ವರದಿ ವಿಳಂಬ; ಸಿಎಂ ಪ್ರಧಾನ ಕಾರ್ಯದರ್ಶಿ ಸೇರಿ 10 ಅಧಿಕಾರಿಗಳ ಪಟ್ಟಿ ಬಹಿರಂಗ

ಬೆಂಗಳೂರು; ಸರ್ಕಾರ ಜಾರಿಗೊಳಿಸಿರುವ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಅನುಷ್ಠಾನ ಕುರಿತು ಆಯಾ ತಿಂಗಳಲ್ಲೇ ವರದಿ ನೀಡಬೇಕಿದ್ದ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಯೂ ಆಗಿರುವ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್‌ ಮಂಜುನಾಥ್‌ ಪ್ರಸಾದ್‌ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಮುಖ್ಯಮಂತ್ರಿಗಳ ಕಾರ್ಯದರ್ಶಿ ವಿ ಪೊನ್ನುರಾಜ್‌ ಸೇರಿದಂತೆ 10 ಹಿರಿಯ ಐಎಎಸ್‌ ಅಧಿಕಾರಿಗಳು  ಪ್ರವಾಸದ ವರದಿ ಸಲ್ಲಿಸದಿರುವುದು ಇದೀಗ ಬಹಿರಂಗವಾಗಿದೆ.

ಹಿರಿಯ ಐಎಎಸ್‌ ಅಧಿಕಾರಿಗಳು ಜಿಲ್ಲಾ ಪ್ರವಾಸದ ಕುರಿತು ವರದಿಯನ್ನು ಸಲ್ಲಿಸದಿರುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ಪ್ರಗತಿ ಕಾರ್ಯಕ್ರಮಗಳ ಕುರಿತು ಆಗಸ್ಟ್‌ 31ರಂದು ನಡೆಸಿದ್ದ ಸಭೆಯ ನಡವಳಿಯಿಂದ ಗೊತ್ತಾಗಿದೆ.

ಕೋವಿಡ್‌ 2ನೇ ಅಲೆ ಮುನ್ನೆಚ್ಚರಿಕೆ ಮತ್ತು ಕೈಗೊಳ್ಳಬಹುದಾದ ಕ್ರಮಗಳು ಹಾಗೂ ಪ್ರವಾಹ ಪರಿಶೀಲನೆ, ಪರಿಹಾರ ಕ್ರಮಗಳು, ಸರ್ಕಾರದ ವಿವಿಧ ಯೋಜನೆಗಳು, ಕಾರ್ಯಕ್ರಮಗಳ ಕುರಿತು ವರದಿಯನ್ನು ಸಲ್ಲಿಸಬೇಕಿತ್ತು. 30 ಐಎಎಸ್‌ ಅಧಿಕಾರಿಗಳ ಪೈಕಿ 20 ಅಧಿಕಾರಿಗಳು ನಿಯೋಜಿಸಿದ್ದ ಜಿಲ್ಲೆಗಳಲ್ಲಿ 2021ರ ಜುಲೈ 4ರಿಂದ 2021ರ ಆಗಸ್ಟ್‌ 26ರವರೆಗೆ ಪ್ರವಾಸ ಕೈಗೊಂಡಿದ್ದರು. ಈ ಸಂಬಂಧ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದರು. ಆದರೆ 10 ಐಎಎಸ್‌ ಅಧಿಕಾರಿಗಳು ವರದಿ ಸಲ್ಲಿಸಿಲ್ಲ.

ವರದಿ ಸಲ್ಲಿಸದ ಐಎಎಸ್‌ ಅಧಿಕಾರಿಗಳ ಪಟ್ಟಿ

‘ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾಪರಿವೀಕ್ಷಕ ಕೆ ಪಿ ಮೋಹನ್‌ರಾಜ್‌ (ಉತ್ತರ ಕನ್ನಡ), ಗುಂಜನ್‌ ಕೃಷ್ಣ (ಕಲ್ಬುರ್ಗಿ) ರಂದೀಪ್‌ ಡಿ (ವಿಜಯಪುರ), ಡಾ ವಿಶಾಲ್‌ ಆರ್‌ (ರಾಯಚೂರು), ಮನೋಜ್‌ ಜೈನ್‌ (ಹಾವೇರಿ), ಪಿ ಹೇಮಲತ (ಬೆಂಗಳೂರು ಗ್ರಾಮಾಂತರ), ತುಷಾರ್‌ ಗಿರಿನಾಥ್‌ (ರಾಮನಗರ) ಎನ್‌ ಜಯರಾಮ್‌ (ಮೈಸೂರು),’ ಅವರು ಕೈಗೊಂಡಿದ್ದ ಪ್ರವಾಸದ ಕುರಿತು ವರದಿ ಸರ್ಕಾರದಲ್ಲಿ ಸ್ವೀಕೃತವಾಗಿಲ್ಲ ಎಂದು ಸಭೆ ನಡವಳಿಯಿಂದ ತಿಳಿದು ಬಂದಿದೆ.

ವರದಿ ಸಲ್ಲಿಸಿದವರ ಪಟ್ಟಿ

ಡಾ ಎನ್‌ ಮಂಜುಳ, ಕ್ಯಾಪ್ಟನ್‌ ಮಣಿವಣ್ಣನ್‌, ರಾಕೇಶ್‌ಸಿಂಗ್‌, ಡಾ ರವಿಕುಮಾರ್‌ ಸುರ್‌ಪುರ್‌, ಉಮಾ ಮಹದೇವನ್‌, ಎಲ್‌ ಕೆ ಅತೀಕ್‌, ಡಾ ಎಸ್‌ ಸೆಲ್ವಕುಮಾರ್‌, ಎಸ್‌ ಆರ್‌ ಉಮಾಶಂಕರ್‌, ಮೊಹಮ್ಮದ್‌ ಮೊಹಸೀನ್‌, ಡಾ ವಿ ರಾಮ್‌ಪ್ರಸಾತ್‌ ಮನೋಹರ್‌, ಬಿ ಬಿ ಕಾವೇರಿ, ನವೀನ್‌ರಾಜ್‌ಸಿಂಗ್‌, ವಿ ಅನ್ಬುಕುಮಾರ್‌, ಸಿ ಶಿಖಾ, ಶಿವಯೋಗಿ ಕಳಸದ, ಡಾ ರಶ್ಮಿ ವಿ ಮಹೇಶ್‌, ಡಾ ಎಂ ಎನ್‌ ಅಜಯ್‌ನಾಗಭೂಷಣ್‌, ರಿಚರ್ಡ್‌ ವಿನ್ಸೆಂಟ್‌ ಡಿಸೋಜಾ, ಮುನೀಶ್‌ ಮೌದ್ಗಿಲ್‌ ಅವರು ಜಿಲ್ಲಾ ಪ್ರವಾಸದ ವರದಿ ಸಲ್ಲಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ, ಕಂದಾಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ಜಾರಿಗೊಳಿಸಿರುವ ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳ ಅನುಷ್ಠಾನದ ಪ್ರಗತಿ ಕುರಿತು ಅವಲೋಕಿಸಿ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಚುರುಕು ಮುಟ್ಟಿಸುವ ಹೊಣೆಗಾರಿಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳದ್ದು. ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲಾ ಪ್ರಗತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು.

the fil favicon

SUPPORT THE FILE

Latest News

Related Posts