ಜ್ಞಾನಗಂಗಾ ಸೊಸೈಟಿಗೆ 848 ನಿವೇಶನ; ನ್ಯಾಯಾಲಯದ ಪ್ರಕರಣಗಳನ್ನೇ ಮರೆಮಾಚಿದ್ದ ಮೂಡಾ?

ಬೆಂಗಳೂರು; ಮೈಸೂರಿನ ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಮೂಡಾವು ನಿಯಮಬಾಹಿರವಾಗಿ ಬಡಾವಣೆ ಹಂಚಿಕೆ ಮಾಡಿ ಅಕ್ರಮವೆಸಗಿರುವುದನ್ನು ತಾಂತ್ರಿಕ ಸಮಿತಿಯು ಬಯಲು ಮಾಡಿದೆ.

 

ಈ ಸಂಘಕ್ಕೆ ಒಂದೆರಡು ದಿನದಲ್ಲಿಯೇ 848 ನಿವೇಶನಗಳನ್ನು ಬಿಡುಗಡೆಗೊಳಿಸಿ ಖಾತೆ ಮಾಡಿಕೊಟ್ಟಿರುವುದು ಮತ್ತು ಬೇರೊಂದು ಪ್ರಕರಣದಲ್ಲಿ ಅರ್ಜಿದಾರರಿಂದ 3.32 ಕೋಟಿ ರು. ದಂಡ ಶುಲ್ಕ ಪಾವತಿಸಿಕೊಳ್ಳದೆಯೇ ನಿವೇಶನಗಳನ್ನು ಬಿಡುಗಡೆ ಮಾಡಿರುವುದನ್ನೂ  ತಾಂತ್ರಿಕ ಸಮಿತಿಯು ಹೊರಗೆಡವಿದೆ.

ಬದಲಿ ನಿವೇಶನ ಹಂಚಿಕೆ ಹಿಂದಿನ ಕರಾಮತ್ತು ಬಯಲು; ನಕ್ಷೆಯಿಲ್ಲ, ಭೂ ಪರಿಹಾರದ ವಿವರಗಳೂ ಇಲ್ಲ

ಮೂಡಾದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತಾದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಪ್ರತಿಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಬೈರತಿ ಸುರೇಶ್‌ ಅವರ ಮೇಲೆ ಪ್ರತಿಪಕ್ಷಗಳು ಮುಗಿಬಿದ್ದಿರುವ ಬೆನ್ನಲ್ಲೇ ಮುಡಾದ ಮತ್ತೊಂದು ಅಕ್ರಮ ಪ್ರಕರಣವು ಮುನ್ನೆಲೆಗೆ ಬಂದಿದೆ.

ನಿಯಮ ಮೀರಿ 250 ಕೋಟಿ ನಿಶ್ಚಿತ ಠೇವಣಿ; ಮೂಡಾ ಅಕ್ರಮ ಪತ್ತೆ ಹಚ್ಚಿದ ತಾಂತ್ರಿಕ ಸಮಿತಿ

ತಾಂತ್ರಿಕ ಸಮಿತಿಯು ನೀಡಿರುವ ವರದಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪ್ರಕರಣದ ವಿವರ

 

ಮೈಸೂರು ತಾಲೂಕು ಜಯಪುರ ಹೋಬಳಿ ಕೇರ್ಗಳ್ಳಿ ಗ್ರಾಮದ ವಿವಿಧ ಸರ್ವೇ ನಂಬರ್‍‌ಗಳಲ್ಲಿ ಒಟ್ಟು 230 ಎಕರೆ 01 ಗುಂಟೆ ಜಮೀನಿನಲ್ಲಿ ಬಡಾವಣೆ ರಚಿಸಿತ್ತು. ವಿವಿಧ ಅಳತೆಯ ನಿವೇಶನಗಳ ಪೈಕಿ ಎರಡನೇ ಕಂತಿನ (ಶೇ.30) ನಿವೇಶನಗಳನ್ನು ಬಿಡುಗಡೆ ಮಾಡುವ ಬಗ್ಗೆ ಮತ್ತು ವಿಷಯ ಸಂಖ್ಯೆ 8(1)(ಎ)ನಲ್ಲಿ ಚರ್ಚಿಸಿ ತೀರ್ಮಾನಿಸಲಾಗಿತ್ತು.

848 ನಿವೇಶನ ಬಿಡುಗಡೆ; ಮೂಡಾದಿಂದ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರ ವ್ಯಾಪ್ತಿ ಅತಿಕ್ರಮಣ

ಈ ನಾಲ್ಕು ವಿನ್ಯಾಸ ಪ್ರಕರಣಗಳನ್ನು ಸಭೆಯ ಮುಂದೆ ಮಂಡಿಸಲಾಗಿತ್ತು. ಸಭೆಯ ನಿರ್ಣಯದ ಪ್ರಕಾರ ಎರಡನೇ ಹಂತದ ಶೆ.30ರಷಟು ನಿವೇಶನಗಳನ್ನು ಬಿಡುಗಡೆ ಮಾಡಲು ತಾಂತ್ರಿಕ ಶಾಖೆ ಅಧಿಕಾರಿಗಳಿಗೆ ಕಡತ ಮಂಡನೆಯಾಗಿತ್ತು. ಇದರಲ್ಲಿ ಆಯುಕ್ತರು ಒಪ್ಪಿಗೆ ಸೂಚಿಸುವ ರುಜು ಮಾಡಿದ್ದರು. ಆಯುಕ್ತರ ಅನುಮೋದನೆಯಂತೆ ನಿವೇಶನಗಳನ್ನು ಬಿಡುಗಡೆ ಮಾಡಲಾಗಿತ್ತು.

 

ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸಂಬಂಧಿಸಿದಂತೆ 252 ಎಕರೆ 10 ಗುಂಟೆ ಪೈಕಿ ಕೆಲವು ಸರ್ವೆ ನಂಬರ್‍‌ಗಳ ಮೇಲೆ ಸಿವಿಲ್‌ ನ್ಯಾಯಾಲಯದಲ್ಲಿ 2019ರಲ್ಲೇ ಅಸಲು ದಾವೆ (1041/2019) ಹೂಡಲಾಗಿತ್ತು. ಈ ಬಡಾವಣೆಯ ನಿವೇಶನಗಳ ಹಕ್ಕು ವರ್ಗಾವಣೆ ಮಾಡಬಾರದು ಎಂದು ಸಿವಿಲ್‌ ನ್ಯಾಯಾಲಯವು ನಿರ್ದೇಶಿಸಿತ್ತು.

ಒಂದೇ ದಿನದಲ್ಲಿ 10 ನಿವೇಶನ ಬಿಡುಗಡೆ; ದೃಢೀಕೃತ ಪ್ರಮಾಣಪತ್ರವಿಲ್ಲ, ಅನುಮೋದನೆಯೂ ಇಲ್ಲ

ಅದೇ ರೀತಿ ಅಸಲು ದಾವೆಗೆ ಸಂಬಂಧಿಸಿದಂತೆ ತಾತ್ಕಾಲಿಕ ನಿರ್ಬಂಧಕಾಜ್ಞೆ ಆದೇಶವಿತ್ತು. ಆದರೂ ಅದನ್ನು ಮರೆಮಾಚಿ ಮೂಡಾ ಅಧಿಕಾರಿಗಳ ಮೇಲೆ ಒತ್ತಡ ಹೇರಿ ನಿವೇಶನ ಬಿಡುಗಡೆ ಮಾಡಲಾಗಿದೆ ಎಂದು ದೂರು ಸಲ್ಲಿಕೆಯಾಗಿತ್ತು.

 

ಈ ದೂರನ್ನು ತಾಂತ್ರಿಕ ಸಮಿತಿಯು ವಿವರವಾಗಿ ಪರಿಶೀಲಿಸಿದೆ. ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿರುವುದು ಮತ್ತು ಸರ್ಕಾರದ ನಿರ್ದೇಶನಗಳ ಬಗ್ಗೆ ಟಿಪ್ಪಣಿಯಲ್ಲಿ ಯಾವುದೇ ಅಂಶಗಳನ್ನು ನಮೂದಿಸಿಲ್ಲ ಎಂಬುದನ್ನು ತಾಂತ್ರಿಕ ಸಮಿತಿಯು ಪತ್ತೆ ಹಚ್ಚಿದೆ.

 

ಅಲ್ಲದೇ ಕಡತದ ಕಂಡಿಕೆಗಳಲ್ಲಿ ಒಪ್ಪಿಗೆ ಸೂಚಿಸುವ ‘ರುಜು’ ಮಾಡಲಾಗಿದೆ. ಸಭೆಯ ನಡವಳಿಗಳಲ್ಲಿಯೂ ಕೂಡ ಈ ಅಂಶಗಳನ್ನು ಪ್ರಸ್ತಾಪಿಸಿ ಚರ್ಚಿಸಿಲ್ಲ. ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ ಕಲಂ 13(1) ಅನ್ವಯ ಪ್ರಾಧಿಕಾರದ ಆಯುಕ್ತರು ವಲಯ ನಿಯಮಾವಳಿಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕಾಗಿತ್ತು. ಆದರೆ ಇದಕ್ಕೆ ಪ್ರಾಧಿಕಾರದ ಆಯುಕ್ತರು ವ್ಯತಿರಿಕ್ತವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ತಾಂತ್ರಿಕ ಸಮಿತಿಯು ವರದಿಯಲ್ಲಿ ಉಲ್ಲೇಖಿಸಿದೆ.

 

ಅದೇ ರೀತಿ ಪ್ರಾಧಿಕಾರವು ಅರ್ಜಿದಾರರಿದಂದ ಎರಡನೇ ಮತ್ತು ಅಂತಿಮ ಹಂತದ ನಿವೇಶನಗಳನ್ನು ಬಿಡುಗಡೆ ಮಾಡುವ ಪೂರ್ವದಲ್ಲಿಯೇ ದಂಡ ಶುಲ್ಕವನ್ನು ಪಾವತಿಸಿಕೊಳ್ಳಬೇಕು.

ಆದರೆ 3,37,78,314 ರು.ಗಳನ್ನು ಪಾವತಿಸಿಕೊಳ್ಳದೆಯೇ ನಿವೇಶನಗಳನ್ನು ಬಿಡುಗಡೆ ಮಾಡಿತ್ತು. ಇದರಿಂದ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟವುಂಟಾಗಿದೆ ಎಂದು ತಾಂತ್ರಿಕ ಸಮಿತಿಯು ವರದಿಯಲ್ಲಿ ವಿವರಿಸಿದೆ.

the fil favicon

SUPPORT THE FILE

Latest News

Related Posts