ಬೆಂಗಳೂರು; ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ ಮಿಂಟೋ ಆಸ್ಪತ್ರೆ ಕಾಮಗಾರಿ ನಡೆಸಿದ್ದ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು, ಈ ಕಾಮಗಾರಿಗಳಿಗೆ ಅನುಮೋದನೆಯಿಲ್ಲದೆಯೇ ಹೆಚ್ಚುವರಿ ಪಾವತಿ ಮಾಡಿರುವುದನ್ನು ಲೆಕ್ಕ ಪರಿಶೋಧಕರು ಬಹಿರಂಗಗೊಳಿಸಿದ್ದಾರೆ.
2023-24ನೇ ಸಾಲಿನ ಲೆಕ್ಕ ಪರಿಶೋಧನೆ ವರದಿಯನ್ನು ಪೂರ್ಣಗೊಳಿಸಿರುವ ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು, ಅನುಮೋದನೆಯಿಲ್ಲದೆಯೇ ವಿಶ್ವವಿದ್ಯಾಲಯವು ನಡೆಸಿರುವ ಕಾಮಗಾರಿಗಳ ವಿವರಗಳನ್ನು ಬಯಲು ಮಾಡಿದ್ದಾರೆ.
ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ಮಿಂಟೋ ಆಸ್ಪತ್ರೆ ಕಾಮಗಾರಿಗೂ ಹೆಚ್ಚುವರಿ ಪಾವತಿ
ಮಿಂಟೋ ಆಸ್ಪತ್ರೆಯ ಸಭಾಂಗಣದ 2ನೇ ಮಹಡಿ ಕಾಮಗಾರಿಯಲ್ಲಿ 5,68,791 ರು ಹಾಗೂ 4,85,815 ರು.ಗಳನ್ನು ಹೆಚ್ಚುವರಿಯಾಗಿ ಪಾವತಿಸಿತ್ತು. ಈ ಪಾವತಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದಿರಲಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಸಂಜಯ್ ಮಾರ್ಕೇಟಿಂಗ್ ಅಂಡ್ ಪಬ್ಲಿಸಿಟಿ ಸರ್ವೀಸ್ ಗೆ ಮೊದಲ ಮತ್ತು ಭಾಗಶಃ ಬಿಲ್ ನ ಮೊತ್ತವಾದ 69,76,194 ಹಾಗೂ 2ನೇ ಅಂತಿಮ ಬಿಲ್‌ನಲ್ಲಿ 1,17,221,328 ರು ಒಟ್ಟಾರೆ 1,86,97,522 ರು.ಗಳನ್ನು 2023ರ ಫೆ.28ರಂದು ಮತ್ತು 1,61,93,830 ರು.ಗಳನ್ನು ಕಾರ್ಯಾದೇಶ ನೀಡಿ ಕಾಮಗಾರಿಗೆ 4 ತಿಂಗಳ ಕಾಲಾವಧಿ ನೀಡಿತ್ತು.
ಅದರಂತೆ ಈ ಕಾಮಗಾರಿಯನ್ನು 2023ರ 2023ರ ಜುಲೈ 5ರೊಳಗೆ ಪೂರ್ಣಗೊಳಿಸಬೇಕಿತ್ತು. ಅದರೆ ಈ ಕಾಮಗಾರಿಯನ್ನು 2023ರ ಅಕ್ಟೋಬರ್ 3ರಂದು ಪೂರ್ಣಗೊಳಿಸಲಾಗಿದೆ. ಹೀಗಾಗಿ ಈ ಕಾಮಗಾರಿಯು ಪೂರ್ಣಗೊಳ್ಳಲು 3 ತಿಂಗಳು ವಿಳಂಬವಾಗಿತ್ತು.
ನಿಯಮಾನುಸಾರ ಕಾಮಗಾರಿ ತಡವಾಗಿ ನಿರ್ವಹಿಸಿದ ಅವಧಿಗೆ ಗುತ್ತಿಗೆದಾರರಿಗೆ ದಂಡ ವಿಧಿಸಬೇಕು. ಆದರೆ ಯಾವುದೇ ಕಾರಣ ನೀಡದೇ ಹಾಗೂ ಸಕ್ಷಮ ಪ್ರಾಧಿಕಾರದಿಂದ ಇಒಟಿಯನ್ನು ಪಡೆಯದೇ ಪೂರ್ಣ ಮೊತ್ತ ಪಾವತಿಸಲಾಗಿದೆ. ಕೆಪಿಡಬ್ಲ್ಯೂಡಿ ಡಿ ಕೋಡ್ ರಂತೆ ಸಂಬಂಧಪಟ್ಟ ಅಭಿಯಂತರರು ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿ ಸಕ್ಷಮ ಪ್ರಾಧಿಕಾರಕ್ಕೆ ಕಾಲಕಾಲಕ್ಕೆ ಪ್ರಗತಿ ವರದಿಯನ್ನು ಸಲ್ಲಿಸಬೇಕು. ಹಾಗೂ ಗುತ್ತಿಗೆದಾರರಿಗೆ ಕಾಮಗಾರಿಯನ್ನು ಸಕಾಲದಲ್ಲಿಪೂರ್ಣಗೊಳಿಸದೇ ಇರಲು ನೋಟೀಸ್ ಜಾರಿ ಮಾಡಬೇಕಿತ್ತು. ಅದರೆ ಈ ರೀತಿಯ ಯಾವುದೇ ಪ್ರಕ್ರಿಯೆಯನ್ನು ಕೈಗೊಂಡಿಲ್ಲ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಮುಂದುವರೆದು ಸದರಿ ಕಾಮಗಾರಿಯ ಕಾರ್ಯಾದೇಶದ ಜತೆಗೆ ನೀಡಿರುವ ಷೆಡ್ಯೂಲ್ಡ್ ಬಿ ಪರಿಮಾಣಕ್ಕೆ ಮಾತ್ರ ಪಾವತಿಸಲು ಅವಕಾಶವಿದೆ. ಕೆಲವು ಸಮಯದಲ್ಲಿ ಹೆಚ್ಚುವರಿ ಪರಿಮಾಣ ಹಾಗೂ ಅಂದಾಜು ಪಟ್ಟಿ ಷೆಡ್ಯೂಲ್ಡ್ ಬಿ ನಲ್ಲಿ ಇಲ್ಲದೆ ಇರುವ ಐಟಂಗಳನ್ನು ನಿರ್ವಹಿಸುವ ಸಾಧ್ಯತೆ ಇರುತ್ತದೆ. ಅಂತಹ ಸಮಯದಲ್ಲಿ ಇಐಆರ್‍ಎಲ್, ವರ್ಕ್ ಸ್ಲಿಪ್ ತಯಾರಿಸಿ ತಾಂತ್ರಿಕ ಸಮರ್ಥನೆ ನೀಡಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದ ನಂತರ ಹೆಚ್ಚುವರಿ ಪರಿಮಾಣ ಪಾವತಿಸಲು ಅವಕಾಶವಿದೆ. ಆಧರೆ 6,51,813 ರ.ಗಳಿಗೆ ವರ್ಕ್ ಸ್ಲಿಪ್ ತಯಾರಿಸಲಾಗಿದೆ.
ಆದರೆ ಈ ಕೆಳಕಂಡ ಐಟಂಗಳಿಗೆ ಅನುಮೋದನೆ ಪಡೆದಿರಲಿಲ್ಲ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಈ ಮೇಲ್ಕಂಡ ಹೆಚ್ಚುವರಿ ಪರಿಮಾಣಕ್ಕೆ ಪಾವತಿ ಮಾಡಲು ಅವಕಾಶ ಇಲ್ಲ. ಅದರೂ ಸಹ ಹಣ ಪಾವತಿಸಿರುವುದನ್ನು ಲೆಕ್ಕ ಪರಿಶೋಧನೆಯು ಕಂಡುಹಿಡಿದಿದೆ. ಅಲ್ಲದೇ ಈ ಕಾಮಗಾರಿಯು ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ. ಯಾವುದೇ ಅಭಿವೃದ್ಧಿ ಕಾಮಗಾರಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೇ ಕೈಗೊಳ್ಳಬೇಕು.
ಆದರೆ ಈ ಪ್ರಕರಣದಲ್ಲಿ ವಿಶ್ವವಿದ್ಯಾಲಯದ ನಿಧಿಯಿಂದ ಕಾಮಗಾರಿ ಕೈಗೊಳ್ಳಲು ಸರ್ಕಾರದ ಅನುಮೋದನೆಯನ್ನೇ ಪಡೆದಿಲ್ಲ. ಬದಲಾಗಿ ತನ್ನ ಹಂತದಲ್ಲೇ ನೇರವಾಗಿ ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ನೀಡಿ ಟೆಂಡರ್ ಆಹ್ವಾನಿಸಿತ್ತು. ಇದು ಸರ್ಕಾರದಿಂದ ಅಧಿಕಾರ ಪ್ರತ್ಯಾಯೋಜನೆಯ ದುರ್ಬಳಕೆ ಮಾಡಿಕೊಂಡಿದೆ.
ಹಾಗೆಯೇ ಈ ಕಾಮಗಾರಿಗೆ 4,85,815 ರುಗ.ಳ ಬ್ಯಾಂಕ್ ಗ್ಯಾರಂಟಿಯು 2023ರ ಫೆ.10ರಂದು ನೀಡಿರುತ್ತದೆ. ಈ ಬ್ಯಾಂಕ್ ಗ್ಯಾರಂಟಿ ಅವಧಿಯು 2024ರ ಜುಲೈ 9ರವರೆಗೆ ಚಾಲ್ತಿಯಲ್ಲಿತ್ತು. ಆದರೆ ಈ ಕಾಮಗಾರಿಯ ಟೆಂಡರ್ ದಾಖಲಾತಿಗಳು ಹಾಗೂ ಕರಾರು ಒಪ್ಪಂದ ಷರತ್ತುಗಳ ಪರಿಶೀಲನೆಗಾಗಿ ಡಿಫೆಕ್ಟ್ ಲಯಾಬಲಿಟಿ ಪೀರಿಯಡ್ ಗೆ ಸಂಬಂಧಿಸಿದಂತೆ ಯಾವುದೆ ಅವಧಿ ಷರತ್ತು ವಿಧಿಸಿಲ್ಲ. ಈ ರೀತಿಯ ಬಹುಮುಖ್ಯವಾದ ಅಂಶಗಳಿಗೆ ಯಾವುದೇ ಷರತ್ತು ವಿಧಿಸದೇ ಇರುವುದರಿಂದ ದೋಷಪೂರಿತ ಟೆಂಡರ್ ಡಾಕ್ಯುಮೆಂಟ್ ತಯಾರಿಸಿರುವುದು ಲೆಕ್ಕ ಪರಿಶೋಧನೆಯಲ್ಲಿ ಕಂಡು ಬಂದಿದೆ.

ಹಾಗೂ ಈ ರೀತಿಯ ಅಸಮರ್ಪಕ ಟೆಂಡರ್ ಡಾಕ್ಯುಮೆಂಟ್ ಷರತ್ತುಗಳು ಇಲ್ಲದೇ ಇರುವುದರಿಂದ ವಿಶ್ವವಿದ್ಯಾಲಯಕ್ಕೆ ಆರ್ಥಿಕ ನಷ್ಟವುಂಟಾಗುವ ಸಾಧ್ಯತೆ ಇರುತ್ತದೆ. ಹಾಗೂ ಈ ರೀತಿಯ ದೋಷಪೂರಿತ ಟೆಂಡರ್ ಡಾಕ್ಯುಮೆಂಟ್ ತಯಾರಿಸಿರುವುದರಿಂದ ಗುತ್ತಿಗೆದಾರರ ಮೇಲೆ ಯಾವುದೇ ನ್ಯಾಯಾಲಯದಲ್ಲಿಯೂ ಸಹ ದಾವೆ ಹೂಡಲು ಅವಕಾಶವಿಲ್ಲ. ಆದ್ದರಿಂದ ಈ ಸಂಬಂಧ ಅಸಿಸ್ಟಂಟ್ , ಎಕ್ಸಿಕ್ಯೂಟಿವ್ ಇಂಜಿನಿಯರ್‍ಗಳು ಸೂಕ್ತ ವಿವರಣೆ ನೀಡಬೇಕು ಎಂದು ಲೆಕ್ಕಪತ್ರ ವಿಚಾರಣೆ ನೋಟೀಸ್ ನೀಡಿತ್ತು.
ಆದರೆ ಈ ಸಂಬಂಧ ಯಾವುದೇ ವಿವರಣೆ ನೀಡಿಲ್ಲ. ಹೀಗಾಗಿ 5,68,791 ರು.ಗಳನ್ನು ವಸೂಲಾತಿಗೆ ಸೂಚಿಸಿದೆ. 4,85,815 ರು.ಗಳನ್ನು ಆಕ್ಷೇಪಣೆಯಲ್ಲಿಟ್ಟಿದೆ.
ನವೀಕೃತ ಕ್ಯಾಂಟೀನ್ ಬಳಕೆ ಮಾಡದ ವಿವಿ
ವಿಶ್ವವಿದ್ಯಾಲಯದ ಆವರಣದಲ್ಲಿ ಕ್ಯಾಂಟೀನ್ ನವೀಕರಣ ಮಾಡಿರುವುದಕ್ಕೂ 4,42,529ರು ಪಾವತಿಸಿದೆ. ಈ ಕಾಮಗಾರಿಗೆ 3,75,028 ರು.ಗಳನ್ನು ಕಾರ್ಯಾದೇಶ ನೀಡಲಾಗಿತ್ತು. 2023ರ ಫೆ.15ರಂದು ಕಾಮಗಾರಿ ಪೂರ್ಣಗೊಳಿಸಿದೆ. ಆದರೆ ಈ ಕ್ಯಾಂಟೀನ್ ನವೀಕರಣಗೊಂಡು 22 ತಿಂಗಳು ಕಳೆದಿದ್ದರೂ ಈವರೆಗೂ ಕ್ಯಾಂಟೀನ್ ಬಳಸಿಲ್ಲ. ಈ ರೀತಿಯ ಫಲಪ್ರದವಲ್ಲದ ವೆಚ್ಚ ಮಾಡಿ ವಿಶ್ವವಿದ್ಯಾಲಯದ ನಿಧಿಯನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡದಿರುವುದು ಲೆಕ್ಕ ಪರಿಶೋಧನೆಯಲ್ಲಿ ಕಂಡು ಬಂದಿದೆ. ಇದಕ್ಕೆ ಸೂಕ್ತ ವಿವರಣೆ ನೀಡಬೇಕು ಎಂದು ಸೂಚಿಸಿತ್ತು.

ಆದರೆ ಲೆಕ್ಕಪರಿಶೋಧಕರಿಗೆ ಯಾವುದೇ ವಿವರಣೆ ನೀಡಿಲ್ಲ. ಹೀಗಾಗಿ 4,52,529 ರುಗ.ಳನ್ನು ಆಕ್ಷೇಪಣೆಯಲ್ಲಿಟ್ಟಿರುವುದು ವರದಿಯಿಂದ ಗೊತ್ತಾಗಿದೆ.
ರಾಮನಗರದ ಅರ್ಚಕರಹಳ್ಳಿಯಲ್ಲಿ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಟೆಂಡರ್ ಪೂರ್ವ ಪರಿಶೀಲನಾ ಸಮಿತಿಯು ನೀಡಿದ್ದ ಶಿಫಾರಸ್ಸನ್ನು ವಿಶ್ವವಿದ್ಯಾಲಯವು ಪರಿಗಣಿಸಿರಲಿಲ್ಲ.
ರಾಮನಗರದಲ್ಲಿ 400 ಕೋಟಿ ಅನುತ್ಪಾದಕ ವೆಚ್ಚ; ಟೆಂಡರ್ ಪೂರ್ವ ಪರಿಶೀಲನಾ ಸಮಿತಿ ಅಭಿಪ್ರಾಯ ಬದಿಗೊತ್ತಿದ್ದೇಕೆ?
442 ಕೋಟಿ ರು ಮೌಲ್ಯದ ಸ್ಥಿರಾಸ್ತಿಹ ಹೊಂದಿರುವ ವಿಶ್ವವಿದ್ಯಾಲಯವು ಭೌತಿಕ ಆಸ್ತಿಯ ಮಾಹಿತಿಯನ್ನು ಲೆಕ್ಕ ಪರಿಶೋಧಕರಿಗೆ ಒದಗಿಸಿರಲಿಲ್ಲ.
442.03 ಕೋಟಿ ರು ಮೌಲ್ಯದ ಸ್ಥಿರಾಸ್ತಿ; ಭೌತಿಕ ಆಸ್ತಿಗಳ ವಿವರಗಳನ್ನೇ ಲೆಕ್ಕಪರಿಶೋಧನೆಗೆ ಒದಗಿಸದ ವಿವಿ
ವಿಶ್ವವಿದ್ಯಾಲಯವು ಅಂದಾಜು ಮೊತ್ತವನ್ನು ಮೀರಿ ವೆಚ್ಚ ಮಾಡಿತ್ತು.
ಅಂದಾಜು ಮೊತ್ತ ಮೀರಿ ವೆಚ್ಚ, ವಿವಿಧ ಶುಲ್ಕ, ಬಡ್ಡಿ ನಿರ್ವಹಣೆಯಲ್ಲಿ ಲೋಪ; ಬೇಜವಾಬ್ದಾರಿ ಬಯಲು
ವಿಶ್ವವಿದ್ಯಾಲಯವು ಸಂಗ್ರಹಿಸಿದ್ದ ಸಂಯೋಜನೆ ಶುಲ್ಕದಲ್ಲೂ ವ್ಯತ್ಯಾಸ ಕಂಡು ಬಂದಿತ್ತು.
ಸಂಯೋಜನೆ ಶುಲ್ಕ; 42.03 ಕೋಟಿ ಸಂಗ್ರಹ, 6.51 ಕೋಟಿ ರು ವ್ಯತ್ಯಾಸ, ವಿವಿ ಬಳಿ ಪೂರಕ ದಾಖಲೆಗಳೇ ಇಲ್ಲ
ವಾರ್ಷಿಕ ಲೆಕ್ಕಪತ್ರಗಳಲ್ಲಿಯೂ ವ್ಯತ್ಯಾಸ ಕಂಡು ಬಂದಿತ್ತು.
ವಾರ್ಷಿಕ ಲೆಕ್ಕಪತ್ರ, ಬ್ಯಾಂಕ್ ಖಾತೆಗಳ ಸ್ವೀಕೃತಿ; 116 ಕೋಟಿಯಲ್ಲಿ ವ್ಯತ್ಯಾಸ, ಪರೀಕ್ಷಾ ಶುಲ್ಕದಲ್ಲಿ ಅಕ್ರಮ?
155 ಸಿಬ್ಬಂದಿ ನೇಮಕದಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿತ್ತು. ಮನಸೋ ಇಚ್ಛೆ ಆದೇಶ ಹೊರಡಿಸಿತ್ತಲ್ಲದೇ ವಿವಿಧ ಸಂಬಳವನ್ನು ನೀಡಲಾಗಿತ್ತು. ಇದರಿಂದ ಆರ್ಥಿಕ ನಷ್ಟವುಂಟಾಗಿತ್ತು.
155 ಸಿಬ್ಬಂದಿ ನೇಮಕದಲ್ಲಿ ನಿಯಮ ಉಲ್ಲಂಘನೆ, ಮನಸೋ ಇಚ್ಛೆ ಆದೇಶ, ವಿವಿಧ ಸಂಬಳ; ಆರ್ಥಿಕ ನಷ್ಟ
ಇದರಿಂದ ಸದರಿ ಅಂದಾಜು ಪಟ್ಟಿ ದೋಷಪೂರಿತವಾಗಿರುವುದು ಲೆಕ್ಕ ಪರಿಶೋಧನೆಯಲ್ಲಿ ಕಂಡು ಬಂದಿದೆ. ಆದ್ದರಿಂದ ಸೂಕ್ತ ವಿವರಣೆ ನೀಡುವವರೆಗೂ 80,90,894 ರು.ಗಳನ್ನು ಆಕ್ಷೇಪಣೆಯಲ್ಲಿಟ್ಟಿತ್ತು.
ಅಲ್ಲದೇ ಟೆಂಡರ್ ಇಲ್ಲದೆಯೇ 10 ಕೋಟಿಗೂ ಹೆಚ್ಚು ವೆಚ್ಚವನ್ನು ಮಾಡಿತ್ತು. ಇದನ್ನೂ ಸಹ ಲೆಕ್ಕ ಪರಿಶೋಧಕರು ಆಕ್ಷೇಪಿಸಿದ್ದರು.
ಟೆಂಡರ್ ಇಲ್ಲದೆಯೇ 10 ಕೋಟಿಗೂ ಹೆಚ್ಚು ವೆಚ್ಚ, ಪರೀಕ್ಷಾ ಮೇಲ್ವಿಚಾರಕರ ಸಂಭಾವನೆಯಲ್ಲಿಯೂ ಅಕ್ರಮ?
ತಾಂತ್ರಿಕ ಸಮರ್ಥನೆಯಿಲ್ಲದಿದ್ದರೂ ಸಹ ವಿಶ್ವವಿದ್ಯಾಲಯವು ಬಹು ಕೋಟಿ ವೆಚ್ಚವನ್ನು ಮಾಡಿತ್ತು.
ತಾಂತ್ರಿಕ ಸಮರ್ಥನೆಯಿಲ್ಲ, ಅನುಮೋದನೆಯಿಲ್ಲ, ಕಾಮಗಾರಿ ವಹಿಯನ್ನೂ ನಿರ್ವಹಿಸಿಲ್ಲ; ವಿವಿಯಿಂದ ಬಹುಕೋಟಿ ವೆಚ್ಚ
ವಿಶ್ವವಿದ್ಯಾಲಯದಲ್ಲಿ ಆರ್ಥಿಕ ಅಶಿಸ್ತು ಕಂಡು ಬಂದಿರುವ ಲೆಕ್ಕ ಪರಿಶೋಧನೆ ವರದಿಯು ಬಯಲು ಮಾಡಿದ್ದರೂ ಸಹ ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣ ಪ್ರಕಾಶ್ ಪಾಟೀಲ್ ಅವರು ಯಾವುದೇ ಕ್ರಮ ವಹಿಸಿಲ್ಲ ಎಂದು ತಿಳಿದು ಬಂದಿದೆ.









