Saturday | September 5, 2026 |

ಗೃಹ ಲಕ್ಷ್ಮಿ; ಬಿಡುಗಡೆಗೆ 7,517.79 ಕೋಟಿ, ಖರ್ಚು ಮಾಡಲು 213.28 ಕೋಟಿ ಬಾಕಿ ಉಳಿಸಿದ ಸರ್ಕಾರ

ಬೆಂಗಳೂರು;  ಮನೆ ಯಜಮಾನಿಗೆ ಪ್ರತಿ ತಿಂಗಳು 2,000 ರು ನಗದು ನೀಡುವ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆಗೆ 2024-25ನೇ ಸಾಲಿನಲ್ಲಿ ಒದಗಿಸಿದ್ದ 26,084.40 ಕೋಟಿ ರು. ನಲ್ಲಿ ಜನವರಿ ಅಂತ್ಯಕ್ಕೆ ಇನ್ನೂ 7,517.79 ಕೋಟಿ ರು ಬಾಕಿ ಇರಿಸಿಕೊಂಡಿದೆ.

 

2024-25ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಫೆ.15ರಂದು ನಡೆದಿದ್ದ ಕೆಡಿಪಿ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು ಗೃಹ ಲಕ್ಷ್ಮಿ ಸೇರಿದಂತೆ ಇನ್ನಿತರೆ ಯೋಜನೆಗಳಿಗೆ ಸಂಬಂಧಿಸಿದ ಅನುದಾನ, ಬಿಡುಗಡೆ ಮತ್ತು ಆಗಿರುವ ವೆಚ್ಚದ ಕುರಿತು ಮಾಹಿತಿ ಒದಗಿಸಿದ್ದಾರೆ.

 

ಈ ಸಭೆಗೆ ಮಂಡಿಸಿರುವ ಅಂಕಿ ಅಂಶಗಳು ‘ದಿ ಫೈಲ್’ಗೆ ಲಭ್ಯವಾಗಿವೆ.

 

ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ನೋಂದಣಿಯಾಗಿರುವ ಫಲಾನುಭವಿಗಳಿಗೆ ಮೂರ್ನಾಲ್ಕು ತಿಂಗಳುಗಳಿಂದಲೂ 2,000 ರು ಪಾವತಿಸಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವ ನಡುವೆಯೇ ಈ ಯೋಜನೆಯಡಿಯಲ್ಲಿ ಹಂಚಿಕೆಯಾಗಿದ್ದ ಅನುದಾನದಲ್ಲಿಯೇ ಜನವರಿ ಅಂತ್ಯಕ್ಕೆ ಇನ್ನೂ 7,517.79 ಕೋಟಿ ರು ಬಿಡುಗಡೆಗೆ ಬಾಕಿ ಇರಿಸಿಕೊಂಡಿರುವುದು ಮುನ್ನೆಲೆಗೆ ಬಂದಿದೆ.

 

2024-25ನೇ ಸಾಲಿಗೆ ಈ ಯೋಜನೆಯಡಿಯಲ್ಲಿ 26,084.40 ಕೋಟಿ ರು ಅನುದಾನ ಒದಗಿಸಿತ್ತು. ಈ ಪೈಕಿ ಜನವರಿ ಅಂತ್ಯಕ್ಕೆ 18,566.31 ಕೋಟಿ ರು ಬಿಡುಗಡೆ ಮಾಡಿದೆ. ಬಿಡುಗಡೆಯಾಗಿದ್ದ ಈ ಹಣದ ಪೈಕಿ 18,353.03 ಕೋಟಿ ರು ಖರ್ಚಾಗಿದೆ. ಬಿಡುಗಡೆಯಾಗಿದ್ದ ಅನುದಾನದಲ್ಲಿಯೇ ಜನವರಿ ಅಂತ್ಯಕ್ಕೆ 213.28 ಕೋಟಿ ರು ಬಾಕಿ ಇರುವುದು ಅಂಕಿ ಅಂಶದಿಂದ ಗೊತ್ತಾಗಿದೆ.

 

 

ಭಾರೀ ಪ್ರಮಾಣದ ಪುನರಾವರ್ತಿತ ಹೊಣೆಗಾರಿಕೆ ನಿರ್ಮಾಣಕ್ಕೆ ಕಾರಣವಾಗಲಿದೆ ಎಂದು ಆರ್ಥಿಕ ಇಲಾಖೆ ಎಚ್ಚರಿಸಿದ್ದರೂ ಈ ವರ್ಷವೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‍‌ ಅವರು 2024-25ನೇ ಸಾಲಿಗೆ   ಗೃಹ ಲಕ್ಷ್ಮಿ ಯೋಜನೆಗೆ 31,920 ಕೋಟಿ ರು. ಕೋರಿದ್ದರು.

 

ಗೃಹ ಲಕ್ಷ್ಮಿ ಯೋಜನೆಗೆ 2023-24ನೇ ಸಾಲಿಗೆ 17,500 ಕೋಟಿ ರು.ಮೀಸಲಿಟ್ಟಿತ್ತು. ಇದರಲ್ಲಿ 11,200 ಕೋಟಿ ರು. ಅನುದಾನವನ್ನು ಸರ್ಕಾರವು ಬಿಡುಗಡೆ ಮಾಡಿತ್ತು. ಈ ಪೈಕಿ ಡಿಸೆಂಬರ್‍‌ ಅಂತ್ಯಕ್ಕೆ 8,609.20 ಕೋಟಿ ರು. ಖರ್ಚಾಗಿತ್ತು. ರಾಜ್ಯ ವಲಯದ ಗೃಹ ಲಕ್ಷ್ಮಿ ಯೋಜನೆ ಸೇರಿದಂತೆ ಈ ಎಲ್ಲಾ 19 ಯೋಜನೆಗಳಿಗೆ ಒಟ್ಟಾರೆ 32,257.72 ಕೋಟಿ ರು ಅಂದಾಜಿಸಿದೆ. ಈ ಪೈಕಿ ಗೃಹ ಲಕ್ಷ್ಮಿ ಯೋಜನೆಗೇ 31,920.00 ಕೋಟಿ ರು. ಅನುದಾನ ಹಂಚಿಕೆ ಆದರೆ ಉಳಿದ 18 ಯೋಜನೆಗಳಿಗೆ ಕೇವಲ 332.72 ಕೋಟಿ ರು. ಉಳಿಯಲಿದೆ ಎಂದು ಅಂದಾಜಿಸಿತ್ತು.

 

ಇಲಾಖೆಯು ಸಲ್ಲಿಸಿರುವ ಬೇಡಿಕೆ ಪಟ್ಟಿ ಪ್ರಕಾರ ಗೃಹ ಲಕ್ಷ್ಮಿ ಯೋಜನೆ ಹೊರತುಪಡಿಸಿ 471.19 ಕೋಟಿ ರು. ಅನುದಾನ ಅಂದಾಜಿಸಿದೆ. ಇದರ ಪ್ರಕಾರ 138.47 ಕೋಟಿ ರು. ಅನುದಾನ ಕೊರತೆ ಬೀಳಲಿದೆ ಎಂದು ಹೇಳಲಾಗಿತ್ತು.

 

ಗೃಹಲಕ್ಷ್ಮಿ ಯೋಜನೆಗೆ 31,920 ಕೋಟಿ ರು ಬೇಡಿಕೆ, 18 ಯೋಜನೆಗಳಿಗೆ ಕೇವಲ 332.72 ಕೋಟಿ ಉಳಿಕೆ

 

ಸಮಗ್ರ ಶಿಶು ಅಭಿವೃದ್ಧಿ ಸೇವೆ, ಐಸಿಡಿಎಸ್‌, ಪೋಷಣ ಅಭಿಯಾನ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಗೆ 2024-25ನೇ ಸಾಲಿನಲ್ಲಿ ಪ್ರಾರಂಭಿಕ ಶಿಲ್ಕು ಸೇರಿ  ಒಟ್ಟಾರೆ 4,782.84  ಕೋಟಿ ರು ಅನುದಾನ ಒದಗಿಸಿತ್ತು. ಈ ಪೈಕಿ ಜನವರಿ ಅಂತ್ಯಕ್ಕೆ 2,580.13 ಕೋಟಿ ರು ಬಿಡುಗಡೆ ಮಾಡಿದೆ. ಒಟ್ಟು ಅನುದಾನದಲ್ಲಿ ಬಿಡುಗಡೆಗೆ 2,202.71 ಕೋಟಿ ರು ಬಾಕಿ ಇರುವುದು ಅಂಕಿ ಅಂಶಗಳಿಂದ ಗೊತ್ತಾಗಿದೆ.

 

ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ  ಒಟ್ಟು 25.00 ಕೋಟಿ ರು ಅನುದಾನ ಒದಗಿಸಿತ್ತು. ಹೆಚ್ಚುವರಿಯಾಗಿ 11.96 ಕೊಟಿ ರು ಸೇರಿ  36.96 ಕೋಟಿ ರು ಬಿಡುಗಡೆಯಾಗಿದೆ. ಆದರೆ ಜನವರಿ ಅಂತ್ಯಕ್ಕೆ ಖರ್ಚು ಮಾಡಿದ್ದು ಕೇವಲ 9.36 ಕೋಟಿ ರು ಮಾತ್ರ. ಬಿಡುಗಡೆಯಾಗಿದ್ದ ಅನುದಾನದಲ್ಲಿಯೇ ಖರ್ಚು ಮಾಡಲು 27.6 ಕೋಟಿಯಷ್ಟು ಬಾಕಿ ಇರಿಸಿಕೊಂಡಿದೆ.

 

ವಿಶೇಷವೆಂದರೇ ಇದೇ ಇಲಾಖೆಯ ಇನ್ನಿತರೆ ಯೋಜನೆಗಳ ಅನುದಾನ ಬಿಡುಗಡೆ ಸಂಬಂಧ ಆರ್ಥಿಕ ಇಲಾಖೆಯು ಮೊತ್ತವನ್ನೂ ನಿಗದಿಪಡಿಸಿ ಸೂಚಿಸಿತ್ತು. ಆದರೆ ಗೃಹ ಲಕ್ಷ್ಮಿ ಯೋಜನೆಗೆ ಇಂತಿಷ್ಟೇ ಮೊತ್ತ ಎಂದು ಸೂಚಿಸಿರಲಿಲ್ಲ.

 

ಗೃಹ ಲಕ್ಷ್ಮಿ; ನಿರಂತರ ಸಾಲದ ಸುಳಿ, ಆದಾಯದ ಕೊರತೆ, ಹಣಕಾಸು ಹೊಣೆಗಾರಿಕೆ ಕಾಯ್ದೆ ಉಲ್ಲಂಘನೆ

ಇನ್ನು, ಈ ಯೋಜನೆಯ ಪ್ರಚಾರ, ಜಾಹೀರಾತು, ಅರ್ಜಿ ಶುಲ್ಕ, ಸಮಾಲೋಚಕರ ವೇತನ ಹಾಗೂ ಇತರೆ ವೆಚ್ಚಗಳಿಗೆಂದು 20 ಕೋಟಿ ರು. ಅವಶ್ಯಕತೆ ಇದೆ ಎಂದೂ ಬೇಡಿಕೆ ಪಟ್ಟಿಯಲ್ಲಿ ವಿವರಿಸಿತ್ತು.

ಗೃಹ ಲಕ್ಷ್ಮಿ; ಸಿಎಂ, ಡಿಸಿಎಂ, ಸಚಿವರ ಫೋಟೋ ಶೂಟ್‌ ಸೇರಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಕ್ಕೆ 50 ಲಕ್ಷ ರು ವೆಚ್ಚ

ಜಿಲ್ಲಾ ವಲಯದ ಯೋಜನೆ ಮತ್ತು ಇತರೆ ಯೋಜನೆಗಳಿಗೆ 2024-25ನೇ ಸಾಲಿಗೆ 39,369.82 ಕೋಟಿ ರು. ಕೋರಿದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ 186.43 ಕೋಟಿ ರು., ಮಕ್ಕಳ ಹಕ್ಕುಗಳ ನಿರ್ದೇಶನಾಲಯಕ್ಕೆ 273.69 ಕೋಟಿ ರು., ವಿಕಲ ಚೇತನರ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯಕ್ಕೆ 292.47 ಕೋಟಿ ರು., ಕರ್ನಾಟಕ ಬಾಲ ವಿಕಾಸ ಅಕಾಡೆಮಿಗೆ 11.89 ಕೋಟಿ ರು., ಕರ್ನಾಟಕ ರಾಜ್ಯಮಹಿಳಾ ಆಯೋಗಕ್ಕೆ 6.35 ಕೋಟಿ ರು., ಕರ್ನಾಟಕ ರಾಜ್ಯ ಮಕ್ಕಳ ಆಯೋಗಕ್ಕೆ 3.23 ಕೋಟಿ ರು., ಬಾಲಭವನಗಳಿಗೆ 54.02 ಕೋಟಿ ರು., ಕೋರಿತ್ತು.

 

2024-25ನೇ ಸಾಲಿನಲ್ಲಿ ಘೋಷಿಸಲಿರುವ ಹೊಸ ಯೋಜನೆಗಳಾದ ಸ್ಮಾರ್ಟ್‌ ಅಂಗನವಾಡಿ ಯೋಜನೆಗೆ 408 ಕೋಟಿ ರು., ಅಂಗವನಾಡಿ ಮಕ್ಕಳಿಗೆ ಎರಡು ಜೊಗೆ ಸಮವಸ್ತ್ರ, ಶೂ ಸಾಕ್ಸ್‌ಗಳನ್ನು ಒದಗಿಸಲು 212.30 ಕೋಟಿ ರು., ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಎರಡು ಜೊತೆ ಹೆಚ್ಚುವರಿ ಸಮವಸ್ತ್ರಗಳೀಗೆ 13.75 ಕೋಟಿ ರು., ಅಂಗನವಾಡಿ ಕಟ್ಟಡಗಳ ನಿರ್ಮಾಣ ಯೋಜನೆಗಳಿಗೆ 200.00 ಕೋಟಿ ರು., ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಘಟಕಗಳನ್ನು ಆರಂಭಿಸುವ ಸಂಬಂಧ 0.95 ಕೋಟಿ ರು., ಬೇಕಿದೆ.

ಗೃಹಲಕ್ಷ್ಮಿ ಕಾರ್ಯಕ್ರಮ ಚಾಲನೆ, ಹೋರ್ಡಿಂಗ್ಸ್‌ ಸೇರಿ ಪ್ರಚಾರಕ್ಕೆ ಈವರೆಗೆ 36.35  ಕೋಟಿ ರು. ಮಂಜೂರು

ಶ್ರೇಷ್ಠ ಆವಾಸ ಯೋಜನೆಗೆ 83.32 ಕೋಟಿ ರು., ತೀವ್ರತರ ವಿಕಲಚೇತನರ ಆರೈಕೆದಾರರಿಗೆ ಮಾಸಾಶನಕ್ಕೆ 57.42 ಕೋಟಿ ರು., ಸಮುದಾಯ ಆಧರಿತ ಪುನಶ್ಚೇತನ ಯೋಜನೆಗೆ 1.30 ಕೋಟಿ ರು., ಹಿರಿಯ ದೃಷ್ಟಿ ಯೋಜನೆಗೆ 1.35 ಕೋಟಿ ರು., ರಾಜ್ಯ ವಿಕಲಚೇತನರ ನಿಧಿ ಸ್ಥಾಪನೆಗೆ 10.00 ಕೋಟಿ ರು., ರಾಜ್ಯದಲ್ಲಿ ಬೆನ್ನುಹುರಿ ಅಪಘಾತಕ್ಕೆ ಒಳಗಾದವರ ಪುನರ್ವಸತಿ ಕೇಂದ್ರ ಸ್ಥಾಪನೆಗೆ 1.52 ಕೋಟಿ ರು., ಸರ್ಕಾರಿ ಅನುಪಾಲನ ಗೃಹಗಳಿಗೆ 4.00 ಕೋಟಿ ರು., ಬ್ಯಾಟರಿ ಚಾಲಿತ ವ್ಹೀಲ್‌ ಚೇರ್‍‌ಗಳಿಗೆ 50 ಕೋಟಿ ರು., ಅಂಗವಿಕಲ ಮಕ್ಕಳ ಕೇಂದ್ರೀಕೃತ ವಿಶೇಷ ಶೈಕ್ಷಣಿಕ ಯೋಜನೆಗೆ 3.83 ಕೋಟಿ ರು. ಅಂದಾಜಿಸಿತ್ತು.

 

ಅದೇ ರೀತಿ ವಿಕಲಚೇತರಿಗೆ ಮಾಸಾಶನ ಹೆಚ್ಚಿಸಲು 754.20 ಕೋಟಿ ರು., ಸ್ವಯಂ ಉದ್ಯೋಗಕ್ಕಾಗಿ 6.00 ಕೋಟಿ ರು., ಶಿಶುಪಾಲನಾ ಭತ್ಯೆ ನೀಡಲು 0.70 ಕೋಇಟ ರು., ಸಾಧನೆ ಯೋಜನೆಯಡಿ ಕ್ರೀಡಾ ಸಾಧಕರಿಗೆ ಪ್ರೋತ್ಸಾಹ ಧನಕ್ಕೆ 5.60 ಕೋಟಿ ರು., ವಿವಾಹ ಪ್ರೋತ್ಸಾಹ ಧನಕ್ಕೆ 5.50 ಕೋಟಿ ರು., ಹಿರಿಯ ನಾಗರೀಕರಿಗೆ ಮಾಸಶಾನ ಹೆಚ್ಚಿಸಲು 2,891.53 ಕೋಟಿ ರು. ಬೇಡಿಕೆ ಇರಿಸಿತ್ತು.

Hot this week

ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ; ದರಗಳ ಪರಿಷ್ಕರಣೆಗೆ ಅನುಸರಿಸಿರುವ ಮಾನದಂಡದಲ್ಲಿ ಲೋಪವಿದೆಯೇ?

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ ದರಗಳ...

ಭ್ರಷ್ಟಾಚಾರ, ಅಧಿಕ ಆಸ್ತಿ ಗಳಿಕೆ ಆರೋಪ; 4 ವರ್ಷಗಳಲ್ಲಿ 1,248 ಪ್ರಕರಣ ದಾಖಲು, ಸಿ ಗುಂಪಿನ ನೌಕರರೇ ಹೆಚ್ಚು

ಬೆಂಗಳೂರು; ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ, ಲಂಚಕ್ಕಾಗಿ ಬೇಡಿಕೆಯಿಟ್ಟ  ಆರೋಪಗಳಿಗೆ ಸಂಬಂಧಿಸಿದಂತೆ ...

ಕನ್ಸೋರ್ಟಿಯಂ ಷರತ್ತು, ಸದಸ್ಯರ ಷೇರು; ಅಂಜುಂ ಪರ್ವೇಜ್ ಸಮಿತಿಯ ಆಕ್ಷೇಪಣೆ ತಳ್ಳಿ ಹಾಕಿದ ಘನತ್ಯಾಜ್ಯ ನಿರ್ವಹಣೆ ಮಂಡಳಿ

ಬೆಂಗಳೂರು; ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ 21 ಪ್ಯಾಕೇಜ್‌ಗಳಲ್ಲಿ ರೂಪಿಸಿರುವ  ಕನ್ಸೋರ್ಟಿಯಂನಲ್ಲಿ...
Please Scan to make Your Contribution

Topics

ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ; ದರಗಳ ಪರಿಷ್ಕರಣೆಗೆ ಅನುಸರಿಸಿರುವ ಮಾನದಂಡದಲ್ಲಿ ಲೋಪವಿದೆಯೇ?

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ ದರಗಳ...

ಭ್ರಷ್ಟಾಚಾರ, ಅಧಿಕ ಆಸ್ತಿ ಗಳಿಕೆ ಆರೋಪ; 4 ವರ್ಷಗಳಲ್ಲಿ 1,248 ಪ್ರಕರಣ ದಾಖಲು, ಸಿ ಗುಂಪಿನ ನೌಕರರೇ ಹೆಚ್ಚು

ಬೆಂಗಳೂರು; ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ, ಲಂಚಕ್ಕಾಗಿ ಬೇಡಿಕೆಯಿಟ್ಟ  ಆರೋಪಗಳಿಗೆ ಸಂಬಂಧಿಸಿದಂತೆ ...

ಕನ್ಸೋರ್ಟಿಯಂ ಷರತ್ತು, ಸದಸ್ಯರ ಷೇರು; ಅಂಜುಂ ಪರ್ವೇಜ್ ಸಮಿತಿಯ ಆಕ್ಷೇಪಣೆ ತಳ್ಳಿ ಹಾಕಿದ ಘನತ್ಯಾಜ್ಯ ನಿರ್ವಹಣೆ ಮಂಡಳಿ

ಬೆಂಗಳೂರು; ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ 21 ಪ್ಯಾಕೇಜ್‌ಗಳಲ್ಲಿ ರೂಪಿಸಿರುವ  ಕನ್ಸೋರ್ಟಿಯಂನಲ್ಲಿ...

ಐಪಿಎಸ್ ರವೀಂದ್ರ ಕಾಶಿನಾಥ್ ಗಡಾದಿ ವಿರುದ್ಧ ಆರೋಪ; 4 ತಿಂಗಳಾದರೂ ಸಲ್ಲಿಕೆಯಾಗದ ಚಾರ್ಜ್‌ಶೀಟ್‌, ಇಲಾಖೆ ವಿಚಾರಣೆ ವಿಳಂಬ

ಬೆಂಗಳೂರು; ಕರ್ತವ್ಯಲೋಪ ಮತ್ತು ನಿಯಮ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಐಪಿಎಸ್...

Related Articles

Popular Categories

error: Content is protected !!