ಕೇಂದ್ರ ಪುರಸ್ಕೃತ ಯೋಜನೆ; 22,472.25 ಕೋಟಿ ರು ಬಾಕಿ ಉಳಿಸಿಕೊಂಡ ಕೇಂದ್ರ, ರಾಜ್ಯ ಸರ್ಕಾರ

ಬೆಂಗಳೂರು; 2024-25ನೇ ಸಾಲಿಗೆ ಸಂಬಂಧಿಸಿದಂತೆ ಕೇಂದ್ರ ಪುರಸ್ಕೃತ ಯೋಜನೆಗಳಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಒದಗಿಸಿಕೊಂಡಿದ್ದ ಒಟ್ಟಾರೆ 56,545.97 ಕೋಟಿ ರು ಪೈಕಿ ಜನವರಿ ಅಂತ್ಯಕ್ಕೆ 34,073.72 ಕೋಟಿ ರು ಬಿಡುಗಡೆ ಮಾಡಿದೆ. ಬಿಡುಗಡೆಗೆ ಇನ್ನು 22,472.25 ಕೋಟಿ ರು ಬಾಕಿ ಇರಿಸಿಕೊಂಡಿರುವುದು ಬಹಿರಂಗವಾಗಿದೆ.

 

ಬಿಡುಗಡೆಯಾಗಿದ್ದ ಅನುದಾನದಲ್ಲಿ ಒಟ್ಟಾರೆ 35,053.51 ಕೋಟಿ ರು ವೆಚ್ಚವಾಗಿದೆ. ವಿಶೇಷವೆಂದರೇ ಬಿಡುಗಡೆಯಾಗಿದ್ದ ಅನುದಾನಕ್ಕಿಂತಲೂ  ಹೆಚ್ಚುವರಿಯಾಗಿ 979.79 ಕೋಟಿ ರು ಖರ್ಚು ಮಾಡಿದೆ.

 

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅಧ್ಯಕ್ಷತೆಯಲ್ಲಿ  ಫೆ.15ರಂದು ನಡೆಯಲಿರುವ ಕೆಡಿಪಿ ಸಭೆಗೆ ಇಲಾಖೆಗಳು ಮಂಡಿಸಿರುವ ಅಂಕಿ ಅಂಶಗಳಲ್ಲಿ ಈ ವಿವರಗಳಿವೆ. ಇಲಾಖೆಗಳು ನೀಡಿರುವ ಅಂಕಿ ಅಂಶಗಳ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಕೇಂದ್ರ  ಸರ್ಕಾರವು ತನ್ನ ಪಾಲಿನ 25,208.47 ಕೋಟಿ ರು ಪೈಕಿ ಜನವರಿ ಅಂತ್ಯಕ್ಕೆ 15,855.95 ಕೋಟಿ ರು ಬಿಡುಗಡೆ ಮಾಡಿದೆ. ಹಂಚಿಕೆಯಾಗಿರುವ ಅನುದಾನದ ಪ್ರಕಾರ ಬಿಡುಗಡೆಗೆ  9,352.52 ಕೋಟಿ ರು ಇದೆ.  ರಾಜ್ಯ ಸರ್ಕಾರವು ತನ್ನ ಪಾಲಿನ 22,452.50 ಕೋಟಿ ರು ನಲ್ಲಿ 18,217.77 ಕೋಟಿ ರು ಬಿಡುಗಡೆ ಮಾಡಿದೆ. ಇದರ ಪ್ರಕಾರ  ಇನ್ನೂ 4,234.73 ಕೋಟಿ ರು ಬಾಕಿ ಇದೆ.

 

2024-25ನೇ ಸಾಲಿಗೆ ಕೇಂದ್ರ ಪುರಸ್ಕೃತ ಯೋಜನೆಗಳಡಿಯಲ್ಲಿ ಕೇಂದ್ರ ಸರ್ಕಾರವು 25,208.47 ಕೋಟಿ ರು, ರಾಜ್ಯ ಸರ್ಕಾರವು 22,452.50 ಕೋಟಿ ರು, ಪ್ರಾರಂಭಿಕ ಶಿಲ್ಕು 8,885.00 ಕೋಟಿ ರು ಸೇರಿ ಒಟ್ಟಾರೆ 56,545.97 ಕೋಟಿ ರು ಅನುದಾನ ಒದಗಿಸಿಕೊಂಡಿತ್ತು.

 

ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರವು 480.00 ಕೋಟಿ ರು, ರಾಜ್ಯ ಸರ್ಕಾರವು 1,872.96 ಕೋಟಿ ರು ಅನುದಾನ ಒದಗಿಸಿಕೊಂಡಿತ್ತು. ಜನವರಿ ಅಂತ್ಯಕ್ಕೆ ಕೇಂದ್ರ ಸರ್ಕಾರವು ತನ್ನ ಪಾಲಿನ ಅನುದಾನದಲ್ಲಿ 283.66 ಕೋಟಿ, ರಾಜ್ಯ ಸರ್ಕಾರವು ತನ್ನ ಪಾಲಿನ ಅನುದಾನದಲ್ಲಿ 1,003.61 ಕೋಟಿ ರು ಬಿಡುಗಡೆ ಮಾಡಿದೆ. ಬಿಡುಗಡೆಗೆ ಇನ್ನೂ 1,390.76 ಕೋಟಿ ರು ಬಾಕಿ ಉಳಿಸಿಕೊಂಡಿವೆ.

 

 

ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರವು 4,950.00 ಕೋಟಿ ರು., ಕೇಂದ್ರ ಸರ್ಕಾರವು 1,999.99 ಕೋಟಿ ರು ಅನುದಾನ ಒದಗಿಸಿಕೊಂಡಿತ್ತು. ಈ ಪೈಕಿ ರಾಜ್ಯ ಸರ್ಕಾರವು 4,450.00 ಕೋಟಿ ರು, ಕೇಂದ್ರವು 570.66 ಕೋಟಿ ರು ಬಿಡುಗಡೆ ಮಾಡಿದೆ. ಬಿಡುಗಡೆಗೆ ಇನ್ನೂ 4,930.62 ಕೋಟಿ ರು ಬಾಕಿ ಇರಿಸಿಕೊಂಡಿದೆ. ಹಾಗೆಯೇ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರವು 718.04 ಕೋಟಿ , ರಾಜ್ಯವು 531.96 ಕೋಟಿ ರು ಅನುದಾನ ಒದಗಿಸಿಕೊಂಡಿದ್ದರ ಪೈಕಿ ಕೇಂದ್ರವು ನಯಾ ಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಆದರೆ ರಾಜ್ಯ ಸರ್ಕಾರವು ಈ ಯೋಜನೆಗೆ 531.96 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ. ಈ ಅನುದಾನವನ್ನು ಪೂರ್ಣವಾಗಿ ವೆಚ್ಚ ಮಾಡಿರುವುದು ತಿಳಿದು ಬಂದಿದೆ.

 

ಪ್ರಧಾನಮಂತ್ರಿ ಆವಾಜ್‌ ಯೋಜನೆ (ನಗರ) ರಾಜ್ಯ ಸರ್ಕಾರವು ಅನುದಾನವನ್ನೇ ಒದಗಿಸಿಕೊಂಡಿಲ್ಲ. ಕೇಂದ್ರ ಸರ್ಕಾರವು ಈ ಯೋಜನೆಗೆ 400.00 ಕೋಟಿ ರು.ಗಳನ್ನು ಒದಗಿಸಿಕೊಂಡಿದೆ. ಆದರೆ ನಯಾಪೈಸೆಯನ್ನು ಈ ಯೋಜನೆಗೆ ಜನವರಿ ಅಂತ್ಯವರೆಗೆ ಬಿಡುಗಡೆ ಮಾಡಿಲ್ಲ. ಅದೇ ರೀತಿ ಸ್ವಚ್ಛ ಭಾರತ್ (ನಗರ) ಯೋಜನೆಗೆ ರಾಜ್ಯ ಸರ್ಕಾರವು 300.00 ಕೋಟಿ ರು., ಕೇಂದ್ರವು 300.00 ಕೋಟಿ ರು.ಗಳನ್ನು ಒದಗಿಸಿಕೊಂಡಿದೆ. ಈ ಪೈಕಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಜನವರಿ ಅಂತ್ಯಕ್ಕೆ ಬಿಡಿಗಾಸನ್ನೂ ಬಿಚ್ಚಿಲ್ಲ.

 

 

ವೃದ್ಧಾಪ್ಯ ವಿಶ್ರಾಂತಿ ವೇತನಕ್ಕೆ ರಾಜ್ಯವು 2,223.64 ಕೋಟಿ ರು., ಕೇಂದ್ರವು 271.47 ಕೋಟಿ ರು ಒದಗಿಸಿತ್ತು. ರಾಜ್ಯವು ತನ್ನ ಪಾಲಿನ ಅಷ್ಟೂ ಮೊತ್ತವನ್ನು ಬಿಡುಗಡೆ ಮಾಡಿದೆ. ಆದರೆ ಕೇಂದ್ರವು ನಯಾಪೈಸೆಯನ್ನೂ ನೀಡಿಲ್ಲ. ಸ್ವಚ್ಛ ಭಾರತ್‌ (ಗ್ರಾಮೀಣ) ಯೋಜನೆಗೆ ರಾಜ್ಯವು 152.22 ಕೋಟಿ ರು., ಕೇಂದ್ರವು 215.82 ಕೋಟಿ ರು ಅನುದಾನ ಒದಗಿಸಿದೆ. ಈ ಪೈಕಿ ರಾಜ್ಯವು 66.67  ಕೋಟಿ ರು., ಮತ್ತು ಕೇಂದ್ರವು 100.00 ಕೋಟಿ ರು.ಗಳನ್ನು ಬಿಡುಗಡೆ ಮಾಡಿರುವುದು ಗೊತ್ತಾಗಿದೆ.

 

ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ರಾಜ್ಯವು 1,531.77 ಕೋಟಿ ರು, ಕೇಂದ್ರವು 848.00 ಕೋಟಿ ರು ಅನುದಾನ ಒದಗಿಸಿಕೊಂಡಿದೆ. ಈ ಪೈಕಿ ರಾಜ್ಯವು 1,047.19 ಕೋಟಿ ರು., ಕೇಂದ್ರವು 579.68 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ.

 

ಉಳಿದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಗೆ ಕೇಂದ್ರವು 1,531.92 ಕೋಟಿ ರು, ರಾಜ್ಯವು 4,649.11 ಕೋಟಿ ರು ಅನುದಾನ ಒದಗಿಸಿಕೊಂಡಿದ್ದರ ಪೈಕಿ ಕೇಂದ್ರವು 764.04 ಕೋಟಿ ರು., ರಾಜ್ಯವು 3,570.02 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ. ಆರೋಗ್ಯ ಇಲಾಖೆಗೆ ರಾಜ್ಯವು 900.32 ಕೋಟಿ ರು., ಕೇಂದ್ರವು 905.68 ಕೋಟಿ ರು. ಅನುದಾನ ಒದಗಿಸಿಕೊಂಡಿತ್ತು. ಈ ಪೈಕಿ ರಾಜ್ಯವು 715.62 ಕೋಟಿ ರು., ಕೇಂದ್ರವು 839.47 ಕೋಟಿ ರು.ಗಳನ್ನು ಬಿಡುಗಡೆ ಮಾಡಿರುವುದು ತಿಳಿದು ಬಂದಿದೆ.

 

ಮಧ್ಯಾಹ್ನದ ಬಿಸಿಯೂಟ, ಪ್ರಧಾನ ಮಂತ್ರಿ ಮಾತೃ ವಂದನಾ, ಪೋಷಣ ಅಭಿಯಾನ, ಪೂರಕ ಪೌಷ್ಠಿಕಾಂಶ, ಭದ್ರಾ ಮೇಲ್ದಂಡೆ ಯೋಜನೆ, ವೃದ್ಧಾಪ್ಯ ವಿಶ್ರಾಂತಿ, ವಿಧವಾ ವೇತನದಂತಹ ಪ್ರಮುಖ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆ 2,556.19 ಕೋಟಿ ರು. ಅನುದಾನ ನಿಗದಿಪಡಿಸಿಕೊಂಡಿರುವ ಕೇಂದ್ರವು ಜುಲೈ ಅಂತ್ಯದವರೆಗೂ ನಯಾ ಪೈಸೆಯನ್ನೂ ಬಿಚ್ಚಿರಲಿಲ್ಲ.

 

ಪ್ರಧಾನ ಮಂತ್ರಿ ಗ್ರಾಮ ಸಡಕ್‌, ವೇಗವರ್ಧಕ ನೀರಾವರಿ ಫಲಾನುಭವ, ಪೂರಕ ಪೌಷ್ಟಿಕಾಂಶ, ಪ್ರಧಾನಮಂತ್ರಿ ಮಾತೃ ವಂದನಾ, ಪೋಷಣ ಅಭಿಯಾನದ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಸಹ 1,053.00 ಕೋಟಿ ರು. ಅನುದಾನ ನಿಗದಿಪಡಿಸಿಕೊಂಡಿತ್ತು. ಆದರೆ ರಾಜ್ಯ ಸರ್ಕಾರವೂ ಸಹ ಜುಲೈ ಅಂತ್ಯದವರೆಗೂ ತನ್ನ ಪಾಲಿನ ಅನುದಾನದಲ್ಲಿ ಒಂದೇ ಒಂದು ಪೈಸೆಯನ್ನು ನೀಡಿರಲಿಲ್ಲ.

ಕೇಂದ್ರ ಪುರಸ್ಕೃತ; 3,609.19 ಕೋಟಿ ರು.ನಲ್ಲಿ ನಯಾಪೈಸೆ ಬಿಚ್ಚದ ಕೇಂದ್ರ, ರಾಜ್ಯ ಸರ್ಕಾರ

 

ಇದರಲ್ಲಿ ಪರಿಶಿಷ್ಟ ಪಂಗಡಳಿಗೆ ಸಂಬಂಧಿಸಿದ ರಾಜ್ಯ ಸರ್ಕಾರವು ಬಿಡಿಗಾಸನ್ನೂ ಹಂಚಿಕೆ ಮಾಡಿಲ್ಲ. ಕೇಂದ್ರ ಸರ್ಕಾರವು 296.27 ಕೋಟಿ ರು. ಹಂಚಿಕೆ ಮಾಡಿದೆ. ಈ ಪೈಕಿ ಜುಲೈ ಅಂತ್ಯಕ್ಕೆ ನಯಾಪೈಸೆಯನ್ನೂ ಬಿಡುಗಡೆ ಮಾಡಿರಲಿಲ್ಲ.

 

ವರ್ಷ ಉರುಳಿದರೂ 122 ಕಾರ್ಯಕ್ರಮಗಳಿಗೆ ಸಿಗದ ಚಾಲನೆ, ಕೇಂದ್ರದಿಂದ ಬಾರದ 8,199 ಕೋಟಿ

ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಕೇಂದ್ರವು ಪೂರ್ಣ ಪ್ರಮಾಣದ ಅನುದಾನ ನೀಡಿರಲಿಲ್ಲ.

 

ಕೇಂದ್ರ ಪುರಸ್ಕೃತ ಯೋಜನೆ; 8 ಇಲಾಖೆಗಳಿಗಿಲ್ಲ ಬಿಡಿಗಾಸು, ಕೇಂದ್ರದಿಂದಲೇ 16,534 ಕೋಟಿ ಬಾಕಿ

ರಾಜ್ಯ ಸರ್ಕಾರವು ಸಹ ಗ್ರಾಮೀಣಾಭಿವೃದ್ದಿ ಇಲಾಖೆಗೆ ನಿಗದಿಪಡಿಸಿರುವ 6,118.39 ಕೋಟಿ ರು. ಪೈಕಿ 531.94 ಕೋಟಿ ರು. ಬಿಡುಗಡೆ ಮಾಡಿದೆ. ಇದೇ ಇಲಾಖೆಯ ಮಹತ್ವದ ಕಾರ್ಯಕ್ರಮವಾದ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಗೆ ರಾಜ್ಯ ಸರ್ಕಾರವು 250.00 ಕೋಟಿ ರು. ನಿಗದಿಪಡಿಸಿದ್ದರೂ ಸಹ ಜುಲೈ ಅಂತ್ಯಕ್ಕೆ ಬಿಡಿಗಾಸೂ ಕೊಟ್ಟಿರಲಿಲ್ಲ.

ಕೇಂದ್ರ ಪುರಸ್ಕೃತ, ಸಾಮಾಜಿಕ ಭದ್ರತೆ ಯೋಜನೆ; 7,997 ಕೋಟಿ ರು. ಖರ್ಚು ಮಾಡದೇ ಬಾಕಿ ಇರಿಸಿದ್ದ ಸರ್ಕಾರ

ಕಂದಾಯ (ವಿಪತ್ತು ನಿರ್ವಹಣೆಗೆ ) ಇಲಾಖೆಯಲ್ಲಿ ವೃದ್ಧಾಪ್ಯ ವಿಶ್ರಾಂತಿ ವೇತನ ಮತ್ತು ನಿರಾಧಾರ ವೇತನ ನೀಡುವ ಬಹುಮುಖ್ಯ ಕಾರ್ಯಕ್ರಮವಿದೆ. ಇದರಲ್ಲಿ ವೃದ್ಧಾಪ್ಯ ವಿಶ್ರಾಂತಿಗೆ ಕೇಂದ್ರ ಸರ್ಕಾರವು 271.47 ಕೋಟಿ ರು., ನಿರಾಧಾರ ವಿಧವಾ ವೇತನಕ್ಕೆಂದು 142.68 ಕೋಟಿ ರು ನಿಗದಿಪಡಿಸಿಕೊಂಡಿದೆ. ಆದರೆ ಜುಲೈ ಅಂತ್ಯದವರೆಗೆ ಶೂನ್ಯ ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರ್ಕಾರವು ಇದೇ ವಿಭಾಗಕ್ಕೆ 1,067.77 ಕೋಟಿ ಮತ್ತು 792.40 ಕೋಟಿ ರು. ಬಿಡುಗಡೆ ಮಾಡಿತ್ತು.

SUPPORT THE FILE

Latest News

Related Posts