ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು 14 ಬದಲಿ ನಿವೇಶನಗಳನ್ನು ಮುಡಾಕ್ಕೆ ಹಿಂದಿಗಿರುಗಿಸಿರುವ ಬೆನ್ನಲ್ಲೇ ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬ ಸದಸ್ಯರು ಟ್ರಸ್ಟಿಗಳಾಗಿರುವ ಸಿದ್ದಾರ್ಥ ವಿಹಾರ ಟ್ರಸ್ಟ್ ಕೂಡ ವಿವಾದಿತ ಸಿ ಎ ನಿವೇಶನವನ್ನು ಹಿಂದಿರುಗಿಸಿದೆ.
ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ 5 ಎಕರೆ ವಿಸ್ತಿರ್ಣದ ಸಿ ಎ ನಿವೇಶನವನ್ನು ಹಂಚಿಕೆ ಮಾಡಿರುವುದನ್ನು ‘ದಿ ಫೈಲ್’, ಎಲ್ಲಾ ಮುಖ್ಯ ವಾಹಿನಿಗಳಿಗೂ ಮೊದಲೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು. ಈ ವರದಿ ಆಧರಿಸಿ ರಾಜ್ಯಸಭೆ ಸದಸ್ಯ ಲೆಹರ್ ಸಿಂಗ್ ಮತ್ತು ವಿದಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು.
ಆ ನಂತರ ನಡೆದ ಬೆಳವಣಿಗೆಗಳಲ್ಲಿ ಖುದ್ದು ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ಅವರೂ ಸಹ ನಿವೇಶನ ಹಂಚಿಕೆ ಆಗಿರುವುದನ್ನು ಸಮರ್ಥಿಸಿಕೊಂಡಿದ್ದರು. ಇದರಲ್ಲಿ ಯಾವುದೇ ಲೋಪಗಳಾಗಿಲ್ಲ ಎಂದು ಪ್ರತಿಪಾದಿಸಿದ್ದರು. ಹಾಗೆಯೇ ‘ದಿ ಫೈಲ್’ ವರದಿಯನ್ನಾಧರಿಸಿ ರಾಜ್ಯಪಾಲರಿಗೆ ದೂರು ನೀಡಿದ್ದ ರಾಜ್ಯಸಭೆ ಸದಸ್ಯ ಲೆಹರ್ ಸಿಂಗ್ ಅವರ ಮೇಲೆ ಪ್ರಿಯಾಂಕ್ ಖರ್ಗೆ ಆದಿಯಾಗಿ ಇಡೀ ಕಾಂಗ್ರೆಸ್ ಮುಗಿಬಿದ್ದಿತ್ತು.
ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅವಧಿಯಲ್ಲಿ ನಡೆದಿದೆ ಎನ್ನಲಾಗಿದ್ದ ಸೀರೆ ಹಂಚಿಕೆ ಪ್ರಕರಣದಲ್ಲಿ ಲೆಹರ್ ಸಿಂಗ್ ಅವರನ್ನು ಎಳೆದು ತಂದಿದ್ದರು. ಅದೇ ರೀತಿ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಮೈಸೂರಿನಲ್ಲಿ ನೀಡಿದ್ದ ಕೈಗಾರಿಕೆ ನಿವೇಶನ ಹಂಚಿಕೆಯನ್ನೂ ಮುನ್ನೆಲೆಗೆ ತಂದು ಪ್ರತ್ಯಾರೋಪ ಮಾಡಿದ್ದರು. ಹಾಗೆಯೇ ರಾಷ್ಟ್ರೋತ್ಥಾನ ಪರಿಷತ್, ಚಾಣಕ್ಯ ವಿಶ್ವವಿದ್ಯಾಲಯಕ್ಕೆ ನೀಡಿದ್ದ ಗೋಮಾಳ ಮತ್ತು ಕೈಗಾರಿಕೆ ನಿವೇಶನ ಹಂಚಿಕೆ ಕುರಿತಾಗಿಯೂ ಆರೋಪಿಸಿದ್ದರು.
ಮುಡಾ ಪ್ರಕರಣದಲ್ಲಿ ಜಾರಿನಿರ್ದೇಶನಾಲಯವು ಪ್ರವೇಶ ಮಾಡಿದ್ದರ ಹೊತ್ತಿನಲ್ಲೇ ಮುಖ್ಯಮಂತ್ರಿ ಹುದ್ದೆಗೆ ಈಗಲೂ ಪೈಪೋಟಿ ನಡೆಯುತ್ತಿವೆ. ಹಲವು ಸಚಿವರ ಮನೆಗಳಲ್ಲಿ ಗೌಪ್ಯ ಸಭೆಗಳು ನಡೆದವು. ಈ ಮಧ್ಯೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರೂ ಸಹ ಚಲಾವಣೆಗೆ ಬಂದಿತ್ತು.
ಮುಖ್ಯಮಂತ್ರಿ ಹುದ್ದೆಗೆ ನಡೆಯುತ್ತಿರುವ ಪೈಪೋಟಿಗಳ ನಡುವೆಯೇ ಸಿದ್ದಾರ್ಥ ವಿಹಾರ ಟ್ರಸ್ಟ್, 5 ಎಕರೆ ವಿಸ್ತೀರ್ಣದ ನಿವೇಶನವನ್ನು ಹಿಂದಿರುಗಿಸಿರುವುದು ರಾಜಕೀಯ ವಲಯದಲ್ಲಿ ವಿವಿಧ ವಿಶ್ಲೇಷಣೆಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ.
ಈ ಮಧ್ಯೆ ಮುಡಾಕ್ಕೆ 14 ನಿವೇಶನಗಳನ್ನು ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಹಿಂದಿರುಗಿಸಿದ್ದರು. ಇದರಿಂದಾಗಿ ಸಿದ್ದಾರ್ಥ ವಿಹಾರ ಟ್ರಸ್ಟ್ ಕೂಡ ನಿವೇಶನವನ್ನು ಹಿಂದಿರುಗಿಸಬೇಕು ಎಂಬ ಒತ್ತಡ ಸಾರ್ವಜನಿಕ ವಲಯದಲ್ಲಿಯೂ ಕೇಳಿ ಬಂದಿತ್ತು.
ಈ ಕುರಿತು ‘ದಿ ಫೈಲ್’ ಸರಣಿ ವರದಿಗಳನ್ನು ಪ್ರಕಟಿಸಿತ್ತು.
ಇದೀಗ ಟ್ರಸ್ಟ್ 2024ರ ಸೆ.20ರಂದೇ ನಿವೇಶನವನ್ನು ಕೆಐಎಡಿಬಿಗೆ ಹಿಂದಿರುಗಿಸಿ ಪತ್ರ ಬರೆದಿದ್ದಾರೆ. ಸೆ.20ರಂದೇ ನಿವೇಶನವನ್ನು ಹಿಂದಿರುಗಿಸಿ ಪತ್ರ ಬರೆದಿದ್ದರೂ ಸಹ ಇದುವರೆಗೂ ಬಹಿರಂಗಗೊಳಿಸಿರಲಿಲ್ಲ. ಈ ಬಗ್ಗೆ ಸ್ವತಃ ಪ್ರಿಯಾಂಕ್ ಖರ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.
ಕೆಐಎಡಿಬಿ ಹಂಚಿಕೆ ಮಾಡಿದ್ದ ಭೂಮಿ ವಾಪಸ್‌ಗೆ ನಿರ್ಧರಿಸಲಾಗಿದೆ. ಕಾನೂನುಬಾಹಿರವಾಗಿ ಸೈಟ್ ಹಂಚಿಕೆ ಆಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ವಿಚಾರದಲ್ಲಿ ಟ್ರಸ್ಟ್ ಅಧ್ಯಕ್ಷ ರಾಹುಲ್‌ಗೆ ಮಾಹಿತಿ ಇರಲಿಲ್ಲ. ನಮ್ಮ ಕುಟುಂಬದಲ್ಲಿ ಮೂವರು ಮಾತ್ರ ರಾಜಕೀಯದಲ್ಲಿ ಇದ್ದೇವೆ. ನಮ್ಮ ಅಣ್ಣ ಅವರು ಮೃದು ಸ್ವಭಾದವರು. ಅವರಿಂದ ಕುಟುಂಬದ ಸದಸ್ಯರಿಗೆ ಹಿಂಸೆ ಆಗುತ್ತಿದೆ ಎಂದು ನೊಂದಿದ್ದಾರೆ. ಹೀಗಾಗಿ ಸೆಪ್ಟಂಬರ್ 29ರಂದು ಕೆಐಎಡಿಬಿಗೆ ಪತ್ರ ಬರೆದಿದ್ದಾರೆ. ಸೈಟ್ ಕೊಟ್ಟಿರುವುದನ್ನು ಕಾನೂನಾತ್ಮಕವಾಗಿ ಮರಳಿ ನೀಡುತ್ತಿದ್ದೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರದಲ್ಲೇನಿದೆ?
ಸಿದ್ದಾರ್ಥ ವಿಹಾರ ಟ್ರಸ್ಟ್ ಸಾರ್ವಜನಿಕ ಶೈಕ್ಷಣಿಕ, ಸಾಂಸ್ಕೃತಿಕ ಚಾರಿಟಬಲ್ ಟ್ರಸ್ಟ್. ಇದು ಖಾಸಗಿ ಅಲ್ಲ ಅಥವಾ ಕುಟುಂಬ ಸದಸ್ಯರು ನಡೆಸುತ್ತಿರುವ ಟ್ರಸ್ಟ್ ಅಲ್ಲ. ಯಾವುದೇ ಲಾಭದಾಯಕ ಉದ್ದೇಶವನ್ನೂ ಹೊಂದಿಲ್ಲ. ಈ ಟ್ರಸ್ಟ್ ನ ಯಾವುದೇ ಆಸ್ತಿ ಮತ್ತು ಆದಾಯಕ್ಕೆ ಟ್ರಸ್ಟಿಗಳು ನೇರ ಅಥವಾ ಪರೋಕ್ಷವಾಗಿ ಯಾವುದೇ ಫಲಾನುಭವಿ ಆಗಿಲ್ಲ.
ನಿವೇಶನ ಪಡೆಯುವ ಸಂಬಂಧ ಟ್ರಸ್ಟ್ ಯಾವುದೇ ರಿಯಾಯಿತಿ ಕೋರಿಲ್ಲ. ನಿವೇಶನಕ್ಕೆ ನಿಗದಿಪಡಿಸಿರುವ ದರದಲ್ಲಿಯೂ ಇಳಿಕೆ ಮಾಡಬೇಕು ಎಂದು ಕೋರಿಲ್ಲ. ಹಾಗೆಯೇ ಆರ್ಥಿಕ ನೆರವನ್ನೂ ಕೇಳಿಲ್ಲ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಇದ್ದ ಶೇ.50 ರಷ್ಟು ರಿಯಾಯಿತಿ ಮಾತ್ರ ಪಡೆದಿದ್ದೇವೆ. ಇದರ ಹೊರತಾಗಿ ಯಾವುದೇ ರಿಯಾಯಿತಿಯನ್ನೂ ಪಡೆದಿಲ್ಲ. ಈ ನಿವೇಶನವು 10 ವರ್ಷಗಳ ಅವಧಿಗೆ ಲೀಸ್ ಕಮ್ ಸೇಲ್ ಆಧಾರದ ಮೇಲೆ ಹಂಚಿಕೆ ಆಗಿದೆ. ಟ್ರಸ್ಟ್ ಮೂರು ವರ್ಷದೊಳಗೆ ಷರತ್ತುಗಳನ್ನು ಪಾಲಿಸದೇ ಇದ್ದಲ್ಲಿ ನಿವೇಶನದ ಗುತ್ತಿಗೆ ಅವಧಿಯನ್ನೂ ರದ್ದುಗೊಳಿಸಲು ಅವಕಾಶವಿದೆ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ರಾಜಕೀಯ ಪ್ರೇರಿತ ಮತ್ತು ಯಾವುದೇ ಆಧಾರವಿಲ್ಲದೇ ಆರೋಪಗಳು ಕೇಳಿ ಬಂದವು. ಹೀಗಾಗಿ ಶೈಕ್ಷಣಿಕ ಉದ್ದೇಶ ಹೊಂದಿರುವ ಟ್ರಸ್ಟ್ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದು. ಟ್ರಸ್ಟ್, ಉನ್ನತ ಮೌಲ್ಯಗಳನ್ನು ಹೊಂದಿದೆ, ಸಾಮಾಜಿಕ ಸೇವೆಯ ಸದುದ್ದೇಶವಿದೆ. ಹೀಗಾಗಿ ಯಾವುದೇ ವಿವಾದಗಳಿಗೆ ಆಸ್ಪದ ಕೊಡಬಾರದು ಎಂಬ ಉದ್ದೇಶದಿಂದ ಸ್ವಯಂ ಪ್ರೇರಿತವಾಗಿ ಟ್ರಸ್ಟ್ ಈ ನಿವೇಶನವನ್ನು ಕೆಐಎಡಿಬಿಗೆ ಹಿಂದಿರುಗಿಸುತ್ತಿದೆ ಎಂದು ಹೇಳಿದೆ.
ಟ್ರಸ್ಟ್ ಅಧ್ಯಕ್ಷ ರಾಹುಲ್ ಖರ್ಗೆ ಅವರಿಗೆ ಹೆಚ್ಚು ಅರಿವು ಇರಲಿಲ್ಲ. ಅವರಿಗೆ ಕೇಂದ್ರದಿಂದ ಸಾಕಷ್ಟು ಅವಾರ್ಡ್ ದೊರೆತಿದೆ. ಯುಪಿಎಸ್‌ಇನಲ್ಲೂ ರ್ಯಾಂಕ್ ಗಳಿಸಿದ್ದರು. ಏರೋಸ್ಪೇಸ್‌ನಲ್ಲಿ ಜಾಗ ಬೇಕು ಎಂದು ಅರ್ಜಿ ಹಾಕಿದ್ದರು. ಅದರ ಅನ್ವಯ ಅವರಿಗೆ ನಿವೇಶನ ಹಂಚಿಕೆ ಆಗಿದೆ. ಸಂಪುರ್ಣ ದಾಖಲೆ ಆಧಾರದ ಮೆಲೆ ನಿವೇಶನ ಸಿಕ್ಕಿದೆ. ತರಾ ತುರಿಯಲ್ಲಿ ಏನೂ ಆಗಿಲ್ಲ ಎಂದು ಪ್ರಿಯಾಂಕ್ ಖರ್ಗೆ ಅವರು ಸಮರ್ಥಿಸಿಕೊಂಡಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬಸ್ಥರು ಟ್ರಸ್ಟಿಗಳಾಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಏರೋಸ್ಪೇಸ್ ಮತ್ತು ಹೈಟೆಕ್ ಡಿಫೆನ್ಸ್ ಪಾರ್ಕ್‌ನಲ್ಲಿ ಹಂಚಿಕೆ ಮಾಡಿರುವ ಸಿ ಎ ನಿವೇಶನಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನೀಡಿದ್ದ ಗಡುವು ಮೀರಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರವು ಯಾವುದೇ ವಿವರಣೆಯನ್ನು ನೀಡಿರಲಿಲ್ಲ.
ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ 5 ಎಕರೆ; ಗಡುವು ಮೀರಿದರೂ ರಾಜ್ಯಪಾಲರಿಗೆ ಸಲ್ಲಿಕೆಯಾಗದ ವರದಿ, ಸಚಿವರ ಒತ್ತಡ?
ರಾಜ್ಯಪಾಲರು ನೀಡಿದ್ದ ನಿರ್ದೇಶನವನ್ನು ಪಾಲಿಸುವ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದರು. ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ದಿ ಮಂಡಳಿಯ ಸಿಇಒಗೆ ಪತ್ರವನ್ನೂ ಬರೆದಿದ್ದರು. ಆದರೆ ಈ ಪತ್ರಕ್ಕೆ ಕೆಐಎಡಿಬಿಯು ಇದುವರೆಗೂ ಯಾವುದೇ ವರದಿಯನ್ನು ನೀಡಿಲ್ಲ.
ವರದಿ ನೀಡದಂತೆ ಸಚಿವ ಎಂ ಬಿ ಪಾಟೀಲ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇಲಾಖೆಯು ಸಹ ಕೆಐಎಡಿಬಿಗೆ ನೆನಪೋಲೆಗಳನ್ನೇ ಬರೆದಿಲ್ಲ ಎಂದು ಗೊತ್ತಾಗಿದೆ.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ವಿವರವಾದ ವರದಿ ಸಲ್ಲಿಸಬೇಕು ಮತ್ತು ರಾಜ್ಯಪಾಲರು ಕೋರಿರುವ ಪ್ರತಿ ಅಂಶಗಳ ಕುರಿತು ಮಾಹಿತಿ, ದಾಖಲೆಗಳನ್ನು ಒದಗಿಸಬೇಕು ಎಂದು ಕೆಐಎಡಿಬಿ ಸಿಇಓಗೆ 2024ರ ಸೆ.9ರಂದು ಪತ್ರ (ಸಂಖ್ಯೆ ಸಿಐ; 130 ಎಸ್‌ಪಿಕ್ಯೂ 2024, ದಿನಾಂಕ 09.09.2024) ಬರೆದಿದ್ದರು.
ಈ ಪತ್ರಕ್ಕೂ ಸಹ ಕೆಐಎಡಿಬಿಯು ಇದುವರೆಗೂ ಯಾವುದೇ ವರದಿಯನ್ನಾಗಲೀ, ಮಾಹಿತಿಯನ್ನಾಗಲೀ ಸರ್ಕಾರಕ್ಕೆ ನೀಡಿಲ್ಲ. ಮತ್ತು ಇಲಾಖೆಯು ಸಹ ಯಾವುದೇ ನೆನಪೋಲೆಗಳನ್ನೂ ಬರೆದಿರಲಿಲ್ಲ.
ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ 5 ಎಕರೆ; ಪ್ಯಾನ್‌ಕಾರ್ಡ್ ಸಲ್ಲಿಸದಿದ್ದರೂ ಪ್ರಸ್ತಾವನೆ ಪರಿಗಣಿಸಲು ಶಿಫಾರಸ್ಸು
ಸಿ ಎ ನಿವೇಶನಕ್ಕಾಗಿ ಸಲ್ಲಿಕೆಯಾಗಿದ್ದ 6 ಅರ್ಜಿಗಳನ್ನು ಪರಿಗಣಿಸಿದ್ದ ಏಕಗವಾಕ್ಷಿ ಸಮಿತಿಯು, ಪ್ರತೀ ದಾಖಲೆಗಳನ್ನೂ ಪರಿಶೀಲಿಸಿತ್ತು. ಅರ್ಜಿಯೊಂದಿಗೆ ಪ್ರಸ್ತಾವನೆ, ಟ್ರಸ್ಟ್, ಕಂಪನಿಗಳ ವಹಿವಾಟಿನ ದಾಖಲೆಗಳು, ಪ್ರಾಜೆಕ್ಟ್ ರಿಪೋರ್ಟ್, ಹಣಕಾಸಿನ ಸಾಮರ್ಥ್ಯ, ಆದಾಯ ತೆರಿಗೆ, ಭೂಮಿ ಬಳಕೆಯ ಸ್ಕೆಚ್, ಪ್ಯಾನ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ಒರೆಗೆ ಹಚ್ಚಿತ್ತು. ಮತ್ತು ಶಿಫಾರಸ್ಸು ಮಾಡುವ ಸಂಬಂಧ ಸಮಿತಿಯು ತನ್ನ ಅಭಿಪ್ರಾಯವನ್ನೂ ಷರಾದ ರೂಪದಲ್ಲಿ ದಾಖಲಿಸಿತ್ತು.
ಈ ರೀತಿ ಒಟ್ಟು 6 ಅರ್ಜಿಗಳ ಪೈಕಿ ಸಿದ್ದಾರ್ಥ ವಿಹಾರ್ ಟ್ರಸ್ಟ್ ಮತ್ತು ಇಂಡಸ್ಟ್ರಿಯಲ್ ಫೆಸಲಿಟಿಸ್ ಕಾರ್ಪೋರೇಷನ್‌ನ ಅರ್ಜಿಗಳನ್ನಷ್ಟೇ ಪರಿಗಣಿಸಬಹುದು (may be considered) ಎಂದು ಷರಾದಲ್ಲಿ ದಾಖಲಿಸಿತ್ತು. ಉಳಿದ 4 ಅರ್ಜಿಗಳಿಗೆ ಸಂಬಂಧಿಸಿದಂತೆ ದಾಖಲೆಗಳು ಅಪೂರ್ಣವಾಗಿವೆ, ದಾಖಲೆಗಳು ಸಾಕಷ್ಟಿಲ್ಲ ಎಂದು ಷರಾ ಬರೆದಿತ್ತು. ಅಲ್ಲದೇ ಪ್ರಸ್ತಾವನೆಗಳನ್ನು ಪರಿಗಣಿಸುವ ಬಗ್ಗೆ ಯಾವುದೇ ಅಭಿಪ್ರಾಯವನ್ನೂ ನಡವಳಿಯಲ್ಲಿ ಶಿಫಾರಸ್ಸು ಮಾಡಿರಲಿಲ್ಲ.
ವಿಶೇಷವೆಂದರೇ 4 ಅರ್ಜಿಗಳೊಂದಿಗೆ ಸಲ್ಲಿಕೆಯಾಗಿದ್ದ ಪ್ರಸ್ತಾವನೆಯಲ್ಲಿ ದಾಖಲೆಗಳು ಸಾಕಷ್ಟಿಲ್ಲ ಎಂದು ನಡವಳಿಯಲ್ಲಿ ದಾಖಲಿಸಿದ್ದ ಸಚಿವ ಎಂ ಬಿ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿದ್ದ ಸಮಿತಿಯು, ಪ್ಯಾನ್ ಕಾರ್ಡ್‌ನ್ನೇ ಸಲ್ಲಿಸದ ಸಿದ್ದಾರ್ಥ ವಿಹಾರ್ ಟ್ರಸ್ಟ್‌ನ ಅರ್ಜಿ, ಪ್ರಸ್ತಾವನೆಯನ್ನು ಪರಿಗಣಿಸಬಹುದು (may be considered) ಎಂದು ಶಿಫಾರಸ್ಸು ಮಾಡಿತ್ತು. ಈ ಶಿಫಾರಸ್ಸಿನ ಅನ್ವಯವೇ 5 ಎಕರೆ ವಿಸ್ತೀರ್ಣದ ಸಿ ಎ ನಿವೇಶನವನ್ನು ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ 5 ಎಕರೆ ವಿಸ್ತೀರ್ಣದ ಸಿ ಎ ನಿವೇಶನವನ್ನು ಮಂಜೂರು ಮಾಡಿರುವುದು ಅಚ್ಚರಿ ಮೂಡಿಸಿತ್ತು.
ಆನಂದ ಸೋಷಿಯಲ್ ಮತ್ತು ಎಜುಕೇಷನ್ ಟ್ರಸ್ಟ್‌ನ ಟ್ರಸ್ಟಿ ಮಹದೇವಪ್ರಸಾದ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಮಂಡಳಿಯು 2024ರ ಫೆ.23ರಂದು ಸ್ವೀಕರಿಸಿತ್ತು. ಇವರು ಶೈಕ್ಷಣಿಕ ಸಂಸ್ಥೆ ಸಲ್ಲಿಸಲು ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಾಜೆಕ್ಟ್ ರಿಪೋರ್ಟ್ ಸಲ್ಲಿಸಿರಲಿಲ್ಲ. ಭೂಮಿ ಬಳಕೆಯ ನಕ್ಷೆ, ಜಿಎಸ್‌ಟಿಯ ಪ್ರಮಾಣ ಪತ್ರಗಳನ್ನು ಸಲ್ಲಿಸಿರಲಿಲ್ಲ. ದಾಖಲೆಗಳು ಸಾಕಷ್ಟಿಲ್ಲ ಎಂದು ಷರಾ ಬರೆದಿದ್ದರು.
ಇಂಡಸ್ಟ್ರಿಯಲ್ ಫೆಸಲಿಟಿಸ್ ಕಾರ್ಪೋರೇಷನ್‌ನ ಸಿ ಜಿ ಶ್ರೀನಿವಾಸನ್ ಅವರು ಸಲ್ಲಿಸಿದ್ದ ಅರ್ಜಿಯು 2024ರ ಫೆ. 23ರಂದು ಮಂಡಳಿಯು ಸ್ವೀಕರಿಸಿತ್ತು. ಇವರು ಹೌಸಿಂಗ್ ಅಪಾರ್ಟ್‌ಮೆಂಟ್‌ಗಳ ನಿರ್ಮಾಣಕ್ಕೆ 125 ಕೋಟಿ ಬಂಡವಾಳ ಹೂಡಿಕೆ ಪ್ರಸ್ತಾವನೆ ಸಲ್ಲಿಸಿದ್ದರು. 200 ಜನರಿಗೆ ಉದ್ಯೋಗ ನೀಡುವ ಪ್ರಸ್ತಾವನೆಯಲ್ಲಿ ತಿಳಿಸಿದ್ದರು. 125 ಕೋಟಿ ಟರ್ನ್‌ಓವರ್ ಇತ್ತು. ಈ ಪ್ರಸ್ತಾವನೆಯನ್ನು ಪರಿಗಣಿಸಬಹುದು (may be considered) ಎಂದಿತ್ತು.
ಸಿದ್ದಾರ್ಥ ವಿಹಾರ್ ಟ್ರಸ್ಟ್ ನ ಟ್ರಸ್ಟಿ ರಾಹುಲ್ ಖರ್ಗೆ ಅವರು 5 ಎಕರೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ತರಬೇತಿ ಕೇಂದ್ರ ತೆರೆಯಲು ಪ್ರಸ್ತಾವನೆ ಸಲ್ಲಿಸಿದ್ದರು. ಒಟ್ಟು 25 ಕೋಟಿ ಹೂಡಿಕೆ ಮಾಡಲಿದೆ. 150 ಮಂದಿಗೆ ಉದ್ಯೋಗ ನೀಡಲಿದೆ. ಪ್ರಾಜೆಕ್ಟ್ ರಿಪೋರ್ಟ್, ಭೂಮಿ ಬಳಕೆ ನಕ್ಷೆ, ಸಾಮರ್ಥ್ಯಪ್ರಮಾಣ, ಟ್ರಸ್ಟ್ ಡೀಡ್ ಸಲ್ಲಿಸಿದ್ದರು. ಪ್ರವರ್ತಕರು 36.86 ಕೋಟಿ ರು ಗಳನ್ನು ಹೂಡಿಕೆ ಮಾಡಲಿದ್ದಾರೆ. ಒಟ್ಟಾರೆ ನಿವ್ವಳ ಮೌಲ್ಯ 12 ಕೋಟಿ ಇದೆ ಎಂದು ತಿಳಿಸಿತ್ತು. ಆದರೆ ಪ್ಯಾನ್ ಕಾರ್ಡ್ ಸಲ್ಲಿಸಿರಲಿಲ್ಲ. ಇದನ್ನು ಪರಿಗಣಿಸಬಹುದು ಎಂದು ಸಮಿತಿ ಸಭೆಯು ಶಿಫಾರಸ್ಸು ಮಾಡಿತ್ತು.
ಬೆಂಗಳೂರಿನ ಕಲ್ಯಾಣ ನಗರದ ಆಧ್ಯಾ-ಯಾನ ವಿದ್ಯಾ ಟ್ರಸ್ಟ್‌ನ ಟ್ರಸ್ಟ್‌ನ ಮೂರ್ತಿ ಎಲ್ (ಎಂ ಡಿ ಸರ್ಜನ್) ಅವರು ಅರ್ಜಿ ಸಲ್ಲಿಸಿದ್ದರು. ಆಸ್ಪತ್ರೆಗಳ ಅಭಿವೃದ್ಧಿ ಮತ್ತು ಸಂಶೋಧನೆ ಉದ್ದೇಶವನ್ನು ಹೊಂದಿದ್ದರು. ಇವರು ಕಾರ್ಯಕ್ಷೇತ್ರದಲ್ಲಿ 40 ವರ್ಷಗಳ ಅನುಭವ ಇದೆ ಎಂದು ನಮೂದಿಸಿದ್ದರು. ಆದರೆ ಇವರು ಭೂಮಿ ಬಳಕೆಯ ಸ್ಕೆಚ್ ಮತ್ತು ನೆಟ್‌ವರ್ತ್‌ನ ಪ್ರಮಾಣಪತ್ರ ನೀಡಿರಲಿಲ್ಲ. ಆರ್ಥಿಕ ಸಾಮರ್ಥ್ಯ ಗೊತ್ತಿಲ್ಲ ಎಂದು ನಡವಳಿಯಲ್ಲಿ ದಾಖಲಿಸಿತ್ತು.
ಬೆಂಗಳೂರು ಗ್ರಾಮಾಂತರದ ವಿಜಯಪುರದ ಸಿಡ್ವಿನ್ ಡೆವಲಪರ್ಸ್‌ನ ರವೀಶ್ ಕುಮಾರ್ ಎಂ,. 35 ಕೋಟಿ ಹೂಡಿಕೆ ಮಾಡುವ ಪ್ರಸ್ತಾವನೆ ಸಲ್ಲಿಸಿದ್ದರು. 100 ಮಂದಿಗೆ ಉದ್ಯೋಗ ನೀಡಲಾಗುವುದು ಎಂದು ತಿಳಿಸಿದ್ದರು. ಇದೇ ಏರೋಸ್ಪೇಸ್ ಪಾರ್ಕ್‌ನಲ್ಲಿ ರೆಸಿಡೆನ್ಷಿಯಲ್ ಅಪಾರ್ಟ್ ಮೆಂಟ್ ನಿರ್ಮಾಣ ಮಾಡಿದ್ದ ಅನುಭವವಿತ್ತು. ಆದರೆ ಇವರು ಭೂಮಿ ಬಳಕೆಯ ಸ್ಕೆಚ್ ಸಲ್ಲಿಸಿರಲಿಲ್ಲ.
ಬೆಂಗಳೂರಿನ ಬಸವೇಶ್ವರ ನಗರದ ಸಮೃದ್ಧಿ ಎಂಟರ್ ಪ್ರೈಸೆಸ್‌ನ ಪಾಲುದಾರರಾದ ಟಿ ಎಸ್ ಪ್ರಜ್ವಲ್ ಅವರು 75 ಕೋಟಿ ಹೂಡಿಕೆ ಮಾಡುವ ಪ್ರಸ್ತಾವನೆ ಸಲ್ಲಿಸಿದ್ದರು. 418 ಕೋಟಿ ಟರ್ನ್ ಓವರ್ ಇದೆ ಎಂದು ದಾಖಲೆ ಸಲ್ಲಿಸಿದ್ದರು. 5 ವರ್ಷ ಅನುಭವವಿದೆ ಎಂದು ಹೇಳಿದ್ದ ಅವರು ಭೂಮಿ ಬಳಿಕೆಯ ಸ್ಕೆಚ್ ನೀಡಿರಲಿಲ್ಲ ಎಂದು ಷರಾದಲ್ಲಿ ನಮೂದಿಸಿತ್ತು.
ಸಿದ್ಧಾರ್ಥ ವಿಹಾರ್ ಟ್ರಸ್ಟ್‌ನ ಭಾಗವಾಗಿರುವ ಅಂತರಾಷ್ಟ್ರೀಯ ಪಾಲಿ, ಸಂಸ್ಕೃತ, ತೌಲನಿಕ ತತ್ವಶಾಸ್ತ್ರ ಟ್ರಸ್ಟ್‌ಗೆ 19 ಎಕರೆ ವಿಸ್ತೀರ್ಣದ ಜಮೀನನ್ನು ಉಚಿತವಾಗಿ ಮಂಜೂರು ಮಾಡಿರುವುದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇರಲಿಲ್ಲ ಎಂದು ಇಂಡಿಯನ್ ಆಡಿಟ್ ಅಂಡ್ ಅಕೌಂಟೆಂಟ್ ಜನರಲ್ ಅಭಿಪ್ರಾಯಿಸಿದ್ದರು.
ಉಚಿತವಾಗಿ 19 ಎಕರೆ ಮಂಜೂರು; ಸಾರ್ವಜನಿಕ ಹಿತಾಸಕ್ತಿಯಿಲ್ಲ, ನಿಯಮ ಪಾಲನೆಯಾಗಿಲ್ಲವೆಂದ ಎಜಿ
ಸಿದ್ಧಾರ್ಥ ವಿಹಾರ್‍ನ ಟ್ರಸ್ಟ್‌ನ ಭಾಗವಾಗಿರುವ ಅಂತರರಾಷ್ಟ್ರೀಯ ಪಾಲಿ, ಸಂಸ್ಕೃತ ಮತ್ತು ತುಲನಾತ್ಮಕ ತತ್ವಶಾಸ್ತ್ರದ ಟ್ರಸ್ಟ್‌ಗೂ 2016-17ರಲ್ಲೇ ಶೈಕ್ಷಣಿಕ ಉದ್ದೇಶದ ಹೆಸರಿನಲ್ಲಿ ಗುತ್ತಿಗೆ ಆಧಾರದ ಮೇಲೆ 19 ಎಕರೆ ಜಮೀನು ಮಂಜೂರಾಗಿತ್ತು. ನಂತರ ಅಂದಾಜು 40 ಕೋಟಿ ರು ಬೆಲೆಬಾಳುವ ಇದೇ ಜಮೀನನ್ನು ಉಚಿತವಾಗಿ ಮಂಜೂರು ಮಾಡಿ ಆದೇಶ ಹೊರಡಿಸಿತ್ತು.
ಪಾಲಿ, ಸಂಸ್ಕೃತ, ತತ್ವಶಾಸ್ತ್ರದ ಟ್ರಸ್ಟ್‌ಗೂ 19 ಎಕರೆ; ಗುತ್ತಿಗೆ ಆದೇಶ ಮಾರ್ಪಾಡಿಸಿ ಉಚಿತವಾಗಿ ಮಂಜೂರು
ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಕೆಎಐಡಿಬಿಯಿಂದ ಮಂಜೂರಾಗಿದ್ದ 5 ಎಕರೆ ವಿಸ್ತೀರ್ಣದ ಸಿ ಎ ನಿವೇಶನದ ಪ್ರಕರಣವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ರಾಷ್ಟ್ರೋತ್ಥಾನ ಪರಿಷತ್‌ಗೆ ಶೈಕ್ಷಣಿಕ ಉದ್ದೇಶಗಳಿಗಾಗಿ ರಿಯಾಯಿತಿ ದರದಲ್ಲಿ ಜಮೀನುಗಳನ್ನು ನೀಡಿರುವ ಬಗ್ಗೆ ಪ್ರಸ್ತಾಪಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ್ ಖರ್ಗೆ, ಎಂ ಬಿ ಪಾಟೀಲ್ ಅವರು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದರು ಮತ್ತು ಸಿ ಎ ನಿವೇಶನ ಹಂಚಿಕೆಯನ್ನು ಸಮರ್ಥಿಸಿಕೊಂಡಿದ್ದರು.
ಖರ್ಗೆ ಕುಟುಂಬ ಸದಸ್ಯರ ಟ್ರಸ್ಟ್‌ಗೆ 5 ಎಕರೆ ಜಮೀನು; ಅಧಿಕಾರ ದುರುಪಯೋಗ, ಹಿತಾಸಕ್ತಿ ಸಂಘರ್ಷ?
ಇದರ ಪ್ರಕಾರ ಕುಸನೂರು ಗ್ರಾಮದ ಸರ್ವೆ ನಂಬರ್ 88/1ರಲ್ಲಿ ಪಾಲಿ ಮತ್ತು ಸಂಸ್ಕೃತ ಭಾಷೆಗಳ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಅಂತರರಾಷ್ಟ್ರೀಯ ಪಾಲಿ, ಸಂಸ್ಕೃತ ಮತ್ತು ತುಲನಾತ್ಮಕ ತತ್ವಶಾಸ್ತ್ರದ ಟ್ರಸ್ಟ್‌ಗೆ 16.00 ಎಕರೆ ಜಮೀನನ್ನು 30 ವರ್ಷಗಳ ಅವಧಿಗೆ ಪ್ರಚಲಿತ ಮಾರುಕಟ್ಟೆ ಬೆಲೆಯ ಶೇ.10ರಷ್ಟು ಗುತ್ತಿಗೆ ಮೊತ್ತ ನಿಗದಿಪಡಿಸಿತ್ತು. ನಂತರ ಪ್ರತಿ ಎರಡು ವರ್ಷಗಳಿಗೊಮ್ಮೆ ಈ ಗುತ್ತಿಗೆ ಮೊತ್ತವನ್ನು ಶೇ.10ಕ್ಕೆ ಹೆಚ್ಚಿಸುವ ಷರತ್ತಿಗೆ ಒಳಪಟ್ಟು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಿತ್ತು.
ಖರ್ಗೆ ಕುಟುಂಬ ಸದಸ್ಯರ ಟ್ರಸ್ಟ್‌ಗೆ 5 ಎಕರೆ; ರಾಹುಲ್‌ಗಾಂಧಿ, ಸಿಎಂಗೆ 2 ತಿಂಗಳ ಹಿಂದೆಯೇ ಸಲ್ಲಿಕೆಯಾಗಿತ್ತು ದೂರು
ಇದಾದ ನಂತರ ಸಂಸ್ಥೆಯು 2016ರ ಮಾರ್ಚ್‌ಮತ್ತು ಆಗಸ್ಟ್‌ನಲ್ಲಿ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿತ್ತು.
ಖರ್ಗೆ ಕುಟುಂಬ ಸದಸ್ಯರ ಟ್ರಸ್ಟ್‌ಗೆ 5 ಎಕರೆ; ಹಿತಾಸಕ್ತಿ ಸಂಘರ್ಷದ ಕುರಿತು ಉಸಿರೆತ್ತದ ಕಾಂಗ್ರೆಸ್
ಈ ಕೋರಿಕೆಯನ್ನು ಅಂದಿನ ಕಾಂಗ್ರೆಸ್ ಸರ್ಕಾರವು ಪರಿಗಣಿಸಿತ್ತು. ಅದರಂತೆ 2017ರ ಮಾರ್ಚ್ 15ರಂದು ಆದೇಶ ಹೊರಡಿಸಿತ್ತು. ಇದರ ಪ್ರಕಾರ ಸರ್ವೆ ನಂಬರ್ 88/1ರಲ್ಲಿ ಕ್ರಮವಾಗಿ 16 ಎಕರೆ ಮತ್ತು 3 ಎಕರೆ ಸೇರಿ ಒಟ್ಟು 19 ಎಕರೆ ಜಮೀನನ್ನು ಪಾಲಿ ಮತ್ತು ಸಂಸ್ಕೃತ ಭಾಷೆಗಳ ಸಂಶೋಧನಾ ಕೇಂದ್ರ ಸ್ಥಾಪಿಸಲು 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಜಮೀನು ಮಂಜೂರು ಮಾಡಿರುವುದನ್ನು ಮಾರ್ಪಡಿಸಿತ್ತು.
ಆಟೋಮೊಬೈಲ್ ವಲಯದಲ್ಲಿ ಹೂಡಿಕೆ; ಪೂರ್ವಾನುಭವ ದಾಖಲೆಯಿಲ್ಲ, ಪ್ರವರ್ತಕರ ವಿವರಗಳಿಲ್ಲ
ಅಲ್ಲದೇ ನಿಯಮ 23ನ್ನು ಸಡಿಲಿಸಿ ಅಂತರಾಷ್ಟ್ರೀಯ ಪಾಲಿ, ಸಂಸ್ಕೃತ ಮತ್ತು ತುಲನಾತ್ಮಕ ತತ್ವಶಾಸ್ತ್ರದ ಟ್ರಸ್ಟ್‌ಗೆ ಉಚಿತವಾಗಿ ಮಂಜೂರು ಮಾಡಿ ಆದೇಶಿಸಿರುವುದನ್ನು ಸ್ಮರಿಸಬಹುದು.