ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ, ದಬ್ಬಾಳಿಕೆ; ಮೌದ್ಗಿಲ್‌ ವಿರುದ್ಧ ದೂರು, ವರದಿ ಸಲ್ಲಿಸಲು ಸೂಚನೆ

ಬೆಂಗಳೂರು; ಡ್ರೋನ್‌, ಏರಿಯಲ್‌ ಸರ್ವೆ ಮಾಡುವ ಸಂಬಂಧ ಆಹ್ವಾನಿಸಿದ್ದ ಟೆಂಡರ್‌ ಪ್ರಕ್ರಿಯೆಯಲ್ಲಿ ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ, ದಬ್ಬಾಳಿಕೆ, ಕರ್ತವ್ಯ ನಿರ್ಲಕ್ಷ್ಯ ಮತ್ತು ಸ್ವಾಮಿತ್ವ ಯೋಜನೆಯಡಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

 

ಈ ಸಂಬಂಧ ಭೂಮಾಪನ, ಭೂ ದಾಖಲೆಗಳ ಇಲಾಖೆಯ ಹಿಂದಿನ ಆಯುಕ್ತರಾದ ಮನೀಶ್‌ ಮೌದ್ಗಿಲ್‌ ಅವರ ವಿರುದ್ಧ ನೇರವಾಗಿ ಆರೋಪ ಹೊರಿಸಿರುವ ನೋಯ್ಡಾದ ನೀರಜ್‌ಕುಮಾರ್‌ ಚೌಬೆ ಎಂಬುವರು ಸರ್ಕಾರಕ್ಕೆ ದೂರು ಸಲ್ಲಿಸಿದ್ದಾರೆ. ದೂರು ಮತ್ತು ಇತರೆ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಈ ದೂರಿನ ಕುರಿತು ನಿಯಮಾನುಸಾರ ಪರಿಶೀಲಿಸಿ ವರದಿ ನೀಡಬೇಕು ಎಂದು 2023ರ ಜೂನ್‌ 3ರಂದೇ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಸೂಚಿಸಲಾಗಿತ್ತು.

 

ಆದರೆ ಈ ಕುರಿತು 10 ತಿಂಗಳಾದರೂ ಯಾವುದೇ ವರದಿಯು ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ. ಆದರೆ ವರದಿ ನೀಡುವ ಹೊಣೆಗಾರಿಕೆಯನ್ನು ಪ್ರಾದೇಶಿಕ ಆಯುಕ್ತರಾದ ಆಮ್ಲಾನ್‌ ಆದಿತ್ಯ ಬಿಸ್ವಾಸ್‌ ಅವರಿಗೆ ಹೊರಿಸಿದ್ದಾರೆ. ಈ ಸಂಬಂಧ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು 2024ರ ಏಪ್ರಿಲ್‌ 16ರಂದು ಪತ್ರ ಬರೆದಿದ್ದಾರೆ.

 

‘ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆಯ ಹಿಂದಿನ ಆಯುಕ್ತ ಮನೀಶ್‌ ಮೌದ್ಗಿಲ್‌ ಅವರ ನೋಯ್ಡಾದ ನೀರಜ್‌ಕುಮಾರ್‌ ಚೌಬೆ ಎಂಬುವರು ದೂರು ಅರ್ಜಿ ಸಲ್ಲಿಸಿದ್ದು ದೂರು ಅರ್ಜಿಯಲ್ಲಿ ಅಧಿಕಾರಿ ದುರುಪಯೋಗ, ಸ್ವಜನಪಕ್ಷಪಾತ, ದಬ್ಬಾಳಿಕೆ, ಕರ್ತವ್ಯ ನಿರ್ಲಕ್ಷ್ಯ ಮತ್ತು ಸ್ವಾಮಿತ್ವ ಯೋಜನೆಯಡಿಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿರುತ್ತಾರೆ. ಈ ದೂರು ಅರ್ಜಿಯಲ್ಲಿನ ಅಂಶಗಳ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ತಮ್ಮ ಸ್ಪಷ್ಟ ಅಭಿಪ್ರಾಯದೊಂದಿಗೆ ವರದಿ ಸಲ್ಲಿಸಬೇಕು,’ ಎಂದು ನಿರ್ದೇಶಿಸಿರುವುದು ಗೊತ್ತಾಗಿದೆ.

 

 

ಪ್ರಕರಣದ ವಿವರ

 

ಗ್ರಾಮೀಣ ಪ್ರದೇಶಗಳ ಭೂ ಸಮೀಕ್ಷೆ, ಮ್ಯಾಪಿಂಗ್‌, ಡ್ರೋನ್‌ ಬಳಸಿಕೊಂಡು ಭೂ ದಾಖಲೆಗಳ ರಚನೆ ಮಾಡಲು 2021-22ರಲ್ಲಿ ಬಜೆಟ್‌ನಲ್ಲಿ ಹಿಂದಿನ ಬಿಜೆಪಿ ಸರ್ಕಾರವು ಘೋಷಿಸಿತ್ತು. ಇದಕ್ಕಾಗಿ 287 ಕೋಟಿ ರು.ಗಳನ್ನು ಹಂಚಿಕೆ ಮಾಡಲಾಗಿತ್ತು. ನಂತರ ಇದರ ಅಂದಾಜು ವೆಚ್ಚ ಏರಿಕೆಯಾಗಿತ್ತು. 287 ಕೋಟಿ ರು.ಗಳಿಂದ 423 ಕೋಟಿ ರು. ಗೇರಿಸಲಾಗಿತ್ತು.

 

ಡ್ರೋನ್‌ಗಳನ್ನು ಬಳಸಿಕೊಂಡು ಮತ್ತು ಗ್ರಾಮೀಣ ಜನವಸತಿ ಭೂಮಿಯನ್ನು ಮ್ಯಾಪಿಂಗ್ ಮಾಡುವ ಗುರಿ ಹೊಂದಿರುವ ಈ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ ಆಹ್ವಾನಿಸಿದ್ದ ಟೆಂಡರ್‌ ಪ್ರಕ್ರಿಯೆಗಳಲ್ಲಿ ಹಲವು ಲೋಪಗಳಿದ್ದವು.  ಎಆರ್‌ಎವಿ ಸಂಸ್ಥೆಗೆ ಅನುಕೂಲವಾಗುವ ರೀತಿಯಲ್ಲಿ ಟೆಂಡರ್‌ನ್ನು ಸಿದ್ಧಪಡಿಸಲಾಗಿದೆ. ಬಿಡ್ಡರ್‌ಗಳು ಲಿಖಿತವಾಗಿ ಯಾವುದೇ ರೀತಿಯಲ್ಲೂ ಕೋರಿಕೆ ಸಲ್ಲಿಸದಿದ್ದರೂ ಟೆಂಡರ್‌ ಷರತ್ತುಗಳನ್ನು ಬದಲಾಯಿಸಲಾಗಿತ್ತು. ಇದು ನಿರ್ದಿಷ್ಟವಾಗಿ ಎಆರ್‌ಎವಿ ಸಂಸ್ಥೆಗೆ ಮಾತ್ರ ಸರಿ ಹೊಂದುವಂತೆ ಬದಲಾಯಿಸಲಾಗಿತ್ತು ಎಂದು ನೀರಜ್‌ಕುಮಾರ್‌ ಚೌಬೆ ತಮ್ಮ ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಸರ್ಕಾರದ ಗಮನಕ್ಕೆ ತರದೇ  ಆರ್ಥಿಕ ಅಧಿಕಾರವನ್ನು ಚಲಾಯಿಸಿದ್ದಾರೆ. ತಲಾ 1.50 ಕೋಟಿ ರು. ಗಳಿಂದ 8 ಕೋಟಿಗಳಷ್ಟು ಕಡಿಮೆ ಪ್ಯಾಕೇಜ್‌ನ ಮೌಲ್ಯ ತೋರಿಸಲು ಪ್ಯಾಕೇಜ್‌ಗಳಾಗಿ ವಿಭಜಿಸಿದ್ದಾರೆ. ಹೀಗಾಗಿ ಸರ್ಕಾರವನ್ನೇ ಕತ್ತಲೆಯಲ್ಲಿಟ್ಟಂತಾಗಿದೆ. 1 ಕೋಟಿ ರು ಗೂ ಮೀರಿದ ಮೊತ್ತದ ಟೆಂಡರ್‌ ಆಹ್ವಾನಿಸಲು ಕಾರ್ಯದರ್ಶಿ ಅನುಮೋದನೆ ಅಗತ್ಯವಿದೆ. ಆದರೆ ಈ ಯಾವ ಪ್ರಕ್ರಿಯೆಗಳನ್ನೂ ನಡೆಸಿಲ್ಲ ಎಂದು ಚೌಬೆ ಅವರು ದೂರಿದ್ದಾರೆ.

 

ಮೊದಲ ಹಂತದಲ್ಲಿ 108 ಕೋಟಿ ಕೋಟಿ ರು ಮೊತ್ತದ ಟೆಂಡರ್‌ (Tender no SSLR/STR/ORI/11/2022-23 DATED 12.08.2022) ಆಹ್ವಾನಿಸಿತ್ತು. ಎರಡನೇ ಹಂತದಲ್ಲಿ 50 ಕೋಟಿ ರು ಮೊತ್ತದಲ್ಲಿ ಟೆಂಡರ್‌ (Tender no SSLR/STR/ORI/11/2022-23 DATED 17.10.2022)ರಂದು ಕರೆಯಲಾಗಿತ್ತು. ಈ ನಿರ್ದಿಷ್ಟ ಟೆಂಡರ್‌ನಲ್ಲಿ ಪೂರ್ವ ಅರ್ಹತಾ ಷರತ್ತುಗಳನ್ನು ಮೊದಲ ಹಂತದ ಟೆಂಡರ್‌ನಿಂದ ಕೇವಲ ಎಆರ್‌ಎವಿ ಸಂಸ್ಥೆಗೆ ಸರಿ ಹೊಂದುವಂತೆ ಬದಲಾಯಿಸಲಾಗಿತ್ತು. ಮೊದಲ ಹಂತದಲ್ಲಿ ಯಶಸ್ವಿಯಾಗಿದ್ದ ಟೆಂಡರ್‌ದಾರರು ಎರಡನೇ ಹಂತದ ಟೆಂಡರ್‌ನಲ್ಲಿ ಭಾಗವಹಿಸುವುದನ್ನು ರದ್ದುಗೊಳಿಸಲಾಗುವುದು ಮತ್ತು ಒಂದೊಮ್ಮೆ ಭಾಗವಹಿಸಿದ್ದಲ್ಲಿ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂಬ ಬೆದರಿಕೆಯನ್ನೂ ಒಡ್ಡಲಾಗಿತ್ತು ಎಂದು ದೂರಿನಲ್ಲಿ ವಿವರಿಸಲಾಗಿದೆ.

 

ಅದೇ ರೀತಿ ಮೊದಲ ಹಂತದಲ್ಲಿ ಬಿಡ್‌ದಾರರ ಹಣಕಾಸಿನ ಸ್ಥಿತಿಯ ಪ್ರಕಾರ ಎಆರ್‌ಎವಿ ಅರ್ಹತೆ ಹೊಂದಿರಲಿಲ್ಲ. ಹೀಗಾಗಿ ಈ ಸಂಸ್ಥೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ 5,000 ಕಿ ಮೀ ಗಳಿಗೆ ಬದಲಾಯಿಸಲಾಗಿತ್ತು ಮತ್ತು  ಹಾರಾಟ ಅಥವಾ 1,000 ಕಿ ಮೀಗಳಿಗೆ ಸರಿ ಹೊಂದಿಸಲಾಗಿತ್ತು. ಈ ರೀತಿ ಷರತ್ತುಗಳನ್ನು ಬದಲಾಯಿಸಿದ್ದು ಎಆರ್‌ಎವಿ ಸಂಸ್ಥೆಯು ಟೆಂಡರ್‌ನಲ್ಲಿ ಭಾಗವಹಿಸಲು ಅನುಕೂಲ ಮಾಡಿಕೊಟ್ಟಂತಾಗಿತ್ತು ಎಂಬ ಅಂಶವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

ಅಲ್ಲದೇ ಮತ್ತೊಮ್ಮೆ ಪ್ಯಾಕೇಜ್‌ಗಳನ್ನು ವಿಭಜಿಸಲಾಗಿತ್ತು. ಪ್ರತಿ ಪ್ಯಾಕೇಜ್‌  5 ಕೋಟಿಗಿಂತ ಕಡಿಮೆ ಎಂದು ತೋರಿಸಲು ವಿಭಜಿಸಲಾಗಿತ್ತು. ಹಾಗೆಯೇ ಆಯುಕ್ತರಾಗಿದ್ದ ಮುನೀಶ್‌ ಮೌದ್ಗಿಲ್‌ ಅವರು ತಮಗಿಲ್ಲದೇ ಇರುವ ಅಧಿಕಾರವನ್ನು ಸ್ವತಃ  ಚಲಾಯಿಸಿದ್ದರು. ಅನುಮೋದನೆ ಪಡೆದುಕೊಳ್ಳದೇ ಟೆಂಡರ್‌ ಆಹ್ವಾನಿಸಿರುವುದು ಮತ್ತು ಹಣ ಪಾವತಿ ಮಾಡುವವರೆಗೆ ಎಲ್ಲಾ ಅಧಿಕಾರವನ್ನೂ ಚಲಾಯಿಸಿದ್ದರು ಎಂದು ದೂರಿರುವುದು ತಿಳಿದು ಬಂದಿದೆ.

 

 

ಏನಿದು  ಸ್ವಾಮಿತ್ವ ಯೋಜನೆ?

 

ಇದು ಸುಧಾರಿತ ತಂತ್ರಜ್ಞಾನದೊಂದಿಗೆ ಗ್ರಾಮೀಣ ಪ್ರದೇಶಗಳ ಭೂ ಸಮೀಕ್ಷೆ ಮತ್ತುಗ ಮ್ಯಾಪಿಂಗ್‌ ಮಾಡುವ ಯೋಜನೆ. ಗ್ರಾಮೀಣ ಭಾಗದಲ್ಲಿರುವ ಕುಟುಂಬಗಳಿಗೆ ತಮ್ಮ ಆಸ್ತಿ ಹಕ್ಕನ ಪತ್ರ ನೀಡುವ ಕಾರ್ಯಕ್ರಮ. ಗ್ರಾಮೀಣ ಜನರ ಮನೆಯ ಮಾಲೀಕರಿಗೂ ತಮ್ಮ ಅಸ್ತಿ ಹಕ್ಕುಗಳ ದಾಖಲೆ ಹಾಗೂ ಪತ್ರಗಳನ್ನು ವಿತರಿಸುವ ಗುರಿ ಈ ಯೋಜನೆಯು ಹೊಂದಿದೆ.

 

ನಗರ ಪ್ರದೇಶಗಳಲ್ಲಿರುವಂತೆ ಗ್ರಾಮೀನ ಜನರಿಗೂ ಸಾಲ ಸಾಲ ಮತ್ತು ಇತರೆ ಆರ್ಥಿಕ ಪ್ರಯೋಗಜನಗಳನ್ನು ಪಡೆದಯಲು ಗ್ರಾಮಸ್ಥರ ಆಸ್ತಿಯನ್ನು ಆರ್ಥಿಕ ಆಸ್ತಿಯನ್ನಾಗಿ ಬಳಸಲು ಈ ಯೋಜನೆಯು ದಾರಿಮಾಡಿಕೊಡುತ್ತದೆ.

 

ಭೂ ದಾಖಲೆಗಳನ್ನು ರಚಿಸಲು ಡ್ರೋನ್‌ಗಳನ್ನು ಬಳಸಿಕೊಂಡು ಮತ್ತು ಗ್ರಾಮೀಣ ಜನವಸತಿ ಭೂಮಿಯನ್ನು ಮ್ಯಾಪಿಂಗ್ ಮಾಡುವ ಗುರಿ ಹೊಂದಿಎ. ಈ ಯೋಜನೆಯು ಡ್ರೋನ್‌ ತಯಾಋಇಕೆ ವ್ಯವಸ್ಥೆಗೆ ಉತ್ತೇಜನವನ್ನು ನೀಡಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಯೋಜನೆಗಳಿಗೆ  ನಿಖರವಾದ ಭೂ ದಾಖಲೆಗಳನ್ನು ರಚಿಸುವ ಗುರಿಯನ್ನು ಹೊಂದಿದೆ.

the fil favicon

SUPPORT THE FILE

Latest News

Related Posts