ಅಧಿಕಾರಿ, ನೌಕರರ ವಿರುದ್ಧ ಇಲಾಖೆ ವಿಚಾರಣೆ; 838 ಪ್ರಕರಣಗಳಲ್ಲಿ ಚಾರ್ಜ್‌ಶೀಟ್‌

ಬೆಂಗಳೂರು; ಸಚಿವಾಲಯದ ಇಲಾಖೆಗಳಲ್ಲಿ ಇಲಾಖಾ ವಿಚಾರಣೆಗಳಿಗೆ ಗುರಿಯಾಗುತ್ತಿರುವ ಅಧಿಕಾರಿಗಳ ಸಂಖ್ಯೆಯು ಹೆಚ್ಚುತ್ತಿದೆ. 2023ರ ಆಗಸ್ಟ್‌ 31ರ ಅಂತ್ಯಕ್ಕೆ     ಪ್ರಕರಣಗಳ ಸಂಖ್ಯೆಯು 1,090 ರಷ್ಟಿದೆ. ಈ ಪೈಕಿ 838 ಪ್ರಕರಣಗಳಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ದೋಷಾರೋಪಣೆ ಪಟ್ಟಿ ಜಾರಿಯಾಗಿದೆ. ಲೋಕಾಯುಕ್ತದಿಂದ ಒಟ್ಟು 1,784 ಪ್ರಕರಣಗಳನ್ನು   ಸಚಿವಾಲಯದ ಇಲಾಖೆಗಳು ಸ್ವೀಕರಿಸಿವೆ.

 

ಈ ಪೈಕಿ ನಿಯಮ 14(ಎ) ರಡಿ 1,520 ಪ್ರಕರಣಗಳನ್ನು ತನಿಖೆಗೆ ವಹಿಸಲಾಗಿದೆ. ಇದೇ ನಿಯಮದಡಿ ವರದಿ ಸ್ವೀಕರಿಸಿರುವ ಪ್ರಕರಣಗಳ ಪೈಕಿ ಒಟ್ಟಾರೆ 507 ಪ್ರಕರಣಗಳಲ್ಲಿ ಅಂತಿಮ ಆದೇಶ ಹೊರಡಿಸಿರುವುದು  ಇದೀಗ ಬಹಿರಂಗವಾಗಿದೆ.

 

ಇಲಾಖೆ ವಿಚಾರಣೆಗಳಿಗೆ ಸಂಬಂಧಿಸಿದಂತೆ ಕೆಡಿಪಿ ಸಭೆಗೆ ಯೋಜನಾ ಇಲಾಖೆಯು ಅಂಕಿ ಅಂಶಗಳನ್ನು ಮಂಡಿಸಿದೆ. ಇದರ ವಿವರಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಸಚಿವಾಲಯದ ಇಲಾಖೆಗಳಲ್ಲಿ ಒಟ್ಟು 1,090 ಇಲಾಖೆ ಪ್ರಕರಣಗಳ ಪೈಕಿ  ನಿಯಮ 11ರಡಿ  830 ಹಾಗೂ ನಿಯಮ 12ರಡಿ 65  ಪ್ರಕರಣಗಳಲ್ಲಿ ದೋಷಾರೋಪಣೆ ಪಟ್ಟಿ ಜಾರಿ ಮಾಡಿದೆ.

 

ದೋಷಾರೋಪಣಾ ಪಟ್ಟಿಗೆ ವಿವರಣೆ ಕೊಟ್ಟಿರುವ 694  ಪ್ರಕರಣಗಳಲ್ಲಿ 605  ಪ್ರಕರಣಗಳಲ್ಲಿ ವಿಚಾರಣಾಧಿಕಾರಿಗಳನ್ನು ನೇಮಕ ಮಾಡಿರುವುದು ಅಂಕಿ ಅಂಶಗಳಿಂದ ಗೊತ್ತಾಗಿದೆ. ಹಾಗೆಯೇ ಸಚಿವಾಲಯದ ಇಲಾಖೆಗಳಿಗೆ ಲೋಕಾಯುಕ್ತದಿಂದ 12(1) ಅಡಿ ಒಟ್ಟು 483 ಪ್ರಕರಣಗಳಲ್ಲಿ 210 ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವಹಿಸಿದೆ.

 

ಅದೇ ರೀತಿ 2ನೇ ಕಾರಣ ಕೇಳುವ ನೋಟೀಸ್‌ಗೆ ಆರೋಪಿತ ಅಧಿಕಾರಿ, ನೌಕರರಿಂದ ವಿವರಣೆ ಪಡೆದಿರುವ 122  ಪ್ರಕರಣಗಳಲ್ಲಿ 77 ಪ್ರಕರಣಗಳಿಗೆ ಮಾತ್ರ ಅಂತಿಮ ಆದೇಶ ಹೊರಡಿಸಿದೆ. ದೋಷಾರೋಪಣೆ ಪಟ್ಟಿ ಜಾರಿ ಮಾಡಿರುವ ಇಲಾಖೆಗಳ ಪೈಕಿ ಕಂದಾಯ ಇಲಾಖೆಯೊಂದರಲ್ಲೇ ಅತಿ ಹೆಚ್ಚು ಎಂದರೆ 221 ಅಧಿಕಾರಿಗಳಿಗೆ ನಿಯಮ 11ರಡಿ ದೋಷಾರೋಪಣೆ ಪಟ್ಟಿ ಜಾರಿಯಾಗಿರುವುದು ತಿಳಿದು ಬಂದಿದೆ.

 

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ 138, ನಗರಾಭಿವೃದ್ದಿ ಇಲಾಖೆಯಲ್ಲಿ 96, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ 95, ಆಹಾರ ನಾಗರಿಕ ಸರಬರಾಜು ಇಲಾಖೆಯಲ್ಲಿ 29, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಲ್ಲಿ 15, ಜಲಸಂಪನ್ಮೂಲ ಇಲಾಖೆಯಲ್ಲಿ 11,  ಲೋಕೋಪಯೋಗಿ ಇಲಾಖೆಯಲ್ಲಿ 17, ತೋಟಗಾರಿಕೆ ಇಲಾಖೆಯಲ್ಲಿ 19, ಆರ್ಥಿಕ ಇಲಾಖೆಯಲ್ಲಿ 18 ಪ್ರಕರಣಗಳಲ್ಲಿ ದೋಷಾರೋಪಣೆ ಪಟ್ಟಿ ಜಾರಿಯಾಗಿದೆ. ಆದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಒಟ್ಟು 32 ಪ್ರಕರಣಗಳಿದ್ದರೂ ಒಬ್ಬ ಅಧಿಕಾರಿಗೂ ದೋಷಾರೋಪಣೆ ಪಟ್ಟಿ ಜಾರಿಯಾಗಿಲ್ಲ ಎಂಬುದು ಅಂಕಿ ಅಂಶದಿಂದ ಗೊತ್ತಾಗಿದೆ.

 

ಅದೇ ರೀತಿ ಸಚಿವಾಲಯದ ಇಲಾಖೆಗಳಿಗೆ ನಿಯಮ 12(1) ರಡಿ ಸ್ವೀಕೃತವಾಗಿದ್ದ 468 ಪ್ರಕರಣಗಳ ಪೈಕಿ 211 ಪ್ರಕರಣಗಳನ್ನು ಜೂನ್‌ ಅಂತ್ಯಕ್ಕೆ  ಲೋಕಾಯುಕ್ತಕ್ಕೆ ವಹಿಸಿ ಆದೇಶಿಸಿತ್ತು. ನಿಯಮ 12(3) ಅಡಿ ಸಚಿವಾಲಯದ ಇಲಾಖೆಗಳಿಗೆ 1,818 ಪ್ರಕರಣಗಳ ಪೈಕಿ ನಿಯಮ 14(ಎ) ಅಡಿ 1,550 ಪ್ರಕರಣಗಳನ್ನು ವಹಿಸಲಾಗಿತ್ತು. ನಿಯಮ 14(ಎ) ಅಡಿ 399 ಪ್ರಕರಣಗಳಲ್ಲಿ ಅಂತಿಮ ಆದೇಶ ಹೊರಡಿಸಿತ್ತು.

 

12(3) ಅಡಿಯಲ್ಲಿ ಕಂದಾಯ ಇಲಾಖೆಯೊಂದರಲ್ಲೇ 530  ಪ್ರಕರಣಗಳು ಸ್ವೀಕೃತವಾಗಿವೆ. ಒಳಾಡಳಿತ ಇಲಾಖೆಯಲ್ಲಿ 81, ಲೋಕೋಪಯೋಗಿ ಇಲಾಖೆಯಲ್ಲಿ 168, ಸಿಬ್ಬಂದಿ ಆಡಳಿತ ಸುಧಾರಣೆಯಲ್ಲಿ 82, ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಯಲ್ಲಿ 108, ನಗರಾಭಿವೃದ್ಧಿಯಲ್ಲಿ   293 ಪ್ರಕರಣಗಳು ಜೂನ್‌ ಅಂತ್ಯಕ್ಕೆ ಬಾಕಿ ಇದ್ದವು.

 

ಅಮಾನತು ಪ್ರಕರಣಗಳಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯಲ್ಲಿ 6 ತಿಂಗಳಿಗೂ ಮೇಲ್ಪಟ್ಟ ಪ್ರಕರಣಗಳು ಆಗಸ್ಟ್‌ ಅಂತ್ಯದವರೆಗೆ 81 ಇದ್ದವು. ಇದೇ ಇಲಾಖೆಯಲ್ಲಿ ಜೂನ್‌ ಅಂತ್ಯದವರೆಗೆ 77 ಪ್ರಕರಣಗಳಿರುವುದು ಹೆಚ್‌ಆರ್‍‌ಎಂಎಸ್‌ನ ದಾಖಲೆಯಿಂದ ಗೊತ್ತಾಗಿದೆ. ಸಚಿವಾಲಯದ ಇಲಾಖಾ ಅಮಾನತು ಪ್ರಕರಣಗಳ ಪೈಕಿ ಒಳಾಡಳಿತ ಇಲಾಖೆಯಲ್ಲಿಯೇ ಆಗಸ್ಟ್‌ ಅಂತ್ಯದವರೆಗೆ ಒಟ್ಟಾರೆ 64 ಪ್ರಕರಣಗಳಿವೆ. ಇದೇ ಇಲಾಖೆಯಲ್ಲಿ ಜೂನ್‌ ಅಂತ್ಯದವರೆಗೆ 63 ಪ್ರಕರಣಗಳಿದ್ದವು.

 

ಲೋಕಾಯುಕ್ತ ನಿಯಮ 12(1) ಅಡಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿ ಒಟ್ಟು 77 ಪ್ರಕರಣಗಳು ಸ್ವೀಕೃತವಾಗಿವೆ. ಕಂದಾಯ ಇಅಖೆಯಲ್ಲಿ 84, ನಗರಾಭಿವೃದ್ಧಿ ಇಲಾಖೆಯಲ್ಲಿ 251 ಪ್ರಕರಣಗಳಿವೆ.

the fil favicon

SUPPORT THE FILE

Latest News

Related Posts