ಮದ್ಯ ಮಾರಾಟ ; ಸಿದ್ದರಾಮಯ್ಯ ಅವಧಿಯಲ್ಲಿ 11.44 ಕೋಟಿ ತೆರಿಗೆ ನಷ್ಟ

ಬೆಂಗಳೂರು; ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ಮದ್ಯ ಮಾರಾಟದ ಮೇಲಿನ ತೆರಿಗೆಯನ್ನು ಕಡಿಮೆ ಪ್ರಮಾಣದಲ್ಲಿ ವಿಧಿಸಿದ್ದ ಪರಿಣಾಮ ಬೊಕ್ಕಸಕ್ಕೆ 11.44 ಕೋಟಿ ನಷ್ಟವುಂಟಾಗಿತ್ತು. ಶೇ.5.5 ದರದಲ್ಲಿ ಪಾವತಿಸಬೇಕಿದ್ದ ತೆರಿಗೆ ಮೊತ್ತದ ಪೈಕಿ ಅತ್ಯಂತ ಕನಿಷ್ಠ ಮೊತ್ತ ಮಾತ್ರ ಪಾವತಿಯಾಗಿತ್ತು ಎಂಬ ಮಾಹಿತಿಯನ್ನು ಸಿಎಜಿ ವರದಿ ಹೊರಗೆಡವಿದೆ.

ಆರ್ಥಿಕ ಮತ್ತು ರಾಜಸ್ವ ವಲಯಗಳಿಗೆ ಸಂಬಂಧಿಸಿದಂತೆ ಮಾರ್ಚ್‌ 2019 ಅಂತ್ಯಕ್ಕೆ ಸಿಎಜಿ ನೀಡಿರುವ ವರದಿಯು 2014ರಿಂದ 2017ರ ನಡುವಿನ ಮದ್ಯ ಮಾರಾಟದ ವಹಿವಾಟು ಮತ್ತು ಕಡಿಮೆ ಪ್ರಮಾಣದಲ್ಲಿ ವಸೂಲಿ ಆಗಿರುವ ತೆರಿಗೆ ವಿವರಗಳನ್ನು ಅನಾವರಣಗೊಳಿಸಿದೆ.

2014ರ ಮಾರ್ಚ್‌ನಿಂದ 2017ರವರೆಗೆ 233.25 ಕೋಟಿ ಮೊತ್ತದಲ್ಲಿ ಮದ್ಯ ಮಾರಾಟ ವಹಿವಾಟು ನಡೆದಿತ್ತು. ಈ ಮೊತ್ತಕ್ಕೆ ಶೇ.5.5 ದರದಲ್ಲಿ ಒಟ್ಟು 12.83 ಕೋಟಿ ರು.ತೆರಿಗೆ ಪಾವತಿಸಬೇಕಿತ್ತು. ಆದರೆ ಕೇವಲ 1.39 ಕೋಟಿ ಮಾತ್ರ ಪಾವತಿಯಾಗಿತ್ತು. ಇದು ಒಟ್ಟು ಮೊತ್ತಕ್ಕೆ ಅತ್ಯಂತ ಕನಿಷ್ಠ ಮೊತ್ತ ಎಂದು ಸಿಎಜಿ ವರದಿ ಹೇಳಿದೆ.

ಮದ್ಯ ಮಾರಾಟದ ಮೇಲಿನ ತೆರಿಗೆ ವಿನಾಯಿತಿಯನ್ನು 2014ರಲ್ಲೇ ತೆಗೆದು ಹಾಕಿತ್ತು. ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯದ ಮಾರಾಟಕ್ಕಾಗಿ ಅಬಕಾರಿ ಇಲಾಖೆಯು ಸಿಎಲ್‌-9 ಪರವಾನಿಗೆಗಳನ್ನು ಹೊಂದಿರುವವರಿಂದ ಬಿಬಿಎಂಪಿ, ಮಹಾನಗರಪಾಲಿಕೆ, ನಗರ ಸಭೆ ಮತ್ತು ಪಟ್ಟಣ ಪಂಚಾಯ್ತಿ ಆಡಳಿತ ವ್ಯಾಪ್ತಿಯಲ್ಲಿನ ಪ್ರದೇಶಗಳಲ್ಲಿ ಇರುವ ಬಾರ್‌ ರೆಸ್ಟೋರೆಂಟ್‌ಗಳು ಮಾಡುವ ಮಾರಾಟದ ಮೇಲೆ ಶೇ.5.5 ದರದಲ್ಲಿ ತೆರಿಗೆ ವಿಧಿಸಿ 2014ರ ಮಾರ್ಚ್‌ 1ರಂದು ಆದೇಶ ಹೊರಡಿಸಿತ್ತು. ಆದರೆ ಈ ಆದೇಶದ ಪ್ರಕಾರ ಅಬಕಾರಿ ಇಲಾಖೆ ತೆರಿಗೆಯನ್ನು ವಸೂಲಿ ಮಾಡಿರಲಿಲ್ಲ ಎಂಬುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

ಬಳ್ಳಾರಿ, ಬೆಳಗಾವಿ, ಬೆಂಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಹಾಸನ, ಕಲಬುರಗಿ, ಮೈಸೂರು, ರಾಯಚೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಮದ್ಯ ಮಾರಾಟ ಪರವಾನಿಗೆ ಹೊಂದಿದ್ದ ವರ್ತಕರಿಂದ ಕರ್ನಾಟಕ ಮೌವತೆ ಅಧಿನಿಯಮ 2003ರ ಪರಿಚ್ಛೇಧ 72(2)ರ 36ರ ಅಡಿಯಲ್ಲಿ 1.14 ಕೋಟಿ ಮತ್ತು 4.57 ಕೋಟಿಯನ್ನೂ ದಂಡವನ್ನೂ ವಿಧಿಸಿಲ್ಲ. ಅಲ್ಲದೆ ದಂಡ ಮತ್ತು ಬಡ್ಡಿಯೂ ಸೇರಿದಂತೆ ಪಾವತಿಸದಿದ್ದಂತಹ ಒಟ್ಟಾರೆ ತೆರಿಗೆಯು 17.16 ಕೋಟಿ ಬಾಕಿ ಇದ್ದರೂ ವಸೂಲು ಮಾಡಲು ಕ್ರಮ ಕೈಗೊಂಡಿರಲಿಲ್ಲ. ಹಾಗೆಯೇ ತೆರಿಗೆ ಪಾವತಿಸುತ್ತಿದ್ದಾರೆಯೇ ಎಂಬುದನ್ನೂ ಅಧಿಕಾರಿಗಳು ಖಚಿತಪಡಿಸಿಕೊಂಡಿರಲಿಲ್ಲ ಎಂದು ಸಿಎಜಿ ವರದಿ ವಿವರಿಸಿದೆ.

ಇಂತಹ ಪ್ರಕರಣಗಳ ಗಮನಕ್ಕೆ ಬಂದ ನಂತರ ಅಂದರೆ 2019ರ ಜನವರಿಯಿಂದ ಜೂನ್‌ ಮಧ್ಯೆ ಕೇವಲ 3 ಪ್ರಕರಣಗಳಲ್ಲಿ ಕೇವಲ 19.24 ಲಕ್ಷವನ್ನು ವಸೂಲು ಮಾಡಲಾಗಿದೆ. 4.94 ಕೋಟಿ ಮೊತ್ತವೂ ಒಳಗೊಂಡಂತೆ 25 ಪ್ರಕರಣಗಳಲ್ಲಿ ಪುನರ್‌ ಕರ ನಿರ್ಧಾರಣೆ ಆದೇಶಗಳನ್ನು ಹೊರಡಿಸಲಾಗಿತ್ತು.

9 ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲು ವಾಣಿಜ್ಯ ತೆರಿಗೆ ಇಲಾಖೆಗೆ ಸೂಚಿಸಲಾಗಿತ್ತಾದರೂ 18.62 ಲಕ್ಷ ಮೊತ್ತದಷ್ಟು ದಂಡ ಮತ್ತು ಬಡ್ಡಿಯನ್ನೂ ಮಾಡಲಾಗಿತ್ತು. ಹೀಗಾಗಿ ಇಲಾಖೆಯು ಇತರೆ ಜಿಲ್ಲೆಗಳಲ್ಲಿಯೂ ಅಂತಹ ಎಲ್ಲಾ ಪ್ರಕರಣಗಳನ್ನೂ ಸಮೀಕ್ಷಿಸಬೇಕು ಹಾಘೂ ಎಲ್ಲೆಲ್ಲಿ ಅಂತಹ ತೆರಿಗೆ ಪಾವತಿಸಿರುವುದಿಲ್ಲವೋ ಅಂತಹ ಕಡೆಗಳಲ್ಲಿ ತೆರಿಗೆ ಪಾವತಿಗಾಗಿ ತಗಾದೆ ಸೃಷ್ಟಿಸಬೇಕು ಎಂದು ಸಿಎಜಿ ಶಿಫಾರಸ್ಸು ಮಾಡಿದೆ.

the fil favicon

SUPPORT THE FILE

Latest News

Related Posts