ಸಚಿವರ ಸಿ ಡಿ ಪ್ರಸಾರಕ್ಕೆ ತಡೆಯಾಜ್ಞೆ; ಅಪರಾಧದ ಸುಳಿವು ತಿಳಿಯದಿರುವ ಸಾಧ್ಯತೆಗಳೇ ಹೆಚ್ಚು!

ಬೆಂಗಳೂರು: ಡಾ ಕೆ ಸುಧಾಕರ್‌ ಸೇರಿದಂತೆ ಒಟ್ಟು 6 ಸಚಿವರ ವಿರುದ್ಧ ಸುಳ್ಳು ಮತ್ತು ಆಧಾರರಹಿತ ಸುದ್ದಿ ಪ್ರಕಟಿಸಬಾರದು ಎಂದು ನಿರ್ಬಂಧ ವಿಧಿಸಿರುವ 20ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಬಿ.ಎಸ್. ವಿಜಯಕುಮಾರ್ ಅವರು ಈ ಸಂಬಂಧ ಮಧ್ಯಂತರ ಆದೇಶ ಹೊರಡಿಸಿದ್ದಾರೆ.

ಸ್ವತಂತ್ರಕುಮಾರ್‌ ವರ್ಸಸ್‌ ಇಂಡಿಯನ್ ಎಕ್ಸ್‌ಪ್ರೆಸ್‌ ಮತ್ತು ಇತರರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ನೀಡಿರುವ ಆದೇಶವನ್ನು ಉಲ್ಲೇಖಿಸಿರುವ ಬಿ.ಎಸ್. ವಿಜಯಕುಮಾರ್ ಅವರು ದಾವೆದಾರರು ಕರ್ನಾಟಕ ಸರ್ಕಾರದಲ್ಲಿ ಉನ್ನತ ಹುದ್ದೆಗಳಲಿದ್ದು ಪರಿಶೀಲಿಸದಿರುವ ಸುದ್ದಿಗಳನ್ನು ಪ್ರಸಾರ ಅಥವಾ ಪ್ರಕಟಣೆಗೊಂಡರೆ ಅವರ ಗೌರವಕ್ಕೆ ಮತ್ತು ಅವರ ಕುಟುಂಬ ಪರಿವಾರಕ್ಕೆ ಚ್ಯುತಿ ತರಲಿದೆ ಎಂದು ಆದೇಶದಲ್ಲಿ ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.

ಸ್ಕ್ರೀನ್‌ ಶಾಟ್‌ಗಳ ಪ್ರತಿಗಳ ಪ್ರಕಾರ ಈ ಸುದ್ದಿ ವಿಷಯಗಳು ಸ್ಪಷ್ಟವಾಗಿ ಪರಿಶೀಲಿಸದೆಯೇ ಇರುವ ವಿಷಯಗಳಿಂದ ಕೂಡಿದ ಹಾಗೂ ಸೆನ್ಸೇಷನ್‌ ಮಾಡುವ ಉದ್ದೇಶ ಅಡಗಿದೆ ಎಂದು ಪ್ರಸ್ತಾಪಿಸಿರುವುದು ಆದೇಶದಿಂದ ಗೊತ್ತಾಗಿದೆ.

‘ಸಹಜವಾಗಿ ನಾಗರಿಕರಿಗೆ ಅವರ ನಾಯಕರು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳುವ ಹಕ್ಕಿದೆ. ಅದರಂತೆ ಮಾಧ್ಯಮಕ್ಕೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕೂ ಇದೆ. ಮತ್ತು ಜನಪ್ರತಿನಿಧಿಗಳ ನಡವಳಿಕೆಗಳನ್ನು ನಾಗರಿಕರಿಗೆ ತಿಳಿಸುವುದು ಮಾಧ್ಯಮದ ಕರ್ತವ್ಯವೂ ಆಗಿದೆ,’ ಎಂದೂ ಆದೇಶದಲ್ಲಿ ಹೇಳಿದ್ದಾರೆ.

ಮೇಲ್ನೋಟಕ್ಕೆ ಯಾವುದೇ ಸಿ ಡಿ ಗಳು ಪ್ರಕಟಣೆಯಾಗದಿದ್ದರೂ ಸಹ 19ಕ್ಕಿಂತ ಹೆಚ್ಚು ಸಿಡಿಗಳು ಇರುವುದೆಂದು ಸೆನ್ಸೆಷೇನಲ್‌ ಮಾಡಲಾಗುತ್ತಿದೆ. ಈ ಸಿ ಡಿ ಗಳು ಪ್ರಭಾವಿ ವ್ಯಕ್ತಿಗಳು ಹಾಗೂ ಕೆಲವು ಮಂತ್ರಿಗಳಿಗೂ ಸಹ ಸಂಬಂಧಿಸಿದೆ ಎಂದು ಉಲ್ಲೇಖಗೊಂಡಿವೆ. ಅವುಗಳು ಯಾವುದೇ ಸಮಯದಲ್ಲಿ ಪ್ರಕಟಣೆಗೊಳ್ಳಬಹುದು. ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿದೆ. ಇದೇ ನಿಟ್ಟಿನಲ್ಲಿ ದಾವೆದಾರರಿಗೂ ಪರಿಶೀಲಿಸದ ಸುದ್ದಿಯಿಂದ ತಮ್ಮ ಚಾರಿತ್ರ್ಯ ವಧೆ ಆಗದಂತೆ ನೋಡಿಕೊಳ್ಳುವುದು ಅವರ ಹಕ್ಕಾಗಿದೆ ಎಂದು ಆದೇಶದಲ್ಲಿ ವಿವರಿಸಿದ್ದಾರೆ.

ಮಧ್ಯಂತರ ತಡೆಯಾಜ್ಞೆ ನೀಡುವ ಮೂಲಕ ಈ ತರಹದ ಪ್ರಕರಣಗಳಲ್ಲಿ ಅಡಗಿರುವ ಅಪರಾಧದ ಸುಳಿವು ಸಹ ಜನಸಾಮಾನ್ಯರಿಗೆ ತಿಳಿಯದೇ ಇರುವ ಸಾಧ್ಯತೆಗಳೇ ಸಾಕಷ್ಟಿವೆ.

ಆದರ್ಶ ಐಯ್ಯರ್‌, ಜನಾಧಿಕಾರ ಸಂಘರ್ಷ ಪರಿಷತ್‌

ಸ್ವತಂತ್ರಕುಮಾರ್‌ ವರ್ಸಸ್‌ ಇಂಡಿಯನ್ ಎಕ್ಸ್‌ಪ್ರೆಸ್‌ ಮತ್ತು ಇತರರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ 201ರ ಜನವರಿ 16ರಂದು ನೀಡಿರುವ ಇಂತಹ ಪರಿಸ್ಥಿತಿಗಳಲ್ಲಿ ಮಾಧ್ಯಮದವರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗಿಂತಲೂ ಹೆಚ್ಚಾಗಿ ಮಾಧ್ಯಮದವರು ನಾಗರಿಕರಿಗೆ ಸಾರ್ವಜನಿಕ ವಿಷಯಗಳ ಬಗ್ಗೆ ತಿಳಿಸುವುದು ಒಂದು ಪ್ರಮುಖ ಕರ್ತವ್ಯ ಎಂದೂ ಹೇಳಿದ್ದಾರೆ.

ನ್ಯಾಯಾಲಯದ ಅಭಿಪ್ರಾಯದಂತೆ ‘ಮಾಧ್ಯಮಗಳು ಒಂದು ಹೆಜ್ಜೆ ಮುಂದೆ ಹೋಗಿ ಸುದ್ದಿ ವಿಷಯಗಳನ್ನು ಮತ್ತು ಅದರ ಮೂಲವನ್ನು ಪರಿಶೀಲಿಸಿ ಕಾನೂನು ಒಪ್ಪಿಕೊಳ್ಳುವಂತಹ ಪ್ರಕ್ರಿಯೆ ಆಧರಿತ ಮೂಲವನ್ನು ಪರಿಶೀಲಿಸಿ ಮತ್ತು ಸುದ್ದಿ ವಿಷಯಗಳ ಜವಾಬ್ದಾರಿಯನ್ನು ಹೊರಲು ತಯಾರಿರಬೇಕು. ತದನಂತರ ಅದನ್ನು ಮುದ್ರಣ ಮತ್ತು ಪ್ರಸಾರ ಮಾಡಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮತ್ತು ಸಾರ್ವಜನಿಕ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಪ್ರವೃತ್ತಿಯನ್ನು ಬೆಳೆಸಬೇಕು. ಆದರೆ ಈ ಹಂತದಲ್ಲಿ ನನ್ನ ಮುಂದೆ ಪ್ರಸ್ತುತ ಪಡಿಸಿರುವ ಸ್ಕ್ರೀನ್‌ ಶಾಟ್‌ಗಳ ಪ್ರತಿಗಳ ಪ್ರಕಾರ ಈ ಸುದ್ದಿ ವಿಷಯಗಳು ಸ್ಪಷ್ಟವಾಗಿ ಪರಿಶೀಲಿಸದೆಯೇ ಇರುವ ವಿಷಯಗಳಿಂದ ಕೂಡಿದ ಹಾಗೂ ಸೆನ್ಸೇಷನ್‌ ಮಾಡುವ ಉದ್ದೇಶ ಅಡಗಿದೆ.,’ ಎಂದು ಅಭಿಪ್ರಾಯಿಸಿದ್ದಾರೆ.

 

ತಮ್ಮ ವಿರುದ್ಧ ಸುಳ್ಳು ಮತ್ತು ದಾಖಲೆ ರಹಿತ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರುವಂತೆ ಕೋರಿ ಸಚಿವರಾದ ಶಿವರಾಮ್ ಹೆಬ್ಬಾರ್, ಬಿ.ಸಿ. ಪಾಟೀಲ್, ಹೆಚ್.ಟಿ. ಸೋಮಶೇಖರ್,‌ ಕೆ.ಸುಧಾಕರ್, ನಾರಾಯಣಗೌಡ ಮತ್ತು ಭೈರತಿ ಬಸವರಾಜ್ ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

the fil favicon

SUPPORT THE FILE

Latest News

Related Posts