Tuesday | April 7, 2026 |

2,298 ಕೋಟಿ ರು ಮೊತ್ತದ ಬಿಲ್‌ ಬಾಕಿ; 276 ಕಾಮಗಾರಿ ಅಪೂರ್ಣ, ಬೊಕ್ಕಸ ಬರಿದಾಯಿತೇ?

ಬೆಂಗಳೂರು; ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಕೈಗೆತ್ತಿಕೊಂಡಿದ್ದ  ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದೇ ಅಪೂರ್ಣವಾಗಿರುವ ಕಾರಣ 5,066 ಕೋಟಿ ರು ಬಂಡವಾಳ ವೆಚ್ಚವು ನಿಷ್ಪಲವಾಗಿತ್ತು. ಅಲ್ಲದೇ 276 ಕಾಮಗಾರಿಗಳಿಗೆ 2,298 ಕೋಟಿ ರು ಮೊತ್ತದ ಬಿಲ್‌ಗಳ ಬಾಕಿ ಇದ್ದಿದ್ದೇ ಈ ಎಲ್ಲಾ ಕಾಮಗಾರಿಗಳು ಪೂರ್ಣವಾಗಿಲ್ಲ ಎಂಬ ಸಂಗತಿಯನ್ನು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು ಬಹಿರಂಗಪಡಿಸಿದ್ದಾರೆ.

2026ರ ಮಾರ್ಚ್‌ನಲ್ಲಿ ನಡೆದಿದ್ದ  ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆಯಾಗಿರುವ ರಾಜ್ಯ ಹಣಕಾಸು ಲೆಕ್ಕ ಪರಿಶೋಧನಾ ವರದಿಯಲ್ಲಿ ಈ ಮಾಹಿತಿಯಿದೆ.

‘ಅಪೂರ್ಣ ಯೋಜನೆಗಳಲ್ಲಿ ಬಂಡವಾಳವು ಬಂಧಿತವಾಗಿವೆ. ಯೋಜನೆಯು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುತ್ತಿಲ್ಲ. ಇದಿರಂದ ಯೋಜನೆಯ ಪೂರ್ಣಗೊಳಿಸುವಿಕೆಯಲ್ಲಿ ವಿಳಂಬವು ಮಿತಿಮೀರಿದ ಸಮಯಕ್ಕೆ ಕಾರಣವಾಗಲಿದೆ. ಹೀಗಾಗಿ ಮಿತಿಮೀರಿದ ವೆಚ್ಚದ ಪರಿಣಾಮವನ್ನೂ ಉಂಟು ಮಾಡುತ್ತದೆ,’ ಎಂದು ಸಿಎಜಿಯು ತನ್ನ ವರದಿಯಲ್ಲಿ ಅಭಿಪ್ರಾಯಿಸಿರುವುದು ಗೊತ್ತಾಗಿದೆ.

2014-15ರಿಂದ 2024-25ರವರೆಗೆ ರಸ್ತೆ, ಸೇತುವೆ, ನೀರಾವರಿ ಮತ್ತು ಕಟ್ಟಡಗಳು ವಲಯದಲ್ಲಿ  ಒಟ್ಟು 4,328 ಯೋಜನೆಗಳು ಅಪೂರ್ಣಗೊಂಡಿದ್ದವು.  2025ರ ಮಾರ್ಚ್‌ 31ರಲ್ಲಿದ್ದಂತೆ ರಸ್ತೆ ಮತ್ತು ಸೇತುವೆ ಕಾಮಗಾರಿಗಳ ಪೈಕಿ 1,854 ಕಾಮಗಾರಿಗಳು ಅಪೂರ್ಣಗೊಂಡಿದ್ದವು. ಈ ಯೋಜನೆಗೆ ಅಂದಾಜು 6,717 ಕೋಟಿ ರು , ನೀರಾವರಿ ವಲಯದಲ್ಲಿ 1,903 ಯೋಜನೆಗಳಿಗೆ 4,271 ಕೊಟಿ, ಕಟ್ಟಡ ವಲಯದಲ್ಲಿ 545 ಯೋಜನೆಗಳಿಗೆ 490 ಕೋಟಿ, ಇತರೆ 25 ಯೋಜನೆಗಳಿಗೆ 23 ಕೋಟಿ ರು ಸೇರಿ ಒಟ್ಟಾರೆ 11,500 ಕೋಟಿ ರು ವೆಚ್ಚ ಮಾಡಲಾಗಿದೆ.

ಈ ಪೈಕಿ 2024-25ರಲ್ಲೇ 5,066 ಕೋಟಿ ಖರ್ಚು ಮಾಡಲಾಗಿದೆ. ಆದರೆ 2024-25ರಲ್ಲಿ ಹೂಡಿಕೆ ಮಾಡಿದ್ದ ಯೋಜನೆಗಳು ಅಪೂರ್ಣಗೊಂಡಿದ್ದ ಕಾರಣ, 5,066 ಕೋಟಿಯಷ್ಟು ಬಂಡವಾಳ ವೆಚ್ಚವು ಫಲರಹಿತವಾಗಿತ್ತು ಎಂದು ಸಿಎಜಿ ವರದಿಯು ಪತ್ತೆ ಹಚ್ಚಿರುವುದು ತಿಳಿದು ಬಂದಿದೆ.

2014-15ರಲ್ಲಿ ಒಟ್ಟು 25 ಯೋಜನೆಗಳು ಅಪೂರ್ಣಗೊಂಡಿದ್ದವು. ಈ ಯೋಜನೆ ಕಾಮಗಾರಿಗಳಿಗೆ 111 ಕೋಟಿ ರು ಅಂದಾಜು ವೆಚ್ಚ ಎಂದು ನಿಗದಿಯಾಗಿತ್ತು. ಈ ಪೈಕಿ 75 ಕೋಟಿ ರು ಮಾತ್ರ ವೆಚ್ಚ ಮಾಡಲಾಗಿತ್ತು. 2015-16ರಲ್ಲಿ 77 ಯೋಜನೆಗಳು ಅಪೂರ್ಣಗೊಂಡಿದ್ದವು. ಈ ಯೋಜನೆಗಳಿಗಾಗಿ  350 ಕೋಟಿ ರು ಅಂದಾಜಿಸಿದ್ದರೇ ಇದರಲ್ಲಿ  264 ಕೋಟಿ ರು ಮಾತ್ರ ವೆಚ್ಚ ಮಾಡಿತ್ತು. 2016-17ರಲ್ಲಿ 102 ಅಪೂರ್ಣ ಯೋಜನೆಗಳಿದ್ದವು. ಈ ಯೋಜನೆ ಕಾಮಗಾರಿಗಳಿಗೆ 463 ಕೋಟಿ ರು ಅಂದಾಜಿಸಿತ್ತು. ಇದರಲ್ಲಿ 350 ಕೋಟಿಯನ್ನಷ್ಟೇ ವೆಚ್ಚ ಮಾಡಿತ್ತು ಎಂದು ಸಿಎಜಿಯು ತನ್ನ ವರದಿಯಲ್ಲಿ ಅಂಕಿ ಅಂಶಗಳನ್ನು ಒದಗಿಸಿದೆ.

 

 

2017-18ರಲ್ಲಿ 122 ಯೋಜನೆಗಳು ಅಪೂರ್ಣಗೊಂಡಿದ್ದವು. ಈ ಯೋಜನೆಗಳಿಗೆ 553 ಕೋಟಿ ರು ಅಂದಾಜಿಸಿತ್ತಾದರೂ ಈ ಪೈಕಿ 417 ಕೊಟಿ ರು ಮಾತ್ರ ವೆಚ್ಚವಾಗಿತ್ತು. 2018-19ರಲ್ಲಿ  ಅನುಷ್ಠಾನಗೊಳಿಸಿದ್ದ ಒಟ್ಟಾರೆ ಯೋಜನೆಗಳ ಪೈಕಿ  135 ಯೋಜನೆಗಳು ಅಪೂರ್ಣಗೊಂಡಿದ್ದವು. ಈ ಯೋಜನೆ ಕಾಮಗಾರಿಗಳಿಗೆ 610 ಕೋಟಿ ರು ಅಂದಾಜಿಸಲಾಗಿತ್ತು.  ಈ ಪೈಕಿ 460 ಕೋಟಿ ರುಪಾಯಿ ವೆಚ್ಚ ಮಾಡಲಾಗಿತ್ತು.

2019-20ರಲ್ಲಿ  ಯೋಜನೆಗಳು 275 ಅಪೂರ್ಣವಾಗಿದ್ದವು. ಈ ಯೋಜನೆಗಳಿಗೆ 1,244 ಕೋಟಿಯಷ್ಟು ಅಂದಾಜು ವೆಚ್ಚ ನಿಗದಿ ಮಾಡಿತ್ತು. ಈ ಪೈಕಿ 939 ಕೋಟಿ ರು ಮಾತ್ರ ವೆಚ್ಚವಾಗಿತ್ತು. 2020-21ರಲ್ಲಿ 390 ಅಪೂರ್ಣ ಯೋಜನೆಗಳಿದ್ದವು. ಈ ಯೋಜನೆಗಳಿಗೆ 637 ಕೋಟಿ ರು ಅಂದಾಜಿಸಿತ್ತು. ಈ ಪೈಕಿ 278 ಕೋಟಿ ರು ವೆಚ್ಚವಾಗಿತ್ತು. 2021-22ರಲ್ಲಿ 467 ಯೋಜನೆಗಳು ಅಪೂರ್ಣಗೊಂಡಿದ್ದವು. ಈ ಯೋಜನೆಗಳಿಗೆ 776 ಕೋಟಿ ಅಂದಾಜಿಸಿತ್ತು. ಇದರಲ್ಲಿ 369 ಕೋಟಿ ರು ವೆಚ್ಚವಾಗಿತ್ತು.

 

 

2022-23ರಲ್ಲಿ 558 ಯೋಜನೆಗಳು ಅಪೂರ್ಣಗೊಂಡಿದ್ವವು. ಈ ಯೋಜನೆಗಳಿಗೆ 903 ಕೋಟಿಯಷ್ಟು ವೆಚ್ಚವಾಗಲಿದೆ ಎಂದು ಅಂದಾಜಿಸಿತ್ತು. ಈ ಪೈಕಿ 440 ಕೋಟಿ ರು ಮಾತ್ರ ಖರ್ಚಾಗಿತ್ತು. 2023-24ರಲ್ಲಿ 789 ಯೋಜನೆಗಳು ಅಪೂರ್ಣಗೊಂಡಿದ್ದವು. ಈ ಯೋಜನೆಗಳಿಗೆ 1,947 ಕೋಟಿ ಮೊತ್ತ ಅಂದಾಜಿಸಿತ್ತು. ಈ ಪೈಕಿ 485 ಕೋಟಿ ರು ಮಾತ್ರ ಖರ್ಚು ಮಾಡಿತ್ತು. 2024-25ರಲ್ಲಿ 1,388 ಯೋಜನೆಗಳು ಅಪೂರ್ಣಗೊಂಡಿದ್ದವು. ಈ ಯೋಜನೆಗಳಿಗೆ 3,906 ಕೋಟಿ ರು ಅಂದಾಜಿಸಿತ್ತಾದರೂ ಈ ಪೈಕಿ 990 ಕೋಟಿ ರು ಮಾತ್ರ ಖರ್ಚ ಮಾಡಿತ್ತು.

 

ಒಟ್ಟಾರೆ 4,328 ಯೋಜನೆಗಳು ಅಪೂರ್ಣಗೊಂಡಿದ್ದವು. ಈ ಎಲ್ಲಾ ಯೋಜನೆಗಳಿಗೆ 11,500 ಕೋಟಿ ರು ಅಂದಾಜಿಸಿದ್ದರೇ ಈ ಪೈಕಿ 5,066 ಕೋಟಿ ರು ಮಾತ್ರ ವೆಚ್ಚ ಮಾಡಿತ್ತು.

2,298 ಕೋಟಿ ಬಿಲ್ ಪಾವತಿ ಬಾಕಿ

4,328 ಯೋಜನೆಗಳ ಕಾಮಗಾರಿಗಳು ಅಪೂರ್ಣಗೊಂಡಿದ್ದವು. ಈ ಅಪೂರ್ಣ ಕಾಮಗಾರಿಗಳಲ್ಲಿ  276 ಕಾಮಗಾರಿಗಳಿಗೆ 2,298 ಕೋಟಿ ರು ಬಿಲ್ ಪಾವತಿ ಬಾಕಿ ಇತ್ತು. ಹೀಗಾಗಿ ಕಾಮಗಾರಿಗಳು ಪೂರ್ಣಗೊಂಡಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಿದೆ.

2024-25ರಲ್ಲಿ ಲೋಕೋಪಯೋಗಿ ಇಲಾಖೆಯ ಐದು ವಿಭಾಗಗಳನ್ನ ಲೆಕ್ಕ ಪರಿಶೋಧನೆ ನಡೆಸಲಾಗಿತ್ತು. 582.66 ಕೋಟಿ ರು ಗೆ ಟೆಂಡರ್‍‌ ಕರೆದಿತ್ತು.  ಲೆಕ್ಕ ಪರಿಶೋಧನೆ ಅವಧಿಯಲ್ಲಿ  ಗುತ್ತಿಗೆದಾರರು  ಕೆಲಸವನ್ನು ತೊರೆದಿದ್ದರು. ಕೆಲಸ ನಿರ್ವಹಿಸಲು ಗುತ್ತಿಗೆದಾರರಲ್ಲಿ ಅಸಮರ್ಥತೆ ಇತ್ತು. ಭೂಮಿ ಲಭ್ಯವಾಗಿರಲಿಲ್ಲ. ಮತ್ತು ನಿವೇಶನ ಹಸ್ತಾಂತರದಲ್ಲಿ ವಿಳಂಬವಾಗಿತ್ತು.  ಈ ಎಲ್ಲಾ ಕಾಮಗಾರಿಗಳಿಗೆ ಟೆಂಡರ್ ಕರೆದಿದ್ದರೂ ಸಹ ಕಾಮಗಾರಿಗಳು ಅಪೂರ್ಣವಾಗಿವೆ. ಈ ಎಲ್ಲಾ ಪ್ರಕರಣಗಳಲ್ಲಿ ಗುತ್ತಿಗೆದಾರರು ವಿಳಂಬ ಎಸಗಿದ್ದರೂ ಯಾವೊಬ್ಬ ಗುತ್ತಿಗೆದಾರರ ಮೇಲೂ ಇಲಾಖೆಯು ಕ್ರಮವಹಿಸಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಿದೆ.

 

 

ಹಣಕಾಸಿನ ಸ್ಥಿತಿ ಸರಿಯಿಲ್ಲವೇ?

ರಾಜ್ಯ ಸರ್ಕಾರವು ಹಲವು ವರ್ಷಗಳಿಂದಲೂ ವಿಮೋಚನೆಗೊಳ್ಳದ ಹೊಣೆಗಾರಿಕೆಗಳ ಶೇಖರಣೆಗೆ ಅವಕಾಶ ಕೊಟ್ಟಿರುವುದನ್ನು  ಲೆಕ್ಕ ಪರಿಶೋಧನೆಯು ಗಮನಿಸಿದೆ. ಇದು ಹಣಕಾಸಿನ ಸುಸ್ಥಿರತೆ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ. 57.48 ಕೊಟಿ ರು ಮೊತ್ತದಷ್ಟು ಬಡ್ಡಿ ಹೊಣೆಗಾರಿಕೆಗಳು ಇನ್ನೂ ವಿಮೋಚನೆಗೊಂಡಿಲ್ಲ. ಅಲ್ಲದೇ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ (ಎನ್‌ಪಿಎಸ್‌) ಕಡಿಮೆ, ವರ್ಗಾವಣೆಯಾಗದ 6.60 ಕೋಟಿಗಳಷ್ಟು ರಾಜ್ಯ ಸರ್ಕಾರದ ವಂತಿಗೆಯೂ ಇದೆ. ಒಟ್ಟಾರೆ  64.06 ಕೋಟಿಗಳಷ್ಟಿತ್ತು. ಇದು ವರ್ಷದ ಹಣಕಾಸಿನ ನಿಯತಾಂಕಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ರಾಜ್ಯ ಸರ್ಕಾರವು ಎಲ್ಲಾ ವಿಮೋಚನೆಗೊಳ್ಳದ ಹೊಣೆಗಾರಿಕೆಗಳನ್ನು ಪಾರದರ್ಶಕವಾಗಿ ಬಹಿರಂಗಪಡಿಸಬೇಕು ಎಂದು ಸಿಎಜಿಯು ತನ್ನ ವರದಿಯಲ್ಲಿ ಸಲಹೆ ನೀಡಿದೆ.

ಅದೇ ರೀತಿ ಭವಿಷ್ಯದ ಹಣಕಾಸಿನ ಒತ್ತಡಗಳನ್ನು ತಪ್ಪಿಸಲು ಈ ಬಾಧ್ಯತೆಗಳನ್ನು ಸಕಾಲಿಕವಾಗಿ ನಿರ್ವಹಿಸಲು ನಿಬಂಧನೆಗಳನ್ನು ಮಾಡಬೇಕು ಎಂದು ಸಿಎಜಿಯು ತನ್ನ ವರದಿಯಲ್ಲಿ ಶಿಫಾರಸ್ಸು ಮಾಡಿರುವುದು ತಿಳಿದು ಬಂದಿದೆ.

Hot this week

ಪುಸ್ತಕಗಳ ಖರೀದಿಯಲ್ಲಿ ವಂಚನೆ, ಭ್ರಷ್ಟಾಚಾರ ಆರೋಪ;ಎಚ್ ಟಿ ಪೋತೆ ಅವರ ವಿರುದ್ಧ ಕ್ರಮಕ್ಕೆ ಮೀನಮೇಷ

ಬೆಂಗಳೂರು;  ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ...

ಬಿಆರ್‍‌ಜಿಎಫ್‌ ಅನುದಾನದಲ್ಲಿ ಅಕ್ರಮ; ಲೋಕಾ ಶಿಫಾರಸ್ಸು ತಿರಸ್ಕೃತ, ಹಿರಿಯ ಐಎಎಸ್ ಅಧಿಕಾರಿ ವಿರುದ್ಧದ ಪ್ರಕರಣ ಮುಕ್ತಾಯ!

ಬೆಂಗಳೂರು; ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ನೀಡಿದ್ದ ಅನುದಾನ ಮತ್ತು...

96.73 ಕೋಟಿ ರು ರಿಯಾಯಿತಿ ಕೋರಿದ ದಾಲ್ಮಿಯಾ ಸಿಮೆಂಟ್ಸ್‌; ನಿಯಮ ಪಾಲನೆಯೋ, ಉಲ್ಲಂಘನೆಯೋ?

ಬೆಂಗಳೂರು; ಗಣಿಗಾರಿಕೆ ಉದ್ಯಮದಲ್ಲಿ  ಆಂಧ್ರ ಪ್ರದೇಶ, ರಾಜಸ್ತಾನ ಸರ್ಕಾರವು ನೀಡಿರುವ ರಿಯಾಯಿತಿಯನ್ನು...

ಬ್ಯಾಕ್‌ ಟು ಬ್ಯಾಕ್ ಸಾಲ,12 ಪ್ರತಿಶತದಷ್ಟು ಹೆಚ್ಚಳ, ಅಸಲನ್ನೂ ಮೀರಿಸಲಿದೆಯೆ ಬಡ್ಡಿ ಮರುಪಾವತಿ?

ಬೆಂಗಳೂರು; 2024-25ನೇ ಸಾಲಿನಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರವು ಪಡೆದಿರುವ ಸಾರ್ವಜನಿಕ ಸಾಲವು...

1.16 ಕೋಟಿ ನಿಷ್ಕ್ರೀಯ ಖಾತೆಗಳಲ್ಲಿದೆ 3,403 ಕೋಟಿ; ಪರಿಣಾಮ ಬೀರದ ಆರ್‍‌ಬಿಐ ಮೇಲ್ವಿಚಾರಣೆ

ಬೆಂಗಳೂರು; ಸರ್ಕಾರಿ ಸೌಲಭ್ಯ ಪಡೆಯಲು ರಾಜ್ಯದ ರಾಷ್ಟ್ರೀಕೃತ ಮತ್ತಿತರೆ ಖಾಸಗಿ ಬ್ಯಾಂಕ್‌ಗಳಲ್ಲಿ...

Topics

ಪುಸ್ತಕಗಳ ಖರೀದಿಯಲ್ಲಿ ವಂಚನೆ, ಭ್ರಷ್ಟಾಚಾರ ಆರೋಪ;ಎಚ್ ಟಿ ಪೋತೆ ಅವರ ವಿರುದ್ಧ ಕ್ರಮಕ್ಕೆ ಮೀನಮೇಷ

ಬೆಂಗಳೂರು;  ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ...

ಬಿಆರ್‍‌ಜಿಎಫ್‌ ಅನುದಾನದಲ್ಲಿ ಅಕ್ರಮ; ಲೋಕಾ ಶಿಫಾರಸ್ಸು ತಿರಸ್ಕೃತ, ಹಿರಿಯ ಐಎಎಸ್ ಅಧಿಕಾರಿ ವಿರುದ್ಧದ ಪ್ರಕರಣ ಮುಕ್ತಾಯ!

ಬೆಂಗಳೂರು; ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ನೀಡಿದ್ದ ಅನುದಾನ ಮತ್ತು...

96.73 ಕೋಟಿ ರು ರಿಯಾಯಿತಿ ಕೋರಿದ ದಾಲ್ಮಿಯಾ ಸಿಮೆಂಟ್ಸ್‌; ನಿಯಮ ಪಾಲನೆಯೋ, ಉಲ್ಲಂಘನೆಯೋ?

ಬೆಂಗಳೂರು; ಗಣಿಗಾರಿಕೆ ಉದ್ಯಮದಲ್ಲಿ  ಆಂಧ್ರ ಪ್ರದೇಶ, ರಾಜಸ್ತಾನ ಸರ್ಕಾರವು ನೀಡಿರುವ ರಿಯಾಯಿತಿಯನ್ನು...

ಬ್ಯಾಕ್‌ ಟು ಬ್ಯಾಕ್ ಸಾಲ,12 ಪ್ರತಿಶತದಷ್ಟು ಹೆಚ್ಚಳ, ಅಸಲನ್ನೂ ಮೀರಿಸಲಿದೆಯೆ ಬಡ್ಡಿ ಮರುಪಾವತಿ?

ಬೆಂಗಳೂರು; 2024-25ನೇ ಸಾಲಿನಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರವು ಪಡೆದಿರುವ ಸಾರ್ವಜನಿಕ ಸಾಲವು...

1.16 ಕೋಟಿ ನಿಷ್ಕ್ರೀಯ ಖಾತೆಗಳಲ್ಲಿದೆ 3,403 ಕೋಟಿ; ಪರಿಣಾಮ ಬೀರದ ಆರ್‍‌ಬಿಐ ಮೇಲ್ವಿಚಾರಣೆ

ಬೆಂಗಳೂರು; ಸರ್ಕಾರಿ ಸೌಲಭ್ಯ ಪಡೆಯಲು ರಾಜ್ಯದ ರಾಷ್ಟ್ರೀಕೃತ ಮತ್ತಿತರೆ ಖಾಸಗಿ ಬ್ಯಾಂಕ್‌ಗಳಲ್ಲಿ...

ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ನ 850 ಕೋಟಿ ಬಾಕಿ ಪ್ರಕರಣ; ಕೇಂದ್ರ, ರಾಜ್ಯ ಸರ್ಕಾರಕ್ಕೆ ಲೀಗಲ್ ನೋಟೀಸ್‌

ಬೆಂಗಳೂರು; ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಲಿಮಿಟೆಡ್‌ಗೆ ನಿಯಮಬಾಹಿರವಾಗಿ ಲೆಟರ್ ಆಫ್‌...

ಕೆಎಎಸ್ 2011ರ ನೇಮಕಾತಿ ಅಕ್ರಮದ ತನಿಖಾ ವರದಿಗೆ ಕೊನೆ ಮೊಳೆ; ವಿಚಾರಣೆಯಿಲ್ಲದೇ ಪ್ರಕರಣ ಹಿಂಪಡೆಯುವ ಪ್ರಕ್ರಿಯೆಗೆ ಚಾಲನೆ

ಬೆಂಗಳೂರು; 2011ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ಅವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆ...

Related Articles

Popular Categories

error: Content is protected !!