ರೆವಿನ್ಯೂ ಬಡಾವಣೆ; ಸಾ ರಾ ಮಹೇಶ್‌ ಪತ್ನಿ ವಿರುದ್ಧ ಪ್ರಕರಣ ತನಿಖೆಗೆ ತಾಂತ್ರಿಕ ಸಮಿತಿ ಶಿಫಾರಸ್ಸು

ಬೆಂಗಳೂರು;  ಮಾಜಿ ಸಚಿವ ಸಾ ರಾ ಮಹೇಶ್‌ ಅವರ ಪತ್ನಿ ಅನಿತಾ ಮಹೇಶ್‌ ಅವರ ಹೆಸರಿಗೆ ನೋಂದಣಿ ಮಾಡಿಕೊಟ್ಟಿರುವ ಕ್ರಯಪತ್ರದ ಕುರಿತೂ ಯಾವುದೇ ಮಾಹಿತಿಯನ್ನೂ ನೀಡಿಲ್ಲ ಎಂದು ತಾಂತ್ರಿಕ ಸಮಿತಿಯು ಪತ್ತೆ ಹಚ್ಚಿದೆ.

 

ಈ ಪ್ರಕರಣವನ್ನು ಮೈಸೂರು ಜಿಲ್ಲೆಯ ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆಗೊಳಪಡಿಸಲು ಸರ್ಕಾರದ ಹಂತದಲ್ಲಿ ಕ್ರಮ ವಹಿಸಬೇಕು ಎಂದು ಸಮಿತಿಯು ಶಿಫಾರಸ್ಸು ಮಾಡಿತ್ತು.

 

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬದಲಿ ನಿವೇಶನಗಳ ಹಂಚಿಕೆ, ನಿಯಮಬಾಹಿರ ಚಟುವಟಿಕೆ, ಅಕ್ರಮ, ಅವ್ಯವಹಾರಗಳು ಬಯಲಾಗಿರುವ ಬೆನ್ನಲ್ಲೇ ಸಾ ರಾ ಮಹೇಶ್‌ ಅವರ ಪ್ರಕರಣವು ಮುನ್ನೆಲೆಗೆ ಬಂದಿದೆ.

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ನೀಡಿರುವ ಬದಲಿ ನಿವೇಶನ ಮತ್ತು ಅವರ ಆಪ್ತೇಷ್ಠರಿಗೆ ಬದಲಿ ನಿವೇಶನ ಹಂಚಿಕೆ ಪ್ರಕರಣಗಳ ಕುರಿತು ಪ್ರತಿಪಕ್ಷಗಳು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಬೀದಿಗಿಳಿದಿರುವ ಬೆನ್ನಲ್ಲೇ ಸಾ ರಾ ಮಹೇಶ್‌ ಅವರ ಪ್ರಕರಣವು, ಮೈತ್ರಿ ಪಕ್ಷಗಳಿಗೆ ಮುಜುಗರ ತಂದೊಡ್ಡಿದೆ.

 

ಪ್ರಕರಣದ ವಿವರ

 

ಸಾ ರಾ ಮಹೇಶ್‌ ಅವರ ಪತ್ನಿ ಅನಿತಾ ಮಹೇಶ್‌ ಅವರ ಹೆಸರಿಗೆ ಕ್ರಯಪತ್ರ ನೋಂದಣಿ ಮಾಡಿಕೊಡಲಾಗಿತ್ತು. ಅದನ್ನು ಹೆಚ್‌ ಡಿ ರಾಜೇಂದ್ರ ಮತ್ತು ಎನ್‌ ವಿ ಸುಕುಮಾರ್ ಎಂಬುವರು ನೋಂದಾಯಿಸಿಕೊಟ್ಟಿದ್ದರು. ಈ ಕ್ರಯಪತ್ರದಲ್ಲಿ ಎಲ್ಲಿಯೂ ರೆವಿನ್ಯು ಬಡಾವಣೆ ರಚನೆ ಮಾಡಲಾಗಿತ್ತು, ನಿವೇಶನಗಳನ್ನು ಮಾರಾಟ ಮಾಡಲಾಗಿತ್ತು, ಮಾರಾಟವನ್ನು ರದ್ದುಪಡಿಸಲಾಯಿತು ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ದೂರು ಸಲ್ಲಿಕೆಯಾಗಿತ್ತು.

 

ಅಲ್ಲದೇ ನಿವೇಶನ ಖರೀದಿದಾರರ ವಿವರವಾಗಲೀ ಅವರ ಸಮ್ಮತಿ ರುಜು ಕೂಡ ಇರಲಿಲ್ಲ. ಭೂ ಸ್ವಾಧೀನಪಡಿಸಿಕೊಳ್ಳುವ ಮುನ್ನವೇ ರೆವಿನ್ಯೂ ಬಡಾವಣೆ ರಚನೆ ಮಾಡಲಾಗಿದೆ. ನಂತರ ನಿವೇಶನಗಳನ್ನು ಮಾರಾಟ ಮಾಡಲಾಗಿದೆ. ನಿವೇಶನಗಳನ್ನು ಖರೀದಿ ಮಾಡದೇ ಜಮೀನಿನ ಮಾಲೀಕರಿಂದ ಖರೀದಿ ಮಾಡಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

 

ಈ ಪ್ರಕರಣದ ಕುರಿತು ತಾಂತ್ರಿಕ ಸಮಿತಿಯು ವರದಿ ನೀಡಿದೆ.

 

ವರದಿಯಲ್ಲೇನಿದೆ?

 

ದೂರುದಾರರು ರೆವಿನ್ಯೂ ನಿವೇಶನಗಳನ್ನು ರಚಿಸಿ ಈಗಾಗಲೇ ಮಾರಾಟ ಮಾಡಿರುವ ಬಗ್ಗೆ, ಮಾರಾಟವನ್ನು ರದ್ದುಪಡಿಸಿರುವ ಬಗ್ಗೆ ಮತ್ತು ದಾಖಲೆಯಲ್ಲಿ ಖರೀದಿದಾರರು, ರುಜು ಮತ್ತು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಹಾಗೂ ಇತರೆ ವಿಷಯಗಳು ಒಳಗೊಂಡಂತೆ ದೂರು ಇರುವುದು ಕಂಡು ಬಂದಿದೆ.

 

ಈ ವಿಷಯವು ಭೂ ಸ್ವಾಧೀನ, ಕಂದಾಯ, ನೋಂದಣಿ ದಾಖಲೆಗಳ ಕುರಿತಾಗಿದೆ. ಹಾಗೂ ದೂರಿನ ವಿಷಯವು ಕಂದಾಯ ಇಲಾಖೆಯ ಅಧಿಕಾರಿಗಳ ವ್ಯಾಪ್ತಿಯಲ್ಲಿ ಮತ್ತು ವಿಶೇಷ ಭೂ ಸ್ವಾಧೀನಾಧಿಕಾರಿಗಳ ವ್ಯಾಪ್ತಿಯಲ್ಲಿ ಬರಲಿದೆ. ಇದರ ವ್ಯವಹರಣೆಯು ಕಂದಾಯ ಕಚೇರಿಗಳಲ್ಲಿ ಆಗಲಿದೆ. ಮತ್ತು ಅನ್ಯ ಕಚೇರಿಗಳಲ್ಲಿ ತಾಂತ್ರಿಕ ಸಮಿತಿಯು ತಪಾಸಣೆ ಕೈಗೊಳ್ಳುವುದು ಸಾಧ್ಯವಿಲ್ಲ. ಈ ಪ್ರಕರಣವನ್ನು ಮೈಸೂರು ಜಿಲ್ಲೆಯ ಸಕ್ಷಮ ಕಂದಾಯ ಅಧಿಕಾರಿಯ ನೇತೃತ್ವದಲ್ಲಿ ತನಿಖೆಗೆ ಒಳಪಡಿಸಬೇಕು ಎಂದು ವರದಿಯಲ್ಲಿ ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.

 

ಬದಲಿ ನಿವೇಶನ ಹಂಚಿಕೆ ಹಿಂದಿನ ಕರಾಮತ್ತು ಬಯಲು; ನಕ್ಷೆಯಿಲ್ಲ, ಭೂ ಪರಿಹಾರದ ವಿವರಗಳೂ ಇಲ್ಲ

ಹಾಗೆಯೇ ನಿಯಮ ಮೀರಿ 250 ಕೋಟಿ ರುಪಾಯಿಗಳನ್ನು ನಿಶ್ಚಿತ ಠೇವಣಿಯಲ್ಲಿರಿಸಿತ್ತು.

ನಿಯಮ ಮೀರಿ 250 ಕೋಟಿ ನಿಶ್ಚಿತ ಠೇವಣಿ; ಮೂಡಾ ಅಕ್ರಮ ಪತ್ತೆ ಹಚ್ಚಿದ ತಾಂತ್ರಿಕ ಸಮಿತಿ

ಮೂಡಾವು ಸಾಂವಿಧಾನಿಕ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯನ್ನು ಅತಿಕ್ರಮಿಸಿತ್ತು.

 

848 ನಿವೇಶನ ಬಿಡುಗಡೆ; ಮೂಡಾದಿಂದ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರ ವ್ಯಾಪ್ತಿ ಅತಿಕ್ರಮಣ

ನಿಯಮಬಾಹಿರವಾಗಿ ಒಂದೇ ದಿನದಲ್ಲಿ 10 ನಿವೇಶನಗಳನ್ನು ಬಿಡುಗಡೆ ಮಾಡಿತ್ತು.

ಒಂದೇ ದಿನದಲ್ಲಿ 10 ನಿವೇಶನ ಬಿಡುಗಡೆ; ದೃಢೀಕೃತ ಪ್ರಮಾಣಪತ್ರವಿಲ್ಲ, ಅನುಮೋದನೆಯೂ ಇಲ್ಲ

ಜ್ಞಾನಗಂಗಾ ಸೊಸೈಟಿಗೆ 848 ನಿವೇಶನಗಳನ್ನು ಹಂಚಿಕೆ ಮಾಡಿದ್ದ ಮೂಡಾವು ನ್ಯಾಯಾಲಯದ ಪ್ರಕರಣಗಳನ್ನು ಮರೆಮಾಚಿತ್ತು.

 

 

ಜ್ಞಾನಗಂಗಾ ಸೊಸೈಟಿಗೆ 848 ನಿವೇಶನ; ನ್ಯಾಯಾಲಯದ ಪ್ರಕರಣಗಳನ್ನೇ ಮರೆಮಾಚಿದ್ದ ಮೂಡಾ?

ಭೂ ಸ್ವಾಧೀನವಿಲ್ಲದೇ ರಿಂಗ್‌ ರೋಡ್‌ಗೆ ಬಳಕೆ ಮಾಡಿದ್ದ ಮೂಡಾವು ಸಿದ್ದರಾಮಯ್ಯ ಅವರ ಆಪ್ತ ರಾಕೇಶ್‌ ಪಾಪಣ್ಣ ಅವರ ದೊಡ್ಡಮ್ಮನಿಗೂ ಬದಲಿ ನಿವೇಶನ ಮಂಜೂರು ಮಾಡಿತ್ತು.

ಭೂಸ್ವಾಧೀನವಿಲ್ಲದೇ ರಿಂಗ್‌ ರೋಡ್‌ಗೆ ಜಮೀನು ಬಳಕೆ; ಸಿಎಂ ಆಪ್ತನ ದೊಡ್ಡಮ್ಮನಿಗೂ ಬದಲಿ ನಿವೇಶನ

ಜೆಎಸ್‌ಎಸ್‌ ಮಹಾವಿದ್ಯಾಪೀಠ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಬದಲಿ ಜಾಗ ನೀಡಿತ್ತು.

 

ಜೆಎಸ್‌ಎಸ್‌ ಹೌಸಿಂಗ್‌ ಸೊಸೈಟಿಗೆ ಬದಲಿ ಜಾಗ; 20 ವರ್ಷ ಬಾಕಿ ಇದ್ದ ಪ್ರಸ್ತಾವನೆಗೆ ಅಸ್ತು, ನಿಯಮಮೀರಿ ಮಂಜೂರು

ಮುಡಾ ಅಧಿಕಾರಿಗಳು ಎಸ್‌ಬಿಎಂ ಹೌಸಿಂಗ್‌ ಸೊಸೈಟಿ ನಿರ್ಮಾಣ ಮಾಡಿದ್ದ ಬಡಾವಣೆಯಲ್ಲಿ ನಿವೇಶನಗಳ ಸಂಖ್ಯೆಯನ್ನು ಹೆಚ್ಚಳ ಮಾಡಿದ್ದರು.

ಮೂಡಾ ಕೈ ಚಳಕ; ಎಸ್‌ಬಿಎಂ ಹೌಸಿಂಗ್‌ ಸೊಸೈಟಿಯ ನಿವೇಶನಗಳ ಸಂಖ್ಯೆಯಲ್ಲಿ ಹೆಚ್ಚಳ

0.38 ಗುಂಟೆ ಜಾಗವನ್ನು ಬಳಕೆ ಮಾಡಿದ್ದ ಮೂಡಾವು ಇದಕ್ಕೆ ಬದಲಾಗಿ 5 ನಿವೇಶನಗಳನ್ನು ಮಂಜೂರು ಮಾಡಿತ್ತು.

ಬಳಸಿದ್ದು 0.38 ಗುಂಟೆ, ಪ್ರಾಧಿಕಾರ ನೀಡಿದ್ದು 5 ನಿವೇಶನ; ಬೇಕಾಬಿಟ್ಟಿ ನಿರ್ಧಾರ, ಪ್ರಾಧಿಕಾರಕ್ಕೆ ಆರ್ಥಿಕ ನಷ್ಟ

 

ರಾಜಕೀಯಕರಣಗೊಂಡಿರುವ ಮೂಡಾ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಪ್ರತಿಪಕ್ಷಗಳು ಬೀದಿಗಿಳಿದಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts