Saturday | November 14, 2026 |

65 ಕೋಟಿ ರು ಮೌಲ್ಯದ ಪುಸ್ತಕಗಳಿಗೆ ಮೆತ್ತಿಕೊಂಡ ಧೂಳು; ಬೊಕ್ಕಸಕ್ಕೆ ನಷ್ಟ, ಗ್ರಂಥಾಲಯಗಳ ಪುಸ್ತಕ ಖರೀದಿಯಲ್ಲಿ ಭ್ರಷ್ಟಾಚಾರ?

ಬೆಂಗಳೂರು; ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಕಳೆದ 5 ವರ್ಷಗಳಲ್ಲಿ  ಖರೀದಿಸಿರುವ 65 ಕೋಟಿ ರು ಮೌಲ್ಯದ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ವಿತರಣೆಯನ್ನೇ ಮಾಡಿಲ್ಲ. ಖರೀದಿಸಿರುವ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ವಿತರಣೆ ಮಾಡದ ಕಾರಣ ಗೋಡೌನ್‌ಗಳಲ್ಲೇ  ಧೂಳು ತಿನ್ನುತ್ತಿವೆ!

ಪುಸ್ತಕಗಳನ್ನು ಖರೀದಿಸುತ್ತಿಲ್ಲ, ಖರೀದಿಸಿದ ಪುಸ್ತಕಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಪ್ರಕಾಶಕರು ಮತ್ತು ಹಲವು ಲೇಖಕರು ಆರೋಪಿಸುತ್ತಿರುವ ನಡುವೆಯೇ 65 ಕೋಟಿ ರು ಮೌಲ್ಯದ ಪುಸ್ತಕಗಳು ವಿತರಣೆಯಾಗದೇ ಗೋಡೌನ್‌ಗಳಲ್ಲೇ ಧೂಳು ತಿನ್ನುತ್ತಿರುವುದು ಮುನ್ನೆಲೆಗೆ ಬಂದಿದೆ.

ಇದಕ್ಕೆ ಸಂಬಂಧಿಸಿದಂತೆ ಕೆ ಆರ್ ಜಗದೀಶ್‌ ಎಂಬುವರು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಮಧು ಬಂಗಾರಪ್ಪ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. 2026ರ ಅಕ್ಟೋಬರ್‍‌ 30ರಂದು ನೀಡಿರುವ ದೂರಿನ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

ಗ್ರಂಥಾಲಯ ಇಲಾಖೆಯಲ್ಲಿ ಖರೀದಿಸುವ ಪುಸ್ತಕಗಳನ್ನು ಅದೇ ವರ್ಷದಲ್ಲಿ ವಿತರಣೆ ಮಾಡಬೇಕಿದ್ದರೂ ಸಕಾಲದಲ್ಲಿ ವಿತರಣೆ ಮಾಡುತ್ತಿಲ್ಲ. ಪುಸ್ತಕಗಳು ವಿತರಣೆಯಾಗದೇ ಗೋಡೌನ್‌ಗಳಲ್ಲಿ ಧೂಳು ತಿನ್ನುತ್ತಿದ್ದರೂ ಸಹ ಕೋಟ್ಯಂತರ ರುಪಾಯಿ ಮೌಲ್ಯದ ಪುಸ್ತಕಗಳನ್ನು ಖರೀದಿಸಲಾಗುತ್ತಿದೆ ಎಂದು ಕೆ ಆರ್ ಜಗದೀಶ್‌ ಎಂಬುವರು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

65 ಕೋಟಿ ರು ಮೌಲ್ಯದ ಪುಸ್ತಕಗಳನ್ನು ಖರೀದಿ ಮಾಡಿರುವ ಗ್ರಂಥಾಲಯ ಇಲಾಖೆಯು ವಿತರಣೆ ಮಾಡದಿರುವ ಕುರಿತು ಕೆ ಆರ್ ಜಗದೀಶ ಅವರು ಮಾಹಿತಿ ಹಕ್ಕಿನ ಅಡಿಯಲ್ಲಿ ಪಡೆದಿರುವ ಹಲವು ಮಾಹಿತಿ ಮತ್ತು ಧೂಳು ಹಿಡಿದಿರುವ ಪುಸ್ತಕಗಳ ಫೋಟೋಗಳನ್ನೂ ಸಹ ದೂರಿನಲ್ಲಿ ನೀಡಿರುವುದು ಗೊತ್ತಾಗಿದೆ.

ದೂರಿನಲ್ಲೇನಿದೆ?

2022ರಿಂದ 2026-27ನೇ ಸಾಲಿನವರೆಗೆ ಬೆಂಗಳೂರು ನಗರದಲ್ಲಿ  ಐದು ವಲಯಗಳಲ್ಲಿ ಒಟ್ಟು 65 ಕೋಟಿ ರು ಮೌಲ್ಯದ ಪುಸ್ತಕಗಳನ್ನು ಖರೀದಿಸಿದೆ. ಆದರೆ ಇದುವರೆಗೂ ಪುಸ್ತಕಗಳನ್ನು ವಿತರಣೆ ಮಾಡಿಲ್ಲ. ಗೋಡೌನ್‌ಗಳಲ್ಲಿ ಧೂಳು ತಿನ್ನುತ್ತಿವೆ. ಹೀಗಾಗಿ ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ನಷ್ಟವುಂಟಾಗಿದೆ. ಇದಕ್ಕೆ ಅಧಿಕಾರಿಗಳ ಕರ್ತವ್ಯಲೋಪವೇ ಕಾರಣ ಎಂದು ದೂರಿನಲ್ಲಿ ಕೆ ಆರ್ ಜಗದೀಶ್‌ ಅವರು ದೂರಿನಲ್ಲಿ ಆಪಾದಿಸಿರುವುದು ತಿಳಿದು ಬಂದಿದೆ.

ಬೆಂಗಳೂರಿನ ಪ್ರತಿ ವಲಯಗಳಲ್ಲಿ 2022-23ನೇ ಸಾಲಿನಲ್ಲಿ 5 ಕೋಟಿಗೂ ಹೆಚ್ಚು ಮೊತ್ತದ ಪುಸ್ತಕಗಳನ್ನು ಖರೀದಿಸಲಾಗಿದೆ. 2023-24ನೇ ಸಾಲಿನಲ್ಲಿ 6.5 ಕೋಟಿ, 2024-25ನೇ ಸಾಲಿನಲ್ಲಿ 3.5 ಕೋಟಿ, 2026-27ನೇ ಸಾಲಿನಲ್ಲಿ 3 ಕೋಟಿಗೂ ಹೆಚ್ಚು ಮೌಲ್ಯದ ಪುಸ್ತಕಗಳನ್ನು ಖರೀದಿಸಲಾಗಿದೆ. ಪ್ರತಿ ವಲಯ ಕಚೇರಿಗಳಿಂದ ಒಟ್ಟು ಅಂದಾಜು 65 ಕೋಟಿ ರು ಮೌಲ್ಯದ ಪುಸ್ತಕಗಳನ್ನು ಖರೀದಿಸಲಾಗಿದೆ ಎಂದು ದೂರಿನಲ್ಲಿ ವಿವರಗಳನ್ನು ಒದಗಿಸಿರುವುದು ಗೊತ್ತಾಗಿದೆ.

 

 

ನಗರ ಕೇಂದ್ರ ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ಇಡಲು ಸ್ಥಳಾವಕಾಶ ಇಲ್ಲ. ಆದರೂ ಪ್ರತೀ ವರ್ಷ ಪುಸ್ತಕಗಳನ್ನು ಖರೀದಿ ಮಾಡಲಾಗುತ್ತಿದೆ. ಆದರೆ ಸಕಾಲದಲ್ಲಿ ವಿತರಣೆ  ಮಾಡುತ್ತಿಲ್ಲ. ಇದರಿಂದ ಪುಸ್ತಕ ಖರೀದಿ ಉದ್ದೇಶವನ್ನೇ ಪ್ರಶ್ನಿಸುವಂತಾಗಿದೆ. 2022-23ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಪುಸ್ತಕಗಳನ್ನು ಖರೀದಿಸಲಾಗಿದೆಯಾದರೂ ಸಹ ಗ್ರಂಥಾಲಯಗಳಿಗೆ ವಿತರಣೆ ಮಾಡಿಲ್ಲ. ಈ ಪುಸ್ತಕಗಳು ಈಗ ಹಳೆಯದಾಗಿವೆ. ಮಾರುಕಟ್ಟೆಗೆ ಹೊಸ ಪಠ್ಯಕ್ರಮದ ಪುಸ್ತಕಗಳು ಬಂದಿವೆ. ಸಕಾಲದಲ್ಲಿ ವಿತರಣೆ ಮಾಡದ ಕಾರಣ ಪುಸ್ತಕಗಳು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರ ಉಪಯೋಗಕ್ಕೆ ಬರುವುದಿಲ್ಲ. ಹೀಗಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿದಂತಾಗಿದೆ ಎಂದು ದೂರಿನಲ್ಲಿ ಆರೋಪಿಸಿರುವುದು ತಿಳಿದು ಬಂದಿದೆ.

2022-23ರಲ್ಲಿ ಖರೀದಿಸಿದ ಪುಸ್ತಕಗಳು ಗ್ರಂಥಾಲಯದಲ್ಲಿ ಲಭ್ಯವಿಲ್ಲದಿದ್ದಾಗ ಸಾರ್ವಜನಿಕರು ಮಾರುಕಟ್ಟೆಯಲ್ಲಿ ಖರೀದಿಸಿ ಓದಿರುತ್ತಾರೆ. ಗ್ರಂಥಾಲಯ ಓದುಗನಿಗೆ ನಷ್ಟವಾಗುತ್ತಿದೆ. ಖರೀದಿಸಿದ ಪುಸ್ತಕಗಳು ರದ್ದಿಗೆ ಹೋಗುತ್ತಿವೆ. ಖರೀದಿಸಿರುವ ಪುಸ್ತಕಗಳನ್ನು ಗೋಡೌನ್‌ನಲ್ಲಿ ಮತ್ತು ದೊಡ್ಡ ದೊಡ್ಡ ಶಾಖಾ ಗ್ರಂಥಾಲಯಗಳಲ್ಲಿ ಶೇಖರಣೆ ಮಾಡಲಾಗುತ್ತಿದೆ. ಉತ್ತರ ವಲಯದ  ನಂದಿನಿ ಬಡಾವಣೆಯ ಗ್ರಂಥಾಲಯದಲ್ಲಿ  ಶೇಖರಣೆ ಮಾಡಲಾಗಿದೆ. ಅದೇ ರೀತಿ ಪಶ್ಚಿಮ ವಲಯದಲ್ಲಿ ವಿಜಯನಗರ, ಹಂಪಿ ನಗರ, ವಿಷ್ಣುವರ್ಧನ್ ಅಧ್ಯಯನ ಕೇಂದ್ರ, ಮೂಡಲಪಾಳ್ಯ ಮತ್ತು ಪ್ರಸಕ್ತ ಸಾಲಿನಲ್ಲಿ ಖರೀದಿಸಿರುವ ಪುಸ್ತಕಗಳನ್ನು ನಾಗರಬಾವಿ ಗ್ರಂಥಾಲಯಗಳಲ್ಲಿ ಶೇಖರಣೆ ಮಾಡಿಡಲಾಗಿದೆ ಎಂದು ಜಗದೀಶ್‌ ಅವರು ಸಾಕ್ಷ್ಯ ಸಮೇತವಾಗಿ ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಪೂರ್ವ ವಲಯದಲ್ಲಿ ಆರ್‍‌ ಟಿ ನಗರ ಕೇಂದ್ರ ಕಚೇರಿ, ಗಂಗಾನಗರ ಕೇಂದ್ರ ಗ್ರಂಥಾಲಯ ಕಟ್ಟಡದಲ್ಲಿ , ಆರ್‍‌ ಟಿ ನಗರ ಕೇಂದ್ರ ಕಚೇರಿಯಲ್ಲಿನ ಮಹಡಿ ಮೇಲೆ ಪುಸ್ತಕಗಳನ್ನು  ಶೇಖರಣೆ ಮಾಡಲಾಗಿದೆ. ‘ಶೇಖರಣೆ ಮಾಡಿರುವ ಪುಸ್ತಕಗಳನ್ನು ಗಮನಿಸಿದರೇ ಮಹಡಿ ಎಲ್ಲಿ ಕುಸಿದು ಹೋಗುತ್ತದೋ ಎಂಬಂತೆ ಕಾಣಿಸುತ್ತದೆ. ಪುಸ್ತಕ ಶೇಖರಣೆ ಮಾಡಿರುವ ಮಹಡಿಯಲ್ಲಿ ನೂರಾರು ಜನ ಸಾರ್ವಜನಿಕ ಓದುಗರು ಕುಳಿತಿದ್ದಾರೆ,’ ಎಂದು ಜಗದೀಶ್‌ ಅವರು ಆತಂಕ ವ್ಯಕ್ತಪಡಿಸಿರುವುದು ತಿಳಿದು ಬಂದಿದೆ.

ಉಪ ನಿರ್ದೇಶಕರು ಭ್ರಷ್ಟಾಚಾರ ಮಾಡುವ ಏಕೈಕ ಉದ್ದೇಶದಿಂದಲೇ ನಗರ ಕೇಂದ್ರ ಗ್ರಂಥಾಲಯ ಶಾಖೆಗಳಲ್ಲಿ ಹಳೆಯ ಪುಸ್ತಕ  (ಅಂದರೆ ಒಳ್ಳೆ ಸುಸ್ಥಿತಿಯಲ್ಲಿರುವ ಪುಸ್ತಕಗಳನ್ನೂ ಸೇರಿಸಿ) ತೂಕದ ಲೆಕ್ಕಕ್ಕೆ ಹಾಕಿ ಮಾರಿ ಬಿಡುತ್ತಾರೆ. ಹೊಸ ಪುಸ್ತಕಗಳನ್ನು ಖರೀದಿಸುವಾಗ ಭ್ರಷ್ಟಾಚಾರ ಮತ್ತು ತೂಕಕ್ಕೆ ಹಾಕುವಾಗಲೂ ಹಣ ಮಾಡುವ ತಂತ್ರಗಳು ಅವರಿಗೆ ಗೊತ್ತಿರುತ್ತೆ ಈ ಎಲ್ಲದರಲ್ಲೂ ಕೇಂದ್ರ ಕಚೇರಿಯ ಎ ಒ ಅಧಿಕಾರಿಗಳು ಮತ್ತು ಆಯುಕ್ತರ ಪಿ ಎ ರಕ್ಷಾ ಕವಚದಂತಿರುತ್ತಾರೆ ಎಂದು ಆರೋಪಿಸಿರುವುದು ಗೊತ್ತಾಗಿದೆ.

 

 

ಇಲಾಖೆಯಲ್ಲಿ ಶೇ.30ರಷ್ಟು ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಶೇ. 70ರಷ್ಟು ಮಂದಿ ಗ್ರಂಥಾಲಯ ಇಲಾಖೆ ಸಿಬ್ಬಂದಿಗಳು ಇಲ್ಲದೇ ಕೇವಲ ಶುಚಿಗಾರರು ಮಾತ್ರ ಬೆಳಿಗ್ಗೆ ಬಂದು ಬಾಗಿಲನ್ನು ತೆರೆದು ರಾತ್ರಿ ಬಾಗಿಲನ್ನು ಹಾಕುತ್ತಾರೆ. ಇದರಿಂದ ಶೇ.70ರಷ್ಟು ಗ್ರಂಥಾಲಯಗಳು ಸಾರ್ವಜನಿಕರಿಗೆ ಸೇವೆ ನೀಡುತ್ತಿಲ್ಲ. ಇಲಾಖೆಯಲ್ಲಿ ಸಿಬ್ಬಂದಿಗಳಲು ಇಲ್ಲದಿದ್ದರೂ ಸಾಮಗ್ರಿ ಮತ್ತು ಪುಸ್ತಕಗಳ ಖರೀದಿ ಮಾತ್ರ ನಿಲ್ಲುತ್ತಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುವುದಿಲ್ಲವೇ ಎಂದು ಕೆ ಆರ್ ಜಗದೀಶ್‌ ಅವರು ದೂರಿನಲ್ಲಿ ಪ್ರಶ್ನಿಸಿರುವುದು ತಿಳಿದು ಬಂದಿದೆ.

 

 

‘2026-27ನೇ ಸಾಲಿನ ಆಯವ್ಯಯದ ಕಡತವು ಹಿರಿಯ ಅಧಿಕಾರಿಗಳಿಂದ ಅನುಮೋದನೆಗೊಂಡು ಬಂದ ತಕ್ಷಣವೇ ಪ್ರಸಕ್ತ ಸಾಲಿನ ಅನುದಾನ ಖಾಲಿ ಮಾಡುತ್ತಾರೆ. ಉಪ ನಿರ್ದೇಶಕರು ಗ್ರಂಥಾಲಯಗಳಲ್ಲಿ ಒಳ್ಳೆ ಗುಣಮಟ್ಟದ ಪುಸ್ತಕಗಳನ್ನು ತೂಕಕ್ಕೆ ಹಾಕುತ್ತಾರೆ. ಹಾಗೂ ಉತ್ತಮ ಗುಣಮಟ್ಟದ ಸುಸ್ಥಿತಿಯಲ್ಲಿರುವ ಪೀಠೋಪಕರಣಗಳನ್ನು ತೆಗೆದು ಹೊಸದಾಗಿ ಖರೀದಿ ಮಾಡಲಾಗುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗುತ್ತಿದೆ. ಇದರಲ್ಲಿ ಭ್ರಷ್ಟಾಚಾರ ನಡೆದಿದೆ,’ ಎಂದು ಆರೋಪಿಸಿರುವುದು ಗೊತ್ತಾಗಿದೆ.

Hot this week

ಬರ ಪರಿಹಾರ ಮೊತ್ತವನ್ನೇ ಕಡಿತಗೊಳಿಸಿದ್ದ ರಾಜ್ಯ ಸರ್ಕಾರದಿಂದ ಪ್ರಧಾನಿಯ ಒಂದು ದಿನದ ಕಾರ್ಯಕ್ರಮಕ್ಕೆ 10.78 ಕೋಟಿ ರು ವೆಚ್ಚ

ಬೆಂಗಳೂರು; ಬರ ಪರಿಹಾರ, ಗುತ್ತಿಗೆದಾರರಿಗೆ ಬಾಕಿ ಮತ್ತು  ಮೂಲಸೌಕರ್ಯಗಳಿಗೆ ಅನುದಾನ ಒದಗಿಸಲು...

ಸ್ಟಿಂಗ್‌ ಆಪರೇಷನ್‌; ಬಾಲ ನ್ಯಾಯಸಮಿತಿಯ ಮುಂದಿದ್ದ ಮನವಿ ಗೃಹ ಇಲಾಖೆ ಅಂಗಳಕ್ಕೆ, ಕ್ರಮ ಕೈಗೊಳ್ಳುವುದೇ ಸರ್ಕಾರ?

ಬೆಂಗಳೂರು; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ನಡೆದಿದೆ ಎನ್ನಲಾಗಿರುವ ಮಾರುವೇಷದ...

‍ಐದು ಪೊಲೀಸ್ ಆಯುಕ್ತಾಲಯ ರಚನೆ; 856.95 ಕೋಟಿ ವೆಚ್ಚ, ಬೊಕ್ಕಸಕ್ಕೆ ಆಗಲಿದೆಯೇ ಹೊರೆ?

ಬೆಂಗಳೂರು; ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಸಮಗ್ರವಾಗಿ 5 ವಿಭಾಗಗಳಾಗಿ ಪುನರ್...
Please Scan to make Your Contribution

Topics

ಬರ ಪರಿಹಾರ ಮೊತ್ತವನ್ನೇ ಕಡಿತಗೊಳಿಸಿದ್ದ ರಾಜ್ಯ ಸರ್ಕಾರದಿಂದ ಪ್ರಧಾನಿಯ ಒಂದು ದಿನದ ಕಾರ್ಯಕ್ರಮಕ್ಕೆ 10.78 ಕೋಟಿ ರು ವೆಚ್ಚ

ಬೆಂಗಳೂರು; ಬರ ಪರಿಹಾರ, ಗುತ್ತಿಗೆದಾರರಿಗೆ ಬಾಕಿ ಮತ್ತು  ಮೂಲಸೌಕರ್ಯಗಳಿಗೆ ಅನುದಾನ ಒದಗಿಸಲು...

ಸ್ಟಿಂಗ್‌ ಆಪರೇಷನ್‌; ಬಾಲ ನ್ಯಾಯಸಮಿತಿಯ ಮುಂದಿದ್ದ ಮನವಿ ಗೃಹ ಇಲಾಖೆ ಅಂಗಳಕ್ಕೆ, ಕ್ರಮ ಕೈಗೊಳ್ಳುವುದೇ ಸರ್ಕಾರ?

ಬೆಂಗಳೂರು; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ನಡೆದಿದೆ ಎನ್ನಲಾಗಿರುವ ಮಾರುವೇಷದ...

‍ಐದು ಪೊಲೀಸ್ ಆಯುಕ್ತಾಲಯ ರಚನೆ; 856.95 ಕೋಟಿ ವೆಚ್ಚ, ಬೊಕ್ಕಸಕ್ಕೆ ಆಗಲಿದೆಯೇ ಹೊರೆ?

ಬೆಂಗಳೂರು; ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಸಮಗ್ರವಾಗಿ 5 ವಿಭಾಗಗಳಾಗಿ ಪುನರ್...

ಇಎಸ್‌ಐ ಅನುದಾನದಲ್ಲಿ ಗಣನೀಯ ಮೊತ್ತ ಕಡಿತ; ಬಿಡುಗಡೆಯಾಗದ 80 ಕೋಟಿ, ವೈದ್ಯಕೀಯ ಸೇವೆಗಳ ಮೇಲೆ ಪ್ರತಿಕೂಲ ಪರಿಣಾಮ?

ಬೆಂಗಳೂರು; ಕರ್ನಾಟಕದಲ್ಲಿ ಇಎಸ್‌ಐ ಯೋಜನೆಯಡಿ ವಿಮೆ ಹೊಂದಿರುವ ವ್ಯಕ್ತಿಗಳು ಮತ್ತು ಅವರ...

Related Articles

Popular Categories

error: Content is protected !!