Monday | October 19, 2026 |

ಕಾರ್ಯಾದೇಶ ಪಡೆದರೂ ಕಾಮಗಾರಿ ನಡೆಸದ ಗುತ್ತಿಗೆದಾರರು; ಅಂದಾಜು ವೆಚ್ಚದಲ್ಲಿ ಏರಿಕೆ, ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ

ಬೆಂಗಳೂರು;  ಸರ್ಕಾರದ ವಿವಿಧ ಇಲಾಖೆಗಳು, ಮಂಡಳಿಗಳು, ನಿಗಮಗಳು, ಪ್ರಾಧಿಕಾರಗಳು ಹಾಗೂ ಇತರೆ ಅನುಷ್ಠಾನ ಸಂಸ್ಥೆಗಳ  ಮೂಲಕ ಕಾಮಗಾರಿಗಳಿಗೆ ಕಾರ್ಯಾದೇಶ ಪಡೆದಿರುವ ಬಹುತೇಕ ಗುತ್ತಿಗೆದಾರರು ಕಾಮಗಾರಿಗಳನ್ನೇ ಆರಂಭಿಸುತ್ತಿಲ್ಲ.  ಗುತ್ತಿಗೆದಾರರಿಗೆ ಸಾವಿರಾರು ಕೋಟಿ ರುಪಾಯಿ ಮೊತ್ತವನ್ನು ಪಾವತಿಸದ ಕಾರಣ ಕಾಮಗಾರಿ ನಡೆಸಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿರುವುದು ಇದೀಗ ಬಹಿರಂಗವಾಗಿದೆ.

ಕಾರ್ಯಾದೇಶ ನೀಡಿದ ನಂತರವೂ ಕಾಮಗಾರಿ ಆರಂಭಿಸುವಲ್ಲಿ ತಿಂಗಳುಗಟ್ಟಲೇ ವಿಳಂಬವಾಗುತ್ತಿದೆ. ಹೀಗಾಗಿ ಕಾಮಗಾರಿಗಳ ಅಂದಾಜು ವೆಚ್ಚದಲ್ಲಿಯೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಹೀಗಾಗಿ ಭೌತಿಕ ಕಾಮಗಾರಿಗಳನ್ನು ನಡೆಸಲು ಕಾರ್ಯಾದೇಶ ಪಡೆದಿರುವ ಗುತ್ತಿಗೆದಾರರು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸೂಚಿಸಬೇಕು  ಎಂದು ಖುದ್ದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ 2026ರ ಆಗಸ್ಟ್‌ 29ರಂದೇ  ಸೂಚಿಸಿದ್ದಾರೆ. ಈ ಸೂಚನೆಯ ನಂತರವೂ ಬಹುತೇಕ ಗುತ್ತಿಗೆದಾರರು ಕಾಮಗಾರಿಯನ್ನೇ ಆರಂಭಿಸುತ್ತಿಲ್ಲ ಎಂದು ತಿಳಿದು ಬಂದಿದೆ.

ರಾಜ್ಯದ ಗುತ್ತಿಗೆದಾರರಿಗೆ ಸಾವಿರಾರು ಕೋಟಿ ರುಪಾಯಿನಷ್ಟು ಬಾಕಿ ಮೊತ್ತ ಸಕಾಲದಲ್ಲಿ ಪಾವತಿಯಾಗುತ್ತಿಲ್ಲ. ಅಲ್ಲದೇ ಬಾಕಿ ಮೊತ್ತ ಪಾವತಿಸಲು ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂದು ಕೇಳಿ ಬಂದಿದ್ದ ಆರೋಪಗಳನ್ನು ಆಡಳಿತ ಪಕ್ಷವನ್ನು  ಹಣಿಯಲು ವಿಪಕ್ಷಗಳು ಬಳಸಿಕೊಳ್ಳುತ್ತಲೇ ಇವೆ. ಈ ಬೆಳವಣಿಗೆ ನಡುವೆಯೇ ಇದೀಗ ಖುದ್ದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೇ ಗುತ್ತಿಗೆ ಪಡೆದ ಕಾರ್ಯಾದೇಶ ಪಡೆದರೂ ಸಹ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿರುವುದು ಮುನ್ನೆಲೆಗೆ ಬಂದಿದೆ.

ಮುಖ್ಯಮಂತ್ರಿಯ ಟಿಪ್ಪಣಿಯಲ್ಲೇನಿದೆ?

ಸರ್ಕಾರದ ವಿವಿಧ ಇಲಾಖೆಗಳು, ಮಂಡಳಿಗಳೂ, ನಿಗಮಗಳು, ಪ್ರಾಧಿಕಾರಗಳು ಹಾಗೂ ಇತರೆ ಅನುಷ್ಠಾನ ಸಂಸ್ಥೆಗಳ ಮೂಲಕ ಕೈಗೊಳ್ಳಲಾಗುವ ಭೌತಿಕ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾರ್ಯಾದೇಶ ನೀಡಲಾಗಿದೆ. ಕಾರ್ಯಾದೇಶ ನೀಡಿದ ನಂತರವೂ ಕೆಲವು ಸಂದರ್ಭಗಳಲ್ಲಿ ಶಿಷ್ಟಾಚಾರ ಅನ್ವಯ ಭೂಮಿ ಪೂಜೆ, ಶಂಕು ಸ್ಥಾಪನೆ, ಔಪಚಾರಿಕ ಉದ್ಘಾಟನೆ ಅಥವಾ ಇತರೆ ಕಾರ್ಯಕ್ರಮಗಳನ್ನು ನಡೆಸುವವರೆಗೆ ಕಾಮಗಾರಿಗಳನ್ನು ಪ್ರಾರಂಭಿಸದೇ ವಿಳಂಬ ಆಗುತ್ತಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಟಿಪ್ಪಣಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಕಾರ್ಯದೇಶ ನೀಡಿದ ನಂತರ ಕಾಮಗಾರಿಗಳನ್ನು ಆರಂಭಿಸುವಲ್ಲಿ ವಿಳಂಬ ಅಗುತ್ತಿದೆ. ಇದರಿಂದಾಗಿ ಯೋಜನೆಗಳ ಸಕಾಲಿಕ ಅನುಷ್ಠಾನಕ್ಕೆ ತೊಂದರೆಯಾಗುತ್ತಿದೆ. ವೆಚ್ಚದಲ್ಲಿ ಹೆಚ್ಚಳವಾಗುತ್ತಿದೆ. ಟೆಂಡರ್/ಒಪ್ಪಂದಕ್ಕೆ ಸಂಬಂಧಿಸಿದ ಸಮಸ್ಯೆಗಳು, ಕಾಮಗಾರಿ ಪೂರ್ಣಗೊಳಿಸುವ ಅವಧಿಯ ವಿಸ್ತರಣೆ ಹಾಗೂ ಇತರೆ ಆಡಳಿತಾತ್ಮಕ ಮತ್ತು ಕಾನೂನಾತ್ಮಕ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿರುವುದು  ತಿಳಿದು ಬಂದಿದೆ.

 

 

‘ಸಕಾfರಿ ಕಾಮಗಾರಿಗಳನ್ನು ಸಕಾಲದಲ್ಲಿ ಪ್ರಾರಂಭಿಸಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಎಲ್ಲಾ ಸರ್ಕಾರಿ ಇಲಾಖೆಗಳು ಹಾಗೂ ಅವುಗಳ ಅನುಷ್ಠಾನ ಸಂಸ್ಥೆಗಳು, ಮಂಡಳಿಗಳು, ನಿಗಮಗಳು, ಪ್ರಾಧಿಕಾರಗಳು ಮತ್ತು ಭೌತಿಕ ಕಾಮಗಾರಿಗಳನ್ನು ಕೈಗೊಳ್ಳುವ ಇತರೆ ಸರ್ಕಾರಿ ಸಂಸ್ಥೆಗಳು ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು,’ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮುಖ್ಯ ಕಾರ್ಯದರ್ಶಿಗೆ ಟಿಪ್ಪಣಿ ಹೊರಡಿಸಿರುವುದು ಗೊತ್ತಾಗಿದೆ.

ಸೂಚನೆಗಳೇನು?

ಪ್ರತಿಯೊಂದು ಭೌತಿಕ ಕಾಮಗಾರಿಯನ್ನು ಸಂಬಂಧಪಟ್ಟ ಟೆಂಡರ್, ಒಪ್ಪಂದ ಮತ್ತು ಕಾರ್ಯಾದೇಶದಲ್ಲಿ ನಿಗದಿಪಡಿಸಿರುವ ಅವಧಿಯೊಳಗೆ ಕಡ್ಡಾಯವಾಗಿ ಪ್ರಾರಂಭಿಸಬೇಕು. ಯಾವುದೇ ಸಂದರ್ಭದಲ್ಲಿ ಟೆಂಡರ್, ಒಪ್ಪಂದದಲ್ಲಿ ಇದಕ್ಕಿಂತ ಕಡಿಮೆ ಅವಧಿಯನ್ನು ನಿಗದಿಪಡಿಸದಿದ್ದಲ್ಲಿ ಕಾರ್ಯಾದೇಶ ನೀಡಿದ ದಿನಾಂಕದಿಂದ 30 ದಿನಗಳಿಗಿಂತ ಹೆಚ್ಚಿನ ಅವಧಿವರೆಗೆ ಕಾಮಗಾರಿ ಪ್ರಾರಂಭವನ್ನು ಮುಂದೂಡಬಾರದು ಎಂದು ಸೂಚಿಸಿದೆ.

ಕಾರ್ಯಾದೇಶ ನೀಡುವ ಮೊದಲು, ಕಾಮಗಾರಿ ಆರಂಭಿಸಲು ಅಗತ್ಯವಿರುವ ಸ್ಥಳ, ಭೂಮಿಯ ಲಭ್ಯತೆ, ಅಗತ್ಯ ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆಗಳು, ನಕ್ಷೆ, ವಿನ್ಯಾಸಗಳು, ಅನುದಾನ ಹಾಗೂ ಇತರೆ ಅಗತ್ಯ ಪೂರ್ವಸಿದ್ಧತೆಗಳ್ನನು ಸಂಬಂಧಪಟ್ಟ ಇಲಾಖೆ, ಅನುಷ್ಠಾನ ಸಂಸ್ಥೆಯು ಖಚಿತಪಡಿಸಿಕೊಳ್ಳಬೇಕು. ಕಾರ್ಯಾದೇಶ ನೀಡಿದ ನಂತರ ಕಾಮಗಾರಿಯನ್ನು ಪ್ರಾರಂಭಿಸಲು ಅಗತ್ಯವಿರುವ ಹಾಗೂ ಇತರೆ ಕ್ರಮಗಳನ್ನು ಸಂಬಂಧಪಟ್ಟ ಗುತ್ತಿಗೆದಾರರಿಂದ ನಿಗದಿತ ಅವಧಿಯೊಳಗೆ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು.

 

 

ಕಾರ್ಯಾದೇಶ ನೀಡಿದ ದಿನಾಂಕದಿಂದ 30 ದಿನದೊಳಗೆ ಶಿಷ್ಟಾಚಾರದ ಅನ್ವಯ ಭೂಮಿ ಪೂಜೆ, ಶಂಕುಸ್ಥಾಪನೆ, ಔಪಚಾರಿಕ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗದಿದ್ದಲ್ಲಿ ಅಂತಹ ಕಾರ್ಯಕ್ರಮಕ್ಕಾಗಿ ಕಾಮಗಾರಿಯನ್ನು  ವಿಳಂಬಗೊಳಿಸಬಾರದದು. ಭೌತಿಕವಾಗಿ ಕಾಮಗಾರಿ ಆರಂಭಿಸಬೇಕು ಎಂದು ಸೂಚಿಸಿದ್ದಾರೆ.

‘ಕೇವಲ ಭೂಮಿ ಪೂಜೆ, ಶಂಕುಸ್ಥಾಪನೆ, ಔಪಚಾರಿಕ ಉದ್ಘಾಟನೆ ಅಥವಾ ಇತರೆ ಕಾರ್ಯಕ್ರಮ ನಿಗದಿಯಾಗಿಲ್ಲ ಎಂಬ ಕಾರಣಕ್ಕಾಗಿ ಕಾಮಗಾರಿಯ ಪ್ರಾರಂಭವನ್ನು ವಿಳಂಬಗೊಳಿಸುವುದನ್ನು ಯಾವುದೇ ಸಂದರ್ಭದಲ್ಲಿಯೂ ಸಮರ್ಥನೀಯ ಕಾರಣ ಎಂದು ಪರಿಗಣಿಸಬಾರದು,’ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಎಚ್ಚರಿಸಿರುವುದು ಗೊತ್ತಾಗಿದೆ.

ಈ ಸೂಚನೆಗಳ ಪಾಲಿಸದಿದ್ದಲ್ಲಿ ಮತ್ತು ಯಾವುದೇ ಲೋಪ ಅಥವಾ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟ ಟೆಂಡರ್ ಆಹ್ವಾನಿಸುವ ಪ್ರಾಧಿಕಾರದ ವಿರುದ್ಧವೇ ಶಿಸ್ತು ಕ್ರಮ ಜರುಗಿಸಲಾಗುವುದು ಎಂದೂ ಎಚ್ಚರಿಸಿರುವುದು ತಿಳಿದು ಬಂದಿದೆ.

 

 

ಇದೇ ಟಿಪ್ಪಣಿಯನ್ನಾಧರಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್‌ ಅವರೂ ಇಲಾಖೆಗಳ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ ಪತ್ರವನ್ನೂ ಬರೆದಿದ್ದಾರೆ.

Hot this week

ವಿದ್ಯಾರ್ಥಿ ಸಹಾಯ ಹಸ್ತ ಯೋಜನೆ ಟೆಂಡರ್‍‌ನಲ್ಲಿ ಅಕ್ರಮ ಆರೋಪ; 9 ಕೋಟಿ ಮೊತ್ತದ ಟೆಂಡರ್ ಸಲ್ಲಿಕೆಗೆ 9 ದಿನವಷ್ಟೇ ಕಾಲಾವಕಾಶ ನೀಡಿದ್ದೇಕೆ?

ಬೆಂಗಳೂರು; ಉನ್ನತ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆ ಯೋಜನೆಯಾದ ವಿದ್ಯಾರ್ಥಿ ಸಹಾಯ ಹಸ್ತ...

ಮರಿಮಲ್ಲಪ್ಪ ಶಿಕ್ಷಣ ಸಂಸ್ಥೆಯಿಂದ ನಿಯಮ, ಕಾಯ್ದೆ ಉಲ್ಲಂಘನೆ ಆರೋಪ; ಆಡಳಿತಾಧಿಕಾರಿ ನೇಮಕಕ್ಕೆ ಮುಂದಾದ ಸರ್ಕಾರ, ಇದು ಖಾಸಗಿ ಸಂಸ್ಥೆಯೋ ಸಾರ್ವಜನಿಕ ಸಂಸ್ಥೆಯೋ?

ಬೆಂಗಳೂರು; ಮೈಸೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮರಿಮಲ್ಲಪ್ಪ ವಿದ್ಯಾ ಸಂಸ್ಥೆಯು ಕಾಲೇಜು, ...

ಅಪೆಕ್ಸ್ ಬ್ಯಾಂಕ್‌ನಲ್ಲಿ 1,000 ಕೋಟಿ ಹಗರಣ; ಹೈಕೋರ್ಟ್‌ನಲ್ಲಿ ಪಿಐಎಲ್‌, ಸರ್ಕಾರಕ್ಕೆ ಎದುರಾಗಲಿದೆಯೇ ಸಂಕಷ್ಟ?

ಬೆಂಗಳೂರು; ಕೃಷಿಗೆ ಸಂಬಂಧಿಸದ ಉದ್ದೇಶಗಳಿಗಾಗಿ ಸಾಲ ಮಂಜೂರಾತಿ,  ಈಗಾಗಲೇ ಅನುತ್ಪಾದಕ ಆಸ್ತಿಗಳೆಂದು (Non-Performing...

ರೈಲ್ವೇ- ವಿಮಾನ ಭತ್ಯೆ; 15ನೇ ವಿಧಾನಸಭೆಯ ಶಾಸಕರಿಗೆ 16.32 ಕೋಟಿ ಮರು ಪಾವತಿ

ಬೆಂಗಳೂರು; ಹದಿನೈದನೇ ವಿಧಾಸಭೆ ಅವಧಿಯಲ್ಲಿ ರಾಜ್ಯದ 224 ಶಾಸಕರು  16.32 ಕೋಟಿಯಷ್ಟು...
Please Scan to make Your Contribution

Topics

ಮರಿಮಲ್ಲಪ್ಪ ಶಿಕ್ಷಣ ಸಂಸ್ಥೆಯಿಂದ ನಿಯಮ, ಕಾಯ್ದೆ ಉಲ್ಲಂಘನೆ ಆರೋಪ; ಆಡಳಿತಾಧಿಕಾರಿ ನೇಮಕಕ್ಕೆ ಮುಂದಾದ ಸರ್ಕಾರ, ಇದು ಖಾಸಗಿ ಸಂಸ್ಥೆಯೋ ಸಾರ್ವಜನಿಕ ಸಂಸ್ಥೆಯೋ?

ಬೆಂಗಳೂರು; ಮೈಸೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮರಿಮಲ್ಲಪ್ಪ ವಿದ್ಯಾ ಸಂಸ್ಥೆಯು ಕಾಲೇಜು, ...

ಅಪೆಕ್ಸ್ ಬ್ಯಾಂಕ್‌ನಲ್ಲಿ 1,000 ಕೋಟಿ ಹಗರಣ; ಹೈಕೋರ್ಟ್‌ನಲ್ಲಿ ಪಿಐಎಲ್‌, ಸರ್ಕಾರಕ್ಕೆ ಎದುರಾಗಲಿದೆಯೇ ಸಂಕಷ್ಟ?

ಬೆಂಗಳೂರು; ಕೃಷಿಗೆ ಸಂಬಂಧಿಸದ ಉದ್ದೇಶಗಳಿಗಾಗಿ ಸಾಲ ಮಂಜೂರಾತಿ,  ಈಗಾಗಲೇ ಅನುತ್ಪಾದಕ ಆಸ್ತಿಗಳೆಂದು (Non-Performing...

ರೈಲ್ವೇ- ವಿಮಾನ ಭತ್ಯೆ; 15ನೇ ವಿಧಾನಸಭೆಯ ಶಾಸಕರಿಗೆ 16.32 ಕೋಟಿ ಮರು ಪಾವತಿ

ಬೆಂಗಳೂರು; ಹದಿನೈದನೇ ವಿಧಾಸಭೆ ಅವಧಿಯಲ್ಲಿ ರಾಜ್ಯದ 224 ಶಾಸಕರು  16.32 ಕೋಟಿಯಷ್ಟು...

ಆರ್ಥಿಕ ಸ್ಥಿತಿ ಬಹಿರಂಗಪಡಿಸಿ ಕೋಲಾಹಲ ಎಬ್ಬಿಸಿದ್ದ ಅನಧಿಕೃತ ಟಿಪ್ಪಣಿಯ ಕಡತ ಒದಗಿಸಲು ನಿರಾಕರಿಸಿದ ಸರ್ಕಾರ

ಬೆಂಗಳೂರು; ರಾಜ್ಯ ಸರ್ಕಾರವು ₹2 ಲಕ್ಷ ಕೋಟಿಗೂ ಹೆಚ್ಚಿನ ಕಾಮಗಾರಿಗಳ ಬಾಕಿ...

ಸ್ಟಿಂಗ್ ಆಪರೇಷನ್‌; ಅಸಲು ದಾವೆ ಬೆನ್ನಲ್ಲೇ ಪೊಲೀಸ್‌ ಆಯುಕ್ತರಿಗೂ ದೂರು ಸಲ್ಲಿಸಿ ಯಾವ ಭಯವೂ ನನಗಿಲ್ಲವೆಂದ ಸಿದ್ದರಾಮಯ್ಯ

ಬೆಂಗಳೂರು; ಯೂ ಟ್ಯೂಬ್‌ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು...

21 ಪ್ಯಾಕೇಜ್‌ ಟೆಂಡರ್; ಶೇ. 5 ಪ್ರೀಮಿಯಂ ಮೀರಿದ್ದರೂ ಪರಿಶೀಲನೆ ಸಮಿತಿ ರಚಿಸಲು ಆಕ್ಷೇಪ ಎತ್ತಿದ್ದ ಡಿಕೆಶಿ

ಬೆಂಗಳೂರು;  ಜಿಬಿಎ ವ್ಯಾಪ್ತಿಯಲ್ಲಿ  ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ...

Related Articles

Popular Categories

error: Content is protected !!