Thursday | August 27, 2026 |

ಜಿಬಿಎ 5 ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣ; 992.00 ಕೋಟಿ ರು ವೆಚ್ಚ , 749 ಕಿಮೀ ಉದ್ದದಲ್ಲಿ 88 ಕಿ ಮೀ ಮಾತ್ರ ಪೂರ್ಣ

ಬೆಂಗಳೂರು; ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 5 ನಗರಪಾಲಿಕೆಗಳು ಮುಖ್ಯಮಂತ್ರಿಗಳ ಮೂಲ ಸೌಕರ್ಯ ಯೋಜನೆಯಡಿಯಲ್ಲಿ 992.00 ಕೋಟಿ ರುಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಗಳ ವೇಗವು ಆಮೆಗತಿಯಲ್ಲಿದೆ. 2026ರ ಜೂನ್‌ 15ರ ಅಂತ್ಯಕ್ಕೆ ರಸ್ತೆ ಕಾಮಗಾರಿಗಳ ಶೇ.14.81ರಷ್ಟು ಪ್ರಗತಿಯಲ್ಲಿದೆ.

ಬೆಂಗಳೂರು ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿ ಕುರಿತು ಸಚಿವ ಕೃಷ್ಣಬೈರೇಗೌಡ ಅವರು ಜಿಬಿಎ ಮುಖ್ಯ ಆಯುಕ್ತರು, ಬಿ-ಸ್ಮೈಲ್ ಅಧಿಕಾರಿಗಳ ಜೊತೆ ಬೆಂಗಳೂರು ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿ ಹಾಗೂ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಐದು ಪಾಲಿಕೆಗಳ ಆಯುಕ್ತರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿರುವ ನಡುವೆಯೇ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಯೋಜನೆಯಡಿಯಲ್ಲಿನ ರಸ್ತೆ ಕಾಮಗಾರಿಗಳ ಕನಿಷ್ಠ ಪ್ರಗತಿಯ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.

ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ 2024 ಅನುಷ್ಟಾನದ ಮೇಲ್ವಿಚಾರಣೆ ಹಾಗೂ ನಗರಾಭಿವೃದ್ಧಿ ಇಲಾಖೆಯು ಬೆಂಗಳೂರು ಅಭಿವೃದ್ಧಿಯ ಕ್ಷೇತ್ರ ಇಲಾಖೆಗಳ ಸಮನ್ವಯ ಸಮಿತಿಯು 2026ರ ಜೂನ್ 15ರಂದು ಸಭೆ ನಡೆಸಿತ್ತು. ಈ ಸಭೆಯಲ್ಲಿ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಯೋಜನೆ ಕಾಮಗಾರಿಗಳು ಸೇರಿದಂತೆ ಇನ್ನಿತರೆ ವಿಚಾರಗಳ ಕುರಿತು ಚರ್ಚೆಯಾಗಿದೆ.

ಈ ಸಭೆಯ ನಡವಳಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಬೆಂಗಳೂರು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ಮೂಲಸೌಕರ್ಯ ಯೋಜನೆಯಡಿಯಲ್ಲಿ ಒಟ್ಟು 82 ಪ್ಯಾಕೇಜ್‌ಗಳಿವೆ. ಇದರ ಒಟ್ಟಾರೆ ಅಂದಾಜು ಮೊತ್ತ 992.00 ಕೋಟಿಯಷ್ಟಿದೆ. ಈ 82 ಪ್ಯಾಕೇಜ್‌ಗಳ ಪೈಕಿ ಮೂರು ಪ್ಯಾಕೇಜ್‌ ಮಾತ್ರ ಟೆಂಡರ್ ಹಂತದಲ್ಲಿದೆ. 77 ಕಾಮಗಾರಿಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ 77 ಕಾಮಗಾರಿಗಳಿಗೂ ಅನುಮೋದನೆ ದೊರೆತಿದೆ. ಈ ಪೈಕಿ 75 ಕಾಮಗಾರಿಗಳಿಗೆ ಚಾಲನೆ ದೊರೆತಿದೆ.

992 ಕೋಟಿ ರು ಅಂದಾಜು ಮೊತ್ತದಲ್ಲಿ ಒಟ್ಟಾರೆ 3,370 ರಸ್ತೆಗಳ ನಿರ್ಮಾಣ ಮಾಡಬೇಕಿದೆ. ಇದರ ಒಟ್ಟು ಉದ್ದ 749.29 ಕಿ ಮೀ ನಷ್ಟಿದೆ. ಈ ಪೈಕಿ 2026ರ ಜೂನ್‌ 15ರ ಅಂತ್ಯಕ್ಕೆ ಕೇವಲ 88.60 ಕಿ ಮೀ ಉದ್ದದ ರಸ್ತೆಗಳಷ್ಟೇ ಪೂರ್ಣಗೊಂಡಿವೆ. ಇದರ ಒಟ್ಟಾರೆ ಪ್ರಗತಿಯು ಕೇವಲ ಶೇ. 14.81ರಷ್ಟು ಮಾತ್ರ ಇದೆ ಎಂದು ಅಧಿಕಾರಿಗಳು ಸಭೆಗೆ ಅಂಕಿ ಅಂಶಗಳನ್ನು ಒದಗಿಸಿರುವುದು ತಿಳಿದು ಬಂದಿದೆ.

 

 

ಬೆಂಗಳೂರು ಕೇಂದ್ರ ನಗರಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 20 ಪ್ಯಾಕೇಜ್‌ಗಳಿವೆ. ಒಟ್ಟು 250 ಕೋಟಿ ರು ಅಂದಾಜು ವೆಚ್ಚದಲ್ಲಿ 489 ರಸ್ತೆಗಳು ನಿರ್ಮಾಣವಾಗಬೇಕಿದೆ. ಇವುಗಳ ಉದ್ದ 200.34 ಕಿಮೀನಷ್ಟಿದೆ. ಆದರೆ ಇದುವರೆಗೆ ಕೇವಲ 34.80 ಕಿ ಮೀ ನಷ್ಟು ಮಾತ್ರ ಪೂರ್ಣಗೊಂಡಿದೆ. ಒಟ್ಟು ಶೇಕಡವಾರು ಪ್ರಗತಿಯು ಶೇ.17.37ರಷ್ಟು ಇರುವುದು ಸಭೆ ನಡವಳಿಯಿಂದ ತಿಳಿದು ಬಂದಿದೆ.

ಅದೇ ರೀತಿ ಬೆಂಗಳೂರು ಪೂರ್ವ ನಗರಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 8 ಪ್ಯಾಕೇಜ್‌ಗಳಿವೆ. 50 ಕೋಟಿ ರು ಅಂದಾಜು ವೆಚ್ಚದಲ್ಲಿ 112 ರಸ್ತೆಗಳ ನಿರ್ಮಾಣವಾಗಬೇಕಿದೆ. ಈ ರಸ್ತೆಗಳು 51.96 ಕಿ ಮೀ ಉದ್ದ ಹೊಂದಿವೆ. ಇದುವರೆಗೆ 15.80 ಕಿ ಮೀ ಉದ್ದದವರೆಗೆ ಮಾತ್ರ ರಸ್ತೆಗಳು ಪೂರ್ಣಗೊಂಡಿವೆ. ಒಟ್ಟಾರೆ ಶೇ.30.41ರಷ್ಟಿದೆ. ಪಶ್ಚಿಮ ನಗರಪಾಲಿಕೆ ವ್ಯಾಪ್ತಿಯಲ್ಲಿ 20 ಪ್ಯಾಕೇಜ್‌ಗಳಿವೆ. 317.25 ಕೋಟಿ ರು ಅಂದಾಜು ವೆಚ್ಚದಲ್ಲಿ 186.66 ಕಿ ಮೀ ಉದ್ದ ಹೊಂದಿರುವ 921 ರಸ್ತೆಗಳ ನಿರ್ಮಾಣವಾಗಬೇಕಿದೆ. ಆದರೆ ಇದುವರೆಗೆ ಪೂರ್ಣಗೊಂಡಿರುವುದು ಕೇವಲ 4.05 ಕಿ ಮೀ ಉದ್ದದ ರಸ್ತೆ ಮಾತ್ರ. ಇದು ಒಟ್ಟಾರೆ ಶೇ.2.17ರಷ್ಟು ಮಾತ್ರ ಪ್ರಗತಿಯಾಗಿದೆ.

 

 

ಉತ್ತರ ನಗರಪಾಲಿಕೆಯಲ್ಲಿ 23 ಪ್ಯಾಕೇಜ್‌ಗಳಿವೆ. 230 ಕೋಟಿ ರು ಅಂದಾಜು ವೆಚ್ಚದಲ್ಲಿ 186.47 ಕಿ ಮೀ ಉದ್ದ ಹೊಂದಿರುವ 1,290 ರಸ್ತೆಗಳ ನಿರ್ಮಾಣ ಮಾಡಬೇಕಿದೆ. ಆದರೆ ಇದುವರೆಗೆ ಪೂರ್ಣಗೊಂಡಿದ್ದು ಕೇವಲ 12.28 ಕಿ ಮೀ ಮಾತ್ರ. ಇದು ಒಟ್ಟಾರೆ ಶೇ. 6.59ರಷ್ಟು ಮಾತ್ರ ಪ್ರಗತಿ ಆದಂತಾಗಿದೆ. ಹಾಗೆಯೇ ದಕ್ಷಿಣ ನಗರಪಾಲಿಕೆ ವ್ಯಾಪ್ತಿಯಲ್ಲಿ 11 ಪ್ಯಾಕೇಜ್‌ಗಳಿವೆ. 144.75 ಕೋಟಿ ರು ಅಂದಾಜು ವೆಚ್ಚದಲ್ಲಿ 123.85 ಕಿ ಮೀ ಉದ್ದದ ರಸ್ತೆಗಳನ್ನು ನಿರ್ಮಾಣ ಮಾಡಬೇಕಿತ್ತು. ಆದರೆ ಕೇವಲ 21.67 ಕಿ ಮೀ ಉದ್ದದ ರಸ್ತೆಗಳಷ್ಟೇ ನಿರ್ಮಾಣವಾಗಿದೆ. ಇದು ಒಟ್ಟಾರೆ ಶೇ. 17.50ರಷ್ಟು ಮಾತ್ರ ಪ್ರಗತಿಯಾಗಿದೆ.

 

 

ಅದೇ ರೀತಿ ಆಲ್ಟೀರಿಯಲ್ ಮತ್ತು ಸಬ್‌ ಆಲ್ಟೀರಿಯಲ್ ಯೋಜನೆಯಡಿಯಲ್ಲಿ ಒಟ್ಟು 5 ನಗರಪಾಲಿಕೆಗಳ ವ್ಯಾಪ್ತಿಯಲ್ಲಿ 81 ಪ್ಯಾಕೇಜ್‌ಗಳಿದ್ದವು. 1,241.57 ಕೋಟಿ ರು ಅಂದಾಜು ವೆಚ್ಚದಲ್ಲಿ 1,018.18 ಕಿ ಮೀ ಉದ್ದದ 1,389 ರಸ್ತೆಗಳನ್ನು ನಿರ್ಮಾಣ ಮಾಡಬೇಕಿತ್ತು. ಆದರೆ 112.98 ಕಿ ಮೀ ಉದ್ದ ಮಾತ್ರ ಪೂರ್ಣಗೊಂಡಿದೆ. ಇನ್ನೂ ಪ್ರಗತಿಯಲ್ಲಿ ಒಟ್ಟಾರೆ ಶೇ. 10.48ರಷ್ಟಿದೆ.

 

13,262 ಕೋಟಿ ರು ವೆಚ್ಚದಲ್ಲಿ 75.60 ಕಿ ಮೀ ಉದ್ದ ಮೇಲ್ಸೇತುವೆ ನಿರ್ಮಾಣದ ಎಲಿವೇಟೆಡ್‌ ಕಾರಿಡಾರ್‍‌ಗೆ ಸಂಬಂಧಿಸಿದಂತೆ ಈಗಾಗಲೇ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಇವುಗಳಲ್ಲಿ 9 ಮೇಲ್ಸೇತುವೆ ಕಾಮಗಾರಿಗಳಿಗೆ ಮಾತ್ರ ಟೆಂಡರ್ ಕರೆಯಲಾಗಿದೆ. ಇನ್ನೂ 2 ಎಲಿವೇಟೆಡ್ ಕಾರಿಡಾರ್ ಸಂಬಂಧ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ಅನುಮೋದನೆಗೆ ಸಲ್ಲಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.

ಹಲಸೂರು ಕೆರೆಯಲ್ಲಿ ಕೊಳಚೆ ನೀರು

ಹಲಸೂರು ಕೆರೆಯಲ್ಲಿ ಕೊಳಚೆ ನೀರು ಹರಿಯತ್ತಿರುವ ಕುರಿತು ಸಭೆಯಲ್ಲಿ ಚರ್ಚೆಯಾಗಿದೆ. ಹಲಸೂರು ಕೆರೆಯಲ್ಲಿ ಕೊಳಚೆ ನೀರು ಹರಿಯದಂತೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಆಯುಕ್ತರು ಸೂಚಿಸಿದ್ದಾರೆ. ಈ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು ಎಂದು ಬಿಡಬ್ಲ್ಯೂಎಸ್‌ಎಸ್‌ಬಿ ಗೆ ಸೂಚಿಸಿರುವುದು ಗೊತ್ತಾಗಿದೆ.

 

 

ಅದೇ ರೀತಿ ರಾಜ ಕಾಲುವೆಗಳಲ್ಲಿ ಹಲವು ಕಡೆ ಬೆಸ್ಕಾಂ ಹಾಗೂ ಕೆಪಿಟಿಸಿಎಲ್‌ ಕೇಬಲ್‌ಗಳಿಂದ ಸುಗಮ ನೀರು ಹರಿಯುವಿಕೆಗೆ ತೊಂದರೆ ಉಂಟಾಗಿದೆ. ಎಲ್ಲೆಲ್ಲಿ ರಾಜ ಕಾಲುವೆಳಗಳಲ್ಲಿ ನೀರು ಹರಿಯುವಿಕೆಗೆ ತೊಂದರೆ ಉಂಟಾಗುತ್ತಿದೆಯೇ ಅವುಗಳನ್ನು ಸರಿಪಡಿಸಬೇಕು ಎಂದು ಸೂಚಿಸಿರುವುದು ತಿಳಿದು ಬಂದಿದೆ.

Hot this week

ನೀರಾವರಿ ನಿಗಮಗಳ ಗುತ್ತಿಗೆದಾರರಿಗೆ 15,429.51 ಕೋಟಿ ರು ಬಾಕಿ; ಸ್ಥಗಿತಗೊಂಡಿವೆಯೇ ಕಾಮಗಾರಿಗಳು?

ಬೆಂಗಳೂರು;  ಕೃಷ್ಣಭಾಗ್ಯ ಜಲನಿಗಮ ಸೇರಿದಂತೆ ರಾಜ್ಯದ ನಾಲ್ಕು ನೀರಾವರಿ ನಿಗಮಗಳು ಅನುಷ್ಠಾನಗೊಳಿಸುತ್ತಿರುವ...

ಟೆಂಡರ್ ಇಲ್ಲದೆಯೇ 3.11 ಕೋಟಿ ನೇರ ಹೂಡಿಕೆ, ಮುಂಗಡ ಹಣ ಹೊಂದಾಣಿಕೆಯಲ್ಲೂ ವಿಳಂಬ, ಲಕ್ಷಾಂತರ ರು ನಷ್ಟ; ಮಹರ್ಷಿ ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಅಕ್ರಮ!

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಯಾವುದೇ ಟೆಂಡರ್‍‌ ಕರೆಯದೇ ನೇರವಾಗಿ...

ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಲೋಪ; ಹಣ ಪಾವತಿಯಲ್ಲಿ ಸರ್ಕಾರದ ಆದೇಶಗಳ ಉಲ್ಲಂಘನೆ, 51.21 ಕೋಟಿ ಮೊತ್ತದ ವಹಿವಾಟು ಪಾರದರ್ಶಕವಾಗಿವೆಯೇ?

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು ಹಣ ಪಾವತಿ ಸಂದರ್ಭಗಳಲ್ಲಿ ಸರ್ಕಾರದ...
Please Scan to make Your Contribution

Topics

ನೀರಾವರಿ ನಿಗಮಗಳ ಗುತ್ತಿಗೆದಾರರಿಗೆ 15,429.51 ಕೋಟಿ ರು ಬಾಕಿ; ಸ್ಥಗಿತಗೊಂಡಿವೆಯೇ ಕಾಮಗಾರಿಗಳು?

ಬೆಂಗಳೂರು;  ಕೃಷ್ಣಭಾಗ್ಯ ಜಲನಿಗಮ ಸೇರಿದಂತೆ ರಾಜ್ಯದ ನಾಲ್ಕು ನೀರಾವರಿ ನಿಗಮಗಳು ಅನುಷ್ಠಾನಗೊಳಿಸುತ್ತಿರುವ...

ಟೆಂಡರ್ ಇಲ್ಲದೆಯೇ 3.11 ಕೋಟಿ ನೇರ ಹೂಡಿಕೆ, ಮುಂಗಡ ಹಣ ಹೊಂದಾಣಿಕೆಯಲ್ಲೂ ವಿಳಂಬ, ಲಕ್ಷಾಂತರ ರು ನಷ್ಟ; ಮಹರ್ಷಿ ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಅಕ್ರಮ!

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಯಾವುದೇ ಟೆಂಡರ್‍‌ ಕರೆಯದೇ ನೇರವಾಗಿ...

ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಲೋಪ; ಹಣ ಪಾವತಿಯಲ್ಲಿ ಸರ್ಕಾರದ ಆದೇಶಗಳ ಉಲ್ಲಂಘನೆ, 51.21 ಕೋಟಿ ಮೊತ್ತದ ವಹಿವಾಟು ಪಾರದರ್ಶಕವಾಗಿವೆಯೇ?

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು ಹಣ ಪಾವತಿ ಸಂದರ್ಭಗಳಲ್ಲಿ ಸರ್ಕಾರದ...

ಮಹರ್ಷಿ ವಾಲ್ಮೀಕಿ ವಿ.ವಿ.ಯಲ್ಲಿ 38.98 ಕೋಟಿ ರು ಗೆ ಆಕ್ಷೇಪಣೆ; ವಾರ್ಷಿಕ ಲೆಕ್ಕಪತ್ರಗಳಲ್ಲಿ ಬ್ಯಾಂಕ್‌ ಖಾತೆಗಳ ವಿವರ ಒದಗಿಸಿಲ್ಲವೇಕೆ?

ಬೆಂಗಳೂರು;  ರಾಯಚೂರಿನಲ್ಲಿರುವ  ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಟೆಂಡರ್ ಕರೆಯದೇ ನೇರವಾಗಿ ಏಜೆನ್ಸಿ...

ರಾಷ್ಟ್ರೋತ್ಥಾನ, ಜನಸೇವಾ ವಿಶ್ವಸ್ಥ, ಜನಸೇವಾ ಟ್ರಸ್ಟ್‌ಗೆ 121 ಎಕರೆ ಜಮೀನು ಮಂಜೂರು; ಸದನಕ್ಕೆ ಪಟ್ಟಿ ಒದಗಿಸಿದ ಸರ್ಕಾರ

ಬೆಂಗಳೂರು; ಕಳೆದ 16 ವರ್ಷಗಳಲ್ಲಿ  ರಾಷ್ಟ್ರೋತ್ಥಾನ ಪರಿಷತ್‌ ಮತ್ತು ಸಂಘ ಪರಿವಾರದ...

ಸಿಎಂ ಮಾಧ್ಯಮ ಕಾರ್ಯದರ್ಶಿಗಳಿಗೆ ಮಾಸಿಕ 3 ಲಕ್ಷ ರು ವೇತನ; ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು, ಅಧಿಕಾರಿವರ್ಗದಲ್ಲಿ ಚರ್ಚೆ

ಬೆಂಗಳೂರು;  ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಮತ್ತು ಹೊಸದಾಗಿ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಲು ಅನುದಾನ...

Related Articles

Popular Categories

error: Content is protected !!