Sunday | April 12, 2026 |

ಬೆಳೆ ಹವಾಮಾನ ನಿಗಾ ಸಭೆ ನಡೆಸಿಲ್ಲ, ಮಾಹಿತಿ ವ್ಯವಸ್ಥೆಯೂ ಇಲ್ಲ; ಸಿಎಜಿಯನ್ನೂ ತಪ್ಪುದಾರಿಗೆಳೆದ ಸರ್ಕಾರ

ಬೆಂಗಳೂರು;  ರಾಜ್ಯದಲ್ಲಿ ಬರ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಬೆಳೆ ಹವಾಮಾನ ನಿಗಾ ಗುಂಪು ರಚಿಸಿದ್ದ ಸರ್ಕಾರವು 2017ರಿಂದ 2022ರವರೆಗೆ ಸಭೆಯನ್ನೇ ನಡೆಸಿರಲಿಲ್ಲ. ಬರ ಪೀಡಿತ ವರ್ಷದಲ್ಲಿಯೂ ಸಭೆಗಳನ್ನೇ ಆಯೋಜಿಸಿರಲಿಲ್ಲ ಎಂಬ ಸಂಗತಿಯನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಪ್ರಧಾನ ಮಹಾಲೇಖಪಾಲರು ಹೊರಗೆಡವಿದ್ದಾರೆ.

ಬರ ನಿರ್ವಹಣೆಗೆ ಸಂಬಂಧಿಸಿದಂತೆ  ರಾಜ್ಯ ಮಟ್ಟದಲ್ಲಿ ಕಾರ್ಯಪಡೆಯನ್ನೇ ರಚಿಸದ ಸರ್ಕಾರವು, ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪಾಲರನ್ನೂ  ತಪ್ಪು ದಾರಿಗೆಳೆದಿದೆ.

2025ರ ಡಿಸೆಂಬರ್‍‌ನಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆಯಾಗಿರುವ ಸಿಎಜಿ ವರದಿಯು, ಕರ್ನಾಟಕದಲ್ಲಿ ಬರ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಿತ್ತು ಮತ್ತು ಬರ ನಿವಾರಣೆಯಲ್ಲಿ ಕ್ರಮಗಳನ್ನು ಕೈಗೊಳ್ಳುವುದರಲ್ಲಿನ ಅತ್ಯಂತ ಗಂಭೀರ ನಿರ್ಲಕ್ಷ್ಯವನ್ನು ವಹಿಸಿತು ಎಂಬುದಕ್ಕೆ ಪುರಾವೆಯನ್ನು ಒದಗಿಸಿದೆ.

ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಬರ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ರಾಷ್ಟ್ರಮಟ್ಟದಲ್ಲಿ ಸ್ಥಾಪನೆಯಾಗಿರುವ ಬೆಳೆ ಹವಾಮಾನ ನಿಗಾ ಗುಂಪು (ಸಿಡಬ್ಲ್ಯೂಡಬ್ಲ್ಯೂಜಿ) ಮಾದರಿಯಲ್ಲಿ ರಾಜ್ಯ ಸರ್ಕಾರವು ರಚಿಸಿತ್ತು. ಭಾರತದ ಸರ್ಕಾರದ ಬರ ಕೈಪಿಡಿ 2020ರ  ಪ್ರಕಾರ ಜೂನ್‌ನಿಂದ ಸೆಪ್ಟಂಬರ್‍‌ವರೆಗೆ ಅಂದರೇ ಮಳೆಗಾಲದಲ್ಲಿ ವಾರಕ್ಕೊಮ್ಮೆ ಸಭೆ ಸೇರಬೇಕಿತ್ತು. ಬರದ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಬರಗಾಲದ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಭೆಗಳನ್ನು ನಡೆಸಬೇಕಿತ್ತು. ಆದರೆ 2017ರಿಂದ 2022ರವರ ಅವಧಿಯಲ್ಲಿ ಊಹಿಸಿದಂತೆ ಸಿಡಬ್ಲ್ಯೂಡಬ್ಲ್ಯೂಜಿ ಸಭೆಗಳನ್ನೇ ನಡೆಸಿರಲಿಲ್ಲ ಎಂದು ಲೆಕ್ಕ ಪರಿಶೋಧನೆ ವರದಿಯಿಂದ ಗೊತ್ತಾಗಿದೆ.

2018-19ರ ಬರಗಾಲದ ವರ್ಷದಲ್ಲಿ ನಡೆದ ಸಭೆಗಳ ನಡವಳಿಗಳನ್ನು ಪರಿಶೀಲನೆ ನಡೆಸಿದ್ದ ಸಿಎಜಿಯು, ರಾಜ್ಯದಲ್ಲಿನ ಬರ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡಲು ಪ್ರತಿ ವಾರ ಸಭೆ ಸೇರಲು ನಿರ್ಧರಿಸಿತ್ತು ಎಂಬುದನ್ನು ಗಮನಿಸಿದೆ. ಆದರೂ 2018ರಲ್ಲಿ ಯಾವುದೇ ಸಭೆಗಳನ್ನೇ ನಡೆಸಿಲ್ಲ. ಸಿಡಬ್ಲ್ಯೂಡಬ್ಲ್ಯೂಜಿಯ ಸಾಕಷ್ಟು ಮೇಲ್ವಿಚಾರಣೆ ಮತ್ತು ಮಾರ್ಗದರ್ಶನ ಕೊರತೆಯೂ ಕಂಡು ಬಂದಿತ್ತು.

ಹೀಗಾಗಿ ಮೂರು ತಿಂಗಳ ಹಿಂದೆ ತೀವ್ರ ಮಳೆ, ಪ್ರವಾಹ, ಭೂ ಕುಸಿತವನ್ನು ಎದುರಿಸಿದ ಜಿಲ್ಲೆಗಳು, ತಾಲೂಕುಗಳು ಸೇರಿದಂತೆ ರಾಜ್ಯವನ್ನು ಒಳಗೊಂಡಿರುವ ಬರಗಾಲಕ್ಕೆ ಸನ್ನದ್ಧನೆ ಮತ್ತು ಪ್ರತಿಕ್ರಿಯೆ ಮೇಲೆ ಭಾರೀ ಪರಿಣಾಮ ಬೀರಿತ್ತು ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯವು ಪ್ರವಾಹವನ್ನು ಅನುಭವಿಸಿದೆ. ಮತ್ತು 2023-24ರಲ್ಲಿ ಮಾತ್ರ ಬರಪೀಡಿತವಾಗಿತ್ತು. ಹೀಗಾಗಿ ಸಿಡಬ್ಲ್ಯೂಡಬ್ಲ್ಯೂಜಿ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದೆ. ಮತ್ತು 14 ಬಾರಿ ಸಭೆಗಳನ್ನು ನಡೆಸಿದೆ ಎಂದು ರಾಜ್ಯ ಸರ್ಕಾರವು 2024ರ ಆಗಸ್ಟ್‌ನಲ್ಲಿ ಹೇಳಿದೆ. ಬರದ ಸಮಯದಲ್ಲಿ ಮಾತ್ರವಲ್ಲದೇ ಇತರೆ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿಯೂ ಉದ್ಭವಿಸುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಿಡಬ್ಲ್ಯೂಡಬ್ಲ್ಯೂಜಿ ಸಭೆ ಸೇರಬೇಕು. ಹೀಗಾಗಿ ರಾಜ್ಯ ಸರ್ಕಾರವು 2024ರ ಆಗಸ್ಟ್‌ನಲ್ಲಿ ನೀಡಿರುವ ಉತ್ತರವು ಸಮರ್ಥನೀಯವಾಗಿಲ್ಲ ಎಂದು ಸಿಎಜಿಯು ಹೇಳಿದೆ.

 

 

 

‘2018ರ ಬರ ವರ್ಷದಲ್ಲಿ ಸಿಡಬ್ಲ್ಯೂಡಬ್ಲ್ಯೂಜಿಯ ಸಭೆಗಳಲ್ಲಿನ ಕೊರತೆಯ ಬಗ್ಗೆ ಸರ್ಕಾರದ ಉತ್ತರವು ಮೌನವಾಗಿದೆ. ಅಲ್ಲಿ ಅಂದಾಜು ಬೆಳೆ ನಷ್ಟವು 28,046 ಕೋಟಿಗಳಷ್ಟಿತ್ತು,’ ಸಿಎಜಿ ವರದಿಯಲ್ಲಿ ವಿವರಿಸಿದೆ.

ಡಿಎಂಐಎಸ್‌ ನಿರ್ವಹಿಸಿರಲಿಲ್ಲ

ಬರ ನಿರ್ವಹಣೆಯ ವಿವಿಧ ಅಂಶಗಳ ಬಗ್ಗೆ ರಾಜ್ಯ ಸರ್ಕಾರವು ರಾಜ್ಯಮಟ್ಟದಲ್ಲಿ ಬರ ನಿರ್ವಹಣಾ  ಮಾಹಿತಿ ವ್ಯವಸ್ಥೆ (ಡಿಎಂಐಎಸ್‌) ಅಭಿವೃದ್ಧಿಪಡಿಸಬೇಕಿತ್ತು. ಬರ ಕೈಪಿಡಿಯಲ್ಲಿ ಇದು ಕೂಡ ಒಂದು ಷರತ್ತು. ಅಲ್ಲದೇ ಇದನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪುನರಾವರ್ತಿಸಬೇಕು. ಪ್ರತೀ ಹಂತದಲ್ಲಿ ಉನ್ನತ ಮಟ್ಟದಲ್ಲಿ ಡಿಎಂಐಎಸ್‌ನ್ನು ಬೆಂಬಲಿಸುವ ಮಾಹಿತಿಯೊಂದಿಗೆ ಪುನರಾವರ್ತಿಸಬೇಕು. ಬರಗಾಲದ ಅವಧಿಯಲ್ಲಂತೂ ಡಿಎಂಐಎಸ್‌ನ್ನು ಪ್ರತೀ ವಾರವೂ ನವೀಕರಿಸಬೇಕಿತ್ತು.  ಆದರೆ  ರಾಜ್ಯ ಸರ್ಕಾರವು ಇಂತಹ ವ್ಯವಸ್ಥೆಯನ್ನೇ  ನಿರ್ವಹಿಸಿರಲಿಲ್ಲ.

‘ರಾಜ್ಯ ಸರ್ಕಾರ, ನೋಡಲ್‌ ಇಲಾಖೆಯು ನಿಗದಿತ ಡಿಎಂಐಎಸ್‌ನ್ನು ರಾಜ್ಯಮಟ್ಟದಲ್ಲಿ ಅಥವಾ ಜಿಲ್ಲೆ, ತಾಲೂಕು ಮಟ್ಟದಲ್ಲಿ ನಿರ್ವಹಿಸಿರಲಿಲ್ಲ. ಇರ ಪರಿಣಾಮವಾಗಿ ಬರಗಾಲದ ಪ್ರಮುಖ ಸೂಚಕಗಳು, ಬರ ಪರಿಹಾರಕ್ಕಾಗಿ ಉದ್ಯೋಗ, ರೈತರಿಗೆ ಬೆಂಬಲ, ಆಹಾರ ಭದ್ರತೆ, ಕುಡಿಯುವ ನೀರು, ಮೇವು, ಮೇವಿನ ಪೂರೈಕೆ, ಆರೋಗ್ಯ ಮತ್ತು ನೈರ್ಮಲ್ಯದಂತಹ ಪ್ರಮುಖ ಮಧ್ಯಸ್ಥಿಕೆಗಳ ಬಗ್ಗೆ ಅಗತ್ಯವಾದ ಮಾಹಿತಿಯನ್ನೇ ಸಂಗ್ರಹಿಸಲಾಗಿಲ್ಲ,’ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಬರಗಾಲಕ್ಕೆ ಕಾರಣವಾಯಿತೇ ಸಮನ್ವಯ ಕೊರತೆ?

ಕೃಷಿ, ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ ಮತ್ತು ಪಶು ಸಂಗೋಪನೆ ಇಲಾಖೆಗಳು ಎಸ್‌ಡಿಎಂಪಿ ಮತ್ತು ರಾಜ್ಯದಲ್ಲಿ ವಿಪತ್ತುಗಳ ನಿರ್ವಹಣೆ ಬಗ್ಗೆ ಮಾಹಿತಿ ತಯಾರಿಸುವಲ್ಲಿ ಹಿಂದೆ ಬಿದ್ದಿದ್ದವು. ಮತ್ತು ಈ ಇಲಾಖೆಗಳ ಮಧ್ಯೆ ಸಮನ್ವಯತೆ ಕೊರತೆ ಎದ್ದು ಕಾಣುತ್ತಿತ್ತು ಎಂದು ಸಿಎಜಿ ವರದಿ ಹೇಳಿದೆ.

ಈ ಮೂರೂ ಇಲಾಖೆಗಳು ಎನ್‌ಡಿಎಂಎ ಮಾರ್ಗಸೂಚಿಗಳು ಮತ್ತು ಕೈಪಿಡಿಯಲ್ಲಿನ ಅನುಸರಣೆಗಳಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನೂ ಒದಗಿಸಲಿಲ್ಲ. ಹೀಗಾಗಿ ನೋಡಲ್‌ ಇಲಾಖೆಯು ತನ್ನ ಉತ್ತರದಾಯಿತ್ವವನ್ನೂ ಖಾತ್ರಿ ಪಡಿಸಲಿಲ್ಲ. ‘ಹೀಗಾಗಿ ಬರ ನಿವಾರಣೆ ಕ್ರಮಗಳನ್ನು ಪ್ರಾರಂಭಿಸಲು ಸಂಬಂಧಿತ ಇಲಾಖೆಗಳ ನಡುವೆ ಪರಿಣಾಮಕಾರಿ ಸಮನ್ವಯದ ಕೊರತೆಯು ಕರ್ನಾಟಕದಲ್ಲಿ ವರ್ಷಗಳಲ್ಲಿ ದೀರ್ಘಕಾಲದ ಬರಗಾಲಕ್ಕೆ ಕಾರಣವಾಯಿತು,’ ಎಂದು ಸಿಎಜಿ ಅಭಿಪ್ರಾಯಿಸಿರುವುದು ವರದಿಯಿಂದ ತಿಳಿದು ಬಂದಿದೆ.

ಮಿಷನ್‌ ಕಾರ್ಯಪಡೆಯ ಅನುಪಸ್ಥಿತಿ

ಭಾರತ ಸರ್ಕಾರದ ಬರ ಕೈಪಿಡಿ 2016ರ ಪ್ರಕಾರ ಬರ ನಿರ್ವಹಣೆಗಾಗಿ ರಾಜ್ಯ ಸರ್ಕಾರ ಅಥವಾ ಆಡಳಿತ ವ್ಯವಸ್ಥೆಯು ಒಂದು ಅಭಿಯಾನ, ಕಾರ್ಯಪಡೆ ಸ್ಥಾಪಿಸಬೇಕು ಎಂದು ಶಿಫಾರಸ್ಸು ಮಾಡಿತ್ತು. ಇದು ದೈನಂದಿನ ಬರ ನಿರ್ವಹಣೆಯಲ್ಲಿ ತೊಡಗುವುದಿಲ್ಲ. ಆದರೆ ನೀತಿಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವ ಒಂದು ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಕಾರ್ಯಪಡೆಯು ಜಲಸಂಪನ್ಮೂಲಗಳು, ಕೃಷಿ, ಅರಣ್ಯ ಮತ್ತು ಸಂಬಂಧಿತ ವಿಷಯಗಳ ತಜ್ಞರು, ಈ ವಿಷಯಗಳೊಂದಿಗೆ ವ್ಯವಹರಿಸುವ ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಎನ್‌ಜಿಒಗಳನ್ನು ಒಳಗೊಂಡಿರಬೇಕು.

 

 

 

2022-23ರ ಹೊತ್ತಿಗೆ ಬರ ಶಮನಗೊಳಿಸಲು ರಾಜ್ಯದಲ್ಲಿ ಉದ್ದೇಶಿತ ಮಿಷನ್, ಕಾರ್ಯಪಡೆಯನ್ನು ಸ್ಥಾಪಿಸಿರಲಿಲ್ಲ ಎಂಬುದನ್ನು ಲೆಕ್ಕ ಪರಿಶೋಧನೆಯು ಗಮನಿಸಿದೆ. ಹೀಗಾಗಿ ಬರಗಾಲದ ಮಾದರಿಗಳನ್ನು, ರಾಜ್ಯದ ಕ್ಷೇತ್ರಗಳಾದ್ಯಂತ ಪರಿಣಾಮಗಳ ವಿತರಣೆ ವಿಶ್ಲೇಷಣೆ ಮಾಡುವುದು, ಬರಗಾಲದ ವಿವಿಧ ಸೂಚ್ಯಂಕಗಳ ದತ್ತಾಂಶವನ್ನು ಅಭಿವೃದ್ಧಿ ಪಡಿಸುವುದು ಮತ್ತು ಬರ ನಿರ್ವಹಣೆಗಾಗಿ ನೀತಿಗಳು, ಕಾರ್ಯಕ್ರಮಗಳನ್ನು ಸೂಚಿಸುವುದಂತಹ ಕಡ್ಡಾಯ ಚಟುವಟಿಕೆಗಳನ್ನೇ ನಡೆಸಲಾಗಲಿಲ್ಲ.

‘ಬರ ನಿರ್ವಹಣೆಗಾಗಿ ನೀತಿಗಳು ಮತ್ತು ಕಾರ್ಯಕ್ರಮಗಳ ವಿಷಯಗಳ ಬಗ್ಗೆ ಸಲಹೆ ನೀಡಲು ಅಂತಹ ಕಾರ್ಯಪಡೆ ರಚಿಸಲು ನಿಗದಿಪಡಿಸಿದ ಬರ ಕೈಪಿಡಿ ಪ್ರಕಾರ ರಾಜ್ಯ ಮಟ್ಟದಲ್ಲಿ ಕಾರ್ಯಪಡೆಯನ್ನೇ ರಚಿಸಿಲ್ಲ. ಹೀಗಾಗಿ ಸರ್ಕಾರವು ತಪ್ಪುದಾರಿಗೆಳೆಯುವ ಉತ್ತರವನ್ನು ನೀಡಿದೆ. ಸರ್ಕಾರವು ಉಲ್ಲೇಖಿಸಿದ ಕಾರ್ಯಪಡೆಯನ್ನು ಕೇವಲ ತಾಲೂಕುಮಟ್ಟದಲ್ಲಿ ಮಾತ್ರ ರಚಿಸಲಾಗಿದೆಯೇ ಹೊರತು ರಾಜ್ಯಮಟ್ಟದಲ್ಲಿ ಅಲ್ಲ,’ ಎಂದು ಲೆಕ್ಕ ಪರಿಶೋಧನೆಯು ತನ್ನ ಅವಲೋಕನದಲ್ಲಿ ವಿಶ್ಲೇಷಿಸಿದೆ.

 

 

ಬರ ಪೀಡಿತ ಪ್ರದೇಶಗಳು, ಅಂದಾಜು ಬೆಳೆ ನಷ್ಟ, ಜಾನುವಾರುಗಳ ನಷ್ಟದ ದತ್ತಾಂಶಗಳು ನೋಡಲ್ ಇಲಾಖೆಯಲ್ಲಿ ಲಭ್ಯವಿವೆ. ಹೈನುಗಾರಿಕೆ ಉತ್ಪಾದನೆಯಲ್ಲಿನ ಕುಸಿತ, ಕೈಗಾರಿಕೆ ಮತ್ತು ಇಂಧನ ಉತ್ಪಾದನೆಯ ನಷ್ಟ ಮತ್ತು ರಾಜ್ಯದಲ್ಲಿ ಪರಿಸರದ ಮೇಲೆ  ವ್ಯತಿರಿಕ್ತ ಪರಿಣಾಮಗಳಂತಹ  ಸಾಮಾಜಿಕ, ಆರ್ಥಿಕ ಅಂಶಗಳ ವಿವರಗಳನ್ನು ಮೌಲ್ಯಮಾಪನ ಮಾಡಿಲ್ಲ ಮತ್ತು ಅದನ್ನು ದಾಖಲೆ ರೂಪದಲ್ಲಿಯೂ ಇಟ್ಟಿಲ್ಲ. ಬರ ನಿರೋಧಕ, ಬರ ಶಮನ ಚಟುವಟಿಕೆಗಳಲ್ಲಿ ಸಮುದಾಯಗಳು, ಎನ್‌ಜಿಒಗಳು, ಸಿಎಸ್‌ಒಗಳನ್ನು ರಾಜ್ಯ ಸರ್ಕಾರವು ತೊಡಗಿಸಿಕೊಂಡಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

Hot this week

866.59 ಕೋಟಿ ರು ಮೊತ್ತದ 399 ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆಗೆ ಬಾಕಿ ಉಳಿಸಿಕೊಂಡ ಇಲಾಖೆಗಳು; ಅನುದಾನ ದುರುಪಯೋಗ ಸಾಧ್ಯತೆ?

ಬೆಂಗಳೂರು; ರಾಜ್ಯದ ಹಲವು ಇಲಾಖೆಗಳು ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಕೆಯಲ್ಲಿ ತೀವ್ರ...

ಸರ್ಕಾರಿ ಸೇವೆ; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರಾತಿನಿಧ್ಯ ಎರಡು ವರ್ಷದಲ್ಲಿ ಇಳಿಕೆಯಾಗಿದೆಯೇ?

ಬೆಂಗಳೂರು; ರಾಜ್ಯ ಸರ್ಕಾರದ ಶಿಕ್ಷಣ, ಒಳಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ; ಅಧಿಕಾರಿಗಳ ವಿರುದ್ಧ ದಾಖಲಾಗದ ಎಫ್‌ಐಆರ್, ವರದಿ ಸಲ್ಲಿಸಲು ಸೂಚನೆ

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ತವರು ಕ್ಷೇತ್ರದಲ್ಲಿ...

13 ಪರ್ಸೆಂಟ್ ಕಮಿಷನ್‌ಗೆ ಬೇಡಿಕೆ; ಗುತ್ತಿಗೆದಾರರ ಸಂಘದಿಂದ ಮತ್ತೊಂದು ಪತ್ರ, ಕೋರ್ಟ್‌ ಕದ ತಟ್ಟಿದ ಗುತ್ತಿಗೆದಾರರು

ಬೆಂಗಳೂರು;  ಮಹಾತ್ಮಗಾಂಂಧಿ ನಗರ ವಿಕಾಸ ಯೋಜನೆ -1 ರ ಅಡಿಯಲ್ಲಿ ಕಾಮಗಾರಿ...

Topics

866.59 ಕೋಟಿ ರು ಮೊತ್ತದ 399 ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆಗೆ ಬಾಕಿ ಉಳಿಸಿಕೊಂಡ ಇಲಾಖೆಗಳು; ಅನುದಾನ ದುರುಪಯೋಗ ಸಾಧ್ಯತೆ?

ಬೆಂಗಳೂರು; ರಾಜ್ಯದ ಹಲವು ಇಲಾಖೆಗಳು ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಕೆಯಲ್ಲಿ ತೀವ್ರ...

ಸರ್ಕಾರಿ ಸೇವೆ; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರಾತಿನಿಧ್ಯ ಎರಡು ವರ್ಷದಲ್ಲಿ ಇಳಿಕೆಯಾಗಿದೆಯೇ?

ಬೆಂಗಳೂರು; ರಾಜ್ಯ ಸರ್ಕಾರದ ಶಿಕ್ಷಣ, ಒಳಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

ಬಳಕೆಯಾಗದ ಅನುದಾನ; ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗಿಲ್ಲ 10,546.42 ಕೋಟಿ, ಸಿಎಜಿ ಆಕ್ಷೇಪಣೆ

ಬೆಂಗಳೂರು; ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ 2024-25ನೇ ಸಾಲಿನಲ್ಲಿ   ಒಟ್ಟು...

13,646.51 ಕೋಟಿ ಹೆಚ್ಚುವರಿ ವೆಚ್ಚ; ಗೃಹ ಲಕ್ಷ್ಮಿಯದ್ದೇ ಸಿಂಹಪಾಲು, ಹೆಚ್ಚುವರಿ ಖರ್ಚಿಗೆ ಕಾರಣಗಳೇ ಇಲ್ಲ, ಸಿಎಜಿ ಆಕ್ಷೇಪ

ಬೆಂಗಳೂರು;  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯು 2024-25ನೇ ಸಾಲಿನಲ್ಲಿ ...

Related Articles

Popular Categories

error: Content is protected !!