ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ 5 ಎಕರೆ; ಪ್ಯಾನ್‌ಕಾರ್ಡ್‌ ಸಲ್ಲಿಸದಿದ್ದರೂ ಪ್ರಸ್ತಾವನೆ ಪರಿಗಣಿಸಲು ಶಿಫಾರಸ್ಸು

ಬೆಂಗಳೂರು;  ಹೈಟೆಕ್‌ ಡಿಫೆನ್ಸ್‌ ಮತ್ತು ಏರೋ ಸ್ಪೇಸ್‌ ಪಾರ್ಕ್‌ನಲ್ಲಿ ಐದು ಎಕರೆ ವಿಸ್ತೀರ್ಣದ ಸಿ ಎ ನಿವೇಶನ ಮಂಜೂರು ಮಾಡಿಸಿಕೊಂಡಿರುವ ಸಿದ್ದಾರ್ಥ ವಿಹಾರ್‍‌ ಟ್ರಸ್ಟ್‌, ಪ್ರಸ್ತಾವನೆ ಮತ್ತು  ಅರ್ಜಿಯೊಂದಿಗೆ ಅತಿ ಮುಖ್ಯವಾದ ಪ್ಯಾನ್‌ ಕಾರ್ಡ್‌ನ್ನೇ ಕೆಐಎಡಿಬಿಗೆ ನೀಡಿರಲಿಲ್ಲ. ಆದರೂ ಸಚಿವ ಎಂ ಬಿ ಪಾಟೀಲ್‌ ಅವರ ಅಧ್ಯಕ್ಷತೆಯಲ್ಲಿದ್ದ ಏಕಗವಾಕ್ಷಿ ಸಮಿತಿಯು ಈ ಟ್ರಸ್ಟ್‌ನ ಪ್ರಸ್ತಾವನೆಯನ್ನು ಪರಿಗಣಿಸಬಹುದು ಎಂದು ಶಿಫಾರಸ್ಸು ಮಾಡಿತ್ತು.

 

ಸಿದ್ದಾರ್ಥ ವಿಹಾರ್‍‌ ಟ್ರಸ್ಟ್‌ಗೆ 5 ಎಕರೆ ವಿಸ್ತೀರ್ಣದ ಸಿ ಎ ನಿವೇಶನ ಮಂಜೂರಾಗಿರುವ ಪ್ರಕರಣವು ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ರಾಜ್ಯಪಾಲರು ವಿವರಣೆ ಕೇಳಿದ್ದಾರೆ. ಈ ಬೆಳವಣಿಗೆಗಳ ಮಧ್ಯೆಯೇ  ಈ ಟ್ರಸ್ಟ್‌, ಪ್ರಸ್ತಾವನೆಯೊಂದಿಗೆ ಪ್ಯಾನ್‌ ಕಾರ್ಡ್‌ನ್ನೇ ನೀಡಿರಲಿಲ್ಲ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.

 

ಇದಕ್ಕೆ ಸಂಬಂಧಿಸಿದಂತೆ ಕೆಐಎಡಿಬಿಯ ಏಕಗವಾಕ್ಷಿ ಸಮಿತಿ ಸಭೆಯ ನಡವಳಿಯ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಕಳೆದ ವರ್ಷದಲ್ಲಿ ಐದು ಲಕ್ಷಕ್ಕಿಂತ ಅಧಿಕ ವಹಿವಾಟು ನಡೆದಿದ್ದರೆ ಪ್ಯಾನ್ ಕಾರ್ಡ್‌ ಸಲ್ಲಿಸುವುದು ಮುಖ್ಯವಾಗಿದೆ. ಇನ್ನು ಎಲ್ಲಾ ಹಣಕಾಸು ವಹಿವಾಟಿಗೂ ಕೂಡಾ ಪ್ಯಾನ್ ಕಾರ್ಡ್ ಕಡ್ಡಾಯವೂ ಹೌದು. ಅದರಲ್ಲೂ ಮುಖ್ಯವಾಗಿ ಟ್ರಸ್ಟ್‌ಗಳಿಗೂ ಕೂಡಾ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಆದರೆ ಸಿದ್ದಾರ್ಥ ವಿಹಾರ್‍‌ ಟ್ರಸ್ಟ್‌, ಹೈಟೆಕ್‌ ಡಿಫೆನ್ಸ್‌ ಮತ್ತು ಏರೋಸ್ಪೇಸ್‌ ಪಾರ್ಕ್‌ನಲ್ಲಿ ಎಕ್ಸ್‌ಲೆನ್ಸ್‌ ಸೆಂಟರ್‍‌ ತೆರೆಯಲು 25 ಕೋಟಿ ಹೂಡಿಕೆ ಮಾಡುವ ಪ್ರಸ್ತಾವನೆಯಲ್ಲಿ ಪ್ಯಾನ್‌ ಕಾರ್ಡ್‌ ಸಲ್ಲಿಸಿರಲಿಲ್ಲ. ಆದರೂ ಈ ಟ್ರಸ್ಟ್‌ನ ಪ್ರಸ್ತಾವನೆಯನ್ನು ಪರಿಗಣಿಸಬಹುದು ಎಂದು ಶಿಫಾರಸ್ಸು ಮಾಡಿತ್ತು.

 

6 ಅರ್ಜಿಗಳು ಸಲ್ಲಿಕೆ

 

ಇದೇ ಹೈಟೆಕ್‌ ಡಿಫೆನ್ಸ್‌ ಮತ್ತು ಏರೋಸ್ಪೇಸ್‌ ಪಾರ್ಕ್‌ನಲ್ಲಿ ನಿರ್ದಿಷ್ಟವಾಗಿ ಗುರುತಿಸಿದ್ದ ಎಎಂ 4 ರಲ್ಲಿ 5 ಎಕರೆ ವಿಸ್ತೀರ್ಣದ ಸಿ ಎ ನಿವೇಶನಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೋಟಾದಡಿಯಲ್ಲಿ ಒಟ್ಟು 6 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಸಿದ್ದಾರ್ಥ ವಿಹಾರ್‍‌ ಟ್ರಸ್ಟ್‌, ಆನಂದ್‌ ಸೋಷಿಯಲ್‌ ಅಂಡ್‌ ಎಜುಕೇಷನಲ್‌ ಟ್ರಸ್ಟ್‌ ಹೊರತುಪಡಿಸಿದರೇ ಉಳಿದ ನಾಲ್ಕು ಅರ್ಜಿಗಳು ವಸತಿ ವಲಯದಲ್ಲಿ ಅನುಭವ ಹೊಂದಿದ ಮತ್ತು ಕಾರ್ಯನಿರ್ವಹಿಸಿದ ಕಂಪನಿಗಳಿಗೆ ಸೇರಿದ್ದವು.

 

ಸಿ ಎ ನಿವೇಶನಕ್ಕಾಗಿ ಸಲ್ಲಿಕೆಯಾಗಿದ್ದ 6 ಅರ್ಜಿಗಳನ್ನು ಪರಿಗಣಿಸಿದ್ದ ಏಕಗವಾಕ್ಷಿ ಸಮಿತಿಯು,  ಪ್ರತೀ ದಾಖಲೆಗಳನ್ನೂ ಪರಿಶೀಲಿಸಿತ್ತು. ಅರ್ಜಿಯೊಂದಿಗೆ ಪ್ರಸ್ತಾವನೆ, ಟ್ರಸ್ಟ್‌, ಕಂಪನಿಗಳ ವಹಿವಾಟಿನ ದಾಖಲೆಗಳು, ಪ್ರಾಜೆಕ್ಟ್‌ ರಿಪೋರ್ಟ್‌, ಹಣಕಾಸಿನ ಸಾಮರ್ಥ್ಯ, ಆದಾಯ ತೆರಿಗೆ, ಭೂಮಿ ಬಳಕೆಯ ಸ್ಕೆಚ್‌, ಪ್ಯಾನ್‌ ಕಾರ್ಡ್‌ ಸೇರಿದಂತೆ ಹಲವು ದಾಖಲೆಗಳನ್ನು ಒರೆಗೆ ಹಚ್ಚಿತ್ತು. ಮತ್ತು ಶಿಫಾರಸ್ಸು ಮಾಡುವ ಸಂಬಂಧ ಸಮಿತಿಯು ತನ್ನ ಅಭಿಪ್ರಾಯವನ್ನೂ ಷರಾದ ರೂಪದಲ್ಲಿ ದಾಖಲಿಸಿತ್ತು.

 

ಈ ರೀತಿ ಒಟ್ಟು 6 ಅರ್ಜಿಗಳ ಪೈಕಿ   ಸಿದ್ದಾರ್ಥ ವಿಹಾರ್‍‌ ಟ್ರಸ್ಟ್‌ ಮತ್ತು ಇಂಡಸ್ಟ್ರಿಯಲ್‌ ಫೆಸಲಿಟಿಸ್‌ ಕಾರ್ಪೋರೇಷನ್‌ನ ಅರ್ಜಿಗಳನ್ನಷ್ಟೇ ಪರಿಗಣಿಸಬಹುದು (may be considered) ಎಂದು ಷರಾದಲ್ಲಿ ದಾಖಲಿಸಿತ್ತು. ಉಳಿದ 4 ಅರ್ಜಿಗಳಿಗೆ ಸಂಬಂಧಿಸಿದಂತೆ ದಾಖಲೆಗಳು ಅಪೂರ್ಣವಾಗಿವೆ, ದಾಖಲೆಗಳು ಸಾಕಷ್ಟಿಲ್ಲ ಎಂದು ಷರಾ ಬರೆದಿತ್ತು. ಅಲ್ಲದೇ ಪ್ರಸ್ತಾವನೆಗಳನ್ನು ಪರಿಗಣಿಸುವ ಬಗ್ಗೆ ಯಾವುದೇ ಅಭಿಪ್ರಾಯವನ್ನೂ ನಡವಳಿಯಲ್ಲಿ ಶಿಫಾರಸ್ಸು ಮಾಡಿರಲಿಲ್ಲ.

 

ವಿಶೇಷವೆಂದರೇ 4 ಅರ್ಜಿಗಳೊಂದಿಗೆ ಸಲ್ಲಿಕೆಯಾಗಿದ್ದ ಪ್ರಸ್ತಾವನೆಯಲ್ಲಿ ದಾಖಲೆಗಳು ಸಾಕಷ್ಟಿಲ್ಲ ಎಂದು ನಡವಳಿಯಲ್ಲಿ ದಾಖಲಿಸಿದ್ದ ಸಚಿವ ಎಂ ಬಿ ಪಾಟೀಲ್‌ ಅವರ ಅಧ್ಯಕ್ಷತೆಯಲ್ಲಿದ್ದ ಸಮಿತಿಯು,  ಪ್ಯಾನ್‌ ಕಾರ್ಡ್‌ನ್ನೇ ಸಲ್ಲಿಸದ ಸಿದ್ದಾರ್ಥ ವಿಹಾರ್‍‌ ಟ್ರಸ್ಟ್‌ನ ಅರ್ಜಿ, ಪ್ರಸ್ತಾವನೆಯನ್ನು ಪರಿಗಣಿಸಬಹುದು (may be considered) ಎಂದು ಶಿಫಾರಸ್ಸು ಮಾಡಿತ್ತು.  ಈ ಶಿಫಾರಸ್ಸಿನ ಅನ್ವಯವೇ    5 ಎಕರೆ ವಿಸ್ತೀರ್ಣದ ಸಿ ಎ ನಿವೇಶನವನ್ನು ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ 5 ಎಕರೆ ವಿಸ್ತೀರ್ಣದ ಸಿ ಎ  ನಿವೇಶನವನ್ನು  ಮಂಜೂರು ಮಾಡಿರುವುದು ಅಚ್ಚರಿ ಮೂಡಿಸಿದೆ.

 

ಆನಂದ ಸೋಷಿಯಲ್‌ ಮತ್ತು ಎಜುಕೇಷನ್‌ ಟ್ರಸ್ಟ್‌ನ ಟ್ರಸ್ಟಿ ಮಹದೇವಪ್ರಸಾದ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಮಂಡಳಿಯು 2024ರ ಫೆ.23ರಂದು ಸ್ವೀಕರಿಸಿತ್ತು. ಇವರು ಶೈಕ್ಷಣಿಕ ಸಂಸ್ಥೆ ಸಲ್ಲಿಸಲು ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಾಜೆಕ್ಟ್‌ ರಿಪೋರ್ಟ್‌ ಸಲ್ಲಿಸಿರಲಿಲ್ಲ. ಭೂಮಿ ಬಳಕೆಯ ನಕ್ಷೆ, ಜಿಎಸ್‌ಟಿಯ ಪ್ರಮಾಣ ಪತ್ರಗಳನ್ನು ಸಲ್ಲಿಸಿರಲಿಲ್ಲ. ದಾಖಲೆಗಳು ಸಾಕಷ್ಟಿಲ್ಲ ಎಂದು ಷರಾ ಬರೆದಿರುವುದು ನಡವಳಿಯಿಂದ ತಿಳಿದು ಬಂದಿದೆ.

 

ಇಂಡಸ್ಟ್ರಿಯಲ್‌ ಫೆಸಲಿಟಿಸ್‌ ಕಾರ್ಪೋರೇಷನ್‌ನ ಸಿ ಜಿ ಶ್ರೀನಿವಾಸನ್‌ ಅವರು ಸಲ್ಲಿಸಿದ್ದ ಅರ್ಜಿಯು 2024ರ ಫೆ. 23ರಂದು ಮಂಡಳಿಯು ಸ್ವೀಕರಿಸಿತ್ತು. ಇವರು ಹೌಸಿಂಗ್‌ ಅಪಾರ್ಟ್‌ಮೆಂಟ್‌ಗಳ ನಿರ್ಮಾಣಕ್ಕೆ 125 ಕೋಟಿ ಬಂಡವಾಳ ಹೂಡಿಕೆ ಪ್ರಸ್ತಾವನೆ ಸಲ್ಲಿಸಿದ್ದರು. 200 ಜನರಿಗೆ ಉದ್ಯೋಗ ನೀಡುವ ಪ್ರಸ್ತಾವನೆಯಲ್ಲಿ ತಿಳಿಸಿದ್ದರು. 125 ಕೋಟಿ ಟರ್ನ್‌ಓವರ್ ಇತ್ತು. ಈ ಪ್ರಸ್ತಾವನೆಯನ್ನು ಪರಿಗಣಿಸಬಹುದು (may be considered) ಎಂದಿತ್ತು.

 

 

ಸಿದ್ದಾರ್ಥ ವಿಹಾರ್‍‌ ಟ್ರಸ್ಟ್‌ ನ ಟ್ರಸ್ಟಿ ರಾಹುಲ್‌ ಖರ್ಗೆ ಅವರು 5 ಎಕರೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ತರಬೇತಿ ಕೇಂದ್ರ ತೆರೆಯಲು ಪ್ರಸ್ತಾವನೆ ಸಲ್ಲಿಸಿದ್ದರು. ಒಟ್ಟು 25 ಕೋಟಿ ಹೂಡಿಕೆ ಮಾಡಲಿದೆ. 150 ಮಂದಿಗೆ ಉದ್ಯೋಗ ನೀಡಲಿದೆ. ಪ್ರಾಜೆಕ್ಟ್‌ ರಿಪೋರ್ಟ್‌, ಭೂಮಿ ಬಳಕೆ ನಕ್ಷೆ, ಸಾಮರ್ಥ್ಯಪ್ರಮಾಣ, ಟ್ರಸ್ಟ್‌ ಡೀಡ್‌ ಸಲ್ಲಿಸಿದ್ದರು. ಪ್ರವರ್ತಕರು 36.86 ಕೋಟಿ ರು ಗಳನ್ನು ಹೂಡಿಕೆ ಮಾಡಲಿದ್ದಾರೆ. ಒಟ್ಟಾರೆ ನಿವ್ವಳ ಮೌಲ್ಯ 12 ಕೋಟಿ ಇದೆ ಎಂದು ತಿಳಿಸಿತ್ತು.   ಆದರೆ ಪ್ಯಾನ್‌ ಕಾರ್ಡ್‌ ಸಲ್ಲಿಸಿರಲಿಲ್ಲ. ಇದನ್ನು ಪರಿಗಣಿಸಬಹುದು ಎಂದು ಸಮಿತಿ ಸಭೆಯು ಶಿಫಾರಸ್ಸು ಮಾಡಿತ್ತು.

 

ಬೆಂಗಳೂರಿನ ಕಲ್ಯಾಣ ನಗರದ ಆಧ್ಯಾ-ಯಾನ ವಿದ್ಯಾ ಟ್ರಸ್ಟ್‌ನ ಟ್ರಸ್ಟ್‌ನ ಮೂರ್ತಿ ಎಲ್‌ (ಎಂ ಡಿ ಸರ್ಜನ್‌) ಅವರು ಅರ್ಜಿ ಸಲ್ಲಿಸಿದ್ದರು. ಆಸ್ಪತ್ರೆಗಳ ಅಭಿವೃದ್ಧಿ ಮತ್ತು ಸಂಶೋಧನೆ ಉದ್ದೇಶವನ್ನು ಹೊಂದಿದ್ದರು. ಇವರು ಕಾರ್ಯಕ್ಷೇತ್ರದಲ್ಲಿ 40 ವರ್ಷಗಳ ಅನುಭವ ಇದೆ ಎಂದು ನಮೂದಿಸಿದ್ದರು. ಆದರೆ ಇವರು ಭೂಮಿ ಬಳಕೆಯ ಸ್ಕೆಚ್‌ ಮತ್ತು ನೆಟ್‌ವರ್ತ್‌ನ ಪ್ರಮಾಣಪತ್ರ ನೀಡಿರಲಿಲ್ಲ. ಆರ್ಥಿಕ ಸಾಮರ್ಥ್ಯ ಗೊತ್ತಿಲ್ಲ ಎಂದು ನಡವಳಿಯಲ್ಲಿ ಹೇಳಲಾಗಿತ್ತು.

 

ಬೆಂಗಳೂರು ಗ್ರಾಮಾಂತರದ ವಿಜಯಪುರದ ಸಿಡ್ವಿನ್‌ ಡೆವಲಪರ್ಸ್‌ನ ‌ ರವೀಶ್‌ ಕುಮಾರ್‍‌ ಎಂ,. 35 ಕೋಟಿ ಹೂಡಿಕೆ ಮಾಡುವ ಪ್ರಸ್ತಾವನೆ ಸಲ್ಲಿಸಿದ್ದರು. 100 ಮಂದಿಗೆ ಉದ್ಯೋಗ ನೀಡಲಾಗುವುದು ಎಂದು ತಿಳಿಸಿದ್ದರು. ಇದೇ ಏರೋಸ್ಪೇಸ್‌ ಪಾರ್ಕ್‌ನಲ್ಲಿ ರೆಸಿಡೆನ್ಷಿಯಲ್‌ ಅಪಾರ್ಟ್‌ ಮೆಂಟ್‌ ನಿರ್ಮಾಣ ಮಾಡಿದ್ದ ಅನುಭವವಿತ್ತು. ಆದರೆ ಇವರು ಭೂಮಿ ಬಳಕೆಯ ಸ್ಕೆಚ್‌ ಸಲ್ಲಿಸಿಲಿಲ್ಲ.

 

ಬೆಂಗಳೂರಿನ ಬಸವೇಶ್ವರ ನಗರದ ಸಮೃದ್ಧಿ ಎಂಟರ್‍‌ ಪ್ರೈಸೆಸ್‌ನ ಪಾಲುದಾರರಾದ ಟಿ ಎಸ್‌ ಪ್ರಜ್ವಲ್‌ ಅವರು 75 ಕೋಟಿ ಹೂಡಿಕೆ ಮಾಡುವ ಪ್ರಸ್ತಾವನೆ ಸಲ್ಲಿಸಿದ್ದರು. 418 ಕೋಟಿ ಟರ್ನ್‌ ಓವರ್‍‌ ಇದೆ ಎಂದು ದಾಖಲೆ ಸಲ್ಲಿಸಿದ್ದರು. 5 ವರ್ಷ ಅನುಭವವಿದೆ ಎಂದು ಹೇಳಿದ್ದ ಅವರು ಭೂಮಿ ಬಳಿಕೆಯ ಸ್ಕೆಚ್‌ ನೀಡಿರಲಿಲ್ಲ ಎಂದು ಷರಾದಲ್ಲಿ ನಮೂದಿಸಿರುವುದು ತಿಳಿದು ಬಂದಿದೆ.

 

 

ಸಿದ್ಧಾರ್ಥ ವಿಹಾರ್‍‌ ಟ್ರಸ್ಟ್‌ನ ಭಾಗವಾಗಿರುವ  ಅಂತರಾಷ್ಟ್ರೀಯ ಪಾಲಿ, ಸಂಸ್ಕೃತ,  ತೌಲನಿಕ ತತ್ವಶಾಸ್ತ್ರ ಟ್ರಸ್ಟ್‌ಗೆ 19 ಎಕರೆ ವಿಸ್ತೀರ್ಣದ ಜಮೀನನ್ನು ಉಚಿತವಾಗಿ ಮಂಜೂರು ಮಾಡಿರುವುದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇರಲಿಲ್ಲ ಎಂದು ಇಂಡಿಯನ್‌ ಆಡಿಟ್‌ ಅಂಡ್‌ ಅಕೌಂಟೆಂಟ್‌ ಜನರಲ್‌  ಅಭಿಪ್ರಾಯಿಸಿದ್ದರು.

 

ಉಚಿತವಾಗಿ 19 ಎಕರೆ ಮಂಜೂರು; ಸಾರ್ವಜನಿಕ ಹಿತಾಸಕ್ತಿಯಿಲ್ಲ, ನಿಯಮ ಪಾಲನೆಯಾಗಿಲ್ಲವೆಂದ ಎಜಿ

 

ಸಿದ್ಧಾರ್ಥ ವಿಹಾರ್‍‌ನ ಟ್ರಸ್ಟ್‌ನ ಭಾಗವಾಗಿರುವ ಅಂತರರಾಷ್ಟ್ರೀಯ ಪಾಲಿ, ಸಂಸ್ಕೃತ ಮತ್ತು ತುಲನಾತ್ಮಕ ತತ್ವಶಾಸ್ತ್ರದ ಟ್ರಸ್ಟ್‌ಗೂ 2016-17ರಲ್ಲೇ ಶೈಕ್ಷಣಿಕ ಉದ್ದೇಶದ ಹೆಸರಿನಲ್ಲಿ ಗುತ್ತಿಗೆ ಆಧಾರದ ಮೇಲೆ 19 ಎಕರೆ ಜಮೀನು ಮಂಜೂರಾಗಿತ್ತು. ನಂತರ   ಅಂದಾಜು 40 ಕೋಟಿ ರು ಬೆಲೆಬಾಳುವ ಇದೇ ಜಮೀನನ್ನು  ಉಚಿತವಾಗಿ ಮಂಜೂರು ಮಾಡಿ ಆದೇಶ ಹೊರಡಿಸಿತ್ತು.

ಪಾಲಿ, ಸಂಸ್ಕೃತ, ತತ್ವಶಾಸ್ತ್ರದ ಟ್ರಸ್ಟ್‌ಗೂ 19 ಎಕರೆ; ಗುತ್ತಿಗೆ ಆದೇಶ ಮಾರ್ಪಾಡಿಸಿ ಉಚಿತವಾಗಿ ಮಂಜೂರು

ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಕೆಎಐಡಿಬಿಯಿಂದ ಮಂಜೂರಾಗಿದ್ದ   5 ಎಕರೆ ವಿಸ್ತೀರ್ಣದ ಸಿ ಎ ನಿವೇಶನದ   ಪ್ರಕರಣವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.  ರಾಷ್ಟ್ರೋತ್ಥಾನ ಪರಿಷತ್‌ಗೆ ಶೈಕ್ಷಣಿಕ ಉದ್ದೇಶಗಳಿಗಾಗಿ ರಿಯಾಯಿತಿ ದರದಲ್ಲಿ ಜಮೀನುಗಳನ್ನು ನೀಡಿರುವ ಬಗ್ಗೆ ಪ್ರಸ್ತಾಪಿಸಿದ್ದ  ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ್‌ ಖರ್ಗೆ, ಎಂ ಬಿ ಪಾಟೀಲ್‌ ಅವರು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದರು ಮತ್ತು ಸಿ ಎ ನಿವೇಶನ ಹಂಚಿಕೆಯನ್ನು  ಸಮರ್ಥಿಸಿಕೊಂಡಿದ್ದರು.

 

ಖರ್ಗೆ ಕುಟುಂಬ ಸದಸ್ಯರ ಟ್ರಸ್ಟ್‌ಗೆ 5 ಎಕರೆ ಜಮೀನು; ಅಧಿಕಾರ ದುರುಪಯೋಗ, ಹಿತಾಸಕ್ತಿ ಸಂಘರ್ಷ?

ಇದರ ಪ್ರಕಾರ ಕುಸನೂರು ಗ್ರಾಮದ ಸರ್ವೆ ನಂಬರ್‍‌ 88/1ರಲ್ಲಿ ಪಾಲಿ ಮತ್ತು ಸಂಸ್ಕೃತ ಭಾಷೆಗಳ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಅಂತರರಾಷ್ಟ್ರೀಯ ಪಾಲಿ, ಸಂಸ್ಕೃತ ಮತ್ತು ತುಲನಾತ್ಮಕ ತತ್ವಶಾಸ್ತ್ರದ ಟ್ರಸ್ಟ್‌ಗೆ 16.00 ಎಕರೆ ಜಮೀನನ್ನು 30 ವರ್ಷಗಳ ಅವಧಿಗೆ ಪ್ರಚಲಿತ ಮಾರುಕಟ್ಟೆ ಬೆಲೆಯ ಶೇ.10ರಷ್ಟು ಗುತ್ತಿಗೆ ಮೊತ್ತ ನಿಗದಿಪಡಿಸಿತ್ತು. ನಂತರ ಪ್ರತಿ ಎರಡು ವರ್ಷಗಳಿಗೊಮ್ಮೆ ಈ ಗುತ್ತಿಗೆ ಮೊತ್ತವನ್ನು ಶೇ.10ಕ್ಕೆ ಹೆಚ್ಚಿಸುವ ಷರತ್ತಿಗೆ ಒಳಪಟ್ಟು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಿತ್ತು.

 

ಖರ್ಗೆ ಕುಟುಂಬ ಸದಸ್ಯರ ಟ್ರಸ್ಟ್‌ಗೆ 5 ಎಕರೆ; ರಾಹುಲ್‌ಗಾಂಧಿ, ಸಿಎಂಗೆ 2 ತಿಂಗಳ ಹಿಂದೆಯೇ ಸಲ್ಲಿಕೆಯಾಗಿತ್ತು ದೂರು

ಇದಾದ ನಂತರ ಸಂಸ್ಥೆಯು 2016ರ ಮಾರ್ಚ್‌ಮತ್ತು ಆಗಸ್ಟ್‌ನಲ್ಲಿ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿತ್ತು.

 

ಖರ್ಗೆ ಕುಟುಂಬ ಸದಸ್ಯರ ಟ್ರಸ್ಟ್‌ಗೆ 5 ಎಕರೆ; ಹಿತಾಸಕ್ತಿ ಸಂಘರ್ಷದ ಕುರಿತು ಉಸಿರೆತ್ತದ ಕಾಂಗ್ರೆಸ್‌

ಈ ಕೋರಿಕೆಯನ್ನು ಅಂದಿನ ಕಾಂಗ್ರೆಸ್‌ ಸರ್ಕಾರವು ಪರಿಗಣಿಸಿತ್ತು. ಅದರಂತೆ 2017ರ ಮಾರ್ಚ್‌ 15ರಂದು ಆದೇಶ ಹೊರಡಿಸಿತ್ತು. ಇದರ ಪ್ರಕಾರ ಸರ್ವೆ ನಂಬರ್‍‌ 88/1ರಲ್ಲಿ ಕ್ರಮವಾಗಿ 16 ಎಕರೆ ಮತ್ತು 3 ಎಕರೆ ಸೇರಿ ಒಟ್ಟು 19 ಎಕರೆ ಜಮೀನನ್ನು ಪಾಲಿ ಮತ್ತು ಸಂಸ್ಕೃತ ಭಾಷೆಗಳ ಸಂಶೋಧನಾ ಕೇಂದ್ರ ಸ್ಥಾಪಿಸಲು 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಜಮೀನು ಮಂಜೂರು ಮಾಡಿರುವುದನ್ನು ಮಾರ್ಪಡಿಸಿತ್ತು.

 

ಆಟೋಮೊಬೈಲ್‌ ವಲಯದಲ್ಲಿ ಹೂಡಿಕೆ; ಪೂರ್ವಾನುಭವ ದಾಖಲೆಯಿಲ್ಲ, ಪ್ರವರ್ತಕರ ವಿವರಗಳಿಲ್ಲ

ಅಲ್ಲದೇ  ನಿಯಮ 23ನ್ನು ಸಡಿಲಿಸಿ ಅಂತರಾಷ್ಟ್ರೀಯ ಪಾಲಿ, ಸಂಸ್ಕೃತ ಮತ್ತು ತುಲನಾತ್ಮಕ ತತ್ವಶಾಸ್ತ್ರದ ಟ್ರಸ್ಟ್‌ಗೆ ಉಚಿತವಾಗಿ ಮಂಜೂರು ಮಾಡಿ ಆದೇಶಿಸಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts