Monday | March 23, 2026 |

ರಾಡಾರ್ ಸ್ಟ್ರೀಮ್‌ ಗೇಜ್‌, ವೈರ್‍‌ಲೆಸ್‌ ಸಾಧನ ಅಳವಡಿಕೆ; ನಡೆಯದ ತಾಂತ್ರಿಕ ಪರಿಶೀಲನೆ, 3.54 ಕೋಟಿ ವ್ಯರ್ಥ

Support THE-FILE

spot_img

ಬೆಂಗಳೂರು;  ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹದ ಮುನ್ನೆಚ್ಚರಿಕೆಗಾಗಿ 2.45 ಕೋಟಿ ರು ವೆಚ್ಚದಲ್ಲಿ ಖರೀದಿಸಿದ್ದ ರಾಡಾರ್ ಸ್ಟ್ರೀಮ್‌ ಗೇಜ್‌ ಮತ್ತು 1.09 ಕೊಟಿ ರು ವೆಚ್ಚದಲ್ಲಿ ಕೇಂದ್ರೀಕೃತ  ವೈರ್‍‌ಲೆಸ್‌ ಸಾಧನ ಸೇರಿದಂತೆ   ಮತ್ತಿತರ ಉಪಕರಣಗಳನ್ನು ತಾಂತ್ರಿಕ ಸಿಬ್ಬಂದಿಯಿಂದ ಪರಿಶೀಲಿಸಿಲ್ಲ.

ಅಲ್ಲದೇ ಈ ಉಪಕರಣಗಳನ್ನು ಪ್ರಮಾಣಿಕರಿಸಿಯೂ ಇಲ್ಲ. ತಳಮಟ್ಟದಲ್ಲಿ ಉಪಕರಣಗಳನ್ನು ಸ್ಥಾಪಿಸುವ ಉದ್ದೇಶವನ್ನೂ ಸಾಧಿಸಲಾಗಿಲ್ಲ  ಎಂಬ ಸಂಗತಿಯನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಪ್ರಧಾನ ಮಹಾಲೇಖಪಾಲರು ಪತ್ತೆ ಹಚ್ಚಿದ್ದಾರೆ.

2025ರ ಡಿಸೆಂಬರ್‍‌ನಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ವಿಧಾನ ಮಂಡಲ ಅಧಿವೇಶನದಲ್ಲಿ ಕರ್ನಾಟಕದಲ್ಲಿ ವಿಪತ್ತು  ನಿರ್ವಹಣೆ ಕಾರ್ಯನಿರ್ವಹಣೆ ಕುರಿತು   ಮಂಡನೆಯಾಗಿರುವ ಸಿಎಜಿ ವರದಿಯು ಪ್ರವಾಹ ಪರಿಸ್ಥಿತಿಯನ್ನು ಎದುರಿಸುವಲ್ಲಿ ಕರ್ನಾಟಕ ಸರ್ಕಾರವು ಹೇಗೆ ವಿಫಲವಾಗಿತ್ತು ಎಂದು ಅನಾವರಣಗೊಳಿಸಿದೆ. ಆದರೆ ಈ ವರದಿ ಕುರಿತು ಸಚಿವ ಕೃಷ್ಣಬೈರೇಗೌಡ ಅವರು ಯಾವುದೇ ಕ್ರಮವಹಿಸಿಲ್ಲ ಎಂದು ತಿಳಿದು ಬಂದಿದೆ.

ಇದರ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ರಾಜ್ಯದ ಹೆಚ್ಚಿನ ಭಾಗಗಳು ಪ್ರವಾಹದಿಂದ ಪುನರಾವರ್ತನೆಗೊಳ್ಳುತ್ತಲೇ ಇವೆ. ಹೀಗಾಗಿ ಪ್ರವಾಹ ಎದುರಿಸಲು ಸನ್ನದ್ಧತೆ ಮತ್ತು ಸಾಮರ್ಥ್ಯ ವರ್ಧನೆ ಘಟಕದ ಅಡಿಯಲ್ಲಿ ಕೃಷ್ಣಾ ನದಿ ಜಲಾನಯದ ಪ್ರದೇಶದಲ್ಲಿ ಪ್ರವಾಹ ಮುನ್ನೆಚ್ಚರಿಕೆಗಾಗಿ 2021ರಲ್ಲಿ  ನೈಜಕಾಲಿಕ ನಿರ್ಧಾರ ಬೆಂಬಲ ವ್ಯವಸ್ಥೆ ಜಾರಿಗೊಳಿಸಿತ್ತು.

 

 

ಈ ಯೋಜನೆ ಮೂಲಕ ರಾಡಾರ್‍‌ ಸ್ಟ್ರೀಮ್‌ ಗೇಜ್‌ಗಳು ಮತ್ತು ಜಲಾಶಯ ಮಟ್ಟದ ಸಂವೇದಕಗಳ ಸ್ಥಾಪನೆ, ದತ್ತಾಂಶಗಳ ಸಂಗ್ರಹಣೆ, ವಿಶ್ಲೇಷಣೆ, ಮುನ್ನೆಚ್ಚರಿಕೆ ಮತ್ತು ಸಲಹೆಗಳನ್ನು ಪ್ರಸಾರ ಮಾಡುವುದು, ಭೌಗೋಳಿಕ ಮಾಹಿತಿ ವ್ಯವಸ್ಥೆಯು ಪರಿಸರಕ್ಕೆ ಹೊಂದಿಕೆಯಾಗುವ ಪ್ರವಾಹ ಮುನ್ಸೂಚನೆ ಮತ್ತು ಪ್ರವಾಹ ನಕ್ಷೆಗಾಗಿ ಅತ್ಯಾಧುನಿಕ ಮಾಡಲಿಂಗ್‌ ಸಾಧನಗಳನ್ನು ಅಭಿವೃದ್ದಿಪಡುಸುವುದು ಈ ಯೋಜನೆಯ ಉದ್ದೇಶವಾಗಿತ್ತು.

ಈ ಯೋಜನೆಯು ಹೇಗೆ ಸಾಗಿದೆ, ಈ ಯೋಜನೆಯು ಪರಿಣಾಮಕಾರಿಯಾಗಿತ್ತೇ ಎಂಬ ಕುರಿತು ಭಾರತದ ಲೆಕ್ಕ ನಿಯಂತ್ರಕರು ಮತ್ತು ಪ್ರಧಾನ ಮಹಾಲೇಖಪಾಲರು ಸ್ಥಳ ತಪಾಸಣೆ ಮೂಲಕ ಅವಲೋಕಿಸಿದ್ದಾರೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ಕೇಂದ್ರವು 2021ರ ಜುಲೈನಲ್ಲಿ 2.57 ಕೋಟಿ ರು. ವೆಚ್ಚದಲ್ಲಿ ರಾಡಾರ್‍‌ ಸ್ಟ್ರೀಮ್‌ ಗೇಜ್‌ಗಳ ಸ್ಥಾಪಿಸಿತ್ತು. ಇದನ್ನು ಮೊಸೆರ್ಪ್‌ ಟೆಕ್ನಾಲಜೀಸ್‌ ಇಂಡಿಯಾ ಪ್ರೈವೈಟ್‌ ಲಿಮಿಟೆಡ್‌ ಮೂಲಕ ಅನುಷ್ಠಾನಗೊಳಿಸಿತ್ತು.

ನಾಲ್ಕು ವರ್ಷಗಳ ಅವಧಿಗೆ  ಸಮಗ್ರ ವಾರ್ಷಿಕ ನಿರ್ವಹಣಾ ಒಪ್ಪಂದ ಸೇರಿದಂತೆ 120 ದಿನಗಳ ಅವಧಿಯಲ್ಲಿ ವಿವಿಧ ಸ್ಥಳಗಳಲ್ಲಿ ಜಲಾಶಯಗಳಲ್ಲಿ  ಆರು ನೀರಿನ ಮಟ್ಟದ ಸಂವೇದಕಗಳು, 9  ಸ್ಟ್ರೀಮ್ ಗೇಜ್‌ ಸಂವೇದಕಗಳನ್ನು ಸ್ಥಾಪಿಸಿತ್ತು. ಇದಕ್ಕಾಗಿ 2023ರ ಡಿಸೆಂಬರ್‍‌ ಹೊತ್ತಿಗೆ ಮೊಸೆರ್ಪ್‌ ಟೆಕ್ನಾಲಜೀಸ್‌ ಇಂಡಿಯಾ ಪ್ರೈವೈಟ್‌ ಲಿಮಿಟೆಡ್‌ಗೆ  2.45 ಕೋಟಿ ರು ಗಳನ್ನು ಪಾವತಿಸಿತ್ತು.

ಈ ಕುರಿತು ಕಂದಾಯ ಇಲಾಖೆಯು ಒದಗಿಸಿದ್ದ ದಾಖಲೆಗಳನ್ನು ಸಿಎಜಿಯು ಪರಿಶೀಲನೆ ನಡೆಸಿತ್ತು. ಸ್ಥಾಪಿತ ಉಪಕರಣಗಳ ತಾಂತ್ರಿಕ ವಿಶೇಷಣಗಳನ್ನು ಕಾರ್ಯಾರಂಭ ಮಾಡುವ ಮೊದಲು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ಕೇಂದ್ರವು  ಯಾವುದೇ  ತಾಂತ್ರಿಕ ಸಿಬ್ಬಂದಿಯಿಂದ ಪರಿಶೀಲಿಸಿಲ್ಲ. ಅಲ್ಲದೇ ಉಪಕರಣಗಳನ್ನು ಪ್ರಮಾಣೀಕರಿಸಿರಲಿಲ್ಲ  ಎಂದು ಸಿಎಜಿಯ ಪರಿಶೀಲನೆಯಿಂದ ಗೊತ್ತಾಗಿದೆ.

 

 

ಕಾರ್ಯಕಾರಿ ಆದೇಶದ ಪ್ರಕಾರ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ಕೇಂದ್ರವು ಈ ಉಪಕರಣಗಳಿಂದ ದತ್ತಾಂಶವನ್ನು ಸ್ವೀಕರಿಸಲು ಸರ್ವರ್‍‌, ಸ್ಥಿರ ಐಪಿಯನ್ನು ಸರ್ವರ್‍‌ ಗೆ ಒದಗಿಸಬೇಕಿತ್ತು. ಆದರೆ  ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ಕೇಂದ್ರದಲ್ಲಿ ಸರ್ವರ್‍‌ ಅಥವಾ ಸ್ಪ್ಯಾಟಿಕ್ ಐಪಿಯನ್ನು ಒದಗಿಸುವ ವಿವರಗಳು ದಾಖಲೆಗಳೇ ಇರಲಿಲ್ಲ. ಇದಲ್ಲದೇ ಈ ಯಾಉದೇ ಸಂವೇದಕಗಳು ಸೆರೆ ಹಿಡಿದ ನೀರಿನ ಮಟ್ಟದ, ವೇಗದ ದಿನಾಂಕವಾರು ದತ್ತಾಂಶವನ್ನೂ ಸಹ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ಕೇಂದ್ರವು ಹೊಂದಿರಲಿಲ್ಲ ಎಂದು ಸಿಎಜಿಯು ಪತ್ತೆ ಹಚ್ಚಿರುವುದು ವರದಿಯಿಂದ ತಿಳಿದು ಬಂದಿದೆ.

‘ಹೀಗಾಗಿ ನೀರಿನ ಮಟ್ಟವನ್ನು ಮೇಲ್ವಿಚಾರಣೆ ಮಾಡಲು ಅಡ್ಡಿಯಾಗಿತ್ತು ಮತ್ತು ಸ್ಥಾಪಿಸಲಾದ ವ್ಯವಸ್ಥೆಯು ತನ್ನ ಉದ್ದೇಶವನ್ನೇ ಸಾಧಿಸಿರಲಿಲ್ಲ,’ ಎಂದು ಸಿಎಜಿ ವರದಿಯಲ್ಲಿ ಅಭಿಪ್ರಾಯಿಸಿರುವುದು ಗೊತ್ತಾಗಿದೆ.

ಪ್ರತಿ ರಾಡಾರ್‍‌ ಸ್ಟ್ರೀಮ್ ಗೇಜ್‌ನ್ನು ಮಾರಾಟಗಾರರು ಪ್ರತಿ 6 ತಿಂಗಳಿಗೊಮ್ಮೆ  ಮಾಪನಾಂಕ ನಿರ್ಣಯ ಮಾಡಬೇಕಿತ್ತು. ಮಾಪನಾಂಕ ನಿರ್ಣಯ ಪ್ರಮಾಣಪತ್ರವನ್ನು  ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ಕೇಂದ್ರಕೆಕ ಸಲ್ಲಿಸಬೇಕಾಗಿತ್ತು. ಆದರೂ ಮಾಪನಾಂಕ ನಿರ್ಣಯದ ವಿವರಗಳು ಅಥವಾ ಅದರ ಮೇಲಿನ ಪ್ರಮಾಣಪತ್ರಗಳಿಗೆ ಸಂಬಂಧಿಸಿದಂತೆ ಯಾವುದೇ  ದಾಖಲೆಗಳು ಇರಲಿಲ್ಲ ಎಂದು ವರದಿಯಿಂದ ತಿಳಿದು ಬಂದಿದೆ.

ಹಾಗೆಯೇ ಸೇವಾ ಮಟ್ಟದ ಷರತ್ತುಗಳ ಪ್ರಕಾರ ನಾಲ್ಕು ವರ್ಷಗಳ ವಾರಂಟಿ, ಸಿಎಎಂಸಿ ಅವಧಿಯಲ್ಲಿ ಉಪಕರಣಗಳನ್ನು ಉತ್ತಮ ಸ್ಥಿತಿಯಲ್ಲಿಡಬೇಕು. ಇದಕ್ಕೆ ಮಾರಾಟಗಾರನೂ ಸಹ ಜವಾಬ್ದಾರನಾಗಿರುತ್ತಾನೆ. ಈ ಕುರಿತು ಲೆಕ್ಕ ಪರಿಶೋಧನೆಯು ಸಂವೇದಕಗಳ ಆನ್‌ಲೈನ್‌ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದೆ. ಇದರ ಪ್ರಕಾರ ಈ ಏಜೆನ್ಸಿಯು  ಸ್ಥಾಪಿಸಿದ್ದ 15 ಸಂವೇದಕಗಳಲ್ಲಿ 6 ಸಂವೇದಕಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಹೀಗಾಗಿ ದತ್ತಾಂಶಗಳನ್ನು ಈ ಉಪಕರಣಗಳಿಂದ ಸೆರೆಹಿಡಿಯಲಾಗಿರಲಿಲ್ಲ ಎಂದು 2023ರ ಡಿಸೆಂಬರ್‍‌ನಲ್ಲಿ ಲೆಕ್ಕ ಪರಿಶೋಧನೆಯು ಗಮನಿಸಿರುವುದು ವರದಿಯಿಂದ ಗೊತ್ತಾಗಿದೆ.

‘ಈ ಯೋಜನೆಯಡಿಯಲ್ಲಿ  ಸ್ಥಾಪಿಸಲಾದ 24 ಉಪಕರಣಗಳಲ್ಲಿ 8 ನಿಷ್ಕ್ರೀಯವಾಗಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ಕೇಂದ್ರದ ನಿರ್ದೇಶಕರು ಒಪ್ಪಿಕೊಂಡರು,’ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖವಾಗಿದೆ.

ಹೀಗಾಗಿ ಮೂಲಭೂತ ದತ್ತಾಂಶಗಳ ಅನುಪಸ್ಥಿತಿಯಿತ್ತು. ಪ್ರವಾಹ ಮುನ್ಸೂಚನೆಗಾಗಿ ಉದ್ದೇಶಿತ ಜಲ ವಿಜ್ಞಾನ ಮಾದರಿಗಳನ್ನು ರಚಿಸಲು ಸಾಧಿಸಲು ರಾಜ್ಯ ಸರ್ಕಾರದ ಕೈಯಲ್ಲಿ ಆಗಲಿಲ್ಲ. ಸೆನ್ಸಾರ್‍‌ಗಳು ಮತ್ತು ಸ್ಟ್ರೀಮ್‌ ಗೇಜ್‌ ಮಾನಿಟರ್‍‌ಗಳ ಮೆಲೆ 2.45 ಕೋಟಿ ಹೂಡಿಕೆಯು ಹೆಚ್ಚಾಗಿ ನಿಷ್ಪ್ರಯೋಜಕವಾದಂತಾಗಿದೆ ಎಂದು ಸಿಎಜಿಯು ತನ್ನ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಅಲ್ಲದೇ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ಕೇಂದ್ರವು ಈ ಸ್ಥಾಪಿತ ಉಪಕರಣಗಳ ಮೂಲ ಖರೀದಿ, ಸರಕುಪಟ್ಟಿ, ವಾರಂಟಿ ಕಾರ್ಡ್‌ ಮತ್ತು ಬಳಕೆದಾರರ ಮಾರ್ಗದರ್ಶಿ, ಕೈಪಿಡಿಯಂತಹ ದಾಖಲೆಗಳನ್ನು ಹೊಂದಿರಲಿಲ್ಲ. ಹೀಗಾಗಿ ನಿರ್ವಹಣಾ ಅವಧಿಯಲ್ಲಿ ಮಾಪಕಗಳು, ಸಂವೇದಕಗಳಿಗೆ ಸಂಬಂಧಿಸಿದಂತೆ ಮೂಲ ದಾಖಲೆಗಳೇ ಇರಲಿಲ್ಲ. ಹೀಗಾಗಿ ಈ ಯೋಜನೆಯಡಿಯಲ್ಲಿ ಸ್ಥಾಪಿಸಲಾದ ಉಪಕರಣಗಳ ನೈಜತೆಯ ಬಗ್ಗೆಯೇ ಅನುಮಾನಗಳನ್ನು ಹುಟ್ಟು ಹಾಕುತ್ತದೆ ಎಂದು ಸಿಎಜಿಯು ತನ್ನ ವರದಿಯಲ್ಲಿ ದಾಖಲಿಸಿದೆ.

‘ಕಾರ್ಯನಿರ್ವಹಿಸದ ಉಪಕರಣಗಳಿಗೆ ಸಂಬಂಧಿಸಿದಂತೆ ಟೆಂಡರ್ ಷರತ್ತಿನ ಪ್ರಕಾರ ದಂಡ ವಿಧಿಸಲಾಗುವುದು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ಕೇಂದ್ರ ನಿರ್ದೇಶಕರು 2023ರ ಡಿಸೆಂಬರ್‍‌ನಲ್ಲಿ ತಿಳಿಸಿದ್ದಾರೆ. ಹೀಗಾಗಿ ಪ್ರವಾಹ ಮುನ್ಸೂಚನೆಗಾಗಿ ಯೋಜಿತ ಮಾದರಿಯನ್ನು ರಚಿಸಲು ನೀರಿನ ಮಟ್ಟದ ದತ್ತಾಂಶ ಲಭ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ,’ ಎಂದು ವರದಿಯಲ್ಲಿ ವಿಶ್ಲೇಷಿಸಿರುವುದು ಗೊತ್ತಾಗಿದೆ.

1.09 ಕೋಟಿ ನಿಷ್ಪಲ ವೆಚ್ಚ

2021ರಲ್ಲಿ ಪ್ರಾಯೋಗಿಕವಾಗಿ ದುರ್ಬಲ ಗ್ರಾಮ ಪಂಚಾಯ್ತಿಗಳಲ್ಲಿ  ಕೇಂದ್ರೀಕೃತ ವೈರ್‍‌ ಲೆಸ್‌ ಸಾರ್ವಜನಿಕ ಪ್ರಸಾರ ಯೋಜನೆಯನ್ನು ಆರಂಭಿಸಿತ್ತು. ಆದರೆ ಈ ಯೋಜನೆಯಡಿಯಲ್ಲಿ ಅಳವಡಿಸಿದ್ದ ಸಾಧನಗಳು ಕಡಿಮೆ ಕಾರ್ಯಕ್ಷಮತೆ ಹೊಂದಿದ್ದವು. ಹೀಗಾಗಿ 1.09 ಕೋಟಿ ನಿಷ್ಪಲವಾಗಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.

ಬೆಳಗಾವಿ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿನ 104 ಗ್ರಾಮ ಪಂಚಾಯ್ತಿಗಳಿವೆ. ಇದರಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ಕೇಂದ್ರ ನಿಯಂತ್ರಣ ಕೊಠಡಿಯಿಂದ ಪ್ರವಾಹ ಎಚ್ಚರಿಕೆಯ ಮುನ್ನೆಚ್ಚರಿಕೆ ಸಂದೇಶಗಳನ್ನು ಕೇಂದ್ರೀಯವಾಗಿ ಪ್ರಸಾರ ಮಾಡಲು ಯೋಜಿಸಿತ್ತು. ಈ ಸಂಬಂಧ ಅಗತ್ಯ ಉಪಕರಣಗಳ ಸ್ಥಾಪನೆ ಮತ್ತು ಕಾರ್ಯಾರಂಭ ಮಾಡಲು ಪ್ರೊಟ್ರಾನಿಕ್ಸ್‌ ಟೆಕ್ನಾಲಜೀಸ್‌ ಮತ್ತು ಸುಮುಖ ಟೆಕ್ನಾಲಜೀಸ್‌ ಅಂಡ್‌ ಸಾಫ್ಟ್‌ವೇರ್‍‌ ಪ್ರೈವೈಟ್‌ ಲಿಮಿಟೆಡ್‌ಗೆ ಗುತ್ತಿಗೆ ನೀಡಿತ್ತು.

ಮೂರು ತಿಂಗಳ ಒಳಗೇ ಈ ಯೋಜನೆಯನ್ನು ಪೂರ್ಣಗೊಳಿಸಲು ಷರತ್ತು ವಿಧಿಸಿತ್ತು. 2023ರ ಡಿಸೆಂಬರ್‍‌ ಹೊತ್ತಿಗೆ ಈ ಎರಡೂ ಕಂಪನಿಗಳಿಗೆ 1.09 ಕೋಟಿ ರು ಪಾವತಿಸಿತ್ತು. ಆದರೆ ಈ ಎರಡೂ ಕಂಪನಿಗಳು ಅಳವಡಿಸಿದ್ದ ಉಪಕರಣಗಳು ಕಡಿಮೆ ಕಾರ್ಯಕ್ಷಮತೆ ಹೊಂದಿದ್ದವು. ಅನೇಕ ಸಂದರ್ಭಗಳಲ್ಲಿ ಉದ್ದೇಶಿತ ಎಲ್ಲಾ ಜೆಪಿಗಳನ್ನು ತಲುಪಲಿಲ್ಲ. ಸಿಸ್ಟಂ ಮತ್ತು ಅಂತರ್ಜಾಲ ಲಭ್ಯವಿಲ್ಲ ಎಂದು ಕಾರಣ ನೀಡಿತ್ತು. ಹೀಗಾಗಿ ಪ್ರವಾಹ ಎಚ್ಚರಿಕೆ ಸಂದೇಶ-ಲಾಗ್‌ ಮತ್ತು ಯಶಸ್ಸು, ಪ್ರಕಟಿತ ದತ್ತಾಂಶದ ಟೆಸ್ಟ್‌ ಚೆಕ್‌ ಯೋಜನೆಯು ಕಡಿಮೆ ಕಾರ್ಯಕ್ಷಮತೆ ಹೊಂದಿತ್ತು ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

‘ಆದ್ದರಿಂದ 1.09 ಕೋಟಿಗಳ ವೆಚ್ಚದಲ್ಲಿ ವೈರ್‍‌ಲೆಸ್‌ ಪ್ರಸಾರ ವ್ಯವಸ್ಥೆ ಮೂಲಕ ಅಪಾಯದಲ್ಲಿರುವ ಜನರನ್ನು ಪ್ರವಾಹದ ಮುನ್ನೆಚ್ಚರಿಕೆಯಿಂದ ಎಚ್ಚರಿಸಲು ತಳಮಟ್ಟದಲ್ಲಿ ಉಪಕರಣಗಳನ್ನು ಸ್ಥಾಪಿಸುವ ಉದ್ದೇಶವನ್ನು ಸಾಧಿಸಲಾಗಿಲ್ಲ. ಹೀಗಾಗಿ ಈ ಯೋಜನೆಯ ಕಾರ್ಯನಿರ್ವಹಣೆ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ,’ ಎಂದು ವರದಿಯಲ್ಲಿ ವಿಶ್ಲೇಷಿಸಿದೆ.

Hot this week

ಭೂ ಸ್ವಾಧೀನ, ಪರಿಹಾರದಲ್ಲಿ ಅಕ್ರಮ; ಬಿಸ್ವಾಸ್ ವರದಿ ಮೂಲೆಗುಂಪು, 29.96 ಕೋಟಿ ನಷ್ಟ ಪ್ರಕರಣಕ್ಕೆ ಕ್ಲೀನ್ ಚಿಟ್

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸಾಬೀತಾಗಿದ್ದ  ಬೆಳಗಾವಿ ಜಿಲ್ಲೆ ಹುಕ್ಕೇರಿ...

ಬೆಳೆ ಹವಾಮಾನ ನಿಗಾ ಸಭೆ ನಡೆಸಿಲ್ಲ, ಮಾಹಿತಿ ವ್ಯವಸ್ಥೆಯೂ ಇಲ್ಲ; ಸಿಎಜಿಯನ್ನೂ ತಪ್ಪುದಾರಿಗೆಳೆದ ಸರ್ಕಾರ

ಬೆಂಗಳೂರು;  ರಾಜ್ಯದಲ್ಲಿ ಬರ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಬೆಳೆ ಹವಾಮಾನ ನಿಗಾ...

ಎಂ ಆರ್ ಸೀತಾರಾಂ ಕುಟುಂಬ ಸದಸ್ಯರ ವಿರುದ್ಧ ಭೂಕಬಳಿಕೆ ಆರೋಪ; ದೂರು ಮರೆಮಾಚಿತ್ತೇ ಕಂದಾಯ ಇಲಾಖೆ?

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಅಕ್ಲೇನಹಳ್ಳಿ...

ನರೇಗಾ ಅಕ್ರಮ; 2 ವರ್ಷದಲ್ಲಿ 105.1 ಕೋಟಿ ದುರುಪಯೋಗ, 12.34 ಕೋಟಿಯಷ್ಟೇ ವಸೂಲು

  ಬೆಂಗಳೂರು; ಕಳೆದ ಮೂರು ವರ್ಷಗಳಲ್ಲಿ  ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 64,806 ಪ್ರಕರಣಗಳಲ್ಲಿ...

ಚೆಮನೂರು ಬ್ಲಾಕ್‌ನಲ್ಲಿ ಗಣಿಗಾರಿಕೆ; ಅದಾನಿ ಸಮೂಹದ ಎಸಿಸಿಗೆ ಲೆಟರ್ ಆಫ್ ಇಂಟೆಂಟ್‌ ಕೊಡಲು ಗಣಿ ಇಲಾಖೆ ಉತ್ಸುಕ!

ಬೆಂಗಳೂರು; ಭವಿಷ್ಯದ ಸರ್ಕಾರಿ ಟೆಂಡರ್, ಹರಾಜು ಮತ್ತು ಗಣಿಗಾರಿಕೆ ಸಂಬಂಧಿತ ಪ್ರಕ್ರಿಯೆಗಳಲ್ಲಿ...

Topics

ಭೂ ಸ್ವಾಧೀನ, ಪರಿಹಾರದಲ್ಲಿ ಅಕ್ರಮ; ಬಿಸ್ವಾಸ್ ವರದಿ ಮೂಲೆಗುಂಪು, 29.96 ಕೋಟಿ ನಷ್ಟ ಪ್ರಕರಣಕ್ಕೆ ಕ್ಲೀನ್ ಚಿಟ್

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಸಾಬೀತಾಗಿದ್ದ  ಬೆಳಗಾವಿ ಜಿಲ್ಲೆ ಹುಕ್ಕೇರಿ...

ಬೆಳೆ ಹವಾಮಾನ ನಿಗಾ ಸಭೆ ನಡೆಸಿಲ್ಲ, ಮಾಹಿತಿ ವ್ಯವಸ್ಥೆಯೂ ಇಲ್ಲ; ಸಿಎಜಿಯನ್ನೂ ತಪ್ಪುದಾರಿಗೆಳೆದ ಸರ್ಕಾರ

ಬೆಂಗಳೂರು;  ರಾಜ್ಯದಲ್ಲಿ ಬರ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಬೆಳೆ ಹವಾಮಾನ ನಿಗಾ...

ಎಂ ಆರ್ ಸೀತಾರಾಂ ಕುಟುಂಬ ಸದಸ್ಯರ ವಿರುದ್ಧ ಭೂಕಬಳಿಕೆ ಆರೋಪ; ದೂರು ಮರೆಮಾಚಿತ್ತೇ ಕಂದಾಯ ಇಲಾಖೆ?

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಅಕ್ಲೇನಹಳ್ಳಿ...

ನರೇಗಾ ಅಕ್ರಮ; 2 ವರ್ಷದಲ್ಲಿ 105.1 ಕೋಟಿ ದುರುಪಯೋಗ, 12.34 ಕೋಟಿಯಷ್ಟೇ ವಸೂಲು

  ಬೆಂಗಳೂರು; ಕಳೆದ ಮೂರು ವರ್ಷಗಳಲ್ಲಿ  ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 64,806 ಪ್ರಕರಣಗಳಲ್ಲಿ...

ಚೆಮನೂರು ಬ್ಲಾಕ್‌ನಲ್ಲಿ ಗಣಿಗಾರಿಕೆ; ಅದಾನಿ ಸಮೂಹದ ಎಸಿಸಿಗೆ ಲೆಟರ್ ಆಫ್ ಇಂಟೆಂಟ್‌ ಕೊಡಲು ಗಣಿ ಇಲಾಖೆ ಉತ್ಸುಕ!

ಬೆಂಗಳೂರು; ಭವಿಷ್ಯದ ಸರ್ಕಾರಿ ಟೆಂಡರ್, ಹರಾಜು ಮತ್ತು ಗಣಿಗಾರಿಕೆ ಸಂಬಂಧಿತ ಪ್ರಕ್ರಿಯೆಗಳಲ್ಲಿ...

ರೋಹಿತ್ ವೇಮುಲ ಕಾಯ್ದೆ; ವ್ಯಾಖ್ಯಾನಗಳು ಅಸ್ಪಷ್ಟ, ಕಾನೂನು ಬಲವಿಲ್ಲ, ವಿಧೇಯಕವೇ ಅಪೂರ್ಣ

ಬೆಂಗಳೂರು; ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಯಾರೊಬ್ಬರೂ ಜಾತಿ ಆಧಾರದಲ್ಲಿ ತಾರತಮ್ಯ ಎದುರಿಸಬಾರದು...

ಗ್ರಾಮಠಾಣ ಜಮೀನು ಅದಲು-ಬದಲು; ಆರ್ಥಿಕ ಇಲಾಖೆ ಆಕ್ಷೇಪ ಬದಿಗೊತ್ತಿ ಎಂ ಆರ್ ಸೀತಾರಾಂ ಕುಟುಂಬದ ಬೆನ್ನಿಗೆ ನಿಂತ ಸರ್ಕಾರ

ಬೆಂಗಳೂರು; ಸರ್ಕಾರಿ ಭೂಮಿಗೆ ರಸ್ತೆಯ ಸಂಪರ್ಕ ಹೊಂದಿಲ್ಲದಿರುವ, ರಸ್ತೆ ಸಂಪರ್ಕ ಕಲ್ಪಿಸದೇ...

ಅದಾನಿ ಎಸಿಸಿ ಲಿಮಿಟೆಡ್‌ನಿಂದ ಅಕ್ರಮ ಗಣಿಗಾರಿಕೆ; ನಿರ್ದೇಶಕರು, ಅಧಿಕಾರಿಗಳ ವಿರುದ್ಧ ಲೋಕಾ ತನಿಖೆಗೆ ಶಿಫಾರಸ್ಸು, ಕಡತಕ್ಕೆ ಧೂಳು

ಬೆಂಗಳೂರು;  ಕಲ್ಬುರ್ಗಿಯ ವಾಡಿಯಲ್ಲಿ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್ ಪ್ರೈವೈಟ್ ಲಿಮಿಟೆಡ್...

Related Articles

Popular Categories

error: Content is protected !!