ಬೆಂಗಳೂರು; ಸಾರ್ವಜನಿಕ ಪಡಿತರ ವ್ಯವಸ್ಥೆ (ಪಿಡಿಎಸ್)ಯಲ್ಲಿ ಅನ್ನ ಭಾಗ್ಯ ಯೋಜನೆಯಡಿ ಬಿಡುಗಡೆಗೊಳ್ಳುವ ಅಕ್ಕಿ ಸೇರಿದಂತೆ ಇತರೆ ಆಹಾರ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿಗಳು ಕಚ್ಚಾ ಸ್ಥಳಗಳಲ್ಲಿ ಸಂಗ್ರಹಣೆ ಮಾಡುತ್ತಿದೆ ಮತ್ತು ಇದರಿಂದಾಗಿ ಆಹಾರ ಧಾನ್ಯಗಳ ವಿತರಣೆ ಮತ್ತು ಶೇಖರಣಾ ನಷ್ಟವಾಗಿದೆ ಎಂದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ನಡೆಸಿದ ಅಧ್ಯಯನ ವರದಿಯು ಹೊರಗೆಡವಿದೆ.
ರಾಜ್ಯಕ್ಕೆ ಸಿಗಬೇಕಿದ್ದ 5 ಕೆ.ಜಿ. ಅಕ್ಕಿಯ ಸರಬರಾಜನ್ನು ನಿಲ್ಲಿಸಿರುವ ಕೇಂದ್ರ ಸರ್ಕಾರದ ಕ್ರಮದಿಂದಾಗಿ ಗೋದಾಮುಗಳಲ್ಲಿಯೇ ಅಕ್ಕಿ ಕೊಳೆತು ಹೋಗುತ್ತಿದೆ ಎಂಬ ಬಲವಾದ ಆರೋಪ ಮತ್ತು ಅಕ್ಕಿ ನಿಲ್ಲಿಸಿರುವ ಕೇಂದ್ರದ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರವು ಆಕ್ರೋಶ ವ್ಯಕ್ತಪಡಿಸಿರುವ ಬೆನ್ನಲ್ಲೇ 2013-14ರಿಂದ 2018-19ರವರೆಗೆ ಅನ್ನಭಾಗ್ಯ ಯೋಜನೆಯ ಕಾರ್ಯನಿರ್ವಹಣೆ ಕುರಿತು ಸಲ್ಲಿಸಿರುವ ಅಧ್ಯಯನ ವರದಿಯು ಮುನ್ನೆಲೆಗೆ ಬಂದಿದೆ.
ಅನ್ನ ಭಾಗ್ಯ ಯೋಜನೆಯ ಕಾರ್ಯನಿರ್ವಹಣೆಯ ಮೌಲ್ಯಮಾಪನ ಮತ್ತು ಆಹಾರ ಭದ್ರತೆಯ ಮೇಲೆ ಅದರ ಪ್ರಭಾವ ಮತ್ತು ಕರ್ನಾಟಕ ರಾಜ್ಯದಲ್ಲಿ 2013-14ರಿಂದ 2018-19ರವರೆಗೆ ಶೂನ್ಯ ಹಸಿವಿನ ಎಸ್‌ಡಿಜಿ ಗುರಿ-2 ಸಾಧಿಸುವ ಸಂಬಂಧ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ಕಳೆದ ಕೆಲ ದಿನಗಳ ಹಿಂದೆ ನಡೆಸಿದ್ದ ಸಭೆಯಲ್ಲಿ ಅಧ್ಯಯನ ವರದಿ ಮತ್ತು ಶಿಫಾರಸ್ಸುಗಳ ಕುರಿತು ಚರ್ಚೆಯಾಗಿದೆ. ಈ ಸಭೆಯ ನಡವಳಿಗಳು ‘ದಿ ಫೈಲ್’ಗೆ ಲಭ್ಯವಾಗಿದೆ.
ರಾಜ್ಯದಲ್ಲಿ ‘ಶೇ.39.3ರಷ್ಟು ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯಗಳನ್ನು ಕಚ್ಛಾ ಸ್ಥಳಗಳಲ್ಲಿ ಸಂಗ್ರಹಿಸಲಾಗುತ್ತಿದೆ. ಇದರ ಪರಿಣಾಮದಿಂದಾಗಿ ತುಲನಾತ್ಮಕವಾಗಿ ಕಡಿಮೆ-ಗುಣಮಟ್ಟದ ಆಹಾರ ಧಾನ್ಯಗಳ ವಿತರಣೆ ಮತ್ತು ಶೇಖರಣಾ ನಷ್ಟವಾಗಿದೆ. ಆದ್ದರಿಂದ ಅವರ ಪರವಾನಗಿಯನ್ನು ತುರ್ತಾಗಿ ಪರಿಶೀಲಿಸಿರುವ ಅಗತ್ಯವಿದೆ,’ ಎಂದು ವರದಿಯಲ್ಲಿ ಶಿಫಾರಸ್ಸು ಮಾಡಿರುವುದು ಗೊತ್ತಾಗಿದೆ.
ಅದೇ ರೀತಿ ಸುಮಾರು ಶೇ.79ರಷ್ಟು (5,302) ಪಿಡಿಎಸ್‌ನಿಂದಾಗಿ ಸರಬರಾಜು ಮಾಡಿದ ಆಹಾರ ಧಾನ್ಯಗಳು ಸಾಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆಧರೆ ಶೇ. 212ರಷ್ಟು (1,466) ಮಾದರಿ ಫಲಾನುಭವಿಗಳು ಆಹಾರ ಧಾನ್ಯಗಳು ಸಾಕಾಗುವುದಿಲ್ಲ ಹೀಗಾಗಿ ಹೆಚ್ಚುವರಿ ಪ್ರಮಾಣವನ್ನು ಕೋರಿದ್ದಾರೆ ಎಂದು ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.
ಬೆಂಗಳೂರು, ಉಡುಪಿ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿನ ವಿತರಣೆ ಪ್ರಮಾಣವು ಕಡಿಮೆಯಾಗಿದೆ.
ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 1 ಕೆ ಜಿ ಅಕ್ಕಿ ; 1,960 ಕೋಟಿ ರು. ಹೊಂದಿಸಲು ತಿಣುಕಾಟ
ಮತ್ತು ಅದನ್ನು ಕೊರತೆ/ಹಿಂದುಳಿದ ಜಿಲ್ಲೆಗಳಿಗೆ ಬದಲಾಯಿಸಬಹುದು ಅಥವಾ ಮರು ಹಂಚಿಕೆ ಮಾಡಬಹುದು ಎಂದೂ ವಿವರಿಸಿರುವುದು ಅಧ್ಯಯನ ವರದಿಯಿಂದ ತಿಳಿದು ಬಂದಿದೆ.
ಕನಿಷ್ಠ ಬೆಂಬಲ ಬೆಲೆ ಯೋಜನೆ; ಏಜೆನ್ಸಿ ಅಧಿಕಾರಿಗಳ ಲೋಪಕ್ಕೆ 63 ಕೋಟಿ ನಷ್ಟ
ಪ್ರಸ್ತುತ ರಾಜ್ಯದ ನಂಜನಗೂಡು, ಕಲ್ಬುರ್ಗಿ, ಬೆಂಗಳೂರಿನಲ್ಲಿನ ಕೆ ಆರ್ ಪುರಂನಲ್ಲಿರುವ ಗೋದಾಮುಗಳು ರೆಡ್ ಝೋನ್‌ನಲ್ಲಿದ್ದರಿಂದ ಕಳೆದ ಎರಡು ವರ್ಷಗಳ ಹಿಂದೆಯೇ ಈ ಎರಡೂ ಕಡೆಗಳಲ್ಲಿನ ಗೋದಾಮುಗಳನ್ನು ಸೀಲ್ ಮಾಡಲಾಗಿತ್ತು. ಮಂಗಳೂರು, ಬೆಳಗಾವಿ, ವಿಜಯಪುರ, ಮಂಡ್ಯ, ಬಾಗಲಕೋಟೆ, ಮೈಸೂರು, ಬೀದರ್‍ನಲ್ಲಿಯೂ ಗೋದಾಮುಗಳಿವೆ.
ಸುಮಾರು 1 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವದ ಅತಿದೊಡ್ಡ ಧಾನ್ಯ ಸಂಗ್ರಹ ಯೋಜನೆಯನ್ನು ಕೇಂದ್ರ ಸರ್ಕಾರವು ಆರಂಭಿಸಿದೆ. ಇದುವರೆಗೆ ಒಟ್ಟು 1450 ಲಕ್ಷ ಟನ್ ಸಂಗ್ರಹ ಸಾಮರ್ಥ್ಯವಿದ್ದು, ಈಗ ಸಹಕಾರಿ ಕ್ಷೇತ್ರದಲ್ಲಿ 700 ಲಕ್ಷ ಟನ್ ಸಂಗ್ರಹಣಾ ಸಾಮರ್ಥ್ಯಕ್ಕೇರಲಿದೆ. ಈ ಮೂಲಕ ದೇಶದ ಒಟ್ಟು ಶೇಖರಣಾ ಸಾಮರ್ಥ್ಯ 2150 ಲಕ್ಷ ಟನ್ ಗೆ ಏರಿಕೆಯಾಗಲಿದೆ.
ದೇಶಾದ್ಯಂತ ಪ್ರತಿ ಬ್ಯಾಕ್‌ಗಳಲ್ಲಿ 2000 ಟನ್ ಸಾಮರ್ಥ್ಯದ ಗೋದಾಮುಗಳನ್ನು ನಿರ್ಮಾಣಕ್ಕೆ ಯೋಜನೆ ರೂಪಿಸಿರುವ ಕೇಂದ್ರ ಸರ್ಕಾರವು ದೇಶದ ಆಹಾರ ಧಾನ್ಯ ಸಂಗ್ರಹಣಾ ಸಾಮರ್ಥ್ಯ 2150 ಲಕ್ಷ ಟನ್‌ಗೆ ಏರಿಕೆಯಾಗಲಿದೆ ಎಂದು ಅಂದಾಜಿಸಿದೆ. ಯೋಜನೆಯ ಅನುಷ್ಠಾನದೊಂದಿಗೆ, ಒಟ್ಟು ಆಹಾರ ಸಂಗ್ರಹ ಸಾಮರ್ಥ್ಯವು 2000 ಲಕ್ಷ ಟನ್‌ಗಳಿಗಿಂತ ಹೆಚ್ಚು ಇರಲಿದೆ ಎಂದು ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ ಹೇಳಿತ್ತು.
ಬಿಜೆಪಿ ಸರ್ಕಾರದಲ್ಲೂ ಅನ್ನಭಾಗ್ಯಕ್ಕೆ ಕನ್ನ ; 3 ವರ್ಷದಲ್ಲಿ 23.29 ಕೋಟಿ ಅಕ್ರಮ, 1,518 ಎಫ್‌ಐಆರ್ ದಾಖಲು
ಆಹಾರ ಸಂಗ್ರಹ ಯೋಜನೆಯಿಂದ ಏನೆಲ್ಲ ಲಾಭ
ಆಹಾರ ಧಾನ್ಯಗಳನ್ನು ದೀರ್ಘಕಾಲ ಸುರಕ್ಷಿತವಾಗಿ ಮತ್ತು ಪೌಷ್ಟಿಕಾಂಶಗಳನ್ನು ಕಳೆದುಕೊಳ್ಳದಂತೆ ಶೇಖರಿಸಿ ಇಡುವ ಪ್ರಮುಖ ಉದ್ದೇಶದೊಂದಿಗೆ 1 ಸಾವಿರ ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಯೋಜನೆಯ ಮೂಲಕ ಜನರಿಗೆ ಆಹಾರ ಧಾನ್ಯಗಳ ಲಭ್ಯತೆ ಹೆಚ್ಚಲಿದೆ.ಕೀಟಗಳಿಂದ ಧಾನ್ಯವನ್ನು ರಕ್ಷಿಸಲು ಸಾಧ್ಯವಾಗುತ್ತದೆ.ದೇಶಾದ್ಯಂತ ಧಾನ್ಯಗಳ ಸಂಗ್ರಹದ ಸೌಲಭ್ಯ ಹೆಚ್ಚಲಿದೆ ಎಂದು ಗೊತ್ತಾಗಿದೆ.
ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ವಿತರಿಸಲು ಒಂದು ತಿಂಗಳಿಗೆ 840 ಕೋಟಿ ರೂ. ವೆಚ್ಚ ತಗುಲಲಿದೆ. ವರ್ಷಕ್ಕೆ ರೂ. 10,092 ಕೋಟಿ ವೆಚ್ಚವಾಗಲಿದೆ. ಬಡಜನರ ಹಸಿವು ನೀಗಿಸಲು ಸರ್ಕಾರ ಈ ವೆಚ್ಚವನ್ನು ಭರಿಸಿ ಅಕ್ಕಿಯನ್ನು ವಿತರಿಸಲು ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವರಿಸಿದ್ದನ್ನು ಸ್ಮರಿಸಬಹುದು.