Saturday | March 21, 2026 |

ಅಲ್ಪಸಂಖ್ಯಾತರ ಫಲಾನುಭವಿಗಳಿಂದ 714.13 ಕೋಟಿ ಬಾಕಿ; ಬಡ್ಡಿ ಮನ್ನಾಕ್ಕೆ ಮುಂದಾದ ಸರ್ಕಾರ

Support THE-FILE

spot_img

ಬೆಂಗಳೂರು; ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ವಿವಿಧ ಯೋಜನೆಗಳಲ್ಲಿ ಒಟ್ಟಾರೆ 1.94 ಲಕ್ಷ ಫಲಾನುಭವಿಗಳು ಪಡೆದಿದ್ದ 800.59 ಕೋಟಿ ಸಾಲದ ಸಂಪುರ್ಣ ಮೊತ್ತವನ್ನು ಬಡ್ಡಿ ರಹಿತವಾಗಿ ಮರು ಪಾವತಿಸಲು ಒಟಿಎಸ್‌ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿದೆ. ಈ ಮೂಲಕ 1.94 ಲಕ್ಷ ಫಲಾನುಭವಿಗಳಿಗೆ ಬಡ್ಡಿ ಮನ್ನಾ ಭಾಗ್ಯವನ್ನೂ ಕರುಣಿಸಲಿದೆ.

 

ವಿವಿಧ ಯೋಜನೆಗಳಡಿಯಲ್ಲಿ ನೀಡಿರುವ ಸಾಲಕ್ಕೆ ಸಂಬಂಧಿಸಿದ ಬಡ್ಡಿ ಮನ್ನಾ ಮಾಡಿದಲ್ಲಿ ಇನ್ನಿತರೆ ನಿಗಮಗಳಿಗೂ ಇದೊಂದು  ಪೂರ್ವ ನಿದರ್ಶನವಾಗಲಿದೆ ಎಂದು ಆರ್ಥಿಕ ಇಲಾಖೆ ಹೇಳಿದ್ದರೂ ಸಹ ಈ ಪ್ರಸ್ತಾವವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿದೆ.

 

ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು  ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ನಿರತವಾಗಿದೆ ಎಂದು ಪ್ರತಿಪಕ್ಷಗಳು ಪದೇ ಪದೇ ಆರೋಪಿಸುತ್ತಲೇ ಬಂದಿವೆ. ಈ ನಡುವೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಸಾಲ ಪಡೆದಿದ್ದ 1.94 ಲಕ್ಷ ಫಲಾನುಭವಿಗಳಿಗೆ ಒಂದಾವರ್ತಿ ತೀರುವಳಿ ಯೋಜನೆ (ಒಟಿಎಸ್)ಗೆ ಅನುಮೋದನೆ ಕೋರಿ ಸಚಿವ ಸಂಪುಟಕ್ಕೆ ಕಡತ ಮಂಡಿಸಿರುವುದು, ಪ್ರತಿಪಕ್ಷಗಳ ಕೈಗೆ ಮತ್ತೊಂದು ಅಸ್ತ್ರವನ್ನು ನೀಡಿದಂತಾಗಿದೆ.

 

ಈ ಕುರಿತು ಇಂದು ಸಂಜೆ 6ಕ್ಕೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ.

 

 

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಈ ಸಂಬಂಧ ಸಲ್ಲಿಸಿರುವ ಸಚಿವ ಸಂಪುಟ ಟಿಪ್ಪಣಿಯ ರಹಸ್ಯ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

 

 

800 ಕೋಟಿ ಸಾಲ ವಿತರಣೆ

 

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2013-14ರಿಂದ 2018-19 ರ ಅವಧಿಯಲ್ಲಿ ಶಿಕ್ಷಣ, ಅರಿವು, ಶ್ರಮಶಕ್ತಿ, ಕಿರು ಸಾಲ, ಪಶು ಸಂಗೋಪನೆ, ಭೂ ಖರೀದಿ, ಸಿಲ್ಕ್ ಲೋನ್, ಕ್ರಾಫ್ಟ್‌ ಲೋನ್, ಸ್ವಾವಲಂಬನ, ವಸತಿ ಉದ್ದೇಶಕ್ಕೆ ಸಾಲ ವಿತರಿಸಿತ್ತು. ಈ ಯೋಜನೆಯಡಿಯಲ್ಲಿ 1,94,105 ಮಂದಿ ಫಲಾನುಭವಿಗಳಿಗೆ ನಿಗಮವು  ಒಟ್ಟಾರೆ 800.59 ಕೋಟಿಯಷ್ಟು ಸಾಲ ನೀಡಿತ್ತು.  ಆದರೆ ಈ ಫಲಾನುಭವಿಗಳು ಸಾಲವನ್ನು ಪೂರ್ಣ ಪ್ರಮಾಣದಲ್ಲಿ ಮರು ಪಾವತಿಸುವಲ್ಲಿ ವಿಫಲರಾಗಿದ್ದರು.

 

ಹೀಗಾಗಿ 1.94 ಲಕ್ಷ ಸಂಖ್ಯೆ ಫಲಾನುಭವಿಗಳು ಪಡೆದಿದ್ದ 800.59 ಕೋಟಿ ಸಾಲದ ಮೊತ್ತವನ್ನು ಮರುಪಾವತಿಸಲು ಒಂದಾವರ್ತಿ ತೀರುವಳಿ ಯೋಜನೆಯನ್ನು (ಒಟಿಎಸ್) ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಇಲಾಖೆಯು ಪ್ರಸ್ತಾವಿಸಿರುವುದು ಸಚಿವ ಸಂಪುಟ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

 

 

2013-14ರಿಂದ 2018-19ರವರೆಗೆ ಉದ್ಯಮ ಮತ್ತು ಶಿಕ್ಷಣಕ್ಕಾಗಿ 1,387 ಮಂದಿ 65.94 ಕೋಟಿ ಸಾಲ ಪಡೆದಿದ್ದರು. ಅರಿವು ಸಾಲ ಯೋಜನೆಯಡಿಯಲ್ಲಿ 1,07, 832 ಮಂದಿ 441.47 ಕೋಟಿ ರುಪಾಯಿ, ಶ್ರಮ ಶಕ್ತಿ ಸಾಲ ಯೋಜನೆಯಡಿ 63,775 ಮಂದಿಗೆ 159.43 ಕೋಟಿ ರು, ಕಿರು ಸಾಲ (ಸಂಘ) ಅಡಿಯಲ್ಲಿ 3,316 ಮಂದಿ 66.31 ಕೋಟಿ, ಪಶು ಸಂಗೋಪನೆಗೆ 2,743 ಮಂದಿಗೆ 6.30 ಕೋಟಿ, ಫಾರ್ಮರ್ಸ್‌ ಯೋಜನೆಗೆ 211 ಫಲಾನುಭವಿಗಳಿಗೆ 69.50 ಲಕ್ಷ, ಭೂಮಿ  ಖರೀದಿಸಲು 213 ಮಂದಿಗೆ 8.13 ಕೋಟಿ, ಸಿಲ್ಕ್ ಲೋನ್ ಅಡಿಯಲ್ಲಿ 269 ಮಂದಿಗೆ 1.34 ಕೋಟಿ, ಕ್ರಾಫ್ಟ್‌ ಲೋನ್‌ಗೆ 149 ಮಂದಿಗೆ 1.49 ಕೋಟಿ, ಸ್ವಾವಲಂಬನ ಯೋಜನೆಗೆ 13,187 ಮಂದಿಗೆ 39.22 ಕೋಟಿ, ವಸತಿ ಉದ್ದೇಶಕ್ಕೆ 1,023 ಮಂದಿಗೆ 10.23 ಕೋಟಿ ರು ಸೇರಿ ಒಟ್ಟಾರೆ 800.59 ಕೋಟಿಯಷ್ಟು ಸಾಲದ ಮೊತ್ತವನ್ನು ಬಿಡುಗಡೆ ಮಾಡಿತ್ತು.

 

 

ವಿವಿಧ ಯೋಜನೆಗಳಲ್ಲಿ ಸಾಲ ಪಡೆದಿದ್ದ ಫಲಾನುಭವಿಗಳು ಪೂರ್ಣ ಪ್ರಮಾಣದಲ್ಲಿ ಸಾಲವನ್ನು ವಿತರಣೆ ಮಾಡಿರಲಿಲ್ಲ. ಹೀಗಾಗಿ ಫಲಾನುಭವಿಗಳು ಸಂಪೂರ್ಣ ಸಾಲದ ಮೊತ್ತವನ್ನು ಬಡ್ಡಿ ರಹಿತವಾಗಿ ಪಾವತಿಸಲು ಯೋಜನೆ ರೂಪಿಸಿದೆ. ಈ ಕುರಿತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2024ರ ಅಕ್ಟೋಬರ್‍‌ 9ರಂದು ಸಭೆ ನಡೆಸಿತ್ತು. ಈ ಸಭೆಯಲ್ಲಿ ನಿರ್ದೇಶಕ ಆಡಳಿತ ಮಂಡಳಿಯ ಸಭೆಯಲ್ಲಿ ಒಂದಾವರ್ತಿ ತೀರುವಳಿ ಯೋಜನೆ (ಒಟಿಎಸ್‌) ಯೋಜನೆಗೆ ಅನುಮೋದನೆ ದೊರತಿರುವುದು ಸಚಿವ ಸಂಪುಟದ ರಹಸ್ಯ ಹಾಳೆಗಳಿಂದ ಗೊತ್ತಾಗಿದೆ.

 

ವಸೂಲಾಗಿಲ್ಲ  714.13 ಕೋಟಿ 

 

ವಿತರಣೆಯಾಗಿದ್ದ ಒಟ್ಟಾರೆ 800.59 ಕೋಟಿ ರುಪಾಯಿ ಪೈಕಿ ಸಾಲದ ಅಸಲು 86.46 ಕೋಟಿ ಮತ್ತು ಬಡ್ಡಿ ಮೊತ್ತವಾಗಿರುವ 11.72 ಕೋಟಿ ಸೇರಿ ಒಟ್ಟಾರೆ 98.18 ಕೋಟಿ 49 ಲಕ್ಷ ರುಪಾಯಿಗಳನ್ನಷ್ಟೇ ವಸೂಲು ಮಾಡಿತ್ತು. ಇನ್ನುಳಿದ 714.13 ಕೋಟಿ 66 ಲಕ್ಷ ರುಪಾಯಿ ವಸೂಲು ಮಾಡುವಲ್ಲಿ ನಿಗಮವು ವಿಫಲವಾಗಿತ್ತು. ಹೀಗಾಗಿ ಈ ಸಾಲಕ್ಕೆ ಬಡ್ಡಿ ರಹಿತವಾಗಿ ವಸೂಲು ಮಾಡಲು ಒಟಿಎಸ್‌ ಯೋಜನೆ ಅನುಷ್ಠಾನಗೊಳಿಸಲು ನಿಗಮವು ಸರ್ಕಾರದ ಅನುಮೋದನೆಗೆ ಪ್ರಸ್ತಾವ ಸಲ್ಲಿಸಿರುವುದು ತಿಳಿದು ಬಂದಿದೆ.

 

 

2013-14ರಿಂದ 2018-19ರವರೆಗೆ ಉದ್ಯಮ ಮತ್ತು ಶಿಕ್ಷಣಕ್ಕಾಗಿ 1,387 ಮಂದಿ 65.94 ಕೋಟಿ ಸಾಲ ಪಡೆದಿದ್ದರು. ಈ ಪೈಕಿ ಅಸಲು ಮೊತತ 10.69 ಕೋಟಿ ಮತ್ತು ಬಡ್ಡಿ ಮೊತ್ತವಾದ 2.40 ಕೋಟಿ ಸೇರಿ ಒಟ್ಟಾರೆ 13.10 ಕೋಟಿ ಮಾತ್ರ ವಸೂಲು ಮಾಡಿತ್ತು. ಬಾಕಿ 55.25 ಕೋಟಿ ವಸೂಲು ಮಾಡಿರಲಿಲ್ಲ.

 

ಹಾಗೆಯೇ ಅರಿವು ಸಾಲ ಯೋಜನೆಯಡಿಯಲ್ಲಿ 1,07, 832 ಮಂದಿಗೆ ವಿತರಿಸಿದ್ದ  441.47 ಕೋಟಿ ರುಪಾಯಿ ಸಾಲ ಮೊತ್ತದ  ಪೈಕಿ 30.30 ಕೋಟಿ ಅಸಲು ಮತ್ತು 5.14 ಕೋಟಿ 63 ಲಕ್ಷ ಬಡ್ಡಿ ಹಣ ಸೇರಿ ಒಟ್ಟಾರೆ 35.44 ಕೋಟಿ 96 ಲಕ್ಷ ರುಪಾಯಿ ವಸೂಲಾಗಿತ್ತು. ಬಾಕಿ ಇದ್ದ   411.17 ಕೋಟಿ 19 ಲಕ್ಷ ವಸೂಲಾಗಿಲ್ಲ.

 

ಶ್ರಮ ಶಕ್ತಿ ಸಾಲ ಯೋಜನೆಯಡಿ 63,775 ಮಂದಿಗೆ ಬಿಡುಗಡೆ ಮಾಡಿದ್ದ  159.43 ಕೋಟಿ ರು ಸಾಲದ ಮೊತ್ತ  ಪೈಕಿ 16.64 ಕೋಟಿ 77 ಲಕ್ಷ ರುಪಾಯಿ ಅಸಲು ಮತ್ತು 1.48 ಕೋಟಿ 27 ಲಕ್ಷ ಬಡ್ಡಿ ಮೊತ್ತ ಸೇರಿ 18.13 ಕೋಟಿ 04 ಲಕ್ಷ ವಸೂಲಾಗಿತ್ತು. ವಸೂಲಾತಿಗೆ ಇನ್ನೂ 142.78 ಕೋಟಿ 91 ಲಕ್ಷ ರು ಬಾಕಿ ಇದೆ.

 

ಕಿರು ಸಾಲ (ಸಂಘ) ಅಡಿಯಲ್ಲಿ 3,316 ಮಂದಿ 66.31 ಕೋಟಿ ರು ವಿತರಿಸಲಾಗಿತ್ತು. ಈ ಪೈಕಿ 20.86 ಕೋಟಿ 39 ಲಕ್ಷ ರು ಅಸಲು ಮತ್ತು 1.65 ಕೋಟಿ 53 ಲಕ್ಷ ಬಡ್ಡಿ ಸೇರಿ 22.51 ಕೋಟಿ 92 ಲಕ್ಷ ವಸೂಲಾಗಿದೆ. ವಸೂಲಾತಿಗೆ 45.45 ಕೋಟಿ 18 ಲಕ್ಷ ರು ವಸೂಲಿಗೆ ಬಾಕಿ ಇರುವುದು ತಿಳಿದು ಬಂದಿದೆ.

 

 

ಪಶು ಸಂಗೋಪನೆಗೆ 2,743 ಮಂದಿಗೆ ವಿತರಿಸಿದ್ದ  6.30 ಕೋಟಿ ಸಾಲ ಮೊತ್ತದ ಪೈಕಿ 3.49 ಕೋಟಿ ಅಸಲು ಮತ್ತು 0.30 ಲಕ್ಷ ಬಡ್ಡಿ ಸೇರಿ 3.79 ಕೋಟಿ ವಸೂಲಾಗಿದೆ. ವಸೂಲಾತಿಗೆ 6.27 ಕೋಟಿ 11 ಲಕ್ಷ ಬಾಕಿ ಇದೆ.  ಫಾರ್ಮರ್ಸ್‌ ಯೋಜನೆಗೆ 211 ಫಲಾನುಭವಿಗಳಿಗೆ ವಿತರಿಸಿದ್ದ 69.50 ಲಕ್ಷ ರು ಸಾಲ ಮೊತ್ತದ  ಪೈಕಿ ನಯಾ ಪೈಸೆಯನ್ನೂ ವಸೂಲು ಮಾಡಿಲ್ಲ. ಹೀಗಾಗಿ ವಸೂಲಾತಿಗೆ 69.50 ಲಕ್ಷ ರು ಬಾಕಿ ಇದೆ.  ಭೂಮಿ  ಖರೀದಿಸಲು 213 ಮಂದಿಗೆ 8.13 ಕೋಟಿ ರು ಸಾಲ ವಿತರಿಸಿತ್ತು. ಈ ಯೋಜನೆಯಡಿಯಲ್ಲಿಯೂ ಸಹ ಬಿಡಿಗಾಸೂ ವಸೂಲಾಗಿಲ್ಲ. ಹೀಗಾಗಿ 8.13 ಕೋಟಿ ರುಪಾಯಿ ವಸೂಲಿಗೆ ಬಾಕಿ ಇದೆ.

 

ಸಿಲ್ಕ್ ಲೋನ್ ಅಡಿಯಲ್ಲಿ 269 ಮಂದಿಗೆ 1.34 ಕೋಟಿ ರು ವಿತರಿಸಿತ್ತು. 1.70 ಲಕ್ಷ ಅಸಲು ಮತ್ತು 0.14 ಲಕ್ಷ ಬಡ್ಡಿ ಸೇರಿ 1.84 ಲಕ್ಷ ವಸೂಲಾಗಿದೆ. ವಸೂಲಾತಿಗೆ 1.32 ಕೋಟಿ ರು ಬಾಕಿ ಇದೆ.  ಕ್ರಾಫ್ಟ್‌ ಲೋನ್‌ಗೆ 149 ಮಂದಿಗೆ 1.49 ಕೋಟಿ ಬಿಡುಗಡೆ ಮಾಡಿತ್ತು. ಈ ಪೈಕಿ 4.18 ಲಕ್ಷ ಅಸಲು ಮತ್ತು 0.36 ಲಕ್ಷ ಬಡ್ಡಿ ಸೇರಿ ಒಟ್ಟಾರೆ 4.54 ಲಕ್ಷ ವಸೂಲಾಗಿದೆ. ವಸೂಲಿಗೆ 1.44 ಕೋಟಿ 97 ಲಕ್ಷ ಬಾಕಿ ಇದೆ.

 

ಅದೇ ರೀತಿ  ಸ್ವಾವಲಂಬನ ಯೋಜನೆಗೆ 13,187 ಮಂದಿಗೆ 39.22 ಕೋಟಿ ರು ವಿತರಿಸಿತ್ತು. ಈ ಪೈಕಿ 7.85 ಕೋಟಿ 32 ಲಕ್ಷ ಅಸಲು ಮತ್ತು 1.02 ಕೋಟಿ 36 ಲಕ್ಷ ಬಡ್ಡಿ ಸೇರಿ ಒಟ್ಟಾರೆ 8.87 ಕೋಟಿ ರು ವಸೂಲಾಗಿದೆ. ವಸೂಲಿಗೆ ಇನ್ನೂ 31.36 ಕೋಟಿ 88 ಲಕ್ಷ ಬಾಕಿ ಇದೆ. ಹಾಗೆಯೇ  ವಸತಿ ಉದ್ದೇಶಕ್ಕೆ 1,023 ಮಂದಿಗೆ 10.23 ಕೋಟಿ ರು ವಿತರಿಸಿತ್ತು. ಇದರಲ್ಲಯೂ ನಯಾ ಪೈಸೆಯನ್ನೂ ವಸೂಲು ಮಾಡಿಲ್ಲ. ಹೀಗಾಗಿ 10.23 ಕೋಟಿ ರುಪಾಯಿ  ವಸೂಲಿಗೆ ಬಾಕಿ ಇದೆ.

 

 

ಈ ಎಲ್ಲಾ ಯೋಜನೆಗಳಲ್ಲಿ ವಿತರಿಸಿದ್ದ 800.59 ಕೋಟಿ ರು ಪೈಕಿ 98.18 ಕೋಟಿ 49 ಲಕ್ಷ ರುಪಾಯಿ ಮಾತ್ರ ವಸೂಲಾಗಿದೆ. ವಸೂಲಾತಿಗೆ 714.13 ಕೋಟಿ ರುಪಾಯಿ ಬಾಕಿ ಇದೆ. ಬಾಕಿ ಇರುವ ಈ ಮೊತ್ತ ಮರು ಪಾವತಿಗೆ ಒಟಿಎಸ್‌ ಯೋಜನೆ ಅನುಷ್ಠಾನಗೊಳಿಸಿದರೇ ಸುಮಾರು 150 ಕೋಟಿ ರುಪಾಯಿ ವಸೂಲು ಮಾಡಬಹುದು ಎಂದು ನಿಗಮವು ಲೆಕ್ಕಾಚಾರ ಮಾಡಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಆರ್ಥಿಕ ಪರಿಣಾಮಗಳೇನು?

 

ನಿಗಮವು 2013-14ರಿಂದ 2018-19ರವರೆಗೆ ಸುಮಾರು 800 ಕೋಟಿ 59 ಲಕ್ಷ 66 ಸಾವಿರ ರುಪಾಯಿ ಸಾಲವನ್ನು ಫಲಾನುಭವಿಗಳಿಗೆ ವಿತರಿಸಿದೆ. ಅದರಲ್ಲಿ ಅಸಲು  86.46 ಕೋಟಿ ಹಾಗೂ  ಬಡ್ಡಿ 11.72 ಕೋಟಿ ಸೇರಿ 98.18 ಕೋಟಿ ರು ವಸೂಲಾಗಿದೆ. ವಿತರಿಸಿರುವ 800.59 ಕೋಟಿ ರುನಲ್ಲಿ 714.13 ಕೊಟಿ ರುಪಾಯಿ ಫಲಾನುಭವಿಗಳಿಗೆ ಬಾಕಿ ಉಳಿದಿದೆ. ಒಟಿಎಸ್‌ ಯೋಜನೆಯನ್ನು ಅನುಷ್ಠಾನಗೊಳಿಸಿದಲ್ಲಿ 14 ಕೋಟಿ ಬಡ್ಡಿ ಮನ್ನಾ ಆಗಲಿದೆ. ಇದರಿಂದ 150.00 ಕೋಟಿ ರುಪಾಯಿ ವಸೂಲು ಆಗಬಹುದು ಎಂದು ನಿಗಮವು ಅಂದಾಜಿಸಿದೆ.

 

ಪೂರ್ವ ನಿದರ್ಶನವಾಗಲಿದೆಯೇ?

 

ನಿಗಮದ ಈ ಪ್ರಸ್ತಾವಕ್ಕೆ ಅನುಮತಿ ಕೋರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಆರ್ಥಿಕ ಇಲಾಖೆಯ ಅಭಿಪ್ರಾಯ ಕೋರಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ಒಟಿಎಸ್‌ ಅನುಷ್ಠಾನಗೊಳಿಸಲು ಸಹಮತಿ ವ್ಯಕ್ತಪಡಿಸಿದೆ.

 

 

ಅಲ್ಲದೇ ಈ ಅವಧಿಯಲ್ಲಿ ವಿವಿಧ ಯೋಜನೆಗಳಡಿ ನೀಡಲಾಗಿರುವ ಸಾಲಕ್ಕೆ ಸಂಬಂಧಿಸಿದ ಬಡ್ಡಿ ಮನ್ನಾ ಮಾಡುವುದು ಪೂರ್ವ ನಿದರ್ಶನವಾಗಲಿದೆ. ಹೀಗಾಗಿ ಒಟಿಎಸ್‌ ಜಾರಿ ಮಾಡುವ ಮೊದಲು ಸಚಿವ ಸಂಪುಟಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದು ಆರ್ಥಿಕ ಇಲಾಖೆಯು ತನ್ನ ಅಭಿಪ್ರಾಯದಲ್ಲಿ ಹೇಳಿತ್ತು.

 

ಸಚಿವ ಬಿ ಝಡ್ ಜಮೀರ್ ಅಹ್ಮದ್‌ ಖಾನ್‌ ಅವರೂ ಸಹ ಇಲಾಖೆಯ ಪ್ರಸ್ತಾವಕ್ಕೆ ಅನುಮೋದಿಸಿರುವುದು ತಿಳಿದು ಬಂದಿದೆ.

 

ಅಲ್ಪಸಂಖ್ಯಾತರಿಗೆ ಸಾಲ ನೀಡಲು ಬ್ಯಾಂಕ್‌ಗಳಿಂದಲೂ ತಾರತಮ್ಯ; ಶೇ.29ರಷ್ಟು ಮಾತ್ರ ಪ್ರಗತಿ

 

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಿಂದಲೂ ವಿವಿಧ ಬ್ಯಾಂಕ್‌ಗಳು ಅಲ್ಪಸಂಖ್ಯಾತರಿಗೆ ಸಾಲ ನೀಡುವಲ್ಲಿ ತಾರತಮ್ಯ ಎಸಗುತ್ತಿದೆ. ಈ ಕುರಿತು ಬ್ಯಾಂಕರ್‍‌ಗಳ ಸಮಾಲೋಚನ ಸಭೆಯಲ್ಲಿಯೂ ಚರ್ಚೆಯಾಗಿತ್ತು. ಈ ಕುರಿತು ದಿ ಫೈಲ್ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

Hot this week

ಬೆಳೆ ಹವಾಮಾನ ನಿಗಾ ಸಭೆ ನಡೆಸಿಲ್ಲ, ಮಾಹಿತಿ ವ್ಯವಸ್ಥೆಯೂ ಇಲ್ಲ; ಸಿಎಜಿಯನ್ನೂ ತಪ್ಪುದಾರಿಗೆಳೆದ ಸರ್ಕಾರ

ಬೆಂಗಳೂರು;  ರಾಜ್ಯದಲ್ಲಿ ಬರ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಬೆಳೆ ಹವಾಮಾನ ನಿಗಾ...

ರಾಡಾರ್ ಸ್ಟ್ರೀಮ್‌ ಗೇಜ್‌, ವೈರ್‍‌ಲೆಸ್‌ ಸಾಧನ ಅಳವಡಿಕೆ; ನಡೆಯದ ತಾಂತ್ರಿಕ ಪರಿಶೀಲನೆ, 3.54 ಕೋಟಿ ವ್ಯರ್ಥ

ಬೆಂಗಳೂರು;  ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹದ ಮುನ್ನೆಚ್ಚರಿಕೆಗಾಗಿ 2.45 ಕೋಟಿ...

ಎಂ ಆರ್ ಸೀತಾರಾಂ ಕುಟುಂಬ ಸದಸ್ಯರ ವಿರುದ್ಧ ಭೂಕಬಳಿಕೆ ಆರೋಪ; ದೂರು ಮರೆಮಾಚಿತ್ತೇ ಕಂದಾಯ ಇಲಾಖೆ?

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಅಕ್ಲೇನಹಳ್ಳಿ...

ನರೇಗಾ ಅಕ್ರಮ; 2 ವರ್ಷದಲ್ಲಿ 105.1 ಕೋಟಿ ದುರುಪಯೋಗ, 12.34 ಕೋಟಿಯಷ್ಟೇ ವಸೂಲು

  ಬೆಂಗಳೂರು; ಕಳೆದ ಮೂರು ವರ್ಷಗಳಲ್ಲಿ  ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 64,806 ಪ್ರಕರಣಗಳಲ್ಲಿ...

ಚೆಮನೂರು ಬ್ಲಾಕ್‌ನಲ್ಲಿ ಗಣಿಗಾರಿಕೆ; ಅದಾನಿ ಸಮೂಹದ ಎಸಿಸಿಗೆ ಲೆಟರ್ ಆಫ್ ಇಂಟೆಂಟ್‌ ಕೊಡಲು ಗಣಿ ಇಲಾಖೆ ಉತ್ಸುಕ!

ಬೆಂಗಳೂರು; ಭವಿಷ್ಯದ ಸರ್ಕಾರಿ ಟೆಂಡರ್, ಹರಾಜು ಮತ್ತು ಗಣಿಗಾರಿಕೆ ಸಂಬಂಧಿತ ಪ್ರಕ್ರಿಯೆಗಳಲ್ಲಿ...

Topics

ಬೆಳೆ ಹವಾಮಾನ ನಿಗಾ ಸಭೆ ನಡೆಸಿಲ್ಲ, ಮಾಹಿತಿ ವ್ಯವಸ್ಥೆಯೂ ಇಲ್ಲ; ಸಿಎಜಿಯನ್ನೂ ತಪ್ಪುದಾರಿಗೆಳೆದ ಸರ್ಕಾರ

ಬೆಂಗಳೂರು;  ರಾಜ್ಯದಲ್ಲಿ ಬರ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಬೆಳೆ ಹವಾಮಾನ ನಿಗಾ...

ರಾಡಾರ್ ಸ್ಟ್ರೀಮ್‌ ಗೇಜ್‌, ವೈರ್‍‌ಲೆಸ್‌ ಸಾಧನ ಅಳವಡಿಕೆ; ನಡೆಯದ ತಾಂತ್ರಿಕ ಪರಿಶೀಲನೆ, 3.54 ಕೋಟಿ ವ್ಯರ್ಥ

ಬೆಂಗಳೂರು;  ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹದ ಮುನ್ನೆಚ್ಚರಿಕೆಗಾಗಿ 2.45 ಕೋಟಿ...

ಎಂ ಆರ್ ಸೀತಾರಾಂ ಕುಟುಂಬ ಸದಸ್ಯರ ವಿರುದ್ಧ ಭೂಕಬಳಿಕೆ ಆರೋಪ; ದೂರು ಮರೆಮಾಚಿತ್ತೇ ಕಂದಾಯ ಇಲಾಖೆ?

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಅಕ್ಲೇನಹಳ್ಳಿ...

ನರೇಗಾ ಅಕ್ರಮ; 2 ವರ್ಷದಲ್ಲಿ 105.1 ಕೋಟಿ ದುರುಪಯೋಗ, 12.34 ಕೋಟಿಯಷ್ಟೇ ವಸೂಲು

  ಬೆಂಗಳೂರು; ಕಳೆದ ಮೂರು ವರ್ಷಗಳಲ್ಲಿ  ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 64,806 ಪ್ರಕರಣಗಳಲ್ಲಿ...

ಚೆಮನೂರು ಬ್ಲಾಕ್‌ನಲ್ಲಿ ಗಣಿಗಾರಿಕೆ; ಅದಾನಿ ಸಮೂಹದ ಎಸಿಸಿಗೆ ಲೆಟರ್ ಆಫ್ ಇಂಟೆಂಟ್‌ ಕೊಡಲು ಗಣಿ ಇಲಾಖೆ ಉತ್ಸುಕ!

ಬೆಂಗಳೂರು; ಭವಿಷ್ಯದ ಸರ್ಕಾರಿ ಟೆಂಡರ್, ಹರಾಜು ಮತ್ತು ಗಣಿಗಾರಿಕೆ ಸಂಬಂಧಿತ ಪ್ರಕ್ರಿಯೆಗಳಲ್ಲಿ...

ರೋಹಿತ್ ವೇಮುಲ ಕಾಯ್ದೆ; ವ್ಯಾಖ್ಯಾನಗಳು ಅಸ್ಪಷ್ಟ, ಕಾನೂನು ಬಲವಿಲ್ಲ, ವಿಧೇಯಕವೇ ಅಪೂರ್ಣ

ಬೆಂಗಳೂರು; ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಯಾರೊಬ್ಬರೂ ಜಾತಿ ಆಧಾರದಲ್ಲಿ ತಾರತಮ್ಯ ಎದುರಿಸಬಾರದು...

ಗ್ರಾಮಠಾಣ ಜಮೀನು ಅದಲು-ಬದಲು; ಆರ್ಥಿಕ ಇಲಾಖೆ ಆಕ್ಷೇಪ ಬದಿಗೊತ್ತಿ ಎಂ ಆರ್ ಸೀತಾರಾಂ ಕುಟುಂಬದ ಬೆನ್ನಿಗೆ ನಿಂತ ಸರ್ಕಾರ

ಬೆಂಗಳೂರು; ಸರ್ಕಾರಿ ಭೂಮಿಗೆ ರಸ್ತೆಯ ಸಂಪರ್ಕ ಹೊಂದಿಲ್ಲದಿರುವ, ರಸ್ತೆ ಸಂಪರ್ಕ ಕಲ್ಪಿಸದೇ...

ಅದಾನಿ ಎಸಿಸಿ ಲಿಮಿಟೆಡ್‌ನಿಂದ ಅಕ್ರಮ ಗಣಿಗಾರಿಕೆ; ನಿರ್ದೇಶಕರು, ಅಧಿಕಾರಿಗಳ ವಿರುದ್ಧ ಲೋಕಾ ತನಿಖೆಗೆ ಶಿಫಾರಸ್ಸು, ಕಡತಕ್ಕೆ ಧೂಳು

ಬೆಂಗಳೂರು;  ಕಲ್ಬುರ್ಗಿಯ ವಾಡಿಯಲ್ಲಿ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್ ಪ್ರೈವೈಟ್ ಲಿಮಿಟೆಡ್...

Related Articles

Popular Categories

error: Content is protected !!