‘ದಿ ಫೈಲ್‌’ ಪರಿಣಾಮ; ಎಚ್‌ಡಿಕೆ ತರಾಟೆ, ಆಂಪೋಟೇರಿಸಿಯನ್ ಖರೀದಿಗೆ ಮುಂದಾದ ಸರ್ಕಾರ

ಬೆಂಗಳೂರು; ಕಪ್ಪು ಶಿಲೀಂಧ್ರ ಚಿಕಿತ್ಸೆ ನೀಡುವ ಆಂಫೋಟೆರಿಸಿನ್-ಬಿ ಔಷಧ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಎಸಗಿದ್ದ ತಾರತಮ್ಯ ಮತ್ತು ನೆರೆಯ ರಾಜ್ಯ ತೆಲಂಗಾಣ ಸರ್ಕಾರ ಖಾಸಗಿ ಕಂಪನಿಗಳಿಗೆ ಪತ್ರ ಬರೆದು ವಹಿಸಿದ್ದ ಮುಂಜಾಗ್ರತೆಯನ್ನು ‘ದಿ ಫೈಲ್‌’ ಬಹಿರಂಗಗೊಳಿಸುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಆಂಪೋಟೇರಿಸಿಯನ್‌ ಬಿ ಖರೀದಿಗೆ ದರಪಟ್ಟಿ ಆಹ್ವಾನಿಸಿದೆ. ಇದು ‘ದಿ ಫೈಲ್‌’ ವರದಿ ಪರಿಣಾಮ.

ರಾಜ್ಯದಲ್ಲಿ ಬ್ಲಾಕ್‌ ಫಂಗಸ್‌ ಸೋಂಕು ವೇಗವಾಗಿ ಹರಡುತ್ತಿದ್ದರೂ ಕೇಂದ್ರ ಸರ್ಕಾರವು ಚುಚ್ಚುಮದ್ದು ಹಂಚಿಕೆಯಲ್ಲಿ ತಾರತಮ್ಯ ಎಸಗಿತ್ತು. 20,000 ವಯಲ್‌ ಚುಚ್ಚುಮದ್ದು ಬೇಡಿಕೆ ಇರಿಸಿದ್ದ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರವು ಕೇವಲ 1,050 ವಯಲ್‌ ಹಂಚಿಕೆ ಮಾಡಿತ್ತಲ್ಲದೆ ಗುಜರಾತ್‌ಗೆ 15,000 ವಯಲ್‌ ಹಂಚಿಕೆ ಮಾಡಿತ್ತು. ಈ ಕುರಿತು ‘ದಿ ಫೈಲ್‌’ 2021ರ ಮೇ 20ರಂದು ವರದಿ ಪ್ರಕಟಿಸಿತ್ತು.

ಬ್ಲಾಕ್ ಫಂಗಸ್ ; ಗುಜರಾತ್‌ಗೆ ಆಂಪೋಟೆರಿಸಿನ್‌ ಬಿ 15,000, ರಾಜ್ಯಕ್ಕೆ ಕೇವಲ 1,050 ವಯಲ್‌

ಈ ಮಧ್ಯೆ ತೆಲಂಗಾಣ ಸರ್ಕಾರವು ಚುಚ್ಚುಮದ್ದು ಸಂಗ್ರಹಿಸಲು ಮುಂಜಾಗ್ರತೆ ವಹಿಸಿತ್ತು. ಕೇಂದ್ರ ಸರ್ಕಾರವು ಹಂಚಿಕೆ ಮಾಡಿದ್ದರೂ ಸೋಂಕಿತರ ಚಿಕಿತ್ಸೆಗೆ ತೊಂದರೆಯಾಗದಂತೆ ಮೈಲಾನ್‌ ಸೇರಿದಂತೆ ಹಲವು ಔಷಧ ಕಂಪನಿಗಳಿಗೆ ಪತ್ರ ಬರೆದು ನೇರವಾಗಿ ಚುಚ್ಚುಮದ್ದು ಸರಬರಾಜು ಮಾಡಲು ಪತ್ರ ಬರೆದು ಸೂಚಿಸಿತ್ತು. ಈ ಕುರಿತು ‘ದಿ ಫೈಲ್‌’ 2021ರ ಮೇ 21ರಂದು ವರದಿ ಪ್ರಕಟಿಸಿತ್ತು.

ಆಂಪೋಟೆರಿಸಿನ್‌ ಬಿ ನೇರ ಸರಬರಾಜಿಗೆ ಕಂಪನಿಗಳಿಗೆ ತೆಲಂಗಾಣ ಪತ್ರ, ಕರ್ನಾಟಕ ಕಾಲಹರಣ

ಆಂಪೋಟೆರಿಸಿಯನ್‌ ಬಿ ಚುಚ್ಚುಮದ್ದು ಹಂಚಿಕೆಯಲ್ಲಿ ತಾರತಮ್ಯ ಮತ್ತು ಔಷಧಕ್ಕಾಗಿ ಖಾಸಗಿ ಕಂಪನಿಗಳಿಂದ ಖರೀದಿ ಪ್ರಕ್ರಿಯೆ ನಡೆಸದ ವಿಚಾರದ ಕುರಿತು ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಸಂಬಂಧ ಟ್ವೀಟ್‌ ಮಾಡಿದ್ದ ಅವರು ರಾಜ್ಯ ಸರ್ಕಾರಕ್ಕೆ ಈ ಮಾರಕ ರೋಗದ ವಿಚಾರದಲ್ಲಿ ಆಲಸ್ಯ ಯಾಕೆ ಎಂದು ಪ್ರಶ್ನಿಸಿದ್ದರು.

ಅಲ್ಲದೆ, ರಾಜ್ಯ ಸರ್ಕಾರ ‘ರಾಕ್ಷಸ ಅಲಸ್ಯ’ದಲ್ಲಿರುವ ಹೊತ್ತಲ್ಲೇ ತೆಲಂಗಾಣ ಸರ್ಕಾರ ಎಂಫೋಟೆರಿಸಿನ್-ಬಿ ತಯಾರಕ ಸಂಸ್ಥೆಗಳಿಗೆ ಪತ್ರ ಬರೆದು ಔಷಧ ಪೂರೈಸಲು ಕೋರಿದೆ. ಇದರ ಮಾಹಿತಿ ನನಗಿದೆ. ಇದು ರೋಗದ ವಿರುದ್ಧ ಸರ್ಕಾರವೊಂದು ವರ್ತಿಸುವ ರೀತಿ. ಮತ್ತು, ಸರ್ಕಾರಕ್ಕೆ ಜನರ ಮೇಲಿರುವ ಕಾಳಜಿ. ಆದರೆ, ಕನ್ನಡಿಗರ ಮೇಲೆ ಬಿಜೆಪಿ ಸರ್ಕಾರಕ್ಕೆ ಏಕಿಲ್ಲ ಕಾಳಜಿ ಎಂದು ಪ್ರಶ್ನಿಸುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದರು.

ಈ ಬೆಳವಣಿಗೆ ನಡುವೆಯೇ ಎಚ್ಚೆತ್ತುಕೊಂಡ ರಾಜ್ಯ ಬಿಜೆಪಿ ಸರ್ಕಾರವು ವೈದ್ಯಕೀಯ ಸರಬರಾಜು ನಿಗಮದ ಮೂಲಕ ಆಂಪೋಟೇರಿಸಿಯನ್‌ ಬಿ ಚುಚ್ಚುಮದ್ದು ಖರೀದಿಗೆ 2021ರ ಮೇ 22ರಂದು ದರಪಟ್ಟಿ ಆಹ್ವಾನಿಸಿದೆ. ಇದರ ಜತೆಯಲ್ಲಿಯೇ ಪರ್ಯಾಯ ಔಷಧ ಮತ್ತು ಚುಚ್ಚುಮದ್ದು ಖರೀದಿಸಲು ಔಷಧ ಕಂಪನಿಗಳಿಂದ ದರ ಪಟ್ಟಿ ಆಹ್ವಾನಿಸಿದೆ.

 

ಅಲ್ಲದೆ ಕೇಂದ್ರದ ಧೋರಣೆ ವಿರುದ್ಧ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕಪ್ಪು ಶಿಲೀಂಧ್ರ ರೋಗಿಗಳ ಸಂಖ್ಯೆ ಧರಿಸಿ 1,270 ವಯಲ್‌ಗಳನ್ನು ರಾಜ್ಯಕ್ಕೆ ಹಂಚಿಕೆ ಮಾಡಿದೆ. ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ ಇಡೀ ದೇಶದಲ್ಲಿ ಸದ್ಯ ಒಟ್ಟು 8,848 ಪ್ರಕರಣಗಳಿವೆ. ರಾಜ್ಯದಲ್ಲಿ 500 ಪ್ರಕರಣಗಳ ಆಧಾರದಲ್ಲಿ 1,270 ವಯಲ್ಸ್‌ ಹಂಚಿಕೆ ಮಾಡಲಾಗಿದೆ.

the fil favicon

SUPPORT THE FILE

Latest News

Related Posts