ಸಿದ್ದರಾಮಯ್ಯ ವಿರುದ್ಧ ಆರೋಪ; ಆಯೋಗಕ್ಕೆ ದಾಖಲೆ ಸಲ್ಲಿಸದ ಬಿಜೆಪಿ ಒದಗಿಸಿದ್ದು ಪತ್ರಿಕಾ ತುಣುಕುಗಳಷ್ಟೆ

ಬೆಂಗಳೂರು; ಸಿದ್ದರಾಮಯ್ಯ ಅವರ ವಿರುದ್ಧ 2 ವರ್ಷಗಳ ಹಿಂದೆ ರಾಜಕೀಯ ಜಾಹೀರಾತಿನಲ್ಲಿ ಮಾಡಿದ್ದ ಹ್ಯುಬ್ಲಾಟ್‌ ವಾಚ್‌ ಪ್ರಕರಣ ಸೇರಿದಂತೆ ಇತರೆ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರ ಮತ್ತು ಪುರಾವೆ ಮತ್ತು ಸಮರ್ಪಕ ದಾಖಲೆಗಳನ್ನು ಚುನಾವಣಾ ಆಯೋಗದ ಮಾಧ್ಯಮ ದೃಢೀಕರಣ, ಪ್ರಮಾಣೀಕರಣ ಸಮಿತಿಗೆ ಒದಗಿಸಿರಲಿಲ್ಲ ಎಂಬ ಅಂಶ ಇದೀಗ ಬಹಿರಂಗವಾಗಿದೆ.
ದಾಖಲೆಗಳನ್ನು ಸಲ್ಲಿಸದೇ ಕೇವಲ ಪತ್ರಿಕಾ ತುಣುಕುಗಳನ್ನಷ್ಟೇ ಸಲ್ಲಿಸಿ ಭಾರೀ ಮುಖಭಂಗ ಅನುಭವಿಸಿದ್ದ ಬಿಜೆಪಿ, ಹಿಂದೆ ಮಾಡಿದ್ದ ಹಳೆಯ ಆರೋಪಗಳನ್ನೇ ಕೆದಕಿ ಪುನಃ ಮುನ್ನೆಲೆಗೆ ತಂದಿದೆ.

ಕೋವಿಡ್‌-19ರ ನಿರ್ವಹಣೆಗಾಗಿ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ಭ್ರಷ್ಟಾಚಾರ ಪ್ರಕರಣಗಳ ಕುರಿತು ದನಿ ಎತ್ತಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಹಳೆಯ ಆರೋಪಗಳನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಬೆನ್ನಲ್ಲೇ ಚುನಾವಣಾ ಆಯೋಗದ ಮಾಧ್ಯಮ ದೃಢೀಕರಣ ಮತ್ತು ಪ್ರಮಾಣೀಕೃತ ಸಮಿತಿ ಸಭೆ ಹೊರಗೆಡವಿದ್ದ ಅಂಶಗಳು ಪ್ರಾಮುಖ್ಯ ಪಡೆದುಕೊಂಡಿವೆ.

2018ರ ಚುನಾವಣೆ ಘೋಷಣೆಗೂ ಮುನ್ನ ಸಿದ್ದರಾಮಯ್ಯ ಅವರ ವಿರುದ್ಧ ವಿಫಲ ಸರ್ಕಾರ, ಜನ ವಿರೋಧಿ ಸರ್ಕಾರ, ಮೂರು ಭಾಗ್ಯ ಹೆಸರಿನಲ್ಲಿ ಬಿಜೆಪಿ ಬಿಡುಗಡೆಗೊಳಿಸಿದ್ದ ರಾಜಕೀಯ ಜಾಹೀರಾತುಗಳು ಟಿ ವಿ ಗಳಲ್ಲಿ ಪ್ರಸಾರವಾಗಿತ್ತು.
ಆದರೆ ಈ ಆರೋಪಗಳನ್ನು ಸಾಬೀತುಪಡಿಸುವಂತಹ ಯಾವುದೇ ಸಮರ್ಥನೆ, ದಾಖಲೆ, ಸಾಕ್ಷ್ಯಾಧಾರ ಮತ್ತು ಪುರಾವೆಗಳನ್ನು ಚುನಾವಣಾ ಆಯೋಗದ ಮಾಧ್ಯಮ ದೃಢೀಕರಣ ಸಮಿತಿ ಮತ್ತು ಪ್ರಮಾಣೀಕೃತ ಸಮಿತಿಗೆ ಬಿಜೆಪಿ ಒದಗಿಸಿರಲಿಲ್ಲ. ಹೀಗಾಗಿ ರಾಜಕೀಯ ಆರೋಪಗಳನ್ನೊಳಗೊಂಡ ಜಾಹೀರಾತುಗಳ ಪ್ರಸಾರಕ್ಕೆ ಚುನಾವಣಾ ಆಯೋಗ ತಡೆ ಒಡ್ಡಿತ್ತು.

‘ಒಂದು ವಾಚ್‌ನ ಕಥೆ, ಅನ್ನಭಾಗ್ಯ ಕನ್ನ ಭಾಗ್ಯ, ಕೆಪಿಸಿ ಕಲ್ಲಿದ್ದಲು ಟೆಂಡರ್‌ನಲ್ಲಿ ರೂಪಾಯಿ 400 ಕೋಟಿ ಗುಳುಂ, ಶೇ.10 ಕಮಿಷನ್‌ ವಾಚ್‌, ಇಂದಿರಾ ಕ್ಯಾಂಟೀನ್‌ ಕೋಟಿ ಕೋಟಿ ಲೂಟಿ, ಬಿಬಿಎಂಪಿ ಕಸ ವಿಲೇವಾರಿ ರೂಪಾಯಿ 400 ಕೋಟಿ ಗುಳುಂ, ಹ್ಯುಬ್ಲಾಟ್‌ ವಾಚ್‌ 40 ಲಕ್ಷ, ಸೋಲಾರ್ ಪವರ್‌ ಟೆಂಡರ್‌ ಕೆಪಿಸಿ ಕಲ್ಲಿದ್ದಲು ಟೆಂಡರ್‌, ಬಿಬಿಎಂಪಿ ಕಸ ವಿಲೇವಾರಿ ಟೆಂಡರ್‌ ರೂ 1,600 ಕೋಟಿ ಗುಳುಂ’ ಎಂದು ಟಿ ವಿ ಗಳಲ್ಲಿ ಬಿಜೆಪಿ ಜಾಹೀರಾತು ನೀಡಿತ್ತು.

ಒಂದು ವಾಚ್‌ನ ಕಥೆ ಜಾಹೀರಾತಿನಲ್ಲಿದ್ದ ದೃಶ್ಯವು ರಾಜ್ಯದ ಗಣ್ಯ ವ್ಯಕ್ತಿಯನ್ನು ಹೋಲಿಕೆಯಾಗುತ್ತಿದ್ದಲ್ಲದೆ ಈ ದೃಶ್ಯದಲ್ಲಿ ಕಾಣುವ ಕುರ್ಚಿಯ ಹಿಂಬದಿಯಲ್ಲಿ C.M. ಎಂದು ನಮೂದಿಸಿತ್ತು. ಶೇ.10 ಕಮಿಷನ್‌ ವಾಚ್‌ ಎಂದೂ ಬಿಂಬಿಸಿತ್ತು. ಹಾಗೆಯೇ ಹ್ಯುಬ್ಲೋಟ್‌ ವಾಚ್‌ 40 ಲಕ್ಷ ರು. ಎಂದು ಸಾರುವ ದೃಶ್ಯವು ಜಾಹೀರಾತಿನಲ್ಲಿತ್ತು. ಗೂಂಡಾ ಸರ್ಕಾರ, ರೈತರನ್ನು ಬಲಿಕೊಟ್ಟ ಸರ್ಕಾರ, ನಗರಗಳನ್ನು ನರಕ ಮಾಡಿದ ಸರ್ಕಾರ, ದೇಶಭಕ್ತರ ಕೊಲೆಗಳನ್ನು ತಡೆಯದ ಸರ್ಕಾರ, ಸಮಾಜ ಒಡೆಯುವ ಸರ್ಕಾರ, ನಕಲಿ ಭಾಗ್ಯಗಳ ಭ್ರಷ್ಟ ಸರ್ಕಾರ, ಲೋಕಾಯುಕ್ತರಿಗೆ ರಕ್ಷಣ ಇಲ್ಲ ಎಂಬ ಶೀರ್ಷಿಕೆಗಳನ್ನು ಹೊತ್ತ ಜಾಹೀರಾತುಗಳು ಟಿ ವಿ ಗಳಲ್ಲಿ ಪ್ರಸಾರವಾಗಿದ್ದವು.

ಬಿಜೆಪಿ ನೀಡಿದ್ದ ಈ ಜಾಹೀರಾತುಗಳಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಆಕ್ಷೇಪಣೆ ಎತ್ತಿತ್ತು. ಈ ಸಂಬಂಧ ಚುನಾವಣಾ ಆಯೋಗದ ಮಾಧ್ಯಮ ದೃಢೀಕರಣ ಸಮಿತಿ ಕಳಿಸಿದ್ದ ನೋಟೀಸ್‌ಗೆ ಉತ್ತರಿಸಿದ್ದ ಬಿಜೆಪಿ, ಆರೋಪಗಳನ್ನು ಸಾಬೀತುಪಡಿಸುವಲ್ಲಿ ಸಮರ್ಪಕವಾದ ದಾಖಲೆಗಳನ್ನು ಒದಗಿಸಿರಲಿಲ್ಲ ಎಂಬ ಅಂಶ 2018ರ ಮೇ 5ರಂದು ಚುನಾವಣಾ ಆಯೋಗ ನಡೆಸಿದ್ದ ಸಭೆಯ ನಡವಳಿಯಿಂದ ತಿಳಿದು ಬಂದಿದೆ.

ದಾಖಲೆಗಳಲ್ಲ…ಬರೀ ಪತ್ರಿಕಾ ತುಣುಕುಗಳು

ಬಿಬಿಎಂಪಿ ಕಸ ವಿಲೇವಾರಿ ಮತ್ತು ಇತರೆ ಕಾಮಗಾರಿಗಳಲ್ಲಿ ಅವ್ಯವಹಾರ ಆಗಿದೆ ಎಂದು ಜಾಹೀರಾತು ನೀಡಿದ್ದ ಬಿಜೆಪಿ, ಇದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಪ್ರತಿಪಕ್ಷ ನಾಯಕರು ಮಾಡಿದ್ದ ಆರೋಪಗಳ ಪತ್ರಿಕಾ ತುಣುಕುಗಳನ್ನಷ್ಟೇ ಸಲ್ಲಿಸಿತ್ತು. ‘ಬಿಬಿಎಂಪಿ ಕಸ ವಿಲೇವಾರಿಯಲ್ಲಿ 400 ಕೋಟಿ ಅವ್ಯವಹಾರವಾಗಿರುವ ಬಗ್ಗೆ ಯಾವುದೇ ಸಮರ್ಪಕವಾದ ದಾಖಲೆಗಳನ್ನು ಸಲ್ಲಿಸಿರುವುದಿಲ್ಲ,’ ಎಂಬುದು ಆಯೋಗದ ಸಭೆ ನಡವಳಿಯಿಂದ ಗೊತ್ತಾಗಿದೆ.

ಅದೇ ರೀತಿ ಸೋಲಾರ್‌ ಟೆಂಡರ್‌ನಲ್ಲಿ ಅವ್ಯವಹಾರವಾಗಿದೆ ಎಂದು ಕೆಲವು ದೂರಿನ ಬಗ್ಗೆ ಪತ್ರಿಕಾ ತುಣುಕು ಹಾಗೂ ಬೆಸ್ಕಾಂನಲ್ಲಿ 9 ಅಧಿಕಾರಿಗಳನ್ನು ಅವ್ಯವಹಾರದ ಮೇಲೆ ಅಮಾನತುಗೊಳಿಸಿರುವ ಬಗ್ಗೆ ಪತ್ರಿಕಾ ತುಣುಕುಗಳನ್ನಷ್ಟೇ ಸಲ್ಲಿಸಿತ್ತು. ‘ತಮ್ಮ ವಾದ ಮಂಡಿಸುವಾಗ ಸೋಲಾರ್‌ ಟೆಂಡರ್‌ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿರುತ್ತಾರೆ. ಆದರೆ ಸೋಲಾರ್‌ ಟೆಂಡರ್‌ ಪ್ರಕ್ರಿಯೆಯಲ್ಲಿ 800 ಕೋಟಿ ಅವ್ಯವಹಾರವಾಗಿರುವ ಬಗ್ಗೆ ಯಾವುದೇ ಸಮರ್ಪಕ ದಾಖಲೆಗಳನ್ನು ಸಲ್ಲಿಸಿರುವುದಿಲ್ಲ,’ ಎಂಬುದು ನಡವಳಿಯಲ್ಲಿ ದಾಖಲಾಗಿದೆ.

ಹಾಗೆಯೇ ಅನ್ನ ಭಾಗ್ಯ ಯೋಜನೆಯಲ್ಲಿ ಕೆಲವು ಅಕ್ರಮಗಳನ್ನು ಸರ್ಕಾರದ ಅಧಿಕಾರಿಗಳು ಹಿಡಿದಿರುವ ಬಗ್ಗೆಯೂ ಬಿಜೆಪಿ ಪತ್ರಿಕಾ ತುಣುಕುಗಳನ್ನು ಸಲ್ಲಿಸಿತ್ತು. ‘ಆದರೆ ಪತ್ರಿಕಾ ತುಣುಕುಗಳು ಇಡೀ ಅನ್ನಭಾಗ್ಯ ಯೋಜನೆಯನ್ನು ಕನ್ನಭಾಗ್ಯವೆಂದು ಆರೋಪಿಸಲು ಸಮರ್ಪಕ ದಾಖಳೆಗಳೆಂದು ಕಂಡು ಬರುವುದಿಲ್ಲ,’ ಎಂದು ಆಯೋಗ ಅಭಿಪ್ರಾಯಪಟ್ಟಿತ್ತು.

ಇನ್ನು, ಕೆಪಿಸಿ ಕಲ್ಲಿದ್ದಲ್ಲಿನಲ್ಲಿ ಅವ್ಯವಹಾರವಾಗಿದೆ ಎಂದು ವಿಪಕ್ಷ ನಾಯಕರು ನೀಡಿದ್ದ ಹೇಳಿಕೆಗಳ ಪತ್ರಿಕಾ ತುಣುಕುಗಳು ಮತ್ತು ಸಿಬಿಐ ಕರ್ನಾಟಕದ ಐಎಎಸ್‌ ಅಧಿಕಾರಿ ಮೇಲೆ ಎಫ್‌ಐಆರ್‌ ದಾಖಲಿಸಿರುವ ಬಗ್ಗೆಯೂ ಪತ್ರಿಕಾ ತುಣುಕುಗಳನ್ನು ಸಲ್ಲಿಸಿತ್ತು.’ ಈ ಎರಡೂ ದಾಖಲೆಗಳು 400 ಕೋಟಿ ಅವ್ಯವಹಾರ ಆಗಿರುವ ಬಗ್ಗೆ ಯಾವುದೇ ಸಮರ್ಪಕವಾದ ದಾಖಲೆಗಳನ್ನು ಸಲ್ಲಿಸಿರುವುದಿಲ್ಲ,’ ಎಂಬ ಅಂಶ ದಾಖಲಾಗಿರುವುದು ನಡವಳಿಯಿಂದ ಗೊತ್ತಾಗಿದೆ.

ಇಂದಿರಾ ಕ್ಯಾಂಟೀನ್‌ ಯೋಜನೆಯಡಿ ಅವ್ಯವಹಾರವಾಗಿದೆ ಎಂದು ಕೆಲವು ಖಾಸಗಿ ಸಂಸ್ಥೆಗಳು ಭ್ರಷ್ಟಾಚಾರ ನಿಗ್ರಹ ದಳದ ಮುಂದೆ ದೂರುಗಳನ್ನು ಸಲ್ಲಿಸಿರುವ ಬಗ್ಗೆ ಪತ್ರಿಕಾ ತುಣುಕುಗಳನ್ನು ಸಲ್ಲಿಸಿತ್ತು. ‘ ಆದರೆ ಇಂದಿರಾ ಕ್ಯಾಂಟೀನ್‌ ಯೋಜನೆಯಡಿ ಕೋಟಿ ಕೋಟಿ ಅವ್ಯವಹಾರವಾಗಿರುವ ಬಗ್ಗೆ ಯಾವುದೇ ಸಮರ್ಪಕವಾದ ದಾಖಲೆಗಳನ್ನು ಸಲ್ಲಿಸಿರುವುದಿಲ್ಲ,’ ಎಂದು ಆಯೋಗ ಹೇಳಿತ್ತು.

ನಕಲಿ ಭಾಗ್ಯ ಹಾಗೂ ಗುಂಡಾ ಸರ್ಕಾರ ಎಂದು ಆರೋಪಿಸಿರುವ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಣೆಯಾದ ಕೆಲವು ಪತ್ರಿಕಾ ತುಣುಕುಗಳನ್ನು ಹಾಗೂ ಭ್ರಷ್ಟಾಚಾರ ನಿಗ್ರಹ ದಳದ ಮುಂದೆ ದಾಖಲೆಯಾದ ಕೆಲವು ದೂರುಗಳ ತಖ್ತೆಯನ್ನು ನೀಡಿತ್ತು. ‘ ಈ ದಾಖಲೆಗಳನ್ನು ಪರಿಶೀಲಿಸಲಾಗಿ ಅರ್ಜಿದಾರರ ಆರೋಪಗಳನ್ನು ಸಮರ್ಥಿಸುವ ದಾಖಲೆಗಳಾಗಿರುವುದಿಲ್ಲ,’ ಎಂದು ಸಮಿತಿ ಅಭಿಪ್ರಾಯಪಟ್ಟಿರುವುದು ನಡವಳಿಯಿಂದ ತಿಳಿದು ಬಂದಿದೆ.

ಹುಬ್ಲಾಟ್‌ ವಾಚ್‌ 40 ಲಕ್ಷ ರು.ಎಂಬ ಒಕ್ಕಣೆಯಿದ್ದ ಜಾಹೀರಾತಿಗೆ ಸಂಬಂಧಿಸಿದಂತೆ ಸಮರ್ಥನೀಯ ದಾಖಲೆಗಳನ್ನು ಒದಗಿಸಬೇಕು ಎಂದು ಆಯೋಗವು ಬಿಜೆಪಿಗೆ ನೋಟೀಸ್‌ ನೀಡಿತ್ತು. ಈ ಜಾಹೀರಾತು ಮಾರ್ಗಸೂಚಿಯನ್ನು ಉಲ್ಲಂಘಿಸಿದೆ. ಸ್ಕ್ರಿಫ್ಟ್‌ನಲ್ಲಿರುವ ಈ ವಾಕ್ಯವನ್ನು, ದೃಶ್ಯವನ್ನು ಹಾಗೂ ಟೈಟಲ್‌ ಕಾರ್ಡ್‌ಗಳನ್ನು ಕೈ ಬಿಡುವುದು ಅಥವಾ ಸಮರ್ಥನೀಯ ದಾಖಲೆಗಳನ್ನು ಒದಗಿಸುವುದು ಎಂದು ಆಯೋಗ ನೋಟೀಸ್‌ ನೀಡಿತ್ತು. ಆದರೆ ಬಿಜೆಪಿ ರಾಜ್ಯ ಘಟಕವು ಇದಕ್ಕೆ ಯಾವುದೇ ದಾಖಲೆಗಳನ್ನು ಒದಗಿಸಿರಲಿಲ್ಲ, ಬದಲಿಗೆ ಪತ್ರಿಕೆಗಳಲ್ಲಿ ಬಂದಿದ್ದ ಸುದ್ದಿಯ ತುಣುಕುಗಳನ್ನಷ್ಟೇ ಸಲ್ಲಿಸಿತ್ತು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಗಂಭೀರ ಆರೋಪಗಳುಳ್ಳ ರಾಜಕೀಯ ಜಾಹೀರಾತುಗಳನ್ನು ಪ್ರಸಾರ ಮಾಡಲು ವಾರ್ತಾ ಇಲಾಖೆ ಅಂದಿನ ಆಯುಕ್ತ ಪಿ ಎಸ್‌ ಹರ್ಷ ಅವರೂ ಸದಸ್ಯರಾಗಿದ್ದ ಪೂರ್ವ ದೃಢೀಕರಣ ಸಮಿತಿ ಅನುಮತಿ ನೀಡಿತ್ತು. ವಿಶೇಷವೆಂದರೆ ಇದೇ ಹರ್ಷ ಅವರನ್ನು ಬಿಜೆಪಿ ಸರ್ಕಾರ ಕೆಲ ದಿನಗಳ ಹಿಂದೆಯಷ್ಟೇ ವಾರ್ತಾ ಇಲಾಖೆಯ ಆಯುಕ್ತರ ಹುದ್ದೆಗೆ ನೇಮಿಸಿದೆ.

SUPPORT THE FILE

Latest News

Related Posts