ಕೋವಿಡ್‌ ಚಿಕಿತ್ಸೆ; ಕೋರೆ, ಎಸ್ಸೆಸ್‌, ಎಸ್‌ಡಿಎಂ ಸೇರಿ ಪ್ರಮುಖ ಆಸ್ಪತ್ರೆಗಳ ತಿಜೋರಿ ಭರ್ತಿ

ಬೆಂಗಳೂರು; ರಾಜ್ಯಸಭೆ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಪ್ರಭಾಕರ್‌ ಕೋರೆ, ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ, ಧರ್ಮಸ್ಥಳ ಮಂಜುನಾಥ ಎಜುಕೇಷನ್‌ ಸೊಸೈಟಿ, ಆದಿಚುಂಚನಗಿರಿ, ಜಗದ್ಗುರು ಶಿವರಾತ್ರೀಶ್ವರ ಸೇರಿದಂತೆ ರಾಜಕೀಯ ನಂಟು ಹೊಂದಿರುವ ಖಾಸಗಿ ಆಸ್ಪತ್ರೆಗಳು ಕೋವಿಡ್‌ ಸಂದರ್ಭದಲ್ಲಿ ಖಜಾನೆ ಭರ್ತಿ ಮಾಡಿಕೊಂಡಿವೆ.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ನವೆಂಬರ್‌ 23 ಅಂತ್ಯಕ್ಕೆ ಸರ್ಕಾರ ಬಿಡುಗಡೆ ಮಾಡಿರುವ ಹಣದ ವಿವರ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ನವೆಂಬರ್‌ 23 ಅಂತ್ಯಕ್ಕೆ 62,458 ಪ್ರಕರಣಗಳಿಗೆ 203.24 ಕೋಟಿ ರು. ಪಾವತಿಸಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಪ್ರಸ್ತಾವನೆ ಸಲ್ಲಿಸಿದೆ. ಇದರಲ್ಲಿ 49,751 ಪ್ರಕರಣಗಳಿಗೆ 166.42 ಕೋಟಿ ರು.ಗಳನ್ನು ಭರಿಸಿರುವ ಸರ್ಕಾರ 12,707 ಪ್ರಕರಣಗಳಿಗೆ ವೆಚ್ಚ ಪಾವತಿಸಲು ಅನುಮೋದಿಸಿದೆ. ಹಾಗೆಯೇ 36.82 ಕೋಟಿ ಪಾವತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. 30 ಜಿಲ್ಲೆಗಳಲ್ಲಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿನ ಒಟ್ಟು 26,692 ಪ್ರಕರಣಗಳಿಗೆ 139.89 ಕೋಟಿ ರು.ಗಳನ್ನು ಬಿಡುಗಡೆಗೊಳಿಸಬೇಕಿದೆ ಎಂದು ದಾಖಲೆಯಿಂದ ತಿಳಿದು ಬಂದಿದೆ.

ಪ್ರಮುಖ ಖಾಸಗಿ ಆಸ್ಪತ್ರೆಗಳಿಗೆ ಪಾವತಿಸಿರುವ ವಿವರ

ಕೆಎಲ್‌ಇ ಡಾ ಪ್ರಭಾಕರ ಕೋರೆ ಆಸ್ಪತ್ರೆ – 23.18 ಲಕ್ಷ
ಕೆಎಲ್‌ಇ ಆಸ್ಪತ್ರೆ (ಐಸಿಯು) ಗೋಕಾಕ್‌ – 5.24 ಲಕ್ಷ
ಜಿಂದಾಲ್‌ ಸಂಜೀವಿನಿ ಆಸ್ಪತ್ರೆ (ಬಳ್ಳಾರಿ)- 79.46 ಲಕ್ಷ
ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜು (ದಕ್ಷಿಣ ಕನ್ನಡ) – 85.91 ಲಕ್ಷ
ಜಸ್ಟೀಸ್‌ ಕೆ ಎಸ್‌ ಹೆಗ್ಡೆ ಚಾರಿಟಬಲ್‌ ಆಸ್ಪತ್ರೆ- 79.51ಲಕ್ಷ
ಎ ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ- 85.91 ಲಕ್ಷ
ಯೇನಪೋವ ಮೆಡಿಕಲ್‌ ಕಾಲೇಜು – 315.40 ಲಕ್ಷ
ಕೆಎಂಸಿ ಆಸ್ಪತ್ರೆ ಅತ್ತಾವರ – 78.24 ಲಕ್ಷ
ಕೆವಿಜೆ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆ- 41.45 ಲಕ್ಷ
ಶ್ರೀನಿವಾಸ ಮೆಡಿಕಲ್‌ ಕಾಲೇಜು – 25.38 ಲಕ್ಷ
ಸಿಟಿ ಸೆಂಟ್ರಲ್‌ ಆಸ್ಪತ್ರೆ ದಾವಣಗೆರೆ- 11.80 ಲಕ್ಷ
ಎಸ್‌ ಎಸ್‌ ಇನ್ಸಿಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಕಾಲೇಜು- 53.17 ಲಕ್ಷ
ಬಾಪೂಜಿ ಆಸ್ಪತ್ರೆ ದಾವಣಗೆರೆ- 36.55 ಲಕ್ಷ
ತಟವದರ್ಷ ಆಸ್ಪತ್ರೆ ಧಾರವಾಡ – 20.68 ಲಕ್ಷ
ಎಸ್‌ಡಿಎಂ ಮೆಡಿಕಲ್ ಸೈನ್ಸ್‌ ಕಾಲೇಜು – 165.84 ಲಕ್ಷ
ಬಸವೇಶ್ವರ ಬೋಧನಾ ಮತ್ತು ಆಸ್ಪತ್ರೆ ಕಲ್ಬುರ್ಗಿ- 56.09 ಲಕ್ಷ
ಆರ್‌ ಎಲ್‌ ಜಾಲಪ್ಪ ಆಸ್ಪತ್ರೆ ಕೋಲಾರ- 244.47 ಲಕ್ಷ
ಆದಿಚುಂಚನಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ- 44.73 ಲಕ್ಷ
ಸಂಜೋ ಆಸ್ಪತ್ರೆ ಮಂಡ್ಯ- 80.51 ಲಕ್ಷ
ಜಗದ್ಗುರು ಶಿವರಾತ್ರೀಶ್ವರ ಆಸ್ಪತ್ರೆ- 28.78 ಲಕ್ಷ
ವಿವೇಕಾನಂದ ಮೆಮೋರಿಯಲ್‌ ಆಸ್ಪತ್ರೆ ಮೈಸೂರು – 24.44 ಲಕ್ಷ
ಕೃಷ್ಣ ಆಸ್ಪತ್ರೆ ಮೈಸೂರು – 137.46 ಲಕ್ಷ
ನವೋದಯ ಮೆಡಿಕಲ್‌ ಕಾಲೇಜು ರಾಯಚೂರು- 26.39 ಲಕ್ಷ
ಡಾ ಚಂದ್ರಮ್ಮ ದಯಾನಂದ ಸಾಗರ್‌ ಇನ್ಸಿಟಿಟ್ಯೂಟ್‌ ಮೆಡಿಕಲ್‌ ಸೈನ್ಸ್‌ ರಾಮನಗರ- 53.75 ಲಕ್ಷ
ರಾಮಕೃಷ್ಣ ಆಸ್ಪತ್ರೆ ರಾಮನಗರ- 45.62 ಲಕ್ಷ
ನಂಜಪ್ಪ ಅಸ್ಪತ್ರೆ ಶಿವಮೊಗ್ಗ – 32.51 ಲಕ್ಷ
ಸುಬ್ಬಯ್ಯ ಮೆಡಿಕಲ್‌ ಕಾಲೇಜು ಶಿವಮೊಗ್ಗ – 328.27 ಲಕ್ಷ
ಶ್ರೀದೇವಿ ಮೆಡಿಕಲ್‌ ಇನ್ಸಿಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ತುಮಕೂರು- 76.40 ಲಕ್ಷ
ಅಶ್ವಿನಿ ಆಯುರ್ವೇದಿಕ್‌ ಮೆಡಿಕಲ್‌ಕಾಲೇಜು ತುಮಕೂರು- 43.43 ಲಕ್ಷ
ಕಸ್ತೂರಬಾ ಆಸ್ಪತ್ರೆ ಉಡುಪಿ- 166.76 ಲಕ್ಷ
ಮಹೇಶ್‌ ಆಸ್ಪತ್ರೆ ಉಡುಪಿ – 49.05 ಲಕ್ಷ
ಡಾ ಟಿಎಂಎ ಪೈ ಆಸ್ಪತ್ರೆ ಉಡುಪಿ – 260.53 ಲಕ್ಷ

ಬೆಂಗಳೂರು ನಗರದಲ್ಲಿರುವ ಖಾಸಗಿ ಅಸ್ಪತ್ರೆಗಳೂ ಸಿಂಹಪಾಲು ಪಡೆದಿವೆ. ನವೆಂಬರ್‌ 23ರ ಅಂತ್ಯಕ್ಕೆ ರಾಜ್ಯದ ಖಾಸಗಿ ಆಸ್ಪತ್ರೆಗಳಿಗೆ ನವೆಂಬರ್‌ 23 ಅಂತ್ಯಕ್ಕೆ ಸರ್ಕಾರ ಬಿಡುಗಡೆ ಮಾಡಿರುವ ಹಣದ ವಿವರ ‘ದಿ ಫೈಲ್‌’ಗೆ ಲಭ್ಯವಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ 115.79 ಕೋಟಿ ರು. ಈಗಾಗಲೇ ಬಿಡುಗಡೆಯಾಗಿದೆ.

ಇದರ ಪ್ರಕಾರ ಖಾಸಗಿ ಆಸ್ಪತ್ರೆಗಳಿಗೆ ಪಾವತಿಸುವ ಸಂಬಂಧ 26.30 ಕೋಟಿ ರು. ಮೊತ್ತದ ಬಿಲ್‌ಗಳು ಸರ್ಕಾರದ ಅನುಮತಿ ಪಡೆಯುವ ಹಂತದಲ್ಲಿವೆ. ಅದೇ ರೀತಿ 115.97 ಕೋಟಿ ರು. ಮೊತ್ತದ ಬಿಲ್‌ಗಳು ಪಾವತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿವೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಒಟ್ಟಾರೆ 288 ಕೋಟಿ ರುಪಾಯಿ ರಾಜ್ಯದ ಖಾಸಗಿ ಆಸ್ಪತ್ರೆಗಳ ತಿಜೋರಿ ಸೇರಲಿದೆ.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ನವೆಂಬರ್‌ 23 ಅಂತ್ಯಕ್ಕೆ 62,458 ಪ್ರಕರಣಗಳಿಗೆ 203.24 ಕೋಟಿ ರು. ಪಾವತಿಸಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಪ್ರಸ್ತಾವನೆ ಸಲ್ಲಿಸಿದೆ. ಇದರಲ್ಲಿ 49,751 ಪ್ರಕರಣಗಳಿಗೆ 166.42 ಕೋಟಿ ರು.ಗಳನ್ನು ಭರಿಸಿರುವ ಸರ್ಕಾರ 12,707 ಪ್ರಕರಣಗಳಿಗೆ ವೆಚ್ಚ ಪಾವತಿಸಲು ಅನುಮೋದಿಸಿದೆ. ಹಾಗೆಯೇ 36.82 ಕೋಟಿ ಪಾವತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. 30 ಜಿಲ್ಲೆಗಳಲ್ಲಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿನ ಒಟ್ಟು 26,692 ಪ್ರಕರಣಗಳಿಗೆ 139.89 ಕೋಟಿ ರು.ಗಳನ್ನು ಬಿಡುಗಡೆಗೊಳಿಸಬೇಕಿದೆ ಎಂದು ದಾಖಲೆಯಿಂದ ತಿಳಿದು ಬಂದಿದೆ.

SUPPORT THE FILE

Latest News

Related Posts