ಬೆಂಗಳೂರು; 2023-24ನೇ ಹಣಕಾಸು ವರ್ಷದ ಸೇವೆಗಳಿಗಾಗಿ ಕರ್ನಾಟಕ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಕೆಲವು ಅಧಿಕ ಮೊತ್ತಗಳ ಸಂದಾಯ ಮತ್ತು ವಿನಿಯೋಗಕ್ಕಾಗಿ ಕರ್ನಾಟಕ ಧನವಿನಿಯೋಗ ವಿಧೇಯಕ 2023ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿದ್ದಾರೆ.
ಕರ್ನಾಟಕ ರಾಜ್ಯ ಸಂಚಿತ ನಿಧಿಯಿಂದ 2023-24ನೇ ಸಾಲಿನ ಹಣಕಾಸು ವರ್ಷಕ್ಕಾಗಿ 3,54,210.53 ಕೋಟಿ ರು. ಮೊತ್ತದ ಪೂರಕ ಅಂದಾಜುಗಳ ಮೊದಲನೇ ಕಂತಿನ ಬೇಡಿಕೆಗಳನ್ನು ಪ್ರಸ್ತಾವಿಸಲಿದ್ದಾರೆ.
ಕರ್ನಾಟಕ ಧನವಿನಿಯೋಗ ವಿಧೇಯಕ 2023ರ ಪ್ರತಿ ಮತ್ತು ಇಲಾಖಾವಾರು ಬೇಡಿಕೆಗಳ ಪಟ್ಟಿಯೂ ‘ದಿ ಫೈಲ್’ಗೆ ಲಭ್ಯವಾಗಿದೆ.
2024ನೇ ಮಾರ್ಚ್ 31ರ ಅಂತ್ಯದೊಳಗಾಗಿ ಕೃಷಿ ಮತ್ತು ತೋಟಗಾರಿಕೆ ಮತ್ತು ಇದಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಸಂದಾಯ ಮಾಡಬೇಕಿದೆ. ಹೀಗಾಗಿ ರಾಜಸ್ವ ಲೆಕ್ಕದಲ್ಲಿ 12,478.68 ಲಕ್ಷ ರು ಗಳಿಗೆ ಮೀರದ ಹಾಗೂ ಇನ್ನೂ ಹೆಚ್ಚಿನ ಮೊಬಲಗನ್ನು ಸರ್ಕಾರಕ್ಕೆ ಮಂಜೂರು ಮಾಡಬೇಕು ಎಂದು ಪ್ರಸ್ತಾವಿಸಿರುವುದು ತಿಳಿದು ಬಂದಿದೆ.
ಪಶು ಸಂಗೋಪೊನೆ ಮತ್ತು ಮೀನುಗಾರಿಕೆಗೆ 3,273.00 ಲಕ್ಷ ರು., ಮತ್ತು ಬಂಡವಾಳ ಲೆಕ್ಕದಲ್ಲಿ 2,200.0 ಲಕ್ಷ ರು., ಆರ್ಥಿಕಕ್ಕೆ ರಾಜಸ್ವ ಲೆಕ್ಕದಲ್ಲಿ 1,873.00 ಲಕ್ಷ ರು., ಬಂಡವಾಳ ಲೆಕ್ಕದಲ್ಲಿ 400.00 ಲಕ್ಷ ರು., ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 7,094.73 ಲಕ್ಷ ರು. , ಬಂಡವಾಳ ಲೆಕ್ಕದಲ್ಲಿ 910. 44 ಲಕ್ಷ ರು., ಮಂಜೂರು ಮಾಡಲು ಕೋರಲಿದ್ದಾರೆ ಎಂದು ಗೊತ್ತಾಗಿದೆ.
ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 150 ಲಕ್ಷ ರು., ಬಂಡವಾಳ ಲೆಕ್ಕದಲ್ಲಿ 16.17 ಲಕ್ಷ ರು., ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ರಾಜಸ್ವ ಲೆಕ್ಕದಲ್ಲಿ 4,600 ಲಕ್ಷ ರು., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ಗಾಗಿ ರಾಜಸ್ವ ಲೆಕ್ಕದಲ್ಲಿ 20,286.00 ಲಕ್ಷ ರು., ಬಂಡವಾಳ ಲೆಕ್ಕದಲ್ಲಿ 13,198 ಲಕ್ಷ ರು., ಅರಣ್ಯ ಜೀವಿ ಶಾಸ್ತ್ರ ಮತ್ತು ಪರಿಸರ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 1,201.37 ಲಕ್ಷ ರು., , ಸಹಕಾರ ಇಲಾಖೆಗೆ ಬಂಡವಾಳ ಲೆಕ್ಕದಲ್ಲಿ 25,900 ಲಕ್ಷ ರು., ಸಮಾಜ ಕಲ್ಯಾಣ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 39,522.08 ಲಕ್ಷ ರು., ಬಂಡವಾಳ ಲೆಕ್ಕದಲ್ಲಿ 17,500 ಲಕ್ಷ ರು., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಖೆಗೆ ರಾಜಸ್ವ ಲೆಕ್ಕದಲ್ಲಿ 61070.16 ಲಕ್ಷ ರು. ಕೋರಲಿದ್ದಾರೆ.
ವಾರ್ತಾ, ಪ್ರವಾಸೋದ್ಯಮ ಮತ್ತು ಯುವಜನ ಸೇವೆಗಳಿಗೆ ರಾಜಸ್ವ ಲೆಕ್ಕದಲ್ಲಿ 560.47 ಲಕ್ಷ ರು., ಬಂಡವಾಳ ಲೆಕ್ಕದಲ್ಲಿ 200.00 ಲಕ್ಷ ರು, ಆಹಾರ,ನಾಗರಿಕ ಸರಬರಾಜುಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 29,746.65 ಲಕ್ಷ ರು., ಕಂದಾಯ ಇಲಾಖೆಗೆ 5841079 ಲಕ್ಷ ರು., ಶಿಕ್ಷಣಕ್ಕೆ ರಾಜಸ್ವ ಲೆಕ್ಕದಲ್ಲಿ 5643.58 ಲಕ್ಷ ರು., ಬಂಡವಾಳ ಲೆಕ್ಕದಲ್ಲಿ 3,073.67 ಲಕ್ಷ ರು., ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 1445.00 ಲಕ್ಷ ರು., ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 1,830.00 ಲಕ್ಷ ರು., ಬಂಡವಾಳ ಲೆಕ್ಕದಲ್ಲಿ 5,600.00 ಲಕ್ಷ ರು., ಕೋರಲಿದ್ದಾರೆ ಎಂದು ತಿಳಿದು ಬಂದಿದೆ.
ಲೋಕೋಪಯೋಗಿ ಇಲಾಖೆಗೆ 15,000.00 ಲಕ್ಷ ರು., ನೀರಾವರಿಗೆ ರಾಜಸ್ವ ಲೆಕ್ಕದಲ್ಲಿ 1.00 ಲಕ್ಷ ರು.ಗಳೀಗೆ ಮೀರದ ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 1,232.63 ಲಕ್ಷ ರು., ಕಾರ್ಮಿಕ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ರಾಜಸ್ವ ಲೆಕ್ಕದಲ್ಲಿ 12,732.35 ಲಕ್ಷ ರು., ಬಂಡವಾಳ ಲೆಕ್ಕದಲ್ಲಿ 2,000.00 ಲಕ್ಷ ರು., ಇಂಧನಕ್ಕೆ ಬಂಡವಾಳ ಲೆಕ್ಕದಲ್ಲಿ 897.00 ಲಕ್ಷ ರು., ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 1,816.47 ಲಕ್ಷ ರು. , ಕಾನೂನು ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 1,342.71 ಲಕ್ಷ ರು.ಗಳಿಗೆ ಮೀರದ ಇನ್ನೂ ಹೆಚ್ಚಿನ ಮೊಬಲಗನ್ನು ಸರ್ಕಾರಕ್ಕೆ ಮಂಜೂರು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋರಲಿದ್ದಾರೆ ಎಂದು ಗೊತ್ತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದ 2023-24ನೆ ಸಾಲಿನ ಬಜೆಟ್‍ಗೆ ವಿಧಾನಸಭೆಯಲ್ಲಿ ಒಟ್ಟು 3,41,32,050 ಕೋಟಿ ರೂ.ಗಳ ಕರ್ನಾಟಕ ಧನವಿನಿಯೋಗ(ಸಂಖ್ಯೆ-2) ವಿಧೇಯಕ-2023ಕ್ಕೆ ಅನುಮೋದನೆ ಸಿಕ್ಕಿತ್ತು.
ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ್ದ 2021-22ನೆ ಸಾಲಿನ ಪೂರಕ ಅಂದಾಜುಗಳ 26,953.33 ಕೋಟಿ ರೂ.ಗಳ ಮೂರನೆ ಕಂತಿನ 2022ನೆ ಸಾಲಿನ ಕರ್ನಾಟಕ ಧನವಿನಿಯೋಗ ವಿಧೇಯಕಕ್ಕೆ ಗುರುವಾರ ವಿಧಾನಸಭೆಯಲ್ಲಿ ಒಪ್ಪಿಗೆ ಸಿಕ್ಕಿತ್ತು.
ಈ 26,953.33 ಕೋಟಿ ರೂ.ಗಳಲ್ಲಿ 2.19 ಕೋಟಿ ರೂ. ಪ್ರಭುತ್ವ ವೆಚ್ಚ ಮತ್ತು 26951.14 ಕೋಟಿ ರೂ.ಗಳು ಪುರಸ್ಕøತ ವೆಚ್ಚ ಸೇರಿರುತ್ತದೆ. ಇದರಲ್ಲಿ 996.03 ಕೋಟಿ ರೂ.ಗಳು ಸಹ ಪುರಸ್ಕೃತವಾಗಬೇಕಾಗಿದ್ದು, ಇದನ್ನು ರಿಸರ್ವ್ ಫಂಡ್ ಠೇವಣಿಗಳಿಂದ ಭರಿಸಲಾಗುತ್ತದೆ ಎಂದು ಹೇಳಿದ್ದನ್ನು ಸ್ಮರಿಸಬಹುದು.