Tuesday | August 25, 2026 |

ಬೇನಾಮಿ ಖಾತೆಗಳಿಗೆ ಲಕ್ಷಾಂತರ ರುಪಾಯಿ ವರ್ಗಾವಣೆ; ಅಂಬೇಡ್ಕರ್‍‌ ಅಭಿವೃದ್ಧಿ ನಿಗಮದಲ್ಲಿ ಭಾರೀ ಅಕ್ರಮ

ಬೆಂಗಳೂರು; ಡಾ ಬಿ ಆರ್‍‌ ಅಂಬೇಡ್ಕರ್‍‌ ಅಭಿವೃದ್ಧಿ ನಿಗಮವು ಜಾರಿಗೊಳಿಸಿರುವ ವಿವಿಧ ಯೋಜನೆಗಳಿಗೆ ಆಯ್ಕೆಯಾಗದ ಫಲಾನುಭವಿಗಳಿಗೆ ಮತ್ತು ಬೇನಾಮಿ ಖಾತೆಗಳಿಗೆ ಅಕ್ರಮವಾಗಿ ಲಕ್ಷಾಂತರ ರುಪಾಯಿ ಹಣ ವರ್ಗಾವಣೆ ಮಾಡಿರುವ ಪ್ರಕರಣವು ಇದೀಗ ಬಹಿರಂಗವಾಗಿದೆ.

 

ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿದ್ದ 94 ಕೋಟಿ ರು.ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಪ್ರಕರಣ ಕುರಿತು ಪ್ರತಿಪಕ್ಷ ಬಿಜೆಪಿ ಬೀದಿಗಿಳಿದೆ. ಇದರ ಬೆನ್ನಲ್ಲೇ ಕೋಟಾ ಶ್ರೀನಿವಾಸ ಪೂಜಾರಿ ಅವರು ಸಚಿವರಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಕುರಿತೂ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದರು.

 

ಇದನ್ನು ಪ್ರತಿರೋಧಿಸಿದ್ದ ಶ್ರೀನಿವಾಸ ಪೂಜಾರಿ ವಿಕಾಸಸೌಧದ ಬಳಿಯ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಮೌನ ಪ್ರತಿಭಟನೆ ನಡೆಸಿದ್ದರು.

 

ಈ ಬೆಳವಣಿಗೆಗಳ ಬೆನ್ನಲ್ಲೇ  ಬಿಜೆಪಿ ಸರ್ಕಾರವು ಅಧಿಕಾರದಲ್ಲಿದ್ದ ಅವಧಿಯಲ್ಲಿಯೇ ಬೇನಾಮಿ ಖಾತೆಗಳಿಗೆ ಲಕ್ಷಾಂತರ ರುಪಾಯಿ ವರ್ಗಾವಣೆ ಆಗಿರುವುದು ಮುನ್ನೆಲೆಗೆ ಬಂದಿದೆ.

 

ಉದ್ಯಮ ಶೀಲತಾ, ಸಮೃದ್ಧಿ, ಗಂಗಾ ಕಲ್ಯಾಣ ಸೇರಿದಂತೆ ಹಲವು ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆ ಮತ್ತು ಆಯ್ಕೆಯಾದ ಫಲಾನುಭವಿಗಳಿಗೆ ನಿಗದಿಪಡಿಸಿದ ಸಹಾಯಧನಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಬಿಡುಗಡೆ ಮಾಡಿರುವುದನ್ನು ಜಾಗೃತ ಕೋಶ ಪತ್ತೆ ಹಚ್ಚಿರುವುದು ಗೊತ್ತಾಗಿದೆ.

 

ನಿಗಮದ ಮೈಸೂರು ಜಿಲ್ಲೆಯ ಕಚೇರಿ ವ್ಯಾಪ್ತಿಯೊಂದರರಲ್ಲೇ 73,82,500 ರು.ಗಳಷ್ಟು ಹಣವನ್ನು ಬೇನಾಮಿ ಖಾತೆಗಳಿಗೆ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆಯೇ ವರ್ಗಾವಣೆ ಮಾಡಲಾಗಿದೆ ಎಂದು ಜಾಗೃತ ಕೋಶದ ತಪಾಸಣೆ ವರದಿಯು ಹೊರಗೆಡವಿದೆ. ಈ ತಪಾಸಣೆ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ನಿಗಮದ ಹಣವನ್ನು ಬೇನಾಮಿ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಮೈಸೂರು ಜಿಲ್ಲೆಯ ಹಿಂದಿನ ವ್ಯವಸ್ಥಾಪಕ ಶ್ರೀನಿವಾಸ್‌ ಅವರಿಗೆ ಕಾರಣ ಕೇಳಿ ನೋಟೀಸ್‌ ಜಾರಿಗೊಳಿಸಿದೆ. 2023ರ ಮೇ 17ರಂದು ಜಾರಿಗೊಳಿಸಿರುವ ನೋಟೀಸ್‌ ಪ್ರತಿಯೂ ಸಹ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಫಲಾನುಭವಿಗಳ ಆಯ್ಕೆಗೆ ನಿಗದಿಪಡಿಸಿದ್ದ ಮಾನದಂಡ, ಮಾರ್ಗಸೂಚಿ, ನಿಯಮಗಳು, ಆದೇಶ, ಸುತ್ತೋಲೆಗಳನ್ನು ಉಲ್ಲಂಘಿಸಿ ಅನರ್ಹರಿಗೂ ನಿಗಮ ಯೋಜನೆಗಳಿಗೆ ಆಯ್ಕೆ ಮಾಡಲಾಗಿತ್ತು ಎಂಬುದನ್ನು ಜಾಗೃತ ಕೋಶದ ವರದಿಯು ವಿಸ್ತೃತವಾಗಿ ವಿವರಿಸಿದೆ.

 

ಪ್ರಕರಣ 1

 

ಉದ್ಯಮ ಶೀಲತಾ ಯೋಜನೆಯಲ್ಲಿ 2019-20ನೇ ಸಾಲಿನಲ್ಲಿ ಪಿರಿಯಾಪಟ್ಟಣ ತಾಲೂಕಿಗೆ ಒಟ್ಟು 17.00 ಲಕ್ಷ ರು. ಸಹಾಯಧನ ನಿಗದಿಪಡಿಯಾಗಿತ್ತು. ಈ ಪೈಕಿ ಲಕ್ಷ್ಮಣ ಎಂಬುವರು ಆಯ್ಕೆಯಾಗಿದ್ದರು. ಇವರಿಗೆ 2.50 ಲಕ್ಷ ರು. ಸಹಾಯಧನ ದೊರೆತಿದೆ. ಆದರೆ ಚೆಕ್‌ ಸಂಖ್ಯೆ 587058 ರಲ್ಲಿ 5.00 ಲಕ್ಷ ರು. ಬಿಡುಗಡೆಯಾಗಿತ್ತು.

 

ಈ ಸಹಾಯಧನವನ್ನು ಶಾಸಕರು ಗುರುತಿಸಿದ್ದ 05 ಫಲಾನುಭವಿಗಳಲ್ಲಿ 03 ಫಲಾನುಭವಿಗಳಿಗೆ 2.50 ಲಕ್ಷ ರು.ಗಳಂತೆ ನಿಗದಿಗೊಳಿಸಿ ಆಯ್ಕೆ ಮಾಡಿದ್ದರು. ಅದರಂತೆ 03 ಫಲಾನುಭವಿಗಳಿಗೆ ತಲಾ 4 ಲಕ್ಷ ರು.ನಂತೆ ಬಿಡುಗಡೆಗೊಳಿಸಿ ಉಳಿದ ಇಬ್ಬರು ಫಲಾನುಭವಿಗಳ ಬದಲಿಗೆ ಒಬ್ಬರಿಗೇ ಹೆಚ್ಚುವರಿಯಾಗಿ 5 ಲಕ್ಷ ರು. ಬಿಡುಗಡೆಯಾಗಿದೆ. ಈ ಪ್ರಕರಣದಲ್ಲಿ ಅಕ್ರಮವಾಗಿ 2.50 ಲಕ್ಷ ರು.ಗಳನ್ನು ಬಿಡುಗಡೆ ಮಾಡಿ ಆರ್ಥಿಕ ನಷ್ಟ ಸಂಭವಿಸಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಪ್ರಕರಣ 2

 

ಟಿ ನರಸೀಪುರ ತಾಲೂಕು ಅಲಗೋಡು ಗ್ರಾಮದ ಶಿವರಾಜು ಎಂಬುವರಿಗೆ ವರುಣಾ ವಿಧಾನಸಭಾ ಕ್ಷೇತ್ರ ಆಯ್ಕೆ ಪಟ್ಟಿ ಕ್ರಮ ಸಂಖ್ಯೆ 05ರಲ್ಲಿ 2.00 ಲಕ್ಷ ರು. ಸಹಾಯಧನಕ್ಕೆ ಆಯ್ಕೆಯಾಗಿದ್ದರು. ಆದರೆ (ಚೆಕ್‌ ಸಂಖ್ಯೆ 587059- ದಿನಾಂಕ 08.03.2022) 3,46,337 ರು.ಗಳನ್ನು ಅಕ್ರಮವಾಗಿ ಬಿಡುಗಡೆ ಮಾಡಲಾಗಿತ್ತು.

 

ಶಾಸಕರ ಪತ್ರ ( 02.09.2020) ದಂತೆ 2018-19ನೇ ಸಾಲಿನಲ್ಲಿ ಬಿಡುಗಡೆಯಾಗದೇ ಬಾಕಿ ಉಳಿದಿದ್ದ 6,30,735 ರು.ಗಳನ್ನು 03 ಫಲಾನುಭವಿಗಳಿಗೆ ವಿಭಾಗಿಸಿ ಹಂಚಿಕೆ ಮಾಡಲು ಸೂಚಿಸಿದ್ದರು. ಅದರಂತೆ ಜಿಲ್ಲಾ ಕಚೇರಿಯಿಂದ 14,6,337 ರು.ಗಳನ್ನು ಹೆಚ್ಚುವರಿಯಾಗಿ ಬಿಡುಗಡೆಗೊಳಿಸಲಾಗಿತ್ತು.

 

ಪ್ರಕರಣ 3

 

ಹೆಚ್‌ ಡಿ ಕೋಟೆಯ ದಟ್ಟೇಹಳ್ಳಿ ಗ್ರಾಮದ ಯೋಗೇಶ್‌ ಎಸ್‌ ಎಂಬುವರು 2019-20ನೇ ಸಾಲಿಗೆ 3.50 ಲಕ್ಷ ರು. ಸಹಾಯಧನಕ್ಕೆ ಆಯ್ಕೆಯಾಗಿದ್ದರು. ಆದರೆ (ಚೆಕ್‌ ಸಂಖ್ಯೆ 432932 ) ಆಗಸ್ಟ್‌ 7ರಂದು 3,24,209 ರು.ಗಳನ್ನು ಬಿಡುಗಡೆ ಮಾಡಲಾಗಿತ್ತು.

 

ಪ್ರಕರಣ 4

 

ಸರಗೂರು ತಾಲೂಕಿನ ಚನ್ನೀಪುರದ ನಾಗರಾಜು ಅವರಿಗೆ 2019-20ನೇ ಸಾಲಿನ ಹೆಚ್ ಡಿ ಕೋಟೆ ವಿದಾನಸಭೆ ಕ್ಷೇತ್ರದ ಆಯ್ಕೆ ಪಟ್ಟಿ 11 ರಲ್ಲಿ 5.00 ಲಕ್ಷ ರು.ಗಳ ಸಹಾಯಧನಕ್ಕೆ ಆಯ್ಕೆಯಾಗಿದ್ದರು. ಆದರೆ (ಚೆಕ್‌ ಸಂಖ್ಯೆ 432940- 19.08.2020)ರಲ್ಲಿ 4 ಲಕ್ಷ ರು.ಗಳನ್ನು ಬಿಡುಗಡೆಗೊಳಿಸಲಾಗಿದೆ.

 

ಪ್ರಕರಣ 5

 

ಹೆಚ್‌ ಡಿ ಕೋಟೆ ವಿಧಾನಸಭೆ ಕ್ಷೇತ್ರದ ಶಾಸಕರು ಹೆಚ್‌ ವಿ ಕೃಷ್ಣಮೂರ್ತಿ ಹೆಗ್ಗನೂರು ಬದಲಾಗಿ ಮಣಿ ಡಿ ರಾಮ್‌ ಎಂಬುವರನ್ನು ಆಯ್ಕೆ ಮಾಡಿ ಪತ್ರ ನೀಡಿದ್ದರು. ಇವರು 2019-20ನೇ ಸಾಲಿನ ಸಹಾಯಧನದ 3.50 ಲಕ್ಷ ರು.ಗಳಿಗೆ ಆಯ್ಕೆಯಾಗಿದ್ದರು. ಆದರೆ (ಚೆಕ್‌ ಸಂಖ್ಯೆ 432661) (07.11.2020) 2.00 ಲಕ್ಷ ರು.ಗಳನ್ನು ವಾಹನ ಉದ್ದೇಶಕ್ಕೆ ಬಿಡುಗಡೆ ಮಾಡಲಾಗಿತ್ತು.

 

ಪ್ರಕರಣ 6

 

ಮೈಸೂರಿನ ಮಂಡಿಮೊಹಲ್ಲಾದ ಪ್ರಸನ್ನ ಎಸ್‌ ಎಂಬುವರಿಗೆ ಸಾಂಸ್ಥಿಕ ಕೋಟಾದಡಿಯಲ್ಲಿ 2019ರ ಜುಲೈ 20ರಂದು ಟ್ಯಾಕ್ಸಿ ಉದ್ದೇಶಕ್ಕೆ ಆಯ್ಕೆಯಾಗಿದ್ದರು. ಇವರಿಗೆ 2.50 ಲಕ್ಷ ರು.ಗಳ ಮಂಜೂರಾತಿ ನೀಡಿ ಹಣ ಬಿಡುಗಡೆಯಾಗಿತ್ತು. ಆದರೆ ಜಿಲ್ಲಾ ಕಚೇರಿಯಿಂದ (ಚೆಕ್‌ ಸಂಖ್ಯೆ 432669) (30.01.2021) 3.50 ಲಕ್ಷ ರು.ಗಳನ್ನು ಹೆಚ್ಚುವರಿಯಾಗಿ 1.00 ಲಕ್ಷ ರು. ಬಿಡುಗಡೆಗೊಳಿಸಿದ್ದರು ಎಂಬುದು ಜಾಗೃತ ಕೋಶದ ವರದಿಯಿಂದ ತಿಳಿದು ಬಂದಿದೆ.

Hot this week

ಮಹರ್ಷಿ ವಾಲ್ಮೀಕಿ ವಿ.ವಿ.ಯಲ್ಲಿ 38.98 ಕೋಟಿ ರು ಗೆ ಆಕ್ಷೇಪಣೆ; ವಾರ್ಷಿಕ ಲೆಕ್ಕಪತ್ರಗಳಲ್ಲಿ ಬ್ಯಾಂಕ್‌ ಖಾತೆಗಳ ವಿವರ ಒದಗಿಸಿಲ್ಲವೇಕೆ?

ಬೆಂಗಳೂರು;  ರಾಯಚೂರಿನಲ್ಲಿರುವ  ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಟೆಂಡರ್ ಕರೆಯದೇ ನೇರವಾಗಿ ಏಜೆನ್ಸಿ...

ರಾಷ್ಟ್ರೋತ್ಥಾನ, ಜನಸೇವಾ ವಿಶ್ವಸ್ಥ, ಜನಸೇವಾ ಟ್ರಸ್ಟ್‌ಗೆ 121 ಎಕರೆ ಜಮೀನು ಮಂಜೂರು; ಸದನಕ್ಕೆ ಪಟ್ಟಿ ಒದಗಿಸಿದ ಸರ್ಕಾರ

ಬೆಂಗಳೂರು; ಕಳೆದ 16 ವರ್ಷಗಳಲ್ಲಿ  ರಾಷ್ಟ್ರೋತ್ಥಾನ ಪರಿಷತ್‌ ಮತ್ತು ಸಂಘ ಪರಿವಾರದ...

ಸಿಎಂ ಮಾಧ್ಯಮ ಕಾರ್ಯದರ್ಶಿಗಳಿಗೆ ಮಾಸಿಕ 3 ಲಕ್ಷ ರು ವೇತನ; ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು, ಅಧಿಕಾರಿವರ್ಗದಲ್ಲಿ ಚರ್ಚೆ

ಬೆಂಗಳೂರು;  ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಮತ್ತು ಹೊಸದಾಗಿ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಲು ಅನುದಾನ...
Please Scan to make Your Contribution

Topics

ಮಹರ್ಷಿ ವಾಲ್ಮೀಕಿ ವಿ.ವಿ.ಯಲ್ಲಿ 38.98 ಕೋಟಿ ರು ಗೆ ಆಕ್ಷೇಪಣೆ; ವಾರ್ಷಿಕ ಲೆಕ್ಕಪತ್ರಗಳಲ್ಲಿ ಬ್ಯಾಂಕ್‌ ಖಾತೆಗಳ ವಿವರ ಒದಗಿಸಿಲ್ಲವೇಕೆ?

ಬೆಂಗಳೂರು;  ರಾಯಚೂರಿನಲ್ಲಿರುವ  ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಟೆಂಡರ್ ಕರೆಯದೇ ನೇರವಾಗಿ ಏಜೆನ್ಸಿ...

ರಾಷ್ಟ್ರೋತ್ಥಾನ, ಜನಸೇವಾ ವಿಶ್ವಸ್ಥ, ಜನಸೇವಾ ಟ್ರಸ್ಟ್‌ಗೆ 121 ಎಕರೆ ಜಮೀನು ಮಂಜೂರು; ಸದನಕ್ಕೆ ಪಟ್ಟಿ ಒದಗಿಸಿದ ಸರ್ಕಾರ

ಬೆಂಗಳೂರು; ಕಳೆದ 16 ವರ್ಷಗಳಲ್ಲಿ  ರಾಷ್ಟ್ರೋತ್ಥಾನ ಪರಿಷತ್‌ ಮತ್ತು ಸಂಘ ಪರಿವಾರದ...

ಸಿಎಂ ಮಾಧ್ಯಮ ಕಾರ್ಯದರ್ಶಿಗಳಿಗೆ ಮಾಸಿಕ 3 ಲಕ್ಷ ರು ವೇತನ; ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು, ಅಧಿಕಾರಿವರ್ಗದಲ್ಲಿ ಚರ್ಚೆ

ಬೆಂಗಳೂರು;  ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಮತ್ತು ಹೊಸದಾಗಿ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಲು ಅನುದಾನ...

ನೀಟ್‌ ಪರೀಕ್ಷೆಯಿಂದ ವಿನಾಯಿತಿ; ತಮಿಳುನಾಡು ಮಾದರಿಯಲ್ಲಿ ನಿರ್ಣಯ ಮಂಡಿಸಲು ರಾಜ್ಯ ಸಜ್ಜು, ಕಾನೂನುಬದ್ಧ ವಿನಾಯಿತಿಗೆ ಪ್ರಸ್ತಾವ

ಬೆಂಗಳೂರು; ಕರ್ನಾಟಕ ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶ ವ್ಯವಸ್ಥೆಯು ರಾಜ್ಯದ ಶೈಕ್ಷಣಿಕ...

2 ಕಂಪನಿಗಳಿಂದ 400 ಕೋಟಿ ರು ವಹಿವಾಟು ಆರೋಪ; ಐಜಿಪಿ ಚಂದ್ರಶೇಖರ್ ಪ್ರಕರಣದಲ್ಲಿ ವರದಿ ನೀಡಲು ಸರ್ಕಾರದ ನಿರ್ದೇಶನ

ಬೆಂಗಳೂರು; ಸರ್ಕಾರದ ಪೂರ್ವಾನುಮತಿ ಪಡೆಯದೇ ಹಾಗೂ ಸರ್ಕಾರಕ್ಕೆ ವರದಿಯನ್ನು ಸಲ್ಲಿಸದೇ ಕುಟುಂಬ...

ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ತೀವ್ರ ಕೊರತೆ; ಹಲವು ಟೆಂಡರ್‍‌ಗಳಿಗೆ ಬಿಡ್ಡರ್‍‌ಗಳೇ ಇಲ್ಲ, ಮರು ಟೆಂಡರ್‍ ಹಿಂದಿದೆಯೇ ಲಂಚಾವತಾರ?

ಬೆಂಗಳೂರು; ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ತೀವ್ರ ಕೊರತೆ ಕಾಣಿಸಿಕೊಂಡಿದೆ....

Related Articles

Popular Categories

error: Content is protected !!