‘ಆತ್ಮಹತ್ಯೆ ಮಾಡಿಕೊಂಡರೆ ಡಿ ರೂಪಾ ಅವರೇ ಕಾರಣ’; ರಾಘವೇಂದ್ರ ಶೆಟ್ಟಿ ವಿಡಿಯೋ ಬಹಿರಂಗ

ಬೆಂಗಳೂರು; ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಹಿರಿಯ ಐಪಿಎಸ್‌ ಅಧಿಕಾರಿ ಡಿ ರೂಪಾ ಮೌದ್ಗಿಲ್‌ ಅವರ ಮಧ್ಯೆ ನಡೆಯುತ್ತಿರುವ ಪತ್ರ ಸಮರ ಆರಂಭವಾಗಿರುವ ಬೆನ್ನಲ್ಲೇ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದಕ್ಕೆ ವಿಡಿಯೋ ಸಾಕ್ಷ್ಯವೊಂದು ಬಹಿರಂಗವಾಗಿದೆ.

 

ಅವರು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ ಎಂದು ಲಿಖಿತ ದೂರು ನೀಡಿರುವ ಬೆನ್ನಲ್ಲೇ ಬಹಿರಂಗವಾಗಿರುವ ವಿಡಿಯೋ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಹಿರಿಯ ಐಪಿಎಸ್‌ ಅಧಿಕಾರಿ ಡಿ ರೂಪಾ ಅವರು ಮುಖ್ಯ ಕಾರ್ಯದರ್ಶಿಗೆ ನೀಡಿದ್ದ ದೂರಿಗೆ ಮತ್ತಷ್ಟು ಬಲ ಬಂದಂತಾಗಿದೆ. ಈ ವಿಡಿಯೋ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಿಡಿಯೋದಲ್ಲೇನಿದೆ?

 

ನಿಗಮದ 302 ಹಾಗೂ 303ನೇ ಆಡಳಿತ ಮಂಡಳಿ ಸಭೆ ನಡೆಯುತ್ತಿದ್ದ ವೇಳೆಯಲ್ಲಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಿ ರೂಪಾ ಅವರು ಮುಖಾಮುಖಿಯಾಗಿ ಮಾತನಾಡಿಲ್ಲ. ಬೇಳೂರು ರಾಘವೇಂದ್ರ ಶೆಟ್ಟಿ ಅವರ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡರೆ ರೂಪ ಆವರು ಕಾರಣ ಎಂದು 5-6 ಬಾರಿ ಹೇಳಿರುವುದು ವಿಡಿಯೋದಿಂದ ತಿಳಿದು ಬಂದಿದೆ.

 

ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ರು. ವಂಚಿಸಿದ್ದಾರೆ ಎಂಬ ಆರೋಪದಡಿಯಲ್ಲಿ ಸೇವೆಯಿಂದಲೇ ವಜಾ ಆಗಿದ್ದ ನಿಗಮದ ಅಂದಿನ ಪ್ರಧಾನ ವ್ಯವಸ್ಥಾಪಕ ಜಿ ಕಿಶೋರ್‌ಕುಮಾರ್‌ ಅವರನ್ನು ಪುನಃ ಸೇವೆಗೆ ಸೇರಿಸಿಕೊಳ್ಳಲು ನಿಗಮದ ಹಾಲಿ ಅಧ್ಯಕ್ಷ ಡಾ ಬೇಳೂರು ರಾಘವೇಂದ್ರಶೆಟ್ಟಿ ಅವರು ನಾಲ್ಕರಿಂದ ಐದು ಕೋಟಿ ರು. ಹಣದ ವ್ಯವಹಾರ ಮಾತುಕತೆ ನಡೆಸಿದ್ದರು ಎಂದು ಮುಖ್ಯ ಕಾರ್ಯದರ್ಶಿಗೆ ಬರೆದಿದ್ದ ಪತ್ರದಲ್ಲಿ ಡಿ ರೂಪಾ ಅವರು ದೂರಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts