‘ದಿ ಫೈಲ್‌’ ಹೊರಗೆಡವಿದ ಕೋವಿಡ್‌ ಭ್ರಷ್ಟಾಚಾರದ 31 ಮುಖಗಳು

ಬೆಂಗಳೂರು; ಕೊರೊನಾ ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಡ್ರಗ್‌ ಲಾಜಿಸ್ಟಿಕ್‌ ಮತ್ತು ವೇರ್‌ಹೌಸಿಂಗ್‌ ಸೊಸೈಟಿ ಮೂಲಕ ಖರೀದಿಸಿದ್ದ ಔ‍ಷಧ ಸಾಮಗ್ರಿ ಮತ್ತು ವೈದ್ಯಕೀಯ ಸಲಕರಣೆ, ಉಪಕರಣಗಳ ಖರೀದಿಯಲ್ಲಿ ಭಾರೀ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳನ್ನು ಬೆನ್ನೆತ್ತಿದ್ದ ‘ದಿ ಫೈಲ್‌’ ತನಿಖಾ ತಂಡ ಈವರೆವಿಗೆ ಕೋವಿಡ್‌ ಭ್ರಷ್ಟಾಚಾರದ 31 ಮುಖಗಳನ್ನು ಅನಾವರಣಗೊಳಿಸಿದೆ.


ಏಪ್ರಿಲ್‌ 21ರಿಂದ ಜುಲೈ 25 ರವರೆಗೆ ಸರಣಿ ರೂಪದಲ್ಲಿ ಪ್ರಕಟಿಸಿದ್ದ ಒಟ್ಟು 31 ತನಿಖಾ ವರದಿಗಳನ್ನಾಧರಿಸಿಯೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರದ ವಿರುದ್ಧ ಗುಡುಗಿದ್ದರು. ಅಲ್ಲದೆ ‘ದಿ ಫೈಲ್‌’ ವರದಿಯಲ್ಲಿದ್ದ ದಾಖಲೆಗಳನ್ನೇ ಬಿಡುಗಡೆ ಮಾಡಿದ್ದರಲ್ಲದೆ ಇಡೀ ಖರೀದಿ ಪ್ರಕ್ರಿಯೆಗಳನ್ನು ಹೈಕೋರ್ಟ್‌ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದರು.


ಈ ಬೆಳವಣಿಗೆ ನಡುವೆಯೇ ಆಡಳಿತ ಪಕ್ಷವೂ ಅಕ್ರಮಗಳು ನಡೆದಿದೆ ಎಂಬ ಆರೋಪವನ್ನು ತಳ್ಳಿ ಹಾಕಿತ್ತಲ್ಲದೇ ಮತ್ತಿತರೆ ದಾಖಲೆಗಳನ್ನು ಬಿಡುಗಡೆ ಮಾಡಿತ್ತು. ಆದರೆ ಈ ದಾಖಲೆಗಳ ನೈಜತೆ ಕುರಿತು ಅನುಮಾನಗಳನ್ನು ಬೆನ್ನೆತ್ತಿದ್ದ ದಿ ಫೈಲ್‌ ತನಿಖಾ ತಂಡ ಮತ್ತಷ್ಟು ದಾಖಲೆಗಳನ್ನಾಧರಿಸಿ ವರದಿ ಪ್ರಕಟಿಸಿತ್ತು.


ಸಾರ್ವಜನಿಕ ಲೆಕ್ಕಪತ್ರ ಸಮಿತಿಯೂ ತನಿಖೆಗೆ ಕೈಗೆತ್ತಿಕೊಂಡಿದೆ. ನಮ್ಮ ವರದಿಗಳನ್ನು ಉಲ್ಲೇಖಿಸಿ ಕರ್ನಾಟಕ ರಾಷ್ಟ್ರಸಮಿತಿಯೂ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದೂರನ್ನೂ ದಾಖಲಿಸಿದೆ. ದೂರನ್ನು ಸ್ವೀಕರಿಸಿದೆಯಲ್ಲದೆ ಭ್ರಷ್ಟಾಚಾರ ನಿಗ್ರಹ ತಡೆ ಕಾಯ್ದೆಯಡಿಯಲ್ಲಿ ತನಿಖೆ ಕೈಗೊಂಡಿರುವ ಎಸಿಬಿ, ಅಧಿಕಾರಿಗಳ ವಿಚಾರಣೆಗೆ ಪೂರ್ವಾನುಮತಿ ಕೋರಿ ಸರ್ಕಾರಕ್ಕೆ ಪತ್ರವನ್ನೂ ಬರೆದಿದೆ.


ಭ್ರಷ್ಟಾಚಾರದ 31 ಮುಖಗಳ ಸಂಕ್ಷಿಪ್ತ ಮಾಹಿತಿ ಮತ್ತು ಅದರ ಲಿಂಕ್‌ನ್ನು ಇಲ್ಲಿ ಕೊಡಲಾಗಿದೆ.


ಪಿಪಿಇ ಕಿಟ್‌ಗಳ ಗುಣಮಟ್ಟದ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದ ಹೊತ್ತಿನಲ್ಲಿಯೂ ಕರ್ನಾಟಕ ಡ್ರಗ್‌ ಅಂಡ್‌ ಲಾಜಿಸ್ಟಿಕ್‌ ಸಂಸ್ಥೆ ವಿಶ್ವಾಸರ್ಹವಲ್ಲದ ಪಿಪಿಇ ಕಿಟ್‌ಗಳನ್ನು ಖರೀದಿಸಿತ್ತು. ಈ ಸಂಸ್ಥೆ ಖರೀದಿಸಿದ್ದ ಪಿಪಿಇ ಕಿಟ್‌ಗಳನ್ನೇ ರಾಜಸ್ಥಾನ ಸರ್ಕಾರ ಬಳಕೆಗೆ ಯೋಗ್ಯವಲ್ಲವೆಂದು ಹಿಂದಿರುಗಿಸಿತ್ತಲ್ಲದೇ ವಿಶ್ವಾಸರ್ಹವಲ್ಲವೆಂದು ಅವುಗಳನ್ನು ಬಳಕೆಯಿಂದಲೇ ಕೈ ಬಿಟ್ಟಿತ್ತು. ಈ ಕುರಿತು ‘ದಿ ಫೈಲ್‌’ 2020ರ ಏಪ್ರಿಲ್‌ 21ರಂದೇ ವರದಿ ಪ್ರಕಟಿಸಿತ್ತು.


1. ವಿಶ್ವಾಸರ್ಹವಲ್ಲವೆಂದು ರಾಜಸ್ಥಾನ ಕೈ ಬಿಟ್ಟ ಕಿಟ್‌ಗಳನ್ನು ಖರೀದಿಸಿತೇ ? (ಏಪ್ರಿಲ್‌ 21,2020)
https://the-file.in/2020/04/governance/3409/


2. ಇನ್ನು, ವೈದ್ಯಕೀಯ ಸಲಕರಣೆಗಳ ಉತ್ಪಾದಕರಿಂದ ಖರೀದಿಸಬೇಕಿದ್ದ ಡ್ರಗ್‌ ಅಂಡ್‌ ಲಾಜಿಸ್ಟಿಕ್‌ ಸಂಸ್ಥೆ, ಕೃಷಿ ಉತ್ಪನ್ನಗಳ ತಯಾರಿಕೆ ಕಂಪನಿ ಮತ್ತು ವೆಬ್‌ಸೈಟ್‌ ಡಿಸೈನ್‌ ಮಾಡುವ ಕಂಪನಿಯಿಂದ 3 ಕೋಟಿ ರು. ಮೌಲ್ಯದ ಪಿಪಿಇ ಕಿಟ್‌ಗಳನ್ನು ಖರೀದಿಸಿತ್ತು.


ಉತ್ಪಾದಕರಲ್ಲದವರಿಗೆ 3 ಕೋಟಿ ಮೌಲ್ಯದ ಪಿಪಿಇ ಕಿಟ್‌ ಖರೀದಿ ಆದೇಶ (ಏಪ್ರಿಲ್‌ 27,2020)
https://the-file.in/2020/04/governance/3492/


3. ಕರ್ನಾಟಕ ಡ್ರಗ್‌ ಲಾಜಿಸ್ಟಿಕ್‌ ಸಂಸ್ಥೆ ನಿರ್ದಿಷ್ಟ ಐವರು ಸರಬರಾಜುದಾರರಿಂದ 19 ಕೋಟಿ ರು.ಮೊತ್ತದಲ್ಲಿ ಸ್ಯಾನಿಟೈಸರ್‌ ಖರೀದಿಸಿತ್ತು. ಈ ಪ್ರಕರಣದಲ್ಲಿ ಸರ್ಕಾರದ ಬೊಕ್ಕಸಕ್ಕೆ ಅಂದಾಜು 11.89 ಕೋಟಿ ರುಪಾಯಿ ನಷ್ಟವುಂಟಾಗಿದೆ ಎಂದು ಲಭ್ಯವಿರುವ ದಾಖಲೆ ಆಧರಿಸಿ ಮೇ 2,2020ರಂದು ವರದಿ ಪ್ರಕಟಿಸಿತ್ತು.
ಮೂಲ ದರ ಗುತ್ತಿಗೆ ಒಪ್ಪಂದದ ಪ್ರಕಾರ ಸ್ಯಾನಿಟೈಸರ್‌ ಸರಬರಾಜು ಮಾಡದ ಗುತ್ತಿಗೆದಾರ ಕಂಪನಿಗೆ ಅತ್ಯಲ್ಪ ಅವಧಿಯಲ್ಲೇ 250.00 ರು. ದರಕ್ಕೆ ಖರೀದಿ ಆದೇಶ ನೀಡಲಾಗಿತ್ತು.


ಸ್ಯಾನಿಟೈಸರ್‌ ಖರೀದಿಯಲ್ಲಿ ಭಾರೀ ಅಕ್ರಮ; 11 ಕೋಟಿ ನಷ್ಟ ( ಮೇ 2,2020)
https://the-file.in/2020/05/governance/3552/


4. ಕೊರೊನಾ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಸರಬರಾಜಾಗಿರುವ ಬಹುತೇಕ ವೆಂಟಿಲೇಟರ್‌ಗಳ ಮೇಲೆ ಐಎಸ್‌ಒ ಗುಣಮಟ್ಟ ಸೂಚಿಸುವ ಪ್ರಮಾಣ ಪತ್ರ ಮತ್ತು ಸೂಕ್ತ ಪುರಾವೆಗಳೇ ಇಲ್ಲ. ಹಾಗೆಯೇ ಆಸ್ಪತ್ರೆಗಳಲ್ಲಿ ಹಲವು ವರ್ಷಗಳ ಕಾಲ ಬಳಸಿರುವ, ಮುರಿದಿರುವ ಮತ್ತು ಬಳಕೆಗೆ ಯೋಗ್ಯವಲ್ಲದ ವೆಂಟಿಲೇಟರ್‌ಗಳನ್ನು ದಾಸ್ತಾನಿಗೆ ಪಡೆದಿರುವ ಪ್ರಕರಣವನ್ನು ಮೇ 4ರಂದು ಬಹಿರಂಗಪಡಿಸಿತ್ತು.


ರಾಜ್ಯಕ್ಕೆ ಪೂರೈಕೆ ಆಗಿರುವ ವೆಂಟಿಲೇಟರ್‌ಗಳ ಮೇಲೆ ಐಎಸ್‌ಒ, ಸಿಇ, ಎಫ್‌ಡಿಎ, ಉಪಕರಣ ಉತ್ಪಾದನೆ, ಮಾದರಿ ವಿವರಗಳು ಮತ್ತು ಇದಕ್ಕೆ ಸಂಬಂಧಿಸಿದಂತೆ ಯಾವ ಪುರಾವೆಗಳೂ ಇಲ್ಲ ಎಂಬುದನ್ನು ದಾಖಲೆಗಳ ಮೂಲಕ ಅಕ್ರಮದ ಇನ್ನೊಂದು ಮುಖವನ್ನು ಅನಾವರಣಗೊಳಿಸಿತ್ತು.


ಬಳಸಿ ಬಿಸಾಡಿದ್ದ ವೆಂಟಿಲೇಟರ್‌ ಖರೀದಿ; ಭ್ರಷ್ಟತೆಯ ಮತ್ತೊಂದು ಮುಖ ಅನಾವರಣ ( ಮೇ 4,2020)
https://the-file.in/2020/05/governance/3566/


5. ಕೇರಳ, ಒಡಿಶಾ ಸೇರಿದಂತೆ ಇನ್ನಿತರೆ ರಾಜ್ಯಗಳ ಆರೋಗ್ಯ ಇಲಾಖೆಗಳು ಕಪ್ಪು ಪಟ್ಟಿಗೆ ಸೇರಿಸಿದ್ದ ಗುಜರಾತ್‌ ಮೂಲದ ಆಕ್ಯುಲೈಫ್‌ ಕಂಪನಿಯಿಂದ ಗ್ಲೂಕೂಸ್‌ ಖರೀದಿ ಮಾಡಿದ್ದನ್ನು ಮೇ 6ರಂದು ಬಹಿರಂಗಗೊಳಿಸಿತ್ತು.


ಕಪ್ಪುಪಟ್ಟಿಯಲ್ಲಿರುವ ಕಂಪನಿಗಳಿಂದ ಗ್ಲೂಕೋಸ್‌ ಖರೀದಿ (ಮೇ 6, 2020)
https://the-file.in/2020/05/governance/3584/


6. ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ್‌ ಕರ್ನಾಟಕದ ಹಿಂದುಳಿದ ತಾಲೂಕುಗಳಲ್ಲಿರುವ ಸಾರ್ವಜನಿಕ ಆಸ್ಪತ್ರೆಗಳಲ್ಲಿದ್ದ ಡಯಾಲಿಸಿಸ್‌ ಯಂತ್ರೋಪಕರಣಗಳನ್ನು ಬಿ ಆರ್‌ ಎಸ್‌ ಹೆಲ್ತ್‌ ಕೇರ್‌ ಕಂಪನಿಗೆ ಕನಿಷ್ಠ ದರಕ್ಕೆ ಮಾರಾಟ ಮಾಡಿತ್ತು. ಈ ಕಂಪನಿ ನೀಡಿದ್ದ ದರವನ್ನೇ ಸಂಸ್ಥೆ ಅನುಮೋದಿಸಿತ್ತು.


ಕುತಂತ್ರ; ಬಿ ಆರ್‌ ಶೆಟ್ಟಿ ಕಂಪನಿ ಪಾಲಾಗಿವೆ ಸರ್ಕಾರಿ ಆಸ್ಪತ್ರೆಗಳ ಡಯಾಲಿಸಿಸ್‌ ಯಂತ್ರ ( ಮೇ 7, 2020)
https://the-file.in/2020/05/governance/3598/


7. ಮದ್ರಾಸ್‌ ಸರ್ಜಿಕಲ್ಸ್‌ ಸೇರಿದಂತೆ ಇನ್ನಿತರೆ ಕಂಪನಿಗಳಿಂದ ದುಬಾರಿ ದರದಲ್ಲಿ ಸಿರಿಂಜ್‌ ಉಪಕರಣ ಸೇರಿದಂತೆ ಮಲ್ಟಿ ಪ್ಯಾರಾ ಮೀಟರ್‌ಗಳನ್ನು ಖರೀದಿಸಿದ್ದ ಕರ್ನಾಟಕ ಡ್ರಗ್‌ ಲಾಜಿಸ್ಟಿಕ್‌ ಸಂಸ್ಥೆ ಅಕ್ರಮ ನಡೆಸಿದ್ದನ್ನು ಮೇ 11ರಂದು ದಾಖಲೆ ಸಮೇತ ಹೊರಗೆಡವಿತ್ತು.


ಸಿರಿಂಜ್‌ ಉಪಕರಣಗಳ ಖರೀದಿಯಲ್ಲೂ ಅಕ್ರಮ; ಕೋಟಿ ರು.ನಷ್ಟ ( ಮೇ 11, 2020)
https://the-file.in/2020/05/governance/3637/


8. ಮೆಡಿ ಅರ್ಥ್‌ ಕೇರ್‌ ಲಿಮಿಟೆಡ್‌ನಿಂದ ಖರೀದಿಸಿದ್ದ ಉಪಕರಣಗಳಲ್ಲಿಯೂ ಸರ್ಕಾರಕ್ಕೆ ನಷ್ಟವುಂಟಾಗಿತ್ತು. ಈ ಕುರಿತಾದ ವರದಿಯನ್ನು ಮೇ 22ರಂದು ಪ್ರಕಟಿಸಿತ್ತು.


ಮಾಸ್ಕ್‌, ಮಲ್ಟಿ ಪ್ಯಾರಾ ಮೀಟರ್‌ ಖರೀದಿಯಲ್ಲೂ ಅಕ್ರಮ; ದರದಲ್ಲಿ ಭಾರೀ ವ್ಯತ್ಯಾಸ ( ಮೇ 22,2020)
https://the-file.in/2020/05/governance/3802/


9. ಕೇವಲ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಷ್ಟೇ ಅಲ್ಲದೇ ಕೋವಿಡ್‌ 19ಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಚಾರಕ್ಕಾಗಿ ಬಾಡಿಗೆ ಆಧಾರದ ಮೇಲೆ ವಾಹನಗಳನ್ನು ಪಡೆದಿದ್ದರಲ್ಲೂ ಅವ್ಯವಹಾರ ಕಂಡು ಬಂದಿತ್ತು. ವಾಹನಗಳನ್ನು ಬಳಸದೇ ಇದ್ದರೂ ವಾಹನ ಮಾಲೀಕರಿಗೆ 5 ಕೋಟಿ ರು.ಹೆಚ್ಚು ದುರುಪಯೋಗವಾಗಿತ್ತು ಎಂಬುದನ್ನು ಹೊರಗೆಡವಿತ್ತು.


ಕೋವಿಡ್‌ ಬಿಲ್ವಿದ್ಯೆ; ವಾಹನ ಬಳಸದಿದ್ದರೂ 5 ಕೋಟಿ ರು. ಪಾವತಿ ( ಮೇ 25,2020)
https://the-file.in/2020/05/governance/3827/


10. ಕೆ ಎನ್‌ 95 ಮಾಸ್ಕ್‌ ಖರೀದಿಸಿದ್ದ ಕರ್ನಾಟಕ ವಿಧಾನಪರಿಷತ್‌ ಸಚಿವಾಲಯವೂ ಅಕ್ರಮದ ದುರ್ನಾತ ಬೀರಿತ್ತು. ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಒಂದೇ ಮಾಸ್ಕ್‌ಗೆ 2 ರೀತಿಯ ದರ ಕೊಟ್ಟು ಖರೀದಿಸುವ ಮೂಲಕ ಅವ್ಯವಹಾರ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಈ ವರದಿ ಮೇ 27ರಂದು ಪ್ರಕಟವಾಗಿತ್ತು.


ಕೆ ಎನ್‌ 95 ಮಾಸ್ಕ್‌ ಖರೀದಿ; ವಿಧಾನಪರಿಷತ್‌ ಸಚಿವಾಲಯದಲ್ಲೂ ದುರ್ನಾತ ( ಮೇ 27,2020)
https://the-file.in/2020/05/governance/3852/


11. ಕೋವಿಡ್‌-19ರ ನಿರ್ವಹಣೆಗಾಗಿ ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ವೈದ್ಯಕೀಯ ಪರಿಕರಗಳ ಖರೀದಿಯಲ್ಲಾಗಿರುವ ಅಕ್ರಮಗಳ ಕುರಿತು ಆಡಳಿತ ಪಕ್ಷದ ಶಾಸಕ ಮುರುಗೇಶ್‌ ನಿರಾಣಿ ಕೂಡ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲೂ ಬಾಯ್ಬಿಟ್ಟಿದ್ದರು. ಅಲ್ಲದೆ ಈ ಸಂಬಂಧ ತಮ್ಮ ಬಳಿ ಪೆನ್‌ ಡ್ರೈವ್‌ ಇರುವುದಾಗಿ ಹೇಳಿಕೆ ನೀಡಿದ್ದ ಅವರು, ಅದರಲ್ಲಿ 125 ಪುಟಗಳ ದಾಖಲೆಗಳೂ ಇವೆ ಎಂಬುದನ್ನು ಸಮಿತಿ ಸಭೆಯಲ್ಲಿ ಹೇಳಿದ್ದನ್ನು ಜೂನ್‌ 3ರಂದು ನಡವಳಿ ಸಮೇತ ವರದಿ ಮಾಡಿತ್ತು.

 

ಕೋವಿಡ್‌ ಭ್ರಷ್ಟಾಚಾರ; ಪೆನ್‌ ಡ್ರೈವ್‌ನಲ್ಲಿ ದಾಖಲೆ ಒದಗಿಸಿದ ಶಾಸಕ ಮುರುಗೇಶ್‌ ನಿರಾಣಿ


https://the-file.in/2020/06/governance/3954/


12. ಕೋವಿಡ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಯಾಗಿದ್ದ ಅವಧಿಯಲ್ಲಿ ಕಾರ್ಮಿಕ ಇಲಾಖೆ ಖರ್ಚು ಮಾಡಿದ್ದ 800 ಕೋಟಿ ರು.ಗಳ ವಿವರವನ್ನು ಬಾಬ್ತುವಾರು  ಜೂನ್‌ 16ರಂದು ವರದಿ ಪ್ರಕಟಿಸಿತ್ತು.

 

ಆಹಾರ ಪ್ಯಾಕೇಟ್‌,  ಕಿಟ್‌ಗೆ 69.90 ಕೋಟಿ, 739ಕೋಟಿ ರು ಪರಿಹಾರ; ಹುಬ್ಬೇರಿಸಿದೆ  ಖರ್ಚಿನ ಲೆಕ್ಕ
https://the-file.in/2020/06/governance/4063/


13. ಸ್ಪೀಕರ್‌ ಕಾಗೇರಿ ಪ್ರತಿನಿಧಿಸುವ ಶಿರಸಿ ಕ್ಷೇತ್ರದ ತೋಟಗಾರ್ಸ್‌ ಸೊಸೈಟಿಯು ವಲಸಿಗ ಕಾರ್ಮಿಕರಿಗೆ ಆಹಾರ ಧಾನ್ಯ ಕಿಟ್‌ ಒದಗಿಸಿದ್ದರೂ ದರದ ಮಾಹಿತಿಯನ್ನು ಒದಗಿಸಿರಲಿಲ್ಲ ಎಂಬುದದನ್ನು ಜೂನ್‌ 17ರಂದು ದಾಖಲೆ ಸಮೇತ ಹೊರಗೆಡವಿತ್ತು.

 

ತೋಟಗಾರ್ಸ್‌ ಸೊಸೈಟಿಯಿಂದಲೂ  ಆಹಾರ ಧಾನ್ಯ ಕಿಟ್‌ ಖರೀದಿ;ದರದ ಮಾಹಿತಿ ಒದಗಿಸದ  ಇಲಾಖೆ?


https://the-file.in/2020/06/governance/4071/


14. ಎಸ್‌ ಎಂ ಫಾರ್ಮಾಸ್ಯುಟಿಕಲ್ಸ್‌ ಕಂಪನಿ ದುಪ್ಪಟ್ಟು ದರದಲ್ಲಿ ಸರಬರಾಜು ಮಾಡಿದ್ದ ಸ್ಯಾನಿಟೈಸರ್‌ ಗುಣಮಟ್ಟದಿಂದ ಕೂಡಿರಲಿಲ್ಲವೆಂದು ಔಷಧ ನಿಯಂತ್ರಣ ಪ್ರಾಧಿಕಾರ ವರದಿ ನೀಡಿದ್ದನ್ನು ದಾಖಲೆ ಸಮೇತ ಜೂನ್‌ 20ರಂದು ಬಹಿರಂಗಗೊಳಿಸಿತ್ತು.

 

ರಾಮನಗರ,ಕಲ್ಬುರ್ಗಿಗೆ ಕಳಪೆ ಸ್ಯಾನಿಟೈಸರ್‌ ಪೂರೈಕೆ; ಔಷಧ ನಿಯಂತ್ರಣ ಪ್ರಾಧಿಕಾರ ವರದಿ


https://the-file.in/2020/06/governance/4097/


15. ವೈದ್ಯಕೀಯ ಶಿಕ್ಷಣ ಇಲಾಖೆಯು ತಜ್ಞರ ಶಿಫಾರಸ್ಸಿಲ್ಲದೆಯೇ ಪಿಪಿಇ ಕಿಟ್‌,ಮಾಸ್ಕ್‌ ಸೇರಿದಂತೆ ಇನ್ನಿತರೆ ಉಪಕರಣಗಳನ್ನು ಖರೀದಿಸಿತ್ತು. ಅಲ್ಲದೆ ಅಂದಾಜು ವೆಚ್ಚವನ್ನು 815 ಕೋಟಿ ರು.ಗೆ ಏರಿಕೆ ಮಾಡಿದ್ದರೂ ಅದಕ್ಕೆ ಸೂಕ್ತ ಸಮರ್ಥನೆಯನ್ನು ನೀಡಿರಲಿಲ್ಲ ಎಂಬುದನ್ನು ಟಿಪ್ಪಣಿ ಹಾಳೆ ಸಮೇತ ಜೂನ್ 24ರಂದು ಬಯಲು ಮಾಡಿತ್ತು.

 

ತಜ್ಞರ ಶಿಫಾರಸ್ಸಿಲ್ಲದೆ ಪಿಪಿಇ ಕಿಟ್‌, ಮಾಸ್ಕ್‌, ಉಪಕರಣ ಖರೀದಿ;  815  ಕೋಟಿ ರು  ಏರಿಕೆ ಗುಟ್ಟೇನು?


https://the-file.in/2020/06/governance/4127/


16. ಲಾಕ್‌ಡೌನ್ ಜಾರಿಯಲ್ಲಿದ್ದ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಆರೋಗ್ಯ ಇಲಾಖೆಯು 3,322 ಕೋಟಿ ರು.ಗಳನ್ನು ಖರ್ಚು ಮಾಡಿದ್ದರೂ ವೆಚ್ಚದ ವಿವರಗಳನ್ನು ಕರ್ನಾಟಕ ಪ್ರಗತಿ ಪರಿಶೀಲನಾ ಸಭೆಗೆ ಒದಗಿಸಿರಲಿಲ್ಲ ಎಂಬುದನ್ನು ಜೂನ್‌ 27ರಂದು ವರದಿ ಮಾಡಿತ್ತು.

 

3,322 ಕೋಟಿ  ಖರ್ಚು  ಮಾಡಿದ ಆರೋಗ್ಯ ಇಲಾಖೆ  ಬಳಿ ವೆಚ್ಚದ ವಿವರಗಳೇ  ಇಲ್ಲ


https://the-file.in/2020/06/governance/


17. ಆರೋಗ್ಯ ಇಲಾಖೆ ಮಾತ್ರವಲ್ಲದೆ ಸಮಾಜ ಕಲ್ಯಾಣ ಇಲಾಖೆಯೂ ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ಯಾನಿಂಗ್‌ ಉಪಕರಣಗಳನ್ನು ದುಬಾರಿ ದರದಲ್ಲಿ ಖರೀದಿಸಿದ್ದನ್ನು ಜುಲೈ 2 ರಂದು ವರದಿ ಪ್ರಕಟಿಸಿತ್ತು.

 

ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ಯಾನಿಂಗ್ ಖರೀದಿಯಲ್ಲಿ ಅವ್ಯವಹಾರ; ಕಾರಜೋಳರ ಸ್ವಂತ ಕಲ್ಯಾಣ!


https://the-file.in/2020/07/governance/4219/


18. ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ ಭಾಗವಹಿಸಿದ್ದ ಮುರುಗೇಶ್‌ ನಿರಾಣಿ ಅವರು ಪೆನ್‌ ಡ್ರೈವ್‌ ಒದಗಿಸದೇ ಪಲಾಯನಗೈದಿದ್ದರು. ಈ ಸಂಬಂಧ ಜುಲೈ 6ರಂದು ನಡವಳಿ ಸಮೇತ ವರದಿಯನ್ನು ಪ್ರಕಟಿಸಿತ್ತು.

 

ಕೋವಿಡ್‌ ಭ್ರಷ್ಟಾಚಾರ; ನಿರಾಣಿ ಪೆನ್‌ ಡ್ರೈವ್‌ನಲ್ಲಿನ 125 ಪುಟಗಳ ದಾಖಲೆಗಳೇನಾದವು?


https://the-file.in/2020/07/governance/4252/


19. ಮಾಸ್ಕ್‌ ಖರೀದಿಯಲ್ಲಿ ವಿಧಾನಪರಿಷತ್‌ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ಶಾಮೀಲಾಗಿದ್ದಾರೆ ಎಂಬ ಕುರಿತು ದಾಖಲೆ ಸಮೇತ ಜುಲೈ 6 ರಂದು ಬಯಲು ಮಾಡಿತ್ತು.

 

ಮಾಸ್ಕ್‌ ಖರೀದಿ; ವಿಧಾನಪರಿಷತ್‌ ಸಚಿವಾಲಯದ  ಉನ್ನತ ಅಧಿಕಾರಿಗೆ ಖಾಸಗಿ ಆಸ್ಪತ್ರೆ ನಂಟು?


20. ಕೋವಿಡ್‌ ಭ್ರಷ್ಟಾಚಾರದ ಬಗ್ಗೆ 125 ಪುಟಗಳ ದಾಖಲೆ ನೀಡದೇ ಮುರುಗೇಶ್‌ ನಿರಾಣಿ ಅವರು ಪಲಾಯನಗೈದಿದ್ದರ ಕುರಿತು ಜುಲೈ 9ರಂದು ವರದಿ ಮಾಡಿತ್ತು.

ಕೋವಿಡ್‌ ಭ್ರಷ್ಟಾಚಾರ; ಪೆನ್‌ ಡ್ರೈವ್‌ ದಾಖಲೆ ನೀಡದೇ ಪಲಾಯನಗೈದ ನಿರಾಣಿ?


https://the-file.in/2020/07/governance/4292/


21. ಶಾಸಕರ ಭವನದ ಕೊಠಡಿಗಳಿಗೆ ಮತ್ತು ವಿಧಾನಸಭೆ ಸಚಿವಾಲಯದ ಅಧೀನದಲ್ಲಿರುವ ಕೊಠಡಿಗಳಿಗೆ ಸ್ಯಾನಿಟೈಸೇಷನ್‌ ಮಾಡಲು 11.76 ಕೋಟಿ ರು. ಮೊತ್ತಕ್ಕೆ ಗುತ್ತಿಗೆ ನೀಡಿದ್ದನ್ನು ಜುಲೈ 10ರಂದು ಹೊರಗೆಡವಿತ್ತು.

 

ಶಾಸಕರ ಭವನದ ಕೊಠಡಿಗಳಿಗೆ  ಸ್ಯಾನಿಟೈಸೇಷನ್‌; ವರ್ಷಕ್ಕೆ 11.76 ಕೋಟಿ ಅಂದಾಜು ವೆಚ್ಚ?

 

22. ಕೋವಿಡ್‌ ಭ್ರಷ್ಟಾಚಾರದ ಕುರಿತು ದನಿ ಎತ್ತಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ವೈದ್ಯಕೀಯ ಉಪಕರಣಗಳ ಖರೀದಿ ಸಂಬಂಧ ಸರ್ಕಾರ ಒದಗಿಸಿದ್ದ ಮಾಹಿತಿಯಲ್ಲಿ ಕಂಪನಿಗಳ ವಿವರವೇ ಇರಲಿಲ್ಲ ಎಂಬುದನ್ನು ಜುಲೈ 11ರಂದು ಬಯಲು ಮಾಡಿತ್ತು.

 

ಕೋವಿಡ್‌ ಭ್ರಷ್ಟಾಚಾರ; ಸಿದ್ದರಾಮಯ್ಯಗೆ ಒದಗಿಸಿರುವ ಮಾಹಿತಿಯಲ್ಲಿ ಕಂಪನಿಗಳ  ವಿವರವೇ ಇಲ್ಲ


https://the-file.in/2020/07/governance/4307/


23. ಬಳ್ಳಾರಿಯಲ್ಲಿರುವ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯು ದುಬಾರಿ ದರದಲ್ಲಿ ಪಿಪಿಇ ಕಿಟ್‌ ಖರೀದಿಸಿತ್ತು ಎಂಬುದನ್ನು ಜುಲೈ 13ರಂದು ಬಹಿರಂಗಗೊಳಿಸಿತ್ತು.

 

ಪಿಪಿಇ ಕಿಟ್‌ಗೆ  ದುಪ್ಪಟ್ಟು ದರ; ಬಳ್ಳಾರಿ ವಿಮ್ಸ್‌ನಲ್ಲೂ ಭ್ರಷ್ಟಾಚಾರ?


https://the-file.in/2020/07/governance/4317/


24. ಕೋವಿಡ್‌-19 ರ ಹಿನ್ನೆಲೆಯಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿಗೆ ಜಿಲ್ಲಾ ವಿಪತ್ತು ನಿಧಿಯನ್ನು ಬಳಸಿಕೊಂಡಿದ್ದ ಜಿಲ್ಲಾಡಳಿತಗಳು ಅದರ ಮಾಹಿತಿಯನ್ನು ಮುಚ್ಚಿಡುತ್ತಿವೆ ಎಂದು ಜುಲೈ 14ರಂದು ವರದಿ ಮಾಡಿತ್ತು.

 

ಕೋವಿಡ್‌ ಭ್ರಷ್ಟಾಚಾರ; ಪೆನ್‌ ಡ್ರೈವ್‌ ಬೆನ್ನಲ್ಲೇ  ಹೊರಬಿತ್ತು ಜಿಲ್ಲಾ  ವಿಪತ್ತು ನಿಧಿಯಲ್ಲಿನ ಅಕ್ರಮ


https://the-file.in/2020/07/governance/4334/

 


25. ವೈದ್ಯಕೀಯ ಶಿಕ್ಷಣ ಇಲಾಖೆಯು ಕೋವಿಡ್‌-19ರ ನಿರ್ವಹಣೆ ಹೆಸರಿನಲ್ಲಿ ಮಾರ್ಚ್‌, ಏಪ್ರಿಲ್‌ನಲ್ಲಿ ಮಾಡಿದ್ದ 33.00 ಕೋಟಿ ರು.ಗಳ ಮೊತ್ತಕ್ಕೆ ತರಾತುರಿಯಲ್ಲಿ ಸಂಪುಟದ ಅನುಮೋದನೆ ಪಡೆಯಲು ಹೊರಟಿದ್ದನ್ನು ಜುಲೈ 15ರಂದು ಮುನ್ನೆಲೆಗೆ ತಂದಿತ್ತು.

 

ಕೋವಿಡ್‌-19; 33.00 ಕೋಟಿ  ಮೊತ್ತದ ಪ್ರಸ್ತಾವನೆಗೆ ಘಟನೋತ್ತರ ಅನುಮೋದನೆಯ ತರಾತುರಿ


https://the-file.in/2020/07/governance/4346/


26. ವೆಂಟಿಲೇಟರ್‌ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದ್ದರ ಕುರಿತು ಬೆನ್ನೆತ್ತಿದ್ದ ‘ದಿ ಫೈಲ್‌’ ತನಿಖಾ ತಂಡ ತಮಿಳುನಾಡು ಸರ್ಕಾರ ಖರೀದಿಸಿದ್ದ ದರಕ್ಕೂ ಕರ್ನಾಟಕ ಸರ್ಕಾರ ಖರೀದಿಸಿದ್ದ ದರದಲ್ಲಿನ ವ್ಯತ್ಯಾಸವನ್ನು ಜುಲೈ 16ರಂದು ಹೊರಗೆಡವಿತ್ತು. 

ವೆಂಟಿಲೇಟರ್‌ ಖರೀದಿಯಲ್ಲಿ ಭಾರೀ  ಅಕ್ರಮ; ತಮಿಳುನಾಡಿನಲ್ಲಿ 4.78ಲಕ್ಷ,  ಕರ್ನಾಟಕದಲ್ಲಿ 18 ಲಕ್ಷ

 

ವೆಂಟಿಲೇಟರ್‌ ಖರೀದಿಯಲ್ಲಿ ಭಾರೀ ಅಕ್ರಮ; ತಮಿಳುನಾಡಿನಲ್ಲಿ 4.78 ಲಕ್ಷ, ಕರ್ನಾಟಕದಲ್ಲಿ 18 ಲಕ್ಷ

 


27. ಚೀನಾದ ಬಿವೈಡಿ ಕಂಪನಿಯಿಂದ ಮಾಸ್ಕ್‌ ಖರೀದಿಸಿದ್ದರೂ ಕಂಪನಿಯ ಹೆಸರನ್ನು ಮುಚ್ಚಿಟ್ಟಿದ್ದರ ಬಗ್ಗೆ ಜುಲೈ 20ರಂದು ವರದಿ ಮಾಡಿತ್ತು.

ಚೀನಾದ ಬಿವೈಡಿ ಕಂಪನಿಯಿಂದ ಮಾಸ್ಕ್‌  ಖರೀದಿ ಮಾಹಿತಿ ಮುಚ್ಚಿಟ್ಟ ಆರೋಗ್ಯ ಇಲಾಖೆ


https://the-file.in/2020/07/governance/4388/


28. ಕೋವಿಡ್‌-19ರ ಹೆಸರಿನಲ್ಲಿ ಖರೀದಿಸಿದ್ದ ವೈದ್ಯಕೀಯ ಪರಿಕರಗಳಿಗೆ ಸಂಬಂಧಿಸಿದಂತೆ ಸರ್ಕಾರ ಬಿಡುಗಡೆಗೊಳಿಸಿದ್ದ ಅಂಕಿ ಅಂಶಗಳಲ್ಲಿನ ವ್ಯತ್ಯಾಸವನ್ನೂ ಜುಲೈ 20ರಂದು ಸಾಕ್ಷ್ಯಾಧಾರಗಳ ಸಮೇತ ಬಹಿರಂಗಗೊಳಿಸಿತ್ತು.

ಕೋವಿಡ್‌ ಭ್ರಷ್ಟಾಚಾರ; ಬಿಡುಗಡೆ ಮಾಡಿದ ಅಂಕಿ ಅಂಶಗಳಲ್ಲಿ ರಾಮ,  ಕೃಷ್ಣನ ಲೆಕ್ಕವೆಷ್ಟು? 


https://the-file.in/2020/07/governance/4393/


29. ಕಳಪೆ ವೆಂಟಿಲೇಟರ್‌ ಖರೀದಿ ಕುರಿತು ಬಿಜೆಪಿ ಮಾಜಿ ಶಾಸಕ ಸಾರ್ವಭೌಮ ಬಗಲಿ ಅವರು ಲೋಕಾಯುಕ್ತಕ್ಕೆ ನೀಡಿದ್ದ ದೂರಿನ ಕುರಿತು ಜುಲೈ 21ರಂದು ವರದಿ ಮಾಡಿತ್ತು.

ಕಳಪೆ ವೆಂಟಿಲೇಟರ್‌ ಖರೀದಿ; ಬಿಜೆಪಿ ಮಾಜಿ ಶಾಸಕರ ದೂರಿನ ಮೇಲೆ ವಿವರಣೆ ಕೇಳಿದ  ಲೋಕಾಯುಕ್ತ


https://the-file.in/2020/07/acb-lokayukta/4398/


30. ಕೋವಿಡ್‌-19ನಿಂದ ಬಳಲುತ್ತಿದ್ದ ಮಕ್ಕಳಿಗೆ ಆಮ್ಲಜನಕ ಪೂರೈಸುವ ಸಾಧನವನ್ನು ಕೇರಳ ಸರ್ಕಾರ ಖರೀದಿಸಿದ್ದ ದರಕ್ಕಿಂತಲೂ ದುಪ್ಪಟ್ಟು ದರ ನೀಡಿ ಖರೀದಿಸಿದ್ದನ್ನು ಜುಲೈ 22ರಂದು ಬಯಲು ಮಾಡಿತ್ತು.

ಆಕ್ಸಿಜನ್‌ ಉಪಕರಣಕ್ಕೂ ದುಪ್ಪಟ್ಟು ದರ; ಕೇರಳದಲ್ಲಿ 2.86 ಲಕ್ಷ, ಕರ್ನಾಟಕದಲ್ಲಿ 4.26 ಲಕ್ಷ


https://the-file.in/2020/07/governance/4404/


31. ಅನುಭವವಿಲ್ಲದ ಆಂಧ್ರ ಕಂಪನಿಯಿಂದ 4.02 ಕೋಟಿ ರು.ಗೆ ಸ್ಯಾನಿಟೈಸರ್‌ ಖರೀದಿಸಿದ್ದನ್ನು ಜುಲೈ 24ರಂದು ದಾಖಲೆ ಸಮೇತ ವರದಿ ಮಾಡಿತ್ತು.

ಅನುಭವವಿಲ್ಲದ ಆಂಧ್ರ ಕಂಪನಿಯಿಂದ 4.02 ಕೋಟಿಗೆ ಸ್ಯಾನಿಟೈಸರ್‌ ಖರೀದಿ; ಪ್ರಭಾವಿ ಸಚಿವರ  ನಂಟು?


https://the-file.in/2020/07/governance/4430/

SUPPORT THE FILE

Latest News

Related Posts