ ಗುಣಮಟ್ಟದ ಮಾನದಂಡಗಳಿಗೆ ಒಳಪಟ್ಟಿರಬೇಕು. ಸರ್ಕಾರಿ ಶಾಲೆಗಳು ಪ್ರಾಥಮಿಕ ಶಿಕ್ಷಣ ಒದಗಿಸಲು ಅಗತ್ಯವಿರುವ ಕನಿಷ್ಟ ಮೂಲಸೌಕರ್ಯಗಳನ್ನು ಹೊಂದಿರುವುದನ್ನು ಖಚಿತಪಡಿಸಕೊಳ್ಳಬೇಕು. ಸರ್ಕಾರಿ ಶಾಲೆಗಳೇ ಆದ ಕೇಂದ್ರೀಯ ವಿದ್ಯಾಲಯಗಳ ಗುಣಮಟ್ಟಕ್ಕೆ ಕೊಂಡೊಯ್ಯಬೇಕು. ಯಾವದೇ ಶಾಲೆ ಕೇಂದ್ರ ಸರ್ಕಾರದಿಂದ ಧನ ಸಹಾಯ ಪಡೆಯುತ್ತಿರಲಿ ಅಥವಾ ರಾಜ್ಯ ಸರ್ಕಾರದಿಂದ, ಸಾರ್ವಜನಿಕ ಸಂಪನ್ಮೂಲಗಳ ಆಧಾರದ ಮೇಲೆ ಶಾಲಾ ವ್ಯವಸ್ಥೆಯೊಳಗೆ ಅಸಮಾನತೆ ಕಲ್ಪಿಸುವುದನ್ನು ಯಾವುದೇ ರೀತಿಯಿಂದಲೂ ಸಮರ್ಥಿಸಲಾಗದು ಎಂದು ಆಯೋಗವು ವರದಿಯಲ್ಲಿ ವಿಶ್ಲೇಷಿಸಿರುವುದು ತಿಳಿದು ಬಂದಿದೆ.

 

 

ಕರ್ನಾಟಕವು ವಾಸ ಸ್ಥಳಕ್ಕೆ ಹತ್ತಿರದ ಪ್ರಾಥಮಿಕ ಶಾಲೆಗಳಿಗೆ ಪ್ರವೇಶವನ್ನು ಒದಗಿಸುವಲ್ಲಿ ಮತ್ತು ಪ್ರತಿಯೊಂದು ಮಗುವನ್ನೂ ಶಾಲೆಗೆ ದಾಖಲಿಸುವಲ್ಲಿ ಉತ್ತಮ ಪ್ರದರ್ಶನ ನೀಡಿವೆ. ಆದರೂ ಹಲವಾರು ಪ್ರದೇಶಗಳಲ್ಲಿ ಬ್ಲಾಕ್‌ಗಳು ಮತ್ತು ಜಿಲ್ಲೆಗಳಲ್ಲಿ ಈ ವಿಷಯದಲ್ಲಿ ಗಣನೀಯ ಅಂತರವನ್ನು ಇರುವುದನ್ನು ದತ್ತಾಂಶವು ಬಹಿರಂಗಪಡಿಸುತ್ತದೆ ಎಂದು ವರದಿ ಹೇಳಿದೆ.

ಅತಿಥಿ ಶಿಕ್ಷಕರ ನೇಮಕ ಕೈಬಿಡಿ

ಶಿಕ್ಷಕರ ಕೊರತೆ ಮತ್ತು ಶಿಕ್ಷಕರು ನಾನಾ ಕಾರಣಗಳಿಂದ ಗೈರು ಹಾಜರಾಗುವುದು ಮಕ್ಕಳ ಕಲಿಕೆಗೆ ನಷ್ಟ ಉಂಟು ಮಾಡುವ ಮತ್ತೊಂದು ಗಂಭೀರ ಸಮಸ್ಯೆಯಾಗಿದೆ. ಖಾಯಂ ಶಿಕ್ಷಕರ ಹುದ್ದೆಗಳ ಬದಲಿಗೆ ಅತಿಥಿ ಶಿಕ್ಷಕರನ್ನು ನೇಮಿಸುವ ಅಭ್ಯಾಸವನ್ನು ಸಂಪೂರ್ಣವಾಗಿ ಕೈಬಿಡಬೇಕು. ಅಸ್ತಿತ್ವದಲ್ಲಿರುವ ಸೇವಾ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಎಲ್ಲಾ ಖಾಲಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ಮುಂದಿನ ಎರಡು ವರ್ಷಗಳಲ್ಲಿ ಈ ಗುರಿಯನ್ನು ಸಾಧಿಸಬೇಕು. ನಿವೃತ್ತಿಯ ಕಾರಣದಿಂದ ಖಾಲಿಯಾಗುವ ಹುದ್ದೆಗಳ ನಿರೀಕ್ಷೆಯಲ್ಲಿ ಶಿಕ್ಷಕರ ನೇಮಕಾತಿ ಮಾಡಬೇಕು. ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವುದರ ಜತೆ ಶಿಕ್ಷಕರ ಅಸಮರ್ಪಕ ಹಂಚಿಕೆ ಸಮಸ್ಯೆಯನ್ನೂ ಪರಿಹರಿಸಬೇಕು ಎಂದು ಆಯೋಗವು ಸಲಹೆ ನೀಡಿದೆ.

ಈಶಾನ್ಯ ಜಿಲ್ಲೆಗಳಲ್ಲಿ ಶಿಕ್ಷಕರ ಕೊರತೆ

ಈಶಾನ್ಯ ಜಿಲ್ಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರ ಸಂಖ್ಯೆಯು ಶಾಲೆಗೆ ದಾಖಲಾದ ಮಕ್ಕಳ ಸಂಖ್ಯೆಗೆ ಅನುಗುಣವಾಗಿಲ್ಲ. ಈ ಪ್ರದೇಶಗಳಲ್ಲಿ ಶಿಕ್ಷಕರ ಕೊರತೆ ಇದೆ. ಅದೇ ವೇಳೆಗೆ ದಕ್ಷಿಣ ಜಿಲ್ಲೆಗಳಲ್ಲಿ ಶಿಕ್ಷಕರ ಸಂಖ್ಯೆ ಹೆಚ್ಚುವರಿಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗಲು ಇದು ಒಂದು ಕಾರಣವೆಂದು ತೋರುತ್ತಿದೆ. ಶಿಕ್ಷಣವು ಸಂವಿಧಾನದಿಂದ ಖಾತ್ರಿಗೊಳಿಸಲ್ಪಟ್ಟ ಮೂಲಭೂತ ಹಕ್ಕಾಗಿದೆ. ಹೀಗಾಗಿ ‘ರಾಜ್ಯದ ಆರ್ಥಿಕ ಬಿಕ್ಕಟ್ಟಿನ ಕಾರಣವೊಡ್ಡಿ ಶಿಕ್ಷಕರ ನೇಮಕಾತಿ ಮತ್ತು ವೃತ್ತಿಪರತೆ ಅಭಿವೃದ್ಧಿಗೆ ತಗಲುವ ವೆಚ್ಚವನ್ನು ತಡೆಹಿಡಿಯಬಾರದು,’ ಎಂದು ಹೇಳಿದೆ.

 

 

ಬೋಧನೆ- ಕಲಿಕೆ ಪ್ರಕ್ರಿಯೆಗಳಲ್ಲಿ ಜಟಿಲತೆ

ವಿದ್ಯಾರ್ಥಿಗಳ ಪರೀಕ್ಷೆ ಮತ್ತು ಮೌಲ್ಯಮಾಪನವಿಲ್ಲದೆ ಬೋಧನೆ ಅಪೂರ್ಣವಾಗುವುದು ಮತ್ತು ಬೋಧನೆಯೇ ಇಲ್ಲದ ಪರೀಕ್ಷೆಯೂ ಅಪ್ರಸ್ತುತವಾಗುವುದು. ಆರ್‍‌ಟಿಇ ಕಾಯ್ದೆ ಪ್ರಕಾರ ಬೋಧನೆ ಮತ್ತು ಪರೀಕ್ಷೆಗಳು ಕಲಿಕಾ ಫಲಿತಾಂಶದ ಮೇಲೆ ಸಹಜವಾಗಿಯೇ ಪ್ರಭಾವ ಬೀರುತ್ತವೆ ಮತ್ತು ನಿರ್ಣಾಯಕ ಪಾತ್ರ ವಹಿಸುತ್ತವೆ. ಆರ್‍‌ಟಿಇ ಕಾಯ್ದೆಯಲ್ಲಿ ನಿರ್ದಿಷ್ಟಪಡಿಸಿರುವಂತೆ ನಿರಂತರ ಮತ್ತು ಸಮಗ್ರ ಮೌಲ್ಯಮಾಪನವನ್ನು ಈ ದೃಷ್ಟಿಯಿಂದಲೇ ನೋಡಬೇಕು. ಆದರೂ ಬೋಧನೆ ಮತ್ತು ಕಲಿಕೆ ಪ್ರಕ್ರಿಯೆಗಳ ಕುರಿತು ತಿಳಿವಳಿಕೆ ಕೊರತೆಯಿಂದಾಗಿ ಈ ವಿಷಯವಾಗಿ ಅನಗತ್ಯವಾಗಿ ಜಟಿಲಗೊಂಡಿದೆ. ನಂತರದ ಚರ್ಚೆಯು ಅಭ್ಯಾಸ ನಿರತ ಶಿಕ್ಷಕರ ದಾರಿ ತಪ್ಪಿಸಿದೆ ಎಂದು ಆಯೋಗವು ವಿಮರ್ಶಿಸಿರುವುದು ವರದಿಯಿಂದ ಗೊತ್ತಾಗಿದೆ.

 

 

ಪುನರಾವರ್ತಿತ ಬಾಹ್ಯ ಪರೀಕ್ಷೆ; ಕಲಿಕೆ ಮೇಲೆ ಬೀರದ ಸಕಾರಾತ್ಮಕ ಪರಿಣಾಮ

ಪ್ರಾಥಮಿಕ ಹಂತದಲ್ಲಿ ಚಿಕ್ಕ ಮಕ್ಕಳನ್ನು ಪುನರಾವರ್ತಿತ ಬಾಹ್ಯ ಪರೀಕ್ಷೆ ಮತ್ತು ಪರೀಕ್ಷೆಗೆ ಒಳಪಡಿಸುವ ಅನಪೇಕ್ಷಿತ ಅಭ್ಯಾಸಕ್ಕೆ ಕಾರಣವಾಗಿದೆ. ಇದು ಯಾವುದೇ ಬಗೆಯಲ್ಲೂ ಶಾಲೆಯಲ್ಲಿ ಬೋಧನೆ-ಕಲಿಕೆ ಮೇಲೆ ಗುಣಮಟ್ಟದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ವಾಸ್ತವದಲ್ಲಿ ಇದು ಎಳೆಯ ವಿದ್ಯಾರ್ಥಿಗಳಲ್ಲಿ ವೈಫಲ್ಯದ ಭಯ ಹುಟ್ಟುಹಾಕುವ ಮೂಲಕ ಕಲಿಕೆ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ.

ಆದ್ದರಿಂದ ಪರೀಕ್ಷೆಯನ್ನು ಒಳಗೊಂಡ ಬೋಧನೆಯನ್ನು ಸುಧಾರಿಸುವುತ್ತ ಗಮನ ಹರಿಸಬೇಕೇ ಹೊರತು ಬಾಹ್ಯ ಪರೀಕ್ಷೆ ಮೇಲಲ್ಲ. ಈ ನಿಟ್ಟಿನಲ್ಲಿ ಪ್ರಾಥಮಿಕ ತರಗತಿಗಳಲ್ಲಿ ಮಕ್ಕಳನ್ನು ಪುನರಾವರ್ತಿತ ಬಾಹ್ಯ ಪರೀಕ್ಷೆಗೆ ಒಳಪಡಿಸುವ ಕ್ರಮವನ್ನು ತಪ್ಪಿಸಬೇಕು. ಆರ್‍‌ಟಿಇ ಕಾಯ್ದೆಯಲ್ಲಿ ಸೂಚಿಸಿರುವಂತೆ ಪ್ರಾಥಮಿಕ ಶಿಕ್ಷಣದಲ್ಲಿ ಬೋರ್ಡ್‌ ಪರೀಕ್ಷೆಗಳನ್ನು ನಿಷೇಧಿಸಬೇಕು ಎಂದು ಸಲಹೆ ನೀಡಿರುವುದು ತಿಳಿದು ಬಂದಿದೆ.

ಎಸ್‌ಡಿಎಂಸಿಗಳು ಎಲ್ಲಾ ಶಾಲೆಗಳಲ್ಲೂ ಅಸ್ತಿತ್ವದಲ್ಲಿದೆ. ಅವುಗಳ ಕಾರ್ಯಕ್ಷಮತೆಯು ಹೆಚ್ಚು ಅಸಮಾನವಾಗಿದೆ ಮತ್ತು ಕೆಲವೆಡೆ ಕಾಯ್ದೆಯ ನಿರ್ದೇಶನಗಳಿಗೆ ಅನುಗುಣವಾಗಿಲ್ಲ.

 

 

ಆರ್‍‌ಟಿಇ ಕುಂದುಕೊರತೆ ವಿಭಾಗ ನಿಷ್ಕ್ರೀಯ

ಕರ್ನಾಟಕವು ಆರ್‍‌ಟಿಇ ಕಾಯ್ದೆಯ ನಿಬಂಧನೆಗಳಿಗೆ ಸಂಬಂಧಿಸಿದಂತೆ ಕುಂದುಕೊರತೆ ಪರಿಹಾರಕ್ಕಾಗಿ ಔಪಚಾರಿಕ ಕಾರ್ಯವಿಧಾನವನ್ನು ಸ್ಥಾಪಿಸಿದೆ. ಆದರೆ ಅಚ್ಚರಿ ಎಂಬಂತೆ ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಗಣನೀಯ ಪ್ರಮಾಣದ ಉಲ್ಲಂಘನೆಗಳು ನಡೆದಿದ್ದರೂ ಸಹ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ. ಇದು ವ್ಯವಸ್ಥೆಯು ಪ್ರಾಯೋಗಿಕವಾಗಿ ನಿಷ್ಕ್ರೀಯವಾಗಿದೆ. ಅಲ್ಲದೇ ಚಿಕ್ಕಮಕ್ಕಳು ಅಥವಾ ಬಡ ತಂದೆ ತಾಯಿಯರು ಪ್ರಾಧಿಕಾರವನ್ನು ಸಂಪರ್ಕಿಸಿ ದೂರು ದಾಖಲಿಸುವುದನ್ನು ನಿರೀಕ್ಷಿಸುವುದಾದರೂ ಹೇಗೆ. ಆದ್ದರಿಂದ ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಪೂರ್ವಭಾವಿ ಕಾರ್ಯವಿಧಾನವಾಗಿ ಮರು ರೂಪಿಸಬೇಕು ಎಂದು ಸಲಹೆ ನೀಡಿದೆ.

Hot this week

ತ್ಯಾಜ್ಯ ವಿಲೇವಾರಿ ಟೆಂಡರ್ ಪ್ರಕ್ರಿಯೆಗಳಲ್ಲಿ ಅಕ್ರಮ ಆರೋಪ; ಮಧ್ಯಪ್ರವೇಶಕ್ಕೆ ಲೋಕಭವನ ಕದ ತಟ್ಟಿದ ಬಿಜೆಪಿ, ಸ್ವತಂತ್ರ ತನಿಖೆಗೆ ಮುಂದಾಗುವರೇ?

ಬೆಂಗಳೂರು; ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಮಗ್ರ ಘನ ತ್ಯಾಜ್ಯ ನಿರ್ವಹಣಾ...

ಕಸ ವಿಲೇವಾರಿ ಟೆಂಡರ್‍‌ನಲ್ಲಿ ಅಕ್ರಮ; 10,000 ಕೋಟಿ ಕಿಕ್‌ ಬ್ಯಾಕ್‌ ಆರೋಪ, ಹೈಕಮಾಂಡ್ ಕಪ್ಪದ ಟೆಂಡರ್, ರಾಜ್ಯಪಾಲರಿಗೆ ದೂರು, ದಿ ಫೈಲ್ ವರದಿ ಬೆನ್ನಲ್ಲೇ ತುಟಿ ಬಿಚ್ಚಿದ ಆರ್ ಅಶೋಕ್

ಬೆಂಗಳೂರು; ಸಮಗ್ರ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯೂಎಂಎಲ್‌ ಯೋಜಿಸಿದ್ದ ಟೆಂಡರ್ ಪ್ಯಾಕೇಜ್‌ಗಳಲ್ಲಿ...

ಒಂದು ರಾಷ್ಟ್ರ ಒಂದು ಚುನಾವಣೆ; ಸಂಸತ್‌ ಜಂಟಿ ಸಮಿತಿಗೆ 5 ತಿಂಗಳಾದರೂ ಮಾಹಿತಿ ನೀಡದ ರಾಜ್ಯ

ಬೆಂಗಳೂರು; ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂಧಿಸಿದಂತೆ ಸಂವಿಧಾನದ 129ನೇ ತಿದ್ದುಪಡಿ...
Please Scan to make Your Contribution

Topics

ಕಸ ವಿಲೇವಾರಿ ಟೆಂಡರ್‍‌ನಲ್ಲಿ ಅಕ್ರಮ; 10,000 ಕೋಟಿ ಕಿಕ್‌ ಬ್ಯಾಕ್‌ ಆರೋಪ, ಹೈಕಮಾಂಡ್ ಕಪ್ಪದ ಟೆಂಡರ್, ರಾಜ್ಯಪಾಲರಿಗೆ ದೂರು, ದಿ ಫೈಲ್ ವರದಿ ಬೆನ್ನಲ್ಲೇ ತುಟಿ ಬಿಚ್ಚಿದ ಆರ್ ಅಶೋಕ್

ಬೆಂಗಳೂರು; ಸಮಗ್ರ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯೂಎಂಎಲ್‌ ಯೋಜಿಸಿದ್ದ ಟೆಂಡರ್ ಪ್ಯಾಕೇಜ್‌ಗಳಲ್ಲಿ...

ಒಂದು ರಾಷ್ಟ್ರ ಒಂದು ಚುನಾವಣೆ; ಸಂಸತ್‌ ಜಂಟಿ ಸಮಿತಿಗೆ 5 ತಿಂಗಳಾದರೂ ಮಾಹಿತಿ ನೀಡದ ರಾಜ್ಯ

ಬೆಂಗಳೂರು; ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂಧಿಸಿದಂತೆ ಸಂವಿಧಾನದ 129ನೇ ತಿದ್ದುಪಡಿ...

ಐಪಿಜಿಆರ್‍ಎಸ್, ಸಕಾಲ ಮತ್ತು ಸಿಪಿಗ್ರಾಮ್ಸ್‌, ಸಿಎಂ ಜನಸ್ಪಂದನ, ಸಿ ಎಸ್ ಕಚೇರಿಯಲ್ಲಿ ಇತ್ಯರ್ಥವಾಗದ 37,782 ಅರ್ಜಿಗಳು; ನಿಷ್ಕ್ರೀಯವಾಯಿತೇ ಆಡಳಿತ?

ಬೆಂಗಳೂರು;  ಸಾರ್ವಜನಿಕರು ವಿವಿಧ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಐಪಿಜಿಆರ್‍ಎಸ್, ಸಕಾಲ ಮತ್ತು ಸಿಪಿಗ್ರಾಮ್ಸ್‌,...

ಅತಿಥಿ ಶಿಕ್ಷಕರ ನೇಮಕ ಪದ್ಧತಿಗೆ ರಾಜ್ಯ ಶಿಕ್ಷಣ ನೀತಿ ಆಯೋಗ ವಿರೋಧ; ಪದ್ದತಿ ಸಂಪೂರ್ಣವಾಗಿ ತೆಗೆದು ಹಾಕದೇ ವರದಿಯನ್ನೇ ಮೂಲೆಗುಂಪು ಮಾಡಿತೇ ಸರ್ಕಾರ?

ಬೆಂಗಳೂರು; 'ರಾಜ್ಯದಲ್ಲಿ   ಬೇರೂರಿದ ಗುತ್ತಿಗೆ ಶಿಕ್ಷಕ ನೇಮಕ ಪದ್ಧತಿಯಿಂದಾಗಿ  ವೃತ್ತಿಪರತೆಯ ಕೊರತೆ...

ಕಸ ವಿಲೇವಾರಿ ಟೆಂಡರ್ ಪ್ರಕ್ರಿಯೆಗಳಲ್ಲಿ ಬಹುಕೋಟಿ ಮೊತ್ತದ ಹಗರಣ; ಯತ್ನಾಳ್, ಶೋಭಾ ನಂತರ ಧೀರಜ್ ಮುನಿರಾಜು ದೂರು, ತುಟಿಬಿಚ್ಚದ ಪ್ರತಿಪಕ್ಷ ನಾಯಕ ಅಶೋಕ್

ಬೆಂಗಳೂರು; ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆಂಗಳೂರಿನ ಸಮಗ್ರ ಘನತ್ಯಾಜ್ಯ ನಿರ್ವಹಣೆಗೆ...

Related Articles

Popular Categories

error: Content is protected !!