2 ವರ್ಷದಲ್ಲೇ 736 ಭ್ರಷ್ಟಾಚಾರ ಪ್ರಕರಣ; ಸಿಎಂ ಒದಗಿಸಿದ ಪಟ್ಟಿಯಲ್ಲಿವೆ ಬಿಎಸ್‌ವೈ ಸೇರಿ ಹಲವರ ಹೆಸರು

photo credit;basavarajbommai twitter account

ಬೆಂಗಳೂರು; ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ, ಲಂಚಕ್ಕೆ ಬೇಡಿಕೆ ಸೇರಿದಂತೆ ಭ್ರಷ್ಟಾಚಾರದ ಆರೋಪಗಳಡಿಯಲ್ಲಿ ಹಿಂದಿನ ಭ್ರಷ್ಟಾಚಾರ ನಿಗ್ರಹ ದಳ ಮತ್ತು ಲೋಕಾಯುಕ್ತದಲ್ಲಿ ಕಳೆದ 7 ವರ್ಷದಲ್ಲಿ ಒಟ್ಟಾರೆ 2, 248 ಪ್ರಕರಣಗಳು ದಾಖಲಾಗಿವೆ.

 

ವಿಧಾನಪರಿಷತ್‌ ಸದಸ್ಯ  ಶಶಿಲ್‌ ನಮೋಶಿ ಅವರು ಕೇಳಿದ್ದ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 334 ಪುಟಗಳ ಮಾಹಿತಿಯನ್ನು ಒದಗಿಸಿದ್ದಾರೆ. ಈ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ, ಬಿ ವೈ ವಿಜಯೇಂದ್ರ, ಎಸ್‌ ಟಿ ಸೋಮಶೇಖರ್‌, ಆರ್‌ ಅಶೋಕ್‌, ಬಿ ಝಡ್‌ ಜಮೀರ್‌ ಅಹ್ಮದ್‌ ಖಾನ್‌ ಪ್ರಕರಣಗಳೂ ಇವೆ.

 

ಗುತ್ತಿಗೆದಾರರಿಂದ ಶೇ.40 ಕಮಿಷನ್‌ಗೆ ಬೇಡಿಕೆ ಇರಿಸಿದ್ದ ಆರೋಪಗಳೂ ಸೇರಿದಂತೆ ಭ್ರಷ್ಟಾಚಾರದ ಆರೋಪಗಳ ಸುಳಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರವು ಸಿಲುಕಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒದಗಿಸಿರುವ ಭ್ರಷ್ಟ ಅಧಿಕಾರಿಗಳು ಮತ್ತು ಭ್ರಷ್ಟ ರಾಜಕಾರಣಿಗಳ ಪಟ್ಟಿಯು ಮುನ್ನೆಲೆಗೆ ಬಂದಿದೆ.

 

2016-17ರಿಂದ 2018ರವರೆಗೆ ಅಧಿಕಾರ ನಡೆಸಿದ್ದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ 841 ಪ್ರಕರಣಗಳು ದಾಖಲಾಗಿದ್ದರೆ, 2019ರಿಂದ 2022ರವರೆಗೆ ಒಟ್ಟು 1,407 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಕಳೆದ 2 ವರ್ಷವೊಂದರಲ್ಲೇ 736 ಪ್ರಕರಣಗಳು ದಾಖಲಾಗಿರುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒದಗಿಸಿರುವ ಪಟ್ಟಿಯಿಂದ ತಿಳಿದು ಬಂದಿದೆ.

 

ಕಾಂಗ್ರೆಸ್‌ ಸರ್ಕಾರದ ಅವಧಿಯ 2016-17ರಿಂದ 2018ರವರೆಗೆ 841 ಪ್ರಕರಣಗಳು ದಾಖಲಾಗಿವೆ. 2019ರಿಂದ 2022ರವರೆಗೆ ಒಟ್ಟು 1,407 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕಳೆದ 2 ವರ್ಷದಲ್ಲೇ 736 ಪ್ರಕರಣಗಳಿವೆ. 2016ರಲ್ಲಿ 178, 2017ರಲ್ಲಿ 288, 2018ರಲ್ಲಿ 375, 2019ರಲ್ಲಿ 376, 2020ರಲ್ಲಿ 295, 2021ರಲ್ಲಿ 371, 2022ರಲ್ಲಿ 365 ಪ್ರಕರಣಗಳು ದಾಖಲಾಗಿವೆ.

 

2,248 ಪ್ರಕರಣಗಳಲ್ಲಿ ಪಿಡಬ್ಲ್ಯೂಡಿ ಇಂಜಿನಿಯರ್‌ಗಳು, ಗುಮಾಸ್ತರು, ಪಿಡಿಓಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು, ಶಿರಸ್ತೆದಾರ್‌ಗಳು, ಆರ್‌ಟಿಓ ಅಧಿಕಾರಿಗಳು, ದ್ವಿತೀಯ ದರ್ಜೆ ಗುಮಾಸ್ತರುಗಳು, ಶಿಕ್ಷಣಾಧಿಕಾರಿಗಳು, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು, ಪೊಲೀಸ್‌ ಇನ್ಸ್‌ಪೆಕ್ಟರ್‌ಗಳು, ಬಿಬಿಎಂಪಿ ಇಂಜನಿಯರ್‌ಗಳು, ಅಧಿಕಾರಿಗಳು, ಅಬಕಾರಿ ಇನ್ಸ್‌ಪೆಕ್ಟರ್‌ಗಳು, ಕಾರ್ಮಿಕ ಅಧಿಕಾರಿಗಳು, ಪುರಸಭೆ ಮುಖ್ಯಾಧಿಕಾರಿಗಳು ಸೇರಿದಂತೆ ಕೆಳ ಹಂತದ ಅಧಿಕಾರಿಗಳ ಮೇಲಷ್ಟೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿರುವುದು ಪಟ್ಟಿಯಿಂದ ಗೊತ್ತಾಗಿದೆ.

 

ಬಿ ಎಸ್‌ ಯಡಿಯೂರಪ್ಪ (ಖಾಸಗಿ ಮೊಕದ್ದಮೆ ದಾಖಲಾಗಿದ್ದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿಯಾಗಿದ್ದರು 2017) ಸಚಿವ ವಿ ಸೋಮಣ್ಣ (ದಾಳಿ ವೇಳೆಯಲ್ಲಿ ವಿಧಾನಪರಿಷತ್‌ ಸದಸ್ಯರಾಗಿದ್ದರು), ಸಿ ಟಿ ರವಿ, (ಖಾಸಗಿ ಮೊಕದ್ದಮೆ), ಆರ್‌ ಅಶೋಕ್‌ (2018- ಉತ್ತರಹಳ್ಳಿ ಶಾಸಕ ಟ್ರ್ಯಾಪ್‌) ಬಿ ಝಡ್‌ ಜಮೀರ್‌ ಅಹ್ಮದ್‌ ಖಾನ್‌ , ಬಿ ಎಸ್‌ ಯಡಿಯೂರಪ್ಪ, ಬಿ ವೈ ವಿಜಯೇಂದ್ರ, ಶಶಿಧರ ಮರಡಿ, ಡಾ ಜಿ ಸಿ ಪ್ರಕಾಶ್‌, ಎಸ್‌ ಟಿ ಸೋಮಶೇಖರ್‌ ವಿರುದ್ಧದ ಪ್ರಕರಣಗಳಿವೆ ಎಂಬ ವಿವರಗಳು ಪಟ್ಟಿಯಲ್ಲಿವೆ.

Your generous support will help us remain independent and work without fear.

Latest News

Related Posts