Wednesday | July 15, 2026 |

ಕಂಪ್ಯೂಟರ್‍‌ ಹಗರಣ; ದುಪ್ಪಟ್ಟು ದರದಲ್ಲಿ ಖರೀದಿ, 1.35 ಕೋಟಿ ನಷ್ಟ, ಎ ಜಿ ಪತ್ರವನ್ನೇ ಮುಚ್ಚಿಟ್ಟ ಭ್ರಷ್ಟಕೂಟ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಕ್ತ ಮಾರುಕಟ್ಟೆಯ ದರಕ್ಕಿಂತಲೂ ದುಪ್ಪಟ್ಟು ದರವನ್ನು ತೆತ್ತು 418 ಕಂಪ್ಯೂಟರ್‍‌ ಮತ್ತು 102 ಪ್ರಿಂಟರ್‍‌ಗಳನ್ನು ಖರೀದಿ ಮಾಡಲಾಗಿತ್ತು. ಈ ಸಂಬಂಧ ಖಾಸಗಿ ಕಂಪನಿಗೆ 1.35 ಕೋಟಿಯಷ್ಟು ಹೆಚ್ಚುವರಿ ದರ ಪಾವತಿಸಲಾಗಿತ್ತು. ಇದಕ್ಕೆ  ಆಕ್ಷೇಪಣೆ ಎತ್ತಿ  ವಿವರಣೆ ಕೇಳಿದ್ದ ಮಹಾಲೇಖಪಾಲರ ಟಿಪ್ಪಣಿಯನ್ನೇ ಭ್ರಷ್ಟ ಅಧಿಕಾರಿಗಳ ಕೂಟವು ಮುಚ್ಚಿಟ್ಟಿರುವುದು ಇದೀಗ ಬಹಿರಂಗವಾಗಿದೆ.

 

ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಲವು ಅಕ್ರಮ ಮತ್ತು ಹಗರಣಗಳ ಕುರಿತಾಗಿ ಸಚಿವ ಸಂಪುಟ ಉಪ ಸಮಿತಿ ರಚಿಸಿರುವ ಬೆನ್ನಲ್ಲೇ ಬಿ ಶ್ರೀರಾಮುಲು ಅವರು ಸಾರಿಗೆ ಸಚಿವರಾಗಿದ್ದ ಅವಧಿಯಲ್ಲಿನ ಕಂಪ್ಯೂಟರ್‍‌ ಖರೀದಿ ಅಕ್ರಮವು ಮುನ್ನೆಲೆಗೆ ಬಂದಿದೆ.

 

ದುಪ್ಪಟ್ಟು ದರದಲ್ಲಿ ಕಂಪ್ಯೂಟರ್‍‌ ಮತ್ತು ಪ್ರಿಂಟರ್‍‌ಗಳನ್ನು ಖರೀದಿಸಿರುವ ಸಂಬಂಧದ ಸಮಗ್ರ ದಾಖಲೆಗಳು ಮತ್ತು ಮಹಾಲೇಖಪಾಲರ ಟಿಪ್ಪಣಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕಂಪ್ಯೂಟರ್‍‌ ಮತ್ತು ಪ್ರಿಂಟರ್‍‌ಗಳನ್ನು ಮಾರುಕಟ್ಟೆ ದರಕ್ಕಿಂತಲೂ ಹೆಚ್ಚುವರಿ ದರದಲ್ಲಿ ಖರೀದಿ ಮಾಡಿರುವ ಪ್ರಕರಣದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳ ಭ್ರಷ್ಟ ಕೂಟವು, ಮಹಾಲೇಖಪಾಲರ ಟಿಪ್ಪಣಿಯನ್ನು ಹಾಲಿ ಸಚಿವ ರಾಮಲಿಂಗಾರೆಡ್ಡಿ ಮತ್ತು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಅವರ ಗಮನಕ್ಕೂ ತಂದಿಲ್ಲ. ಬದಲಾಗಿ ಟಿಪ್ಪಣಿಯನ್ನೇ ಮುಚ್ಚಿಟ್ಟಿದೆ ಎಂದು ಗೊತ್ತಾಗಿದೆ.

 

418 ಕಂಪ್ಯೂಟರ್‍‌ ಮತ್ತು 102 ಪ್ರಿಂಟರ್‍‌ಗಳ ಖರೀದಿ ಸಂಬಂಧ ಪಾವತಿಯಾಗಿರುವ ದುಪ್ಪಟ್ಟು ದರವನ್ನು ಹೆಚ್ಚುವರಿ ವೆಚ್ಚವೆಂದು ಮಹಾಲೇಖಪಾಲರ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ. ಕಂಪ್ಯೂಟರ್‍‌ವೊಂದಕ್ಕೆ ಮಾರುಕಟ್ಟೆಯಲ್ಲಿ 85,000 ರು ದರವಿದೆ. ಆದರೂ ಸಾರಿಗೆ ಇಲಾಖೆಯ ಭ್ರಷ್ಟ ಅಧಿಕಾರಿಗಳು ಕಂಪ್ಯೂಟರ್‍‌ವೊಂದಕ್ಕೆ 1,27, 858 ರು. (i7) ಮತ್ತು 1,09, 501 ರು ದರದಲ್ಲಿ (i5) ಖರೀದಿಸಿರುವುದು ಎಜಿ ಟಿಪ್ಪಣಿಯಿಂದ ತಿಳಿದು ಬಂದಿದೆ.

 

 

ಅಂದರೇ ಕಂಪ್ಯೂಟರ್‍‌ವೊಂದಕ್ಕೆ ಹೆಚ್ಚುವರಿಯಾಗಿ 42,000 ರು. ನೀಡಿದಂತಾಗಿದೆ. ಒಟ್ಟಾರೆ ಕಂಪ್ಯೂಟರ್‍‌ ಮತ್ತು ಪ್ರಿಂಟರ್‍‌ಗಳಿಗೆ ಮಾರುಕಟ್ಟೆಗಿಂತಲೂ ಹೆಚ್ಚಿನ ದರ ನೀಡಿರುವುದರಿಂದ ಒಟ್ಟಾರೆ 1.35 ಕೋಟಿಯಷ್ಟು ಆರ್ಥಿಕ ನಷ್ಟವಾಗಿದೆ ಎಂದು ಎಜಿ ಆಕ್ಷೇಪಣೆಯ ಟಿಪ್ಪಣಿಯಿಂದ  ಗೊತ್ತಾಗಿದೆ.

 

 

ಪ್ರಕರಣದ ವಿವರ

 

ಸಾರಿಗೆ ಆಯುಕ್ತರ ಕಚೇರಿ ಸೇರಿದಂತೆ ಇಲಾಖೆಯ ಎಲ್ಲಾ ಅಧೀನ ಕಚೇರಿಗಳಲ್ಲಿ ಇ-ಆಫೀಸ್‌ ಅನುಷ್ಟಾನಗೊಳಿಸುವ ಉದ್ದೇಶದಿಂದ i7-30 ಮಾದರಿಯ 88, i5-388 ಮಾದರಿ ಸೇರಿದಂತೆ ಒಟ್ಟು 432 ಕಂಪ್ಯೂಟರ್‍‌ ಮತ್ತು ಹೆಚ್‌ ಪಿ ಲೇಸರ್‍‌ ಜೆಟ್‌ ಪಿ 1108/1050 ಪ್ಲಸ್‌ ಮಾದರಿಯ ಪ್ರಿಂಟರ್‍‌ಗಳನ್ನು ಖರೀದಿಸಲು ಸಾರಿಗೆ ಆಯುಕ್ತರು ಕೋರಿದ್ದರು. ಇದರಲ್ಲಿ  i7-30 ಮಾದರಿಯ ಕಂಪ್ಯೂಟರ್‍‌ವೊಂದಕ್ಕೆ 1,00,000 ರು., i 5 ಮಾದರಿ ಕಂಪ್ಯೂಟರ್‍‌ಗೆ 70,000 ರು ವೆಚ್ಚವಾಗಲಿದೆ ಎಂದು ದರವನ್ನು ನಮೂದಿಸಿದ್ದರು.

 

 

 

ಸಾರಿಗೆ ಆಯುಕ್ತರು ತಿಳಿಸಿದ್ದ ವೆಚ್ಚಕ್ಕಿಂತಲೂ ಹೆಚ್ಚಿನ ದರವನ್ನೂ ಪಾವತಿಸಿತ್ತು. i 7 ಮಾದರಿಯ ಕಂಪ್ಯೂಟರ್‍‌ಗೆ   1,27, 858 ರು.,   i5-388 ಮಾದರಿಯ ಕಂಪ್ಯೂಟರ್‍‌ವೊಂದಕ್ಕೆ 1,09,501 ರು (ತೆರಿಗೆ ಸೇರಿ)  ಒಟ್ಟಾರೆ 418 ಕಂಪ್ಯೂಟರ್‍‌, ಪ್ರಿಂಟರ್‍‌ವೊಂದಕ್ಕೆ 32,443 ರು ದರದಲ್ಲಿ 106 ಪ್ರಿಂಟರ್‍‌ಗಳಿಗೆ 29,14,371 ರು ಸೇರಿದಂತೆ ಒಟ್ಟಾರೆ 4,97,61,086.00 ರು. ವೆಚ್ಚ ಮಾಡಲಾಗಿತ್ತು.

 

ಸಾರಿಗೆ ಆಯುಕ್ತರ ಪ್ರಸ್ತಾವನೆ ಪ್ರಕಾರ  ಪ್ರಿಂಟರ್‍‌ವೊಂದಕ್ಕೆ 25,000 ರು. ದರದಲ್ಲಿ ಒಟ್ಟು 1,17, 25,000 ರು. ಸೇರಿ ಒಟ್ಟಾರೆ 5,07,65,000 ರು. ಗಳ  ಅನುದಾನ ಕೋರಿತ್ತು. ಈ ವೆಚ್ಚವನ್ನು ಆಧುನೀಕರಣ ಅಡಿಯಲ್ಲಿ ಭರಿಸಿತ್ತು. ಈ ಸಂಬಂಧ 2022ರ ನವೆಂಬರ್‍‌ 24ರಂದು ಸಾರಿಗೆ ಇಲಾಖೆಯ ಸಾರಿಗೆ ಮತ್ತು ರಸ್ತೆ ಸುರಕ್ಷತೆಯ ಆಯುಕ್ತರು ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು.

 

ಗಣಕ ಯಂತ್ರ ಮತ್ತು ಪ್ರಿಂಟರ್‍‌ಗಳನ್ನು ಖರೀದಿ ಮಾಡಲು ಜೆಮ್‌ ಪೋರ್ಟ್‌ಲ್‌ ಮೂಲಕ 2023ರ ಫೆ.20ರಂದು ಟೆಂಡರ್‍‌ ಕರೆಯಲಾಗಿತ್ತು. ಈ ಸಂಬಂಧ 2023ರ ಮಾರ್ಚ್‌ 8ರಂದು ನಡೆದಿದ್ದ ಟೆಂಡರ್‍‌ ಪರಿಶೀಲನ ಸಭೆ ನಡೆದಿತ್ತು. ಈ ಸಭೆಯಲ್ಲಿ ಹೆಚ್ಚುವರಿ ಸಾರಿಗೆ ಆಯುಕ್ತ ಉಮಾಶಂಕರ್‍‌ ಬಿ ಪಿ, ಸಿ ಮಲ್ಲಿಕಾರ್ಜುನ, ಜಂಟಿ ಸಾರಿಗೆ ಆಯುಕ್ತರಾದ ಓಂಕಾರೇಶ್ವರಿ ಭಾಗವಹಿಸಿದ್ದರು ಎಂಬುದು ಗೊತ್ತಾಗಿದೆ.

 

 

ಈ ಟೆಂಡರ್‍‌ನಲ್ಲಿ ಬಿಗ್‌ ಸಿ ಟೆಕ್ನಾಲಜೀಸ್‌ ಪ್ರೈವೈಟ್‌ ಲಿಮಿಟೆಡ್‌, ಮ್ಯಾಟ್ರಿಕ್ಸ್‌ ಸಿಸ್ಟಂ, ಸೂಪಿರಿಯರ್‍‌ ಡಿಜಿಟಲ್‌ ಪ್ರೈವೈಟ್‌ ಲಿಮಿಟೆಡ್‌, ವಂಟೇಜ್‌ ನೆಟ್‌ವರ್ಕ್‌ ಸೊಲ್ಯುಷನ್ಸ್‌ ಬಿಡ್ ಮಾಡಿದ್ದವು.

 

ಈ ದಾಖಲೆಗಳನ್ನು ಟೆಂಡರ್‍‌ ಪರಿಶೀನಾ ಸಮಿತಿಯು ಪರಿಶೀಲಿಸಿತ್ತು. ಅದರಲ್ಲಿ ಮ್ಯಾಟ್ರಿಕ್ಸ್‌ ಸಿಸ್ಟಂ ಸಲ್ಲಿಸಿದ್ದ ನೋಂದಣಿ ಪ್ರಮಾಣ ಪತ್ರದ ಚಾಲ್ತಿ ಅವಧಿಯು ಮುಗಿದಿತ್ತು. ವಂಟೇಜ್‌ ನೆಟ್‌ವರ್ಕ್‌ ಸೊಲ್ಯುಷನ್ಸ್‌ ಸಂಸ್ಥೆಯು ಕ್ರಮ ಸಂಖ್ಯೆ 07 ಮತ್ತು 13ರಲ್ಲಿ ನಿಗದಿಪಡಿಸಿದ್ದ ಮಾನದಂಡಗಳ ಅನ್ವಯ ದಾಖಲೆಗಳನ್ನು ಸಲ್ಲಿಸಿರಲಿಲ್ಲ. ಆದ್ದರಿಂದ ಈ ಎರಡೂ ಸಂಸ್ಥೆಗಳನ್ನು ಟೆಂಡರ್‍‌ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗಿತ್ತು ಎಂಬುದು ಗೊತ್ತಾಗಿದೆ.

 

 

ನಂತರ ಬಿಗ್‌ ಸಿ ಟೆಕ್ನಾಲಜೀಸ್‌ ಪ್ರೈವೈಟ್‌ ಲಿಮಿಟೆಡ್‌ ಮತ್ತು ಸೂಪಿರಿಯರ್‍‌ ಡಿಜಿಟಲ್‌ ಪ್ರೈವೈಟ್‌ ಲಿಮಿಟೆಡ್‌ ಮಾನದಂಡಗಳ ಅನ್ವಯ ದಾಖಲೆಗಳನ್ನು ಸಲ್ಲಿಸಿತ್ತು. ಈ ಎರಡೂ ಸಂಸ್ಥೆಗಳೂ ತಾಂತ್ರಿಕ ಬಿಡ್‌ನಲ್ಲಿ ಅರ್ಹತೆ ಪಡೆದಿದ್ದವು.

 

ಈ ಪೈಕಿ ರಾಜ್ಯದ ಬೆಂಗಳೂರು ನಗರ ಸೇರಿದಂತೆ ಒಟ್ಟು 89 ಕಚೇರಿಗಳಿಗೆ 418 ಕಂಪ್ಯೂಟರ್‍‌ ಮತ್ತು 106 ಪ್ರಿಂಟರ್‍‌ಗಳನ್ನು ಪೂರೈಕೆ ಮಾಡಲು 2023ರ ಮಾರ್ಚ್‌ 27ರಂದು ಸೂಪಿರಿಯರ್‍‌ ಡಿಜಿಟಲ್‌ ಪ್ರೈವೈಟ್‌ ಲಿಮಿಟೆಡ್‌ಗೆ ಜೆಮ್‌ ಪೋರ್ಟಲ್‌ ಮೂಲಕ ಸರಬರಾಜು ಆದೇಶ ಹೊರಡಿಸಿತ್ತು.

 

 

ಎಲ್ಲಾ ಅಧೀನ ಕಚೇರಿಗಳಿಗೆ ಖರೀದಿಸಿದ್ದ ಕಂಪ್ಯೂಟರ್‍‌ ಮತ್ತು ಪ್ರಿಂಟರ್‍‌ಗಳನ್ನು ವೈಷ್ಣವಿ ಎಂಟರ್‍‌ ಪ್ರೈಸೆಸ್‌ನಿಂದ ತಪಾಸಣೆ ನಡೆಸಿತ್ತು. ಇದಕ್ಕಾಗಿ 1,85,319 ರು.ಗಳನ್ನು ಪಾವತಿಸಲಾಗಿತ್ತು. ಈ ಹಣವನ್ನು ಪಾವತಿಸಲು 2023ರ ಮಾರ್ಚ್‌ 30ರಂದು ಸಾರಿಗೆ ಇಲಾಖೆಯು ಅಧಿಕೃತ ಜ್ಞಾಪನ ಪತ್ರ ಹೊರಡಿಸಿತ್ತು.

 

2023ರ ಫೆ.7ರಂದು 520 ಕಂಪ್ಯೂಟರ್‍‌ ಮತ್ತು 469 ಪ್ರಿಂಟರ್‍‌ಗಳನ್ನು 4.99 ಕೋಟಿ ರು. ವೆಚ್ಚದಲ್ಲಿ ಖರೀದಿಸಲು ಹೆಚ್ಚುವರಿ ಅನುದಾನವನ್ನು ಸಾರಿಗೆ ಇಲಾಖೆ ಆಯುಕ್ತರು ಕೋರಿದ್ದರು. ಸಾರಿಗೆ ಇಲಾಖೆಗಳ ಪ್ರಾದೇಶಿಕ ಕಚೇರಿಗಳು ಕಂಪ್ಯೂಟರ್‍‌ ಮತ್ತು ಪ್ರಿಂಟರ್‍‌ಗಳನ್ನು ಅಳವಡಿಸಲಾಗಿದೆ ಎಂದು 2023ರ ಏಪ್ರಿಲ್‌ನಲ್ಲಿ ಆಯುಕ್ತರಿಗೆ ಪತ್ರವನ್ನೂ ಬರೆದಿದ್ದರು.

Hot this week

ಕಲ್ಲು ಸಕ್ಕರೆ, ಖರ್ಜೂರ ಪ್ರಸಾದ; ದುಪ್ಪಟ್ಟು ದರದಲ್ಲಿ ಮಾರಾಟ, ಭಕ್ತರಿಗೆ ಅನಗತ್ಯ ಆರ್ಥಿಕ ಹೊರೆ, ನ್ಯಾಯಾಲಯ ಆದೇಶವೂ ಉಲ್ಲಂಘನೆ

ಬೆಂಗಳೂರು; ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಪ್ರಾಧಿಕಾರವು ನಿಗದಿತ ದರಕ್ಕಿಂತಲೂ ಹೆಚ್ಚುವರಿ ಅಂದರೇ...

ನ್ಯಾಕ್‌, ಎನ್‌ಐಆರ್‍‌ಎಫ್‌ ಮಾನದಂಡ; ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟ ಆತಂಕದ ಪ್ರವೃತ್ತಿ, ಆಯೋಗ ಕಳವಳ

ಬೆಂಗಳೂರು; ನ್ಯಾಕ್‌ ಮತ್ತು ಎನ್‌ಐಆರ್‍‌ಎಫ್‌ ಪ್ರಕಾರ ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟವು...

ಎಬಿ-ಎಆರ್‍‌ಕೆ ಯೋಜನೆಯಲ್ಲಿ ಅಕ್ರಮ; ಜಿಮ್ಸ್‌ ಸಿಬ್ಬಂದಿ, ಖಾಸಗಿ ಆಸ್ಪತ್ರೆ ಶಾಮೀಲು, ರಾಜೀನಾಮೆ ನೀಡಿದ್ದ ವೈದ್ಯರ ಹೆಸರಿನಲ್ಲೂ ನಕಲಿ ಓಆರ್‍‌ಎಸ್‌ ಸೃಜನೆ; ತನಿಖಾ ವರದಿ

ಬೆಂಗಳೂರು; ಆಯುಷ್ಮಾನ್‌ ಭಾರತ್ ಮತ್ತು  ಎಆರ್‍‌ಕೆ ಯೋಜನೆಯಡಿಯಲ್ಲಿ  ಕಲ್ಬುರ್ಗಿ ಜಿಲ್ಲಾ  ಆಸ್ಪತ್ರೆಯಿಂದ...
Please Scan to make Your Contribution

Topics

ಕಲ್ಲು ಸಕ್ಕರೆ, ಖರ್ಜೂರ ಪ್ರಸಾದ; ದುಪ್ಪಟ್ಟು ದರದಲ್ಲಿ ಮಾರಾಟ, ಭಕ್ತರಿಗೆ ಅನಗತ್ಯ ಆರ್ಥಿಕ ಹೊರೆ, ನ್ಯಾಯಾಲಯ ಆದೇಶವೂ ಉಲ್ಲಂಘನೆ

ಬೆಂಗಳೂರು; ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಪ್ರಾಧಿಕಾರವು ನಿಗದಿತ ದರಕ್ಕಿಂತಲೂ ಹೆಚ್ಚುವರಿ ಅಂದರೇ...

ನ್ಯಾಕ್‌, ಎನ್‌ಐಆರ್‍‌ಎಫ್‌ ಮಾನದಂಡ; ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟ ಆತಂಕದ ಪ್ರವೃತ್ತಿ, ಆಯೋಗ ಕಳವಳ

ಬೆಂಗಳೂರು; ನ್ಯಾಕ್‌ ಮತ್ತು ಎನ್‌ಐಆರ್‍‌ಎಫ್‌ ಪ್ರಕಾರ ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟವು...

ಜಿಎಸ್‌ಡಿಪಿ 23,34,000 ಕೋಟಿ, ಉನ್ನತ ಶಿಕ್ಷಣಕ್ಕಾಗಿ ಕೇವಲ 5,646 ಕೋಟಿ ರು ಖರ್ಚು; ಇತರೆ ರಾಜ್ಯಗಳಿಗಿಂತ ಕೆಳಗಿಳಿದ ಕರ್ನಾಟಕ

ಬೆಂಗಳೂರು; ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದ ಮೊದಲನೇ ಆರ್ಥಿಕ...

Related Articles

Popular Categories

error: Content is protected !!