ಬೆಂಗಳೂರು; ರಾಜ್ಯದಲ್ಲಿ ಕಳೆದ 4 ತಿಂಗಳಲ್ಲಿ ಕೊಲೆ, ದರೋಡೆ, ಸುಲಿಗೆ, ಕಳ್ಳತನ, ಅತ್ಯಾಚಾರ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ, ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ. ಹಿಂದಿನ ಸರ್ಕಾರದ (ಜೂನ್-ಸೆಪ್ಟಂಬರ್ 2022)ದ ಇದೇ ಅವಧಿಗೆ ಹೋಲಿಸಿದರೆ ಈಗಿನ ಕಾಂಗ್ರೆಸ್ ಸರ್ಕಾರದ 4 ತಿಂಗಳ ಅವಧಿಯಲ್ಲಿ ಒಟ್ಟಾರೆ 11,616 ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದು ಇದೀಗ ಬಹಿರಂಗವಾಗಿದೆ.
ಕರ್ನಾಟಕ ಪೊಲೀಸ್ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಅಪರಾಧಗಳ ಸಮೀಕ್ಷೆ ಸಂಬಂಧ ದಾಖಲಿಸಿರುವ ದತ್ತಾಂಶಗಳ ಪ್ರಕಾರ ಹಿಂದಿನ ಸರ್ಕಾರದ ಇದೇ ಅವಧಿ (ಜೂನ್‌ನಿಂದ ಸೆಪ್ಟಂಬರ್)ಯಲ್ಲಿ ಒಟ್ಟಾರೆ 31,796 ಪ್ರಕರಣಗಳು ದಾಖಲಾಗಿದ್ದವು. ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 43,412 ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ.
ಪೊಲೀಸ್ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ದಾಖಲಾಗಿರುವ ದತ್ತಾಂಶಗಳನ್ನು ಕ್ರೋಢೀಕರಿಸಿರುವ ‘ದಿ ಫೈಲ್’ ಇದೀಗ ಅಪರಾಧ ಸಮೀಕ್ಷೆಯ ಕಿರು ನೋಟವನ್ನು ಮುಂದಿಟ್ಟಿದೆ.
2022ರ ಜೂನ್‌ನಿಂದ ಸೆಪ್ಟಂಬರ್‌ವರೆಗೆ 443 ಕೊಲೆ ಪ್ರಕರಣಗಳು ವರದಿಯಾಗಿದ್ದವು. 66 ಡಕಾಯಿತಿ, 681 ದರೋಡೆ, 9,875 ಕಳ್ಳತನ, 1,210 ಗಲಭೆ, 4,893 ನೋವುಂಟಾದ ಪ್ರಕರಣಗಳು, 188 ಅತ್ಯಾಚಾರ, 881 ಪೋಕ್ಸೋ, ಜಾತಿ ದೌರ್ಜನ್ಯ 630, 4,302 ಸೈಬರ್ ಅಪರಾಧ, 2,375 ಆರ್ಥಿಕ ಅಪರಾಧ, ಮೋಟಾರು ವಾಹನಗಳ ಕಳ್ಳತನ 4,334, ಎನ್‌ಡಿಪಿಎಸ್ 2,511 ಸೇರಿ ಒಟ್ಟಾರೆ 31,796 ಪ್ರಕರಣಗಳು ರಾಜ್ಯದ ವಿವಿಧೆಡೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದವು.
2023ರ ಜೂನ್‌ನಿಂದ ಸೆಪ್ಟಂಬರ್‌ವರೆಗೆ 423 ಕೊಲೆ ಪ್ರಕರಣಗಳು ವರದಿಯಾಗಿವೆ. 60 ಡಕಾಯಿತಿ, ದರೋಡೆ 718, 12,642 ಕಳ್ಳತನ, 1,349 ಗಲಭೆ, 6,226 ನೋವುಂಟು ಮಾಡಿದ ಪ್ರಕರಣಗಳು, 1,211 ಪೋಕ್ಸೋ, 809 ಜಾತಿ ದೌರ್ಜನ್ಯ, 216 ಅತ್ಯಾಚಾರ, 8,043 ಸೈಬರ್ ಅಪರಾಧ, 2,968 ಆರ್ಥಿಕ ಅಪರಾಧ, 5,411 ಮೋಟಾರು ವಾಹನಗಳ ಕಳ್ಳತನ, 3,336 ಎನ್‌ಡಿಪಿಎಸ್ ಸೇರಿದಂತೆ ಒಟ್ಟಾರೆ 40,441 ಪ್ರಕರಣಗಳು ವರದಿಯಾಗಿರುವುದು ಕರ್ನಾಟಕ ಪೊಲೀಸ್ ಇಲಾಖೆಯ ಅಧಿಕೃತ ಜಾಲತಾಣದಿಂದ ತಿಳಿದು ಬಂದಿದೆ.
‘ರಾಜ್ಯ ಕಾಂಗ್ರೆಸ್ ಸರ್ಕಾರದ ಅರಾಜಕತೆಯ ಆಡಳಿತದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಹಾಗೂ ಕೊಲೆ ಯತ್ನಗಳು ನಿರಂತರವಾಗಿ ನಡೆಯುತ್ತಲೇ ಇದೆ,’ ಎಂದು ಬಿಜೆಪಿ ಪಕ್ಷವು ಟ್ವೀಟ್ ಮಾಡಿರುವ ಬೆನ್ನಲ್ಲೇ 2022 ಮತ್ತು 2023 ರ ಜೂನ್, ಜುಲೈ, ಆಗಸ್ಟ್, ಸೆಪ್ಟಂಬರ್ ನಲ್ಲಿ ದಾಖಲಾಗಿದ್ದ ಅಪರಾಧ ಪ್ರಕರಣಗಳ ಅಂಕಿ ಸಂಖ್ಯೆಗಳು ಮುನ್ನೆಲೆಗೆ ಬಂದಿವೆ.
ಕೊಲೆ ಪ್ರಕರಣಗಳು
2023ರ ಸೆಪ್ಟಂಬರ್ ಅಂತ್ಯಕ್ಕೆ 117 ಕೊಲೆ ಪ್ರಕರಣಗಳು ವರದಿಯಾಗಿವೆ. 2022ರ ಸೆಪ್ಟಂಬರ್‌ನಲ್ಲಿ 111 ಕೊಲೆ ಪ್ರಕರಣಗಳು ದಾಖಲಾಗಿದ್ದವು. 2023ರ ಆಗಸ್ಟ್‌ನಲ್ಲಿ 102 ಕೊಲೆ ಪ್ರಕರಣಗಳು ದಾಖಲಾಗಿದ್ದವು.
ದರೋಡೆ ಪ್ರಕರಣಗಳು
2022ರ ಸೆಪ್ಟಂಬರ್ ಅಂತ್ಯಕ್ಕೆ 13 ಡಕಾಯಿತಿ ಪ್ರಕರಣಗಳು ದಾಖಲಾಗಿದ್ದರೇ 2023ರ ಸೆಪ್ಟಂಬರ್‌ನಲ್ಲಿ 20 ಪ್ರಕರಣಗಳು ವರದಿಯಾಗಿವೆ. 2023ರ ಆಗಸ್ಟ್‌ನಲ್ಲಿ 17 ಪ್ರಕರಣಗಳು ದಾಖಲಾಗಿದ್ದವು.
ಸುಲಿಗೆ ಪ್ರಕರಣಗಳು
2022ರ ಸೆಪ್ಟಂಬರ್‌ನಲ್ಲಿ 163 ಸುಲಿಗೆ ಪ್ರಕರಣಗಳು ವರದಿಯಾಗಿದ್ದರೇ 2023ರ ಸೆಪ್ಟಂಬರ್‌ನಲ್ಲಿ 170 ಪ್ರಕರಣಗಳು ದಾಖಲಾಗಿವೆ. 2023ರ ಆಗಸ್ಟ್‌ನಲ್ಲಿ 198 ಪ್ರಕರಣಗಳು ದಾಖಲಾಗಿದ್ದವು.
ಕಳ್ಳತನ ಪ್ರಕರಣಗಳು
2022ರ ಸೆಪ್ಟಂಬರ್‌ನಲ್ಲಿ 2,101 ಕಳ್ಳತನ ಪ್ರಕರಣಗಳು ದಾಖಲಾಗಿದ್ದರೇ 2023ರ ಸೆಪ್ಟಂಬರ್‌ನಲ್ಲಿ 2,758 ಪ್ರಕರಣಗಳು ವರದಿಯಾಗಿವೆ.
ಗಲಭೆ ಪ್ರಕರಣಗಳು
20224 ಸೆಪ್ಟಂಬರ್‌ನಲ್ಲಿ 285 ಗಲಭೆ ಪ್ರಕರಣಗಳಿದ್ದರೇ 2023ರ ಸೆಪ್ಟಂಬರ್‌ನಲ್ಲಿ 332 ಗಲಭೆ ಪ್ರಕರಣಗಳು ವರದಿಯಾಗಿವೆ. ಆಗಸ್ಟ್‌ನಲ್ಲಿ 333 ಪ್ರಕರಣಗಳು ದಾಖಲಾಗಿದ್ದವು.
ಅತ್ಯಾಚಾರ ಪ್ರಕರಣಗಳು
2022ರ ಸೆಪ್ಟಂಬರ್‌ನಲ್ಲಿ 46 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೇ 2023ರ ಸೆಪ್ಟಂಬರ್‌ನಲ್ಲಿ 51 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಆಗಸ್ಟ್‌ನಲ್ಲಿ 13 ಪ್ರಕರಣಗಳು ದಾಖಲಾಗಿದ್ದವು.
ಪೋಕ್ಸೋ ಪ್ರಕರಣಗಳು
2022ರ ಸೆಪ್ಟಂಬರ್‌ನಲ್ಲಿ 224 ಪ್ರಕರಣಗಳಿದ್ದರೇ 2023ರ ಸೆಪ್ಟಂಬರ್‌ನಲ್ಲಿ 269 ಪ್ರಕರಣಗಳು ವರದಿಯಾಗಿವೆ. ಆಗಸ್ಟ್‌ನಲ್ಲಿ 377 ಪ್ರಕರಣಗಳು ದಾಖಲಾಗಿದ್ದವು.
ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು
2022ರ ಸೆಪ್ಟಂಬರ್‌ನಲ್ಲಿ 164 ಪ್ರಕರಣಗಳಿದ್ದವು. 2023ರ ಸೆಪ್ಟಂಬರ್‌ನಲ್ಲಿ 202 ಪ್ರಕರಣಗಳು ವರದಿಯಾಗಿವೆ. ಆಗಸ್ಟ್‌ನಲ್ಲಿ 211 ಪ್ರಕರಣಗಳು ದಾಖಲಾಗಿದ್ದವು.
ಸೈಬರ್ ಅಪರಾಧ ಪ್ರಕರಣಗಳು
2022ರ ಸೆಪ್ಟಂಬರ್‌ನಲ್ಲಿ 1,073 ಪ್ರಕರಣಗಳು ದಾಖಲಾಗಿದ್ದವು. 2023ರ ಸೆಪ್ಟಂಬರ್‌ನಲ್ಲಿ 2,021 ಪ್ರಕರಣಗಳು ವರದಿಯಾಗಿವೆ. ಆಗಸ್ಟ್‌ನಲ್ಲಿ 2,196 ಪ್ರಕರಣಗಳಿದ್ದವು.
ಆರ್ಥಿಕ ಅಪರಾಧ
2022ರ ಸೆಪ್ಟಂಬರ್ ಅಂತ್ಯಕ್ಕೆ 575 ಪ್ರಕರಣಗಳು ಇದ್ದವು. 2023ರ ಸೆಪ್ಟಂಬರ್‌ನಲ್ಲಿ 677 ಪ್ರಕರಣಗಳು ದಾಖಲಾಗಿವೆ. ಆಗಸ್ಟ್‌ನಲ್ಲಿ 782 ಪ್ರಕರಣಗಳೊ ವರದಿಯಾಗಿವೆ.
ಮೋಟಾರು ವಾಹನ ಕಳ್ಳತನ
2022ರ ಸೆಪ್ಟಂಬರ್‌ನಲ್ಲಿ 943 ಪ್ರಕರಣಗಳಿದ್ದರೇ 2023ರ ಸೆಪ್ಟಂಬರ್‌ನಲ್ಲಿ 1,154 ಪ್ರಕರಣಗಳು ವರದಿಯಾಗಿವೆ. ಆಗಸ್ಟ್‌ನಲ್ಲಿ 1,504 ಪ್ರಕರಣಗಳಿದ್ದವು.
ದರೋಡೆ, ದಲಿತರ ಮೇಲೆ ದೌರ್ಜನ್ಯ, ಕಳ್ಳತನ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ; ಅಪರಾಧ ಸಮೀಕ್ಷೆಯಲ್ಲಿ ಬಹಿರಂಗ
ಹಿಂದಿನ ಬಿಜೆಪಿಸರ್ಕಾರದ ಅವಧಿಯಲ್ಲಿಯೂ ಕಾನೂನು ಸುವ್ಯವಸ್ಥೆಯೂ ಹದಗೆಟ್ಟಿತ್ತು.
ಮೂರು ವರ್ಷಗಳಲ್ಲಿ ಮಕ್ಕಳೂ ಸೇರಿ 6,804 ಗಂಡಸರು ಮತ್ತು ಮಹಿಳೆಯರು ನಾಪತ್ತೆ; ಪತ್ತೆ ಹಚ್ಚುವಲ್ಲಿ ವಿಫಲ
ಅಲ್ಲದೇ ಲೈಂಗಿಕ ಹಿಂಸೆ ಪ್ರಕರಣಗಳ ಸಂಖ್ಯೆಯೂ ದುಪ್ಪಟ್ಟಾಗಿತ್ತು.
3 ವರ್ಷದಲ್ಲಿ 15,769 ಲೈಂಗಿಕ ಹಿಂಸೆ, 8,333 ಪೋಕ್ಸೋ, 1,606 ಅತ್ಯಾಚಾರ, 880 ಮಹಿಳೆಯರ ಅಕ್ರಮ ಸಾಗಾಣಿಕೆ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಪರಾಧಗಳ ಸಂಖ್ಯೆ ಇಳಿಮುಖವಾಗಲಿದೆ ಎಂದು ಹೇಳಲಾಗಿತ್ತು. ಆದರೀಗ ಅಂಕಿ ಸಂಖ್ಯೆಗಳನ್ನು ತುಲನೆ ಮಾಡಿದಾಗ ಹಿಂದಿನ ಸರ್ಕಾರದ 4 ತಿಂಗಳ ಅವಧಿಗೂ ಮತ್ತು ಈಗಿನ ಸರ್ಕಾರದ 4 ತಿಂಗಳ ಅವಧಿಯಲ್ಲಿ ದಾಖಲಾಗಿರುವ ಅಪರಾಧ ಪ್ರಕರಣಗಳು ಸಂಖ್ಯೆಯಲ್ಲಿ ಹೆಚ್ಚಳ ಕಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.