ಬೆಂಗಳೂರು; 2024-25ನೇ ಸಾಲಿನ ಬಜೆಟ್‌ನಲ್ಲಿ ಹಂಚಿಕೆಯಾಗಿದ್ದ 3,32,407 ಕೋಟಿ ರು ಅನುದಾನದ ಪೈಕಿ 2025ರ ಮಾರ್ಚ್ 24ರ ಅಂತ್ಯಕ್ಕೆ 2,93,524.70 ಕೋಟಿ ರು ಬಿಡುಗಡೆಯಾಗಿದೆ. ಇದರ ಪ್ರಕಾರ ಬಿಡುಗಡೆಗೆ ಇನ್ನೂ 38,882.26 ಕೋಟಿ ರು ಬಿಡುಗಡೆಗೆ ಬಾಕಿ ಇದೆ.
ಬಿಡುಗಡೆ ಮಾಡಿದ್ದ ಒಟ್ಟು ಅನುದಾನದಲ್ಲಿ 2025ರ ಮಾರ್ಚ್ 24ರ ಅಂತ್ಯಕ್ಕೆ 2,82,237.59 ಕೋಟಿ ರು ವೆಚ್ಚವಾಗಿದೆ. ವೆಚ್ಚಕ್ಕೆ ಇನ್ನೂ 50,169.41 ಕೋಟಿ ರು ಬಾಕಿ ಇದೆ. ಬಿಡುಗಡೆ ಮತ್ತು ವೆಚ್ಚಕ್ಕೆ ಒಟ್ಟಾರೆ 89,051.67 ಕೋಟಿ ರು ಬಾಕಿ ಇದೆ.
2024-25ನೇ ಸಾಲಿನ ವೆಚ್ಚಕ್ಕೆ ಸಂಬಂಧಿಸಿದಂತೆ 2025ರ ಮಾರ್ಚ್ 28ರಂದು ನಡೆದಿದ್ದ ಕೆಡಿಪಿ ಸಭೆಗೆ ಇಲಾಖೆಗಳು ಕಾರ್ಯಕ್ರಮವಾರು ಆಗಿರುವ ವೆಚ್ಚದ ಮಾಹಿತಿಯನ್ನು ಅಂಕಿ ಅಂಶಗಳೊಂದಿಗೆ ಸಲ್ಲಿಸಿದೆ. ಇದರ ಸಂಪೂರ್ಣ ಮಾಹಿತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕಳೆದ ವರ್ಷ (2023-24)ದಲ್ಲಿ ಮಾರ್ಚ್ 24ರ ಅಂತ್ಯಕ್ಕೆ 2,76,242.61 ಕೋಟಿ ರು ವೆಚ್ಚವಾಗಿತ್ತು. ಇದಕ್ಕೆ ಹೋಲಿಸಿದರೆ ಪ್ರಸಕ್ತ ಆರ್ಥಿಕ ಸಾಲಿನಲ್ಲಿ 5,994.98 ಕೋಟಿ ರು ಮಾತ್ರ ಹೆಚ್ಚು ವೆಚ್ಚವಾಗಿದೆ. ಈ ಅಂಕಿ ಅಂಶದ ಪ್ರಕಾರ 2023-24ರಲ್ಲಿ ಶೇ.93.67ರಷ್ಟು ವೆಚ್ಚವಾಗಿತ್ತು. 2024-25ನೇ ಸಾಲಿನ ಮಾರ್ಚ್ 24ರ ಅಂತ್ಯಕ್ಕೆ ಶೇ.84.91ರಷ್ಟು ವೆಚ್ಚವಾಗಿರುವುದು ಗೊತ್ತಾಗಿದೆ.
ಜಲ ಸಂಪನ್ಮೂಲ ಇಲಾಖೆಗೆ ಹಂಚಿಕೆಯಾಗಿದ್ದ ಒಟ್ಟು 18,832.93 ಕೋಟಿ ರು ಪೈಕಿ ಮಾರ್ಚ್ 24ರ ಅಂತ್ಯಕ್ಕೆ 15,783.63 ಕೋಟಿ ರು ಬಿಡುಗಡೆಯಾಗಿದೆ. ಬಿಡುಗಡೆಗೆ 3,049.3 ಕೋಟಿ ರು ಬಾಕಿ ಇದ್ದರೇ ಬಿಡುಗಡೆಯಾಗಿರುವ ಒಟ್ಟು ಅನುದಾನದಲ್ಲಿ 14,828.73 ಕೋಟಿ ರು ವೆಚ್ಚವಾಗಿದೆ. ವೆಚ್ಚಕ್ಕೆ 954.9 ಕೋಟಿ ರು ಬಾಕಿ ಇರಿಸಿಕೊಂಡಿದೆ.
ಆರೋಗ್ಯ ಇಲಾಖೆಯಲ್ಲಿ ಹಂಚಿಕೆಯಾಗಿರುವ ಒಟ್ಟು 10,897.13 ಕೋಟಿ ರು ಪೈಕಿ 10,445.14 ಬಿಡುಗಡೆಯಾಗಿದೆ. ಬಿಡುಗಡೆಗೆ 441.99 ಕೋಟಿ ರು ಬಾಕಿ ಇದೆ. ಬಿಡುಗಡೆಯಾಗಿರುವ ಒಟ್ಟು ಅನುದಾನದಲ್ಲಿ 9,827.85 ಕೋಟಿ ರು ವೆಚ್ಚವಾಗಿದೆ. ವೆಚ್ಚಕ್ಕೆ ಇನ್ನೂ 617.29 ಕೋಟಿ ರು ಬಾಕಿ ಇದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 35,621.52 ಕೋಟಿ ರು.ನಲ್ಲಿ 28,389.94 ಕೋಟಿ ರು ಬಿಡುಗಡೆಯಾಗಿದೆ. ಬಿಡುಗಡೆಯಾಗಿರುವ ಅನುದಾನಕ್ಕಿಂತಲೂ 495.2 ಕೋಟಿ ರು. (28,885 ಕೋಟಿ ರು ) ಹೆಚ್ಚಿಗೆ ವೆಚ್ಚ ಮಾಡಿದೆ. ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆಯಲ್ಲಿ 18,894.72 ಕೋಟಿ ರು ಅನುದಾನದ ಪೈಕಿ 18,074.98 ಕೋಟಿ ರು ಬಿಡುಗಡೆಯಾಗಿದೆ. ಈ ಪೈಕಿ 17,581.37 ಕೋಟಿ ರು ವೆಚ್ಚ ಮಾಡಿರುವ ಇಲಾಖೆಯು ವೆಚ್ಚಕ್ಕೆ 483.61 ಕೋಟಿ ರು ಬಾಕಿ ಉಳಿಸಿಕೊಂಡಿದೆ.
ಕಂದಾಯ ಇಲಾಖೆಯಲ್ಲಿ 3,235.38 ಕೋಟಿ ರು ಅನುದಾನ ಒದಗಿಸಿತ್ತು. ಇದರಲ್ಲಿ 3,128.63 ಕೋಟಿ ರು ಬಿಡುಗಡೆ ಮಾಡಿತ್ತು. ಈ ಪೈಕಿ 2,694.66 ಕೋಟಿ ರು ವೆಚ್ಚವಾಗಿದೆ. 433.97 ಕೋಟಿ ರು ಗಳನ್ನು ಖರ್ಚು ಮಾಡಲು ಬಾಕಿ ಇರಿಸಿಕೊಂಡಿರುವುದು ತಿಳಿದು ಬಂದಿದೆ.
ಕೃಷಿ ಇಲಾಖೆಯಲ್ಲಿ 5,252.20 ಕೋಟಿ ರು ಪೈಕಿ 4,676.64 ಕೋಟಿ ರು ಬಿಡುಗಡೆಯಾಗಿದೆ. ಬಿಡುಗಡೆಯಾಗಿರುವ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಖರ್ಚು ಮಾಡಿದೆ. ಹಿಂದುಳಿದ ವರ್ಗಗಳ ಇಲಾಖೆಗೆ ನಿಗದಿಯಾಗಿದ್ದ 3,483.82 ಕೋಟಿ ರು ಪೈಕಿ 3,392.76 ಕೋಟಿ ರು ಬಿಡುಗಡೆ ಮಾಡಿದೆ. ಬಿಡುಗಡೆಗೆ 91.06 ಕೋಟಿ ರು ಬಾಕಿ ಇರಿಸಿಕೊಂಡಿದೆ. ಬಿಡುಗಡೆಯಾಗಿದ್ದ ಅನುದಾನದಲ್ಲಿ 3,063.35 ಕೋಟಿ ರು ಖರ್ಚು ಮಾಡಿರುವ ಇಲಾಖೆಯು 329.41 ಕೋಟಿ ರು ವೆಚ್ಚಕ್ಕೆ ಬಾಕಿ ಉಳಿಸಿಕೊಂಡಿದೆ. ಅದೇ ರೀತಿ ಸಣ್ಣ ನೀರಾವರಿ ಇಲಾಖೆಯಲ್ಲಿ 2,808.95 ಕೋಟಿ ರು ಅನುದಾನದ ಪೈಕಿ 2,405.48 ಕೋಟಿ ರು ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿರುವ ಅನುದಾನದಲ್ಲಿ 2,079.34 ಕೋಟಿ ರು ವೆಚ್ಚ ಮಾಡಿರುವ ಇಲಾಖೆಯು 326.14 ಕೋಟಿ ರು ಬಾಕಿ ಇರಿಸಿಕೊಂಡಿರುವುದು ಗೊತ್ತಾಗಿದೆ.
ಪರಿಶಿಷ್ಟ ಪಂಗಡಗಳ ಇಲಾಖೆಯಲ್ಲಿ 1,832.10 ಕೋಟಿ ರು ಒಟ್ಟು ಅನುದಾನದ ಪೈಕಿ 1,626.30 ಕೋಟಿ ರು ಬಿಡುಗಡೆ ಮಾಡಿದೆ. ಇದರಲ್ಲಿ 1,327.93 ಕೋಟಿ ರು ವೆಚ್ಚ ಮಾಡಿದೆ. ವೆಚ್ಚಕ್ಕೆ 298.37 ಕೋಟಿ ರು ಬಾಕಿ ಇದೆ. ಉನ್ನತ ಶಿಕ್ಷಣದಲ್ಲಿ 5,613.72 ಕೋಟಿ ರುನಲ್ಲಿ 5,398.84 ಕೋಟಿ ರು ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿರುವ ಒಟ್ಟು ಅನುದಾನದಲ್ಲಿ 5,103.94 ಕೋಟಿ ರು ವೆಚ್ಚ ಮಾಡಿರುವ ಇಲಾಖೆಯು 294.9 ಕೋಟಿ ರು ಬಾಕಿ ಉಳಿಸಿಕೊಂಡಿದೆ.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ನಿಗದಿಯಾಗಿದ್ದ 1,145.64 ಕೋಟಿ ರು ಪೈಕಿ 1,124.67 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ 947.86 ಕೋಟಿ ರು ವೆಚ್ಚವಾಗಿದೆ. ಖರ್ಚು ಮಾಡಲು ಇನ್ನೂ 176.81 ಕೋಟಿ ರು ಬಾಕಿ ಇರಿಸಿಕೊಂಡಿದೆ. ಕೌಶಲ್ಯಾಭಿವೃದ್ಧಿ ಇಲಾಖೆಯಲ್ಲಿ 2,158.39 ಕೋಟಿ ರು ಅನುದಾನದ ಪೈಕಿ 1,784.44 ಕೋಟಿ ರು ಬಿಡುಗಡೆಯಾಗಿದೆ. ಬಿಡುಗಡೆ ಮಾಡಿರುವ ಅನುದಾನಕ್ಕಿಂತಲೂ 114.8 ಕೋಟಿ ರು ಹೆಚ್ಚುವರಿ (1,899.24 ಕೋಟಿ ರು) ಖರ್ಚು ಮಾಡಿದೆ. ಅರಣ್ಯ ಇಲಾಖೆಯು 2,855.00 ಕೋಟಿ ರು ಅನುದಾನದಲ್ಲಿ 2,601.13 ಕೋಟಿ ರು ಬಿಡುಗಡೆಯಾಗಿದೆ. ಈ ಪೈಕಿ 2,450.54 ಕೋಟಿ ರು ವೆಚ್ಚಮಾಡಿರುವ ಇಲಾಖೆಯು ಖರ್ಚಿಗೆ 150.59 ಕೋಟಿ ರು ಬಾಕಿ ಉಳಿಸಿಕೊಂಡಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 4,424.87 ಕೋಟಿ ರು ಒಟ್ಟು ಅನುದಾನದಲ್ಲಿ 4,401.19 ಕೋಟಿ ರು ಬಿಡುಗಡೆಯಾಗಿದೆ. ಈ ಪೈಕಿ 4,258.20 ಕೋಟಿ ರು ಖರ್ಚುಮಾಡಿದೆ. ವೆಚ್ಚಕ್ಕೆ 142.99 ಕೋಟಿ ರು ಬಾಕಿ ಇದೆ. ಆಹಾರ ಇಲಾಖೆಯಲ್ಲಿ 7,931.01 ಕೋಟಿ ರು ಅನುದಾನದ ಪೈಕಿ 7,551.73 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ 7,425.69 ಕೋಟಿ ರು ವೆಚ್ಚವಾಗಿದೆ. ಖರ್ಚು ಮಾಡಲು 126.04 ಕೋಟಿ ರು ಬಾಕಿ ಇರಿಸಿಕೊಂಡಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿಯೂ 2,872.72 ಕೋಟಿ ರು ಪೈಕಿ 2,857.20 ಕೋಟಿ ರು ಬಿಡುಗಡೆ ಮಾಡಿದೆ. ಇದರಲ್ಲಿ 2,749.55 ಕೋಟಿ ರು ವೆಚ್ಚ ಮಾಡಿರುವ ಇಲಾಖೆಯು ಇನ್ನೂ 107.65 ಕೋಟಿ ರು ಬಾಕಿ ಉಳಿಸಿಕೊಂಡಿದೆ.
ವಾಣಿಜ್ಯ ಮತ್ತು ಕೈಗಾರಿಕೆಯ ಸಣ್ಣ ಜವಳಿ, ಗಣಿ ವಿಭಾಗಕ್ಕೆ ನಿಗದಿಯಾಗಿದ್ದ 1,248.96 ಕೋಟಿ ರು ಅನುದಾನದ ಪೈಕಿ 1,220.95 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ 1,124.87 ಕೋಟಿ ರು ವೆಚ್ಚ ಮಾಡಿದೆ. ತೋಟಗಾರಿಕೆಯಲ್ಲಿ 1,886.58 ಕೋಟಿ ರು ಒಟ್ಟು ಅನುದಾನದ ಪೈಕಿ 1,097.86 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ 1,288.55 ಕೋಟಿ ರು ವೆಚ್ಚವಾಗಿದೆ. ಬಿಡುಗಡೆ ಮಾಡಿದ್ದ ಅನುದಾನಕ್ಕಿಂತಲೂ ಹೆಚ್ಚುವರಿಯಾಗಿ 190.69 ಕೋಟಿ ರು ಖರ್ಚು ಮಾಡಿದೆ.
ಸಮಾಜ ಕಲ್ಯಾಣದಲ್ಲಿ 6,044.02 ಕೋಟಿ ರುನಲ್ಲಿ 5,810.52 ಕೋಟಿ ರು ಬಿಡುಗಡೆಯಾಗಿದೆ. ಈ ಪೈಕಿ 5,725.45 ಕೋಟಿ ರು ವೆಚ್ಚ ಮಾಡಿದೆ. 85.07 ಕೋಟಿ ರು.ಗಳನ್ನು ವೆಚ್ಚಕ್ಕೆ ಬಾಕಿ ಉಳಿಸಿಕೊಂಡಿದೆ. ವಾರ್ತೆ ಇಲಾಖೆಯಲ್ಲಿ 341.77 ಕೋಟಿ ರು ನಲ್ಲಿ 303.72 ಕೋಟಿ ರು ವೆಚ್ಚ ಮಾಡಿದೆ. ಸಹಕಾರ ಇಲಾಖೆಯಲ್ಲಿ 2,234.51 ಕೋಟಿ ರು ಅನುದಾನದ ಪೈಕಿ 2,816.97 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ 2,117.36 ಕೋಟಿ ರು ವೆಚ್ಚವಾಗಿದೆ.
ಕಾರ್ಮಿಕ ಇಲಾಖೆಯಲ್ಲಿ 716.98 ಕೋಟಿ ರು ಅನುದಾನದಲ್ಲಿ 659.96 ಕೋಟಿ ರು ಬಿಡುಗಡೆಯಾಗಿದೆ. ನಗರಾಭಿವೃದ್ದಿ ಇಲಾಖೆಯಲ್ಲಿ 8,457.73 ಕೋಟಿ ರು ಅನುದಾನ ನಿಗದಿಯಾಗಿತ್ತು. ಈ ಪೈಕಿ 7,429.90 ಕೋಟಿ ರು ಬಿಡುಗಡೆಯಾಗಿದೆ. ವಿಶೇಷವೆಂದರೇ ಬಿಡುಗಡೆಯಾಗಿದ್ದ ಒಟ್ಟು ಮೊತ್ತಕ್ಕಿಂತಲೂ ಹೆಚ್ಚುವರಿಯಾಗಿ (8,089.19 ಕೋಟಿ) 659.29 ಕೋಟಿ ರು ಖರ್ಚು ಮಾಡಿದೆ.
2024-25ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಅಧಿಕೃತ ಅವಲೋಕನ ವೆಬ್‌ಸೈಟ್‌ನಲ್ಲಿನ ಅಂಕಿ ಅಂಶಗಳ ಪ್ರಕಾರ 3,22.045.31 ಕೋಟಿ ರು ಅನುದಾನ ನಿಗದಿಯಾಗಿದೆ. ಆದರೆ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2025ರ ಫೆ.15ರಂದು ನಡೆದಿದ್ದ ಕೆಡಿಪಿ ಸಭೆಗೆ (ಫೆಬ್ರುವರಿ 10ರ ಅಂತ್ಯಕ್ಕೆ) 3,25,995.13 ಕೋಟಿ ರು ಎಂದು ನಮೂದಿಸಿದೆ. ಒಟ್ಟು ಅನುದಾನಕ್ಕೆ ಸಂಬಂಧಿಸಿದಂತೆ 3,949.82 ಕೋಟಿ ರು ವ್ಯತ್ಯಾಸ ಕಂಡು ಬಂದಿತ್ತು.
ಹಾಗೆಯೇ 2025ರ ಫೆಬ್ರುವರಿ ಅಂತ್ಯಕ್ಕೆ ಒಟ್ಟು ವೆಚ್ಚಕ್ಕೆ ಸಂಬಂಧಿಸಿದಂತೆ ಅವಲೋಕನ ಪ್ರಕಾರ ಕೇವಲ 79,285.43 ಕೋಟಿ ರು ಮಾತ್ರ ವೆಚ್ಚವಾಗಿದೆ. ಆದರೆ ಕೆಡಿಪಿ ಸಭೆ ಪ್ರಕಾರ ಒಟ್ಟು 2,22,452.34 ಕೋಟಿ ರು ವೆಚ್ಚವಾಗಿದೆ. ಇವೆರಡರ ಮಧ್ಯೆ ಒಟ್ಟಾರೆ 1,43,166.91 ಕೋಟಿ ರು ವ್ಯತ್ಯಾಸ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
2024-25 ಬಜೆಟ್; ಬಿಡುಗಡೆಗೆ 82,255.47 ಕೋಟಿ, ಖರ್ಚು ಮಾಡಲು 21,287.35 ಕೋಟಿ ರು ಬಾಕಿ
2024-25ನೇ ಸಾಲಿನ ಬಜೆಟ್‌ಗೆ ಸಂಬಂಧಿಸಿದಂತೆ 2025ರ ಫೆ.15ರಂದು ನಡೆಯಲಿರುವ ಕೆಡಿಪಿ ಸಭೆಗೆ ಇಲಾಖೆಗಳು ಮಂಡಿಸಿರುವ ಖರ್ಚು ವೆಚ್ಚದ ಅಂಕಿ ಅಂಶದ ಮಾಹಿತಿಯಲ್ಲಿನ ವಿವರಗಳಿಗೂ ಅವಲೋಕನ ವೆಬ್‌ಸೈಟ್‌ನಲ್ಲಿನ ಅಂಕಿ ಅಂಶದ ಮಧ್ಯೆ ವ್ಯತ್ಯಾಸಗಳಿದ್ದರೂ ಸಹ ಅಧಿಕಾರಿಗಳು ಇದುವರೆಗೂ ಸರಿಪಡಿಸುವ ಗೋಜಿಗೆ ಹೋಗಿಲ್ಲ.
ಪ್ರಸಕ್ತ 2024-25ನೇ ಸಾಲಿನ ಬಜೆಟ್‌ನಲ್ಲಿ ಒದಗಿಸಿದ್ದ ಒಟ್ಟು ಅನುದಾನದಲ್ಲಿ ಡಿಸೆಂಬರ್ ಅಂತ್ಯಕ್ಕೆ ಶೇ.57.34ರಷ್ಟು ಮಾತ್ರ ವೆಚ್ಚವಾಗಿದೆ. ಕಳೆದ ಸಾಲಿನ ವೆಚ್ಚಕ್ಕೆ ಹೋಲಿಸಿದರೇ ಈ ಸಾಲಿನ ಡಿಸೆಂಬರ್ ಅಂತ್ಯಕ್ಕೆ ಕೇವಲ ಶೇ.2.3ರಷ್ಟು ಮಾತ್ರ ಪ್ರಗತಿಯಾಗಿತ್ತು.
ಡಿಸೆಂಬರ್ ಅಂತ್ಯಕ್ಕೆ ಶೇ.57.34ರಷ್ಟು ಮಾತ್ರ ವೆಚ್ಚ, ಕಳೆದ ಸಾಲಿಗೆ ಹೋಲಿಸಿದರೆ ಕೇವಲ ಶೇ.2.3ರಷ್ಟೇ ಪ್ರಗತಿ
ಅಕ್ಟೋಬರ್ 21ರಂದೇ ನಡೆದಿದ್ದ ಕೆಡಿಪಿ ಸಭೆಯ ನಡವಳಿಯಲ್ಲೇ ದಾಖಲಾಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಅನುದಾನದಲ್ಲಿ ಶೇ.46ರಷ್ಟು ವೆಚ್ಚ ಮಾಡಲಾಗಿದೆ ಎಂದು ಹೇಳಿದ್ದರು.
ಕೆಡಿಪಿ ಪ್ರಕಾರ ಶೇ.35.41ರಷ್ಟೇ ಪ್ರಗತಿ, ಸಿಎಂ ಪ್ರಕಾರ ಶೇ.46ರಷ್ಟು ವೆಚ್ಚ; ವಾಸ್ತವ ಮರೆಮಾಚಲಾಗಿದೆಯೇ?
2024-25ನೇ ಸಾಲಿನಲ್ಲಿ ಆಯವ್ಯಯ ಅಂದಾಜು 3,11,586, ಪ್ರಾಥಮಿಕ ಶಿಲ್ಕು 17,574 ಕೋಟಿ ಸೇರಿ ಒಟ್ಟು 3,29,160 ಕೋಟಿ ರು. ಇದೆ. ಈ ಪೈಕಿ ಅಕ್ಟೋಬರ್ 21ರ ಅಂತ್ಯಕ್ಕೆ 1,50,834.97 ಕೋಟಿ ರು. ಬಿಡುಗಡೆ ಆಗಿದೆ. ಇದರಲ್ಲಿ 1,33,827.97 ಕೋಟಿ ರು. ಖರ್ಚಾಗಿದೆ. ಒಟ್ಟು ಅನುದಾನಕ್ಕೆ ಶೇ. 35.41ರಷ್ಟು ಪ್ರಗತಿಯಾಗಿತ್ತು.
ಶೇ.35.41ರಷ್ಟು ವೆಚ್ಚ; ಹಗರಣಗಳಲ್ಲಿ ಉಸಿರು ಕಟ್ಟಿದ ಸರ್ಕಾರ, ಮೈಗಳ್ಳರಿಗೆ ಸ್ವರ್ಗಸೀಮೆಯಾಯಿತೇ?
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸಚಿವರಾಗಿರುವ ನಗರಾಭಿವೃದ್ಧಿ ಇಲಾಖೆಯಲ್ಲಿಯೂ ಕಡಿಮೆ ಪ್ರಗತಿ ಆಗಿದೆ. ಸ್ವಚ್ಛ ಭಾರತ (ನಗರ) ಕಾರ್ಯಕ್ರಮಗಳಡಿಯಲ್ಲಿ ಆರಂಭಿಕ ಶಿಲ್ಕಿನ ರೂಪದಲ್ಲಿ 1,012.00 ಕೋಟಿ ರು. ಇದೆ. ಆದರೆ ಬಹಳ ಕಡಿಮೆ ವೆಚ್ಚವಾಗಿತ್ತು.
ಅರ್ಧ ವರ್ಷ ಕಳೆದರೂ 22 ಇಲಾಖೆಗಳಲ್ಲಿ ಖರ್ಚೇ ಆಗದ 32,250.02 ಕೋಟಿ; ಕುಸಿದ ಆಡಳಿತ ಯಂತ್ರ?
ಸಣ್ಣ ನೀರಾವರಿ ಇಲಾಖೆಗೆ ಹಂಚಿಕೆಯಾಗಿದ್ದ ಒಟ್ಟು 2,388.49 ಕೋಟಿ ರು. ಅನುದಾನದ ಪೈಕಿ 1,003.54 ಕೋಟಿ ರು (ಶೇ.42.02) ಬಿಡುಗಡೆಯಾಗಿದೆ. ಇದರಲ್ಲಿ ಸೆ.21ರ ಅಂತ್ಯಕ್ಕೆ 761.92 ಕೋಟಿ ರು. ಮಾತ್ರ ಖರ್ಚಾಗಿದೆ. ಖರ್ಚು ಮಾಡಲು ಇನ್ನೂ 241.63 ಕೋಟಿ ರು. ಬಾಕಿ ಇತ್ತು.