Friday | April 10, 2026 |

ನರೇಗಾ ಅಕ್ರಮ; 2 ವರ್ಷದಲ್ಲಿ 105.1 ಕೋಟಿ ದುರುಪಯೋಗ, 12.34 ಕೋಟಿಯಷ್ಟೇ ವಸೂಲು

 

ಬೆಂಗಳೂರು; ಕಳೆದ ಮೂರು ವರ್ಷಗಳಲ್ಲಿ  ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 64,806 ಪ್ರಕರಣಗಳಲ್ಲಿ ಹಣ ದುರುಪಯೋಗವಾಗಿದೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲಿಯೇ 54.78 ಕೋಟಿ ಮತ್ತು ಎರಡನೇ ಅವಧಿ 2024-25ರಲ್ಲಿಯೂ 50.32 ಕೋಟಿಯಷ್ಟು ಸೇರಿ ಕಾಂಗ್ರೆಸ್‌ ಅವಧಿಯೊಂದರಲ್ಲೇ 105.1 ಕೋಟಿಯಷ್ಟು ಹಣ ದುರುಪಯೋಗವಾಗಿದೆ.

ನರೇಗಾ ಯೋಜನೆಯಲ್ಲಿ ನಡೆದ ಅಕ್ರಮಗಳು ಮತ್ತು ಹಣ ದುರುಪಯೋಗವಾಗಿರುವ ಮೊತ್ತದ ವಿವರ ಕುರಿತು ವಿಧಾನಪರಿಷತ್‌ನಲ್ಲಿ ಜೆಡಿಎಸ್‌ನ ಸದಸ್ಯ ಟಿ ಎ ಶರವಣ ಅವರು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಮಾಹಿತಿ ನೀಡಿದ್ದಾರೆ.

ಮಹಾತ್ಮಗಾಂಧಿ ನರೇಗಾ ಯೋಜನೆಯಡಿಯಲ್ಲಿ ಕಳೆದ 3 ವರ್ಷಗಳಲ್ಲಿ ಅಂದರೇ 2022-23 ರಿಂದ 2024-25ನೇ ಸಾಲಿನವರಗೆ ಒಟ್ಟಾರೆ 64,806 ಪ್ರಕರಣಗಳು ನಡೆದಿವೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ. ದುರ್ಬಳಕೆಯಾದ ಹಣವನ್ನು ಮರು ವಸೂಲಿ ಮಾಡಲು ಮುಂದಾಗಿದೆ. ಬ್ಲಾಕ್‌ ಮಟ್ಟದಲ್ಲಿ ಅಡ್‌ ಹಾಕ್ ಸಮಿತಿಯನ್ನು ರಚಿಸಲಾಗಿದೆ. ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಿ ಸಾಮಾಜಿಕ ಲೆಕ್ಕ ಪರಿಶೋಧನೆ ನಡೆಸಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಹಿತಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಎಲ್ಲೆಲ್ಲಿ, ಹೇಗೇಗೆ ದುರುಪಯೋಗ?

ನಕಲಿ ದಾಖಲಾತಿಯಿಂದ ವೈಯಕ್ತಿಕವಾಗಿ ಹಣ ದುರುಪಯೋಗವಾಗಿದೆ. ಕಾಮಗಾರಿ ಅನುಷ್ಠಾನವಾಗದೇ ಕೂಲಿ ಹಣ ಪಾವತಿಸಿದೆ. ಕೆಲಸ ನಿರ್ವಹಿಸದ ವ್ಯಕ್ತಿಗೆ ಹಣ ಪಾವತಿಸಿದೆ. ಅಸ್ತಿತ್ವದಲ್ಲೇ ಇಲ್ಲದ ವ್ಯಕ್ತಿಗೆ ಹಣ ಪಾವತಿಸಲಾಗಿದೆ ಎಂದು ಉತ್ತರದಲ್ಲಿ ಮಾಹಿತಿ ಒದಗಿಸಿದೆ. ಅದೇ ರೀತಿ ಸ್ಥಳಾಂತರಗೊಂಡ ವ್ಯಕ್ತಿಗೆ ಹಣ ಪಾವತಿಸಿರುವ ಅಧಿಕಾರಿಗಳು, ಕೆಲಸ ನಿರ್ವಹಿಸದ ವ್ಯಕ್ತಿಗೆ ಅಂದರೇ ಮೇಟ್, ಗ್ರಾ.ಪಂ ಅಧ್ಯಕ್ಷ, ಕಾರ್ಯದರ್ಶಿ, ಗ್ರಾ.ಪಂ. ಸದಸ್ಯರು, ಇತರೆ ಪ್ರಭಾವಿ ವ್ಯಕ್ತಿಗಳಿಗೆ ಮತ್ತು ಸಂಬಂಧಿಕರಿಗೆ ಹಣ ಪಾವತಿಸಿದೆ. ಬೇರೆಯ ಸ್ಥಳದಲ್ಲಿ ಪೂರ್ಣ ಸಮಯದಲ್ಲಿ  ಅಂದರೇ ಸರ್ಕಾರಿ ಮತ್ತು ಖಾಸಗಿ ಶಾಲೆ ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರಿಗೂ ಹಣ ಪಾವತಿಸಲಾಗಿದೆ ಎಂಬ ಮಾಹಿತಿಯನ್ನು ಒದಗಿಸಿರುವುದು ಉತ್ತರದಿಂದ ತಿಳಿದು ಬಂದಿದೆ.

 

 

ಕೆಲಸವನ್ನು ನಿರ್ವಹಿಸಿದ್ದಾರೆ ಎಂದು ಹೇಳಲಾಗಿದ್ದ ಹಲವು ಅಪ್ರಾಪ್ತರಾಗಿದ್ದರು. ಆದರೂ ಅವರಿಗೆ ಹಣ ಪಾವತಿಸಲಾಗಿದೆ. ಒಬ್ಬ ವ್ಯಕ್ತಿಗೆ ಎರಡು ಬಾರಿ ಒಂದೇ ದಿನ ಕೂಲಿ ಪಾವತಿಯಾಗಿದೆ. ಕಾಮಗಾರಿ ಸ್ಥಳದಲ್ಲಿನ ಸಹಾಯಕನಿಗೆ ಒಂದೇ ದಿನಾಂಕದಂದು ಕೂಲಿ ನಿರ್ವಹಿಸಿರುವ ಮೊತ್ತ ಪಾವತಿಸಿದೆ. ಎನ್‌ಎಂಆರ್‍‌ನಲ್ಲಿ ಗೈರು ಹಾಜರಾದ ವ್ಯಕ್ತಿಗೆ ಹಣ ವರ್ಗಾವಣೆ ಮಾಡಲಾಗಿದೆ. ವ್ಯಕ್ತಿಗೆ ಪಾವತಿಸಬೇಕಾದ ಬಾಕಿ ಮೊತ್ತಕ್ಕಿಂತ ಹೆಚ್ಚುವರಿಯಾಗಿ ಕೂಲಿ ಪಡೆದಿರುವುದು, ಮರಣ ಹೊಂದಿದ ವ್ಯಕ್ತಿಗಳಿಗೆ ಹಣ ಪಾವತಿಸಿರುವ ಪ್ರಕರಣಗಳನ್ನೂ ಇಲಾಖೆಯು ಪತ್ತೆ ಹಚ್ಚಿರುವುದು ಗೊತ್ತಾಗಿದೆ.

 

 

ಅಲ್ಲದೇ ಯಂತ್ರಗಳಿಂದ ಕೆಲಸ ನಿರ್ವಹಿಸಿದ್ದರೂ ಸಹ ವ್ಯಕ್ತಿಗಳಿಗೆ ಕೂಲಿ ಹಣ ಪಾವತಿಯಾಗಿದೆ. ಕೆಲಸ ನಿರ್ವಹಿಸಿದ ವ್ಯಕ್ತಿಗೆ ಬದಲಾಗಿ ಬೇರೆಯ ವ್ಯಕ್ತಿಗೆ ಹಣ ತಲುಪಿಸಲಾಗಿದೆ. ಕಾಮಗಾರಿ ಪೂರ್ಣಗೊಂಡಿದ್ದರೂ ಸಹ ಕೆಲಸ ನಿರ್ವಹಿಸದ ವ್ಯಕ್ತಿಗೆ ಹಣ ಪಾವತಿಯಾಗಿದೆ.

 

 

ಉದ್ಯೋಗ ಚೀಟಿ ವಿತರಣೆಗೆ ಲಂಚವನ್ನು ಪಡೆದಿರುವುದನ್ನು ತಪಾಸಣೆ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಉದ್ಯೋಗ ಚೀಟಿ ವಿತರಣೆ ಮಾತ್ರವಲ್ಲ, ಛಾಯಾಚಿತ್ರ ತೆಗೆಯಲು, ಬ್ಯಾಂಕ್, ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲು, ಕಮಿಷನ್ ಪಡೆಯಲು ಕೂಲಿ ಹಣವನ್ನು ತಡೆಹಿಡಿದಿರುವುದು, ಬ್ಯಾಂಕ್, ಅಂಚೆ ಕಚೇರಿ, ವ್ಯವಹಾರ ವರದಿಗಾರರ ಕೂಲಿ ಪಾವತಿಗೂ ಕಮಿಷನ್ ಪಡೆಯಲಾಗಿದೆ. ವೈಯಕ್ತಿಕ ಕಾಮಗಾರಿಗಳನ್ನು ಹಂಚಿಕೆ ಮಾಡಲು ಹಣ ಪಡೆದಿರುವುದನ್ನೂ ಪತ್ತೆ ಹಚ್ಚಿರುವುದು ಉತ್ತರದಿಂದ ತಿಳಿದು ಬಂದಿದೆ.

ಕಾಮಗಾರಿಗೆ ಸಂಬಂಧಿಸಿದ ಪ್ರಕ್ರಿಯೆಗಳಲ್ಲಿಯೂ ಹಣ ದುರುಪಯೋಗವಾಗಿದೆ. ಕಾಮಗಾರಿ ಅನುಷ್ಠಾನವಾಗದೇ ಇದ್ದರೂ ಸಹ ಹಣ ಪಾವತಿಯಾಗಿದೆ. ಸಸಿ ನೆಡುವ ಕಾಮಗಾರಿಯಲ್ಲಿ ಸಸಿಗಳನ್ನು ನೆಡದೇ ಇರುವುದು, ಕೃಷಿ ಹೊಂಡ ಅನುಷ್ಠಾನವಾಗದೇ ಇರುವುದು, ಹಾಲಿ ಕಾಮಗಾರಿಯ ಕುರುಹು ಕಂಡು ಬರದೇ ಇರುವುದು, ಗುತ್ತಿಗೆದಾರರ ಮೂಲಕ ಕಾಮಗಾರಿ ಅನುಷ್ಠಾನಗೊಂಡಿರುವುದು, ಯಂತ್ರಗಳ ಮೂಲಕ ಕಾಮಗಾರಿ ಅನುಷ್ಠಾನಗೊಂಡಿರುವುದು, ಅನರ್ಹ ಫಲಾನುಭವಿಗೆ ವೈಯಕ್ತಿಕ ಕಾಮಗಾರಿ ಹಂಚಿಕೆ ಮಾಡಿರುವುದು, ಸೂಕ್ತವಲ್ಲದ ಕಾಮಗಾರಿಯನ್ನು ಅನುಷ್ಠಾನಗೊಳಿಸಿರುವುದು ಮತ್ತು ಅನುಷ್ಠಾನವಾಗದ ವೈಯಕ್ತಿಕ ವಸತಿ ಕಾಮಗಾರಿಗೆ ಪಾವತಿಸಿರುವುದನ್ನು ತಪಾಸಣೆ ಸಂದರ್ಭದಲ್ಲಿ ಪತ್ತೆ ಹಚ್ಚಲಾಗಿದೆ.

ಬಿಜೆಪಿ ಅವಧಿಯಲ್ಲಿ 17.52 ಕೋಟಿ ದುರುಪಯೋಗ

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 12,313 ಪ್ರಕರಣಗಳಲ್ಲಿ ಒಟ್ಟಾರೆ 17.52 ಕೋಟಿಯಷ್ಟು ಹಣ ದುರುಪಯೋಗವಾಗಿತ್ತು. ಇದರಲ್ಲಿ ಕಲ್ಬುರ್ಗಿಯಲ್ಲಿಯೇ ಅತೀ ಹೆಚ್ಚು ಅಂದರೇ 1,209 ಪ್ರಕರಣಗಳಲ್ಲಿ 1,28,97,393 ರು ಹಣ ದುರುಪಯೋಗವಾಗಿತ್ತು. ಮೈಸೂರಿನಲ್ಲಿ 1,096 ಪ್ರಕರಣಗಳಲ್ಲಿ 98,09,301 ರು., ಬೆಂಗಳೂರು ದಕ್ಷಿಣದಲ್ಲಿ 1,355 ಪ್ರಕರಣಗಳಲ್ಲಿ 3,53,27,950 ರು ಹಣ ದುರುಪಯೋಗವಾಗಿತ್ತು.

ಉಳಿದಂತೆ ಬಾಗಲಕೋಟೆಯಲ್ಲಿ 13,151,158  ರು., ಬಳ್ಳಾರಿಯಲ್ಲಿ 35,00,321 ರು., ಬೆಳಗಾವಿಯಲ್ಲಿ 1,03,95,376 ರು., ಬೆಂಗಳೂರಿನಲ್ಲಿ 7,998, ಬೆಂಗಳೂರು ಗ್ರಾಮಾಂತರದಲ್ಲಿ 1,34118  ರು., ಬೀದರ್‍‌ನಲ್ಲಿ 1,68,23,662  ರು., ಚಾಮರಾಜನಗರದಲ್ಲಿ 1,31,24,760  ರು., ಚಿಕ್ಕಬಳ್ಳಾಪುರದಲ್ಲಿ 27,62,987 ರು., ಚಿಕ್ಕಮಗಳೂರಿನಲ್ಲಿ  84,54,644 ರು., ಚಿತ್ರದುರ್ಗದಲ್ಲಿ 37,62,772 ರು., ದಕ್ಷಿಣ ಕನ್ನಡದಲ್ಲಿ 79,25,770  ರು ಹಣ ದುರುಪಯೋಗವಾಗಿತ್ತು.

 

 

ದಾವಣಗೆರೆಯಲ್ಲಿ 48,53,808 ರು., ಧಾರವಾಡದಲ್ಲಿ 5,22,258 ರು., ಗದಗ್‌ನಲ್ಲಿ 65,77,592 ರು., ಹಾಸನದಲ್ಲಿ 15,44,848 ರು., ಹಾವೇರಿಯಲ್ಲಿ 22,95,670 ರು., ಕೊಡಗು 5,88,032 ರು., ಕೋಲಾರದಲ್ಲಿ 24,44,037 ರು., ಕೊಪ್ಪಳದಲ್ಲಿ 59,68,157 ರು., ಮಂಡ್ಯದಲ್ಲಿ 25,63,539 ರು., ರಾಯಚೂರಿನಲ್ಲಿ 33,31,853 ರು., ಶಿವಮೊಗ್ಗದಲ್ಲಿ 25,49,760 ರು., ತುಮಕೂರಿನಲ್ಲಿ 46,21,044 ರು , ಉಡುಪಿಯಲ್ಲಿ 7,45,131 ರು., ಉತ್ತರ ಕನ್ನಡದಲ್ಲಿ 6,77.158 ರು., ವಿಜಯನಗರದಲ್ಲಿ 26,94,382 ರು., ವಿಜಯಪುರದಲ್ಲಿ 26,94,382 ರು., ಯಾದಗಿರಿಯಲ್ಲಿ 44,35,247 ರು ದುರುಪಯೋಗವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಅವರು ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

ಕಾಂಗ್ರೆಸ್‌ನ ಮೊದಲ ಅವಧಿಯಲ್ಲಿ 54.78 ಕೋಟಿ ದುರುಪಯೋಗ

ಅದೇ ರೀತಿ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿಯೂ 27,687 ಪ್ರಕರಣಗಳಲ್ಲಿ 54.78 ಕೋಟಿಯಷ್ಟು ಅಕ್ರಮ ನಡೆದಿದೆ. ಬೆಂಗಳೂರು ದಕ್ಷಿಣದಲ್ಲಿ 7,63,79,639 ರು. ದುರುಪಯೋಗವಾಗಿದೆ. ರಾಯಚೂರಿನಲ್ಲಿ 5,03,78,080 ರು., ಕಲ್ಬುರ್ಗಿಯಲ್ಲಿ 3,78,31,264 ರು., ದುರುಪಯೋಗವಾಗಿದೆ.

ಬಾಗಲಕೋಟೆಯಲ್ಲಿ 2,36,10,159  ರು., ಬಳ್ಳಾರಿಯಲ್ಲಿ 1,06,28,022 ರು., ಬೆಳಗಾವಿಯಲ್ಲಿ 2,36,74,743 ರು., ಬೆಂಗಳೂರಿನಲ್ಲಿ 2,79,074, ಬೆಂಗಳೂರು ಗ್ರಾಮಾಂತರದಲ್ಲಿ 8,67,192  ರು., ಬೀದರ್‍‌ನಲ್ಲಿ 3,17,30.017  ರು., ಚಾಮರಾಜನಗರದಲ್ಲಿ 3,40,67,560 ರು., ಚಿಕ್ಕಬಳ್ಳಾಪುರದಲ್ಲಿ 3,32,73,359 ರು., ಚಿಕ್ಕಮಗಳೂರಿನಲ್ಲಿ  1,54,25,875 ರು., ಚಿತ್ರದುರ್ಗದಲ್ಲಿ 66,17,841 ರು., ದಕ್ಷಿಣ ಕನ್ನಡದಲ್ಲಿ 25,36,867  ರು ಹಣ ದುರುಪಯೋಗವಾಗಿತ್ತು.

 

 

ದಾವಣಗೆರೆಯಲ್ಲಿ  86,38,146, ಧಾರವಾಡದಲ್ಲಿ  35,53,936 ರು., ಗದಗ್‌ನಲ್ಲಿ 2,39,08,406 ರು., ಹಾಸನದಲ್ಲಿ 21,86,185 ರು., ಹಾವೇರಿಯಲ್ಲಿ 1,21,23,315 ರು., ಕೊಡಗು 14,07,431,  ರು., ಕೋಲಾರದಲ್ಲಿ 3,45,69,269 ರು., ಕೊಪ್ಪಳದಲ್ಲಿ 2,73,31,158 ರು., ಮಂಡ್ಯದಲ್ಲಿ 57,89,730 ರು., ರಾಯಚೂರಿನಲ್ಲಿ 5,03,78,080., ಶಿವಮೊಗ್ಗದಲ್ಲಿ 46,23,222 ರು., ತುಮಕೂರಿನಲ್ಲಿ 1,76,39,931 ರು , ಉಡುಪಿಯಲ್ಲಿ 23,12,607 ರು., ಉತ್ತರ ಕನ್ನಡದಲ್ಲಿ 21,23,694 ರು., ವಿಜಯನಗರದಲ್ಲಿ 1,64,79,231 ರು., ವಿಜಯಪುರದಲ್ಲಿ 73,62,885 ರು., ಯಾದಗಿರಿಯಲ್ಲಿ 58,20,461 ರು ದುರುಪಯೋಗವಾಗಿದೆ ಎಂದು ಮಾಹಿತಿ ಒದಗಿಸಿದ್ದಾರೆ.

ಎರಡನೇ ಅವಧಿಯಲ್ಲೂ 50.32 ಕೋಟಿ ದುರುಪಯೋಗ

ಬಾಗಲಕೋಟೆಯಲ್ಲಿ 1,94,87,654,  ರು., ಬಳ್ಳಾರಿಯಲ್ಲಿ 2,88,62,011 ರು., ಬೆಳಗಾವಿಯಲ್ಲಿ 1,65,14,415 ರು., ಬೆಂಗಳೂರಿನಲ್ಲಿ 39,009, ಬೆಂಗಳೂರು ಗ್ರಾಮಾಂತರದಲ್ಲಿ 36,63,765  ರು., ಬೆಂಗಳೂರು ದಕ್ಷಿಣದಲ್ಲಿ 8,47,24,289  ಬೀದರ್‍‌ನಲ್ಲಿ 2,82,89,598   ರು., ಚಾಮರಾಜನಗರದಲ್ಲಿ 1,81,26,669 ರು., ಚಿಕ್ಕಬಳ್ಳಾಪುರದಲ್ಲಿ 2,15,41,187 ರು., ಚಿಕ್ಕಮಗಳೂರಿನಲ್ಲಿ  2,31,52,056 ರು., ಚಿತ್ರದುರ್ಗದಲ್ಲಿ 2,52,35,049 ರು., ದಕ್ಷಿಣ ಕನ್ನಡದಲ್ಲಿ 12,19,298  ರು ಹಣ ದುರುಪಯೋಗವಾಗಿತ್ತು.

ದಾವಣಗೆರೆಯಲ್ಲಿ  16,88,053, ಧಾರವಾಡದಲ್ಲಿ  32,95,143 ರು., ಗದಗ್‌ನಲ್ಲಿ 67,93,300 ರು., ಹಾಸನದಲ್ಲಿ 1,28,15,777 ರು., ಹಾವೇರಿಯಲ್ಲಿ 1,25,47,488 ರು., ಕಲ್ಬುರ್ಗಿಯಲ್ಲಿ 3,22,15,468 ಕೊಡಗು 3,51,444,  ರು., ಕೋಲಾರದಲ್ಲಿ 1,37,36,279 ರು., ಕೊಪ್ಪಳದಲ್ಲಿ 1,13,21,825 ರು., ಮಂಡ್ಯದಲ್ಲಿ 1,10,07,032 ರು., ಮೈಸೂರಿನಲ್ಲಿ 1,06,34,960 ರಾಯಚೂರಿನಲ್ಲಿ 1,41,65,087 ಶಿವಮೊಗ್ಗದಲ್ಲಿ 5,58,907 ರು., ತುಮಕೂರಿನಲ್ಲಿ 6,04,53,079 , ಉಡುಪಿಯಲ್ಲಿ 7,48,783., ಉತ್ತರ ಕನ್ನಡದಲ್ಲಿ 13,56,549 ರು., ವಿಜಯನಗರದಲ್ಲಿ 2,55,86,294 ರು., ವಿಜಯಪುರದಲ್ಲಿ 70,56,336 ರು., ಯಾದಗಿರಿಯಲ್ಲಿ 91,03,181 ರು ದುರುಪಯೋಗವಾಗಿದೆ.

 

 

ಬಿಜೆಪಿ ಅವಧಿಯಲ್ಲಿನ  ದುರುಪಯೋಗದ ಮೊತ್ತ 17,52,10,400 ರು ಪೈಕಿ 3,15,31,729 ರು ಮಾತ್ರ ವಸೂಲಾಗಿತ್ತು. ಅದೇ ರೀತಿ ಕಾಂಗ್ರೆಸ್‌ನ ಮೊದಲ ಅವಧಿಯಲ್ಲಿ  54,78,31,298  ರು ಪೈಕಿ 7,60,25,844 ರು ಮಾತ್ರ ವಸೂಲಾಗಿದೆ. ಎರಡನೇ ಅವಧಿಯಲ್ಲಿ 50.32 ಕೋಟಿ ರುನಲ್ಲಿ 4,84 ಕೋಟಿ ಮಾತ್ರ ವಸೂಲಾತಿಯಾಗಿರುವುದು ಉತ್ತರದಿಂದ ತಿಳಿದು ಬಂದಿದೆ.

Hot this week

13 ಪರ್ಸೆಂಟ್ ಕಮಿಷನ್‌ಗೆ ಬೇಡಿಕೆ; ಗುತ್ತಿಗೆದಾರರ ಸಂಘದಿಂದ ಮತ್ತೊಂದು ಪತ್ರ, ಕೋರ್ಟ್‌ ಕದ ತಟ್ಟಿದ ಗುತ್ತಿಗೆದಾರರು

ಬೆಂಗಳೂರು;  ಮಹಾತ್ಮಗಾಂಂಧಿ ನಗರ ವಿಕಾಸ ಯೋಜನೆ -1 ರ ಅಡಿಯಲ್ಲಿ ಕಾಮಗಾರಿ...

ಬಳಕೆಯಾಗದ ಅನುದಾನ; ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗಿಲ್ಲ 10,546.42 ಕೋಟಿ, ಸಿಎಜಿ ಆಕ್ಷೇಪಣೆ

ಬೆಂಗಳೂರು; ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ 2024-25ನೇ ಸಾಲಿನಲ್ಲಿ   ಒಟ್ಟು...

ತರಕಾರಿ ಬೀಜಗಳ ಕಿಟ್ ವಿತರಣೆ; ದಾಸ್ತಾನು ಇಲ್ಲದ ಏಜೆನ್ಸಿಗೆ 4 ಜಿ ವಿನಾಯಿತಿ, ಬಹುಕೋಟಿ ಅಕ್ರಮ, ಭ್ರಷ್ಟಾಚಾರ ಸುಳಿಯಲ್ಲಿ ಸರ್ಕಾರ?

ಬೆಂಗಳೂರು; 2023-24 ಮತ್ತು 2025-26ನೇ ಸಾಲಿನವರೆಗೆ  ತೋಟಗಾರಿಕೆ ಇಲಾಖೆಯು ಜಾರಿಗೊಳಿಸಿದ್ದ  ...

13,646.51 ಕೋಟಿ ಹೆಚ್ಚುವರಿ ವೆಚ್ಚ; ಗೃಹ ಲಕ್ಷ್ಮಿಯದ್ದೇ ಸಿಂಹಪಾಲು, ಹೆಚ್ಚುವರಿ ಖರ್ಚಿಗೆ ಕಾರಣಗಳೇ ಇಲ್ಲ, ಸಿಎಜಿ ಆಕ್ಷೇಪ

ಬೆಂಗಳೂರು;  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯು 2024-25ನೇ ಸಾಲಿನಲ್ಲಿ ...

2,298 ಕೋಟಿ ರು ಮೊತ್ತದ ಬಿಲ್‌ ಬಾಕಿ; 276 ಕಾಮಗಾರಿ ಅಪೂರ್ಣ, ಬೊಕ್ಕಸ ಬರಿದಾಯಿತೇ?

ಬೆಂಗಳೂರು; ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಕೈಗೆತ್ತಿಕೊಂಡಿದ್ದ  ಕಾಮಗಾರಿಗಳು ನಿಗದಿತ ಅವಧಿಯಲ್ಲಿ...

Topics

ಬಳಕೆಯಾಗದ ಅನುದಾನ; ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗಿಲ್ಲ 10,546.42 ಕೋಟಿ, ಸಿಎಜಿ ಆಕ್ಷೇಪಣೆ

ಬೆಂಗಳೂರು; ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ 2024-25ನೇ ಸಾಲಿನಲ್ಲಿ   ಒಟ್ಟು...

13,646.51 ಕೋಟಿ ಹೆಚ್ಚುವರಿ ವೆಚ್ಚ; ಗೃಹ ಲಕ್ಷ್ಮಿಯದ್ದೇ ಸಿಂಹಪಾಲು, ಹೆಚ್ಚುವರಿ ಖರ್ಚಿಗೆ ಕಾರಣಗಳೇ ಇಲ್ಲ, ಸಿಎಜಿ ಆಕ್ಷೇಪ

ಬೆಂಗಳೂರು;  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯು 2024-25ನೇ ಸಾಲಿನಲ್ಲಿ ...

2,298 ಕೋಟಿ ರು ಮೊತ್ತದ ಬಿಲ್‌ ಬಾಕಿ; 276 ಕಾಮಗಾರಿ ಅಪೂರ್ಣ, ಬೊಕ್ಕಸ ಬರಿದಾಯಿತೇ?

ಬೆಂಗಳೂರು; ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಕೈಗೆತ್ತಿಕೊಂಡಿದ್ದ  ಕಾಮಗಾರಿಗಳು ನಿಗದಿತ ಅವಧಿಯಲ್ಲಿ...

ಪುಸ್ತಕಗಳ ಖರೀದಿಯಲ್ಲಿ ವಂಚನೆ, ಭ್ರಷ್ಟಾಚಾರ ಆರೋಪ;ಎಚ್ ಟಿ ಪೋತೆ ಅವರ ವಿರುದ್ಧ ಕ್ರಮಕ್ಕೆ ಮೀನಮೇಷ

ಬೆಂಗಳೂರು;  ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ...

ಬಿಆರ್‍‌ಜಿಎಫ್‌ ಅನುದಾನದಲ್ಲಿ ಅಕ್ರಮ; ಲೋಕಾ ಶಿಫಾರಸ್ಸು ತಿರಸ್ಕೃತ, ಹಿರಿಯ ಐಎಎಸ್ ಅಧಿಕಾರಿ ವಿರುದ್ಧದ ಪ್ರಕರಣ ಮುಕ್ತಾಯ!

ಬೆಂಗಳೂರು; ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ನೀಡಿದ್ದ ಅನುದಾನ ಮತ್ತು...

96.73 ಕೋಟಿ ರು ರಿಯಾಯಿತಿ ಕೋರಿದ ದಾಲ್ಮಿಯಾ ಸಿಮೆಂಟ್ಸ್‌; ನಿಯಮ ಪಾಲನೆಯೋ, ಉಲ್ಲಂಘನೆಯೋ?

ಬೆಂಗಳೂರು; ಗಣಿಗಾರಿಕೆ ಉದ್ಯಮದಲ್ಲಿ  ಆಂಧ್ರ ಪ್ರದೇಶ, ರಾಜಸ್ತಾನ ಸರ್ಕಾರವು ನೀಡಿರುವ ರಿಯಾಯಿತಿಯನ್ನು...

Related Articles

Popular Categories

error: Content is protected !!