Monday | May 25, 2026 |

ಜಲಧಾರೆ, ಜಲಜೀವನ್‌ ಮಿಷನ್‌, ಗ್ರಾಮೀಣಾಭಿವೃದ್ಧಿಗೆ 37,621.96 ಕೋಟಿ ರು.ಗಳ ಬೇಡಿಕೆ

ಬೆಂಗಳೂರು; ರಾಜ್ಯ, ಜಿಲ್ಲಾ ವಲಯದ ಅಭಿವೃದ್ಧಿ, ವೇತನ ಮತ್ತು ಹೊಸ ಯೋಜನೆಗಳಿಗಾಗಿ 2024-25ನೇ ಸಾಲಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಒಟ್ಟಾರೆ 37,621.96 ಕೋಟಿ ರು.ಗಳ ಬೇಡಿಕೆಯನ್ನು ಮಂಡಿಸಿದೆ.

 

2023-24ನೇ ಸಾಲಿನಲ್ಲಿ ಈ ವಲಯಗಳಿಗೆ ಒಟ್ಟಾರೆ 17,904.06 ಕೋಟಿ ರು. ಹಂಚಿಕೆ ಮಾಡಲಾಗಿತ್ತು. 2024-25ನೇ ಸಾಲಿನಲ್ಲಿ 19,717.9 ಕೋಟಿ ರು. ಹೆಚ್ಚುವರಿ ಬೇಡಿಕೆ ಪಟ್ಟಿಯನ್ನು ಸರ್ಕಾರದ ಮುಂದಿರಿಸಿದೆ.

 

ಇದರಲ್ಲಿ ಜಲಧಾರೆ, ಜಲಜೀವನ್‌ ಮಿಷನ್‌, ಗ್ರಾಮೀಣ ನೀರು ಸರಬರಾಜು, ಗ್ರಾಮ ಸಡಕ್‌, ಕೆರೆಗಳ ಪುನರುಜ್ಜೀವನ ಸೇರಿದಂತೆ ಇನ್ನಿತರೆ ಮಹತ್ವಾಕಾಂಕ್ಷೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ 22,647.04 ಕೋಟಿ ರು. ಅನುದಾನ ಬೇಕಿದೆ.

 

5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಿರುವ ರಾಜ್ಯ ಸರ್ಕಾರವು ಇಲಾಖೆಗಳು ಹೊಸ ಯೋಜನೆಗಳನ್ನೂ ಒಳಗೊಂಡಂತೆ ಚಾಲ್ತಿಯಲ್ಲಿರುವ ಕಾರ್ಯಕ್ರಮಗಳನ್ನು ಮುಂದುವರೆಸಲು ಸಲ್ಲಿಸುತ್ತಿರುವ ಅಂದಾಜು ಪ್ರಸ್ತಾವನೆಗಳ ಕಂಡು ಸರ್ಕಾರವು ದಿಗಿಲು ಬಿದ್ದಿದೆ.

 

2024-25ನೇ ಸಾಲಿನಲ್ಲಿ 37,621.96 ಕೋಟಿ ರು. ಅನುದಾನ ಒದಗಿಸಬೇಕು ಎಂದು ಇಲಾಖೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

2023-24ನೇ ಸಾಲಿನಲ್ಲಿ ಒಟ್ಟು 27 ಕಾರ್ಯಕ್ರಮಗಳಿಗೆ 7,370.93 ಕೋಟಿ ರು. ಒದಗಿಸಲಾಗಿತ್ತು. ಈ ಪೈಕಿ ಇದುವರೆಗೂ 6,211.20 ಕೋಟಿ ರು. ವೆಚ್ಚವಾಗಿದೆ. ಈ ಕಾರ್ಯಕ್ರಮಗಳಿಗೆ ಆರ್ಥಿಕ ಇಲಾಖೆಯು 5,321.06ಕೋಟಿ ರು.ಗಳನ್ನು ಸೂಚಿಸಿತ್ತು. ಆದರೆ 890.14 ಕೋಟಿ ರು. ಹೆಚ್ಚುವರಿಯಾಗಿ ವೆಚ್ಚ ಮಾಡಿದೆ. ಅಲ್ಲದೇ 17,325.98 ಕೋಟಿ ರು. ಹೆಚ್ಚುವರಿ ಸೇರಿ 2024-25ನೇ ಸಾಲಿಗೆ ಒಟ್ಟಾರೆ 22,647.04 ಕೋಟಿ ರು. ಒದಗಿಸಬೇಕು ಎಂದು ಪ್ರಸ್ತಾವ ಸಲ್ಲಿಸಿದೆ.

 

ಜಿಲ್ಲಾ ವಲಯಗಳಲ್ಲಿರುವ 19 ಯೋಜನೆಗಳಿಗೆ 2023-24ನೇ ಸಾಲಿನಲ್ಲಿ 7,693.81 ಕೋಟಿ ರು. ಅನುದಾನ ಒದಗಿಸಲಾಗಿತ್ತು. ಈ ಪೈಕಿ ಇದುವರೆಗೆ 3,843.83 ಕೋಟಿ ರು. ವೆಚ್ಚವಾಗಿದೆ. ಈ ವಲಯದ ಕಾರ್ಯಕ್ರಮಗಳಿಗೆ ಹೆಚ್ಚುವರಿ 2,467.89 ಕೋಟಿ ರು. ಸೇರಿ ಒಟ್ಟಾರೆ 10,161.70 ಕೋಟಿ ರು. ಒದಗಿಸಬೇಕು ಎಂದು ಕೋರಿದೆ.

 

ಸಚಿವರು, ಶಾಸಕರು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ರಸ್ತೆ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲು ಸಲ್ಲಿಸಿರುವ ಕೋರಿಕೆ ಈಡೇರಿಸಲು ಸರ್ಕಾರದ ಬಳಿ 245.37 ಕೋಟಿ ರು. ಅನುದಾನವಿಲ್ಲ ಎಂದ ಇಲಾಖೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿರುವ ಬೆನ್ನಲ್ಲೇ ರಾಜ್ಯ ವಲಯಕ್ಕೆ ಕೋರಿರುವ ಅನುದಾನ ಒದಗಿಸದೇ ಇದ್ದಲ್ಲಿ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನೇ ಅರ್ಧಕ್ಕೆ ನಿಲ್ಲಿಸಬೇಕಾದ ಸ್ಥಿತಿಯೂ ಎದುರಾಗಬಹುದು ಎಂದು ಹೇಳಲಾಗುತ್ತಿದೆ.

 

ರಾಜ್ಯದ ಎಲ್ಲಾ ಗ್ರಾಮೀಣ ಮನೆಗಳ ನಳ ಸಂಪರ್ಕ ಒದಗಿಸುವ ಗುರಿ ತಲುಪಲು ಒಟ್ಟಾರೆ 73,434.40 ಕೋಟಿ ರು. ಅವಶ್ಯಕತೆ ಇದೆ. 2024-25ನೇ ಸಾಲಿನಲ್ಲಿ ಒಟ್ಟು 14,300 ಕೋಟಿ ರು. ಅಗತ್ಯವಿದೆ. ಈ ಪೈಕಿ ಕೇಂದ್ರ ಸರ್ಕಾರದ ಪಾಲು 8,800 ಕೋಟಿ ರು., ರಾಜ್ಯದ ಪಾಲು 5,500 ಕೋಟಿ ರು. ಒದಗಿಸಬೇಕಿದೆ ಎಂದು ಪ್ರಸ್ತಾವದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಜಲಧಾರೆ ಒಳಗೊಂಡಂತೆ ಗ್ರಾಮೀಣ ನೀರು ಸರಬರಾಜು ಯೋಜನೆ (ಲೆಕ್ಕ ಶೀರ್ಷಿಕೆ; 4215-01-102-2-01) ಅಡಿಯಲ್ಲಿ 300 ಕೋಟಿ ರು. ನೀಡಿದ್ದರೂ ಇದುವರೆಗೆ ಕೇವಲ 15.39 ಕೋಟಿಯಷ್ಟೇ ವೆಚ್ಚವಾಗಿದೆ. ಆದರೂ 2024-25ನೇ ಸಾಲಿಗೆ ಹೆಚ್ಚುವರಿ 185 ಕೋಟಿ ರೂ ಸೇರಿದಂತೆ ಒಟ್ಟಾರೆ 485.00 ಕೋಟಿ ರು. ಅವಶ್ಯಕತೆ ಇದೆ ಎಂದು ಅಂದಾಜಿಸಿದೆ.

 

ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ಜಲಜೀವನ್‌ ಮಿಷನ್‌ಗೆ ಕೇಂದ್ರದ ಪಾಲು (ಗ್ರಾಮೀಣ ಕುಡಿಯುವ ನೀರು) 2023-24ರಲ್ಲಿ 1,500 ಕೋಟಿ ರು. ಮತ್ತು ರಾಜ್ಯದ ಪಾಲು 3,233.76 ಕೋಟಿ ರು ಅಂದಾಜಿಸಲಾಗಿತ್ತು. ಈ ಪೈಕಿ 5,213.06 ಕೋಟಿ ರು. ವೆಚ್ಚವಾಗಿದೆ. ಹಿಂದಿನ ವರ್ಷದ ಅಂದಾಜಿಗಿಂತ ಹೆಚ್ಚುವರಿಯಾಗಿ 3,000 ಕೋಟಿ ರು. ಒದಗಿಸಬೇಕು ಎಂದು ಪ್ರಸ್ತಾವದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಗ್ರಾಮೀಣ ನೀರು ಸರಬರಾಜು ಯೋಜನೆಗಳು ಮತ್ತು ಕೊಳವೆ ಬಾವಿಗಳ ಯೋಜನೆಗಳ ನಿರ್ವಹಣೆಗೆ ಹಿಂದಿನ ಸಾಲಿನಲ್ಲಿ ನೀಡಿದ್ದ 250 ಕೋಟಿ ರು.ನಲ್ಲಿ 225.62 ಕೋಟಿ ರು. ವೆಚ್ಚವಾಗಿದೆ. ಹೀಗಾಗಿ ಬಾಕಿ ಕಾಮಗಾರಿಗಳನ್ನು ಪೂರೈಸಲು 2024-25ನೇ ಸಾಲಿನಲ್ಲಿ 15 ಕೋಟಿ ರು. ಹೆಚ್ಚುವರಿ ಸೇರಿದಂತೆ ಒಟ್ಟಾರೆ 715 ಕೋಟಿ ರು. ಅವಶ್ಯಕತೆ ಇದೆ ಎಂದು ಹೇಳಿದೆ.

 

ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ 2020-21, 2021-22, 2022-23ರಲ್ಲಿ ಒಟ್ಟಾರೆ 3,330.30 ಕೋಟಿ ರು.ಬಿಡುಗಡೆಯಾಗಿತ್ತು. ಉಳಿದ ಮೊತ್ತಕ್ಕೆ ಹೆಚ್ಚುವರಿ ಜಿಎಸ್‌ಟಿ ಮೊತ್ತ ಶೇ.6ರಷ್ಟು ಒಳಗೊಂಡಂತೆ ಒಟ್ಟಾರೆ 350 ಕೋಟಿ ರು. ಅವಶ್ಯಕತೆ ಇದೆ.

 

ಇದೇ ಯೋಜನೆಯಡಿ ರಸ್ತೆ ನಿರ್ವಹಣೆಗಾಗಿ 2023-24ನೇ ಸಾಲಿನಲ್ಲಿ 100 ಕೋಟಿ ರು. ನಿಗದಿಪಡಿಸಿತ್ತು. ಈ ಪೈಕಿ ಬಿಡಿಗಾಸನ್ನೂ ನೀಡಿಲ್ಲ. 2024-25ನೇ ಸಾಲಿನಲ್ಲಿ 50 ಕೋಟಿ ರು. ಕೋರಿದೆ. ಅದೇ ರೀತಿ ರಾಷ್ಟ್ರೀಯ ಗ್ರಾಮ ಸ್ವರಾಜ್‌ ಅಭಿಯಾನಕ್ಕೆ ಕೇಂದ್ರದ ಪಾಲಿನಲ್ಲಿ ಹೆಚ್ಚುವರಿಯಾಗಿ 76 ಕೋಟಿ ರು. ಸೇರಿ ಒಟ್ಟಾರೆ 96 ಕೋಟಿ ರು. ಬೇಕಿದೆ. ಇದೇ ಯೋಜನೆಗೆ ರಾಜ್ಯದ ಪಾಲಿನ ರೂಪದಲ್ಲಿ 54 ಕೋಟಿ ರು. ಹೆಚ್ಚುವರಿ ಸೇರಿದಂತೆ ಒಟ್ಟಾರೆ 64 ಕೋಟಿ ರು. ಅನುದಾನ ನಿಗದಿಪಡಿಸಬಹುದು ಎಂದು ಹೇಳಿದೆ.

 

ನಮ್ಮ ಗ್ರಾಮ ನಮ್ಮರಸ್ತೆ ಯೋಜನೆ, ಇತರೆ ಗ್ರಾಮೀಣ ರಸ್ತೆಗಳ ಯೋಜನೆಗಳಿಗಾಗಿ ಹೆಚ್ಚುವರಿ 275 ಕೋಟಿ ರು. ಸೇರಿ 2024-25ನೇ ಸಾಲಿನಲ್ಲಿ ಒಟ್ಟಾರೆ 425 ಕೋಟಿ ರು. ಬೇಕು. ಜಿಲ್ಲಾ ಪಂಚಾಯತ್‌ ವ್ಯಾಪ್ತಿಯಲ್ಲಿನ ಕೆರೆಗಳ ಜೀರ್ಣೋದ್ಧಾರ ಮತ್ತು ಪುನರುಜ್ಜೀವನಕ್ಕಾಗಿ ಹೆಚ್ಚುವರಿ 100 ಕೋಟಿ ರು. ಸೇರಿ ಒಟ್ಟಾರೆ 150 ಕೋಟಿ ರು. ಬೇಕಿದೆ.

 

ಗ್ರಾಮೀಣ ರಸ್ತೆಗಳಿಗಾಗಿ ಕಳೆದ 5 ವರ್ಷಗಳಲ್ಲಿ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ, ಮಳೆ ಪರಿಹಾರ ಕಾರ್ಯಕ್ರಮ ಮತ್ತು ಗ್ರಾಮೀಣ ರಸ್ತೆಗಳು ಕಾರ್ಯಕ್ರಮದಡಿ 10,505.02 ಕೋಟಿ ರು. ಮಂಜೂರಾತಿ ದೊರೆತಿದೆ. ಈ ಪೈಕಿ ಇದುವರೆಗೂ 5,543.82 ಕೋಟಿ ರು. ಬಿಡುಗಡೆ ಮಾಡಿದೆ. ಇನ್ನೂ 4,961.20 ಕೋಟಿ ರು. ಬಿಡುಗಡೆಗೆ ಬಾಕಿ ಇದೆ. ಇದನ್ನು 2024-25ನೇ ಸಾಲಿನಲ್ಲಿ ಬಿಡುಗಡೆ ಮಾಡಬೇಕು ಎಂದು ಕೋರಿಕೆ ಸಲ್ಲಿಸಿರುವುದು ತಿಳಿದು ಬಂದಿದೆ.

Hot this week

ಸರ್ಕಾರದ ಹಿತಾಸಕ್ತಿ, ಘನತೆಗೆ ಧಕ್ಕೆ ನೆಪ; ಸಮಿತಿ ರಚನೆಯಿಲ್ಲದೇ 21 ಪ್ಯಾಕೇಜ್‌ ಟೆಂಡರ್ ಅನುಮೋದನೆ, 4,791.95 ಕೋಟಿ ರು ಹಗರಣ?

ಬೆಂಗಳೂರು; ಘನತ್ಯಾಜ್ಯ ನಿರ್ವಹಣೆಯ 21  ಪ್ಯಾಕೇಜ್‌ಗಳಿಗೆ ಟೆಂಡರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ  ಐಎಎಸ್...

ಐಎಎಸ್‌ ವೃಂದದಲ್ಲಿ ಅನರ್ಹ 7 ಅಧಿಕಾರಿಗಳು ಮುಂದುವರಿಕೆ; ಬಂಡೆದ್ದ 25 ಕೆಎಎಸ್‌ ಅಧಿಕಾರಿಗಳು, ಅಖಾಡಕ್ಕಿಳಿದ ಡಿ ಕೆ ಶಿವಕುಮಾರ್

ಬೆಂಗಳೂರು;  ಕನಿಷ್ಟ 8 ವರ್ಷಗಳ ನಿಯಮಿತವಾಗಿ ಸೇವೆ ಸಲ್ಲಿಸಿರುವ  ಕೆಎಎಸ್‌ ಅಧಿಕಾರಿಗಳಿಗೆ...

‘ನಾನು ಹೇಳೋವರೆಗೂ ಕೂಡಂಗಿಲ್ಲ, ಗೆಟ್‌ ಔಟ್‌, ಗೆಟ್‌ ಔಟ್’; ಮಂಡಳಿ ಕಾರ್ಯದರ್ಶಿಯಿಂದಲೇ ಪ್ರಾಜೆಕ್ಟ್ ಇಂಜಿನಿಯರ್ ಸಮೀರ್ ಗೆ ಅವಮಾನ?

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿರುವ  ಕರ್ನಾಟಕ ರಾಜ್ಯ ವಿಜ್ಞಾನ ಮತ್ತು...
Please Scan to make Your Contribution

Topics

ಸರ್ಕಾರದ ಹಿತಾಸಕ್ತಿ, ಘನತೆಗೆ ಧಕ್ಕೆ ನೆಪ; ಸಮಿತಿ ರಚನೆಯಿಲ್ಲದೇ 21 ಪ್ಯಾಕೇಜ್‌ ಟೆಂಡರ್ ಅನುಮೋದನೆ, 4,791.95 ಕೋಟಿ ರು ಹಗರಣ?

ಬೆಂಗಳೂರು; ಘನತ್ಯಾಜ್ಯ ನಿರ್ವಹಣೆಯ 21  ಪ್ಯಾಕೇಜ್‌ಗಳಿಗೆ ಟೆಂಡರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ  ಐಎಎಸ್...

ಐಎಎಸ್‌ ವೃಂದದಲ್ಲಿ ಅನರ್ಹ 7 ಅಧಿಕಾರಿಗಳು ಮುಂದುವರಿಕೆ; ಬಂಡೆದ್ದ 25 ಕೆಎಎಸ್‌ ಅಧಿಕಾರಿಗಳು, ಅಖಾಡಕ್ಕಿಳಿದ ಡಿ ಕೆ ಶಿವಕುಮಾರ್

ಬೆಂಗಳೂರು;  ಕನಿಷ್ಟ 8 ವರ್ಷಗಳ ನಿಯಮಿತವಾಗಿ ಸೇವೆ ಸಲ್ಲಿಸಿರುವ  ಕೆಎಎಸ್‌ ಅಧಿಕಾರಿಗಳಿಗೆ...

‘ನಾನು ಹೇಳೋವರೆಗೂ ಕೂಡಂಗಿಲ್ಲ, ಗೆಟ್‌ ಔಟ್‌, ಗೆಟ್‌ ಔಟ್’; ಮಂಡಳಿ ಕಾರ್ಯದರ್ಶಿಯಿಂದಲೇ ಪ್ರಾಜೆಕ್ಟ್ ಇಂಜಿನಿಯರ್ ಸಮೀರ್ ಗೆ ಅವಮಾನ?

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿರುವ  ಕರ್ನಾಟಕ ರಾಜ್ಯ ವಿಜ್ಞಾನ ಮತ್ತು...

52 ಕ್ರಿಮಿನಲ್ ಪ್ರಕರಣಗಳ ಹಿಂತೆಗೆತಕ್ಕೆ ಮತ್ತೆ ಚಾಲನೆ; ಡಿಜಿಐಜಿಪಿ, ಕಾನೂನು ಇಲಾಖೆ ಅಸಮ್ಮತಿ ನಡುವೆಯೂ ಪ್ರಸ್ತಾವ

ಬೆಂಗಳೂರು; ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ  ಜನಪ್ರತಿನಿಧಿಗಳ ವಿರುದ್ಧ  ದಾಖಲಾಗಿರುವ ಮತ್ತು...

ಸ್ವಚ್ಛ ನಗರಿಯ ಕಸದ ಕರಾಳತೆ; ಪರೀಕ್ಷೆಯಿಲ್ಲದೇ ವಿಷಕಾರಿ ತ್ಯಾಜ್ಯ ನಿರ್ವಹಣೆ, ಸಿಎಂ ತವರಿನಲ್ಲೇ ಅವೈಜ್ಞಾನಿಕ ವಿಲೇವಾರಿ?

ಬೆಂಗಳೂರು;  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ  ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ ...

Related Articles

Popular Categories

error: Content is protected !!