Saturday | April 11, 2026 |

ಸರ್ಕಾರಿ ಸೇವೆ; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರಾತಿನಿಧ್ಯ ಎರಡು ವರ್ಷದಲ್ಲಿ ಇಳಿಕೆಯಾಗಿದೆಯೇ?

ಬೆಂಗಳೂರು; ರಾಜ್ಯ ಸರ್ಕಾರದ ಶಿಕ್ಷಣ, ಒಳಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಣ್ಣ ನೀರಾವರಿ ಮತ್ತು ಅಂತರ್ಜಲ ಮತ್ತಿತರೆ ಇಲಾಖೆಗಳಲ್ಲಿ ಶೇಕಡವಾರು ಪ್ರಮಾಣವು ನಿಗದಿಪಡಿಸಿದ ಶೇ.17ಕ್ಕಿಂತಲೂ ಕಡಿಮೆ ಇರುವುದು ಬಹಿರಂಗವಾಗಿದೆ.

ರಾಜ್ಯ ಸರ್ಕಾರಿ ಸೇವೆಯಲ್ಲಿ 2025ರ ಡಿಸೆಂಬರ್ 31ರ ಅಂತ್ಯಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಪ್ರಾತಿನಿಧ್ಯತೆ ಕುರಿತು ಯೋಜನಾ ಇಲಾಖೆಯು ಸಿದ್ಧಪಡಿಸಿರುವ ವರದಿಯಲ್ಲಿ ಈ ಮಾಹಿತಿ ಇದೆ. ಈ ವರದಿಯನ್ನು ಈಚೆಗಷ್ಟೇ ಸಮಾಜ ಕಲ್ಯಾಣ ಸಚಿವ ಡಾ ಎಚ್‌ ಸಿ ಮಹದೇವಪ್ಪ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ ಎಂದು ಗೊತ್ತಾಗಿದೆ.

ಯೋಜನಾ ಇಲಾಖೆಯು ಸಿದ್ಧಪಡಿಸಿರುವ ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಒಳ ಮೀಸಲಾತಿ ಕುರಿತು ಎಡ ಮತ್ತು ಬಲ ಸಮುದಾಯಗಳ ನಡುವೆ ನಡೆಯುತ್ತಿರುವ ತಿಕ್ಕಾಟಗಳ ಬೆನ್ನಲ್ಲೇ ಯೋಜನಾ ಇಲಾಖೆಯು ಸಿದ್ಧಪಡಿಸಿರುವ ಈ ಎರಡೂ ವರದಿಗಳಲ್ಲಿನ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.

2023ರ ಮಾರ್ಚ್‌ 31ರ ಅಂತ್ಯ

 

 

 

ಮತ್ತು 2025ರ ಡಿಸೆಂಬರ್ 31ರ ಅಂತ್ಯಕ್ಕೆ ಸಂಬಂಧಿಸಿದಂತೆ ಯೋಜನಾ ಇಲಾಖೆಯು ವರದಿಯನ್ನು ಸಿದ್ಧಪಡಿಸಿದೆ.

 

 

ಈ ಎರಡೂ ವರದಿಗಳಲ್ಲಿ ಅಂಕಿ ಅಂಶಗಳಲ್ಲಿ ಏರಿಳಿತಗಳು ಕಂಡು ಬಂದಿವೆ.

 

 

2023ರ ಮಾರ್ಚ್‌ 31ರಲ್ಲಿ ಇದ್ದಂತೆ ರಾಜ್ಯ ಸರ್ಕಾರಿ ಸೇವೆಯಲ್ಲಿರುವ ಪರಿಶಿಷ್ಟ ಜಾತಿಯವರ ಸಂಖ್ಯೆ ಒಟ್ಟು 99,337 (ಶೇ. 18.65) ಹಾಗೂ ಪರಿಶಿಷ್ಟ ಪಂಗಡದವರ ಸಂಖ್ಯೆ ಒಟ್ಟು 26,871 (ಶೇ.5.05) ರಷ್ಟಿದೆ.

 

 

ಗುಂಪುವಾರು ವಿಂಗಡಣೆಯಲ್ಲಿ ಎ, ಬಿ, ಸಿ ಮತ್ತು ಡಿ ಗುಂಪಿನ ಒಟ್ಟು ಹುದ್ದೆಗಳಲ್ಲಿ ಪರಿಶಿಷ್ಟ ಜಾತಿಯ ಶೇಕಡವಾರು ಪ್ರಮಾಣವು 18.55, 19.46, 17.99 ಮತ್ತು 25.58 ಇದೆ. ಇದೇ ರೀತಿ ಪರಿಶಿಷ್ಟ ಪಂಗಡಗಳ ಶೇಕಡವಾರು ಪ್ರಮಾಣವು 4.86, 4.98, 4.79 ಮತ್ತು 8.18ರಷ್ಟಿರುವುದು ವರದಿಯಿಂದ ಗೊತ್ತಾಗಿದೆ.

 

 

ಅದೇ ರೀತಿ 2025ರ ಮಾರ್ಚ್‌ 31ರಲ್ಲಿ ಇದ್ದಂತೆ ಪರಿಶಿಷ್ಟ ಜಾತಿಯವರು 91.419 (ಶೇ. 17.60), ಪರಿಶಿಷ್ಟ ಪಂಗಡದವರು 26,602. (ಶೇ. 5.12) ಇದ್ದಾರೆ. ಗುಂಪುವಾರು ವಿಂಗಡಣೆಯಲ್ಲಿ ಎ, ಬಿ, ಸಿ ಮತ್ತು ಡಿ ಗುಂಪಿನ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿಯ ಶೇಕಡವಾರು 19.65, 19.66, 16.64, 25.88 ರಷ್ಟಿದೆ.

 

 

2023ರ ಮಾರ್ಚ್‌ 31ರಲ್ಲಿನ ಅಂಕಿ ಅಂಶಗಳನ್ನು 2025ರ ಮಾರ್ಚ್‌ 31ರಲ್ಲಿನ ಅಂಕಿ ಅಂಶಗಳೊಂದಿಗೆ ಹೋಲಿಸಿದರೆ ಪರಿಶಿಷ್ಟ ಜಾತಿಯವರ ಸಂಖ್ಯೆಯು 7,918 ರಷ್ಟು ಇಳಿಕೆಯಾಗಿದೆ. ಅದೇ ರೀತಿ ಯೋಜನೆ ಇಲಾಖೆಯು ಮಾಹಿತಿ ಸಂಗ್ರಹಿಸಿದ್ದ 33 ಇಲಾಖೆಗಳ ಪೈಕಿ 25 ಇಲಾಖೆಗಳಲ್ಲಿ ಪರಿಶಿಷ್ಟ ಪಂಗಡದವರ ಪ್ರಮಾಣವು ಶೇ.7ಕ್ಕಿಂತಲೂ ಕಡಿಮೆ ಇದೆ. 8 ಇಲಾಖೆಗಳಲ್ಲಿ ಶೇ.7ಕ್ಕಿಂತಲೂ ಹೆಚ್ಚು ಪ್ರಾತಿನಿಧ್ಯವಿರುವುದು ಕಂಡು ಬಂದಿದೆ.

2023ರ ಮಾರ್ಚ್‌ 31ರಲ್ಲಿದ್ದಂತೆ 2019ರಿಂದ 2023ವರೆಗಿನ ಒಟ್ಟು 5 ವರ್ಷದ ಅವಧಿಯ ಪರಿಶಿಷ್ಟ ಜಾತಿಯವರ ಪ್ರಾತಿನಿಧ್ಯದ ಗುಂಪುವಾರು ಮಾಹಿತಿಯನ್ನು ಪರಿಶೀಲಿಸಿದಾಗ ಪರಿಶಿಷ್ಟ ಜಾತಿಯವರ ಪ್ರಾತಿನಿಧ್ಯ ಕ್ರಮವಾಗಿ ಶೇ. 16.67, 16.57, 16.84, 17.34 ಹಾಗೂ 18.65ರಷ್ಟು ಇರುವುದು ಕಂಡು ಬಂದಿದೆ.

ಇದೇ ಅವಧಿಯಲ್ಲಿನ ಪರಿಶಿಷ್ಟ ಜಾತಿಯವರ ಪ್ರಾತಿನಿಧ್ಯದ ಗುಂಪುವಾರು ಮಾಹಿತಿಯನ್ನು ಪರಿಶೀಲಿಸಿದಾಗ ಪರಿಶಿಷ್ಟ ಪಂಗಡದವರ ಪ್ರಾತಿನಿಧ್ಯವು ಕ್ರಮವಾಗಿ ಶೇ.. 4.61, 4.68, 4.72, 4.90 ಹಾಗೂ 5.05ರಷ್ಟಾಗಿದೆ.

 

 

2025ರ ಮಾರ್ಚ್‌ 31ರ ಅಂತ್ಯಕ್ಕೆ 2021ರಿಂದ 2025ರವರೆಗಿನ ಒಟ್ಟು 5 ವರ್ಷದ ಅವಧಿಯ ಪರಿಶಿಷ್ಟ ಜಾತಿಯವರ ಪ್ರಾತಿನಿಧ್ಯದ ಗುಂಪುವಾರು ಮಾಹಿತಿಯನ್ನು ಪರಿಶೀಲಿಸಿದಾಗ ಪರಿಶಿಷ್ಟ ಜಾತಿಯವರ ಪ್ರಾತಿನಿಧ್ಯವು ಕ್ರಮವಾಗಿ ಶೇ. 16.84, 17.34, 18.65, 17.52 ಹಾಗೂ 17.60ರಷ್ಟಿರುವುದು ವರದಿಗಳಿಂದ ತಿಳಿದು ಬಂದಿದೆ.

2021ರಿಂದ 2025ರವರೆಗಿನ ಒಟ್ಟು 5 ವರ್ಷದ ಅವಧಿಯ ಪರಿಶಿಷ್ಟ ಪಂಗಡದವರ ಪ್ರಾತಿನಿಧ್ಯದ ಗುಂಪುವಾರು ಮಾಹಿತಿ ಪ್ರಕಾರ ಕ್ರಮವಾಗಿ ಶೇ. 4.72, 4.90, 5.05, 5.17 ಹಾಗೂ 5.12ರಷ್ಟಿದೆ.

2025ರ ಮಾರ್ಚ್‌ 31ರ ಅಂತ್ಯಕ್ಕೆ ಇಲಾಖೆಗಳಲ್ಲಿ ಭರ್ತಿ ಮಾಡಲಾದ ಹುದ್ದೆಗಳಲ್ಲಿ ಹೆಚ್ಚಿನ ಸಂಖ್ಯೆಯ ಅಧಿಕಾರಿ, ಸಿಬ್ಬಂದಿ ಆಧಾರದ ಮೇಲೆ ಶಿಕ್ಷಣ, ಒಳಾಡಳಿತ ಮತ್ತು ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಗಳು ಎಂದಿನಂತೆ ಅತೀ ದೊಡ್ಡ ಇಲಾಖೆಗಳ ಪಟ್ಟಿಯಲ್ಲಿಯೇ ಉಳಿದುಕೊಂಡಿವೆ. ಈ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಇದರ ಪ್ರಮಾಣವು 30,247 ( ಶೇ. 13.91), 20,640 ( ಶೇ. 19.46), 9,577 ( ಶೇ. 20.40) ರಷ್ಟಿರುವುದು ಗೊತ್ತಾಗಿದೆ. ಇವೇ ಇಲಾಖೆಗಳಲ್ಲಿ ಪರಿಶಿಷ್ಟ ಪಂಗಡದವರೂ ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದರ ಪ್ರಮಾಣವು ಕ್ರಮವಾಗಿ 8,395, (ಶೇ. 3.86), 6,389 ( ಶೇ. 6.02) ಮತ್ತು 2,579 (ಶೇ. 5.49)ರಷ್ಟಿದೆ.

 

 

2019ರಿಂದ 2025 ರವರೆಗಿನ ಅಂಕಿ ಅಂಶಗಳಿಗೆ ಹೋಲಿಸಿದರೇ ಪರಿಶಿಷ್ಟ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಇಲಾಖೆಗಳಲ್ಲಿ ಹುದ್ದೆಗಳು 2025ರ ಮಾರ್ಚ್ 31ರ ಅಂತ್ಯಕ್ಕೆ ಶಿಕ್ಷಣ ಇಲಾಖೆ ಹೊರತುಪಡಿಸಿ ಉಳಿದೆರಡು ಇಲಾಖೆಗಳಲ್ಲಿ ಕ್ರಮೇಣ ಇಳಿಕೆಯಾಗಿದೆ. ಶಿಕ್ಷಣ ಇಲಾಖೆಯಲ್ಲಿ 303 ಹುದ್ದೆಗಳು ಏರಿಕೆ ಕಂಡಿವೆ. ಒಳಾಡಳಿತ ಇಲಾಖೆಯಲ್ಲಿ 6,911 ಹುದ್ದೆಗಳು ಇಳಿಕೆಯಾಗಿವೆ. ಆರೋಗ್ಯ ಇಲಾಖೆಯಲ್ಲಿಯೂ ಸಹ 563 ಹುದ್ದೆಗಳು ಇಳಿಕೆಯಾಗಿರುವುದು ಅಂಕಿ ಅಂಶಗಳಿಂದ ಕಂಡು ಬಂದಿದೆ.

2025ರ ಮಾರ್ಚ್ 31ರ ಅಂತ್ಯಕ್ಕೆ ಭರ್ತಿ ಮಾಡಿದ ಹುದ್ದೆಗಳಿಗೆ ಶೇಕಡವಾರು ಪರಿಶಿಷ್ಟ ಜಾತಿ ಪ್ರಾತನಿಧ್ಯವು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ತಂತ್ರಜ್ಞಾನ ಇಲಾಖೆಯಲ್ಲಿ ಶೇ. 50, ಸಂಸದೀಯ ವ್ಯವಹಾರಗಳ ಇಲಾಖೆಯಲ್ಲಿ ಶೇ. 34.29 ಮತ್ತು ಪ್ರವಾಸೋದ್ಯಮ ಇಲಾಖೆಯಲ್ಲಿ ಶೇ. 33.93ರಷ್ಟಿರುವ ಮೂಲಕ ಮೊದಲ ಮೂರು ಸ್ಥಾನದಲ್ಲಿವೆ.

 

 

ಸಣ್ಣ ನೀರಾವರಿ ಮತ್ತು ಅಂತರ್ಜಲ ಶಿಕ್ಷಣ ಇಲಾಖೆಗಳು ಕ್ರಮವಾಗಿ ಶೇ. 13.21, ಶೇ. 13.91ರಷ್ಟು ಭರ್ತಿ ಮಾಡಲ್ಪಟ್ಟ ಹುದ್ದೆಗಳಿವೆ. ಇವುಗಳ ಶೇಕಡವಾರು ಪ್ರಮಾಣವು ನಿಗದಿಪಡಿಸಿದ ಶೇ.17ಕ್ಕಿಂತಲೂ ಕಡಿಮೆ ಇರುವುದು ವರದಿಯಿಂದ ಗೊತ್ತಾಗಿದೆ.

 

 

 

ಅಲ್ಲದೇ 33 ಇಲಾಖೆಗಳ ಪೈಕಿ 2 ಇಲಾಖೆಗಳಲ್ಲಿ ಪರಿಶಿಷ್ಟ ಜಾತಿಯವರ ಪ್ರಮಾಣವು ಶೇ. 15ಕ್ಕಿಂತ ಕಡಿಮೆ ಇದೆ. ಶೇ. 15ರಿಂದ ಶೇ. 17ರವರೆಗೆ ಯಾವುದೇ ಇಲಾಖೆಗಳು ಇಲ್ಲ. ಉಳಿದ 31 ಇಲಾಖೆಗಳಲ್ಲಿ ಶೇ. 17ಕ್ಕಿಂತ ಹೆಚ್ಚು ಪ್ರಾತಿನಿಧ್ಯವಿರುವುದು ಗೊತ್ತಾಗಿದೆ.

2023ರ ಮಾರ್ಚ್‌ 31ರ ಅಂತ್ಯಕ್ಕೆ ಇಲಾಖೆಗಳಲ್ಲಿ ಭರ್ತಿ ಮಾಡಲಾದ ಹುದ್ದೆಗಳಲ್ಲಿ ಹೆಚ್ಚಿನ ಸಂಖ್ಯೆಯ ಅಧಿಕಾರಿ, ಸಿಬ್ಬಂದಿಯ ಆಧಾರದ ಮೇಲೆ ಶಿಕ್ಷಣ ಇಲಾಖೆ, ಒಳಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ಅತೀ ದೊಡ್ಡ ಇಲಾಖೆಗಳಾಗಿವೆ. ಈ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದರ ಪ್ರಮಾಣ ಅನುಕ್ರಮವಾಗಿ 29,944 ( ಶೇ. 13.50), 27,551 ( ಶೇ.25.74) ಮತ್ತು 10,140 (ಶೇ.20.92) ರಷ್ಟಿದೆ. ಆದರೂ ಶಿಕ್ಷಣ ಇಲಾಖೆಯಲ್ಲಿ ನಿಗದಿತ ಪ್ರಮಾಣವು ಶೇ. 17ಕ್ಕಿಂತಲೂ ಕಡಿಮೆ ಇತ್ತು.

ಭರ್ತಿ ಮಾಡಿದ ಹುದ್ದೆಗಳಿಗೆ ಶೇಕಡವಾರು ಪರಿಶಿಷ್ಟ ಜಾತಿ ಪ್ರಾತಿನಿಧ್ಯವು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆಯಲ್ಲಿ ಶೇ.53.33, ಸಂಸದೀಯ ವ್ಯವಹಾರಗಳ ಇಲಾಖೆಯಲ್ಲಿ ಶೇ. 34.33, ಪ್ರವಾಸೋದ್ಯಮ ಇಲಾಖೆಯಲ್ಲಿ ಶೇ. 26.56 ಇದೆ. ಈ ಇಲಾಖೆಗಳು ಮೊದಲ ಮೂರು ಸ್ಥಾನದಲ್ಲಿದ್ದವು.

ಶಿಕ್ಷಣ, ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಗಳು ಕ್ರಮವಾಗಿ ಶೇ. 13.50, ಹಾಗೂ ಶೇ. 14.29ರಷ್ಟು ಭರ್ತಿ ಮಾಡಲ್ಪಟ್ಟ ಹುದ್ದೆಗಳನ್ನು ಹೊಂದಿದೆ. ಇವುಗಳ ಶೇಕಡವಾರು ಪ್ರಮಾಣವು ನಿಗದಿಪಡಿಸಿದ ಶೇ. 17ಕ್ಕಿಂತ ಕಡಿಮೆ ಇರುವುದು ಕಂಡು ಬರುತ್ತದೆ.

ಮಾಹಿತಿ ಸಂಗ್ರಹಿಸಿದ ಒಟ್ಟು 33 ಇಲಾಖೆಗಳ ಪೈಕಿ 2 ಇಲಾಖೆಗಳಲ್ಲಿ ಪರಿಶಿಷ್ಟ ಜಾತಿಯವರ ಪ್ರಮಾಣವು ಶೇ. 15ಕ್ಕಿಂತ ಕಡಿಮೆ ಇದೆ. ಹಾಗೂ 2 ಇಲಾಖೆಗಳಲ್ಲಿ ಶೆ. 15ರಿಂದ ಶೇ. 17 ಪಂಕ್ತಿಯಲ್ಲಿ ಪ್ರಾತಿನಿಧ್ಯ ಇದೆ. ಉಳಿದ 29 ಇಲಾಖೆಗಳಲ್ಲಿ ಶೇ. 19ಕ್ಕಿಂತ ಹೆಚ್ಚು ಪ್ರಾತಿನಿಧ್ಯವಿದೆ. ಅಂದರೆ ಶೇ. 89ರಷ್ಟು ಇಲಾಖೆಗಳಲ್ಲಿ ಭರ್ತಿ ಮಾಡಿದ ಹುದ್ದೆಗಳಲ್ಲಿ ಶೇ. 17ಕ್ಕಿಂತ ಹೆಚ್ಚಿನ ಪ್ರಾತಿನಿಧ್ಯ ಇರುವುದು ಕಂಡು ಬರುತ್ತದೆ.

ಶಿಕ್ಷಣ ಇಲಾಖೆ, ಒಳಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳಲ್ಲಿ ಪರಿಶಿಷ್ಟ ಪಂಗಡದವರ ಸಂಖ್ಯೆ ಮತ್ತು ಶೇಕಡವಾರು ಮಾಹಿತಿಯು ಕ್ರಮವಾಗಿ 8,120 (ಶೇ. 3.66), 5,950 (ಶೇ. 5.56) ಮತ್ತು 3,589 (ಶೇ. 7.40) ಇದೆ. ಭರ್ತಿ ಮಾಡಲ್ಪಟ್ಟ ಹೆಚ್ಚು ಪರಿಶಿಷ್ಟ ಪಂಗಡದವರ ಪ್ರಾತಿನಿಧ್ಯ ಹೊಂದಿರುವುದು ಕಂಡು ಬಂದಿದೆ.

ಭರ್ತಿ ಮಾಡಿದ ಹುದ್ದೆಗಳಿಗೆ ಶೇಕಡವಾರ ಪ್ರಾತಿನಿಧ್ಯವನ್ನು ಪರಿಶೀಲಿಸಿದಾಗ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ತಂತ್ರಜ್ಞಾನ ಇಲಾಖೆ ಶೇ. 26.67, ಪ್ರವಾಸೋದ್ಯಮ ಇಲಾಖೆಯು ಶೇ. 17.19, ಕನ್ನಡ ಸಂಸ್ಕೃತಿ, ವಾರ್ತಾ ಇಲಾಖೆಯು ಶೇ. 12.70ರಷ್ಟು ಪರಿಶಿಷ್ಟ ಪಂಗಡದವರನ್ನು ಹೊಂದುವ ಮೂಲಕ ಮೊದಲ ಮೂರು ಸ್ಥಾನವನ್ನು ಪಡೆದಿರುವುದು ತಿಳಿದು ಬಂದಿದೆ.

ಕೆಲವು ಮಾತೃ ಇಲಾಖೆಗಳಿಂದ ಬೇರೆ ಇಲಾಖೆಗಳಲ್ಲಿ ನಿಯೋಜನೆ ಮೇಲೆ ಸೇವೆ ಸಲ್ಲಿಸುತ್ತಿರುವವರ ಮಾಹಿತಿಯೂ ಇದರಲ್ಲಿ ಸೇರಿರಬಹುದು ಅಥವಾ ಬಿಟ್ಟು ಹೋಗಿರಬಹುದಾದ ಸಾಧ್ಯತೆಗಳೂ ಇವೆ. ಅಲ್ಲದೇ ಸರ್ಕಾರವು ಶಿಕ್ಷಣ, ಒಳಾಡಳಿತ ಹಾಗೂ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಗಳಿಗೆ ವಿಶೇಷ ನೇಮಕಾತಿಗೆ ಅನುಮತಿ ನೀಡಿರುವ ಸಾಧ್ಯತೆಯೂ ಇರಬಹುದು ಎಂದು ವರದಿಯಲ್ಲಿ ಅಭಿಪ್ರಾಯಿಸಿದೆ.

ಈ ಇಲಾಖೆಗಳನ್ನು ಹೊರತುಪಡಿಸಿ ಇತರೆ ಇಲಾಖೆಗಳಲ್ಲೂ ಕೇಂದ್ರ ಪುರಸ್ಕೃತ ಹೊಸ ಯೋಜನೆಗಳು ಜಾರಿಯಾಗುವ ಸಂದರ್ಭಾನುಸಾರ ಹೊಸ ಹುದ್ದೆಗಳು ಸೃಜಿಸಿರಬಹುದು. ಒಂದೊಮ್ಮೆ ಸೃಜಿಸದೇ ಇದ್ದಾಗ ಜಾರಿಯಲ್ಲಿದ್ದ ಯೋಜನೆಗಳು ಕಾಲಾವಧಿ ಪೂರ್ಣಗೊಂಡ ಬಳಿಕ ಕೆಲವು ಮಂಜೂರರಾದ ಹುದ್ದೆಗಳು ರದ್ದಾಗಿರಬಹುದಾದ ಪ್ರಸಂಗಗಳೂ ಇರುತ್ತವೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷದ ಅಂಕಿ ಅಂಶಗಳಿಗೂ ಈ ವರ್ಷದ ಅಂಕಿ ಅಂಶಗಳಿಗೂ ವ್ಯತ್ಯಾಸ ಕಂಡು ಬಂದಿರುವುದು ಗೊತ್ತಾಗಿದೆ.

2023ರ ಮಾರ್ಚ್‌ 31ರ ಪ್ರಕಾರ ರಾಜ್ಯ ಸರ್ಕಾರಿ ಸೇವೆಯಲ್ಲಿ ಎ ಬಿ ಸಿ ಮತ್ತು ಡಿ ಗುಂಪಿಗೆ ಒಟ್ಟಾರೆ 8,14,955 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 5,32,539 ಹುದ್ದೆಗಳು ಭರ್ತಿಆಗಿತ್ತು. ಇದರಲ್ಲಿ 3,44,612 ಪುರುಷರಿದ್ದರೇ 1,87,918 ಮಂದಿ ಮಹಿಳೆಯರಿದ್ದಾರೆ. ಇದರಲ್ಲಿ 99,337 ಪರಿಶಿಷ್ಟ ಜಾತಿ ಮತ್ತು 26,871 ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಿದ್ದಾರೆ.

 

 

ಗ್ರೂಪ್‌ ಎ ನಲ್ಲಿ ಮಂಜೂರಾಗಿದ್ದ ಒಟ್ಟಾರೆ 34,550 ಹುದ್ದೆಗಳ ಪೈಕಿ 26,791 ಹುದ್ದೆಗಳು ಮಂಜೂರಾಗಿದೆ. ಇದರಲ್ಲಿ 18,952 ಮಂದಿ ಪುರುಷರಿದ್ದರೇ, ಮಹಿಳೆಯರು 7,839 ಸಂಖ್ಯೆಯಲ್ಲಿದ್ದಾರೆ. ಈ ಪೈಕಿ 4,970 ಮಂದಿ ಪರಿಶಿಷ್ಟ ಜಾತಿ ಮತ್ತು 1,301 ಮಂದಿ ಪರಿಶಿಷ್ಟ ಪಂಗಡದವರಿದ್ದಾರೆ.

ಗ್ರೂಪ್ ಬಿ ನಲ್ಲಿ ಒಟ್ಟು 58,914 ಹುದ್ದೆಗಳು ಮಂಜೂರಾಗಿದ್ದವು. ಈ ಪೈಕಿ 36,115 ಹುದ್ದೆಗಳು ಭರ್ತಿಯಾಗಿದ್ದವು. ಇದರಲ್ಲಿ 25,398 ಮಂದಿ ಪುರುಷರು, 10.757 ಮಹಿಳೆಯರಿದ್ದಾರೆ. ಈ ಗುಂಪಿನಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 7,036, ಪರಿಶಿಷ್ಟ ಪಂಗಡಕ್ಕೆ ಸೇರಿದ 1,799 ಮಂದಿ ಇದ್ದಾರೆ.

ಗ್ರೂಪ್ ಸಿ ನಲ್ಲಿ 6,02,630 ಹುದ್ದೆಗಳು ಮಂಜೂರಾಗಿದ್ದವು. ಇದರಲ್ಲಿ 4,32,245 ಹುದ್ದೆಗಳು ಭರ್ತಿಯಾಗಿವೆ. ಇದರಲ್ಲಿ 2,77,769 ಮಂದಿ ಪುರುಷರಿದ್ದರೇ 1,54,476 ಮಹಿಳೆಯರಿದ್ದಾರೆ. 77, 779 ಮಂದಿ ಪರಿಶಿಷ್ಟ ಜಾತಿ ಮತ್ತು 20,717 ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಿದ್ದಾರೆ.
ಗ್ರೂಪ್‌ ಡಿ ಗೆ 1,18,861 ಹುದ್ದೆಗಳು ಮಂಜೂರಾಗಿದ್ದವು. ಇದರಲ್ಲಿ 37,339 ಹುದ್ದೆಗಳು ಮಾತ್ರ ಭರ್ತಿಯಾಗಿದ್ದವು. ಇದರಲ್ಲಿ 22,493 ಪುರುಷರು, 14,846 ಮಹಿಳೆಯರಿದ್ದಾರೆ. 9,552 ಮಂದಿ ಪರಿಶಿಷ್ಟ ಜಾತಿ, 3,054 ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಿದ್ದಾರೆ.

2019ರಿಂದ 2023ರವರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಪ್ರಾತಿನಿಧ್ಯದಲ್ಲಿನ ಏರಿಳಿತದ ಕುರಿತು ವರದಿಯಲ್ಲಿ ವಿವರಣೆ ನೀಡಿದೆ.

2019ರಲ್ಲಿ ಗ್ರೂಪ್‌ ಎ ನಲ್ಲಿ 30,949 ಹುದ್ದೆಗಳು ಮಂಜೂರಾಗಿದ್ದವು. ಇದರಲ್ಲಿ 22,771 ಹುದ್ದೆಗಳು ಭರ್ತಿಯಾಗಿದ್ದವು. ಈ ಪೈಕಿ ಪರಿಶಿಷ್ಟ ಜಾತಿಗೆ 3,749 ಹುದ್ದೆಗಳಿದ್ದರೇ, ಪರಿಶಿಷ್ಟ ಪಂಗಡಕ್ಕೆ 909 ಹುದ್ದೆಗಳು ಭರ್ತಿಯಾಗಿದ್ದವು. 2020ರಲ್ಲಿ 30,908 ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 24,134 ಹುದ್ದೆಗಳು ಭರ್ತಿಯಾಗಿದ್ದವು. ಇದರಲ್ಲಿ ಪರಿಶಿಷ್ಟ ಜಾತಿಗೆ 4,058, ಪರಿಶಿಷ್ಟ ಪಂಗಡಕ್ಕೆ 1,009 ಹುದ್ದೆಗಳಲ್ಲಿ ಭರ್ತಿಯಾಗಿದ್ದವು.

 

2021ರಲ್ಲಿ 32,029 ಹುದ್ದೆಗಳು ಮಂಜೂರಾಗಿದ್ದರೇ 25,574 ಹುದ್ದೆಗಳು ಭರ್ತಿಯಾಗಿದ್ದವು.ಈ ಪೈಕಿ ಪರಿಶಿಷ್ಟ ಜಾತಿಗೆ ಸೇರಿದವರು 4,392ರಷ್ಟಿದ್ದರೇ 1,071 ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಿದ್ದರು. 2022ರಲ್ಲಿ 34,411 ಹುದ್ದೆಗಳು ಮಂಜೂರಾಗಿದ್ದರೇ 27,917 ಹುದ್ದೆಗಳು ಭರ್ತಿಯಾಗಿದ್ದವು. 4,987 ಮಂದಿ ಪರಿಶಿಷ್ಟ ಜಾತಿಗೆ ಸೇರಿದವರಿದ್ದರೇ 1,438ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದರು. 2023ರಲ್ಲಿ ಮಂಜೂರಾಗಿದ್ದ 34,550 ಹುದ್ದೆಗಳ ಪೈಕಿ 26,791 ಹುದ್ದೆಗಳು ಭರ್ತಿಯಾಗಿದ್ದವು. ಇದರಲ್ಲಿ 4,970 ಮಂದಿ ಪರಿಶಿಷ್ಟ ಜಾತಿಯವರಿದ್ದರೇ 1,301 ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಿದ್ದರು.

ಗ್ರೂಪ್‌ ಬಿ ನಲ್ಲಿ 57,286 ಹುದ್ದೆಗಳು 2019ರಲ್ಲಿ ಮಂಜೂರಾಗಿದ್ದರೇ ಈ ಪೈಕಿ 35,784 ಹುದ್ದೆಗಳು ಭರ್ತಿಯಾಗಿದ್ದವು. ಇದರಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರು 7,020, ಪರಿಶಿಷ್ಟ ಪಂಗಡಕ್ಕೆ ಸೇರಿದವರು 1,754ರಷ್ಟಿದ್ದರು. 2020ರಲ್ಲಿ 56,969 ಹುದ್ದೆಗಳು ಮಂಜೂರಾಗಿದ್ದು, ಇದರಲ್ಲಿ 35,136 ಹುದ್ದೆಗಳು ಭರ್ತಿಯಾಗಿದ್ದವು. ಇದರಲ್ಲಿ ಪರಿಶಿಷ್ಟ ಜಾತಿಗೆ 6,717 ಮಂದಿ ಇದ್ದರು. 1,755 ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಿದ್ದರು. 2021ರಲ್ಲಿ 57,919 ಹುದ್ದೆಗಳು ಮಂಜೂರಾಗಿದ್ದರೇ ಈ ಪೈಕಿ 36,270 ಹುದ್ದೆಗಳು ಭರ್ತಿಯಾಗಿದ್ದವು. ಇದರಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರು 7,138 ಮಂದಿ, 1,800 ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಿದ್ದರು.

2022ರಲ್ಲಿ 58,470 ಹುದ್ದೆಗಳು ಮಂಜೂರಾಗಿದ್ದರೇ 35,837 ಹುದ್ದೆಗಳು ಭರ್ತಿಯಾಗಿದ್ದವು. ಈ ಪೈಕಿ 7,136 ಮಂದಿ ಪರಿಶಿಷ್ಟ ಜಾತಿಗೆ ಸೇರಿದ್ದರೇ 1,743 ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಿದ್ದರು. 2023ರಲ್ಲಿ 58,914 ಹುದ್ದೆಗಳು ಮಂಜೂರಾಗಿದ್ದು, 36,155 ಹುದ್ದೆಗಳು ಭರ್ತಿಯಾಗಿದ್ದವು. ಈ ಪೈಕಿ 7,036 ಪರಿಶಿಷ್ಟ ಜಾತಿಯವರಿದ್ದರೇ 1,799 ಮಂದಿ ಪರಿಶಿಷ್ಟ ಪಂಗಡದವರಿದ್ದರು.

ಅದೇ ರೀತಿ ಸಿ ಗುಂಪಿನಲ್ಲಿ 2019ರಲ್ಲಿ 5,76, 834 ಹುದ್ದೆಗಳು ಮಂಜೂರಾಗಿದ್ದವು. ಈ ಪೈಕಿ 4,20,659 ಹುದ್ದೆಗಳು ಭರ್ತಿಯಾಗಿದ್ದವು. ಇದರಲ್ಲಿ ಪರಿಶಿಷ್ಟ ಜಾತಿಗೆ 66,274 ಮಂದಿ ಇದ್ದರೇ 18,209 ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಿದ್ದರು. 2020ರಲ್ಲಿ 5,74,247 ಹುದ್ದೆಗಳು ಮಂಜೂರಾಗಿದ್ದರೇ 4,21,490 ಹುದ್ದೆಗಳು ಭರ್ತಿಯಾಗಿದ್ದವು. ಈ ಪೈಕಿ 65,858 ಮಂದಿ ಪರಿಶಿಷ್ಟ ಜಾತಿಗೆ ಸೇರಿದ್ದರೇ 18,386 ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಿದ್ದರು. 2021ರಲ್ಲಿ ಮಂಜೂರಾಗಿದ್ದ 5,80,846 ಹುದ್ದೆಗಳ ಪೈಕಿ 4,26,812 ಹುದ್ದೆಗಳು ಭರ್ತಿಯಾಗಿದ್ದವು. ಈ ಪೈಕಿ 67,550 ಮಂದಿ ಪರಿಶಿಷ್ಟ ಜಾತಿ, 18,795 ಪರಿಶಿಷ್ಟ ಪಂಗಡಕ್ಕೆ ಸೇರಿದವರಿದ್ದರು.

2022ರಲ್ಲಿ 5,90,089 ಹುದ್ದೆಗಳು ಮಂಜೂರಾಗಿದ್ದು ಈ ಪೈಕಿ 4,15,816 ಹುದ್ದೆಗಳು ಭರ್ತಿಯಾಗಿದ್ದವು. ಈ ಪೈಕಿ ಪರಿಶಿಷ್ಟ ಜಾತಿಗೆ ಸೇರಿದವರು 67,947, 18,995 ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಿದ್ದರು. 2023ರಲ್ಲಿ 6,02,630 ಹುದ್ದೆಗಳು ಮಂಜೂರಾಗಿದ್ದರೇ ಈ ಪೈಕಿ 4,32,245 ಹುದ್ದೆಗಳು ಭರ್ತಿಯಾಗಿದ್ದವು. ಈ ಪೈಕಿ 77,779 ಮಂದಿ ಪರಿಶಿಷ್ಟ ಜಾತಿಗೆ ಸೇರಿದವರಿದ್ದರೇ 20,717 ಮಂದಿ ಪರಿಶಿಷ್ಟ ಪಂಗಡದವರಿದ್ದರು.

ಹಾಗೆಯೇ ಡಿ ಗುಂಪಿನಲ್ಲಿ 2019ರಲ್ಲಿ 1,09,393 ಹುದ್ದೆಗಳು ಮಂಜೂರಾಗಿದ್ದರೇ 44,366 ಹುದ್ದೆಗಳಗಷ್ಟೇ ಭರ್ತಿಯಾಗಿದ್ದವು. ಈ ಪೈಕಿ 10,221 ಮಂದಿ ಪರಿಶಿಷ್ಟ ಜಾತಿ, 3,261 ಮಂದಿ ಪರಿಶಿಷ್ಟ ಪಂಗಡದವರಿದ್ದರು. 2020ರಲ್ಲಿ 1,07,995 ಹುದ್ದೆಗಳು ಮಂಜೂರಾಗಿದ್ದವು. ಇದರಲ್ಲಿ 41,473 ಹುದ್ದೆಗಳು ಭರ್ತಿಯಾಗಿದ್ದವು. ಇದರಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರು 9,918 ಮಂದಿ ಇದ್ದರೇ ಪರಿಶಿಷ್ಟ ಪಂಗಡಕ್ಕೆ ಸೇರಿದವರು 3,310 ಮಂದಿ ಇದ್ದರು. 2021ರಲ್ಲಿ 1,12,583 ಹುದ್ದೆಗಳು ಮಂಜೂರಾಗಿದ್ದು ಈ ಪೈಕಿ 40,410 ಹುದ್ದೆಗಳಷ್ಟ ಭರ್ತಿಯಾಗಿದ್ದವು. ಇದರಲ್ಲಿ 10,007 ಮಂದಿ ಪರಿಶಿಷ್ಟ ಜಾತಿ ಮತ್ತು 3,294 ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಿದ್ದರು.

 

2022ರಲ್ಲಿ 1,14,282 ಹುದ್ದೆಗಳು ಮಂಜೂರಾಗಿದ್ದು ಈ ಪೈಕಿ 36,895 ಹುದ್ದೆಗಳು ಭರ್ತಿಯಾಗಿದ್ದವು. ಈ ಪೈಕಿ ಪರಿಶಿಷ್ಟ ಜಾತಿಗೆ ಸೇರಿದವರು 9,435 ಸಂಖ್ಯೆಯಲ್ಲಿದ್ದರೇ ಪರಿಶಿಷ್ಟ ಪಂಗಡದವರು 3,143 ಮಂದಿ ಇದ್ದರು. 2023ರಲ್ಲಿ 1,18,861 ಹುದ್ದೆಗಳು ಮಂಜೂರಾಗಿದ್ದು, 37,339 ಹುದ್ದೆಗಳಷ್ಟೇ ಭರ್ತಿಯಾಗಿದ್ದವು. ಈ ಪೈಕಿ 9,552 ಮಂದಿ ಪರಿಶಿಷ್ಟ ಜಾತಿಗೆ ಸೇರಿದವರಿದ್ದರೇ 3,054 ಮಂದಿ ಪರಿಶಿಷ್ಟ ಪಂಗಡದವರಿದ್ದರು.

ಒಟ್ಟಾರೆ 2019ರಿಂದ 2023ರವರೆಗೆ ಗ್ರೂಪ್ ಎ, ಬಿ, ಸಿ ಮತ್ತು ಡಿ ಗುಂಪಿನಲ್ಲಿ 32,47,057 ಹುದ್ದೆಗಳು ಮಂಜೂರಾಗಿದ್ದವು. ಈ ಪೈಕಿ 26,23,874 ಹುದ್ದೆಗಳು ಭರ್ತಿಯಾಗಿದ್ದವು. ಇದರಲ್ಲಿ 4,51,771 ಮಂದಿ ಪರಿಶಿಷ್ಟ ಜಾತಿಗೆ ಸೇರಿದವರಿದ್ದರೇ 1,05,743 ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಿದ್ದರು.

Hot this week

866.59 ಕೋಟಿ ರು ಮೊತ್ತದ 399 ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆಗೆ ಬಾಕಿ ಉಳಿಸಿಕೊಂಡ ಇಲಾಖೆಗಳು; ಅನುದಾನ ದುರುಪಯೋಗ ಸಾಧ್ಯತೆ?

ಬೆಂಗಳೂರು; ರಾಜ್ಯದ ಹಲವು ಇಲಾಖೆಗಳು ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಕೆಯಲ್ಲಿ ತೀವ್ರ...

ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ; ಅಧಿಕಾರಿಗಳ ವಿರುದ್ಧ ದಾಖಲಾಗದ ಎಫ್‌ಐಆರ್, ವರದಿ ಸಲ್ಲಿಸಲು ಸೂಚನೆ

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ತವರು ಕ್ಷೇತ್ರದಲ್ಲಿ...

13 ಪರ್ಸೆಂಟ್ ಕಮಿಷನ್‌ಗೆ ಬೇಡಿಕೆ; ಗುತ್ತಿಗೆದಾರರ ಸಂಘದಿಂದ ಮತ್ತೊಂದು ಪತ್ರ, ಕೋರ್ಟ್‌ ಕದ ತಟ್ಟಿದ ಗುತ್ತಿಗೆದಾರರು

ಬೆಂಗಳೂರು;  ಮಹಾತ್ಮಗಾಂಂಧಿ ನಗರ ವಿಕಾಸ ಯೋಜನೆ -1 ರ ಅಡಿಯಲ್ಲಿ ಕಾಮಗಾರಿ...

ಬಳಕೆಯಾಗದ ಅನುದಾನ; ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗಿಲ್ಲ 10,546.42 ಕೋಟಿ, ಸಿಎಜಿ ಆಕ್ಷೇಪಣೆ

ಬೆಂಗಳೂರು; ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ 2024-25ನೇ ಸಾಲಿನಲ್ಲಿ   ಒಟ್ಟು...

Topics

866.59 ಕೋಟಿ ರು ಮೊತ್ತದ 399 ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆಗೆ ಬಾಕಿ ಉಳಿಸಿಕೊಂಡ ಇಲಾಖೆಗಳು; ಅನುದಾನ ದುರುಪಯೋಗ ಸಾಧ್ಯತೆ?

ಬೆಂಗಳೂರು; ರಾಜ್ಯದ ಹಲವು ಇಲಾಖೆಗಳು ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಕೆಯಲ್ಲಿ ತೀವ್ರ...

ಬಳಕೆಯಾಗದ ಅನುದಾನ; ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗಿಲ್ಲ 10,546.42 ಕೋಟಿ, ಸಿಎಜಿ ಆಕ್ಷೇಪಣೆ

ಬೆಂಗಳೂರು; ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ 2024-25ನೇ ಸಾಲಿನಲ್ಲಿ   ಒಟ್ಟು...

13,646.51 ಕೋಟಿ ಹೆಚ್ಚುವರಿ ವೆಚ್ಚ; ಗೃಹ ಲಕ್ಷ್ಮಿಯದ್ದೇ ಸಿಂಹಪಾಲು, ಹೆಚ್ಚುವರಿ ಖರ್ಚಿಗೆ ಕಾರಣಗಳೇ ಇಲ್ಲ, ಸಿಎಜಿ ಆಕ್ಷೇಪ

ಬೆಂಗಳೂರು;  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯು 2024-25ನೇ ಸಾಲಿನಲ್ಲಿ ...

2,298 ಕೋಟಿ ರು ಮೊತ್ತದ ಬಿಲ್‌ ಬಾಕಿ; 276 ಕಾಮಗಾರಿ ಅಪೂರ್ಣ, ಬೊಕ್ಕಸ ಬರಿದಾಯಿತೇ?

ಬೆಂಗಳೂರು; ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಕೈಗೆತ್ತಿಕೊಂಡಿದ್ದ  ಕಾಮಗಾರಿಗಳು ನಿಗದಿತ ಅವಧಿಯಲ್ಲಿ...

Related Articles

Popular Categories

error: Content is protected !!