Sunday | March 22, 2026 |

ಮೊದಲ ತ್ರೈಮಾಸಿಕದ ಹಣಕಾಸು ಪರಿಸ್ಥಿತಿ;18,952 ಕೋಟಿ ರು. ರಾಜಸ್ವ ಕೊರತೆ, 7,270.69 ಕೋಟಿ ರು. ವ್ಯತ್ಯಾಸ

Support THE-FILE

spot_img

ಬೆಂಗಳೂರು; ಅಬಕಾರಿ, ಸ್ವಂತ ತೆರಿಗೆ, ತೆರಿಗೆಯೇತರ, ಮೋಟಾರು ವಾಹನ, ವಾಣಿಜ್ಯ, ಮುದ್ರಾಂಕ, ನೋಂದಣಿ, ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ ಹಾಗೂ ಕೇಂದ್ರ ಸರ್ಕಾರದ ಸಹಾಯನುದಾನ ಸೇರಿದಂತೆ 2023-24ನೇ ಸಾಲಿನಲ್ಲಿ ಜಮೆಗೆ ಸಂಬಂಧಿಸಿದಂತೆ ನಿಗದಿಪಡಿಸಿದ್ದ  4,11,712.41 ಕೋಟಿ ರು ಪೈಕಿ ಮೊದಲ ತ್ರೈಮಾಸಿಕ (ಏಪ್ರಿಲ್‌-ಜೂನ್‌)ದಲ್ಲಿ ಒಟ್ಟಾರೆ 1,19,788.49 ಕೋಟಿ ರು. ಜಮೆಯಾಗಿದೆ.

 

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 7,270.69 ಕೋಟಿ ರು. ವ್ಯತ್ಯಾಸವಿರುವುದು ಕಂಡು ಬಂದಿದೆ. ಅದೇ ರೀತಿ 2023-24ನೇ ಸಾಲಿನ ಏಪ್ರಿಲ್‌ನಿಂದ ಜುಲೈವರೆಗೆ 18,952.77 ಕೋಟಿ ರು. ರಾಜಸ್ವ ಕೊರತೆ ಅನುಭವಿಸುತ್ತಿದೆ.

 

ಅಬಕಾರಿ ಸೇರಿದಂತೆ ಇನ್ನಿತರೆ ಇಲಾಖೆಗಳಲ್ಲಿ ರಾಜಸ್ವ ಸಂಗ್ರಹಣೆಯಲ್ಲಿ ಕುಸಿತ ಆಗಿರುವುದರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗಷ್ಟೇ ಸಭೆ ನಡೆಸಿದ್ದರು. ರಾಜಸ್ವ ಸಂಗ್ರಹದಲ್ಲಿ ಹೆಚ್ಚಳ ಸಾಧಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿರುವ ಬೆನ್ನಲ್ಲೇ 18,952.77 ಕೋಟಿ ರು. ರಾಜಸ್ವ ಕೊರತೆಯಾಗಿದೆ ಎಂಬ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.

 

2022-23ನೇ ಸಾಲಿನ ಏಪ್ರಿಲ್‌ನಿಂದ ಜುಲೈವರೆಗೆ 13,131.93 ಕೋಟಿ ರು. ರಾಜಸ್ವ ಕೊರತೆ ಎದುರಿಸಿತ್ತು. ಇದನ್ನು ಹೋಲಿಸಿದರೆ ಪ್ರಸಕ್ತ ಆರ್ಥಿಕ ಸಾಲಿನ ಏಪ್ರಿಲ್‌ನಿಂದ ಜುಲೈವರೆಗೆ 5,820.84 ಕೋಟಿ ರು.ನಷ್ಟು ವ್ಯತ್ಯಾಸವಿರುವುದು ಕಂಡು ಬಂದಿದೆ. ಆರ್ಥಿಕ ಇಲಾಖೆಯು ತನ್ನ ಅಧಿಕೃತ ಜಾಲತಾಣದಲ್ಲಿ ಈ ವಿವರಗಳನ್ನು ಪ್ರಕಟಿಸಿದೆ.

 

ಅಬಕಾರಿ ಆದಾಯಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿನಲ್ಲಿ 36,000 ಕೋಟಿ ರು ರಾಜಸ್ವ ಸಂಗ್ರಹಣೆಗೆ ಗುರಿ ನಿಗದಿಪಡಿಸಲಾಗಿದೆ. ಈ ಪೈಕಿ 2023ರ ಏಪ್ರಿಲ್‌ನಿಂದ ಜುಲೈ ಅಂತ್ಯದವರೆಗೆ 11,443.07 ಕೋಟಿ ರು. ಸಂಗ್ರಹಿಸಲಾಗಿದೆ. ಇದು ಒಟ್ಟು ಗುರಿಯಲ್ಲಿ ಶೇ. 31.24ರಷ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ.16.41ರಷ್ಟಿದೆ.

 

2022-23ನೇ ಸಾಲಿನಲ್ಲಿ 29,000 ಕೋಟಿ ರು. ಸಂಗ್ರಹಿಸಲು ಗುರಿ ನಿಗದಿಪಡಿಸಲಾಗಿತ್ತು. ಇದೇ ಏಪ್ರಿಲ್‌ನಿಂದ ಜುಲೈ ಅಂತ್ಯದವರೆಗೆ 10,068.37 ಕೋಟಿ ರು. ಸಂಗ್ರಹಿಸಿತ್ತು. ಇದು ಒಟ್ಟಾರೆ ಗುರಿಗೆ ಶೇ.34.72ರಷ್ಟಿತ್ತು. ಎರಡೂ ಸಾಲಿನಲ್ಲಿ ಶೇಕಡವಾರು ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಶೇ.3ರಷ್ಟು ವ್ಯತ್ಯಾಸವಿದೆ.

 

ರಾಜಸ್ವ ಸ್ವೀಕೃತಿಯಲ್ಲಿ ಸ್ವಂತ ತೆರಿಗೆ, ಸ್ವಂತ ತೆರಿಗೆಯೇತರ, ವಿವಿಧ ಬಂಡವಾಳಜಮೆ, ಋಣೇತರ ಬಂಡವಾಳ, ವಿವಿಧ ಬಂಡವಾಳ ಜಮೆ, ಸಾರ್ವಜನಿಕ ಸಾಲವೂ ಸೇರಿಕೊಂಡಂತೆ ಸೇರಿದಂತೆ ಒಟ್ಟಾರೆ 2023-24ನೇ ಸಾಲಿನ ಏಪ್ರಿಲ್‌ನಿಂದ ಜುಲೈವರೆಗೆ 68,756.15 ಕೋಟಿ ರು. (ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ ಮುದ್ರಾಂಕ, ಇತರೆ ಹೊರತುಪಡಿಸಿ) ಜಮೆಯಾಗಿದೆ.  ಇದೇ ವಿಭಾಗದಲ್ಲಿ 2022-23ನೇ ಸಾಲಿನ ಏಪ್ರಿಲ್‌ನಿಂದ ಜುಲೈವರೆಗೆ ಒಟ್ಟಾರೆ 68,619.43 ಕೋಟಿ ರು. ಜಮೆಯಾಗಿತ್ತು.

 

 

ಇನ್ನು ಸ್ವಂತ ತೆರಿಗೆ ರಾಜಸ್ವ 2023-24ನೇ ಸಾಲಿನಲ್ಲಿ 1,73,302.60 ಕೋಟಿ ರು. ನಿಗದಿಪಡಿಸಲಾಗಿದೆ. ಏಪ್ರಿಲ್‌ನಿಂದ ಜುಲೈವರೆಗೆ 51,712.92 ಕೋಟಿ ರು ಸಂಗ್ರಹವಾಗಿದೆ. ಇದು ಒಟ್ಟಾರೆ ಶೇ.29.84ರಷ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.15.06ರಷ್ಟು ಬೆಳವಣಿಗೆ ಯಾಗಿದೆ.

 

ಸ್ವಂತ ರಾಜಸ್ವ ತೆರಿಗೆ ಸಂಗ್ರಹವು 2022-23ನೇ ಸಾಲಿನಲ್ಲಿ 1,26,882.76 ಕೋಟಿ ಸಂಗ್ರಹಿಸಲು ನಿಗದಿಗೊಳಿಸಿತ್ತು. ಏಪ್ರಿಲ್‌ನಿಂದ ಜುಲೈ ಅಂತ್ಯದವರೆಗೆ 44,945.57 ಕೋಟಿ ರು. ಸಂಗ್ರಹವಾಗಿತ್ತು. ಇದು ಶೇ.35.42ರಷ್ಟಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.5.58ರಷ್ಟು ವ್ಯತ್ಯಾಸವಿರುವುದು ಕಂಡು ಬಂದಿದೆ.

 

ವಾಣಿಜ್ಯ ತೆರಿಗೆಯಲ್ಲಿ 2023-24ನೇ ಸಾಲಿಗೆ 98,650.00 ಕೋಟಿ ರು. ನಿಗದಿಪಡಿಸಲಾಗಿದೆ. ಏಪ್ರಿಲ್‌ನಿಂದ ಜುಲೈ ಅಂತ್ಯದವರೆಗೆ 30,820.03 ಕೋಟಿ ರು. ಸಂಗ್ರಹವಾಗಿದೆ. ಇದು ಶೇ.31.24ರಷ್ಟಿದೆ. 2022-23ನೇ ಸಾಲಿನಲ್ಲಿ 72,010.00 ಕೋಟಿ ರು. ನಿಗದಿಗೊಳಿಸಲಾಗಿತ್ತು. ಏಪ್ರಿಲ್‌ನಿಂದ ಜುಲೈ ಅಂತ್ಯದವರೆಗೆ 26,476.34 ಕೋಟಿ ರು. ಸಂಗ್ರಹವಾಗಿತ್ತು. ಇದು ಶೇ.36.77ರಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 5.53ರಷ್ಟು ವ್ಯತ್ಯಾಸವಿದೆ.

 

ಮೋಟಾರು ವಾಹನ ತೆರಿಗೆಯಲ್ಲಿ 2023-24ನೇ ಸಾಲಿಗೆ 11,500.00 ಕೋಟಿ ರು. ನಿಗದಿಪಡಿಸಿದೆ. ಏಪ್ರಿಲ್‌ನಿಂದ ಜುಲೈವರೆಗೆ 3,309.64 ಕೋಟಿ ಸಂಗ್ರಹವಾಗಿದೆ. ಶೇ.28.78ರಷ್ಟಿದೆ. 2022-23ನೇ ಸಾಲಿನಲ್ಲಿ 8,006.69 ಕೋಟಿ ರು. ನಿಗದಿಪಡಿಸಲಾಗಿತ್ತು. ಏಪ್ರಿಲ್‌ನಿಂದ ಜುಲೈವರೆಗೆ 2,869.01 ಕೋಟಿ ರು. ಸಂಗ್ರಹಿಸಲಾಗಿತ್ತು. ಶೇ.35.83ರಷ್ಟು ಪ್ರಗತಿ ಹೊಂದಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅವಧಿಗೆ ಶೇ.7.05ರಷ್ಟು ವ್ಯತ್ಯಾಸವಿರುವುದು ತಿಳಿದು ಬಂದಿದೆ.

 

ಮುದ್ರಾಂಕ ಮತ್ತು ನೋಂದಣಿಯಲ್ಲಿ 2023-24ನೇ ಸಾಲಿನಲ್ಲಿ 25,000 ಕೋಟಿ ರು. ನಿಗದಿಪಡಿಸಿದ್ದು ಏಪ್ರಿಲ್‌ನಿಂದ ಜುಲೈವರೆಗೆ 5,439.31 ಕೋಟಿ ರು. ಸಂಗ್ರಹವಾಗಿದೆ. ಶೇ.21.76ರಷ್ಟು ಪ್ರಗತಿ ಹೊಂದಿದೆ. 2022-23ನೇ ಸಾಲಿನಲ್ಲಿ 15,000 ಕೋಟಿ ರು.ನಿಗದಿಪಡಿಸಿದ್ದು ಏಪ್ರಿಲ್‌ ನಿಂದ ಜುಲೈವರೆಗೆ 5,285.81 ಕೋಟಿ ರು. ಸಂಗ್ರಹವವಾಗಿತ್ತು. ಶೇ.35.24ರಷ್ಟು ಪ್ರಗತಿ ಸಾಧಿಸಿತ್ತು. ಕಳೆದ ಸಾಲಿಗೆ ಹೋಲಿಸಿದರೆ ಶೇ.13.48ರಷ್ಟು ವ್ಯತ್ಯಾಸವಿದೆ.

 

ಇತರೆ ವಿಭಾಗದಲ್ಲಿ 2,152.60 ಕೋಟಿ ರು. ನಿಗದಿಪಡಿಸಿದ್ದು ಏಪ್ರಿಲ್‌ನಿಂದ ಜುಲೈವರೆಗೆ 700.88 ಕೋಟಿ ರು. ಸಂಗ್ರಹವಾಗಿದೆ. ಶೇ. 35.56ರಷ್ಟಿದೆ. 2022-23ನೇ ಸಾಲಿನಲ್ಲಿ 2,866.07 ಕೋಟಿ ರು. ನಿಗದಿಪಡಿಸಿದ್ದು ಏಪ್ರಿಲ್‌ನಿಂದ ಜುಲೈವರೆಗೆ 246.05 ಕೋಟಿ ರು.ಸಂಗ್ರಹವಾಗಿತ್ತು. ಶೇ.8.58ರಷ್ಟು ಪ್ರಗತಿ ಹೊಂದಿತ್ತು.

 

ಸ್ವಂತ ತೆರಿಗೆಯೇತರ ರಾಜಸ್ವವು 2023-24ನೇ ಸಾಲಿನಲ್ಲಿ 12,500 ಕೋಟಿ ರು.ಗೆ ನಿಗದಿಪಡಿಸಿದ್ದು ಏಪ್ರಿಲ್‌ನಿಂದ ಜುಲೈವರೆಗೆ 3,514.86 ಕೋಟಿ ರು. ಸಂಗ್ರಹವಾಗಿದೆ. ಇದು ಶೇ.28.12ರಷ್ಟಿದೆ. 2022-23ನೇ ಸಾಲಿನಲ್ಲಿ 10,940.57 ಕೋಟಿ ರು. ನಿಗದಿಪಡಿಸಿದ್ದು ಈ ಪೈಕಿ 4,238.96 ಕೋಟಿ ರು. ಸಂಗ್ರಹವಾಗಿತ್ತು. ಶೇ. 38.75ರಷ್ಟಿತ್ತು. ಕಳೆದ ವರ್ಷದ ಇದೇ ಹೊತ್ತಿಗೆ ಹೋಲಿಸಿದರೆ ಶೇ.10.63ರಷ್ಟು ವ್ಯತ್ಯಾಸವಿರುವುದು ಕಂಡು ಬಂದಿದೆ.

 

ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆಗೆ ಸಂಬಂಧಿಸಿದಂತೆ 2023-24ನೇ ಸಾಲಿನಲ್ಲಿ 37,252.21 ಕೋಟಿ ರು. ನಿಗದಿಪಡಿಸಿದ್ದು ಈ ಪೈಕಿ ಏಪ್ರಿಲ್‌ನಿಂದ ಜುಲೈವರೆಗೆ 11,288.22 ಕೋಟಿ ರು. ಜಮೆಯಾಗಿದೆ. ಇದು ಶೇ.30.30ರಷ್ಟಿದೆ. 2022-23ನೇ ಸಾಲಿನಲ್ಲಿ 29,783.21 ಕೋಟಿ ರು. ಜಮೆಯಾಗಬೇಕಿದ್ದ ಪೈಕಿ ಏಪ್ರಿಲ್‌ನಿಂದ ಜುಲೈವರೆಗೆ 7,334.45 ಕೋಟಿ ರು. ಹಂಚಿಕೆಯಾಗಿತ್ತು.

 

ಕೇಂದ್ರ ಸರ್ಕಾರದ ಸಹಾಯಾನುದಾನವು 2023-24ನೇ ಸಾಲಿನಲ್ಲಿ 15,355 ಕೋಟಿ ರು. ನಿಗದಿಪಡಿಸಿದ್ದು ಈ ಪೈಕಿ ಏಪ್ರಿಲ್‌ನಿಂದ ಜುಲೈವರೆಗೆ 1,559.56 ಕೋಟಿ ರು. ಜಮೆಯಾಗಿದೆ. ಶೆ.10.16ರಷ್ಟಿದೆ. 2022-23ನೇ ಸಾಲಿನಲ್ಲಿ 22,281.01 ಕೋಟಿ ರು. ನಿರೀಕ್ಷಿಸಿದ್ದು ಆ ಪೈಕಿ 11,053.24 ಕೋಟಿ ರು. ಜಮೆಯಾಗಿತ್ತು. ಇದು ಶೇ.49.61ರಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.39.45ರಷ್ಟು ವ್ಯತ್ಯಾಸವಿರುವುದು ಗೊತ್ತಾಗಿದೆ.

Hot this week

ಬೆಳೆ ಹವಾಮಾನ ನಿಗಾ ಸಭೆ ನಡೆಸಿಲ್ಲ, ಮಾಹಿತಿ ವ್ಯವಸ್ಥೆಯೂ ಇಲ್ಲ; ಸಿಎಜಿಯನ್ನೂ ತಪ್ಪುದಾರಿಗೆಳೆದ ಸರ್ಕಾರ

ಬೆಂಗಳೂರು;  ರಾಜ್ಯದಲ್ಲಿ ಬರ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಬೆಳೆ ಹವಾಮಾನ ನಿಗಾ...

ರಾಡಾರ್ ಸ್ಟ್ರೀಮ್‌ ಗೇಜ್‌, ವೈರ್‍‌ಲೆಸ್‌ ಸಾಧನ ಅಳವಡಿಕೆ; ನಡೆಯದ ತಾಂತ್ರಿಕ ಪರಿಶೀಲನೆ, 3.54 ಕೋಟಿ ವ್ಯರ್ಥ

ಬೆಂಗಳೂರು;  ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹದ ಮುನ್ನೆಚ್ಚರಿಕೆಗಾಗಿ 2.45 ಕೋಟಿ...

ಎಂ ಆರ್ ಸೀತಾರಾಂ ಕುಟುಂಬ ಸದಸ್ಯರ ವಿರುದ್ಧ ಭೂಕಬಳಿಕೆ ಆರೋಪ; ದೂರು ಮರೆಮಾಚಿತ್ತೇ ಕಂದಾಯ ಇಲಾಖೆ?

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಅಕ್ಲೇನಹಳ್ಳಿ...

ನರೇಗಾ ಅಕ್ರಮ; 2 ವರ್ಷದಲ್ಲಿ 105.1 ಕೋಟಿ ದುರುಪಯೋಗ, 12.34 ಕೋಟಿಯಷ್ಟೇ ವಸೂಲು

  ಬೆಂಗಳೂರು; ಕಳೆದ ಮೂರು ವರ್ಷಗಳಲ್ಲಿ  ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 64,806 ಪ್ರಕರಣಗಳಲ್ಲಿ...

ಚೆಮನೂರು ಬ್ಲಾಕ್‌ನಲ್ಲಿ ಗಣಿಗಾರಿಕೆ; ಅದಾನಿ ಸಮೂಹದ ಎಸಿಸಿಗೆ ಲೆಟರ್ ಆಫ್ ಇಂಟೆಂಟ್‌ ಕೊಡಲು ಗಣಿ ಇಲಾಖೆ ಉತ್ಸುಕ!

ಬೆಂಗಳೂರು; ಭವಿಷ್ಯದ ಸರ್ಕಾರಿ ಟೆಂಡರ್, ಹರಾಜು ಮತ್ತು ಗಣಿಗಾರಿಕೆ ಸಂಬಂಧಿತ ಪ್ರಕ್ರಿಯೆಗಳಲ್ಲಿ...

Topics

ಬೆಳೆ ಹವಾಮಾನ ನಿಗಾ ಸಭೆ ನಡೆಸಿಲ್ಲ, ಮಾಹಿತಿ ವ್ಯವಸ್ಥೆಯೂ ಇಲ್ಲ; ಸಿಎಜಿಯನ್ನೂ ತಪ್ಪುದಾರಿಗೆಳೆದ ಸರ್ಕಾರ

ಬೆಂಗಳೂರು;  ರಾಜ್ಯದಲ್ಲಿ ಬರ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಬೆಳೆ ಹವಾಮಾನ ನಿಗಾ...

ರಾಡಾರ್ ಸ್ಟ್ರೀಮ್‌ ಗೇಜ್‌, ವೈರ್‍‌ಲೆಸ್‌ ಸಾಧನ ಅಳವಡಿಕೆ; ನಡೆಯದ ತಾಂತ್ರಿಕ ಪರಿಶೀಲನೆ, 3.54 ಕೋಟಿ ವ್ಯರ್ಥ

ಬೆಂಗಳೂರು;  ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹದ ಮುನ್ನೆಚ್ಚರಿಕೆಗಾಗಿ 2.45 ಕೋಟಿ...

ಎಂ ಆರ್ ಸೀತಾರಾಂ ಕುಟುಂಬ ಸದಸ್ಯರ ವಿರುದ್ಧ ಭೂಕಬಳಿಕೆ ಆರೋಪ; ದೂರು ಮರೆಮಾಚಿತ್ತೇ ಕಂದಾಯ ಇಲಾಖೆ?

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಅಕ್ಲೇನಹಳ್ಳಿ...

ನರೇಗಾ ಅಕ್ರಮ; 2 ವರ್ಷದಲ್ಲಿ 105.1 ಕೋಟಿ ದುರುಪಯೋಗ, 12.34 ಕೋಟಿಯಷ್ಟೇ ವಸೂಲು

  ಬೆಂಗಳೂರು; ಕಳೆದ ಮೂರು ವರ್ಷಗಳಲ್ಲಿ  ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 64,806 ಪ್ರಕರಣಗಳಲ್ಲಿ...

ಚೆಮನೂರು ಬ್ಲಾಕ್‌ನಲ್ಲಿ ಗಣಿಗಾರಿಕೆ; ಅದಾನಿ ಸಮೂಹದ ಎಸಿಸಿಗೆ ಲೆಟರ್ ಆಫ್ ಇಂಟೆಂಟ್‌ ಕೊಡಲು ಗಣಿ ಇಲಾಖೆ ಉತ್ಸುಕ!

ಬೆಂಗಳೂರು; ಭವಿಷ್ಯದ ಸರ್ಕಾರಿ ಟೆಂಡರ್, ಹರಾಜು ಮತ್ತು ಗಣಿಗಾರಿಕೆ ಸಂಬಂಧಿತ ಪ್ರಕ್ರಿಯೆಗಳಲ್ಲಿ...

ರೋಹಿತ್ ವೇಮುಲ ಕಾಯ್ದೆ; ವ್ಯಾಖ್ಯಾನಗಳು ಅಸ್ಪಷ್ಟ, ಕಾನೂನು ಬಲವಿಲ್ಲ, ವಿಧೇಯಕವೇ ಅಪೂರ್ಣ

ಬೆಂಗಳೂರು; ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಯಾರೊಬ್ಬರೂ ಜಾತಿ ಆಧಾರದಲ್ಲಿ ತಾರತಮ್ಯ ಎದುರಿಸಬಾರದು...

ಗ್ರಾಮಠಾಣ ಜಮೀನು ಅದಲು-ಬದಲು; ಆರ್ಥಿಕ ಇಲಾಖೆ ಆಕ್ಷೇಪ ಬದಿಗೊತ್ತಿ ಎಂ ಆರ್ ಸೀತಾರಾಂ ಕುಟುಂಬದ ಬೆನ್ನಿಗೆ ನಿಂತ ಸರ್ಕಾರ

ಬೆಂಗಳೂರು; ಸರ್ಕಾರಿ ಭೂಮಿಗೆ ರಸ್ತೆಯ ಸಂಪರ್ಕ ಹೊಂದಿಲ್ಲದಿರುವ, ರಸ್ತೆ ಸಂಪರ್ಕ ಕಲ್ಪಿಸದೇ...

ಅದಾನಿ ಎಸಿಸಿ ಲಿಮಿಟೆಡ್‌ನಿಂದ ಅಕ್ರಮ ಗಣಿಗಾರಿಕೆ; ನಿರ್ದೇಶಕರು, ಅಧಿಕಾರಿಗಳ ವಿರುದ್ಧ ಲೋಕಾ ತನಿಖೆಗೆ ಶಿಫಾರಸ್ಸು, ಕಡತಕ್ಕೆ ಧೂಳು

ಬೆಂಗಳೂರು;  ಕಲ್ಬುರ್ಗಿಯ ವಾಡಿಯಲ್ಲಿ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್ ಪ್ರೈವೈಟ್ ಲಿಮಿಟೆಡ್...

Related Articles

Popular Categories

error: Content is protected !!