ಸಮೀಕ್ಷೆಗೆ ಕೋಟಿ ರು.; ಎಂಒಯು ಸೇರಿ ಹಲವು ವಿವರಗಳೇ ಲಭ್ಯವಿಲ್ಲವೆಂದ ಆಹಾರ ಇಲಾಖೆ

ಬೆಂಗಳೂರು; ಅನ್ನ ಭಾಗ್ಯ ಯೋಜನೆ ಸಮೀಕ್ಷೆ ನಡೆಸುವ ಸಂಬಂಧ  ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಗೆ ನೀಡಿರುವ ಕಾರ್ಯಾದೇಶ,  ಎಂಒಯು, ಒಪ್ಪಂದ ಸೇರಿದಂತೆ ಇನ್ನಿತರೆ ಯಾವುದೇ ದಾಖಲೆಗಳು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಬಳಿಯೇ  ಲಭ್ಯವಿಲ್ಲ.

 

ಅನ್ನಭಾಗ್ಯ ಯೋಜನೆ ಸಮೀಕ್ಷೆ ನಡೆಸಲು 25 ಲಕ್ಷ ರು. ಅನುದಾನ ಒದಗಿಸಲು ಆರ್ಥಿಕ ಇಲಾಖೆಯು 4(ಜಿ) ವಿನಾಯಿತಿ ನೀಡಿದೆ.  ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕ ವ್ಯವಹಾರಗಳ ಇಲಾಖೆಯು ಡಿಸೆಂಬರ್‍‌ ತಿಂಗಳ ಸಮೀಕ್ಷೆಗೆ ಹಣ ಬಿಡುಗಡೆ ಮಾಡುವ ಸಂಬಂಧ 2023ರ ಸೆ.26ರಂದು ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿತ್ತು.

 

ಈ ಸಂಬಂಧ ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಯೊಂದಿಗೆ ಮಾಡಿಕೊಂಡಿರುವ ಎಂಒಯು, ಒಪ್ಪಂದ, ಟರ್ಮ್ಸ್‌ ಆಫ್ ರೆಫರೆನ್ಸ್‌, ಟರ್ಮ್ಸ್‌ ಆಫ್‌ ಕಂಡೀಷನ್ಸ್‌ ಸೇರಿದಂತೆ ಇನ್ನಿತರೆ ಸಮಗ್ರ ವಿವರ ಮತ್ತು ಸಮಗ್ರ ಕಡತವನ್ನು ಕೋರಿ ‘ದಿ ಫೈಲ್‌’ 2023ರ ನವೆಂಬರ್‍‌ 9ರಂದು ಆರ್‍‌ಟಿಐ ಅಡಿಯಲ್ಲಿ  ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಸರ್ಕಾರವು 2023ರ ನವೆಂಬರ್‍‌ 24ರಂದು ಆಯುಕ್ತರಿಗೆ ವರ್ಗಾಯಿಸಿತ್ತು.

 

ಇದಕ್ಕೆ ಆಯುಕ್ತರ ಕಚೇರಿಯು  2023ರ ಡಿಸೆಂಬರ್‍‌ 19ರಂದು ಉತ್ತರ ನೀಡಿದೆ.

 

ಉತ್ತರದಲ್ಲೇನಿದೆ?

 

ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ಎಂಒಯು, ಅಗ್ರಿಮೆಂಟ್‌, ಟರ್ಮ್ಸ್‌ ಆಫ್‌ ರೆಫರೆನ್ಸ್‌, ಟರ್ಮ್ಸ್‌ ಆಫ್‌ ಕಂಡೀಷನ್‌ ವಿವರಗಳು ಲಭ್ಯವಿಲ್ಲ ಎಂಬ ಅಂಶವನ್ನು ತಿಳಿಯಪಡಿಸಿದೆ ಎಂದು ಉತ್ತರ ಒದಗಿಸಿದೆ.

 

 

ಈ ಸಂಬಂಧ ಇಲಾಖೆಯ ಸಚಿವ ಮುನಿಯಪ್ಪ  ಮತ್ತು ಆಯುಕ್ತರೊಂದಿಗೆ  ಚರ್ಚಿಸಿದ ನಂತರ ಅಪರ ನಿರ್ದೇಶಕರು ಈ  ಮಾಹಿತಿ ಒದಗಿಸಿದ್ದಾರೆ ಎಂದು ಗೊತ್ತಾಗಿದೆ.

 

ಅನ್ನಭಾಗ್ಯ ಯೋಜನೆ ಸಮೀಕ್ಷೆ ಸಂಬಂಧ ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಗೆ 25 ಲಕ್ಷ ರು. ಅನುದಾನ ಒದಗಿಸಲು ಆರ್ಥಿಕ ಇಲಾಖೆಯು 4(ಜಿ) ವಿನಾಯಿತಿ ನೀಡಿತ್ತು. ಈ ಕಂಪನಿಗೆ 25 ಲಕ್ಷ ರು. ಪಾವತಿಸಲು ಇಲಾಖೆಯು ಆಯುಕ್ತರಿಗೆ ಪತ್ರ ಬರೆದಿತ್ತು.

ಗ್ಯಾರಂಟಿಗಳ ಸಮೀಕ್ಷೆ; ಮಾಧ್ಯಮ ಸಂಸ್ಥೆಗೆ ಕೋಟಿ ರು ಕೊಟ್ಟ ಸರ್ಕಾರ

 

ಯಾವುದೇ ಇಲಾಖೆ, ನಿಗಮವು ಮತ್ತೊಂದು ಖಾಸಗಿ ಕಂಪನಿಗೆ ಹಣ ಪಾವತಿಸುವ ಮುನ್ನ ಸಂಬಂಧಪಟ್ಟ ಕಂಪನಿ, ಏಜೆನ್ಸಿಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತದೆ.  ಆದರೆ ಈ ಸಂಬಂಧ   ಆಯುಕ್ತರ ಕಚೇರಿಯಲ್ಲಿಯೂ ಸಮಗ್ರ ವಿವರಗಳೇ ಲಭ್ಯವಿಲ್ಲ ಎಂದು ನೀಡಿರುವ ಉತ್ತರವು ಸಂಶಯಗಳಿಗೆ ಕಾರಣವಾಗಿದೆ.

 

ಗೃಹ ಜ್ಯೋತಿ ಯೋಜನೆ ಸಮೀಕ್ಷೆ ನಡೆಸಲು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯು ಇದೇ ಎಂ2ಎಂ ಮೀಡಿಯಾ ನೆಟ್‌ವರ್ಕ್‌ಗೆ ಕಾರ್ಯಾದೇಶ ನೀಡಿದೆ. ಆದರೆ ಕಡತವನ್ನು ಒದಗಿಸದೇ ಮುಚ್ಚಿಟ್ಟಿತ್ತು.

ಕೋಟಿ ರು. ವೆಚ್ಚದ ಸಮೀಕ್ಷೆ; ಎಂ2ಎಂ ಕಂಪನಿಗೆ ನೀಡಿರುವ ಆದೇಶದ ಸಮಗ್ರ ಕಡತವನ್ನೇ ಮುಚ್ಚಿಟ್ಟ ಬೆಸ್ಕಾಂ

ಅದೇ ರೀತಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಸಹ ಕಾರ್ಯಾದೇಶವೂ ಸೇರಿದಂತೆ ಯಾವುದೇ ದಾಖಲೆಗಳನ್ನೂ ಆರ್‌ಟಿಐ ಅಡಿಯಲ್ಲಿ ಒದಗಿಸಿರಲಿಲ್ಲ.

ಕೋಟಿ ರು. ಸಮೀಕ್ಷೆ; 20 ಲಕ್ಷರು ಮುಂಗಡ ನೀಡಿ ದಾಖಲೆಗಳನ್ನೇ ಒದಗಿಸದ ಕೆಎಸ್‌ಆರ್‍‌ಟಿಸಿ

ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಸಮೀಕ್ಷೆ ನಡೆಸುವ ಸಂಬಂಧ 4(ಜಿ) ವಿನಾಯಿತಿ ನೀಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts