ಆಸ್ತಿ ದುರುಪಯೋಗ, ಅವಿವೇಕದ ನಿರ್ವಹಣೆ, ಧಾರ್ಮಿಕ ಕಟ್ಟುಪಾಡು ಉಲ್ಲಂಘನೆ; ಮುನ್ನೆಲೆಗೆ ಬಂದ ಅಸಲುದಾವೆ

ಬೆಂಗಳೂರು: ಶಾಲಾ ಬಾಲಕಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಪ್ರಕರಣದಲ್ಲಿ ಪೋಕ್ಸೋ ಕಾಯ್ದೆಯಡಿ ಬಂಧನಕ್ಕೊಳಗಾಗಿರುವ ಡಾ ಶಿವಮೂರ್ತಿ ಮುರುಘಾ ಶರಣರು ಪೀಠಾಧಿಪತಿಯಾಗಿ ಕೋಟ್ಯಂತರ ಹಣ ಹಾಗೂ ಭಾರಿ ಪ್ರಮಾಣದ ಸ್ಥಿರಾಸ್ತಿ  ದುರುಪಯೋಗಪಡಿಸಿಕೊಳ್ಳುತ್ತಿದ್ದಾರಲ್ಲದೆ ಧಾರ್ಮಿಕ ಕಟ್ಟುಪಾಡುಗಳನ್ನು ಮೀರಿ ನಡೆಯುತ್ತಿದ್ದಾರೆ ಎಂಬ ಅಂಶಗಳನ್ನೊಳಗೊಂಡ ಅಸಲು ದಾವೆಯೊಂದು ಹೈಕೋರ್ಟ್‌ನ ಅಂಗಳದಲ್ಲಿರುವುದು ಇದೀಗ ಮುನ್ನೆಲೆಗೆ ಬಂದಿದೆ.

 

ವಿಜಯಕುಮಾರ್ ಎಸ್.ದುರ್ಗದ ಎಂಬುವರು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ 2021ರ ಫೆ.23ರಂದು ವಿಚಾರಣೆ ನಡೆಸಿತ್ತು. ಅಲ್ಲದೇ ಇದೇ ಅರ್ಜಿಯು ಪ್ರಾಥಮಿಕ ವಿಚಾರಣೆಗೆಂದು ಕಾಯ್ದಿರಿಸಿದೆ. ಇದು 2022ರ ಜುಲೈ 8ರಂದು ವಿಚಾರಣೆಗೆ ಬಂದಿತ್ತಾದರೂ ಸದ್ಯ ಈ ಅರ್ಜಿಯನ್ನು ಬಾಕಿ ಇರಿಸಲಾಗಿದೆ.

ಃಗಿ

 

ರಿಟ್ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿರುವ ನ್ಯಾಯಪೀಠ, ಪ್ರತಿವಾದಿ ಮುರುಘಾ ಶರಣರು ಮತ್ತು ಮಠದ ಮಾಜಿ ಆಡಳಿತಾಧಿಕಾರಿ ಹಾಗೂ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಸೇರಿದಂತೆ ಏಳು ಜನ ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿತ್ತು. ಹಾಗೆಯೇ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತ್ತು.

 

ಶರಣರ ವಿರುದ್ಧದ ಆರೋಪಗಳೇನು?

 

 

* ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿಯಾಗಿರುವ ಮುರುಘಾ ಶರಣರು ಶ್ರೀಮಠದ ಪದ್ಧತಿ, ಸಂಪ್ರದಾಯ ಹಾಗೂ ಧಾರ್ಮಿಕ ಕ್ರಿಯೆಗಳ ಅನೂಚಾನ ಪಾಲನೆ ಉಲ್ಲಂಘಿಸಿದ್ದಾರೆ.

 

 

* ಮಠದ ಹಣ, ಸ್ಥಿರಾಸ್ತಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾ ಅವಿವೇಕದ ನಿರ್ವಹಣೆ ಮಾಡುತ್ತಿದ್ದಾರೆ.

 

 

* ಪೀಠಾಧಿಪತಿಯಾಗಿ ಧಾರ್ಮಿಕ ಕಟ್ಟುಪಾಡುಗಳನ್ನು ಮೀರಿ ನಡೆಯುತ್ತಿದ್ದಾರೆ.

 

 

ಆದ್ದರಿಂದ, “ಮುರುಘಾ ಶರಣರು ಚಿತ್ರದುರ್ಗ ಮುರುಘಾ ಮಠದ ಪೀಠಾಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡುವುದನ್ನು ಈ ಕೂಡಲೇ ಸ್ಥಗಿತಗೊಳಿಸಲು ಆದೇಶಿಸಬೇಕು” ಎಂಬುದು ಅರ್ಜಿದಾರರ ಅಸಲು ದಾವೆಯ ಕೋರಿಕೆ.

 

“ಬೆಂಗಳೂರು ನಗರದ ಸಿಸಿಎಚ್ ಕೋರ್ಟ್-56ರಲ್ಲಿ ಶರಣರ ವಿರುದ್ಧದ ಈ ಆರೋಪಗಳಿಗೆ ಸಂಬಂಧಿಸಿದಂತೆ ಯೋಜನಾ ದಾವೆ (ಸ್ಕೀಮ್ ಸೂಟ್) ದಾಖಲಾಗಿದ್ದು ಈ ಅಸಲು ದಾವೆಯಲ್ಲಿ  ನನ್ನನ್ನೂ ಪ್ರತಿವಾದಿಯನ್ನಾಗಿ ಸೇರ್ಪಡೆ ಮಾಡಲು ಅಧೀನ ನ್ಯಾಯಾಲಯಕ್ಕೆ ನಿರ್ದೇಶಿಸಬೇಕು” ಎಂದು ಅರ್ಜಿದಾರ ವಿಜಯಕುಮಾರ್ ಕೋರಿದ್ದರು.

 

 

ಈ ಅರ್ಜಿಯನ್ನು ಅಧೀನ ನ್ಯಾಯಾಲಯ ತಿರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ವಿಜಯಕುಮಾರ್ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

SUPPORT THE FILE

Latest News

Related Posts