Sunday | October 18, 2026 |

ಲಂಚ; ಎಚ್‌ ನಾಗೇಶ್‌ರಿಂದ ರಾಜೀನಾಮೆ, ಗೋಪಾಲಯ್ಯ ಪ್ರಕರಣದಲ್ಲಿ ಮೌನವೇಕೆ?

ಬೆಂಗಳೂರು; ಅಬಕಾರಿ ಇಲಾಖೆಯ ಜಂಟಿ ಆಯುಕ್ತರೊಬ್ಬರಿಂದ ವರ್ಗಾವಣೆಗೆ 1 ಕೋಟಿ ಲಂಚ ಕೇಳಿದ್ದಾರೆ ಎಂದು ಪ್ರಧಾನಿಗೆ ಸಲ್ಲಿಸಿದ್ದ ದೂರಿನ ಮೇರೆಗೆ ಹಿಂದಿನ ಸಚಿವ ಎಚ್‌ ನಾಗೇಶ್‌ ಅವರಿಂದ ರಾಜೀನಾಮೆ ಪಡೆದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇದೀಗ ಸಚಿವ ಕೆ ಗೋಪಾಲಯ್ಯ ಅವರು ಅಬಕಾರಿ ಇನ್ಸ್‌ಪೆಕ್ಟರ್‌ಗಳಿಂದ ಹಣ ವಸೂಲಿಗೆ ಸೂಚಿಸಿರುವ ಬಗ್ಗೆ ಅಧಿಕಾರಿಗಳಿಬ್ಬರ ನಡುವೆ ನಡೆದಿರುವ ಸಂಭಾಷಣೆಯ ಆಡಿಯೋ ಬಹಿರಂಗವಾದರೂ ಮೌನ ವಹಿಸಿದ್ದಾರೆ.

ಅಬಕಾರಿ ಇಲಾಖೆಯ ಹಿಂದಿನ ಸಚಿವ ಎಚ್‌ ನಾಗೇಶ್‌ ಅವರು ಜಂಟಿ ಆಯುಕ್ತರ ವರ್ಗಾವಣೆಗೆ 1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಪ್ರಕರಣವು ಸಾಕಷ್ಟು ಸದ್ದು ಮಾಡಿತ್ತು. ಇದೊಂದೇ ಪ್ರಕರಣವನ್ನು ಮುಂದಿಟ್ಟುಕೊಂಡು ದಲಿತ ಸಮುದಾಯದ ಎಚ್‌ ನಾಗೇಶ್‌ ಅವರಿಂದ ರಾಜೀನಾಮೆ ಪಡೆದಿದ್ದ ಸಂಘ ಪರಿವಾರ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೆ ಗೋಪಾಲಯ್ಯ ಅವರ ಪ್ರಕರಣದಲ್ಲಿ ತುಟಿ ಬಿಚ್ಚಿಲ್ಲ.

ದಲಿತ ಸಮುದಾಯಕ್ಕೆ ಸೇರಿದ ಸಚಿವರ ವಿರುದ್ಧ ಭ್ರಷ್ಟಾಚಾರ ಸಂಬಂಧಿತ ಕೇವಲ ದೂರು ಕೇಳಿ ಬಂದರೂ ಸಾಕು ಅವರಿಂದ ರಾಜೀನಾಮೆ ಪಡೆಯುವ ಆಡಳಿತ ಪಕ್ಷವು ಭ್ರಷ್ಟಾಚಾರ ಪ್ರಕರಣಗಳಲ್ಲಿ ಪ್ರಬಲ ಸಮುದಾಯಕ್ಕೆ ಸೇರಿದ ಸಚಿವರ ವಿರುದ್ಧ ಸಾಕ್ಷ್ಯಾಧಾರಗಳ ಸಮೇತ ಆರೋಪ ಕೇಳಿ ಬಂದರೂ ರಾಜೀನಾಮೆ ಇರಲಿ, ಪ್ರಕರಣ ಸಂಬಂಧ ವಿವರಣೆಯನ್ನೂ ಕೇಳುವ ಧೈರ್ಯವೂ ಪ್ರದರ್ಶನವಾಗುವುದಿಲ್ಲ. ಇಂತಹ ಪ್ರಕರಣಗಳಲ್ಲಿ ಆಡಳಿತ ಪಕ್ಷವು ಎಸಗುವ ತಾರತಮ್ಯ ನೀತಿಗೆ ಇವರಿಬ್ಬರ ಪ್ರಕರಣವು ಉತ್ತಮ ನಿದರ್ಶನವಾದಂತಿದೆ.

ಅಬಕಾರಿ ಇನ್ಸ್‌ಪೆಕ್ಟರ್‌ಗಳಿಂದ ಹಣ ವಸೂಲಿ ಮಾಡುವ ಸಂಬಂಧ ಸಚಿವ ಗೋಪಾಲಯ್ಯ ಅವರ ಮನೆಯಲ್ಲಿಯೇ ಸಭೆ ನಡೆಸಲಾಗಿತ್ತು ಎಂದು ಅಧಿಕಾರಿಗಳಿಬ್ಬರ ಮಧ್ಯೆ ನಡೆದಿದ್ದ ಸಂಭಾಷಣೆಯಿಂದ ತಿಳಿದು ಬಂದಿತ್ತು. ಈ ಸಭೆಯಲ್ಲಿ ಮಂಜುನಾಥ್‌, ಕುಮಾರ್‌, ನಾಗರಾಜಪ್ಪ ಎಂಬ ಅಧಿಕಾರಿಗಳು ಹಾಜರಾಗಿದ್ದರು ಎಂದು ಸಂಭಾಷಣೆಯಲ್ಲಿ ಪ್ರಸ್ತಾಪವಾಗಿತ್ತು. ಗೋಪಾಲಯ್ಯ ಅವರ ವಿರುದ್ಧ ಕ್ರಮ ಕೈಗೊಳ್ಳಲು ಇದಕ್ಕಿಂತ ಬೇರೆ ಸಾಕ್ಷ್ಯಗಳು ಬೇಕಿರಲಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಅಲ್ಲದೆ ಆಡಿಯೋದಲ್ಲಿ ‘ಮಿನಿಸ್ಟರ್‌ದು ಏನ್‌ ಮಾಡಿದ್ರಿ,’ ಎಂದು ಪ್ರಶ್ನಿಸುವ ಮಹಿಳಾ ಅಧಿಕಾರಿಯು ‘ನೀವು ಶಾಪ್‌ಗಳಿಂದ ಆ ಮೇಲೆ ಕಲೆಕ್ಷನ್‌ ಮಾಡ್ರಿ. ನೀವು ಕೈಯಿಂದ ಕೊಟ್ಟು ಶಾಪ್‌ನೋರ ಹತ್ರ ಆ ಮೇಲೆ ಕೇಳ್ರಿ. ಬೆಳಗಾಂ, ಗುಲ್ಬರ್ಗಾದವರು ಬಂದಿದ್ರು. ಅವರನ್ನು ಕೇಳಿ. ನೀವು ಅವರು ಟಾರ್ಗೇಟ್‌ ಆಗ್ತೀರಿ. ನಾನೇನು ಕೊಟ್ಟು ಕೈ ತೊಳ್ಕೋತ್ತೀನಿ, ಆ ಮೇಲೆ ನಿಮ್‌ ಸ್ಟೋರಿಗಳು ಹೊರಗ್‌ ಬರ್ತಾವೆ. ನಾನೇನು ಮಾಡಕ್ಕಾಗಲ್ಲ,’ಎಂದು ಮಹಿಳಾ ಅಧಿಕಾರಿ ಮಾತನಾಡಿದ್ದರೂ ಕಡೇ ಪಕ್ಷ ಆ ಮಹಿಳಾ ಅಧಿಕಾರಿಯನ್ನೂ ವಿಚಾರಣೆಗೆ ಗುರಿಪಡಿಸಿಲ್ಲ.

ಬದಲಿಗೆ ಆಡಿಯೋ ಹರಿಬಿಟ್ಟರು ಎಂಬ ಕಾರಣದಿಂದ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿರುವುದು ಗೋಪಾಲಯ್ಯ ಅವರ ರಕ್ಷಣೆಗೆ ಸರ್ಕಾರ ನಿಂತಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಇನ್ನು, ರಾಜ್ಯದ ಚಾಮರಾಜನಗರ, ದಾವಣಗೆರೆ ಜಿಲ್ಲೆಯಿಂದಲೂ ಅಲ್ಲಿನ ಅಬಕಾರಿ ಅಧಿಕಾರಿಗಳು ಮದ್ಯದ ಅಂಗಡಿಗಳಿಂದ ಹಣ ವಸೂಲಿ ಮಾಡಿ ಸಚಿವರಿಗೆ ತಲುಪಿಸಿದ್ದಾರೆ ಎಂದು ಅಧಿಕಾರಿಗಳಿಬ್ಬರು ಸಂಭಾಷಿಸಿದ್ದನ್ನು ಸ್ಮರಿಸಬಹುದು.

Hot this week

ಮರಿಮಲ್ಲಪ್ಪ ಶಿಕ್ಷಣ ಸಂಸ್ಥೆಯಿಂದ ನಿಯಮ, ಕಾಯ್ದೆ ಉಲ್ಲಂಘನೆ ಆರೋಪ; ಆಡಳಿತಾಧಿಕಾರಿ ನೇಮಕಕ್ಕೆ ಮುಂದಾದ ಸರ್ಕಾರ, ಇದು ಖಾಸಗಿ ಸಂಸ್ಥೆಯೋ ಸಾರ್ವಜನಿಕ ಸಂಸ್ಥೆಯೋ?

ಬೆಂಗಳೂರು; ಮೈಸೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮರಿಮಲ್ಲಪ್ಪ ವಿದ್ಯಾ ಸಂಸ್ಥೆಯು ಕಾಲೇಜು, ...

ಅಪೆಕ್ಸ್ ಬ್ಯಾಂಕ್‌ನಲ್ಲಿ 1,000 ಕೋಟಿ ಹಗರಣ; ಹೈಕೋರ್ಟ್‌ನಲ್ಲಿ ಪಿಐಎಲ್‌, ಸರ್ಕಾರಕ್ಕೆ ಎದುರಾಗಲಿದೆಯೇ ಸಂಕಷ್ಟ?

ಬೆಂಗಳೂರು; ಕೃಷಿಗೆ ಸಂಬಂಧಿಸದ ಉದ್ದೇಶಗಳಿಗಾಗಿ ಸಾಲ ಮಂಜೂರಾತಿ,  ಈಗಾಗಲೇ ಅನುತ್ಪಾದಕ ಆಸ್ತಿಗಳೆಂದು (Non-Performing...

ರೈಲ್ವೇ- ವಿಮಾನ ಭತ್ಯೆ; 15ನೇ ವಿಧಾನಸಭೆಯ ಶಾಸಕರಿಗೆ 16.32 ಕೋಟಿ ಮರು ಪಾವತಿ

ಬೆಂಗಳೂರು; ಹದಿನೈದನೇ ವಿಧಾಸಭೆ ಅವಧಿಯಲ್ಲಿ ರಾಜ್ಯದ 224 ಶಾಸಕರು  16.32 ಕೋಟಿಯಷ್ಟು...

ಆರ್ಥಿಕ ಸ್ಥಿತಿ ಬಹಿರಂಗಪಡಿಸಿ ಕೋಲಾಹಲ ಎಬ್ಬಿಸಿದ್ದ ಅನಧಿಕೃತ ಟಿಪ್ಪಣಿಯ ಕಡತ ಒದಗಿಸಲು ನಿರಾಕರಿಸಿದ ಸರ್ಕಾರ

ಬೆಂಗಳೂರು; ರಾಜ್ಯ ಸರ್ಕಾರವು ₹2 ಲಕ್ಷ ಕೋಟಿಗೂ ಹೆಚ್ಚಿನ ಕಾಮಗಾರಿಗಳ ಬಾಕಿ...

ಸ್ಟಿಂಗ್ ಆಪರೇಷನ್‌; ಅಸಲು ದಾವೆ ಬೆನ್ನಲ್ಲೇ ಪೊಲೀಸ್‌ ಆಯುಕ್ತರಿಗೂ ದೂರು ಸಲ್ಲಿಸಿ ಯಾವ ಭಯವೂ ನನಗಿಲ್ಲವೆಂದ ಸಿದ್ದರಾಮಯ್ಯ

ಬೆಂಗಳೂರು; ಯೂ ಟ್ಯೂಬ್‌ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು...
Please Scan to make Your Contribution

Topics

21 ಪ್ಯಾಕೇಜ್‌ ಟೆಂಡರ್; ಶೇ. 5 ಪ್ರೀಮಿಯಂ ಮೀರಿದ್ದರೂ ಪರಿಶೀಲನೆ ಸಮಿತಿ ರಚಿಸಲು ಆಕ್ಷೇಪ ಎತ್ತಿದ್ದ ಡಿಕೆಶಿ

ಬೆಂಗಳೂರು;  ಜಿಬಿಎ ವ್ಯಾಪ್ತಿಯಲ್ಲಿ  ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ...

ಪ್ರಭಾವಿ ನಾಯಕನ ವಿರುದ್ಧ ಸ್ಟಿಂಗ್ ಕಾರ್ಯಾಚರಣೆ; ನ್ಯಾಯಾಂಗ ತನಿಖೆಗೆ ಹೈಕೋರ್ಟ್‌, ಬಾಲ ನ್ಯಾಯಮಂಡಳಿ ಮೆಟ್ಟಿಲೇರಿದ ನೈಜ ಹೋರಾಟಗಾರರ ವೇದಿಕೆ

ಬೆಂಗಳೂರು; ಯೂ ಟ್ಯೂಬ್‌ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ  ‘ಹನಿಟ್ರ್ಯಾಪ್’ ಪ್ರಕರಣದ...

ಸ್ಟಿಂಗ್ ಆಪರೇಷನ್‌; ಮಾಧ್ಯಮಗಳ ವಿರುದ್ಧ ತಡೆಯಾಜ್ಞೆಗೆ ಸಿದ್ದರಾಮಯ್ಯ ಎಂಬುವರಿಂದ ಅಸಲು ದಾವೆ ದಾಖಲು, ನಾಳೆಯೇ ಅರ್ಜಿ ವಿಚಾರಣೆ

ಬೆಂಗಳೂರು;  ರಾಜ್ಯ ರಾಜಕಾರಣದಲ್ಲಿ ಬಹು ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್ ಬಗ್ಗೆ...

Related Articles

Popular Categories

error: Content is protected !!