ತೆರಿಗೆ; ಬಿಜೆಪಿ ಅವಧಿಯಲ್ಲಿ ಹೆಚ್ಚುವರಿ ಸಂಗ್ರಹ, ಕಾಂಗ್ರೆಸ್‌ ಅವಧಿಯಲ್ಲಿ 52,227.38 ಕೋಟಿ ರು. ಕುಸಿತ!

ಬೆಂಗಳೂರು;  ವಾಣಿಜ್ಯ ತೆರಿಗೆ ಸೇರಿದಂತೆ ಇನ್ನಿತರೆ ಮೂಲಗಳ ತೆರಿಗೆ ಸಂಗ್ರಹಿಸುವ ಸಂಬಂಧ ನಿಗದಿಪಡಿಸಿದ್ದ ಗುರಿಯನ್ನು ಇಲಾಖೆಗಳು ಮುಟ್ಟಿಲ್ಲ. 2023-24ನೇ ಸಾಲಿನ ಫೆಬ್ರುವರಿ ಅಂತ್ಯಕ್ಕೆ ರಾಜ್ಯದ ಪ್ರಮುಖ ತೆರಿಗೆಗಳ ಸಂಗ್ರಹದಲ್ಲಿ 2024ರ ಫೆಬ್ರುವರಿ ಅಂತ್ಯಕ್ಕೆ  57,227.38 ಕೋಟಿ ರು.ನಷ್ಟು ಕುಸಿತ ಕಂಡಿದೆ.

 

ಐದು ಗ್ಯಾರಂಟಿ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಿಸಲು ರಾಜ್ಯದ ಪ್ರಮುಖ ತೆರಿಗೆಗಳ ಸಂಗ್ರಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚಿನ ಗುರಿ ನಿಗದಿಪಡಿಸಿದ್ದರು. ಆದರೀಗ ಆರ್ಥಿಕ ವರ್ಷ ಅಂತ್ಯಕ್ಕೆ ಇಲಾಖೆಗಳು ನಿರೀಕ್ಷಿತ ಗುರಿಯನ್ನೇ ತಲುಪಿಲ್ಲ.

 

ವಿಶೇಷವೆಂದರೇ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿದ್ದ ಹಿಂದಿನ ಬಿಜೆಪಿ ಸರ್ಕಾರದ ಅವಧಿ (2022-23)ಯಲ್ಲಿ ನಿರೀಕ್ಷಿತ ಗುರಿಯನ್ನೂ ಮೀರಿ ತೆರಿಗೆಗಳನ್ನು ಸಂಗ್ರಹಿಸಿತ್ತು. ಪ್ರಮುಖ ತೆರಿಗೆಗಳಾದ ವಾಣಿಜ್ಯ ತೆರಿಗೆ, ಅಬಕಾರಿ ತೆರಿಗೆ, ಮೋಟಾರು ವಾಹನ ತೆರಿಗೆ, ಮುದ್ರಾಂಕ ಹಾಗೂ ನೋಂದಣಿ ಶುಲ್ಕದ ಸಂಗ್ರಹದ ನಿರೀಕ್ಷಿತ ಗುರಿ ಮುಟ್ಟುವಲ್ಲಿ ಸಂಬಂಧಿಸಿದ ಇಲಾಖೆಗಳು ಹಿನ್ನಡೆ ಅನುಭವಿಸಿವೆ.

 

ಸ್ವಂತ ತೆರಿಗೆ ರಾಜಸ್ವ, ವಾಣಿಜ್ಯ ತೆರಿಗೆ, ಅಬಕಾರಿ, ಮೋಟಾರು ವಾಹನ ತೆರಿಗೆ, ಮುದ್ರಾಂಕ ನೋಂದಣಿ, ಇತರೆ ಮತ್ತು ಸ್ವಂತ ತೆರಿಗೆಯೇತರ ರಾಜಸ್ವ ವಿಭಾಗದಲ್ಲಿ ಒಟ್ಟಾರೆ 3,59,105.2 ಕೋಟಿ ರು. ನಷ್ಟು ಗುರಿ ನಿಗದಿಪಡಿಸಿತ್ತು. ಆದರೆ ಫೆಬ್ರುವರಿ ಅಂತ್ಯಕ್ಕೆ 3,01,827.85 ಕೋಟಿ ರು. ಸಂಗ್ರಹವಾಗಿದೆ.  ನಿಗದಿತ ಗುರಿ ಮುಟ್ಟದ ಕಾರಣ 57,227.38 ಕೋಟಿ ರು.ನಷ್ಟು ಕುಸಿತ ಕಂಡಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

 

ಇದೇ ತೆರಿಗೆಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಟ್ಟಾರೆಯಾಗಿ (2022-23) 2,64,706.09 ಕೋಟಿ ರು. ಸಂಗ್ರಹದ ಗುರಿ ನಿಗದಿಪಡಿಸಿತ್ತು. ಈ ಪೈಕಿ ಫೆಬ್ರುವರಿ 2023ರ ಅಂತ್ಯಕ್ಕೆ 2,79,030.28 ಕೋಟಿ ರು. ವಸೂಲಾಗಿತ್ತು. ನಿಗದಿತ ಗುರಿಗೆ ಹೋಲಿಸಿದರೆ ಹೆಚ್ಚುವರಿಯಾಗಿ 9,462.56 ಕೋಟಿ ರು. ಸಂಗ್ರಹವಾಗಿತ್ತು.

 

2023-24ನೇ ಸಾಲಿನಲ್ಲಿ ಸ್ವಂತ ತೆರಿಗೆ ರಾಜಸ್ವ ವಿಭಾಗದಲ್ಲಿ 1,73,302.60 ಕೋಟಿ ರು. ನಿಗದಿಪಡಿಸಿತ್ತು. 2024ರ ಫೆಬ್ರುವರಿ ಅಂತ್ಯಕ್ಕೆ 1,45,359.79 ಕೋಟಿ ರು.ಗಳಷ್ಟೇ ಜಮೆಯಾಗಿತ್ತು. ಗುರಿ ಪ್ರಕಾರ ಜಮೆಯಾಗದ ಕಾರಣ 27,942.81 ಕೋಟಿ ರು. ಕುಸಿತ ಕಂಡಿರುವುದು ಗೊತ್ತಾಗಿದೆ.

 

2022-23ರಲ್ಲಿ ಸ್ವಂತ ತೆರಿಗೆ ರಾಜಸ್ವ ವಿಭಾಗಕ್ಕೆ 1,26,882.76 ಕೋಟಿ ರು ಗುರಿ ನೀಡಲಾಗಿತ್ತು. ಈ ಪೈಕಿ ಫೆಬ್ರುವರಿ 2023ರಲ್ಲಿ 1,29,383.54 ಕೋಟಿ ರು. ಸಂಗ್ರಹಿಸಿತ್ತು. ಇದು ನಿಗದಿತ ಗುರಿಗಿಂತ 2,500.78 ಕೋಟಿ ರು. ಹೆಚ್ಚುವರಿಯಾಗಿ ಸಂಗ್ರಹವಾಗಿತ್ತು.

 

ವಾಣಿಜ್ಯ ತೆರಿಗೆಯಲ್ಲಿ 2023-24ನೇ ಸಾಲಿಗೆ ನಿಗದಿಯಾಗಿದ್ದ ಗುರಿ ಪ್ರಕಾರ 98,650.00 ಕೋಟಿ ರು. ಜಮೆ ಆಗಬೇಕಿತ್ತು. ಆದರೆ ಫೆಬ್ರುವರಿ ಅಂತ್ಯಕ್ಕೆ 84,799.04 ಕೋಟಿ ರು. ಸಂಗ್ರಹವಾಗಿತ್ತು. ನಿಗದಿತ ಗುರಿ ಪ್ರಕಾರ 13,850.96 ಕೋಟಿ ರು. ಫೆಬ್ರುವರಿ ಅಂತ್ಯದವರೆಗೂ ಜಮೆಯಾಗಿಲ್ಲ.

 

2022-23ರಲ್ಲಿ ವಾಣಿಜ್ಯ ತೆರಿಗೆಯಲ್ಲಿ 72,010.00 ಕೋಟಿ ರು ಗುರಿ ನಿಗದಿಪಡಿಸಿತ್ತು. ಈ ಪೈಕಿ ಫೆಬ್ರುವರಿ 2023ರ ಅಂತ್ಯಕ್ಕೆ 75,128.74 ಕೋಟಿ ರು. ಸಂಗ್ರಹವಾಗಿತ್ತು. ನಿಗದಿತ ಗುರಿಗೆ ಹೋಲಿಸಿದರೇ 3,118.74 ಕೋಟಿ ರು. ಹೆಚ್ಚುವರಿಯಾಗಿ ವಸೂಲಾಗಿತ್ತು.

 

2023-24ನೇ ಸಾಲಿಗೆ ಅಬಕಾರಿ ಇಲಾಖೆಗೆ 36,000 ಕೋಟಿ ರು. ಗುರಿ ನಿಗದಿಯಾಗಿತ್ತು. ಫೆಬ್ರುವರಿ ಅಂತ್ಯಕ್ಕೆ ಸಂಗ್ರಹವಾಗಿದ್ದು 31,276.73 ಕೋಟಿ ರು. ಸಂಗ್ರಹವಾಗಿತ್ತು. ನಿಗದಿತ ಗುರಿಗೆ ಹೋಲಿಸಿದರೆ 4,723.27 ಕೋಟಿ ರು. ಕುಸಿತ ಕಂಡಿದೆ.

 

2022-23ನೇ ಸಾಲಿನಲ್ಲಿ ಅಬಕಾರಿ ಇಲಾಖೆಗೆ ನಿಗದಿಪಡಿಸಿದ್ದ ಗುರಿ ಪ್ರಕಾರ 29,000.00 ಕೋಟಿ ರು.ಗಳ ಪೈಕಿ ಫೆಬ್ರುವರಿ 2023ರ ಅಂತ್ಯಕ್ಕೆ 27,106.06 ಕೋಟಿ ರು. ಸಂಗ್ರಹವಾಗಿತ್ತು. ನಿಗದಿತ ಗುರಿ ಪ್ರಕಾರ 1,893.94 ಕೋಟಿ ರು. ಕಡಿಮೆ ವಸೂಲಾಗಿತ್ತು.

 

ಮೋಟಾರು ವಾಹನ ತೆರಿಗೆ ವಿಭಾಗದಲ್ಲಿ 2023-24ನೇ ಸಾಲಿಗೆ 11,500.00 ಕೋಟಿ ರು. ಸಂಗ್ರಹಿಸಲು ಗುರಿ ನಿಗದಿಪಡಿಸಿತ್ತು. ಫೆಬ್ರುವರಿ 2024ರ ಅಂತ್ಯಕ್ಕೆ 10,364.29 ಕೋಟಿ ರು. ಸಂಗ್ರಹವಾಗಿತ್ತು. ನಿಗದಿತ ಗುರಿಗೆ ಹೋಲಿಸಿದರೆ 1,135.71 ಕೋಟಿ ರು. ಕುಸಿತ ಕಂಡಿತ್ತು.

 

2022-23ರಲ್ಲಿ ಮೋಟಾರು ವಾಹನ ತೆರಿಗೆ ಸಂಗ್ರಹಿಸಲು 8,006.69 ಕೋಟಿ ರು. ಗುರಿ ನಿಗದಿಪಡಿಸಿತ್ತು. ಈ ಪೈಕಿ ಫೆಬ್ರುವರಿ 2023ರ ಅಂತ್ಯಕ್ಕೆ 8,615.27 ಕೋಟಿ ರು. ಸಂಗ್ರಹವಾಗಿತ್ತು. ನಿಗದಿತ ಗುರಿಗೆ ಹೋಲಿಸಿದರೆ 611.58 ಕೋಟಿ ರು. ಹೆಚ್ಚುವರಿಯಾಗಿ ಸಂಗ್ರಹವಾಗಿತ್ತು.

 

2023-24ನೇ ಸಾಲಿಗೆ ಮುದ್ರಾಂಕ ಮತ್ತು ನೋಂದಣಿ ಇಲಾಖೆಗೆ 25,000.00 ಕೋಟಿ ರು. ಗುರಿ ನಿಗದಿಪಡಿಸಿತ್ತು. ಈ ಪೈಕಿ ಫೆಬ್ರುವರಿ ಅಂತ್ಯಕ್ಕೆ 17,684.88 ಕೋಟಿ ರು. ಸಂಗ್ರಹವಾಗಿತ್ತು. ನಿಗದಿತ ಗುರಿಗೆ ಹೋಲಿಸಿದರೆ 7,315.12 ಕೋಟಿ ರು. ಕುಸಿತ ಕಂಡಿದೆ.

 

ಮುದ್ರಾಂಕ ನೋಂದಣಿ ಇಲಾಖೆಗೆ 2022-23ರಲ್ಲಿ 15,000.00 ಕೋಟಿ ರು. ಸಂಗ್ರಹಿಸಲು ಗುರಿ ನಿಗದಿಪಡಿಸಿತ್ತು. ಇಲಾಖೆಯು 20234 ಫೆಬ್ರುವರಿ ಅಂತ್ಯಕ್ಕೆ 15,836.54 ಕೋಟಿ ರು ಸಂಗ್ರಹಿಸಿತ್ತು. ನಿಗದಿತ ಗುರಿಗೆ ಹೋಲಿಸಿದರೆ 836.54 ಕೋಟಿ ರು. ಹೆಚ್ಚುವರಿಯಾಗಿ ವಸೂಲಾಗಿತ್ತು.

 

2023-24ನೇ ಸಾಲಿಗೆ ಇತರೆ ವಿಭಾಗದಲ್ಲಿ 2,152.60 ಕೋಟಿ ರು ಸಂಗ್ರಹಿಸಬೇಕಿತ್ತು. ಆದರೆ ಫೆಬ್ರುವರಿ ಅಂತ್ಯಕ್ಕೆ 1,234.88 ಕೋಟಿ ರು. ಸಂಗ್ರಹವಾಗಿತ್ತು. ನಿಗದಿತ ಗುರಿಗೆ ಹೋಲಿಸಿದರೆ 917.75 ಕೋಟಿ ರು.ಗಳಿಗೆ ಕುಸಿತ ಕಂಡಿತ್ತು.

 

2022-23ರಲ್ಲಿ ಇದೇ ಇತರೆ ವಿಭಾಗಕ್ಕೆ 2,866.07 ಕೋಟಿ ರು. ಸಂಗ್ರಹಕ್ಕೆ ಗುರಿ ನಿಗದಿಪಡಿಸಿತ್ತು. 2023ರ ಫೆಬ್ರವರಿ ಅಂತ್ಯಕ್ಕೆ 2,696.93 ಕೋಟಿ ರು. ಸಂಗ್ರಹಿಸಿತ್ತು. ನಿಗದಿತ ಗುರಿ ಪ್ರಕಾರ 169.14 ಕೋಟಿ ರು. ಸಂಗ್ರಹವಾಗಿರಲಿಲ್ಲ.

 

ಸ್ವಂತ ತೆರಿಗೆಯೇತರ ರಾಜಸ್ವ ಸಂಗ್ರಹದಲ್ಲಿ 2023-24ನೇ ಸಾಲಿನಲ್ಲಿ 12,500.00 ಕೋಟಿ ರು. ಸಂಗ್ರಹಿಸಲು ಗುರಿ ನಿಗದಿಪಡಿಸಿತ್ತು. ಈ ಪೈಕಿ ಫೆಬ್ರುವರಿ 2024ರ ಅಂತ್ಯಕ್ಕೆ 11,158.24 ಕೋಟಿ ರು ಸಂಗ್ರಹಿಸಿತ್ತು. ನಿಗದಿತ ಗುರಿಗೆ ಹೋಲಿಸಿದರೆ 1,341.76 ಕೋಟಿ ರು. ಕುಸಿತ ಕಂಡಿತ್ತು.

 

2022-23ನೇ ಸಾಲಿನಲ್ಲಿಯೂ ಸ್ವಂತ ತೆರಿಗೆಯೇತರ ರಾಜಸ್ವ ವಿಭಾಗಕ್ಕೆ 10,960.57 ಕೋಟಿ ರು. ಗುರಿ ನಿಗದಿಪಡಿಸಿತ್ತು. ಈ ಪೈಕಿ 11,272.41 ಕೋಟಿ ರು. ಸಂಗ್ರಹಿಸಿತ್ತು. ಇದು ನಿಗದಿತ ಗುರಿಗಿಂತ 331.84 ಕೋಟಿ ರು. ಹೆಚ್ಚುವರಿಯಾಗಿ ವಸೂಲಾಗಿತ್ತು.

 

2023ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ರಾಜ್ಯದ ಸ್ವಂತ ತೆರಿಗೆ ಆದಾಯ (SOTR) ಕಳೆದ ಆರ್ಥಿಕ ವರ್ಷದ ಮೊದಲಾರ್ಧಕ್ಕೆ ಹೋಲಿಸಿದರೆ ಶೇಕಡಾ 15 ರಷ್ಟು ಹೆಚ್ಚಾಗಿತ್ತು. . ಆದರೂ ಸೆಪ್ಟೆಂಬರ್ 2023 ರವರೆಗಿನ ರಾಜ್ಯದ ಸ್ವಂತ ಆದಾಯ ತೆರಿಗೆ ಸಂಗ್ರಹವು 76,885 ಕೋಟಿ ರೂಪಾಯಿಗಳಷ್ಟಿತ್ತು. ಇದು ಆರ್ಥಿಕ ವರ್ಷ 2024ರಲ್ಲಿ 1,73,303 ಕೋಟಿಗಳ ಬಜೆಟ್ ಅಂದಾಜಿನ 44 ಪ್ರತಿಶತದಷ್ಟಿತ್ತು.

 

ಅಬಕಾರಿ, ಸ್ವಂತ ತೆರಿಗೆ, ತೆರಿಗೆಯೇತರ, ಮೋಟಾರು ವಾಹನ, ವಾಣಿಜ್ಯ, ಮುದ್ರಾಂಕ, ನೋಂದಣಿ, ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ ಹಾಗೂ ಕೇಂದ್ರ ಸರ್ಕಾರದ ಸಹಾಯನುದಾನ ಸೇರಿದಂತೆ 2023-24ನೇ ಸಾಲಿನಲ್ಲಿ ಜಮೆಗೆ ಸಂಬಂಧಿಸಿದಂತೆ ನಿಗದಿಪಡಿಸಿದ್ದ  4,11,712.41 ಕೋಟಿ ರು ಪೈಕಿ ಮೊದಲ ತ್ರೈಮಾಸಿಕ (ಏಪ್ರಿಲ್‌-ಜೂನ್‌)ದಲ್ಲಿ ಒಟ್ಟಾರೆ 1,19,788.49 ಕೋಟಿ ರು. ಜಮೆಯಾಗಿತ್ತು.

 

ಮೊದಲ ತ್ರೈಮಾಸಿಕದ ಹಣಕಾಸು ಪರಿಸ್ಥಿತಿ;18,952 ಕೋಟಿ ರು. ರಾಜಸ್ವ ಕೊರತೆ, 7,270.69 ಕೋಟಿ ರು. ವ್ಯತ್ಯಾಸ

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 7,270.69 ಕೋಟಿ ರು. ವ್ಯತ್ಯಾಸವಿರುವುದು ಕಂಡು ಬಂದಿದೆ. ಅದೇ ರೀತಿ 2023-24ನೇ ಸಾಲಿನ ಏಪ್ರಿಲ್‌ನಿಂದ ಜುಲೈವರೆಗೆ 18,952.77 ಕೋಟಿ ರು. ರಾಜಸ್ವ ಕೊರತೆ ಅನುಭವಿಸಿತ್ತು.

SUPPORT THE FILE

Latest News

Related Posts