ಬೆಂಗಳೂರು; ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಕೈಗೆತ್ತಿಕೊಂಡಿದ್ದ ಹಲವು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಯಾವುದೇ ವಹಿಯನ್ನು ನಿರ್ವಹಿಸಿರಲಿಲ್ಲ. ಹೀಗಾಗಿ ವಿಶ್ವವಿದ್ಯಾಲಯದ ಕಾಮಗಾರಿಗಳ ಆರ್ಥಿಕ ಮತ್ತು ಭೌತಿಕ ಪ್ರಗತಿಯ ವಿವರಗಳು ಮತ್ತು ವೆಚ್ಚದ ವಿವರಗಳನ್ನು ಲೆಕ್ಕಪರಿಶೋಧಕರೂ ಸಹ ನಿಖರವಾಗಿ ತಿಳಿದಿರಲಿಲ್ಲ.
2023-24ನೇ ಸಾಲಿನ ವಾರ್ಷಿಕ ಲೆಕ್ಕಪರಿಶೋಧನೆಯನ್ನು ಪೂರ್ಣಗೊಳಿಸಿರುವ ಲೆಕ್ಕ ಪರಿಶೋಧಕರು, ವಿಶ್ವವಿದ್ಯಾಲಯದ ಕಾಮಗಾರಿಗಳ ವಿವಿಧ ಮುಖಗಳನ್ನು ತೆರೆದಿಟ್ಟಿದ್ದಾರೆ.
ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ಕಾಮಗಾರಿ ವಹಿ ನಿರ್ವಹಿಸದೇ ಇರುವುದು
ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ವಿಭಾಗದಲ್ಲಿ ವಿವಿಧ ಬಗೆಯ ಮುಖ್ಯ ಮತ್ತು ಕಿರು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕಾಮಗಾರಿಗಳ ವಹಿಯನ್ನೇ ನಿರ್ವಹಿಸಿರಲಿಲ್ಲ. ಈ ಕಾರಣದಿಂದ ಕಾಮಗಾರಿಗಳ ಆರ್ಥಿಕ ಪ್ರಗತಿ ಮತ್ತು ಭೌತಿಕ ಪ್ರಗತಿಯ ವಿವರಗಳು ಮತ್ತು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇದುವರೆಗೂ ಆಗಿರುವ ಒಟ್ಟಾರೆ ವೆಚ್ಚದ ವಿವರಗಳನ್ನು ಲೆಕ್ಕ ಪರಿಶೋಧಕರು ಸಹ ನಿಖರವಾಗಿ ತಿಳಿಯುವುದು ಸಾಧ್ಯವಾಗಿಲ್ಲ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಕರ್ನಾಟಕ ಲೋಕೋಪಯೋಗಿ ಸಂಹಹಿತೆ 2014ರ ಪ್ಯಾರಾ ಸಂಖ್ಯೆ 220ರಂತೆ ವಿವಿಧ ಕಾಮಗಾರಿಗೆ ಹಂಚಿಕೆ ಮಾಡಲಾದ ಅನುದಾನಕ್ಕೆ ಎದುರಾಗಿ ಲೆಕ್ಕ ಶೀರ್ಷಿಕೆಯ ಅನುಸಾರ ಪ್ರಸಕ್ತ ಬಿಲ್‌ನವರೆಗೆ ಭರಿಸಲಾಗಿರುವ ವೆಚ್ಚದ ವಿವರಗಳನ್ನು ಕಾಮಗಾರಿ ವಹಿಯಲ್ಲಿ ನಿರ್ವಹಿಸಬೇಕು. ಆದರೆ ಇದನ್ನು ವಿಶ್ವವಿದ್ಯಾಲಯವು ನಿರ್ವಹಿಸಿರಲಿಲ್ಲ ಎಂಬುದನ್ನು ಪತ್ತೆ ಹಚ್ಚಿರುವುದು ವರದಿಯಿಂದ ಗೊತ್ತಾಗಿದೆ.
ವಿಶ್ವವಿದ್ಯಾಲಯವು ದಾವಣಗೆರೆ ಜಿಲ್ಲೆಯ ಹೊಂದಿರುವ ಪ್ರಾಂತೀಯ ಕಚೇರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪಿಎಂಸಿ ಸೇವೆಯನ್ನು ಪಡೆದಿತ್ತು. ಈ ಸಂಬಂಧ ಆಹ್ವಾನಿಸಿದ್ದ ಟೆಂಡರ್‍ನಲ್ಲಿ ನಿಕೇತನ್ ಕನ್ಸಲ್ಟಂಟ್ಸ್, 18,00,000 ರು., ಕ್ಯಾಡ್ ಫೋರಂ, 12,84,000, ನೋವಾ ಟೆಕ್ ಕನ್ಸ್‌ಲ್ಟೆಂಟ್ಸ್ ಪ್ರೈವೈಟ್ ಲಿಮಿಟೆಡ್ 96,30,000 ರು ದರ ನಮೂದಿಸಿತ್ತು. ಟೆಂಡರ್ ಪರಿಶೀಲನಾ ಸಮಿತಿಯು ಕ್ಯಾಡ್ ಫೋರಂ ಮತ್ತು ನೋವಾಟೆಕ್ ಕಂಪನಿಯ ಬಿಡ್‌ನ್ನು ತಿರಸ್ಕರಿಸಿತ್ತು.
ರಿಡಕ್ಷನ್‌ನಲ್ಲಿ ಕ್ಯಾಡ್ ಫೋರಂ ಪ್ರತಿಕ್ರಿಯೆ ನೀಡಿರಲಿಲ್ಲ. ಈ ರೀತಿ ಒಂದೇ ಸಂಸ್ಥೆಯ ಟೆಂಡರ್ ಬಿಡ್‌ಗೆ ಎರಡು ಬೇರೆ ಬೇರೆ ಕಾರಣ ನೀಡಲು ಕಾರಣವೇನು ಎಂದು ಸೂಕ್ತ ವಿವರಣೆ ನೀಡಬೇಕು ಎಂದು ಕೋರಿತ್ತು. ಅಲ್ಲದೇ ಕ್ಯಾಡ್ ಫೋರಂ ನೀಡಿದ್ದ ವರ್ಕ್ ಡನ್ ಸರ್ಟಿಫಿಕೇಟ್ ಕ್ರಮಬದ್ಧವಾಗಿರಲಿಲ್ಲ. ಹೀಗಾಗಿ ಟೆಂಡರ್ ತಿರಸ್ಕೃತಗೊಂಡಿತ್ತು.
ಈ ಸಂಸ್ಥೆಯ ಇಎಂಡಿ ಮೊತ್ತ 50,000 ರುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಈ ಮೊತ್ತವನ್ನು ವಿಶ್ವವಿದ್ಯಾಲಯದ ಖಾತೆಗೆ ಜಮಾ ಮಾಡಿಕೊಂಡಿರುವ ಬಗ್ಗೆ ಸೂಕ್ತ ದಾಖಲೆಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿರಲಿಲ್ಲ.
ನಿಕೇತನ್ ಕನ್ಸಲ್ಟಂಟ್ಸ್, ಗೆ 20204ರ ಜೂನ್ 30ರಂದು ಎಲ್ ಒ ಎ ಪತ್ರ ನೀಡಿತ್ತು. 12,84,000 ರು ಕಾರ್ಯಾದೇಶ ಮೊತ್ತಕ್ಕೆ 64,200 ರು.ಗಳ ಬ್ಯಾಂಕ್ ಗ್ಯಾರಂಟಿಯನ್ನು ನೀಡಲು ಕೋರಿತ್ತು. ಅದರಂತೆ ಸದಸರಿ ಸಂಸ್ಥೆಯವರು ಬ್ಯಾಂಕ್ ಅಫ್ ಇಂಡಿಯಾ ಪದ್ಮನಾಭನಗರ ಶಾಖೆಯಿಂದ ಬ್ಯಾಂಕ್ ಗ್ಯಾರಂಟಿ ನೀಡಿತ್ತು. 2021ರ ನಂತರ ಈ ಬ್ಯಾಂಕ್ ಗ್ಯಾರಂಟಿಯನ್ನು ನವೀಕರಿಸಿರಲಿಲ್ಲ.
ಈ ಕಾಮಗಾರಿಯು 2023ರ ನವೆಂಬರ್30 ರಂದು ಪೂರ್ಣಗೊಂಡಿದೆ. ಈ ಅವಧಿಯವರೆಗೆ ಹಾಗೂ ಡಿಎಲ್‌ಪಿ ಅವಧಿವರೆಗೆ ಬ್ಯಾಂಕ್ ಗ್ಯಾರಂಟಿ ಚಾಲ್ತಿಯಲ್ಲಿರಬೇಕು. ಆದರೆ ಈ ಬ್ಯಾಂಕ್ ಗ್ಯಾರಂಟಿಯನ್ನು ನಿಗದಿತ ಅವಧಿಯೊಳಗೆ ನವೀಕರಣ ಮಾಡದೇ ಕರ್ತವ್ಯಲೋಪ ಎಸಗಿದೆ. ಇದರಿಂದ ಉಂಟಾಗುವ ಆರ್ಥಿಕ ನಷ್ಟಕ್ಕೆ ಸಂಬಂಧಪಟ್ಟವರು ನೇರವಾಗಿ ಜವಾಬ್ದಾರರಾಗಿರುತ್ತಾರೆ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ಎಚ್ಚರಿಸಿರುವುದು ತಿಳಿದು ಬಂದಿದೆ.
ರಾಮನಗರ ಜಿಲ್ಲೆಯ ಸಂತಿಗಟ್ಟ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಮೇಲ್ದರ್ಜೆಗೇರಿಸುವ ಸಂಬಂಧ ನಡೆದಿದ್ದ ಕಾಮಗಾರಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದಿರಲಿಲ್ಲ. ಹೀಗಾಗಿ 18,04,838 ರು.ಗಳನ್ನು ಆಕ್ಷೇಪಣೆಯಲ್ಲಿರಿಸಿದೆ. ಡೇಟಾ ರೇಟ್ ದರಗಳನ್ನು ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಗೊಂಡಿರುವ ಬಗ್ಗೆ ಸೂಕ್ತ ದಾಖಲೆಗಳನ್ನು ಲೆಕ್ಕ ಪರಿಶೀಲನೆಗೆ ಒದಗಿಸಿಲ್ಲ. ಈ ಬಗ್ಗೆ ಲೆಕ್ಕ ವಿಚಾರಣೆ ನೋಟೀಸ್ ಜಾರಿಗೊಳಿಸಿದ್ದರೂ ಸಹ ದಾಖಲೆ ನೀಡಿರಲಿಲ್ಲ.

ಅಲ್ಲದೇ ಇದೇ ಕಾಮಗಾರಿಗಾಗಿ ಹೆಚ್ಚುವರಿಯಾಗಿ 34,51,869ರು.ಗಳನ್ನು ಪಾವತಿಸಿತ್ತು. ಈ ಕಾಮಗಾರಿಯ 5ನೇ ಮತ್ತು ಅಂತಿಮ ಬಿಲ್ ರೂಪದಲ್ಲಿ 2,09,59,080ರು.ಗಳನ್ನು ಗುತ್ತಿಗೆದಾರರಾದ ಟಿ ಎಚ್ ಮಾನಾವಲ್ಲಯ್ಯ ಅವರಿಗೆ ಪಾವತಿಸಿತ್ತು. ಈ ಕಾಮಗಾರಿಯ ಬಿಲ್ ಷೆಡ್ಯೂಲ್ಡ್ ಬಿ , ಇಐಆರ್‍ಎಲ್ ಮತ್ತು ವರ್ಕ್ ಸ್ಲಿಪ್ ಪರಿಶೀಲಿಸಿದಾಗ 78 ಐಟಂಗಳಿಗೆ ಷೆಡ್ಯೂಲ್ಡ್ ಬಿ ಪರಿಮಾಣಕ್ಕಿಂತ ಹೆಚ್ಚುವರಿಯಾಗಿ ಪಾವತಿಸಲಾಗಿತ್ತು.

ಕಾರ್ಯದೇಶದ ಜೊತೆಗೆ ನೀಡಿರುವ ಷೆಡ್ಯೂಲ್ಡ್ ಬಿ ಪರಿಮಾಣ ಹೆಚ್ಚಾದಲ್ಲಿ ಹಾಗೂ ಬೇರೆ ಐಟಂಗಳು ಸೇರ್ಪಡೆ ಆದಲ್ಲಿ ಸಕ್ಷಮ ಪ್ರಾಧಿಕಾರದಿಂದ ತಾಂತ್ರಿಕ ಸಮರ್ಥನೆ ನೀಡಬೇಕು. ಅಲ್ಲದೇ ಇಐಆರ್‍ಎಲ್ ಹಾಗೂ ವರ್ಕ್ ಸ್ಲಿಪ್‌ಗೆ ಅನುಮೋದನೆ ಪಡೆಯಬೇಕು.

ಕಡತದಲ್ಲಿರುವ ಈ ದಾಖಲೆಗಳನ್ನು ಲೆಕ್ಕ ಪರಿಶೋಧಕರು ಪರಿಶೀಲಿಸಿದ್ದಾರೆ. (ಪುಟ ಸಂಖ್ಯೆ 78ರಿಂದ 82ರ ಕಂಡಿಕೆ 353ರಲ್ಲಿ) ಸಹಾಯಕ ಅಭಿಯಂತರು 46,58,847ರುಗಳಿಗೆ ವರ್ಕ್ ಸ್ಲಿಪ್ ಹಾಗೂ 41,05,629ರು.ಗಳಿಗೆ ಇಐಆರ್‍ಎಲ್ ಗೆ ಅನುಮೋದನೆಗೆ ಮಂಡಿಸಿದ್ದರು. ಈ ಇಐಆರ್‍ಎಲ್‌ಮತ್ತು ವರ್ಕ್ ಸ್ಲಿಪ್‌ಗಳಿಗೆ ಯಾವುದೇ ರೀತಿಯ ತಾಂತ್ರಿಕ ಸಮರ್ಥನೆ ನೀಡಿಲ್ಲ. ಅಲ್ಲದೇ ವರ್ಕ್ ಸ್ಲಿಪ್ ಗೆ 46,58,847 ರು ನಲ್ಲಿ 78 ಐಟಂಗಳು ಷೆಡ್ಯೂಲ್ಡ್ ಬಿ ಪರಿಮಾಣಕ್ಕಿಂತ ಹೆಚ್ಚುವರಿಯಾಗಿ ಪಾವತಿಸಿರುವುದನ್ನು ಲೆಕ್ಕ ಪರಿಶೋಧನೆಯಲ್ಲಿ ಕಂಡು ಬಂದಿದೆ. ಈ ಐಟಂಗಳಿಗೆ ವರ್ಕ್ ಸ್ಲಿಪ್‌ನಲ್ಲಿ ಯಾವುದೇ ರೀತಿಯ ಅನುಮೋದನೆ ಪಡೆದಿರಲಿಲ್ಲ.

ಈ ಐಟಂಗಳಿಗೆ ಅನುಮೋದಿಸಿ ವರ್ಕ್ ಸ್ಲಿಪ್‌ನಲ್ಲಿ ಯಾವುದೇ ರೀತಿಯ ಅನುಮೋದನೆ ಪಡೆಯದೇ ಗುತ್ತಿಗೆದಾರರಿಗೆ ಒಟ್ಟಾರೆ 34,51,869 ರು ಗಳನ್ನು ಹೆಚ್ಚುವರಿಯಾಗಿ ಪಾವತಿಸಿರುವುದು ಲೆಕ್ಕ ಪರಿಶೋಧನೆಯಲ್ಲಿ ಕಂಡು ಬಂದಿದೆ.
ಅಲ್ಲದೇ 79 ಐಟಂಗಳಿಗೆ ಬಿಲ್‌ಗಳನ್ನು ಷೆಡ್ಯೂಲ್ಡ್ ಬಿ ಪರಿಮಾಣ ಹಾಗೂ ದರಗಳ ಜತೆ ಪರಿಶೀಲಿಸಲಾಗಿ 78 ಐಟಂಗಳನ್ನು ಕಾರ್ಯಗತಗೊಳಿಸಿರಲಿಲ್ಲ. ಈ ಐಂಟಗಳನ್ನು ಕಾಮಗಾರಿಗಳನ್ನು ಕೈಗೊಳ್ಳುವಾಗ ಕಾರ್ಯಗತಗೊಳಿಸದೇ ಇರಲು ಕಾರಣಗಳೇನು ಎಂಬುದರ ಬಗ್ಗೆ ತಾಂತ್ರಿಕ ಸಮರ್ಥನೆ ನೀಡಿರುವುದಿಲ್ಲ. ಇದರಿಂದ 80,90,894 ರು.ಗಳು ಕೇವಲ ತೋರಿಕೆ ಉದ್ದೇಶದಿಂದ ಕೂಡಿರುತ್ತದೆ.

ರಾಮನಗರದ ಅರ್ಚಕರಹಳ್ಳಿಯಲ್ಲಿ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಟೆಂಡರ್ ಪೂರ್ವ ಪರಿಶೀಲನಾ ಸಮಿತಿಯು ನೀಡಿದ್ದ ಶಿಫಾರಸ್ಸನ್ನು ವಿಶ್ವವಿದ್ಯಾಲಯವು ಪರಿಗಣಿಸಿರಲಿಲ್ಲ.
ರಾಮನಗರದಲ್ಲಿ 400 ಕೋಟಿ ಅನುತ್ಪಾದಕ ವೆಚ್ಚ; ಟೆಂಡರ್ ಪೂರ್ವ ಪರಿಶೀಲನಾ ಸಮಿತಿ ಅಭಿಪ್ರಾಯ ಬದಿಗೊತ್ತಿದ್ದೇಕೆ?
442 ಕೋಟಿ ರು ಮೌಲ್ಯದ ಸ್ಥಿರಾಸ್ತಿಹ ಹೊಂದಿರುವ ವಿಶ್ವವಿದ್ಯಾಲಯವು ಭೌತಿಕ ಆಸ್ತಿಯ ಮಾಹಿತಿಯನ್ನು ಲೆಕ್ಕ ಪರಿಶೋಧಕರಿಗೆ ಒದಗಿಸಿರಲಿಲ್ಲ.
442.03 ಕೋಟಿ ರು ಮೌಲ್ಯದ ಸ್ಥಿರಾಸ್ತಿ; ಭೌತಿಕ ಆಸ್ತಿಗಳ ವಿವರಗಳನ್ನೇ ಲೆಕ್ಕಪರಿಶೋಧನೆಗೆ ಒದಗಿಸದ ವಿವಿ
ವಿಶ್ವವಿದ್ಯಾಲಯವು ಅಂದಾಜು ಮೊತ್ತವನ್ನು ಮೀರಿ ವೆಚ್ಚ ಮಾಡಿತ್ತು.
ಅಂದಾಜು ಮೊತ್ತ ಮೀರಿ ವೆಚ್ಚ, ವಿವಿಧ ಶುಲ್ಕ, ಬಡ್ಡಿ ನಿರ್ವಹಣೆಯಲ್ಲಿ ಲೋಪ; ಬೇಜವಾಬ್ದಾರಿ ಬಯಲು
ವಿಶ್ವವಿದ್ಯಾಲಯವು ಸಂಗ್ರಹಿಸಿದ್ದ ಸಂಯೋಜನೆ ಶುಲ್ಕದಲ್ಲೂ ವ್ಯತ್ಯಾಸ ಕಂಡು ಬಂದಿತ್ತು.
ಸಂಯೋಜನೆ ಶುಲ್ಕ; 42.03 ಕೋಟಿ ಸಂಗ್ರಹ, 6.51 ಕೋಟಿ ರು ವ್ಯತ್ಯಾಸ, ವಿವಿ ಬಳಿ ಪೂರಕ ದಾಖಲೆಗಳೇ ಇಲ್ಲ
ವಾರ್ಷಿಕ ಲೆಕ್ಕಪತ್ರಗಳಲ್ಲಿಯೂ ವ್ಯತ್ಯಾಸ ಕಂಡು ಬಂದಿತ್ತು.
ವಾರ್ಷಿಕ ಲೆಕ್ಕಪತ್ರ, ಬ್ಯಾಂಕ್ ಖಾತೆಗಳ ಸ್ವೀಕೃತಿ; 116 ಕೋಟಿಯಲ್ಲಿ ವ್ಯತ್ಯಾಸ, ಪರೀಕ್ಷಾ ಶುಲ್ಕದಲ್ಲಿ ಅಕ್ರಮ?
155 ಸಿಬ್ಬಂದಿ ನೇಮಕದಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿತ್ತು. ಮನಸೋ ಇಚ್ಛೆ ಆದೇಶ ಹೊರಡಿಸಿತ್ತಲ್ಲದೇ ವಿವಿಧ ಸಂಬಳವನ್ನು ನೀಡಲಾಗಿತ್ತು. ಇದರಿಂದ ಆರ್ಥಿಕ ನಷ್ಟವುಂಟಾಗಿತ್ತು.
155 ಸಿಬ್ಬಂದಿ ನೇಮಕದಲ್ಲಿ ನಿಯಮ ಉಲ್ಲಂಘನೆ, ಮನಸೋ ಇಚ್ಛೆ ಆದೇಶ, ವಿವಿಧ ಸಂಬಳ; ಆರ್ಥಿಕ ನಷ್ಟ
ಇದರಿಂದ ಸದರಿ ಅಂದಾಜು ಪಟ್ಟಿ ದೋಷಪೂರಿತವಾಗಿರುವುದು ಲೆಕ್ಕ ಪರಿಶೋಧನೆಯಲ್ಲಿ ಕಂಡು ಬಂದಿದೆ. ಆದ್ದರಿಂದ ಸೂಕ್ತ ವಿವರಣೆ ನೀಡುವವರೆಗೂ 80,90,894 ರು.ಗಳನ್ನು ಆಕ್ಷೇಪಣೆಯಲ್ಲಿಟ್ಟಿತ್ತು.
ಅಲ್ಲದೇ ಟೆಂಡರ್ ಇಲ್ಲದೆಯೇ 10 ಕೋಟಿಗೂ ಹೆಚ್ಚು ವೆಚ್ಚವನ್ನು ಮಾಡಿತ್ತು. ಇದನ್ನೂ ಸಹ ಲೆಕ್ಕ ಪರಿಶೋಧಕರು ಆಕ್ಷೇಪಿಸಿದ್ದರು.
ಟೆಂಡರ್ ಇಲ್ಲದೆಯೇ 10 ಕೋಟಿಗೂ ಹೆಚ್ಚು ವೆಚ್ಚ, ಪರೀಕ್ಷಾ ಮೇಲ್ವಿಚಾರಕರ ಸಂಭಾವನೆಯಲ್ಲಿಯೂ ಅಕ್ರಮ?
ವಿಶ್ವವಿದ್ಯಾಲಯದಲ್ಲಿ ಆರ್ಥಿಕ ಅಶಿಸ್ತು ಕಂಡು ಬಂದಿರುವ ಲೆಕ್ಕ ಪರಿಶೋಧನೆ ವರದಿಯು ಬಯಲು ಮಾಡಿದ್ದರೂ ಸಹ ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣ ಪ್ರಕಾಶ್ ಪಾಟೀಲ್ ಅವರು ಯಾವುದೇ ಕ್ರಮ ವಹಿಸಿಲ್ಲ ಎಂದು ತಿಳಿದು ಬಂದಿದೆ.









