Friday | October 9, 2026 |

ಪಿಪಿಇ ಕಿಟ್‌ಗೆ ಹೆಚ್ಚುವರಿ 912 ರು ದರದಲ್ಲಿ ಖರೀದಿ; ಇಲಾಖೆಯ ರೇಟ್‌ ಕಾಂಟ್ರಾಕ್ಟ್‌ ವ್ಯವಹಾರ ಬಯಲು

ಬೆಂಗಳೂರು; ಕೋವಿಡ್‌ ಎರಡನೇ ಅಲೆ ಸಂದರ್ಭದಲ್ಲಿ ಪಿಪಿಇ ಕಿಟ್‌ಗಳ ದರಗಳು ಕಡಿಮೆ ಇದ್ದರೂ ವೈದ್ಯಕೀಯ ಶಿಕ್ಷಣ ಇಲಾಖೆಯು ಕಿಟ್‌ವೊಂದಕ್ಕೆ 912 ರು. ಹೆಚ್ಚಿನ ದರದಲ್ಲಿ ಖರೀದಿಸಿ ಸಂಗ್ರಹಿಸಿತ್ತು. ಈ ಕುರಿತು ಆರ್ಥಿಕ ಇಲಾಖೆಯೂ ಸಹ ಇಲಾಖೆಯ ದರಕ್ಕೆ ಅಸಮ್ಮತಿ ವ್ಯಕ್ತಪಡಿಸಿತ್ತು.

 

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ಸಂಬಂಧಿಸಿದಂತೆ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿನ ಅಧಿಕಾರಿಗಳ ನೇತೃತ್ವದ ಸಮಿತಿಯು ಸರ್ಕಾರಕ್ಕೆ 2023ರ ಡಿಸೆಂಬರ್‍‌ನಲ್ಲೇ ಸಲ್ಲಿಸಿರುವ ತನಿಖಾ ವರದಿಯು ಪಿಪಿಇ ಕಿಟ್‌ಗಳ ಖರೀದಿ ದರಕ್ಕೆ ಆರ್ಥಿಕ ಇಲಾಖೆಯು ವ್ಯಕ್ತಪಡಿಸಿದ್ದ ಆಕ್ಷೇಪವನ್ನೂ ಬಹಿರಂಗಗೊಳಿಸಿದೆ. ತನಿಖಾ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅಲ್ಲದೇ ಕೆಟಿಪಿಪಿ ಕಾಯ್ದೆಗಳ ಅನ್ವಯ ದರ ಒಪ್ಪಂದ (Rate Contract) ದಂತೆ ಖರೀದಿಸಲು ಅವಕಾಶವಿಲ್ಲ. ಆದರೂ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಿಪಿಇ ಕಿಟ್‌ಗಳನ್ನು ದರ ಒಪ್ಪಂದಂತೆ ಖರೀದಿಸಿತ್ತು. ಇದನ್ನು ಆರ್ಥಿಕ ಇಲಾಖೆಯೂ ಆಕ್ಷೇಪಿಸಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಿದೆ.

 

ಇಲಾಖೆಯ ದರವೇ ಅಸಮಂಜಸ

 

ಪಿಪಿಇ ಕಿಟ್‌ ಖರೀದಿ ಸಂಬಂಧ ಭಾರತ ಸರ್ಕಾರದಿಂದ ಒಪ್ಪಂದದ ಅವಧಿಯನ್ನು 6 ತಿಂಗಳ ಅವಧಿಗೆ ವಿಸ್ತರಿಸಲು ನೀಡಿದ್ದ ಅಧಿಕೃತ ಜ್ಞಾಪನವನ್ನೇ (OM NO 18/4/2020 DATED 13.05.2020) ನ್ನು ತಪ್ಪಾಗಿ ಆರ್ಥೈಯಿಸಿಕೊಂಡಿತ್ತು. ಕೋವಿಡ್‌ ಎರಡನೇ ಅಲೆ ಸಂದರ್ಭದಲ್ಲಿ ಪಿಪಿಇ ಕಿಟ್‌ಗಳ ದರಗಳು ಕಡಿಮೆ ಇದ್ದು ಕೆಎಸ್‌ಎಂಎಸ್‌ಸಿಎಲ್‌ ಪ್ರತಿ ಕಿಟ್‌ಗೆ 400 ರು. ನಿಗದಿಪಡಿಸಿದ್ದರೂ ಸಹ 1,312 .5 ರು ಗಳ ವೆಚ್ಚದಲ್ಲಿ ಪ್ರತಿ ಪಿಪಿಇ ಕಿಟ್‌ನ್ನು ಖರೀದಿಸಿತ್ತು.

 

ಕೋವಿಡ್‌ 19 ಮುಂದುವರೆದ ದಿನಗಳಲ್ಲಿ ಪಿಪಿಇ ಕಿಟ್‌ ದರಗಳು ಇಳಿಕೆಯಾಗಿದ್ದವು. ಇಳಿಕೆಯಾದ ದರದಂತೆಯೇ ಕೆಎಸ್‌ಎಂಎಸ್‌ಸಿಎಲ್‌ ಕೂಡ ಖರೀದಿಸಿತ್ತು. ಆದರೂ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ಪ್ರತಿ ಕಿಟ್‌ಗೆ 1,312 ರು.ನಂತೆ ಖರೀದಿಸಿದ್ದು ಸಮಂಜಸವಾಗಿರುವುದಿಲ್ಲ ಎಂದು ಆರ್ಥಿಕ ಇಲಾಖೆಯು 2022ರ ಮೇ 5ರಂದೇ ತನ್ನ ಅಭಿಪ್ರಾಯ ವ್ಯಕ್ತಪಡಿಸಿತ್ತು ಎಂಬುದು ಟಿಪ್ಪಣಿಯಿಂದ ಗೊತ್ತಾಗಿದೆ.

 

ದರ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವು 2020ರ ಮೇ 13ರಂದು ಹೊರಡಿಸಿರುವ ಸುತ್ತೋಲೆಯಂತೆ ತಿಂಗಳಿಗೆ ವಿಸ್ತರಿಸಲು ಮಾತ್ರ ಅವಕಾಶವಿದೆ. ಹೀಗಾಗಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ ಪಿಪಿಇ ಕಿಟ್‌ಗಳ ಸರಬರಾಜಿಗೆ ಅವಧಿ ವಿಸ್ತರಿಸಲು ಅವಕಾಶವಿದೆಯೇ ಹೊರತು ಹೆಚ್ಚುವರಿ ಪ್ರಮಾಣದ ಸಾಮಗ್ರಿಗಳನ್ನು ಖರೀದಿಸಲು ದರ ಒಪ್ಪಂದ ಪ್ರಕಾರ ಅವಕಾಶವಿಲ್ಲ.

 

ಆದರೂ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ಇದನ್ನು ಉಲ್ಲಂಘಿಸಿ ಖರೀದಿಸಿತ್ತು. ಮತ್ತು ಟೆಂಡರ್‍‌ ದಾಖಲೆಗಳಲ್ಲಿಯೂ ಸಹ ಈ ವಿಷಯದ ಕುರಿತು ಪ್ರಸ್ತಾಪವನ್ನೇ ಮಾಡಿಲ್ಲ ಎಂಬ ಅಂಶವನ್ನು ತನಿಖಾ ವರದಿಯಲ್ಲಿ ವಿವರಿಸಲಾಗಿದೆ.

 

‘ಕೋವಿಡ್‌ ಮೊದಲನೇ ಅಲೆಯ ಸಮಯದಲ್ಲಿ ನೀಡಲಾಗಿದ್ದ ಆಡಳಿತಾತ್ಮಕ ಅನುಮೋದನೆಯನ್ನೇ ಆಧಾರವಾಗಿರಿಸಿ ಮತ್ತು ಉಲ್ಲೇಖಿಸಿ ಎರಡನೇ ಅಲೆಯಲ್ಲಿಯೂ ಇದೇ ದರದಲ್ಲಿ ಎಲ್ಲಾ ಪಿಪಿಇ ಕಿಟ್‌ಗಳ ಸರಬರಾಜಿಗೆ ಆದೇಶ ನೀಡಲಾಗಿದೆ. ಇದಕ್ಕೆ ಯಾವುದೇ ಆಡಳಿತಾತ್ಮಕ ಅನುಮೋದನೆ ಇರಲಿಲ್ಲ. ಪ್ರತ್ಯೇಕವಾಗಿ ಟೆಂಡರ್‍‌ ಸಹ ಕರೆದಿರಲಿಲ್ಲ. 2020ರಲ್ಲಿ ಹಳೆಯ ಟೆಂಡರ್‍‌ನಂತೆ ಅಂತಿಮಗೊಳಿಸಿದ್ದ ಮೊತ್ತಕ್ಕೆ ಸರಬರಾಜು ಆದೇಶ ನೀಡಲಾಗಿತ್ತು. 2021ರಲ್ಲಿ ಬೆಲೆ ಕುಸಿತದ ಅಂಶವನ್ನು ಪರಿಗಣಿಸಿರಲಿಲ್ಲ,’ ಎಂದು ತನಿಖಾ ಸಮಿತಿಯು ವರದಿಯಲ್ಲಿ ವಿವರಿಸಿತ್ತು.

 

ಹಾಗೆಯೇ ಕೆಟಿಪಿಪಿ ಕಾಯ್ದೆ ಅಡಿಯಲ್ಲಿ ಟೆಂಡರ್‍‌ ಪ್ರಮಾಣದಲ್ಲಿ ಶೇ.25ರಷ್ಟು ಮಾತ್ರ ಹೆಚ್ಚಿನ ಪ್ರಮಾಣ ಖರೀದಿಸಬಹುದು. 2,59,263 ಪಿಪಿಇ ಕಿಟ್‌ಗಳಿಗೆ ಮಾತ್ರ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಇತ್ತು. ಇದಕ್ಕೆ ಟೆಂಡರ್‍‌ ಕೂಡ ಆಹ್ವಾನಿಸಿತ್ತು. ಆದರೆ ಒಟ್ಟು 19,30,613 ಸಂಖ್ಯೆಯ ಪಿಪಿಇ ಕಿಟ್‌ಗಳ ಖರೀದಿಗೆ ಆದೇಶ ನೀಡಲಾಗಿತ್ತು. ಅಂದರೆ ಒಟ್ಟಾರೆ 16,71,350 ಪಿಪಿಇ ಕಿಟ್‌ಗಳಿಗೆ ಹೆಚ್ಚಾಗಿ ಸರಬರಾಜು ಆದೇಶ ನೀಡಲಾಗಿತ್ತು. ಇದು ಶೇ. 644.65ಷ್ಟು ಹೆಚ್ಚಾಗಿತ್ತು. ಈ ಮೂಲಕ ಕೆಟಿಪಿಪಿ ಕಾಯ್ದೆಯನ್ನು ಉಲ್ಲಂಘಿಸಿರುವುದನ್ನು ಸ್ಮರಿಸಬಹುದು.

Hot this week

ಪಡಿತರ ಆಹಾರಧಾನ್ಯ ಎತ್ತುವಳಿ, ಸಕ್ಕರೆ ಸಹಾಯಧನ, ಕನಿಷ್ಟ ಬೆಂಬಲ ಬೆಲೆ; 1,171.73 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ

ಬೆಂಗಳೂರು; ಕನಿಷ್ಠ ಬೆಂಬಲ ಬೆಲೆ  ಅಡಿಯಲ್ಲಿ ಖರೀದಿ ಕಾರ್ಯಾಚರಣೆ ನಡೆಸುತ್ತಿರುವ ಕರ್ನಾಟಕ...

ಜೆಎಸ್‌ಡಬ್ಲ್ಯೂನಿಂದ ಸರ್ಕಾರಿ ಜಮೀನು ಒತ್ತುವರಿ ದೃಢಪಡಿಸಿದ ಪರಿಶೀಲನಾ ತಂಡ; ಅಂದಾಜು ಸಮಿತಿಗೆ ಕಂದಾಯ ಇಲಾಖೆ ವರದಿ, ಒತ್ತುವರಿ ತೆರವುಗೊಂಡಿದೆಯೇ?

ಬೆಂಗಳೂರು; ಜೆಎಸ್‌ಡಬ್ಲ್ಯೂ ಲಿಮಿಟೆಡ್‌ ಬಳ್ಳಾರಿಯ ವಿವಿಧೆಡೆ   ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದೆ...
Please Scan to make Your Contribution

Topics

ಪಡಿತರ ಆಹಾರಧಾನ್ಯ ಎತ್ತುವಳಿ, ಸಕ್ಕರೆ ಸಹಾಯಧನ, ಕನಿಷ್ಟ ಬೆಂಬಲ ಬೆಲೆ; 1,171.73 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ

ಬೆಂಗಳೂರು; ಕನಿಷ್ಠ ಬೆಂಬಲ ಬೆಲೆ  ಅಡಿಯಲ್ಲಿ ಖರೀದಿ ಕಾರ್ಯಾಚರಣೆ ನಡೆಸುತ್ತಿರುವ ಕರ್ನಾಟಕ...

ಜೆಎಸ್‌ಡಬ್ಲ್ಯೂನಿಂದ ಸರ್ಕಾರಿ ಜಮೀನು ಒತ್ತುವರಿ ದೃಢಪಡಿಸಿದ ಪರಿಶೀಲನಾ ತಂಡ; ಅಂದಾಜು ಸಮಿತಿಗೆ ಕಂದಾಯ ಇಲಾಖೆ ವರದಿ, ಒತ್ತುವರಿ ತೆರವುಗೊಂಡಿದೆಯೇ?

ಬೆಂಗಳೂರು; ಜೆಎಸ್‌ಡಬ್ಲ್ಯೂ ಲಿಮಿಟೆಡ್‌ ಬಳ್ಳಾರಿಯ ವಿವಿಧೆಡೆ   ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದೆ...

120 ಎಕರೆ ಅರಣ್ಯ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಪಾರ್ಕ್‌; ಕಂದಾಯ ಇಲಾಖೆ ನಡೆಸಿರುವ ಸಭೆಯ ಮಾಹಿತಿಯೇ ಅರಣ್ಯ ಇಲಾಖೆ ಬಳಿ ಇಲ್ಲ!

ಬೆಂಗಳೂರು; ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್‌ನ ಸರ್ವೆ...

21 ಪ್ಯಾಕೇಜ್‌ ಟೆಂಡರ್ ನಲ್ಲಿ ಭ್ರಷ್ಟಾಚಾರ ಆರೋಪ; ಅಂಜುಂ ಪರ್ವೇಝ್ ಸಮಿತಿ ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು; ಹಸಿ ತ್ಯಾಜ್ಯ, ಒಣ ತಾಜ್ಯ, ನೈರ್ಮಲ್ಯ ತ್ಯಾಜ್ಯ, ರಸ್ತೆ ಗುಡಿಸುವಿಕೆ,...

ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಮನವಿ; ಸ್ಪಷ್ಟ ಅಭಿಪ್ರಾಯ ಸಲ್ಲಿಸಲು ಡಿಜಿಐಜಿಪಿಗೆ ನಿರ್ದೇಶನ

ಬೆಂಗಳೂರು;   ಎಡಿಜಿಪಿ ಚಂದ್ರಶೇಖರ್ ಅವರ ವಿರುದ್ಧದ ಪ್ರಕರಣದಲ್ಲಿ ಸಿಐಡಿ ವಿಶೇಷ ವಿಚಾರಣೆ...

Related Articles

Popular Categories

error: Content is protected !!