ಕೇಂದ್ರ ಪುರಸ್ಕೃತ, ಸಾಮಾಜಿಕ ಭದ್ರತೆ ಯೋಜನೆ; 7,997 ಕೋಟಿ ರು. ಖರ್ಚು ಮಾಡದೇ ಬಾಕಿ ಇರಿಸಿದ್ದ ಸರ್ಕಾರ

ಬೆಂಗಳೂರು; ಕೇಂದ್ರ ಪುರಸ್ಕೃತ ಯೋಜನೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸಂಬಂಧಿಸಿದಂತೆ 2022-23ನೇ ಸಾಲಿನ ಅಂತ್ಯಕ್ಕೆ ಬಿಡುಗಡೆಯಾದ ಅನುದಾನದಲ್ಲೇ ಹಿಂದಿನ ಬಿಜೆಪಿ ಸರ್ಕಾರವು ಖರ್ಚು ಮಾಡದೇ 7,997 ಕೋಟಿ ರು. ಬಾಕಿ ಉಳಿಸಿಕೊಂಡಿತ್ತು ಎಂಬುದು ಇದೀಗ ಬಹಿರಂಗವಾಗಿದೆ.

 

ಕೇಂದ್ರ ಸರ್ಕಾರವು ಮಾರ್ಚ್‌ ತಿಂಗಳ ಅಂತ್ಯದಲ್ಲಿ ಸುಮಾರು 4,156 ಕೋಟಿ ರು. ಅನುದಾನವನ್ನು ಯೋಜನೆಗಳಿಗೆ ಬಿಡುಗಡೆ ಮಾಡಿತ್ತು. ಆದ್ದರಿಂದ 2022-23 ಅಂತ್ಯಕ್ಕೆ ಖರ್ಚಾಗದೇ ಉಳಿದ ಅನುದಾನದ ಮೊತ್ತವೇ ಹೆಚ್ಚಾಗಿರುತ್ತದೆ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರವು ಸದನಕ್ಕೆ ಉತ್ತರ ಒದಗಿಸಿದೆ.

 

2022-23ರಲ್ಲಿ ಕೇಂದ್ರ ಯೋಜನೆಗಳಿಗೆ ಭಾರತ ಸರ್ಕಾರವು ನೇರವಾಗಿ ಅನುಷ್ಠಾನ ಇಲಾಖೆಗಳಿಗೆ 6,739 ಕೋಟಿ ರು. ಜಮೆ ಮಾಡಿದೆ. ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಹೊರತುಪಡಿಸಿ 2022-23ರಲ್ಲಿ ಕೇಂದ್ರದಿಂದ ಹಣಕಾಸು ಆಯೋಗದ ಅನುದಾನ ಹಾಗೂ ಎಸ್‌ಡಿಆರ್‍‌ಎಫ್‌ ಮತ್ತು ಎನ್‌ಡಿಆರ್‍‌ಎಫ್‌ಗೆ ಒಟ್ಟು 4,435 ಕೋಟಿ ರು. ಅನುದಾನ ಬಿಡುಗಡೆಯಾಗಿದೆ ಎಂದು ಸಿದ್ದರಾಮಯ್ಯ ಅವರು ವಿಧಾನ ಪರಿಷತ್‌ನಲ್ಲಿ ಯು ಬಿ ವೆಂಕಟೇಶ್‌ ಅವರಿಗೆ ಉತ್ತರ ಒದಗಿಸಿದ್ದಾರೆ.

 

ಕೇಂದ್ರ ಸರ್ಕಾರವು ಯೋಜನೆಗಳಿಗೆ ನೀಡುವ ಅನುದಾನದಲ್ಲಿ ಖರ್ಚಾಗದೇ ಉಳಿದ ಮೊತ್ತವು ಮುಂದಿನ ಆರ್ಥಿಕ ವರ್ಷದ ಆರಂಭಿಕ ಶುಲ್ಕವಾಗಲಿದೆ. ಈ ಮೊತ್ತವನ್ನ ಕೇಂದ್ರ ಸರ್ಕಾರವು ಹಿಂಪಡೆಯುವುದಿಲ್ಲ. ಬದಲಿಗೆ ಮುಂದಿನ ಆರ್ಥಿಕ ವರ್ಷದಲ್ಲಿ ಕೇಂದ್ರದ ಯೋಜನೆಗಳಿಗೆ ಈ ಅನುದಾನವನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ಒದಗಿಸಿದೆ.

 

ಕೇಂದ್ರದಿಂದ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಆರ್ಥಿಕ ಇಲಾಖೆಯ ವತಿಯಿಂದ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಇಲಾಖೆಗಳೊಂದಿಗ ನಿರಂತರ ಸಭೆಗಳನ್ನು ಮಾಢಿ ಅನುದಾನವನ್ನು ತ್ವರಿತವಾಗಿ ಉಪಯೋಗಿಸಿಕೊಳ್ಳಲು ಸೂಚಿಸಿದೆ.

 

2023-24ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಿಗೆ ನವೆಂಬರ್‍‌ ಅಂತ್ಯಕ್ಕೆ 10,337 ಕೋಟಿ ರು. ಬಿಡುಗಡೆ ಮಾಡಿದೆ. ಆದರೆ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಶೂನ್ಯ ಬಿಡುಗಡೆ ಮಾಡಿದೆ. ಭಾರತ ಸರ್ಕಾರವು ನೇರವಾಗಿ ಅನುಷ್ಠಾನ ಇಲಾಖೆಗಳ ಖಾತೆಗೆ 4,191 ಕೋಟಿ ರು.ಗಳನ್ನು ಜಮೆ ಮಾಡಿದೆ.

 

2018-19ರಲ್ಲಿ 30,406 ಕೋಟಿ (ಕೇಂದ್ರ ಮತ್ತು ರಾಜ್ಯದ ಪಾಲು) 2019-20ರ್‍ಲಿ 30,041 ಕೋಟಿ ರು., 2020-21ರಲ್ಲಿ 30,202 ಕೋಟಿ ರು., 2021-22ರಲ್ಲಿ 36,956 ಕೋಟಿ ರು., 2022-23ರಲ್ಲಿ 30,965 ಕೋಟಿ ರು ಖರ್ಚು ಮಾಡಿದೆ.

 

2018-19ರಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಿಗೆ 9,872 ಕೋಟಿ ರು., ಸಾಮಾಜಿಕ ಭದ್ರತಾ ಯೋಜನೆಗಳಿಗೆ 522 ಕೋಟಿ ರು. ಅನುದಾನ ನೀಡಿತ್ತು. 2019-20ರಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಿಗೆ 11,868 ಕೋಟಿ ರು., ಸಾಮಾಜಿಕ ಭದ್ರತಾ ಯೋಜನೆಗಳಿಗೆ 522 ಕೋಟಿ ರು., 2020-21ರಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಿಗೆ 9,375 ಕೋಟಿ ರು., ಸಾಮಾಜಿಕ ಭದ್ರತಾ ಯೋಜನೆಗಳಿಗೆ 665 ಕೋಟಿ ರು., 2021-22ರಲ್ಲಿ ಕೇಂದ್ರ ಸರ್ಕಾರದ 12,176 ಕೋಟಿ ರು., ಸಾಮಾಜಿಕ ಭದ್ರತಾ ಯೋಜನೆಗಳಿಗೆ 494 ಕೋಟಿ ರು., 2022-23ರಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಿಗೆ 17,960 ಕೋಟಿ ರು., ಸಾಮಾಜಿಕ ಭದ್ರತಾ ಯೋಜನೆಗಳಿಗೆ 447 ಕೋಟಿ ರು. ನೀಡಿದೆ.

 

ಕೇಂದ್ರ ಸರ್ಕಾರವು ಯೋಜನೆಗಳಿಗೆ ಬಾಕಿ ಉಳಿದಿರುವ ಅನುದಾನವನ್ನು ಬಿಡುಗಡೆ ಮಾಡಲು ಸಂಬಂಧಿಸಿದ ಯೋಜನೆಗಳ ಎಸ್‌ಎನ್‌ಎ ಖಾತೆಗಳಲ್ಲಿ ಉಳಿದಿರುವ ಬಾಕಿಯನ್ನು ಖರ್ಚು ಮಾಡುವಂತೆ ಆಡಳಿತ ಇಲಾಖೆಗಳಿಗೆ ಸೂಚಿಸಲಾಗಿದೆ. ಅಲ್ಲದೇ ಆರ್ಥಿಕ ಇಲಾಖೆಯಿಂದ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಆಡಳಿತ ಇಲಾಖೆಗಳೊಂದಿಗೆ ಸಭೆಗಳನ್ನು ನಡೆಸಿದ್ದಾರೆ.

the fil favicon

SUPPORT THE FILE

Latest News

Related Posts