ಬೆಂಗಳೂರು; ವಸತಿ ಯೋಜನೆಗಳ ಕಾಮಗಾರಿ ನಿರ್ವಹಿಸಿದ್ದ ಗುತ್ತಿಗೆದಾರರಿಗೆ ಬಾಕಿ ಮೊತ್ತವನ್ನು ಪಾವತಿಸಬೇಕಿದ್ದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಪಕ್ಷಪಾತ ಎಸಗುತ್ತಿದ್ದಾರೆ ಮತ್ತು ಬಾಕಿ ಮೊತ್ತವನ್ನು ಪಾವತಿಸಲು ನಿರಾಸಕ್ತಿ ವಹಿಸಿದ್ದಾರೆ. ಅಲ್ಲದೇ ಕಳೆದ 2 ವರ್ಷಗಳಿಂದಲೂ ಬಾಕಿ ಮೊತ್ತವನ್ನು ಪಾವತಿಸಿಲ್ಲ ಎಂಬ ಗುರುತರವಾದ ಆರೋಪವು ಕೇಳಿ ಬಂದಿದೆ.
ವಿವಿಧ ಇಲಾಖೆಗಳಲ್ಲಿ ಕಾಮಗಾರಿಗಳನ್ನು ನಿರ್ವಹಿಸಿರುವ ಗುತ್ತಿಗೆದಾರರಿಗೆ 30,000 ಕೋಟಿಗೂ ಅಧಿಕ ಮೊತ್ತವನ್ನು ಪಾವತಿಸಬೇಕು ಎಂದು ರಾಜ್ಯ ಗುತ್ತಿಗೆದಾರರ ಸಂಘವು ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಇದೀಗ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಗುತ್ತಿಗೆದಾರ ಸಂಘವೂ ಮಂಡಳಿಯಲ್ಲಿನ ಪಕ್ಷಪಾತ ಧೋರಣೆ ಸೇರಿದಂತೆ ಮತ್ತಿತರೆ ಅವ್ಯವಸ್ಥೆಗಳ ಬಗ್ಗೆ ವಸತಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪ್ರತ್ಯೇಕವಾಗಿ ಬರೆದಿರುವ ಪತ್ರದಲ್ಲಿ ಆಪಾದನೆಗಳನ್ನು ಮಾಡಿದೆ.
ಈ ಕುರಿತು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಾ ಜಿ ಚಂದ್ರೇಗೌಡ ಅವರು ಸಂಘದ ಪರವಾಗಿ 2024ರ ಡಿಸೆಂಬರ್ 3ರಂದು ವಸತಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿನ ಅವ್ಯವಸ್ಥೆ, ಪಕ್ಷಪಾತ, ಬಾಕಿ ಮೊತ್ತ, ಮಂಡಳಿಯ ನಿರಾಸಕ್ತಿ ಸೇರಿದಂತೆ ಮತ್ತಿತರೆ ಕುಂದುಕೊರತೆಗಳ ಸಂಬಂಧ ನಡೆಸಿದ್ದ ಸಭೆ ನಡವಳಿಗಳನ್ನೂ ಗುತ್ತಿಗೆದಾರರ ಸಂಘಕ್ಕೆ ನೀಡಿಲ್ಲ. ತಿಂಗಳಿನಿಂದಲೂ ಸಭೆ ನಡವಳಿಗಾಗಿ ಎದುರು ನೋಡಲಾಗುತ್ತಿದೆ ಎಂದು ಸಂಘದ ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಜಿಎಸ್‌ಟಿ ಬಿಡುಗಡೆಯ ಬಗ್ಗೆ ಮತ್ತು ಈ ಸಂಬಂಧ ನ್ಯಾಯಾಲಯ ನೀಡಿರುವ ಆದೇಶಗಳನ್ನು ಸಭೆಯ ಮುಂದೆ ಇರಿಸಲಾಗಿತ್ತು. 2022ರ ಜುಲೈ 17ರ ನಂತರ ಅಂಗೀಕರಿಸಿದ ಕಾಮಗಾರಿಗಳಿಗೆ ಜಿಎಸ್‌ಟಿ ಪಾವತಿಸಬೇಕು. ಈ ಮೊತ್ತವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಗುತ್ತಿಗೆದಾರರಿಗೆ ಹೇಳಿದ್ದರು. ಆದರೆ ಇದುವರೆಗೂ ಈ ವಿಷಯವು ಬಗೆಹರಿದಿಲ್ಲ ಎಂಬ ಸಂಗತಿಯು ಪತ್ರದಿಂದ ಗೊತ್ತಾಗಿದೆ.
ಸ್ಥಳ ನಿಯೋಜನೆಯ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪಕ್ಷಪಾತವಿಲ್ಲದೆ ಹಿರಿತನವನ್ನು ಕಾಯ್ದುಕೊಳ್ಳಲಾಗುವುದು ಎಂದು ಗುತ್ತಿಗೆದಾರರಿಗೆ ಮಂಡಳಿಯು ತಿಳಿಸಿತ್ತು. ಆದರೆ ಮನೆಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಪೂರ್ಣಗೊಳಿಸಿ 2 ವರ್ಷಗಳಾಗಿವೆ. ಆದರೂ ಹೆಚ್ಚ ಕಾಲದಿಂದಲೂ ಗುತ್ತಿಗೆದಾರರನ್ನು ಕಡೆಗಣಿಸಲಾಗಿದೆ. ಇನ್ನು ಕೆಲವು ಕಾಮಗಾರಿಗಳಿಗೆ ಆದೇಶಗಳನ್ನು ನೀಡಿಲ್ಲ. ಹೀಗಾಗಿ ವಸತಿ ಯೋಜನೆಗಳ ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ಮುಂದಿನ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಅಲ್ಲದೇ ಮಂಡಳಿಯಲ್ಲಿನ ಅವ್ಯವಸ್ಥೆ ಮತ್ತು ಅಲ್ಲಿನ ಆಡಳಿತದಿಂದ ಅಸಹಾಯಕರಾಗಿದ್ದಾರೆ ಎಂದು ಸಂಘದ ಅಧ್ಯಕ್ಷ ಡಾ ಜಿ ಚಂದ್ರೇಗೌಡ ಅವರು ಪತ್ರದಲ್ಲಿ ಅಳಲು ತೋಡಿಕೊಂಡಿರುವುದು ತಿಳಿದು ಬಂದಿದೆ.
ಈ ಕೆಲಸಗಳಿಗೆ, 2017-2018 ರ ದರಗಳ ವೇಳಾಪಟ್ಟಿಯನ್ನು ಆಧರಿಸಿ ಅಂದಾಜುಗಳನ್ನು ತಯಾರಿಸಲಾಗಿದೆ. ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ಎಸ್ ಆರ್ ದರ ಮತ್ತು ಮತ್ತು ಆರ್ಬಿಟ್ರೇಷನ್ ಷರತ್ತುಗಳನ್ನು ಕಾನೂನುಬಾಹಿರವಾಗಿ ರದ್ದುಗೊಳಿಸಲಾಗಿದೆ. 2020-20221 ರಲ್ಲಿ ಪೂರ್ಣಗೊಂಡು ಫಲಾನುಭವಿಗಳಿಗೆ ಈಗಾಗಲೇ ಮನೆಗಳನ್ನು ಹಸ್ತಾಂತರಿಸಲಾಗಿದೆ. ಹೀಗಾಗಿ ಸ್ಥಳ ನಿಯೋಜನೆಯ ರೂಪದಲ್ಲಿ ಭದ್ರತಾ ಠೇವಣಿಯನ್ನು ಬಿಡುಗಡೆ ಮಾಡಬೇಕಾಗಿತ್ತು. ಕಾರ್ಯಗತಗೊಳಿಸಬೇಕಾದ ಉಳಿದ ಕೆಲಸಗಳಿಗೆ ಭದ್ರತಾ ಠೇವಣಿಯನ್ನು ಹಿಡಿದಿಟ್ಟುಕೊಳ್ಳಬೇಕು. ಪೂರ್ಣಗೊಂಡ ಮನೆಗಳಿಗೆ ಸ್ಥಳ ನಿಯೋಜನೆಯನ್ನು ಬಿಡುಗಡೆ ಮಾಡಲು ಹಲವಾರು ಭರವಸೆಗಳ ಹೊರತಾಗಿಯೂ ಏನೂ ಫಲ ನೀಡಿಲ್ಲ ಎಂದು ಸಂಘವು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಕೆರೆ ಸಂಜೀವಿನಿ, ಕೆರೆಗಳ ಸಮಗ್ರ ಅಭಿವೃದ್ಧಿ, ಏತ ನೀರಾವರಿ ಸೇರಿದಂತೆ ಇನ್ನಿತರೆ ಚಾಲ್ತಿಯಲ್ಲಿರುವ ಕಾಮಗಾರಿ ನಿರ್ವಹಿಸಿರುವ ಸಣ್ಣ ನೀರಾವರಿ ಇಲಾಖೆಯ ಗುತ್ತಿಗೆದಾರರಿಗೆ 2,500 ಕೋಟಿ ರು. ಮೊತ್ತದ ಬಿಲ್‌ಗಳನ್ನು ಪಾವತಿಸಲು ರಾಜ್ಯ ಕಾಂಗ್ರೆಸ್ ಸರ್ಕಾರವು ಹರಸಾಹಸ ಪಡುತ್ತಿದೆ. ದುರಸ್ತಿ ಕಾಮಗಾರಿಗಳಿಗೆ ಹಣಕಾಸನ್ನು ಹೊಂದಿಸಲು ಜಿಲ್ಲಾ ವಿಪತ್ತು ನಿಧಿಗೆ ಕೈ ಹಾಕಿತ್ತು. ಅಷ್ಟೇ ಅಲ್ಲ, ದುರಸ್ತಿ ಕಾಮಗಾರಿಗಳಿಗೂ ಹಣ ಹೊಂದಿಸಲು ಬೇರೆ ಇಲಾಖೆಗಳತ್ತ ಕಣ್ಣು ಹಾಕಿದೆ. ಹಾಗೆಯೇ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಬೊಕ್ಕಸದಲ್ಲಿ ಹಣವಿಲ್ಲದಂತಾಗಿದೆ. ಬಜೆಟ್‌ನಲ್ಲಿ ಘೋಷಿಸಿದ್ದ ಕಾಮಗಾರಿಗಳಿಗೆ ಹೆಚ್ಚುವರಿ ಹಣ ಹೊಂದಿಸಲು ಈಗಲೂ ಹೆಣಗಾಡುತ್ತಿದೆ.
ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಮತ್ತು ಆರ್ಥಿಕ ಪರಿಣಾಮ ಉಂಟಾಗುವ ಪ್ರಸ್ತಾವನೆಗಳನ್ನು ಇನ್ನು ಮುಂದೆ ಸಲ್ಲಿಸಬಾರದು. ಹೊಸ ಕಾಮಗಾರಿಗಳನ್ನೂ ಕೈಗೆತ್ತಿಕೊಳ್ಳಬಾರದು ಎಂದು ಆರ್ಥಿಕ ಇಲಾಖೆಯು ಆಡಳಿತ ಇಲಾಖೆಗಳಿಗೆ ಸ್ಪಷ್ಟವಾಗಿ ಹೇಳಿತ್ತು. ಹಲವು ಯೋಜನೆ ಕಾಮಗಾರಿಗಳಿಗೆ ಅನುದಾನ, ಹೆಚ್ಚುವರಿ ಅನುದಾನ ಮತ್ತು ಹೊಸ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಣ್ಣ ನೀರಾವರಿ ಇಲಾಖೆಯು 2024ರ ವಿವಿಧ ತಿಂಗಳುಗಳಲ್ಲಿ ಹತ್ತಾರು ಪ್ರಸ್ತಾವನೆಗಳನ್ನು ಆರ್ಥಿಕ ಇಲಾಖೆಗೆ ಕಳಿಸಿತ್ತು. ಈ ಎಲ್ಲಾ ಪ್ರಸ್ತಾವನೆಗಳನ್ನೂ ಪರಿಶೀಲಿಸಿರುವ ಆರ್ಥಿಕ ಇಲಾಖೆಯು ಸದ್ಯದ ಆರ್ಥಿಕ ಪರಿಸ್ಥಿತಿ ಮತ್ತು ಆರ್ಥಿಕ ಪರಿಣಾಮ ಬೀರುವ ಯಾವುದೇ ಪ್ರಸ್ತಾವನೆ ಸಲ್ಲಿಸಬಾರದು ಎಂದು ಪದೇ ಪದೇ ಪುನರುಚ್ಛರಿಸಿತ್ತು.
2,500 ಕೋಟಿ ರು., ಮೊತ್ತದ ಬಿಲ್ ಬಾಕಿ, ಚಾಲ್ತಿ ಕಾಮಗಾರಿಗಳಿಗೂ ಹಣವಿಲ್ಲ; ಆರ್ಥಿಕ ಪರಿಸ್ಥಿತಿ ಕೆಟ್ಟಿತೇ?
ಬಿಲ್‌ಗಳ ಪಾವತಿಗೆ ಸಂಬಂಧಿಸಿದಂತೆ 2024ರ ನವೆಂಬರ್ 15ರಂದು ಪತ್ರಗಳನ್ನು ಬರೆದಿತ್ತು (ಆಇ 415 ಆಕೋ-1/2024) (MID 537, 53 LIS, 474, 476, 69 LIS, 501, 72 LIS, 510 MISU 2024). ಸಣ್ಣ ನೀರಾವರಿ ಇಲಾಖೆಯಡಿ ಅಧಿಕ ಮೊತ್ತದ ಚಾಲ್ತಿ ಕಾಮಗಾರಿಗಳು ಹಾಗೂ ಅಧಿಕ ಮೊತ್ತದ ಬಿಲ್‌ಗಳು ಪಾವತಿಗೆ ಬಾಕಿ ಇವೆ. ಇವುಗಳಿಗೆ ಆದ್ಯತೆ ಮೇಲೆ ಅನುದಾನ ಒದಗಿಸಬೇಕಾಗಿರುವುದರಿಂದ ಹೊಸ ಕಾಮಗಾರಿಗಳ ಅನುಮೋದನೆಗೆ ಅವಕಾಶವಿರುವುದಿಲ್ಲ. ಆದ ಕಾರಣ ಪ್ರಸ್ತಾವನೆಗಳನ್ನು ಮುಂದೂಡಬೇಕು ಎಂದು ತಿಳಿಸಿತ್ತು.
ವಸತಿ ಇಲಾಖೆಯ 6,516 ಕೋಟಿ ಟೆಂಡರ್‌ನಲ್ಲಿ ಅವ್ಯವಹಾರ?; ಭ್ರಷ್ಟರ ‘ಕೊಳಗೇರಿ’ ಮಂಡಳಿ
ಕೆರೆ ಸಂಜೀವಿನ ಯೋಜನೆ ಮತ್ತು ಕೆರೆಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಿತ್ತು.
ಡಿಕೆಶಿಯಿಂದ ಸಾಲ ಪಡೆದಿರುವ ದವನಂ ಕನ್ಸ್‌ಟ್ರಕ್ಷನ್ಸ್‌ಗೆ ಟಿಡಿಆರ್ ಪ್ರಸ್ತಾವನೆ; ನಿಯಮಬಾಹಿರ ಲಾಭ?
ಜೂನ್ 12ರಂದು ಬರೆದಿದ್ದ ಪತ್ರದಲ್ಲಿಯೂ ( ಆಇ 225 ಆಕೋ-1/2024 , ಆಇ 230) (ಇ-ಆಫೀಸ್) (MID 227, 291 MIS 2024) ಮತ್ತೊಮ್ಮೆ ಸ್ಪಷ್ಟವಾಗಿ ಹೇಳಿತ್ತು. ಸಣ್ಣ ನೀರಾವರಿ ಇಲಾಖೆಯಲ್ಲಿ ಈಗಾಗಲೇ ಅನುಮೋದಿತ ಕಾಮಗಾರಿಗಳ ಕಾರ್ಯಭಾರ ಅಧಿಕವಾಗಿರುವುದರಿಂದ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುಮೋದನೆ ನೀಡಲು ಅಥವಾ ಹೆಚ್ಚುವರಿ ಅನುದಾನ ಒಗಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರಸ್ತಾಪಿತ ಕಾಮಗಾರಿಯನ್ನು ಸದ್ಯಕ್ಕೆ ಮುಂದೂಡಬೇಕು ಎಂದು ಆಡಳಿತ ಇಲಾಖೆಗೆ ತಿಳಿಸಿದ್ದನ್ನು ಸ್ಮರಿಸಬಹುದು.