ಬಿಡುಗಡೆಯಾಗದ 25 ಕೋಟಿ ರು ಬಡ್ಡಿ ಸಹಾಯಧನ, ಕುಗ್ಗಿತು ಆದ್ಯತಾ ವಲಯಕ್ಕೆ ಸಾಲದ ಪ್ರಮಾಣ; ತುಟಿಬಿಚ್ಚದ ಸಚಿವ

ಬೆಂಗಳೂರು; ಕಿಸಾನ್‌ ಕ್ರೆಡಿಟ್‌ ಕಾರ್ಡ್‌ (ಕೆಸಿಸಿ) ಸಾಲವನ್ನು ತ್ವರಿತಗತಿಯಲ್ಲಿ ಮರು ಪಾವತಿ ಮಾಡಿದವರಿಗೆ ಕಳೆದ 3 ವರ್ಷಗಳಿಂದ ಒಟ್ಟು 25 ಕೋಟಿ ರು.ಗಳ ಬಡ್ಡಿ ಸಹಾಯಧನವನ್ನೂ ರಾಜ್ಯ  ಸರ್ಕಾರವು  ಬಿಡುಗಡೆ ಮಾಡಿಲ್ಲ. ಆದ್ಯತಾ ವಲಯಕ್ಕೆ ನೀಡಿರುವ ಸಾಲದ ಪ್ರಮಾಣ ಮತ್ತು ಮುಂಗಡಗಳ ನೀಡಿಕೆ ಪ್ರಮಾಣದಲ್ಲಿ ವಾರ್ಷಿಕ ಆಧಾರದಲ್ಲಿ ಶೇ. 5ರಷ್ಟು ಕಡಿಮೆಯಾಗಿದೆ. ಅದರಲ್ಲೂ ಆದ್ಯತಾ ವಲಯದ ಮುಂಗಡ ನೀಡಿಕೆಯಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು ರಾಜ್ಯದಲ್ಲಿ ಕಳಪೆ ಸಾಧನೆ ತೋರಿದೆ.

 

ಹಾಗೆಯೇ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸಾಮಾಜಿಕ ಮೂಲಸೌಕರ್ಯ ವಲಯಕ್ಕೆ ನೀಡಿರುವ ಸಾಲ ನೀಡಿಕೆ ಗುರಿಯಲ್ಲಿಯೂ ಇಳಿಕೆಯಾಗಿರುವುದು ಕಳವಳಕ್ಕೆ ಕಾರಣವಾಗಿದೆ.   25 ಕೋಟಿ ರು ಮೊತ್ತದ ಬಡ್ಡಿ ಸಹಾಯ ಧನವನ್ನು ಮೂರು ವರ್ಷಗಳಾದರೂ  ಬಿಡುಗಡೆ ಮಾಡದೇ ಇರುವ ಕುರಿತು ಸಚಿವ ಚೆಲುವರಾಯಸ್ವಾಮಿ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

 

2024ರ ನವೆಂಬರ್‍‌ 26ರಂದು ರಾಜ್ಯಮಟ್ಟದ ಬ್ಯಾಂಕರ್‍‌ಗಳ 167ನೇ ಸಭೆ (ಎಸ್‌ಎಲ್‌ಬಿಸಿ)ಯಲ್ಲಿ ಬ್ಯಾಂಕ್‌ಗಳ ಕಾರ್ಯನಿರ್ವಹಣೆಯನ್ನು ಒರೆಗೆ ಹಚ್ಚಲಾಗಿದೆ. ಈ ಸಭೆಯ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

 

ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ (ಎಂಎಸ್ಸ್ಎಂಇ) ವಲಯಕ್ಕೆ 2023ರ ಸೆಪ್ಟಂಬರ್‍‌ ತನಕ ನಿಡಲಾದ ಸಾಲದ ಪ್ರಮಾಣ 1,55,706 ಕೋಟಿ ರು. ನಿಂದ 2024 ಸೆಪ್ಟಂಬರ್ ತನಕ 1,80,624 ಕೋಟಿ ರು ಗೆ ಏರಿಕೆ ಕಂಡಿದೆ. ಅಂದರೆ ಒಂದೇ ವರ್ಷದಲ್ಲಿ ಸಾಲ ನೀಡಿಕೆಯ ಸಂಪೂರ್ಣ ಆದಾಯ ಬೆಳವಣಿಗೆ 24,918 ಕೋಟಿ ರು ಹೆಚ್ಚಳವಾಗಿದೆ. ವಾರ್ಷಿಕ ಆಧಾರದಲ್ಲಿ ಶೇ. 16ರಷ್ಟು ಪ್ರಗತಿ ಪ್ರಗತಿ ದಾಖಲಾಗಿದೆ ಎಂದು ಸಭೆಯಲ್ಲಿ ಅಂಕಿ ಅಂಶಗಳನ್ನು ಮಂಡಿಸಿರುವುದು ಗೊತ್ತಾಗಿದೆ.

 

2023ರ ಸೆಪ್ಟಂಬರ್‍‌ ತನಕ ಆದ್ಯತಾ ವಲಯದ ಸಾಲ ನೀಡಿಕೆಯು 50,750 ಕೋಟಿ ರು ಏರಿಕೆ ಕಂಡಿದೆ. ವಾರ್ಷಿಕ ಅಧಾರದಲ್ಲಿ ಶೇ.12ರಷ್ಟು ಬೆಳವಣಿಗೆ ದಾಖಲಿಸಿದೆ.

 

‘ಆದರೆ ಒಟ್ಟು ಸಾಲ ನೀಡಿಕೆಯ ಪೈಕಿ ಆದ್ಯತಾ ವಲಯಕ್ಕೆ ನೀಡಿರುವ ಸಾಲ ಪ್ರಮಾಣದಲ್ಲಿ ವಾರ್ಷಿಕ ಅಧಾರದಲ್ಲಿ ಶೇ. 5ರಷ್ಟು ಕಡಿಮೆಯಾಗಿದೆ. ಆದ್ಯತಾ ವಲಯದ ಮುಂಗಡ (ಪಿಎಸ್‌ಎ)ಕ್ಕೆ ಸಂಬಂಧಿಸಿದಂತೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು ರಾಜ್ಯದಲ್ಲಿ ಕಳಪೆ ಸಾಧನೆ ಮಾಡುತ್ತಿದೆ. ಎಸ್‌ಬಿಐ ಆಡಳಿತ ಮಂಡಳಿಗೆ ಈ ಸಮಸ್ಯೆಯನ್ನು ಗಮನಕ್ಕೆ ತರಲಾಗಿದೆ. ಅಲ್ಲದೆ ಆದ್ಯತಾ ವಲಯಕ್ಕೆ ನೀಡಲಾಗುತ್ತಿರುವ ಮುಂಗಡಗಳಲ್ಲಿ ಸುಧಾರಣೆ ಕಂಡು ಬರುತ್ತಿಲ್ಲ,’ ಎಂದು ಕರ್ನಾಟಕ ಸರ್ಕಾರದ ಯೋಜನಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಆರ್ ವಿಶಾಲ್‌ ಅವರು ಸಭೆಯ ಗಮನಕ್ಕೆ ತಂದಿರುವುದು ಗೊತ್ತಾಗಿದೆ.

 

 

 

 

ಅಲ್ಲದೇ ಪ್ರಮುಖ ಖಾಸಗಿ ಬ್ಯಾಂಕ್‌ಗಳಾದ ಎಚ್‌ಡಿಎಫ್‌ಸಿ, ಆಕ್ಸಿಸ್‌, ಐಸಿಐಸಿಐ ಬ್ಯಾಂಕ್‌ ಸಹ ಒಟ್ಟು ಮುಂಗಡಗಳ ಪೈಕಿ ಕೃಷಿ ವಲಯಕ್ಕೆ ನೀಡಬೇಕಾದ ಸಾಲದ ಗುರಿಯೂ ಸಾಧನೆಯ ಮಟ್ಟದಲ್ಲಿಲ್ಲ ಎಂಬುದು ಸಭೆ ನಡವಳಿಗಳಿಂದ ತಿಳಿದು ಬಂದಿದೆ.

 

‘ಕರ್ನಾಟಕ ಸರ್ಕಾರವು ಕಿಸಾನ್‌ ಕ್ರೆಡಿಟ್‌ ಕಾರ್ಡ್‌ (ಕೆಸಿಸಿ) ಸಾಲವನ್ನು ತ್ವರಿತವಾಗಿ ಮರು ಪಾವತಿ ಮಾಡುವ ರೈತರಿಗೆ 1 ಲಲಕ್ಷ ವರೆಗಿನ ಬೆಳೆ ಸಾಲಗಳಿಗೆ ಶೇ. 1ರಷ್ಟು ಬಡ್ಡಿ ರಿಯಾಯಿತಿ (ಸಹಾಯಧನ) ನೀಡುತ್ತಿದೆ. ಆದರೆ ಕೃಷಿ ಇಲಾಖೆಯಿಂದ ಕಳೆದ 3 ವರ್ಷಗಳಿಂದ 25 ಕೋಟಿ ರು ಬಡ್ಡಿ ಸಹಾಯ ಧನ ಬಂದಿಲ್ಲ. ಸೆಪ್ಟಂಬರ್‍‌ 2024ರವರೆಗೆ ಕೆಸಿಸಿ ಸಾಲಗಳ ಅಡಿಯಲ್ಲಿ 68,457 ಕೋಟಿ ರು. ಬಾಕಿ ಇದೆ,’ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದಿರುವುದು ತಿಳಿದು ಬಂದಿದೆ.

 

 

2023ರ ಸೆಪ್ಟಂಬರ್‍‌ ತನಕ ಆದ್ಯತಾ ವಲಯದ ಸಾಲ ನೀಡಿಕೆಯು 50,750 ಕೋಟಿ ರು ಏರಿಕೆ ಕಂಡಿದೆ. ವಾರ್ಷಿಕ ಅಧಾರದಲ್ಲಿ ಶೇ.12ರಷ್ಟು ಬೆಳವಣಿಗೆ ದಾಖಲಿಸಿದೆ. ಕೃಷಿ ಸಾಲ ನೀಡಿಕೆಯು 2023 ಸೆಪ್ಟಂಬರ್‍‌ವರೆಗೆ ಇದ್ದ 2,03,317 ಕೋಟಿ ರು.ನಿಂದ 2024 ಸೆಪ್ಟಂಬರ್‍‌ ಹೊತ್ತಿಗೆ 2,30,720 ಕೋಟಿ ರು ಗೆ ಏರಿಕೆ ಕಂಡಿದೆ. ಒಂದೇ ವರ್ಷದ ಅವಧಿಯಲ್ಲಿ 27,403 ಕೋಟಿ ರು. ಹೆಚ್ಚಳವಾಗಿದೆ. ವಾರ್ಷಿಕ ಆಧಾರದಲ್ಲಿ ಶೇ.13ರಷ್ಟು ಪ್ರಗತಿ ಸಾಧಿಸಿರುವುದು ಗೊತ್ತಾಗಿದೆ.

 

ಅದೇ ರೀತಿ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ (ಎಂಎಸ್ಎಂಇ) ವಲಯಕ್ಕೆ 2023ರ ಸೆಪ್ಟಂಬರ್‍‌ ತನಕ 1,55,706 ಕೋಟಿ ರು. ಸಾಲದ ಪ್ರಮಾಣವಿತ್ತು. 2024 ಸೆಪ್ಟಂಬರ್ ಹೊತ್ತಿಗೆ 1,80,624 ಕೋಟಿ ರು ಗೆ ಏರಿಕೆ ಕಂಡಿದೆ. ಅಂದರೆ ಒಂದೇ ಒಂದೇ ವರ್ಷದಲ್ಲಿ ಸಾಲ ನೀಡಿಕೆಯ ಸಂಪೂರ್ಣ ಆದಾಯ ಬೆಳವಣಿಗೆ 24,918 ಕೋಟಿ ರು ಹೆಚ್ಚಳವಾಗಿದೆ. ವಾರ್ಷಿಕ ಆಧಾರದಲ್ಲಿ ಶೇ. 16ರಷ್ಟು ಪ್ರಗತಿ ದಾಖಲಾಗಿರುವುದು ತಿಳಿದು ಬಂದಿದೆ.

 

 

ಅಲ್ಪಾವಧಿ ಕೃಷಿ ಸಾಲಗಳ ಅಡಿಯಲ್ಲಿ 2024ರ ಸೆ.30ರ ಅಂತ್ಯಕ್ಕೆ ಒಟ್ಟು 42,890 ಕೋಟಿ ರು. ಸಾಲ ವಿತರಿಸಿವೆ. ವಾರ್ಷಿಕ ಗುರಿಗೆ ಪ್ರತಿಯಾಗಿ ಶೆ.55ರಷ್ಟು ಸಾಧನೆ ಮಾಡಿವೆ. ಅವಧಿ ಸಾಲಗಳಡಿಯಲ್ಲಿ ಸೆಪ್ಟಂಬರ್‍‌ 2024ರ ಅಂತ್ಯಕ್ಕೆ 41,629 ಕೋಟಿ ರು. ಸಾಲ ನೀಡಿದೆ. ವಾರ್ಷಿಕ ಗುರಿಗೆ ಪ್ರತಿಯಾಗಿ ಶೇ .54ರಷ್ಟು ಸಾಧನೆ ಆಗಿದೆ.

 

ಎಂಎಸ್‌ಎಂಇ ವಲಯಕ್ಕೆ 1,07,921 ಕೋಟಿ ರು ಸಾಲ ವಿತರಿಸಿದೆ. ವಾರ್ಷಿಕ ಗುರಿಗೆ ಪ್ರತಿಯಾಗಿ ಶೇ. 62ರಷ್ಟು ಸಾಧನೆ ಮಾಡಿದೆ. ಒಟ್ಟು ಆದ್ಯತಾ ವಲಯದ ಮುಂಗಡಗಳ ಅಡಿಯಲ್ಲಿ 2,21,662 ಕೋಟಿ ಸಾಲ ಒದಗಿಸಿದೆ. ವಾರ್ಷಿಕ ಗುರಿಗೆ ಪ್ರತಿಯಾಗಿ ಶೇ.57ರಷ್ಟು ಸಾಧನೆ ದಾಖಲಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಎಂಎಸ್ಎಂಇ ವಲಯಕ್ಕೆ ಈ ವರ್ಷ ನೀಡಿರುವ ಸಾಲದ ಪ್ರಮಾಣದಲ್ಲಿ ಶೇ.7ರಷ್ಟು ಕಡಿಮೆ ಸಾಧನೆಯಾಗಿರುವುದು ಗೊತ್ತಾಗಿದೆ.

 

ಅದೇ ರೀತಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸಾಮಾಜಿಕ ಮೂಲಸೌಕರ್ಯ ವಲಯಕ್ಕೆ ನೀಡಿರುವ ಸಾಲ ನೀಡಿಕೆ ಗುರಿ ಇಳಿಕೆಯಾಗಿದೆ. ಇದು ಕಳವಳಕಾರಿ ವಿಷಯವಾಗಿದೆ ಎಂದು ಕರ್ನಾಟಕ ಸರ್ಕಾರದ ಅಭಿವೃದ್ಧಿ ಆಯುಕ್ತರು ಹೇಳಿರುವುದು ತಿಳಿದು ಬಂದಿದೆ.

 

ಎಸ್‌ಬಿಐ, ಬ್ಯಾಂಕ್‌ ಆಫ್‌ ಇಂಡಿಯಾ, ಸೆಂಟ್ರಲ್‌ ಬ್ಯಾಂಕ್ ಆಫ್‌ ಇಂಡಿಯಾ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್ , ಪಂಜಾಬ್‌ ಸಿಂಧ್ ಬ್ಯಾಂಕ್‌ ಜತೆಗೆ ಹೆಚ್‌ಡಿಎಫ್‌ಸಿ ಐಸಿಐಸಿಐ ನಂತಹ ಎಲ್ಲಾ ಪ್ರಮುಖ ಖಾಸಗಿ ವಲಯದ ಬ್ಯಾಂಕ್‌ಗಳು ಆದ್ಯತಾ ವಲಯ ಮತ್ತು ಕೃಷಿ ವಲಯದ ಕಡ್ಡಾಯ ಗುರಿ ಕ್ರಮವಾಗಿ ಶೇ.40 ಮತ್ತು ಶೇ. 18ರಷ್ಟೇ ಗುರಿ ಸಾಧಿಸುವಲ್ಲಿ ಹಿಂದುಳಿದಿವೆ ಎಂಬ ಸಂಗತಿಯು ನಡವಳಿಯಿಂದ ಗೊತ್ತಾಗಿದೆ.

 

 

2024-25ನೇ ಸಾಲಿನ ಸೆಪ್ಟಂಬರ್‍‌ ತ್ರೈಮಾಸಿಕದಲ್ಲಿ ವಾರ್ಷಿಕ ಸಾಲ ಯೋಜನೆಯ ಅಡಿ ಕೋಲಾರ (ಶೇ.63), ದಕ್ಷಿಣ ಕನ್ನಡ (ಶೇ.53), ಚಾಮರಾಜನಗರ (ಶೇ.50), ಕೊಪ್ಪಳ (ಶೇ.48)ರಷ್ಟು ಸಾಧನೆ ಮಾಡಿದ 5 ಜಿಲ್ಲೆಗಳಾಗಿವೆ. ಅಲ್ಲದೇ ವಾರ್ಷಿಕ ಸಾಲ ಯೋಜನೆ ಅಡಿಯಲ್ಲಿ ಉಡುಪಿ (ಶೆ.60), ಬಾಗಲಕೋಟೆ (ಶೇ.53), ದಕ್ಷಿಣ ಕನ್ನಡ (ಶೇ. 53), ಚಾಮರಾಜನಗರ (ಶೇ..50), ಕೊಪ್ಪಳ (ಶೇ. 48) ಸಾಧನೆ ಮಾಡಿರುವುದು ತಿಳಿದು ಬಂದಿದೆ.

 

ಕಿಸಾನ್‌ ಸಮ್ಮಾನ್‌; 2,000 ಕೋಟಿ ಅನುದಾನದಲ್ಲಿ ಹಣವೇ ಬಿಡುಗಡೆಯಾಗಿಲ್ಲ,ಪ್ರಗತಿಯೂ ಇಲ್ಲ

 

ಕೈಗಾರಿಕೆ ಚಟುವಟಿಕೆಗಳ ಸೀಮಿತ ವ್ಯಾಪ್ತಿ, ಕರಾವಳಿ ನಿಯಂತ್ರಣ ವಲಯ (ಸಿಆರ್‍‌ಝಡ್‌) ನಿರ್ಬಂಧಗಳು ಮತ್ತು ಅರಣ್ಯ ಪ್ರದೇಶದ ನಿರ್ಬಂಧಗಳು ಜಿಲ್ಲೆಯಲ್ಲಿ ಕೈಗಾರಿಕೆ ಬೆಳವಣಿಗೆಗೆ ಅಡ್ಡಿಯಾಗುತ್ತಿವೆ. ಎರಡೂ ಜಿಲ್ಲೆಗಳ ಒಟ್ಟು ಭೌಗೋಳಿಕ ಪ್ರದೇಶದ ಪೈಕಿ ಸುಮಾರು ಶೇ. 40ರಷ್ಟು ಪ್ರದೇಶವು ಅರಣ್ಯದಿಂದ ಆವೃತವಾಗಿದೆ. ಶೆ. 15ರಷ್ಟು ಪ್ರದೇಶವು ಬಂಜರು ಅಥವಾ ಕೃಷಿಗೆ ಲಭ್ಯವಿಲ್ಲ. ಇದು ಕಡಿಮೆ ಸಿಡಿ ಅನುಪಾತಕ್ಕೆ ಪ್ರಮುಖ ಕಾರಣವಾಗಿದೆ ಎಂಬ ಅಂಶವನ್ನು ಉಲ್ಲೇಖಿಸಿರುವುದು ಗೊತ್ತಾಗಿದೆ.

SUPPORT THE FILE

Latest News

Related Posts