ಬೆಂಗಳೂರು; ಶಿಕ್ಷಣ ವಲಯಕ್ಕೆ ಸಾಲ ನೀಡಿದ್ದ ಬ್ಯಾಂಕ್‌ಗಳು ಎನ್‌ಪಿಎ ಘೋಷಿಸಿಕೊಂಡಿದೆ. ಕರ್ನಾಟಕದಲ್ಲಿ 2021ರ ಮಾರ್ಚ್ ಅಂತ್ಯಕ್ಕೆ ಒಟ್ಟು 510.02 ಕೋಟಿಯಷ್ಟು ಎನ್‌ಪಿಎ ಇದೆ. ಈ ಪೈಕಿ ಕೆನರಾ ಬ್ಯಾಂಕ್ ಮತ್ತು ಕರ್ನಾಟಕ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂಚೂಣಿಯಲ್ಲಿದೆ. ಕೋವಿಡ್‌ನಿಂದ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟುಗಳಿಂದಾಗಿಯೇ ಮಧ್ಯಮ ವರ್ಗದ ವಿದ್ಯಾರ್ಥಿಗಳ ಪೋಷಕರು ಕಂಗೆಟ್ಟಿದ್ದಾರೆ. ಇಂತಹ ಸಂದರ್ಭದಲ್ಲೂ ಶೈಕ್ಷಣಿಕ ಸಾಲ ವಸೂಲಾತಿಗೆ ಬ್ಯಾಂಕ್‌ಗಳು ಪೋಷಕರ ಹಿಂದೆ ಬಿದ್ದಿವೆ.
2020ರ ಡಿಸೆಂಬರ್ ಮತ್ತು 2021ರ ಮಾರ್ಚ್ 31ರ ಅಂತ್ಯಕ್ಕೆ ಬ್ಯಾಂಕ್‌ಗಳಲ್ಲಿ ಅನುತ್ಪಾದಕ ಆಸ್ತಿ ಪ್ರಮಾಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 5ರಂದು ನಡೆದಿದ್ದ ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿವೆ. ಸಮಿತಿ ಸಭೆಯ ನಡವಳಿ ಮತ್ತು ಬ್ಯಾಂಕ್‌ವಾರು ವಿವರಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
2020ರ ಡಿಸೆಂಬರ್ ಅಂತ್ಯಕ್ಕೆ 498.49 ಕೋಟಿ ರು. ಎನ್‌ಪಿಎ ಇದ್ದರೆ 2021ರ ಮಾಚ್f ಅಂತ್ಯಕ್ಕೆ 510.02 ಕೋಟಿಯಷ್ಟು ಎನ್‌ಪಿಎ ಇದೆ. ಕೇವಲ ಮೂರು ತಿಂಗಳಲ್ಲಿ 11.53 ಕೋಟಿಯಷ್ಟು ಹೆಚ್ಚಳವಾಗಿದೆ. ಶೈಕ್ಷಣಿಕ ಸಾಲ ಮನ್ನಾ ಮಾಡುವ ಸಂಬಂಧ ಹಲವು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ್ ಅವರಿಗೆ ಮನವಿ ಮಾಡಿದ್ದರೂ ಈ ಸಂಬಂಧ ಯಾವುದೇ ಕ್ರಮ ವಹಿಸಿಲ್ಲ ಎಂದು ತಿಳಿದು ಬಂದಿದೆ.
ಲೀಡ್ ಬ್ಯಾಂಕ್‌ಗಳ ಎನ್‌ಪಿಎ; ಕೆನರಾ ಬ್ಯಾಂಕ್- 222.15 ಕೋಟಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 50.00 ಕೋಟಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ- 32.98 ಕೋಟಿ, ಬ್ಯಾಂಕ್ ಆಫ್ ಬರೋಡ- 22.86 ಕೋಟಿ ರು. ಎನ್‌ಪಿಎ ಇದೆ.
ರಾಷ್ಟ್ರೀಕೃತ ಬ್ಯಾಂಕ್‌ಗಳ ಎನ್‌ಪಿಎ; ಬ್ಯಾಂಕ್ ಆಫ್ ಇಂಡಿಯಾ- 4.97 ಕೋಟಿ, ಬ್ಯಾಂಕ್ ಆಫ್ ಮಹಾರಾಷ್ಟ್ರ- 1.27 ಕೋಟಿ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ- 9.33 ಕೋಟಿ, ಇಂಡಿಯನ್ ಬ್ಯಾಂಕ್ – 1.43 ಕೋಟಿ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್- 5.72 ಕೋಟಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ – 10.89 ಕೋಟಿ, ಪಂಜಾಬ್ ಅಂಡ್ ಸಿಂಡ್ ಬ್ಯಾಂಕ್ – 0.31 ಕೋಟಿ, ಯುಕೋ ಬ್ಯಾಂಕ್ – 3.80 ಕೋಟಿ ರು. ಎನ್‌ಪಿಎ ಇರುವುದು ಗೊತ್ತಾಗಿದೆ.
ಖಾಸಗಿ ಬ್ಯಾಂಕ್‌ಗಳ ಎನ್‌ಪಿಎ; ಐಡಿಬಿಐ- 1.33 ಕೋಟಿ, ಕರ್ನಾಟಕ ಬ್ಯಾಂಕ್ – 3.97 ಕೋಟಿ, ಕೋಟಕ್ ಮಹೀಂದ್ರಾ ಬ್ಯಾಂಕ್- 0.20 ಕೋಟಿ, ಕ್ಯಾಥಲಿಕ್ ಸಿರಿಯನ್ ಬ್ಯಾಂಕ್ – 0.30 ಕೋಟಿ, ಸಿಟಿ ಯೂನಿಯನ್ ಬ್ಯಾಂಕ್ – 0.14 ಕೋಟಿ, ಧನಲಕ್ಷ್ಮಿ ಬ್ಯಾಂಕ್ – 0.09 ಕೋಟಿ, ಫೆಡರಲ್ ಬ್ಯಾಂಕ್ – 1.09 ಕೋಟಿ, ಜೆ ಅಂಡ್ ಕೆ ಬ್ಯಾಂಕ್ – 0.01 ಕೋಟಿ, ಕರೂರ್ ವೈಶ್ಯ ಬ್ಯಾಂಕ್ – 0.21 ಕೋಟಿ, ಲಕ್ಷ್ಮಿ ವಿಲಾಸ್ ಬ್ಯಾಂಕ್ – 0.02 ಕೋಟಿ, ರತ್ನಾಕರ್ ಬ್ಯಾಂಕ್ – 0.02 ಕೋಟಿ, ಸೌತ್ ಇಂಡಿಯನ್ ಬ್ಯಾಂಕ್ – 0.08 ಕೋಟಿ, ತಮಿಳುನಾಡು ಮರ್ಕಂಟೈಲ್- 0.02 ಕೋಟಿ, ಆಕ್ಸಿಸ್ ಬ್ಯಾಂಕ್ – 0.74 ಕೋಟಿ, ಐಸಿಐಸಿಐ – 0.61 ಕೋಟಿ, ಡಿಸಿಬಿ ಬ್ಯಾಂಕ್- 0.02 ಕೋಟಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ – 109.23 ಕೋಟಿ, ಕರ್ನಾಟಕ ವಿಕಾಸ ಗ್ರಾಮೀಣ- 26.22 ಕೋಟಿ ರು. ಎನ್‌ಪಿಎ ಇದೆ.
2020ರ ಡಿಸೆಂಬರ್ ಅಂತ್ಯದ ವೇಳೆಗೆ ಭಾರಿ ಪ್ರಮಾಣದಲ್ಲಿ ಶೈಕ್ಷಣಿಕ ಸಾಲ ವಸೂಲಿಯಾಗದೆ ಉಳಿದಿದೆ. ಇದರಲ್ಲಿ ಅತಿ ಹೆಚ್ಚಿನ, ಅಂದರೆ ಶೇ 9.7ರಷ್ಟು ಕೆಟ್ಟ ಸಾಲ ನರ್ಸಿಂಗ್ ಮತ್ತು ಎಂಜಿನಿಯರಿಂಗ್ ಶಿಕ್ಷಣದ ಪಾಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು.
ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಗಳು (ಎಸ್‌ಎಲ್‌ಬಿಸಿ) ಕ್ರೋಢೀಕರಿಸಿದ್ದ ದಾಖಲೆಗಳ ಪ್ರಕಾರ ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಅವಧಿಯ ಅಂತ್ಯದಲ್ಲಿ (ಡಿಸೆಂಬರ್) 3.5 ಲಕ್ಷಕ್ಕೂ ಅಧಿಕ ಖಾತೆಗಳಿಗೆ ಸೇರಿದ 8,263 ಕೋಟಿ ರೂಪಾಯಿ ಮೊತ್ತವನ್ನು ವಸೂಲಾಗದ ಸಾಲ (ಎನ್‌ಪಿಎ) ಎಂದು ಗುರುತಿಸಲಾಗಿತ್ತು. ಒಟ್ಟು 23.3 ಲಕ್ಷಕ್ಕೂ ಅಧಿಕ ಖಾತೆಗಳಿಂದ ಪಡೆದಿರುವ 84,965 ಕೋಟಿ ರೂಪಾಯಿ ಶೈಕ್ಷಣಿಕ ಸಾಲ ಬಾಕಿ ಉಳಿದಿದೆ ಎಂದು ತಿಳಿದು ಬಂದಿದೆ.
84,965 ಕೋಟಿ ರೂ ಬಾಕಿ ಉಳಿದಿರುವ ಸಾಲದಲ್ಲಿ, ವೈದ್ಯಕೀಯ ವಿದ್ಯಾರ್ಥಿಗಳಿಗೆ 10,147 ಕೋಟಿ ರೂ. (11.9%), ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 33,316 ಕೋಟಿ ರೂ. (39.2%), ನರ್ಸಿಂಗ್‌ಗೆ 3,675 ಕೋಟಿ ರೂ. (4.3%), ಎಂಬಿಎಗೆ 9,541 ಕೋಟಿ ರೂ. (11.2%), ಮತ್ತು ಇತರೆ ಎಲ್ಲ ಕೋರ್ಸ್‌ಗಳು ಸೇರಿ 28,286 ಕೋಟಿ ರೂ. (33.2%) ಮೊತ್ತ ಇದೆ ಎಂದು ದಾಖಲೆಗಳು ತಿಳಿಸಿವೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದ್ದನ್ನು ಸ್ಮರಿಸಬಹುದು.
ಯಾವ ಕೋರ್ಸ್‌ನಲ್ಲಿ ಎಷ್ಟು ಬಾಕಿ?
ಇನ್ನು ಬಾಕಿ ಉಳಿದಿರುವ ಸಾಲದ ಪ್ರಮಾಣದಲ್ಲಿ ವಸೂಲಾಗದ ಸಾಲದಲ್ಲಿ (ಎನ್‌ಪಿಎ) ನರ್ಸಿಂಗ್ ಶೇ 14ರಷ್ಟು ಬಾಕಿಯೊಂದಿಗೆ ಮೊದಲ ಸ್ಥಾನದಲ್ಲಿದೆ. ಎಂಜಿನಿಯರಿಂಗ್‌ನ ಶೇ 12.1, ಎಂಬಿಎ ಕೋರ್ಸ್‌ನ ಶೇ 7.1 ಮತ್ತು ವೈದ್ಯಕೀಯದ ಶೇ 6.2ರಷ್ಟು ಮೊತ್ತವನ್ನು ಕೆಟ್ಟ ಸಾಲ ಎಂದು ಪರಿಗಣಿಸಲಾಗಿದೆ. ಇನ್ನು ಉಳಿದ ಶೈಕ್ಷಣಿಕ ಕೋರ್ಸ್‌ಗಳಿಗಾಗಿ ಪಡೆದ ಸಾಲದಲ್ಲಿ ಒಟ್ಟು ಶೇ 8.4ರಷ್ಟು ಎನ್‌ಪಿಎ ಇರುವುದು ತಿಳಿದು ಬಂದಿದೆ.
ತಮಿಳುನಾಡಲ್ಲಿ ಎನ್‌ಪಿಎ ಅಧಿಕ
ದೇಶದೆಲ್ಲೆಡೆಗಿನ ಶೈಕ್ಷಣಿಕ ಎನ್‌ಪಿಎಯ ದಾಖಲೆಗಳನ್ನು ಪರಿಶೀಲಿಸಿದರೆ, ಪೂರ್ವಭಾಗದಲ್ಲಿನ ಬಿಹಾರ ಮತ್ತು ದಕ್ಷಿಣದ ತಮಿಳುನಾಡು ಅತ್ಯಂತ ಕೆಟ್ಟ ಸ್ಥಿತಿಯಲ್ಲಿವೆ. ಉತ್ತರ ಮತ್ತು ಪಶ್ಚಿಮ ರಾಜ್ಯಗಳು ಶೈಕ್ಷಣಿಕ ಸಾಲ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ್ದನ್ನು ಸ್ಮರಿಸಬಹುದು.
ಕೃಷಿ, ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ವಲಯದ ಕೈಗಾರಿಕೆ, ವಸತಿ, ಶಿಕ್ಷಣ, ಇತರೆ ಆದ್ಯತೆ ಮತ್ತು ಆದ್ಯತೆಯೇತರ ವಲಯದಲ್ಲಿ ಒಟ್ಟು (2948205 ಖಾತೆಗಳು) 54,756.46 ಕೋಟಿಯಷ್ಟು ಎನ್‌ಪಿಎ ಪೈಕಿ ಕೃಷಿ ವಲಯದಲ್ಲಿಯೇ 21,773.89 ಕೋಟಿ ಎನ್‌ಪಿಎ ಇದೆ.
ಅದೇ ರೀತಿ 2021ರ ಮಾರ್ಚ್ ಅಂತ್ಯಕ್ಕೆ ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ವಲಯದಲ್ಲಿ (ಎಂಎಸ್‌ಎಂಇ) 11,652.59 ಕೋಟಿ ರು., ವಸತಿ ವಲಯದಲ್ಲಿ 1,682.88 ಕೋಟಿ ರು., ಎನ್‌ಪಿಎ ಇರುವುದನ್ನು ಸ್ಮರಿಸಬಹುದು.