ಕರೊನಾ ಪರಿಣಾಮ; ಪ್ರವಾಸೋದ್ಯಮ, ಆತಿಥ್ಯ ಉದ್ಯಮದಲ್ಲಿ 38 ಮಿಲಿಯನ್‌ ಉದ್ಯೋಗ ನಷ್ಟ!

ಬೆಂಗಳೂರು; ಭಾರತ ಸೇರಿದಂತೆ ಜಗತ್ತಿನ  ಬಹುತೇಕ ರಾಷ್ಟ್ರಗಳ ಮೇಲೆ  ಅಪ್ಪಳಿಸಿರುವ ಕರೊನಾ ವೈರಸ್‌ ಪ್ರವಾಸೋದ್ಯಮ ಸೇರಿದಂತೆ ದೇಶದ ಪ್ರತಿಯೊಂದು ವಲಯದ ಮೇಲೆ ಗಂಭೀರ ಪರಿಣಾಮ ಬೀರುವ ಜತೆಯಲ್ಲೇ ತೀವ್ರ ಹೊಡೆತವನ್ನೂ ಕೊಟ್ಟಿದೆ. 

 ಪ್ರವಾಸೋದ್ಯಮವೊಂದರಲ್ಲೇ ಒಟ್ಟಾರೆ ₹ 5 ಲಕ್ಷ ಕೋಟಿ ನಷ್ಟಕ್ಕೆ ಕಾರಣವಾಗಿದೆ. ಅಲ್ಲದೆ, ಪ್ರವಾಸೋದ್ಯಮ ಮತ್ತು ಇದರ ಸುತ್ತ ಬದುಕು ಕಟ್ಟಿಕೊಂಡಿದ್ದ  ಸುಮಾರು 4 ರಿಂದ 5 ಕೋಟಿ ಜನರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ. ಅಲ್ಲದೆ, ಮಾರ್ಚ್‌ 2020ರಲ್ಲಿ ದೇಶದ ಹೋಟೆಲ್‌ ಉದ್ಯಮದಲ್ಲಿನ ಉದ್ಯೋಗಗಳು ಶೇ.40ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕುಸಿದಿವೆ.   

ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ ಅಂದಾಜಿನ ಪ್ರಕಾರ, ಅತ್ಯಂತ ಪ್ರಸಿದ್ಧ ಹೋಟೆಲ್‌ಗಳು, ಪ್ರವಾಸೋದ್ಯಮ ವಲಯದಲ್ಲಿ ಕೆಲಸ ಮಾಡುತ್ತಿರುವವರು, ಟ್ರಾವೆಲ್‌ ಏಜೆನ್ಸಿಗಳು ಒಟ್ಟಾರೆ  ಉದ್ಯಮದಲ್ಲಿನ  ಸಂಘಟಿತ ವಲಯದಲ್ಲಿ  ಅಂದಾಜು ಟೂರ್ ಆಪರೇಟರ್‌ಗಳು, ಟ್ರಾವೆಲ್ ಏಜೆನ್ಸಿಗಳು ₹ 1.58 ಲಕ್ಷ ಕೋಟಿ ನಷ್ಟವನ್ನು ಅನುಭವಿಸಲಿದೆ ಎಂದು ವಿವರಿಸಿದೆ.

ಗಣ್ಯರು ಮತ್ತು  ಗಣ್ಯಾತಿಗಣ್ಯರು ಬಂದುಳಿಯುವ ಹೋಟೆಲ್‌ಗಳ ಸಮೂಹ  ₹ 1.10 ಲಕ್ಷ ಕೋಟಿ, ಆನ್‌ಲೈನ್ ಟ್ರಾವೆಲ್ ಏಜೆನ್ಸಿಗಳು, 3 4,312 ಕೋಟಿ, ಟೂರ್ ಆಪರೇಟರ್‌ಗಳು (ಒಳಬರುವ ಮತ್ತು ದೇಶೀಯ) ₹ 25,000 ಕೋಟಿ, ಸಾಹಸ ಪ್ರವಾಸ ನಿರ್ವಾಹಕರು ಸುಮಾರು, 19,000 ಕೋಟಿ ಮತ್ತು ಕ್ರೂಸ್ ಪ್ರವಾಸೋದ್ಯಮವೂ ನಷ್ಟದ  ಕೂಪಕ್ಕೆ ಬೀಳಲಿದೆ ಎಂದು ಹೇಳಿದೆ. 

ಪ್ರವಾಸೋದ್ಯಮ ಸಚಿವಾಲಯವು ಇತ್ತೀಚೆಗಷ್ಟೇ  ಸಂಸದೀಯ ಸಮಿತಿಯೊಂದಕ್ಕೆ ನೀಡಿದ್ದ ಮಾಹಿತಿಯಂತೆ ಅಂದಾಜು 5 ಲಕ್ಷ ಕೋಟಿ ರು.  ನಷ್ಟ ಅನುಭವಿಸಿದೆ. ಪ್ರವಾಸ ಮತ್ತು ಆತಿಥ್ಯ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟದ ಅಂದಾಜಿನ ಪ್ರಕಾರ, ನಷ್ಟದ ಒಟ್ಟಾರೆ ಮೌಲ್ಯವು ₹ 5 ಲಕ್ಷ ಕೋಟಿಯಷ್ಟಿದೆ.

ಅಲ್ಲದೆ ಹಣಕಾಸು ಸೇವೆ ಮತ್ತು ವ್ಯವಹಾರ ಸಲಹಾ ಸಂಸ್ಥೆಯಾಗಿರುವ  ಕೆಪಿಎಂಜಿಯ ವರದಿ ಪ್ರಕಾರ ಭಾರತೀಯ ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮ ಅಂದಾಜು  38 ಮಿಲಿಯನ್‌ ಉದ್ಯೋಗ ನಷ್ಟ ಅನುಭವಿಸುತ್ತಿದೆ. ಭಾರತದಲ್ಲಿ ಪ್ರವಾಸ ಮತ್ತು ಪ್ರವಾಸೋದ್ಯಮ  ಕ್ಷೇತ್ರದಲ್ಲಿ  9 ಮಿಲಿಯನ್ ಉದ್ಯೋಗಗಳು  ಕಣ್ಮರೆಯಾಗಲಿದೆ.

ಕೋವಿಡ್‌ 19ರ ಹಿನ್ನೆಲೆಯಲ್ಲಿ  ಉದ್ಭವಿಸಿರುವ  ಈ ಬಿಕ್ಕಟ್ಟುಗಳು ಹೀಗೆಯೇ ಮುಂದುವರೆದರೆ ಇದು ರಾಷ್ಟ್ರೀಯ ಉದ್ಯೋಗಕ್ಕೂ ಕುತ್ತು ತರಲಿದೆ. ಏಕೆಂದರೆ ಪ್ರವಾಸೋದ್ಯಮ ವಲಯವೊಂದರಲ್ಲಿ ಶೇ.12.75ರಷ್ಟು ಉದ್ಯೋಗ ಅವಕಾಶಗಳಿವೆ. ಇದರಲ್ಲಿ ಶೇ.5.56 ನೇರ ಮತ್ತು ಶೆ.7.19ರಷ್ಟು ಪರೋಕ್ಷ ಉದ್ಯೋಗ ಅವಕಾಶಗಳಿವೆ. ಪ್ರವಾಸೋದ್ಯಮ ಸಚಿವಾಲಯದ 2019-20ರ ವಾರ್ಷಿಕ ವರದಿ ಪ್ರಕಾರ 2018-19ರಲ್ಲಿ 87 ದಶಲಕ್ಷಕ್ಕೂ ಹೆಚ್ಚು ಜನರು ಪ್ರವಾಸೋದ್ಯಮದಲ್ಲಿ  ಉದ್ಯೋಗ ಕಂಡುಕೊಂಡಿದ್ದರು. 

‘ಪ್ರವಾಸೋದ್ಯಮ ವಲಯಕ್ಕೆ ಹಿಂದೆಂದೂ ಬೀಳದ ಹೊಡೆತ ಬಿದ್ದಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಭೀಕರ ಬಿಕ್ಕಟ್ಟು. ಅಂತಾರಾಷ್ಟ್ರೀಯ, ದೇಶೀಯ ಪ್ರವಾಸ ಮತ್ತು ಇದಕ್ಕೆ ಪೂರಕವಾಗಿ ನಡೆಯುತ್ತಿದ್ದ ಸಮ್ಮೇಳನ,  ಸಭೆ ಮತ್ತು  ಎಲ್ಲಾ ರೀತಿಯ ಪ್ರದರ್ಶನಗಳ ಮೇಲೆ  ಭಾರೀ  ಪರಿಣಾಮ ಬೀರಿದೆ,’ ಎನ್ನುತ್ತಾರೆ ಪ್ರವಾಸೋದ್ಯಮ ಸಂಸ್ಥೆಯ ಉನ್ಮೇಶ್‌ ವೈದ್ಯ.

ಕೋವಿಡ್‌  ಸಾಂಕ್ರಾಮಿಕ ರೋಗ ವ್ಯಾಪಿಸುವ ಮುನ್ನವೇ ಪ್ರವಾಸೋದ್ಯಮ ಕ್ಷೇತ್ರ  ಹೆಣಗಾಡುತ್ತಿತ್ತು. 2019-20ರ ಆರ್ಥಿಕ ಸಮೀಕ್ಷೆ ಪ್ರಕಾರ ಪ್ರವಾಸೋದ್ಯಮ ಬೆಳವಣಿಗೆ ದೇಶದ ಒಟ್ಟು ದೇಶೀಯ ಉತ್ಪನ್ನಕ್ಕೆ(ಜಿಡಿಪಿ) ಮತ್ತು ವಿದೇಶಿ ವಿನಿಮಯ ಗಳಿಕೆಗೆ ಉಳಿದೆಲ್ಲ ಕ್ಷೇತ್ರಗಳಿಗಿಂತಲೂ ಹೆಚ್ಚಿನ ಕೊಡುಗೆ ನೀಡುತ್ತಿದೆ. 2016-17ರಲ್ಲಿ ಭಾರತದ ಒಟ್ಟು ಜಿಡಿಪಿಯಲ್ಲಿ ಪ್ರವಾಸೋದ್ಯಮದ ಪಾಲು ಶೇ.5.06ರಷ್ಟಿದೆ. 

ದೇಶದ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವವರ ಸಂಖ್ಯೆಗೆ  ಸಂಬಂಧಿಸಿದಂತೆ  2018ರಲ್ಲಿ 1.8 ಬಿಲಿಯನ್‌ ಸಂಖ್ಯೆ ಇತ್ತು. 2017ರಿಂದಲೂ ಶೇ.12ರಷ್ಟು  ಹೆಚ್ಚಾಗಿದೆಯಲ್ಲದೆ,  ಲಾಕ್‌ಡೌನ್‌ನಿಂದಾಗಿ ಇದೀಗ ಸಂಪೂರ್ಣ ಸ್ಥಗಿತಗೊಂಡಂತಾಗಿದೆ. ತಾಜ್‌ಮಹಲ್‌ ವೀಕ್ಷಣೆಯನ್ನು  2018ರ ಮಾರ್ಚ್‌ 17ರಂದು ಸ್ಥಗಿತಗೊಳಿಸಲಾಗಿದೆ. 2018-19ರಲ್ಲಿ ದೇಶೀಯ ಮತ್ತು ವಿದೇಶಿ ಪ್ರವಾಸಿಗರ  ಸಂಖ್ಯೆ 7 ದಶಲಕ್ಷದಷ್ಟಿತ್ತು. 

ಇನ್ನು ಭಾರತದ ರೆಸ್ಟೋರೆಂಟ್‌ ಉದ್ಯಮದ ವಾರ್ಷಿಕ  ವಹಿವಾಟು  4  ಲಕ್ಷ ಕೋಟಿ ರು.  ಇತ್ತು(53  ಬಿಲಿಯನ್‌ ಅಥವಾ  2020-21ರ ಕೇಂದ್ರದ ಆರೋಗ್ಯ ವಲಯದ ಬಜೆಟ್‌ನ 6 ಪಟ್ಟು).  7 ದಶಲಕ್ಷಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗ ಒದಗಿಸಿತ್ತು. ಅಂದರೆ ಜನಸಂಖ್ಯೆಯ 11 ಪಟ್ಟು. ಲಾಕ್‌ಡೌನ್‌ ಘೋಷಣೆಯಾದ ದಿನದಿಂದ ಈ ಉದ್ಯಮ ಶೂನ್ಯ ಆದಾಯದಲ್ಲಿದೆ. ಲಾಕ್‌ಡೌನ್‌ ತೆರವುಗೊಂಡ ನಂತರದ  ಹಲವು ತಿಂಗಳುಗಳವರೆಗೂ ಶೇ.50ರಷ್ಟು ಆದಾಯವೂ ಮರೀಚಿಕೆಯಾಗಿದೆ  ಎಂದು ಕಳವಳ ವ್ಯಕ್ತಪಡಿಸುತ್ತಾರೆ ನ್ಯಾಷನಲ್‌ ರೆಸ್ಟೋರೆಂಟ್‌ ಅಸೋಸಿಯೇಷನ್‌ ಆಫ್‌ ಇಂಡಿಯಾದ ಅನುರಾಗ್‌ ಕಟ್ರಿಯಾರ್‌. 

‘ಲಾಕ್‌ಡೌನ್‌ ತೆರವುಗೊಳಿಸಿದ ನಂತರವೂ ಹೋಟೆಲ್‌ ಮತ್ತು ರೆಸ್ಟೋರೆಂಟ್‌  ಉದ್ಯಮದಲ್ಲಿ ಸುಮಾರು ಶೇ.15ರಷ್ಟು ಉದ್ಯೋಗಗಳ ಮೇಲೆ ಪರಿಣಾಮ ಇದ್ದೇ ಇರುತ್ತೆ.  ಏಕೆಂದರೆ  ಈ ಉದ್ಯಮವು ತಕ್ಷಣದ ಬೇಡಿಕೆಯನ್ನು ಹೆಚ್ಚಿಸುವುದಿಲ್ಲ. ಹೋಟೆಲ್‌ ಉದ್ಯಮದ ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ  ಸುಮಾರು  ಎರಡು ಮಿಲಿಯನ್‌ ಸಂಖ್ಯೆಯಲ್ಲಿ ಅಸಂಘಟಿತ ಕಾರ್ಮಿಕರು ಉದ್ಯೋಗ ಕಂಡುಕೊಂಡಿದ್ದರು,’ ಎಂದು ವಿವರಿಸುತ್ತಾರೆ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಸುಕೇಶ್‌ ಶೆಟ್ಟಿ.

the fil favicon

SUPPORT THE FILE

Latest News

Related Posts