ಬೆಂಗಳೂರು; ಸಿದ್ಧಾರ್ಥ ವಿಹಾರ್ ಟ್ರಸ್ಟ್‌ನ ಭಾಗವಾಗಿರುವ ಅಂತರಾಷ್ಟ್ರೀಯ ಪಾಲಿ, ಸಂಸ್ಕೃತ, ತೌಲನಿಕ ತತ್ವಶಾಸ್ತ್ರ ಟ್ರಸ್ಟ್‌ಗೆ 19 ಎಕರೆ ವಿಸ್ತೀರ್ಣದ ಜಮೀನನ್ನು ಉಚಿತವಾಗಿ ಮಂಜೂರು ಮಾಡಿರುವುದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇರಲಿಲ್ಲ ಎಂದು ಇಂಡಿಯನ್ ಆಡಿಟ್ ಅಂಡ್ ಅಕೌಂಟೆಂಟ್ ಜನರಲ್ ಅಭಿಪ್ರಾಯಿಸಿದ್ದರು.
ಅಲ್ಲದೇ ಈ ಟ್ರಸ್ಟ್‌ಗೆ 19 ಎಕರೆ ವಿಸ್ತೀರ್ಣದ ಜಮೀನನ್ನು ಮಂಜೂರು ಮಾಡಿರುವ ಪ್ರಕ್ರಿಯೆಯಲ್ಲಿಯೂ 1969ರ ಕರ್ನಾಟಕ ಭೂ ಮಂಜೂರಾತಿ ನಿಯಮ 19 (5) (i) ನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಗುಲ್ಬರ್ಗ ತಾಲೂಕಿನ ಕುಸನೂರು ಗ್ರಾಮದ ಸರ್ವೆ ನಂಬರ್ 88/1ರ 19 ಎಕರೆ ಸರ್ಕಾರಿ ಜಾಗವನ್ನು ಅಂತರರಾಷ್ಟ್ರೀಯ ಪಾಲಿ, ಸಂಸ್ಕೃತ ತೌಲನಿಕ ತತ್ವಶಾಸ್ತ್ರ ಟ್ರಸ್ಟ್ ಗೆ ಉಚಿತವಾಗಿ ಮಂಜೂರು ಮಾಡಿದ್ದ ದಾಖಲೆಗಳು ಮುನ್ನೆಲೆಗೆ ಬಂದ ಹೊತ್ತಿನಲ್ಲಿಯೇ ಇದೇ ಪ್ರಕರಣದಲ್ಲಿ ಇಂಡಿಯನ್ ಆಡಿಟ್ ಅಂಡ್ ಅಕೌಂಟೆಂಟ್ ಜನರಲ್ ವ್ಯಕ್ತಪಡಿಸಿದ್ದ ಹಲವು ಆಕ್ಷೇಪಣೆಗಳೂ ಸಹ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಪಾಲಿ ಮತ್ತು ಸಂಸ್ಕೃತ ಸಂಶೋಧನೆ ಕೇಂದ್ರಕ್ಕೆ 30 ವರ್ಷಗಳ ಕಾಲ ನಿಯಮ 19 ಕೆಎಲ್‌ಜಿ 1969 ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಮಂಜೂರಾಗಿತ್ತು. ಪ್ರಾರಂಭದಲ್ಲಿ 16 ಎಕರೆ ಜಾಗವನ್ನು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲಾಗಿತ್ತು. ಮಾರುಕಟ್ಟೆ ಬೆಲೆಯ ಶೇ.10ರ ದರದಲ್ಲಿ ಈ ಟ್ರಸ್ಟ್‌ಗೆ ಮಂಜೂರಾಗಿತ್ತು. ಪ್ರತಿ ಎರಡು ವರ್ಷಕ್ಕೊಮ್ಮೆ ಶೇ.10ರ ದರ ಹೆಚ್ಚಳದೊಂದಿಗೆ ನೀಡಲಾಗಿತ್ತು. ನಂತರ ಇದೇ ಜಮೀನನ್ನು ಇದೇ ಟ್ರಸ್ಟ್‌ಗೆ ಉಚಿತವಾಗಿ ಮಂಜೂರು ಮಾಡಿ ಆದೇಶವನ್ನು ಮಾರ್ಪಡಿಸಿತ್ತು.
ಅಂದು ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಾರ್ಪಾಡಿಸಿದ್ದ ಈ ಆದೇಶ ಮತ್ತು ಜಮೀನು ಮಂಜೂರಾತಿ ನಡವಳಿಗಳ ಕುರಿತು ಇಂಡಿಯನ್ ಆಡಿಟ್ ಅಂಡ್ ಅಕೌಂಟೆಂಟ್ ಜನರಲ್ ಅವರು ಅವಲೋಕಿಸಿದ್ದರು. ಈ ಸಂಬಂಧ 2017ರ ಜೂನ್ 17ರಂದೇ ಕಲ್ಬುರ್ಗಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಈ ಪತ್ರದ ಪ್ರತಿಯು ‘ದಿ ಫೈಲ್’ ಲಭ್ಯವಾಗಿದೆ.
ಎಜಿ ಅವಲೋಕನದಲ್ಲೇನಿದೆ?
ಸರ್ಕಾರ ಈ ಜಮೀನನ್ನು ಉಚಿತವಾಗಿ ಕೊಡಲು 2014ರ ಮಾರ್ಚ್ 4 ರಂದು ಹೊರಡಿಸಿದ್ದ ಆದೇಶ ಹಾಗೂ 2016ರ ಫೆ.24ರಂದು ಹೊರಡಿಸಿದ್ದ ಆದೇಶಗಳನ್ನು ಮಾರ್ಪಡಿಸಿದೆ. ಆದಾಗ್ಯೂ ಈ ಜಮೀನನ್ನು ಉಚಿತವಾಗಿ ಗುತ್ತಿಗೆ ನೀಡಿದ ಆದೇಶದ ದಿನದವರೆಗೂ ಬಾಡಿಗೆ ಬೇಡಿಕೆ ಬಗ್ಗೆ ಪ್ರಸ್ತಾಪಿಸಿರಲಿಲ್ಲ. ಸರ್ಕಾರದ ಆದೇಶದ ಪ್ರಕಾರ ಜಮೀನಿನ ಬಾಡಿಗೆಯನ್ನು ಸದರಿ ಮಾರುಕಟ್ಟೆ ಬೆಲೆಯ ಅನುಗುಣವಾಗಿ ನಿರ್ಧರಿಸಬೇಕಾಗುತ್ತದೆ ಎಂದು ಉಲ್ಲೇಖಿಸಿರುವುದು ಪತ್ರದಿಂದ ಗೊತ್ತಾಗಿದೆ.
ಆದರೆ ಇಲಾಖೆಯು ಈ ಪ್ರಕರಣದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಮಾರ್ಗಸೂಚಿ ಬೆಲೆಯನ್ನು ಪರಿಗಣಿಸಿತ್ತು. ಮಾರ್ಗಸೂಚಿ ಬೆಲೆಯಾದ ಎಕರೆಗೆ 15,60,000 ರು ಪರಿಗಣಿಸಿದ್ದಾರೆ. ಅದರಂತೆ 16 ಎಕರೆಗೆ 24,60,000 ರು.ಗಳನ್ನು 2014-15 ಸಾಲಿಗೆ ಬಾಡಿಗೆಯನ್ನು ಪಡೆಯಲಾಗಿದೆ ಎಂದು ವಿವರಿಸಿದೆ.
‘ಆದಾಗ್ಯೂ 2015-16, 2016-17ರ ಬಾಡಿಗೆಗಾಗಿ ಒತ್ತಾಯಿಸಿಲ್ಲ. ಅಲ್ಲದೇ 2016-17ರಲ್ಲಿ ಹೆಚ್ಚುವರಿಯಾಗಿ ಮಂಜೂರಾಗಿದ್ದ 3 ಎಕರೆಗೂ ಸಹ ಬಾಡಿಗೆ ಹಣಕ್ಕಾಗಿ ಒತ್ತಾಯಿಸಿಲ್ಲ. ಹೀಗಾಗಿ 66,96,272 ರು.ಗಳು (ಇದರಲ್ಲಿ ಗುತ್ತಿಗೆ ಮೊತ್ತ 57,09,600 ಮತ್ತು ಬಡ್ಡಿ ಹಣ 9,84,672 ರು ಒಳಗೊಂಡಂತೆ) ಪಡೆದಿಲ್ಲ,’ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.
ಪುರಸಭೆಯ ಸರಹದ್ದಿನ ಯಾವುದೇ ಜಾಗವನ್ನು ಮೂಲಭೂತ ಸೌಕರ್ಯಗಳನ್ನು ಹಾಗೂ ಸಾರ್ವಜನಿಕ ಉದ್ದೇಶಗಳಾದ ವಸತಿ, ಪ್ರಾಥಮಿಕ ಶಿಕ್ಷಣ ಮತ್ತು ಇತರೆ ಉದ್ದೇಶಗಳಿಗಾಗಿ ಮೀಸಲಿರಿಸಬೇಕಾಗುತ್ತದೆ. ಆದರೆ ಮೌಲ್ಯಯುತವಾದ ಜಮೀನನ್ನು ಕೇವಲ ಪುರಸಭೆಯ 5 ಕಿ ಮೀ ಒಳಗಿನ ವ್ಯಾಪ್ತಿಯ ಜಾಗವನ್ನು ಪುಕ್ಕಟೆಯಾಗಿ ಸದರಿ ಟ್ರಸ್ಟ್ ಗೆ ನೀಡಲಾಗಿದೆ. ಇದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಉದ್ದೇಶವಿರುವುದಿಲ್ಲ ಎಂದೂ ಪತ್ರದಲ್ಲಿ ಹೇಳಲಾಗಿದೆ.
‘1969ರ ಕರ್ನಾಟಕ ಭೂ ಮಂಜೂರಾತಿ ನಿಯಮ 19 (5) (i) ರ ಪ್ರಕಾರ ಯಾವುದೇ ಸರ್ಕಾರಿ ಜಮೀನನ್ನು ಮಾನ್ಯತೆ ಪಡೆಯದ ಹಾಗೂ ಗುತ್ತಿಗೆ ಅರ್ಜಿ ದಿನಾಂಕದಿಂದ ಹಿಂದಿನ 5 ವರ್ಷಗಳಲ್ಲಿ ಅಸ್ತಿತ್ವದಲ್ಲಿ ಇಲ್ಲದ ಹಾಗೂ ಕ್ಯಾಪಿಟೇಷನ್ ಶುಲ್ಕವನ್ನು ಪಡೆಯುವ ಅಥವಾ ವಿದ್ಯಾಭ್ಯಾಸಕ್ಕಾಗಿ ಇತರೆ ಯಾವುದೇ ಶುಲ್ಕಗಳನ್ನು ಪಡೆಯುವ ಸಂಸ್ಥೆಗಳಿಗೆ ನೀಡುವಂತಿಲ್ಲ,’ ಎಂದು ವಿವರಿಸಿದೆ.
ಆದರೆ ಈ ಪ್ರಕರಣದಲ್ಲಿ 2014ರ ಫೆ.14ರಂದು ಟ್ರಸ್ಟ್ ನೀಡಿದ್ದ ಅರ್ಜಿಯನ್ನು ಪುರಸ್ಕರಿಸಲಾಗಿದೆ. 2014ರ ಮಾರ್ಚ್ 14ರಂದು ಒಂದೇ ತಿಂಗಳಲ್ಲಿ ಉಚಿತವಾಗಿ ಮಂಜೂರು ಮಾಡಲಾಗಿದೆ ಎಂದು ಪತ್ರದಲ್ಲಿ ಪ್ರಸ್ತಾಪಿಸಿರುವುದು ಗೊತ್ತಾಗಿದೆ.
ಸಿದ್ಧಾರ್ಥ ವಿಹಾರ್‍ನ ಟ್ರಸ್ಟ್‌ನ ಭಾಗವಾಗಿರುವ ಅಂತರರಾಷ್ಟ್ರೀಯ ಪಾಲಿ, ಸಂಸ್ಕೃತ ಮತ್ತು ತುಲನಾತ್ಮಕ ತತ್ವಶಾಸ್ತ್ರದ ಟ್ರಸ್ಟ್‌ಗೂ 2016-17ರಲ್ಲೇ ಶೈಕ್ಷಣಿಕ ಉದ್ದೇಶದ ಹೆಸರಿನಲ್ಲಿ ಗುತ್ತಿಗೆ ಆಧಾರದ ಮೇಲೆ 19 ಎಕರೆ ಜಮೀನು ಮಂಜೂರಾಗಿತ್ತು. ನಂತರ ಅಂದಾಜು 40 ಕೋಟಿ ರು ಬೆಲೆಬಾಳುವ ಇದೇ ಜಮೀನನ್ನು ಉಚಿತವಾಗಿ ಮಂಜೂರು ಮಾಡಿ ಆದೇಶ ಹೊರಡಿಸಿತ್ತು.
ಪಾಲಿ, ಸಂಸ್ಕೃತ, ತತ್ವಶಾಸ್ತ್ರದ ಟ್ರಸ್ಟ್‌ಗೂ 19 ಎಕರೆ; ಗುತ್ತಿಗೆ ಆದೇಶ ಮಾರ್ಪಾಡಿಸಿ ಉಚಿತವಾಗಿ ಮಂಜೂರು
ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಕೆಎಐಡಿಬಿಯಿಂದ ಮಂಜೂರಾಗಿದ್ದ 5 ಎಕರೆ ವಿಸ್ತೀರ್ಣದ ಸಿ ಎ ನಿವೇಶನದ ಪ್ರಕರಣವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ರಾಷ್ಟ್ರೋತ್ಥಾನ ಪರಿಷತ್‌ಗೆ ಶೈಕ್ಷಣಿಕ ಉದ್ದೇಶಗಳಿಗಾಗಿ ರಿಯಾಯಿತಿ ದರದಲ್ಲಿ ಜಮೀನುಗಳನ್ನು ನೀಡಿರುವ ಬಗ್ಗೆ ಪ್ರಸ್ತಾಪಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ್ ಖರ್ಗೆ, ಎಂ ಬಿ ಪಾಟೀಲ್ ಅವರು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದರು ಮತ್ತು ಸಿ ಎ ನಿವೇಶನ ಹಂಚಿಕೆಯನ್ನು ಸಮರ್ಥಿಸಿಕೊಂಡಿದ್ದರು.
ಖರ್ಗೆ ಕುಟುಂಬ ಸದಸ್ಯರ ಟ್ರಸ್ಟ್‌ಗೆ 5 ಎಕರೆ ಜಮೀನು; ಅಧಿಕಾರ ದುರುಪಯೋಗ, ಹಿತಾಸಕ್ತಿ ಸಂಘರ್ಷ?
ಇದರ ಪ್ರಕಾರ ಕುಸನೂರು ಗ್ರಾಮದ ಸರ್ವೆ ನಂಬರ್ 88/1ರಲ್ಲಿ ಪಾಲಿ ಮತ್ತು ಸಂಸ್ಕೃತ ಭಾಷೆಗಳ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಅಂತರರಾಷ್ಟ್ರೀಯ ಪಾಲಿ, ಸಂಸ್ಕೃತ ಮತ್ತು ತುಲನಾತ್ಮಕ ತತ್ವಶಾಸ್ತ್ರದ ಟ್ರಸ್ಟ್‌ಗೆ 16.00 ಎಕರೆ ಜಮೀನನ್ನು 30 ವರ್ಷಗಳ ಅವಧಿಗೆ ಪ್ರಚಲಿತ ಮಾರುಕಟ್ಟೆ ಬೆಲೆಯ ಶೇ.10ರಷ್ಟು ಗುತ್ತಿಗೆ ಮೊತ್ತ ನಿಗದಿಪಡಿಸಿತ್ತು. ನಂತರ ಪ್ರತಿ ಎರಡು ವರ್ಷಗಳಿಗೊಮ್ಮೆ ಈ ಗುತ್ತಿಗೆ ಮೊತ್ತವನ್ನು ಶೇ.10ಕ್ಕೆ ಹೆಚ್ಚಿಸುವ ಷರತ್ತಿಗೆ ಒಳಪಟ್ಟು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಿತ್ತು.
ಖರ್ಗೆ ಕುಟುಂಬ ಸದಸ್ಯರ ಟ್ರಸ್ಟ್‌ಗೆ 5 ಎಕರೆ; ರಾಹುಲ್‌ಗಾಂಧಿ, ಸಿಎಂಗೆ 2 ತಿಂಗಳ ಹಿಂದೆಯೇ ಸಲ್ಲಿಕೆಯಾಗಿತ್ತು ದೂರು
ಇದಾದ ನಂತರ ಸಂಸ್ಥೆಯು 2016ರ ಮಾರ್ಚ್‌ಮತ್ತು ಆಗಸ್ಟ್‌ನಲ್ಲಿ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿತ್ತು.
ಖರ್ಗೆ ಕುಟುಂಬ ಸದಸ್ಯರ ಟ್ರಸ್ಟ್‌ಗೆ 5 ಎಕರೆ; ಹಿತಾಸಕ್ತಿ ಸಂಘರ್ಷದ ಕುರಿತು ಉಸಿರೆತ್ತದ ಕಾಂಗ್ರೆಸ್
ಈ ಕೋರಿಕೆಯನ್ನು ಅಂದಿನ ಕಾಂಗ್ರೆಸ್ ಸರ್ಕಾರವು ಪರಿಗಣಿಸಿತ್ತು. ಅದರಂತೆ 2017ರ ಮಾರ್ಚ್ 15ರಂದು ಆದೇಶ ಹೊರಡಿಸಿತ್ತು. ಇದರ ಪ್ರಕಾರ ಸರ್ವೆ ನಂಬರ್ 88/1ರಲ್ಲಿ ಕ್ರಮವಾಗಿ 16 ಎಕರೆ ಮತ್ತು 3 ಎಕರೆ ಸೇರಿ ಒಟ್ಟು 19 ಎಕರೆ ಜಮೀನನ್ನು ಪಾಲಿ ಮತ್ತು ಸಂಸ್ಕೃತ ಭಾಷೆಗಳ ಸಂಶೋಧನಾ ಕೇಂದ್ರ ಸ್ಥಾಪಿಸಲು 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಜಮೀನು ಮಂಜೂರು ಮಾಡಿರುವುದನ್ನು ಮಾರ್ಪಡಿಸಿತ್ತು.
ಆಟೋಮೊಬೈಲ್ ವಲಯದಲ್ಲಿ ಹೂಡಿಕೆ; ಪೂರ್ವಾನುಭವ ದಾಖಲೆಯಿಲ್ಲ, ಪ್ರವರ್ತಕರ ವಿವರಗಳಿಲ್ಲ
ಅಲ್ಲದೇ ನಿಯಮ 23ನ್ನು ಸಡಿಲಿಸಿ ಅಂತರಾಷ್ಟ್ರೀಯ ಪಾಲಿ, ಸಂಸ್ಕೃತ ಮತ್ತು ತುಲನಾತ್ಮಕ ತತ್ವಶಾಸ್ತ್ರದ ಟ್ರಸ್ಟ್‌ಗೆ ಉಚಿತವಾಗಿ ಮಂಜೂರು ಮಾಡಿ ಆದೇಶಿಸಿರುವುದನ್ನು ಸ್ಮರಿಸಬಹುದು.