ಅಪರಾಧಗಳ ಸಂಖ್ಯೆಯಲ್ಲಿ ಹೆಚ್ಚಳ; ಜನವರಿ-ಫೆಬ್ರುವರಿಯಲ್ಲಿ 13,495 ಪ್ರಕರಣ ವರದಿ, ಇಲಾಖೆಯ ಸಮೀಕ್ಷೆ

ಬೆಂಗಳೂರು; ರಾಜ್ಯದಲ್ಲಿ 2024ರ ಜನವರಿ ಮತ್ತು ಫೆಬ್ರುವರಿಯಲ್ಲಿ ಕೊಲೆ, ದರೋಡೆ, ಸುಲಿಗೆ, ಕಳ್ಳತನ, ಅತ್ಯಾಚಾರ, ಪೋಕ್ಸೋ ಸೇರಿದಂತೆ ಇನ್ನಿತರೆ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿವೆ. 2024ರ ಜನವರಿ ಮತ್ತು  ಫೆಬ್ರುವರಿಯಲ್ಲಿ  ಒಟ್ಟಾರೆ 13,495 ಪ್ರಕರಣಗಳು ವರದಿಯಾಗಿವೆ.

 

ರಾಜ್ಯದಲ್ಲಿ ವರದಿಯಾಗಿರುವ ಮತ್ತು ದಾಖಲಾಗಿರುವ ವಿವಿಧ ಅಪರಾಧ ಪ್ರಕರಣಗಳ ಕುರಿತು ಪೊಲೀಸ್‌ ಇಲಾಖೆಯು ಪ್ರಕಟಿಸಿರುವ  2024ರ ಫೆಬ್ರುವರಿ ಅಂತ್ಯದವರೆಗೆ ನಡೆಸಿರುವ ಸಮೀಕ್ಷೆ ವರದಿಯು ಕಾನೂನು ಸುವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

 

ಹುಬ್ಬಳ್ಳಿಯಲ್ಲಿ ನಡೆದಿರುವ  ನೇಹಾ ಎಂಬುವರ ಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಜೆಡಿಎಸ್‌ ಮುಗಿಬಿದ್ದಿರುವ ಬೆನ್ನಲ್ಲೇ ಪೊಲೀಸ್‌ ಇಲಾಖೆಯು ಪ್ರಕಟಿಸಿರುವ ಅಪರಾಧ ಸಮೀಕ್ಷೆ ವರದಿಯು ಮುನ್ನೆಲೆಗೆ ಬಂದಿದೆ.

 

ಫೆಬ್ರುವರಿ 2024ರ ಅಂತ್ಯಕ್ಕೆ ಇಲಾಖೆಯು ಪ್ರಕಟಿಸಿರುವ ಅಂಕಿ ಸಂಖ್ಯೆಗಳನ್ನು ಹೋಲಿಸಿದರೇ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿರುವುದು ಕಂಡು ಬಂದಿದೆ.

 

ಅಪರಾಧ ಸಮೀಕ್ಷೆಯಲ್ಲೇನಿದೆ?

 

2024ರ ಫೆಬ್ರುವರಿ ಅಂತ್ಯಕ್ಕೆ  112, ಜನವರಿ ಅಂತ್ಯಕ್ಕೆ 83 ಕೊಲೆ ಪ್ರಕರಣಗಳು ವರದಿಯಾಗಿದ್ದವು. 2023ರ ಫೆಬ್ರುವರಿಯಲ್ಲಿ 118 ಕೊಲೆ ಪ್ರಕರಣಗಳು ವರದಿಯಾಗಿದ್ದವು. 2024ರ ಜನವರಿ ಗೆ ಹೋಲಿಸಿದರೆ ಫೆಬ್ರುವರಿಯಲ್ಲಿ ಕೊಲೆ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ.

 

ಜನವರಿ 2024ರಲ್ಲಿ 19, ಫೆಬ್ರುವರಿಯಲ್ಲಿ 17 ಡಕಾಯಿತಿ ಪ್ರಕರಣಗಳು ವರದಿಯಾಗಿವೆ.

 

2023ರ ಫೆಬ್ರುವರಿಯಲ್ಲಿ 14 ಪ್ರಕರಣಗಳು ವರದಿಯಾಗಿದ್ದವು. ಜನವರಿ 2024ಕ್ಕೆ ಹೋಲಿಸಿದರೆ ಫೆಬ್ರುವರಿಯಲ್ಲಿ ಡಕಾಯಿತಿ ಪ್ರಕರಣಗಳು ಸಂಖ್ಯೆ ಸ್ವಲ್ಪಮಟ್ಟಿಗೆ ಇಳಿಕೆಯಾಗಿವೆ.

 

ಬೆಂಗಳೂರು ನಗರದಲ್ಲಿ 5, ಹಾಸನದಲ್ಲಿ 2, ಚಿಕ್ಕಮಗಳೂರಿನಲ್ಲಿ 2, ಬೀದರ್‌, ಬೆಂಗಳೂರು ಜಿಲ್ಲೆ, ಶಿವಮೊಗ್ಗ, ಹಾವೇರಿ, ಮೈಸೂರು, ದಕ್ಷಿಣ ಕನ್ನಡ, ರಾಮನಗರ ಮತ್ತು ಉಡುಪಿಯಲ್ಲಿ ತಲಾ ಒಂದು ಡಕಾಯಿತಿ ಪ್ರಕರಣಗಳು ವರದಿಯಾಗಿವೆ.

 

2024ರ ಫೆಬ್ರುವರಿ ಅಂತ್ಯಕ್ಕೆ 177, ಜನವರಿಯಲ್ಲಿ 175 ದರೋಡೆ ಪ್ರಕರಣಗಳು ವರದಿಯಾಗಿವೆ.

 

ಈ ಪೈಕಿ ಚಿನ್ನ ಸರ ಕಳವು 124 (ಜನವರಿ) 110 (ಫೆಬ್ರುವರಿ) ವರದಿಯಾಗಿವೆ. 2023ರ ಫೆಬ್ರುವರಿಯಲ್ಲಿ 118 ಪ್ರಕರಣಗಳು ವರದಿಯಾಗಿದ್ದವು. ಈ ಪೈಕಿ 69 ಚಿನ್ನದ ಸರ ಕಳವು ಪ್ರಕರಣ ವರದಿಯಾಗಿದ್ದವು.

 

ಜನವರಿ 2024ಕ್ಕೆ ಹೋಲಿಸಿದರೆ ಫೆಬ್ರುವರಿ 2024ರಲ್ಲಿ ದರೋಡೆ ಪ್ರಕರಣಗಳ ಸಂಖ್ಯೆ ಯಲ್ಲಿ ಏರಿಕೆ ಕಂಡಿರುವುದು ಗೊತ್ತಾಗಿದೆ.

 

ಜನವರಿ 2024ರಲ್ಲಿ 1,946 ಕಳವು ಪ್ರಕರಣಗಳು ವರದಿಯಾಗಿದ್ದರೇ ಫೆಬ್ರುವರಿಯಲ್ಲಿ 2,100 ಪ್ರಕರಣಗಳು ವರದಿಯಾಗಿವೆ.

 

2023ರ ಫೆಬ್ರುವರಿಯಲ್ಲಿ 1,618 ಪ್ರಕರಣಗಳು ವರದಿಯಾಗಿದ್ದವು. ಜನವರಿ 2024ರಲ್ಲಿ ವರದಿಯಾಗಿದ್ದ ಕಳವು ಪ್ರಕರಣಗಳ ಸಂಖ್ಯೆಗೆ ಹೋಲಿಸಿದರೆ ಫೆಬ್ರುವರಿ 2024ರಲ್ಲಿ ಏರಿಕೆ ಕಂಡಿದೆ.

 

2024ರ ಜನವರಿಯಲ್ಲಿ  298 ದಂಗೆ ಪ್ರಕರಣಗಳು ವರದಿಯಾಗಿದ್ದರೇ ಫೆಬ್ರುವರಿಯಲ್ಲಿ 288 ಪ್ರಕರಣಗಳು ವರದಿಯಾಗಿವೆ. 2023ರ ಫೆಬ್ರುವರಿಯಲ್ಲಿ 299 ಪ್ರಕರಣಗಳು ವರದಿಯಾಗಿದ್ದವು.

 

2024ರ ಜನವರಿಯಲ್ಲಿ 1,367 ನೋವುಂಟು ಮಾಡಿದ (HURT)  ಪ್ರಕರಣಗಳು ಇದ್ದರೇ ಫೆಬ್ರುವರಿಯಲ್ಲಿ 1,465 ಇದೆ. ಫೆಬ್ರುವರಿ 2023ರಲ್ಲಿ 1,224 ಪ್ರಕರಣಗಳು ವರದಿಯಾಗಿದ್ದವು. 2024ರ ಜನವರಿಗೆ ಹೋಲಿಸಿದರೆ ಫೆಬ್ರುವರಿ 2024ರಲ್ಲಿ ಏರಿಕೆ ಕಂಡಿವೆ.

 

ವಿಶೇಷ ಮತ್ತು ಸ್ಥಳೀಯ ಕಾನೂನುಗಳನ್ನು ಉಲ್ಲಂಘಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ 2024ರ ಜನವರಿಯಲ್ಲಿ 4,702 ಪ್ರಕರಣಗಳು ದಾಖಲಾಗಿದ್ದವು. ಫೆಬ್ರುವರಿಯಲ್ಲಿ 4,742 ಪ್ರಕರಣಗಳು ವರದಿಯಾಗುವ ಮೂಲಕ ಈ ವಿಭಾಗದಲ್ಲಿ ಏರಿಕೆ ಕಂಡಿದೆ.

 

ವರದಕ್ಷಿಣೆ ಕಿರುಕುಳ ಮತ್ತು ಸಂಬಂಧಿಸಿದಂತೆ ಜನವರಿ 2024ರಲ್ಲಿ 6 ಪ್ರಕರಣಗಳು ವರದಿಯಾಗಿದ್ದರೇ ಫೆಬ್ರುವರಿಯಲ್ಲಿ 13 ಪ್ರಕರಣಗಳು ವರದಿಯಾಗಿದ್ದವು. 2023ರ ಫೆಬ್ರುವರಿಯಲ್ಲಿ 9 ಪ್ರಕರಣಗಳು ವರದಿಯಾಗಿದ್ದವು.

 

ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಜನವರಿ 2024ರಲ್ಲಿ  51 ಪ್ರಕರಣಗಳುಉ ಇದ್ದರೇ ಫೆಬ್ರುವರಿಯಲ್ಲಿ 40 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. 2023ರ ಫೆಬ್ರುವರಿಯಲ್ಲಿ 54 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದವು.

 

ಜನವರಿ 2024ರಲ್ಲಿ 323, ಫೆಬ್ರುವರಿ 2024ರಲ್ಲಿ 278 ಪೋಕ್ಸೋ ಪ್ರಕರಣಗಳು ವರದಿಯಾಗಿದ್ದವು. 2023ರ ಫೆಬ್ರುವರಿಯಲ್ಲಿ 240 ಪ್ರಕರಣಗಳು ವರದಿಯಾಗಿದ್ದವು. ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದ 2 ತಿಂಗಳಲ್ಲಿ ಪೋಕ್ಸೋ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿವೆ.

 

ಎಸ್‌ಸಿ, ಎಸ್‌ಟಿ ಮತ್ತು ಪಿಒಎ ಕಾಯ್ದೆಯಡಿಯಲ್ಲಿ 2024ರ ಜನವರಿಯಲ್ಲಿ 208 ಪ್ರಕರಣಗಳು ವರದಿಯಾಗಿದ್ದರೇ ಫೆಬ್ರುವರಿ 2024ರಲ್ಲಿ 204 ಪ್ರಕರಣಗಳು ವರದಿಯಾಗಿವೆ. 2023 ಫೆಬ್ರುವರಿಯಲ್ಲಿ 145 ಪ್ರಕರಣಗಳು ವರದಿಯಾಗಿವೆ. ಹಿಂದಿನ ಬಿಜೆಪಿ ಸರ್ಕಾರಕ್ಕೆ ಹೋಲಿಸಿದರೆ ಈಗಿನ ಸರ್ಕಾರಕ್ಕೆ ಹೋಲಿಸಿದರೆ ಏರಿಕೆ ಕಂಡಿರುವುದು ಗೊತ್ತಾಗಿದೆ.

 

ಸೈಬರ್‌ ಅಪರಾಧಕ್ಕೆ ಸಂಬಂಧಿಸಿದಂತೆ 2024ರ ಜನವರಿಯಲ್ಲಿ 1,904 ಪ್ರಕರಣಗಳು ಇದ್ದರೇ 2024ರ ಫೆಬ್ರುವರಿಯಲ್ಲಿ 2,004 ಪ್ರಕರಣಗಳು ವರದಿಯಾಗಿವೆ. 2023ರ ಫೆಬ್ರುವರಿಯಲ್ಲಿ 1,372 ಪ್ರಕರಣಗಳು ವರದಿಯಾಗಿದ್ದವು. ಜನವರಿ 2024ಕ್ಕೆ ಹೋಲಿಸಿದರೆ ಫೆಬ್ರುವರಿಯ6ಲ್ಲಿ ಏರಿಕೆ ಕಂಡಿರುವುದು ತಿಳಿದು ಬಂದಿದೆ.

 

ಆರ್ಥಿಕ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲೂ ಏರಿಕೆ ಕಂಡಿವೆ. 2024ರ ಜನವರಿಯಲ್ಲಿ 677, ಫೆಬ್ರುವರಿಯಲ್ಲಿ 672 ಪ್ರಕರಣಗಳು ವರದಿಯಾಗಿವೆ. ಫೆಬ್ರುವರಿ 2023ರಲ್ಲಿ 546 ಪ್ರಕರಣಗಳು ವರದಿಯಾಗಿದ್ದವು.

 

ಮೋಟಾರು ವಾಹನಗಳ ಕಳವು ಸಂಬಂಧದ ಪ್ರಕರಣಗಳು ಸಂಖ್ಯೆಯಲ್ಲೂ ಏರಿಕೆ ಕಂಡಿವೆ. 2024ರ ಜನವರಿಯಲ್ಲಿ 1,018, ಫೆಬ್ರುವರಿಯಲ್ಲಿ 1,025 ಪ್ರಕರಣಗಳು ವರದಿಯಾಗಿದ್ದವು. 2023ರ ಫೆಬ್ರುವರಿಯಲ್ಲಿ 859 ಪ್ರಕರಣಗಳು ವರದಿಯಾಗಿದ್ದವು. ಜನವರಿ 2024ಕ್ಕೆ ಹೋಲಿಸಿದರೆ ಫೆಬ್ರುವರಿ 2024ರ ಅಂತ್ಯಕ್ಕೆ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿವೆ.

 

ರಾಜ್ಯದಲ್ಲಿ ವರದಿಯಾಗಿರುವ  ಕೊಲೆ,  ದರೋಡೆ, ಸುಲಿಗೆ, ಕಳ್ಳತನ, ಅತ್ಯಾಚಾರ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ, ಸೈಬರ್‌ ಅಪರಾಧ ಪ್ರಕರಣಗಳ ಸಂಖ್ಯೆ ಕುರಿತಾಗಿ ‘ದಿ ಫೈಲ್‌’ ಪ್ರಕಟಿಸಿದ್ದ ವರದಿಯನ್ನು ಬಿಜೆಪಿ ಟ್ವೀಟ್‌ ಮಾಡಿತ್ತು.

 

‘ದಿ ಫೈಲ್‌’ ಪ್ರಕಟಿಸಿದ್ದ ವರದಿಯನ್ನು  ತನ್ನ ಅಧಿಕೃತ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿ ಹಂಚಿಕೊಂಡಿರುವ ಬಿಜೆಪಿಯು  ‘ಕಾಂಗ್ರೆಸ್‌ ಬಂದಿದೆ, ಕ್ರೈಂ ರೇಟ್‌ ಹೆಚ್ಚಿದೆ,’ ಎಂದು ಲೇವಡಿ ಮಾಡಿತ್ತು. 

 

ಸರ್ಕಾರವೇ ಕಲೆಕ್ಷನ್‌ ದಂಧೆ ಮಾಡಿಕೊಳ್ಳುತ್ತಾ ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿರುವಾಗ ವೃತ್ತಿಪರ ಖದೀಮರು ಸುಮ್ಮನಿರುತ್ತಾರಾ? ಕೊಲೆ, ದರೋಡೆ, ಸುಲಿಗೆ, ಕಳ್ಳತನ ಸೇರಿದಂತೆ ಎಲ್ಲಾ ರೀತಿಯ ಅಪರಾಧ ಪ್ರಕರಣಗಳೂ  ಸರ್ಕಾರ ಬಂದಾಗಿನಿಂದ ಹೆಚ್ಚಾಗಿದೆ. ನಾಲ್ಕೇ ತಿಂಗಳಲ್ಲಿ 43,412 ಪ್ರಕರಣ ದಾಖಲಾಗುವ ಮೂಲಕ ಕರ್ನಾಟಕ ಕ್ರಿಮಿನಲ್‌ಗಳ ಬೀಡಾಗಿದೆ ಎಂದೂ ಕುಟುಕಿತ್ತು.

‘ಕಾಂಗ್ರೆಸ್‌ ಬಂದಿದೆ, ಕ್ರೈಂ ರೇಟ್‌ ಹೆಚ್ಚಿದೆ,’ ; ‘ದಿ ಫೈಲ್‌’ ವರದಿ ಟ್ವೀಟ್‌ ಮಾಡಿ ಕುಟುಕಿದ ಬಿಜೆಪಿ

 

 

ರಾಜ್ಯದಲ್ಲಿ 2023ರ  ಜೂನ್‌ನಿಂದ ಸೆಪ್ಟಂಬರ್‌ ಅವಧಿಯ  4 ತಿಂಗಳಲ್ಲಿ ಕೊಲೆ,  ದರೋಡೆ, ಸುಲಿಗೆ, ಕಳ್ಳತನ, ಅತ್ಯಾಚಾರ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ, ಸೈಬರ್‌ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ. ಹಿಂದಿನ ಸರ್ಕಾರದ (ಜೂನ್‌-ಸೆಪ್ಟಂಬರ್‌  2022)ದ ಇದೇ ಅವಧಿಗೆ ಹೋಲಿಸಿದರೆ ಈಗಿನ ಕಾಂಗ್ರೆಸ್‌ ಸರ್ಕಾರದ 4 ತಿಂಗಳ ಅವಧಿಯಲ್ಲಿ ಒಟ್ಟಾರೆ 11,616  ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತು.

 

ಕರ್ನಾಟಕ ಪೊಲೀಸ್‌ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಅಪರಾಧಗಳ ಸಮೀಕ್ಷೆ ಸಂಬಂಧ ದಾಖಲಿಸಿರುವ ದತ್ತಾಂಶಗಳ ಪ್ರಕಾರ ಹಿಂದಿನ ಸರ್ಕಾರದ ಇದೇ ಅವಧಿ (ಜೂನ್‌ನಿಂದ ಸೆಪ್ಟಂಬರ್‌)ಯಲ್ಲಿ ಒಟ್ಟಾರೆ 31,796 ಪ್ರಕರಣಗಳು ದಾಖಲಾಗಿದ್ದವು. ಈಗಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ  43,412 ಪ್ರಕರಣಗಳು ವರದಿಯಾಗಿದ್ದವು.

 

2022ರ ಜೂನ್‌ನಿಂದ ಸೆಪ್ಟಂಬರ್‌ವರೆಗೆ 443 ಕೊಲೆ ಪ್ರಕರಣಗಳು ವರದಿಯಾಗಿದ್ದವು. 66 ಡಕಾಯಿತಿ, 681 ದರೋಡೆ, 9,875 ಕಳ್ಳತನ, 1,210 ಗಲಭೆ, 4,893 ನೋವುಂಟಾದ ಪ್ರಕರಣಗಳು, 188 ಅತ್ಯಾಚಾರ, 881 ಪೋಕ್ಸೋ, ಜಾತಿ ದೌರ್ಜನ್ಯ 630, 4,302 ಸೈಬರ್‌ ಅಪರಾಧ, 2,375 ಆರ್ಥಿಕ ಅಪರಾಧ, ಮೋಟಾರು ವಾಹನಗಳ ಕಳ್ಳತನ 4,334, ಎನ್‌ಡಿಪಿಎಸ್‌ 2,511 ಸೇರಿ ಒಟ್ಟಾರೆ 31,796 ಪ್ರಕರಣಗಳು ರಾಜ್ಯದ ವಿವಿಧೆಡೆ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದವು.

 

2023ರ ಜೂನ್‌ನಿಂದ ಸೆಪ್ಟಂಬರ್‌ವರೆಗೆ 423 ಕೊಲೆ ಪ್ರಕರಣಗಳು ವರದಿಯಾಗಿವೆ. 60 ಡಕಾಯಿತಿ, ದರೋಡೆ 718, 12,642 ಕಳ್ಳತನ, 1,349 ಗಲಭೆ, 6,226 ನೋವುಂಟು ಮಾಡಿದ ಪ್ರಕರಣಗಳು, 1,211 ಪೋಕ್ಸೋ, 809 ಜಾತಿ ದೌರ್ಜನ್ಯ, 216 ಅತ್ಯಾಚಾರ, 8,043 ಸೈಬರ್‌ ಅಪರಾಧ, 2,968 ಆರ್ಥಿಕ ಅಪರಾಧ, 5,411 ಮೋಟಾರು ವಾಹನಗಳ ಕಳ್ಳತನ, 3,336 ಎನ್‌ಡಿಪಿಎಸ್‌ ಸೇರಿದಂತೆ ಒಟ್ಟಾರೆ 40,441 ಪ್ರಕರಣಗಳು ವರದಿಯಾಗಿರುವುದು ಕರ್ನಾಟಕ ಪೊಲೀಸ್ ಇಲಾಖೆಯ ಅಧಿಕೃತ ಜಾಲತಾಣದಿಂದ ತಿಳಿದು ಬಂದಿದೆ.

 

‘ರಾಜ್ಯ ಕಾಂಗ್ರೆಸ್‌  ಸರ್ಕಾರದ ಅರಾಜಕತೆಯ ಆಡಳಿತದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಹಾಗೂ ಕೊಲೆ ಯತ್ನಗಳು ನಿರಂತರವಾಗಿ ನಡೆಯುತ್ತಲೇ ಇದೆ,’ ಎಂದು ಬಿಜೆಪಿ ಪಕ್ಷವು ಟ್ವೀಟ್‌ ಮಾಡಿರುವ ಬೆನ್ನಲ್ಲೇ  2022 ಮತ್ತು 2023 ರ ಜೂನ್‌, ಜುಲೈ, ಆಗಸ್ಟ್‌, ಸೆಪ್ಟಂಬರ್‌ ನಲ್ಲಿ ದಾಖಲಾಗಿದ್ದ ಅಪರಾಧ ಪ್ರಕರಣಗಳ ಅಂಕಿ ಸಂಖ್ಯೆಗಳು ಮುನ್ನೆಲೆಗೆ ಬಂದಿವೆ.

 

ಕೊಲೆ ಪ್ರಕರಣಗಳು 

 

2023ರ ಸೆಪ್ಟಂಬರ್‌ ಅಂತ್ಯಕ್ಕೆ 117 ಕೊಲೆ ಪ್ರಕರಣಗಳು ವರದಿಯಾಗಿದ್ದವು. 2022ರ ಸೆಪ್ಟಂಬರ್‌ನಲ್ಲಿ 111 ಕೊಲೆ ಪ್ರಕರಣಗಳು ದಾಖಲಾಗಿದ್ದವು. 2023ರ ಆಗಸ್ಟ್‌ನಲ್ಲಿ 102 ಕೊಲೆ ಪ್ರಕರಣಗಳು ದಾಖಲಾಗಿದ್ದವು.

 

 

ಕೊಲೆ, ದರೋಡೆ, ಸುಲಿಗೆ, ಅತ್ಯಾಚಾರ,ಇತರೆ ಅಪರಾಧಗಳು ಹೆಚ್ಚಳ; 4 ತಿಂಗಳಲ್ಲೇ 43,412 ಪ್ರಕರಣ ದಾಖಲು

 

ದರೋಡೆ ಪ್ರಕರಣಗಳು

 

2022ರ ಸೆಪ್ಟಂಬರ್‌ ಅಂತ್ಯಕ್ಕೆ 13 ಡಕಾಯಿತಿ ಪ್ರಕರಣಗಳು ದಾಖಲಾಗಿದ್ದರೇ 2023ರ ಸೆಪ್ಟಂಬರ್‌ನಲ್ಲಿ 20 ಪ್ರಕರಣಗಳು ವರದಿಯಾಗಿವೆ. 2023ರ ಆಗಸ್ಟ್‌ನಲ್ಲಿ 17 ಪ್ರಕರಣಗಳು ದಾಖಲಾಗಿದ್ದವು.

 

ದರೋಡೆ, ದಲಿತರ ಮೇಲೆ ದೌರ್ಜನ್ಯ, ಕಳ್ಳತನ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ; ಅಪರಾಧ ಸಮೀಕ್ಷೆಯಲ್ಲಿ ಬಹಿರಂಗ

 

 

ಹಿಂದಿನ ಬಿಜೆಪಿಸರ್ಕಾರದ ಅವಧಿಯಲ್ಲಿಯೂ ಕಾನೂನು ಸುವ್ಯವಸ್ಥೆಯೂ ಹದಗೆಟ್ಟಿತ್ತು.

 

ಮೂರು ವರ್ಷಗಳಲ್ಲಿ ಮಕ್ಕಳೂ ಸೇರಿ 6,804 ಗಂಡಸರು ಮತ್ತು ಮಹಿಳೆಯರು ನಾಪತ್ತೆ; ಪತ್ತೆ ಹಚ್ಚುವಲ್ಲಿ ವಿಫಲ

ಅಲ್ಲದೇ ಲೈಂಗಿಕ ಹಿಂಸೆ ಪ್ರಕರಣಗಳ ಸಂಖ್ಯೆಯೂ ದುಪ್ಪಟ್ಟಾಗಿತ್ತು.

 

3 ವರ್ಷದಲ್ಲಿ 15,769 ಲೈಂಗಿಕ ಹಿಂಸೆ, 8,333 ಪೋಕ್ಸೋ, 1,606 ಅತ್ಯಾಚಾರ, 880 ಮಹಿಳೆಯರ ಅಕ್ರಮ ಸಾಗಾಣಿಕೆ

 

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಪರಾಧಗಳ ಸಂಖ್ಯೆ ಇಳಿಮುಖವಾಗಲಿದೆ ಎಂದು ಹೇಳಲಾಗಿತ್ತು. ಆದರೀಗ ಅಂಕಿ ಸಂಖ್ಯೆಗಳನ್ನು ತುಲನೆ ಮಾಡಿದಾಗ ಹಿಂದಿನ ಸರ್ಕಾರದ ಅವಧಿಗೆ ಹೋಲಿಸಿದರೆ ಈಗಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿಯೂ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಏರುಗತಿ ಕಂಡಿರುವುದು ಕಂಡುಬರುತ್ತದೆ.

the fil favicon

SUPPORT THE FILE

Latest News

Related Posts